Author: UllalaVani

Kannada News From Coastal Karnataka

UN NETWORKS ಕೊಣಾಜೆ: ಪ್ರತೀ ವರ್ಷ ನಿಯತವಾಗಿ ನಡೆಯುವ ಕಾರ್ಯಕ್ರಮವಾದರೂ ಇದೊಂದು ವಿಶಿಷ್ಟವಾದ ಕಾರ್ಯಕ್ರಮ; ವಿದ್ಯಾರ್ಥಿಗಳಲ್ಲಿ ಬರವಣಿಗೆಯ ಭೂಮಿಕೆಯನ್ನು ಸಿದ್ಧಪಡಿಸಲು ಇಂತಹ ವೇದಿಕೆಗಳು ಸಹಕಾರಿ ಎಂದು ಡಾ. ನರಸಿಂಹಮೂರ್ತಿ ಅವರು ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಎಸ್. ವಿ. ಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನಡೆದ ಬಹುಭಾಷಾ ಕವಿಗೋಷ್ಠಿ ಮತ್ತು ಬಿತ್ತಿ ಪತ್ರಿಕೆಯ ವಾರ್ಷಿಕ ಸಂಚಿಕೆಯ ಬಿಡುಗಡೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಕವನ ರಚನೆ ಅನ್ನುವುದು ಸ್ವಪರಿಶ್ರಮದಿಂದ, ಸಾಧನೆಯಿಂದ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ಮುಂದುವರಿದಾಗ ಮಾತ್ರ ಸಾಧ್ಯ. ಆರಂಭದಲ್ಲಿ ಅದು ತೊದಲು ನುಡಿಯಾಗಿರಲೀ ಸರಳ ನುಡಿಯಾಗಲೀ ಬರೆಯಲು ಪ್ರಕಟಿಸಲು ಪ್ರಯತ್ನಿಸಿ. ಸಂಕೀರ್ಣತೆ, ಸಂಕ್ಷಿಪ್ತತೆ, ಧ್ಯನ್ಯಾತ್ಮಕತೆ ಕವನ ರಚನೆಯ ಸಂದರ್ಭದಲ್ಲಿ ಗಮನಿಸಬೇಕಾದುದು ಅವಶ್ಯ. ವಿದ್ಯಾರ್ಥಿದೆಸೆಯಲ್ಲಿ ಈ ತರಹದ ಕಾರ್ಯಕ್ರಮಗಳು ಜೀವನದಲ್ಲಿ ದಿಟ್ಟ ಹೆಜ್ಜೆಗಳನ್ನಿಟ್ಟು ಮುಂದುವರಿಯಲು ಸಹಕಾರಿ ಎಂದು ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್. ವಿ. ಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರಾದ ಡಾ. ಧನಂಜಯ ಕುಂಬ್ಳೆ ಅವರು ಮಾತನಾಡುತ್ತಾ…

Read More

UN NETWORKS ಉಳ್ಳಾಲ: ಬಿಜೆಪಿ ಪಕ್ಷ ಅಸ್ತಿತ್ವಕ್ಕೆ ಬಂದ 35 ವರ್ಷಗಳಲ್ಲಿ ಆ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದಿದ್ದು ಕೇವಲ ಒಂದೇ ಒಂದು ಬಾರಿ. ಮೂರು ಬಾರಿಯಷ್ಟೇ ಬೇರೆ ಪಕ್ಷಗಳಿಗೆ ಗೆಲ್ಲುವ ಅವಕಾಶ ಸಿಕ್ಕಿದ್ದು ಬಿಟ್ಟರೆ ಬರೋಬ್ಬರಿ 50 ವರ್ಷಗಳ ಕಾಲ ಅಲ್ಲಿ ಆಳ್ವಿಕೆ ನಡೆಸಿದ್ದು ಕಾಂಗ್ರೆಸ್ ಪಕ್ಷ. ಆದರೆ ಪ್ರತೀ ಬಾರಿ ಸೋಲನುಭವಿಸುವ ಬಿಜೆಪಿ ಈ ಬಾರಿ ಇಡೀ ಕ್ಷೇತ್ರವನ್ನು ಸಂಘಪರಿವಾರದ ಕೈಗೆ ಕೊಟ್ಟು ಗೆಲುವಿಗೆ ಹೊಸ ಫಾರ್ಮುಲಾ ರೂಪಿಸಿದೆ. ಈ ಮೂಲಕ ಈ ರಾಜ್ಯದ ಆಹಾರ ಸಚಿವ ಯು.ಟಿ.ಖಾದರ್ ಸೋಲಿಗೆ ಖೆಡ್ಡಾ ತೋಡಿದೆ. ಖಾದರ್ ಸ್ವಕ್ಷೇತ್ರವಾಗಿರುವ ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಅವರ ಗೆಲುವಿಗೆ ಬ್ರೇಕ್ ಹಾಕಲು ಈವರೆಗೆ ಬಿಜೆಪಿಯಿಂದ ಸಾಧ್ಯವಾಗಿಲ್ಲ. ಈಕ್ಷೇತ್ರದಲ್ಲಿ ಯಾವ ಬಿಜೆಪಿ ಅಭ್ಯರ್ಥಿ ನಿಂತರೂ ಸೋಲು ಕಟ್ಟಿಟ್ಟ ಬುತ್ತಿ ಎನ್ನುವ ಮಾತಿದೆ. ಹೀಗಾಗಿ ಈ ಬಾರಿ ಮೋದಿ ಅಲೆಯ ಮಧ್ಯೆಯೇ ಮಂಗಳೂರು ಕ್ಷೇತ್ರದಲ್ಲಿ ಕಮಲ ಅರಳಿಸಲು ಮಾಸ್ಟರ್ ಪ್ಲಾನ್ ರೂಪಿಸಲಾಗಿದೆ. ಅದರಂತೆ ಈ ಬಾರಿ ಇಡೀ…

Read More

UN NETWORKS ಉಳ್ಳಾಲ: ಚುನಾವಣೆ ಸಮೀಪಿಸುತ್ತಿದ್ದಂತೆ ಹೊರಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳಕಿಗೆ ಬಂದ ಮಾಟ ಮಾಡುವ ಪ್ರಕರಣಗಳು ಇದೀಗ ಕರಾವಳಿಗೂ ವ್ಯಾಪಿಸಿದ್ದು, ಬೆಳ್ಮ -ರೆಂಜಾಡಿಯ ಮೂರು ಮಾರ್ಗ ಸೇರುವಲ್ಲಿ ಮಾಟ ಮಾಡಿರುವ ಕುರುಹೊಂದು ಪತ್ತೆಯಾಗಿದೆ. ಶುಕ್ರವಾರ ತಡರಾತ್ರಿ ವೇಳೆ ಕುರುಹುಗಳನ್ನಿಟ್ಟು ಪೂಜೆ ನೆರವೇರಿಸಿರುವ ಶಂಕೆ ಇದೆ. ಶನಿವಾರ ಮುಂಜಾನೆ ಈ ಭಾಗದಿಂದ ಕೆಲಸಕ್ಕೆ ಹೋಗುವವರು ಕುರುಹು ಕಂಡು ಗಾಬರಿಯಾಗಿದ್ದಾರೆ. ವ್ಯಾಪಾರ, ಕೌಟುಂಬಿಕ ವಿಚಾರಕ್ಕೋ ನಡೆಸಿರುವ ತಂತ್ರಗಾರಿಕೆ ಆಗಿರಬಹುದು ಅನ್ನುವ ಸಂಶಯ ಹಲವರು ವ್ಯಕ್ತಪಡಿಸಿದರೆ, ಚುನಾವಣೆ ಹಿನ್ನೆಲೆಯಲ್ಲಿ ಮಾಡಿರುವ ಸಾಧ್ಯತೆಗಳೂ ಇದೆ ಅನ್ನುವ ಸಂಶಯ ನಾಗರೀಕರಲ್ಲಿ ಮೂಡಿದೆ. ಈ ಭಾಗದಿಂದ ತೆರಳುವ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಮಾಟ ಮಂತ್ರ ಮಾಡಿರುವ ಸೊತ್ತುಗಳು ಭೀತಿಯ ವಾತಾವರಣವನ್ನು ಸೃಷ್ಟಿಸಿದೆ. ಆದ್ದರಿಂದ ಇದನ್ನು ಯಾರೂ ಮುಟ್ಟಲು ಮುಂದಾಗಿಲ್ಲ. ಸ್ಥಳದಲ್ಲಿ ಅಧಿಕ ಸಂಖ್ಯೆಯಲ್ಲಿ ಕುತೂಹಲಿಗರು ಜಮಾಯಿಸಿ ಅದನ್ನು ನೋಡಿ ತೆರಳುತ್ತಿದ್ದಾರೆ.

Read More

UN NETWORKS ತೊಕ್ಕೊಟ್ಟು: ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಬಸ್ಸು ನಿಲ್ದಾಣದ ಬಳಿ ಶುಕ್ರವಾರ ಮಧ್ಯಾಹ್ನ ವೇಳೆ ಸಂಭವಿಸಿದೆ. ಕುಂಪಲ ಆಶ್ರಯ ಕಾಲನಿ ನಿವಾಸಿ ವಿನೀತ್ ರಾಜ್ (25) ಮೃತರು. ಮಂಗಳೂರಿನ ಬಂದರಿನ ಹಾರ್ಡ್‍ವೇರ್ ಅಂಗಡಿಯಲ್ಲಿ ಕೆಲಸಕ್ಕಿದ್ದ ವಿನೀತ್ ದೇರಳಕಟ್ಟೆ ಕಡೆಯಿಂದ ಮಂಗಳೂರಿಗೆ ತೆರಳುವ ಸಂದರ್ಭ ತೊಕ್ಕೊಟ್ಟು ರಾ.ಹೆ 66 ತಿರುವಿನಲ್ಲಿ ಟಿಪ್ಪರ್ ಲಾರಿ ಎದುರಿನಿಂದ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ವಿನೀತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವಿವಾಹಿತರಾಗಿರುವ ವಿನೀತ್ ರಾಜ್ ಇಬ್ಬರು ಸಹೋದರರು ಹಾಗೂ ಓರ್ವ ಸಹೋದರಿ ಹಾಗೂ ತಂದೆ ಮತ್ತು ತಾಯಿಯನ್ನು ಅಗಲಿದ್ದಾರೆ. ಮಂಗಳೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

UN NETWORKS ಮಂಗಳೂರು: ದ.ಕ ಜಿಲ್ಲಾ ಭೇಟಿಯಲ್ಲಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ನಗರದ ಟಿಎಂಎ ಪೈ ಕನ್ವೆನ್‍ಶನ್ ಹಾಲ್‍ನಲ್ಲಿ ಬಿಡುಗಡೆಗೊಳಿಸಿದ “ಪ್ರಗತಿಯ ಪಕ್ಷ ಕರ್ನಾಟಕ” ಹೆಸರಿನ ಕರ್ನಾಟಕ ಪ್ರಣಾಳಿಕೆ-2018-2023 ಯ ಮೊದಲ ಪ್ರತಿಯನ್ನು ಹಿರಿಯ ಮುಖಂಡ ಜನಾರ್ದನ ಪೂಜಾರಿಯವರಿಗೆ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ರಾಹುಲ್, ಕಾಂಗ್ರೆಸ್ ಪ್ರಣಾಳಿಕೆ ಕೆಲವರು ಕುಳಿತು ಸಿದ್ಧಪಡಿಸಿರುವಂಥದ್ದಲ್ಲ. ಇದು ಕರ್ನಾಟಕದ ಜನತೆಯ ಮಾತಾಗಿದೆ. ಈ ಪ್ರಣಾಳಿಕೆಯನ್ನು ಜನರ ಬಳಿ ತೆರಳಿ ಅವರ ಭಾವನೆ, ಆಶಯವನ್ನು ಸಂಗ್ರಹಿಸಿ ಸಿದ್ಧಪಡಿಸಲಾಗಿದೆ ಎಂದರು. ಈ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ಮುಖಂಡರಾದ ಸಂಸದ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಪ್ರದೇಶ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಸಮಿತಿಯ ಅಧ್ಯಕ್ಷ ಡಾ.ಎಂ.ವೀರಪ್ಪ ಮೊಯ್ಲಿ, ಕೆಪಿಸಿಸಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬಿ.ಕೆ.ಹರಿಪ್ರಸಾದ್, ಪಕ್ಷದ ಜಿಲ್ಲಾ ಉಸ್ತುವಾರಿ ವಿಷ್ಣುನಾಥನ್, ಪಕ್ಷದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ವೇದಿಕೆಯಲ್ಲಿದ್ದರು. ಜಿಲ್ಲಾ ಉಸ್ತುವಾರಿ…

Read More

UN NETWORKS ಉಳ್ಳಾಲ: ಈ ಬಾರಿಯ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಿಂದ ಸ್ಪರ್ಧಿಸಲು ಐವರು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಇಂದು ಜೆಡಿಎಸ್‍ನ ಅಶ್ರಫ್, ಎಂಇಪಿ ಅಭ್ಯರ್ಥಿ ಉಸ್ಮಾನ್ ನಾಮಪತ್ರ ಸಲ್ಲಿಸುವುದರೊಂದಿಗೆ ಐವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಪಕ್ಷೇತರರಾಗಿ ನಾಮಪತ್ರ ಸಲ್ಲಿಸಲು ಮುಂದಾಗಿದ್ದ ತಬೂಕ್‍ದಾರಿಮಿ ಮತ್ತು ಎಸ್ಸೆಸ್ಸೆಫ್ ಮುಖಂಡ ಅಲ್ತಾಫ್ ಕುಂಪಲ ರಾಜಕಾರಣಿಗಳ ಮನವೊಲಿಕೆಗೆ ಮಣಿದು ನಾಮಪತ್ರ ಸಲ್ಲಿಸುವಕಾರ್ಯದಿಂದ ಹಿಂದೆ ಸರಿದಿದ್ದಾರೆ. ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು ಒಟ್ಟು ಐದು ನಾಮಪತ್ರ ಸಲ್ಲಿಕೆಯಾಗಿದ್ದು, ಕಾಂಗ್ರೆಸ್‍ನಿಂದ ಯು.ಟಿ.ಖಾದರ್, ಬಿಜೆಪಿಯಿಂದ ಸಂತೋಷ್‍ಕುಮಾರ್ ಬೋಳಿಯಾರ್, ಜೆಡಿಎಸ್‍ನಿಂದ ಮಾಜಿ ಮೇಯರ್ ಅಶ್ರಫ್, ಸಿಪಿಐಎಂನಿಂದ ನಿತಿನ್‍ಕುತ್ತಾರ್, ಎಂಇಪಿಯಿಂದ ಉಸ್ಮಾನ್ ನಾಮಪತ್ರ ಸಲ್ಲಿಸಿದ್ದಾರೆ.ಇದರಲ್ಲಿ ಎಷ್ಟು ಮಂದಿ ಕಣದಲ್ಲಿ ಉಳಿಯುತ್ತಾರೆ ಎಂಬುದು ಇನ್ನೆರಡು ದಿನ ಕಾಯಬೇಕಾಗಿದೆ. ಕಳೆದ ಬಾರಿ ಉಳ್ಳಾಲ ಕ್ಷೇತ್ರದಿಂದ 15 ಮಂದಿ ಕಣದಲ್ಲಿದ್ದರು.ಎಸ್‍ಡಿಪಿಐ ಅಲ್ಪ ಸಂಖ್ಯಾತರ ಮತಗಳನ್ನು ಬುಟ್ಟಿಗೆ ಹಾಕಿ ಸಚಿವ ಖಾದರ್ ರವರನ್ನು ಭಾರೀ ಅಂತರದಿಂದ ಸೋಲಿಸಲು ಪ್ರಯತ್ನ ಮಾಡಿತ್ತು.ಅಲ್ಪ ಸಂಖ್ಯಾತರ ಬಾಹುಳ್ಯವುಲ್ಲ ಮಂಗಳೂರು…

Read More

UN NETWORKS ಮಂಗಳೂರು: ಸ್ವಾತಂತ್ರ್ಯ ಬಂದಾಗಿನಿಂದ ಕಾಂಗ್ರೇಸ್ ಪಕ್ಷ ಅಲ್ಪಸಂಖ್ಯಾತ ರನ್ನು ಮತ ಬ್ಯಾಂಕ್ ದೃಷ್ಟಿ ಯಲ್ಲಿ ನೋಡಿಕೊಂಡು ಬಂದಿದೆ. ಬಿ.ಜೆ.ಪಿ. ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರಿಗೆ ಕಷ್ಡ ಎಂಬ ಗುಮ್ಮವನ್ನು ತೋರಿಸಿ ಅಧಿಕಾರ ಅನುಭವಿಸುತ್ತಿದೆ. ಆದರೆ ಅತೀ ಹೆಚ್ಚು ಕೋಮು ಗಲಬೆ ನಡೆದಿರೋದು ಕಾಂಗ್ರೇಸ್ ಅಧಿಕಾರದಲ್ಲಿ ಯಡಿಯೂರಪ್ಪ ನೇತೃತ್ವದ ಬಿ.ಜೆ.ಪಿ. ಸರಕಾರದ ಐದು ವರುಷ ಮುಸ್ಲಿಮ್ ಸಮಾಜ ನೆಮ್ಮದಿಯಿಂದ ಉಪವಾಸ ವೃತ ಕೈ ಗೊಂಡಿದೆ. ಸಾಮರಸ್ಯದಿಂದ ಹಬ್ಬ ಆಚರಿಸಿದೆ. ಎಂದು ಬಿ.ಜೆ.ಪಿ. ಅಲ್ಪಸಂಖ್ಯಾತ ಮೋರ್ಛಾದ ಜಿಲ್ಲಾ ಕಾರ್ಯದರ್ಶಿ ವಳವೂರು ಮಹಮ್ಮದ್ ಆರೋಪಿಸಿದರು. ಅವರು ಬಿ.ಜೆ.ಪಿ. ಅಲ್ಪಸಂಖ್ಯಾತ ಮೋರ್ಛಾದ ಮಂಗಳೂರು ಕ್ಷೇತ್ರದ ಸಭೆಯಲ್ಲಿ ಹೇಳಿದರು. ಅಲ್ಪಸಂಖ್ಯಾತರ ರಕ್ಷಕ ಎನ್ನುವ ಕಾಂಗ್ರೇಸಿನ ಅಸಲಿ ಮುಖವನ್ನು ಅರಿಯಬೇಕು. ಸರಕಾರದ ಸವಲತ್ತು, ಸೌಲಭ್ಯಗಳು ಸಚಿವರ ಹಿಂಬಾಲಕರಿಗೆ ಸಿಗುತ್ತಿದೆ ಹೊರತು ಅರ್ಹ ಬಡ ಅಲ್ಪಸಂಖ್ಯಾತರಿಗೆ ದೊರೆಯುತ್ತಿಲ್ಲ. ಕಾಂಗ್ರೇಸಿನಿಂದ ಮುಸ್ಲಿಮರಿಗೆ, ತನ್ನ ಕಾರ್ಯಕರ್ತರಿಗೆ ಅನ್ಯಾಯ ವಾಗಿದ್ದರೂ ಎಂಜಲು ಕಾಸಿಗೋಸ್ಕರ SDPI ಒಳ ಉಪ್ಪಂದ ಮಾಡಿದೆ. ಈ ಬಾರಿಯ ಚುನಾವಣೆಯಲ್ಲಿ ಇಂತಹ…

Read More

UN NETWORKS ಉಳ್ಳಾಲ: ಈ ಬಾರಿಯ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ಇವರು ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ಕಾರ್ಯ ಬುಧವಾರ ನಡೆದಿದ್ದು, ಎಲ್ಲವೂ ಕ್ರಮಬದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಜೆಡಿಎಸ್‍ನ ಅಶ್ರಫ್, ಎಂಇಪಿ ಅಭ್ಯರ್ಥಿ ಉಸ್ಮಾನ್ ನಾಮಪತ್ರ ಸಲ್ಲಿಸುವುದರೊಂದಿಗೆ ಐವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇವರ ಪೈಕಿ ಕಣದಲ್ಲಿ ಉಳಿಯುವವರೆಷ್ಟು ಎಂದು ತಿಳಿಯಲು ಇನ್ನೆರಡು ದಿನ ಕಾಯಬೇಕಾಗಿದೆ. ನಾಮಪತ್ರ ಸಲ್ಲಿಸಿದ ದಿನವೇ ರಾಜಕೀಯ ಜಿದ್ದಾಜಿದ್ದಿ ಅಭ್ಯರ್ಥಿಗಳ ನಡುವೆ ಆರಂಭಗೊಂಡಿದೆ. ಸಚಿವ ಖಾದರ್ ತನ್ನ ಸ್ಥಾನ ಉಳಿಸಲಿಕ್ಕಾಗಿ ಹೋರಾಟ ಮಾಡುತ್ತಿದ್ದರೆ, ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿದ ಸಂತೋಷ್ ಕುಮಾರ್ ಅವರು ಈ ಬಾರಿ ಬಿಜೆಪಿಗಳ ಮತ ಹಂಚಿ ಹೋಗದಂತೆ ಮಾಡಲು ತೆರೆಮೆರೆಯ ಪ್ರಯತ್ನ ನಡೆಸುವ ಜತೆಗೆ ಅಲ್ಪ ಸಂಖ್ಯಾತರ ಮತಗಳನ್ನು ಬುಟ್ಟಿಗೆ ಹಾಕಲು ಭಾರೀ ಪ್ರಯತ್ನ ಮುಂದುವರಿಸಿದ್ದಾರೆ. ಈ ಕಾರಣದಿಂದಾಗಿ ಈಗಾಗಲೇ ಮತಯಾಚನೆ ಕಾರ್ಯ ಶುರು ಮಾಡಿದ್ದಾರೆ. ಜೆಡಿಎಸ್‍ನಿಂದ ಕಣಕ್ಕಿಳಿದಿರುವ ಅಶ್ರಫ್ ಅವರು ಈಬಾರಿ ದರ್ಗಾ ವಿವಾದವನ್ನು ಮುಂದಿಟ್ಟು…

Read More

UN NETWORKS ಉಳ್ಳಾಲ: ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸಮುದಾಯ ಸ್ನೇಹಿ ದಾವೂದ್ ಹಾಜಿ ಹೃದಯ ಸಂಬಂಧಿ ರೋಗದಿಂದ ಕೆಲವು ದಿನಗಳ ಕಾಲ ಮಂಗಳೂರಿನ ಆಸ್ಪತ್ರೆಯಲ್ಲಿದ್ದು ಗುರುವಾರ ನಿಧನರಾದರು. ಹಲವಾರು ವರ್ಷಗಳಿಂದ ಅಬುಧಾಬಿಯಲ್ಲಿ ಉದ್ಯೋಗದಲ್ಲಿದ್ದ ಹಾಜಿಯವರು ವಿದೇಶದಲ್ಲಿ ಹಲವಾರು ದೀನೀ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಅವರ ಅಕಾಲಿಕ ಮರಣ ಸಮುದಾಯಕ್ಕೆ ತುಂಬಲಾರದ ನಷ್ಟ. SKSSF ಅಬುಧಾಬಿ ಸಮಿತಿಯ ಪ್ರಥಮ ಕಾಲದ ಪ್ರವರ್ತಕರಾದ ಹಾಜಿಯವರು ಸಂಘಟನೆ ಕಟ್ಟಿ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಅವರ ಮರಣಕ್ಕೆSKSSF ಅಬುಧಾಬಿ ಸಮಿತಿ ಸಂತಾಪ ವ್ಯಕ್ತ ಪಡಿಸುತ್ತದೆ. ಅಲ್ಲಾಹನು ಮಗ್ಫಿರತ್ ನೀಡಲಿ. ಎಲ್ಲರೂ ಪ್ರತ್ಯೇಕ ದುಆಃ ಮಾಡಲು ವಿನಂತಿ.

Read More

UN NETWORKS ಮಲಾರ್: SKSSF, SYS , ಮತ್ತುSBV ವತಿಯಿಂದ ‘ಆಸೀಫಾ ಕ್ಷಮಿಸು…ತಲೆ ತಗ್ಗಿಸಿದೆ ಭಾರತ’ ಎಂಬ ಧ್ಯೇಯವಾಕ್ಯದೊಂದಿಗೆ ಮಲಾರ್ ಜಂಕ್ಷನ್ ನಲ್ಲಿ ಶಾಖಾಧ್ಯಕ್ಷರಾದ ಮುಹಮ್ಮದ್ .ಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು .ಅಲ್-ಮುಬಾರಕ್ ಜುಮಾ ಮಸ್ಜಿದ್ ಅರಸ್ತಾನ ಖತೀಬರಾದ ರಿಯಾಝ್ ಫೈಝಿ ಅರಸ್ತಾನ ದುಃಆಗೈದು ಉದ್ಘಾಟಿಸಿದರು .ಪಂಚಾಯತ್ ಅಧ್ಯಕ್ಷರಾದ ಫಿರೋಝ್ ಮಲಾರ್ ಭಾಷಣ ಮಾಡಿದರು . ದ.ಕ ಜಿಲ್ಲಾ ಕೌನ್ಸಿಲರ್ ಯಾಸೀರ್ ಅರಾಫತ್ ಕೌಸರಿ ವೀರಮಂಗಿಲ ಮುಖ್ಯ ಪ್ರಭಾಷಣಗೈದರು. ಈ ಸಂದರ್ಭದಲ್ಲಿ ರಿಯಾಝ್ ಫೈಝಿ ಎಮ್.ಎಸ್ , ಅಶ್ರಫ್ ಫೈಝಿ ಎಮ್.ಐ , ಹಕೀಮ್ ಫೈಝಿ ಕಾಜೂರು , ನಿಸಾರ್ ಮಲಾರ್ , SKSSF ಇನೋಳಿ ಶಾಖಾಧ್ಯಕ್ಷ ಮುಹಮ್ಮದ್ ಇನೋಳಿ , SKSSF ಇನೋಳಿ ಗೌರವಾಧ್ಯಕ್ಷ ಅಬ್ಬಾಸ್ ಟಿ.ಎಚ್ , ಹುಸೈನ್ ಫೈಝಿ , ನೌಶಾದ್ ಮಲಾರ್ ಮತ್ತಿತರರು ಉಪಸ್ಥಿತರಿದ್ದರು .SKSSF ಈಮಲಾರ್ ಶಾಖೆ ಪ್ರ.ಕಾರ್ಯದರ್ಶಿ ಕೆರೀಮ್ ಮುಸ್ಲಿಯಾರ್ ಮಲಾರ್ ಸ್ವಾಗತಿಸಿ , ವಂದಿಸಿದರು.

Read More