ಉಳ್ಳಾಲ, ಫೆ. 15: ವಿಶ್ವಹಿಂದೂ ಪರಿಷತ್ ಸುವರ್ಣ ಮಹೋತ್ಸವದ ಅಂಗವಾಗಿ ಮಾ 1ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ನಡೆಯುವ ಹಿಂದೂ ಸಮಾಜೋತ್ಸವದ ಪೂರ್ವಭಾವಿಯಾಗಿ ಭಾನುವಾರ ಅಸೈಗೋಳಿಯಿಂದ ಕುತ್ತಾರುವರೆಗೆ ಬೈಕ್ ರ‌್ಯಾಲಿ ನಡೆಯಿತು. ಅಸೈಗೋಳಿಯಿಂದ ದೇರಳಕಟ್ಟೆ , ಕುಂಪಲ, ಕೋಟೆಕಾರು ಬೀರಿ, ಮಾಡೂರು, ಸೋಮೇಶ್ವರ , ತೊಕ್ಕೊಟ್ಟು , ಉಳ್ಳಾಲ ಮಾರ್ಗವಾಗಿ ಕುತ್ತಾರು ಶ್ರೀ ಸಿದ್ಧಿವಿನಾಯಕ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸಮಾಪನಗೊಂಡಿತು. ಬೈಕ್ ರ್ಯಾಲಿಗೆ ವಿಶ್ವಹಿಂದೂ ಪರಿಷತ್ ಮಾಜಿ ಕಾರ್ಯದರ್ಶಿ ಹಾಗೂ ನಿವೃತ್ತ ಅಧ್ಯಾಪಕ ವೆಂಕಪ್ಪ ಮಾಸ್ಟರ್ ಅಸೈಗೋಳಿ ಚಾಲನೆ ನೀಡಿದರು. ಹಿರಿಯರಾದ ಟಿ. ಅಂಬು, ವಿಶ್ವಹಿಂದೂ ಪರಿಷತ್ ನ ಜಿಲ್ಲಾ ಕಾರ್ಯದರ್ಶಿ ಗೋಪಾಲ ಕುತ್ತಾರ್, ಬಜರಂಗದಳದ ಜಿಲ್ಲಾ ಸಹ ಸಂಚಾಲಕ ಪ್ರವೀಣ್ ಕುತ್ತಾರ್, ಪ್ರಖಂಡ ಸಂಚಾಲಕ ರವಿ ಅಸೈಗೋಳಿ, ಬಜೆಪಿ ಕೊಣಾಜೆ ಗ್ರಾಮ ಸಮಿತಿ ಅಧ್ಯಕ್ಷ ನಾರಾಯಣ ರೈ ಕ್ಕೆಮಜಲು, ವಿಶ್ವಹಿಂದೂ ಪರಿಷತ್ನ ಪ್ರಖಂಡ ಕಾರ್ಯದರ್ಶಿ ಬಿ.ನಾರಾಯಣ ಕುಂಪಲ, ವಿಶ್ವ ಹಿಂದೂ ಪರಿಷತ್, ಬಜರಂಗದಳ, ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ರ‌್ಯಾಲಿ ಭಾಗವಹಿಸಿದರು.…
Author: UllalaVani
ಉಳ್ಳಾಲ : ನಾಗರಿಕ ಸಮಾಜದಲ್ಲಿ ವಿಜ್ಞಾನ ಮನುಕುಲಕ್ಕೆ ಒಳಿತನ್ನು ಉಂಟುಮಾಡಲು ಹೆಚ್ಚು ಉಪಯುಕ್ತವಾಗಬೇಕು. ಕೆಲವೊಂದು ಪ್ರಶ್ನೆಗಳಿಗೆ ವಿಜ್ಞಾನದಲ್ಲಿ ಉತ್ತರವಿಲ್ಲ. ವಿಜ್ಞಾನ ವಾಸ್ತವಕ್ಕೆ ಹತ್ತಿರವಿದ್ದು ಜ್ಞಾನ ಹೆಚ್ಚಿಸವ ಕೆಲಸ ಮಾಡಿದರೆ ತತ್ವ ಯೋಚಿಸುವಂತೆ ಮಾಡುತ್ತದೆ ಎಂದು ಸುಪ್ರೀಂ ಕೋಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಎಂ.ಎನ್.ವೆಂಕಟಾಚಲಯ್ಯ ಅಭಿಪ್ರಾಯಪಟ್ಟರು. ನಿಟ್ಟೆ ವಿಶ್ವವಿದ್ಯಾಲಯ ಮತ್ತು ಪೀಪಲ್ಸ್ ಕೌನ್ಸಿಲ್ ಆಫ್ ಎಜುಕೇಶನ್ ಜಂಟಿ ಆಶ್ರಯದಲ್ಲಿ ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಕೆ.ಎಸ್.ಹೆಗ್ಡೆ ಆಡಿಟೋರಿಯಂನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಪ್ರಥಮ ಅಖಿಲ ಭಾರತ ಪೀಪಲ್ಸ್ ವೈದ್ಯಕೀಯ ಹಾಗೂ ಆರೋಗ್ಯ ವಿಜ್ಞಾನ ಸಮ್ಮೇಳನವನ್ನು ಗುರುವಾರ ಉದ್ಘಾಟಿಸಿ, ಬಳಿಕ ಸಮ್ಮೇಳನ ಪ್ರಯುಕ್ತ ಹೊರತಂದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಉಳ್ಳಾಲ: ಎಸ್ಎಸ್ಎಫ್ ಮತ್ತು ತಖ್ವಿಯತುಲ್ ಇಸ್ಲಾಂ ಯೆಂಗ್ಮೆನ್ಸ್ ಎಸೋಸಿಯೇಶನ್ ಕಲ್ಕಟ್ಟ ಇದರ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಸ್ವಲಾತ್ ವಾರ್ಷಿ ಕ ಕಾರ್ಯಕ್ರಮಕ್ಕೆ ಅಗಮಿಸಿದ ಅಸ್ಸಯ್ಯದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಬಾಯಾರ್ ಇಲ್ಯಾಸ್ ಜುಮಾ ಮಸೀದಿ ಕಟ್ಟಡಕ್ಕೆ ಶಿಲನ್ಯಾಸ ನೆರವೇರಿಸಿದರು. ಈ ಸಂದರ್ಭ ಇಲ್ಯಾಸ್ ಜುಮಾ ಮಸ್ಜಿದ್ ಉಪಾಧ್ಯಕ್ಷರುಗಳಾದ ಮೊಹಮ್ಮದ್ ಖಂಡಿಕ, ಮೊಯಿದಿನ್ ಕುಂಞ, ಇಲ್ಯಾಸ್ ಮಸೀದಿಯ ಖತೀಬ್ ಮಹಮ್ಮದ್ ಹನೀಫ್ ಸಖಾಫಿ, ಎಸ್ವೈಎಸ್ ಕಲ್ಕಟ್ಟ ಶಾಖೆಯ ಅಧ್ಯಕ್ಷ ಮೋನು ಕಲ್ಕಟ್ಟ, ಮಂಜನಾಡಿ ಗ್ರಾ.ಪಂ. ಉಪಾಧ್ಯಕ್ಷ ಕುಂಞಿಬಾವ ಹಾಜಿ ಮುಂತದವರು ಉಪಸ್ಥಿತರಿದ್ದರು.

