UN NETWORKS ಅಂಬ್ಲಮೊಗರು: ದೈಹಿಕ ಸಾಮಥ್ರ್ಯ ವೃದ್ಧಿಗೆ ಕ್ರೀಡಾಕೂಟಗಳು ಸಹಕಾರಿಯಾಗಿದ್ದು, ವಾಲಿಬಾಲ್‍ನಂತಹ ಪಂದ್ಯಾಟ ಆಯೋಜನೆಯಿಂದ ಸಂಘಟನೆಗಳು ಬಲಯುತವಾಗಲು ಸಾಧ್ಯ ಎಂದು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಅಂಬ್ಲಮೊಗರು ಇದರ ಗೌರವಾಧ್ಯಕ್ಷ ದೇವಪ್ಪ ಪೂಜಾರಿ ಅಭಿಪ್ರಾಯಪಟ್ಟರು. ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಅಂಬ್ಲಮೊಗರು ಇದರ ವತಿಯಿಂದ ಅಂಬ್ಲಮೊಗರುವಿನಲ್ಲಿ ನಡೆದ ಮುಕ್ತ ವಾಲಿಬಾಲ್ ಪಂದ್ಯಾಟ` ಅಂಬ್ಲಮೊಗರು ಟ್ರೋಫಿಗೆ ಚಾಲನೆ ನೀಡಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಅಂಬ್ಲಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮ್ಮದ್ ರಫೀಕ್, ಉದ್ಯಮಿ ರವಿರಾಜ್ ರೈ ಎಲ್ಯಾರ್, ಅಂಬ್ಲಮೊಗರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವಿಠಲ್ ರೈ ಬಸ್ತಿಕಟ್ಟೆ, ಭರತ್ ಫ್ರೆಂಡ್ಸ್ ಅಂಬ್ಲಮೊಗರು ನ ಅಧ್ಯಕ್ಷ ನವೀನ್ ಪೂಜಾರಿ ಪಡುಮನೆ, ಅಂಬ್ಲಮೊಗರು ಜನಪ್ರಿಯ ಯುವಕ ಮಂಡಲ ಅಧ್ಯಕ್ಷ ರಾಜೇಶ್ ಪೂಜಾರಿ ಕೆರೆಬಳಿ, ತೊಕ್ಕೊಟ್ಟು ಭಗತ್‍ಸಿಂಗ್ ಸೇವಾ ಪ್ರತಿಷ್ಠಾನ ಅಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು ಉಪಸ್ಥಿತರಿದ್ದರು.
Author: UllalaVani
UN NETWORKS ಉಳ್ಳಾಲ: ಆರ್ಥಿಕ ಮಗ್ಗಟ್ಟಿನಿಂದ ಯುವಕನೊಬ್ಬ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯಗೈದ ಘಟನೆ ನಡೆದಿದ್ದು, ಗುರುವಾರ ಮೃತದೇಹ ನೇತ್ರಾವತಿ ರೈಲ್ವೇ ಸೇತುವೆ ಬಳಿ ಪತ್ತೆಯಾಗಿದೆ. ಕುಂಪಲ ಬಾರ್ದೆ ನಿವಾಸಿ ರಂಜಿತ್ ಪೂಜಾರಿ(33) ಮೃತಪಟ್ಟವರಾಗಿದ್ದು, ಸೇಲ್ಸ್‍ಮೆನ್ ಆಗಿದ್ದ ರಂಜಿತ್ ದೊಡ್ಡಮನ ಮಗಳ ಮದುವೆ ಬುಧವಾರ ನಡೆದಿತ್ತು. ಮಂಗಳವಾರ ಮೆಹೆಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಂಜಿತ್ ಮದುವೆ ದಿನ ನಾಪತ್ತೆಯಾಗಿದ್ದರು. ಮನೆಯವರು ಹೊರಗಡೆ ಹೋಗಿರುವುದರಿಂದ ಮದುವೆಗೆ ಬಂದಿರಲಿಲ್ಲ. ರಂಜಿತ್‍ನನ್ನು ಸಂಪರ್ಕಿಸಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಗುರುವಾರ ಮೃತದೇಹ ನೇತ್ರಾವತಿ ನದಿಯ ರೈಲ್ವೇ ಸೇತುವೆ ಬಳಿ ನದಿಯ ತಟದಲ್ಲಿರುವುದನ್ನು ಕಂಡು ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆರ್ಥಿಕವಾಗಿ ಮುಗ್ಗಟ್ಟು ರಂಜಿತ್ ಆತ್ಮಹತ್ಯೆಗೆ ಕಾರಣ ಎಂದು ತಿಳಿದು ಬಂದಿದೆ. ಅವಿವಾಹಿತರಾಗಿದ್ದ ರಂಜಿತ್ ತಂದೆ, ತಾಯಿ, ಇಬ್ಬರು ಸಹೋದರರನ್ನು ಆಗಲಿದ್ದಾರೆ.
UN NETWORKS ಮಂಗಳೂರು: ಮದ್ರಸ ಅಧ್ಯಾಪಕರಿಂದ ಸ್ವಚ್ಛತಾ ಅಭಿಯಾನ ಮುಂದುವರೆಯುತ್ತಿದ್ದು, ಸಮಸ್ತ ಮಂಗಳೂರು ರೇಂಜ್ ವತಿಯಿಂದ ಸ್ವಚ್ಛತಾ ಕಾರ್ಯಕ್ರಮವು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‍ನ ಸಹಯೋಗದಲ್ಲಿ ಬೋಳಾರ ಪರಿಸರದಲ್ಲಿ ನಡೆಯಿತು. ಸಮಸ್ತ ಜಂ-ಇಯ್ಯತುಲ್ ಮುಅಲ್ಲಿಮೀನ್, ಮಂಗಳೂರು ರೇಂಜ್‍ಗೊಳಪಟ್ಟ ವಿವಿಧ ಮದ್ರಸಗಳ 40 ಅಧ್ಯಾಪಕರು ಮತ್ತು ಟಿ.ಆರ್.ಎಫ್ ಕಾರ್ಯಕರ್ತರು ಬೆಳಿಗ್ಗಿನ ಅವಧಿಯಲ್ಲಿ ಬೋಳಾರ ಪರಿಸರದ ರಸ್ತೆಬದಿಯಲ್ಲಿದ್ದ ಕಸಕಡ್ಡಿಗಳನ್ನು ಹೆಕ್ಕಿದರು ಹಾಗೂ ಬಸ್ ನಿಲ್ದಾಣವನ್ನು ಗುಡಿಸಿ ಒರೆಸಿ ಶುಚಿಗೊಳಿಸಿದರು. ಪರಿಸರ ಸ್ವಚ್ಛತಾ ಕಾರ್ಯಕ್ರಮದಲ್ಲಿ ಕೆ.ಎಲ್ ಉಮರ್ ದಾರಿಮಿ ಪಟ್ಟೋರಿ, ಅಧ್ಯಕ್ಷರು, ಸಮಸ್ತ ಜಂ-ಇಯ್ಯತುಲ್ ಮುಅಲ್ಲಿಮೀನ್ ದ.ಕ ಮತ್ತು ಕಾರ್ಯದರ್ಶಿ, ಮಂಗಳೂರು ರೇಂಜ್, ಸಯ್ಯದ್ ಉಮರುಲ್ ಫಾರೂಖ್ ತಂಙಳ್, ಸಮಸ್ತ ಮುದರ್ರಿಬ್, ಉಮರ್ ದಾರಿಮಿ ಸಾಲ್ಮರ, ಸಮಸ್ತ ಮುಫತ್ತಿಶ್, ಅಬ್ದುಲ್ ರಹಿಮಾನ್ ದಾರಿಮಿ ಜೋಕಟ್ಟೆ, ಅಧ್ಯಕ್ಷರು, ಮಂಗಳೂರು ರೇಂಜ್, ಅಲಿ ಫೈಝಿ, ಪರೀಕ್ಷಾ ಬೋರ್ಡು ಚೇರ್‍ಮ್ಯಾನ್, ನಝೀರ್ ಅಝ್‍ಹರಿ, ಉಪಾಧ್ಯಕ್ಷರು, ಮಂಗಳೂರು ರೇಂಜ್, ಇಲ್ಯಾಸ್ ಬಾಖವಿ, ಖತೀಬ್, ಬೋಳಾರ ಮಸೀದಿ, ನಾಸಿರ್ ಕೌಸೆರಿ ಮತ್ತು ಮಂಗಳೂರು ರೇಂಜ್‍ನ…
UN NETWORKS ಕೊಣಾಜೆ: ಕಲೆಗೆ ಪ್ರೋತ್ಸಾಹ ನೀಡಿ ಬೆಳೆಸಲು ಪ್ರತಿಯೊಬ್ಬರು ಮುಂದಾಗಬೇಕಿದೆ, ಈ ವಿಚಾರದಲ್ಲಿ ಅನುದಾನ ನೀಡಲು ಸರ್ಕಾರ ಚೌಕಾಶಿ ಮಾಡುವುದು ಸಲ್ಲದು ಎಂದು ಬೆಂಗಳೂರು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಅಭಿಪ್ರಾಯಪಟ್ಟರು. ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಕೊಣಾಜೆ ಮಂಗಳಗಂಗೋತ್ರಿಯಲ್ಲಿರುವ ಮಂಗಳ ಸಭಾಂಗಣದಲ್ಲಿ ಮಂಗಳವಾರ ನಡೆದ ಯಕ್ಷಗಾನ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಕಲೆ, ಸಾಹಿತ್ಯ ಅನುತ್ಪಾದಕ ಸಂಗತಿಯಲ್ಲ, ಸರ್ಕಾರ ಅನುದಾನ ನೀಡುವ ಸಂದರ್ಭ ಅಕಾಡೆಮಿ, ಕಲೆ, ಸಾಹಿತ್ಯದ ಚಟುವಟಿಕೆ ನಿರ್ಲಕ್ಷಿಸಿದೆ, ಹೆಚ್ಚು ಅನುದಾನ ನೀಡಿ ಪ್ರೋತ್ಸಾಹಿಸಬೇಕಾಗಿದೆ. ಯಕ್ಷಗಾನ ಬಯಲಾಟ ಅಕಾಡಮಿಯನ್ನು ಎರಡು ಪ್ರತ್ಯೇಕ ಅಕಾಡೆಮಿಗಳಾಗಿ ಬೇರ್ಪಡಿಸಿದ್ದು ಸ್ವಾಗತಾರ್ಹ. ಅದೇ ರೀತಿ ಎಲ್ಲಾ ಅಕಾಡೆಮಿಗಳಿಗೆ ನೀಡುವಂತೆ ಕೋಟಿ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು. ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಭೈರಪ್ಪ ಅಧ್ಯಕ್ಷತೆ ವಹಿಸಿದ್ದರು. ಅಂಕಣಕಾರ ನಾ.ಕಾರಂತ ಪೆರಾಜೆ ಅಭಿನಂದನಾ ಭಾಷಣ ಮಾಡಿದರು. ಯಕ್ಷಗಾನ ಅಧ್ಯಯನ ಕೇಂದ್ರದ ಗೌರವ ನಿರ್ದೇಶಕ…
UN NETWORKS ಉಳ್ಳಾಲ: ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಜೆಡಿಎಸ್ ಮಾಜಿ ಮೇಯರ್ ಅಶ್ರಫ್ ಕೆ. ನಾಮಪತ್ರದ ಪೂರ್ವಭಾವಿಯಾಗಿ ಉಳ್ಳಾಲದ ಮಾಸ್ತಿಕಟ್ಟೆಯ ಚುನಾವಣಾ ಕಚೇರಿಯಿಂದ ಅಬ್ಬಕ್ಕ ಸರ್ಕಲ್‍ವರೆಗೆ ಪಾದಯಾತ್ರೆ ನಡೆಸಿ ಅಬ್ಬಕ್ಕ ಪ್ರತಿಮೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಬ್ಬಕ್ಕ ಸರ್ಕಲ್‍ನಿಂದ ಕಾರ್ಯಕರ್ತರೊಂದಿಗೆ ಪಾದಯಾತ್ರೆ ಮುಂದುವರಿಸಿದ ಅವರು ಬಳಿಕ ಮಂಗಳೂರಿನಲ್ಲಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಜೆಡಿಎಸ್ ಮಂಗಳೂರು ಕ್ಷೇತ್ರಾಧ್ಯಕ್ಷ ಮೋಹನ್‍ದಾಸ್ ಶೆಟ್ಟಿ ಉಳಿದೊಟ್ಟು , ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಝೀಜ್ ಮಲಾರ್,ಜಿಲ್ಲಾ ಉಪಾಧ್ಯಕ್ಷ ಸುಕುಮಾರ್ ರಾವ್, ಮುಖಂಡರಾದ ನಝೀರ್ ಉಳ್ಳಾಲ್, ಸಿದ್ಧಿಖ್ ತಲಪಾಡಿ, ಇಝಾಝ್ ಮಾರಿಪಳ್ಳ, ನಾಸಿರ್ ಮಂಗಳೂರು, ಪುತ್ತುಮೋನು ಉಳ್ಳಾಲ್, ಎಚ್. ಸಾಲಿ ಹರೇಕಳ, ಸತ್ತಾರ್ ಸಜಿಪ ರಾಷ್ಟ್ರೀಯ ಉಪಾಧ್ಯಕ್ಷೆ ಶ್ರೀಮಣಿ ವಿದ್ಯಾರ್ಥಿ ನಾಯಕ ಸಿನಾನ್, ಫಯಾಝ್ ಮಂಗಳೂರು, ಝಾಕಿರ್ ಉಳ್ಳಾಲ್, ಕಬೀರ್ ಉಳ್ಳಾಲ್, ಬಿ.ಎಚ್.ಕರೀಂ, ಭರತ್‍ರಾಜ್ ಶೆಟ್ಟಿ ಪಜೀರು ಹಸನ್ ಸಂಬಾರ್‍ತೋಟ ಮತ್ತಿತರರು ಉಪಸ್ಥಿತರಿದ್ದರು.
UN NETWORKS ಉಳ್ಳಾಲ: ಕ್ಯಾನ್ಸರ್ ಜಾಗೃತಿ ಕಾರ್ಯದಲ್ಲಿ ಟಾಟಾ ಸಂಸ್ಥೆ ದಶಕಗಳಿಂದ ಕೈಜೋಡಿಸಿದ್ದು, ದೇಶಾದ್ಯಂತ ಕ್ಯಾನ್ಸರ್ ಪತ್ತೆಹಚ್ಚುವಿಕೆ ಹಾಗೂ ವೈದ್ಯಕೀಯ ಕೇಂದ್ರವನ್ನು ಸ್ಥಾಪಿಸಿದೆ. ಗ್ರಾಮೀಣ ಭಾಗದವರಿಗೆ ಟ್ರಸ್ಟಿನ ಸೇವೆ ಒದಗಿಸುವ ಸಲುವಾಗಿ ಖಾಸಗಿ ಟ್ರಸ್ಟ್ ಗಳು ಹಾಗೂ ವೈದ್ಯಕೀಯ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳೊಂದಿಗೆ ಒಡಂಬಡಿಕೆಗಳನ್ನು ನಡೆಸಲಾಗುತ್ತಿದೆ ಎಂದು ಟಾಟ ಟ್ರಸ್ಟ್‍ಗಳ ಟ್ರಸ್ಟೀ ಆರ್.ವೆಂಕಟರಮಣನ್ ಹೇಳಿದರು. ಅವರು ದೇರಳಕಟ್ಟೆ ಯೆನೆಪೋಯ ಸ್ವಾಯುತ್ತೆಗೊಳ್ಳಲಿರುವ ವಿಶ್ವವಿದ್ಯಾನಿಲಯದಲ್ಲಿ ಮಂಗಳವಾರ ಆಡಿಟೋರಿಯಂನಲ್ಲಿ ಜರಗಿದ ಆರೋಗ್ಯ ಜಾಗೃತಿ ಪ್ರಚಾರ, ಕ್ಯಾನ್ಸರ್ ಆರಂಭಿಕ ಪತ್ತೆಹಚ್ಚುವಿಕ , ತಡೆಗಟ್ಟುವಿಕೆ ಹಾಗೂ ನಿಯಂತ್ರಣದ ಕುರಿತಾದ ರಾಷ್ಟ್ರೀಯ ವಿಚಾರಸಂಕಿರಣ ಮತ್ತು ಯೆನೆಪೋಯ ವಿವಿಯ ರಾಷ್ಟ್ರೀಯ ಸೇವಾ ಯೋಜನೆ ದೇಶಾದ್ಯಂತ ಆರಂಭಿಸಿರುವ ಕ್ಯಾನ್ಸರ್ ಜಾಗೃತಿ ಅಭಿಯಾನದ ಜತೆಗೆ ಟಾಟಾ ಟ್ರಸ್ಟ್ ಕೈಜೋಡಿಸುವ ಒಡಂಬಡಿಕೆಗೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗ್ರಾಮೀಣ ಭಾಗದ ಜನರಲ್ಲಿ ಕ್ಯಾನ್ಸರ್ ಕುರಿತ ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಕ್ರಮಗಳ ಅಗತ್ಯವಿದೆ. ಪರಿಣಾಮಕಾರಿಯಾಗಿ ಟ್ರಸ್ಟ್ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರೂ ದೃಶದ ಮೂಲೆಗಳನ್ನು ತಲುಪಲು ಸಾಮಾಜಿಕ…
UN NETWORKS ಉಳ್ಳಾಲ: ಸಚಿವ ಖಾದರ್ ಅಧಿಕಾರ ಸ್ವೀಕರಿಸಿದ ನಂತರ ಎಲ್ಲಾ ಧರ್ಮೀಯರು ಶ್ರದ್ಧೆಯಿಂದ ಆರಾಧಿಸುವ ಇತಿಹಾಸ ಪ್ರಸಿದ್ಧ ಉಳ್ಳಾಲ ಸೈಯ್ಯಿದ್ ಮದನಿ ದರ್ಗಾದಲ್ಲಿ ತಲವಾರು ಕಾಳಗ ನಡೆದು ಪವಿತ್ರ ಕ್ಷೇತ್ರದಲ್ಲಿ ರಕ್ತ ಹರಿದಿರುವುದು ಬೇಸರದ ವಿಚಾರ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ ಹೇಳಿದರು. ತೊಕ್ಕೊಟ್ಟುವಿನಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ವತಿಯಿಂದ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ದರ್ಗಾ ಆಡಳಿತ ವಿಚಾರಕ್ಕೆ ಸಂಬಂಧಿಸಿ ಇತ್ತಂಡಗಳ ಮಧ್ಯೆ ಗಲಾಟೆಗಳು ನಡೆಯುತ್ತಾ ಪವಿತ್ರ ಸ್ಥಳದಲ್ಲಿ ರಕ್ತ ಹರಿದಿದೆ. ಇದು ಇಲ್ಲಿನ ಶಾಸಕ ಹಾಗೂ ಸಚಿವ ಖಾದರ್ ಅಧಿಕಾರ ವಹಿಸಿಕೊಂಡ ನಂತರ ನಡೆದಿದೆ. ಮಂಗಳೂರು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ಎಲ್ಲಾ ಲಕ್ಷಣಗಳು ಗೋಚರಿಸಿದೆ. ಸರ್ವಧರ್ಮೀಯರ ಜತೆಗೆ ಬೆರೆತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಅಭ್ಯರ್ಥಿ ಸಂತೋಷ್ ರೈ ಬೋಳಿಯಾರ್ ಅವರನ್ನು ಎಲ್ಲರೂ ಬೆಂಬಲಿಸಲಿದ್ದಾರೆ. ನಾಮಪತ್ರ ಸಲ್ಲಿಸುವ ಸಂದರ್ಭ ನೆರೆದ ಸಾವಿರದಷ್ಟು ಕಾರ್ಯಕರ್ತರಿಂದಾಗಿ ಗೆಲ್ಲುವ ಸಂಕೇತವನ್ನು ಮತದಾರ ತೋರಿಸಿದ್ದಾರೆ. ಕ್ಷೇತ್ರದಲ್ಲಿ ಶಾಶ್ವತ ಕುಡಿಯುವ ನೀರಿನ…
UN NETWORKS ಬೆಂಗಳೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯು ತುಮಕೂರು, ಹಾಸನ, ಕೊಡಗು, ದ.ಕ.ಜಿಲ್ಲೆಗಳ ಕಾಂಗ್ರೇಸ್ ಪಕ್ಷದ ಪ್ರಚಾರ ಸಮಿತಿಯ ಜಿಲ್ಲಾ ಉಸ್ತುವಾರಿ ವೀಕ್ಷಕರಾಗಿ ಉತ್ತಮ ವಾಗ್ಮಿ, ಸಂಘಟಕ ಹಾಗೂ ದ.ಕ.ಜಿಲ್ಲಾ ಕಾಂಗ್ರೇಸ್ ಪಕ್ಷದ ಜಿಲ್ಲಾ ವಕ್ತಾರ ರೂ ಆಗಿದ್ದ ಫಾರೂಕ್ ಉಳ್ಳಾಲ್ ರನ್ನು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ರಾದ ಡಿ.ಕೆ.ಶಿವಕುಮಾರ್ ನೇಮಕಾತಿ ಗೊಳಿಸಿ ಆದೇಶ ಪತ್ರ ನೀಡಿದ್ದಾರೆ. ವಹಿಸಿರುವ ನಾಲ್ಕು ಜಿಲ್ಲೆಗಳ ಜಿಲ್ಲಾ ಅಧ್ಯಕ್ಷರ ಮತ್ತು ಅಭ್ಯರ್ಥಿಗಳ ನೇರ ಸಂಪರ್ಕವನ್ನಿಟ್ಟು ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಸೂಕ್ತ ನಿರ್ದೇಶನ, ಕಾರ್ಯಕರ್ತರ ಸ್ಪೂರ್ತಿಯನ್ನು ಇಮ್ಮಡಿಗೊಳಿಸಲು ಅಗತ್ಯ ಪ್ರಚಾರ ವೈಖರಿಯನ್ನು ಕೈ ಗೊಳ್ಳವಂತೆಯೂ ನಾಲ್ಕು ಜಿಲ್ಲೆಗಳ ಕ್ಷೇತ್ರವಾರು ಸಮೀಕ್ಷೆಯನ್ನು, ಕುಂದು ಕೊರತೆಗಳನ್ನೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಕೇಂದ್ರ ಕಛೇರಿಗೆ ವರದಿ ಮಾಡುವಂತೆಯೂ ಆದೇಶಿಸಲಾಗಿದೆ. ತನಗೆ ಪಕ್ಷದ ವರಿಷ್ಠರು ನೀಡಿರುವ ಹೊಣೆಗಾರಿಕೆಯ ಸಲುವಾಗಿ ಫಾರೂಕ್ ಉಳ್ಳಾಲ್ ಈಗಾಗಲೇ ಕರ್ತವ್ಯ ನಿರತರಾಗಿದ್ದಾರೆ ಕೂಡಾ.
UN NETWORKS ಉಳ್ಳಾಲ: ಕಾಂಗ್ರೆಸ್ ಮಂಗಳೂರು ಕ್ಷೇತ್ರ ಅಭ್ಯರ್ಥಿ ಸಚಿವ ಯು.ಟಿ.ಖಾದರ್ ಅವರು ಅಪಾರ ಕಾರ್ಯಕರ್ತರ ಭಾಗವಹಿಸುವಿಕೆಯ ಜತೆಗೆ ಮಂಗಳೂರಿಗೆ ವಾಹನ ಜಾಥಾ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು. ತೊಕ್ಕೊಟ್ಟು ಗಟ್ಟಿ ಸಮಾಜದಿಂದ ಆರಂಭವಾದ ರ್ಯಾಲಿ ತೊಕ್ಕೊಟ್ಟುವರೆಗೆ ಕಾಲ್ನಡಿಗೆಯಲ್ಲೇ ಸಾಗಿ, ಅಲ್ಲಿಂದ ವಾಹನ ಜಾಥಾ ಮೂಲಕ ಮಂಗಳೂರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಗಟ್ಟಿ ಸಮಾಜ ಭವನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರು ಭಾಗವಹಿಸಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ತಲಪಾಡಿ ಗ್ರಾಮ ಪಂಚಾಯಿತಿನ ಬಿಜೆಪಿಯಿಂದ ಆಯ್ಕೆಯಾಗಿದ್ದ, ಮಾಜಿ ಅಧ್ಯಕ್ಷ ಜಯರಾಜ್ ಸಾಲ್ಯಾನ್ ಕಾಂಗ್ರೆಸ್ ಸೇರ್ಪಡೆಗೊಂಡರು.
UN NETWORKS ಉಳ್ಳಾಲ: ಮಂಗಳೂರು ಕ್ಷೇತ್ರ ಬಿಜೆಪಿ ವಿಧಾನಸಭಾ ಚುನಾವಣಾ ಅಭ್ಯರ್ಥಿ ಸಂತೋಷ್ ಕುಮಾರ್ ರೈ ಬೋಳಿಯಾರ್ ಸೋಮವಾರ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ಮುನ್ನ ಮುಡಿಪುವಿನ ಶ್ರೀ ಕ್ಷೇತ್ರ ಮುಡಿಪಿನ್ನಾರ್ ದೇವಸ್ಥಾನದಲ್ಲಿ ಕುಟುಂಬಸ್ಥರ ಹಾಗೂ ಅಪಾರ ಬೆಂಬಲಿಗರ ಜತೆಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ತೊಕ್ಕೊಟ್ಟುವರೆಗೆ ರೋಡ್ ಷೋ ನಲ್ಲಿ ಭಾಗವಹಿಸಿದರು. ಕಾಪಿಕಾಡು ಬಳಿ ಬಿಜೆಪಿ ಚುನಾವಣಾ ಕಾರ್ಯಾಲಯವನ್ನು ಹಿರಿಯ ಬಿಜೆಪಿ ಮುಖಂಡರು ಉದ್ಘಾಟಿಸಿ ಬಳಿಕ ಪಾದಯಾತ್ರೆ ಮೂಲಕ ಮಂಗಳೂರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಸಾವಿರದಷ್ಟು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದರು.

