UN NETWORKS
ಮುಡಿಪು: ಸಂವಿಧಾನದ ಬಗ್ಗೆ ನಿರಂತರವಾಗಿ ಅವಹೇಳನ ಮಾಡುತ್ತಾ ದಲಿತರನ್ನು ಬೀದಿ ನಾಯಿಗೆ ಹೋಲಿಸಿ ಅವಮಾನಗೈದ ಬಿ.ಜೆ.ಪಿ.ಯ ಕೇಂದ್ರ ಸಚಿವ ಅನಂತ ಕುಮಾರ್ ಹೆಗ್ಡೆಯ ಹೇಳಿಕೆಯನ್ನು ಖಂಡಿಸಿ ನಿನ್ನೆ ಮುಡಿಪು ಜಂಕ್ಷನ್ನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪರಿವರ್ತನವಾದ) ಮುಡಿಪು ಹೋಬಳಿ ಸಮಿತಿಯ ಆಶ್ರಯದಲ್ಲಿ ಹಾಗೂ ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ಬೃಹತ್ ಪ್ರತಿಭಟನಾ ಸಭೆ ನಡೆಯಿತು. ಈ ವೇಳೆ ಕಾರ್ಯಕರ್ತರು ಕೇಂದ್ರಸಚಿವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಬೆಂಕಿಯಿಂದ ದಹನ ಮಾಡಿದರು.



