Author: UllalaVani

Kannada News From Coastal Karnataka

UN NETWORKS ಜೆದ್ದಾ: ಸೌದಿ ಅರೇಬಿಯದ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿ ಕಾಂಗ್ರೆಸ್ ನ ಪತಾಕೆ ಹಾರಿಸಿದ ಕೀರ್ತಿ ಸೌದಿ ಅರೇಬಿಯದ ವಾಣಿಜ್ಯ ನಗರ ಜಿದ್ದಾಕ್ಕೆ ಸಲ್ಲುತ್ತದೆ. ಮಾತ್ರವಲ್ಲ ಸಾರ್ವತ್ರಿಕ ಚುನಾವಣೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ಇಷ್ಟೊಂದು ಪ್ರಮಾಣದಲ್ಲಿ ಮತದಾನ ಮಾಡಲು ತಾಯ್ನಾಡಿಗೆ ತೆರಳುತ್ತಿದ್ದು ಅದರಲ್ಲೂ ಮುಖ್ಯವಾಗಿ ಕರಾವಳಿ ಭಾಗದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಈಗಾಗಲೇ ಊರಿಗೆ ತಲುಪಿದ್ದು ಚುನವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಜೆದ್ದಾದಿಂದ ಶಕೀಲ್ ದೇರಳಕಟ್ಟೆ ನೇತ್ರತ್ವದ ಮೊದಲ ತಂಡವು ಇಂದು ತಾಯ್ನಾಡಿಗೆ ತಲುಪಲಿದ್ದು ಇನ್ನೂ ಇಂತಹ ಅನೇಕ ತಂಡಗಳು ಸೌದಿ ಅರೇಬಿಯದಿಂದ ಅತೀ ಶೀಘ್ರದಲ್ಲಿ ಭಾರತಕ್ಕೆ ಬಂದಿಳಿಯಳಿದೆ.

Read More

UN NETWORKS ಉಳ್ಳಾಲ: ಬಿಜೆಪಿ ದೇಶಕ್ಕೆ ಮಾರಕ. ಕರ್ನಾಟಕ ವಿಧಾನಸಭೆ ಫಲಿತಾಂಶ ಮುಂದಿನ ಲೋಕಸಭೆ ಚುನಾವಣೆಗೆ ಲಾಭ ತರಲಿದೆ. ಅದಕ್ಕಾಗಿ ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬರಲು ಎಂದಿಗೂ ಅವಕಾಶ ಮಾಡಿಕೊಡಬಾರದು ಎಂದು ಸಿಪಿಎಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ ಹೇಳಿದರು. ತೊಕ್ಕೊಟ್ಟು ಬಸ್ಸು ನಿಲ್ದಾಣದಲ್ಲಿ ಗುರುವಾರ ನಡೆದ ಸಿಪಿಎಂ ಪಕ್ಷದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ದೇಶಾದ್ಯಂತ ಬಿಜೆಪಿ ಸರಕಾರದ ವಿರುದ್ದ ಜನ ಏಳಬೇಕಿದೆ. ಅತ್ಯಾಚಾರ, ಅನಾಚಾರಗಳಲ್ಲೇ ಬಿಜೆಪಿ ಸರಕಾರ ತೊಡಗಿಸಿಕೊಂಡಿದೆ. ಬಿಜೆಪಿಯಂತೆಯೇ ರಾಜ್ಯದ ಕಾಂಗ್ರೆಸ್ ಪಕ್ಷಕ್ಕೆ ಸಾಮಾಜಿಕ ಬದ್ಧತೆ ಇಲ್ಲದಂತಾಗಿದೆ. ಸಿದ್ದ ರಾಮಯ್ಯ ನವರ ನೀತಿ ಬಿಜೆಪಿಗೆ ಹೊರತಾಗಿಲ್ಲ. ಕಾರ್ಪೊರೇಟ್ ಕಂಪೆನಿಗಳಿಗೆ ಸರಕಾರ ಸಹಕರಿಸುತ್ತಾ ಬಂದಿದೆ. ನಿರುದ್ಯೋಗ ಸಮಸ್ಯೆ ಅಗಾಧ ಪ್ರಮಾಣದಲ್ಲಿದೆ, ಭೂಮಿಯ ಪ್ರಶ್ನೆ ಬಹುದೊಡ್ಡ ಸಮಸ್ಯೆಯಾಗಿತ್ತು. ಅದಕ್ಕಾಗಿ ಸಿಪಿಎಂ 4,500 ಕಿ.ಮೀ ಪಾದಯಾತ್ರೆ ನಡೆಸಿ ಹೋರಾಟದ ಫಲವಾಗಿ ಜನರಿಗೆ ಹಕ್ಕುಪತ್ರ ಸಿಕ್ಕಿದೆ. ಕನಿಷ್ಟ ಕೂಲಿ ವಿಚಾರದ ಲ್ಲಿಯೂ ಸಿಪಿಎಂ ಹೋರಾಟ ನಡೆಸಿತ್ತು. ಮಹಾದಾಯಿ ನೀರಿನ ವಿಚಾರ, ಪಡಿತರ…

Read More

UN NETWORKS ಉಳ್ಳಾಲ: ಮಂಗಳೂರಿನಿಂದ ಸಕಲೇಶಪುರಕ್ಕೆ ತೆರಳುತ್ತಿದ್ದ ಇನೋವಾ ಕಾರು ಮೂಡಿಗೆರೆ ತಾಲೂಕಿನ ಕೃಷ್ಣಾಪುರದ ರಾ.ಹೆ. ಯಲ್ಲಿ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಆರು ಮಂದಿಯನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮೃತರನ್ನು ಮಂಜನಾಡಿ ಗ್ರಾಮದ ನಾಟೆಕಲ್‍ನ ಅಸ್ಮಾ(50) ಹಾಗೂ ಸೌದಾ (48) ಎಂದು ಗುರುತಿಸಲಾಗಿದೆ. ನಾಟೆಕಲ್‍ನಿಂದ ಸಕಲೆಶಪುರಕ್ಕೆ ತಮ್ಮ ಕುಟುಂಬದೊಂದಿಗೆ ತೆರಳುತ್ತಿದ್ದಾಗ ಮೂಡಿಗೆರೆಯಿಂದ ಗೋಣಿಬೀಡು ಕಡೆಗೆ ಸಾಗುತ್ತಿದ್ದ ಲಾರಿ ಕೃಷ್ಣಾಪುರದ ಬಳಿ ಮುಖಾಮುಖಿ ಢಿಕ್ಕಿ ಹೊಡೆದಿದ್ದು ಅಪಘಾತದ ಪರಿಣಾಮ ಇಬ್ಬರು ಸ್ತಳದಲ್ಲೇ ಸಾವನ್ನಪ್ಪಿದರು. ಗಂಭೀರ ಗಾಯಗೊಂಡಿರುವ ಇಸ್ಮಾಯಿಲ್(60), ತಮ್ಸಿಯಾ(40), ಅಯಾನ್(10), ತನೀಸ್(16), ಸೀದಾ(16) ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Read More

UN NETWORKS ಉಳ್ಳಾಲ: ಸಾಮಾಜಿಕ ಜಾಲತಾಣಗಳಲ್ಲಿ ವಿರೋಧಿಗಳು ಮಾಡುತ್ತಿರುವ ಅಪಪ್ರಚಾರಗಳಿಗೆ ಜನ ಕಿವಿಗೊಡದೆ, ಉಳ್ಳಾಲ ಭಾಗದಲ್ಲಿ ಆಗಿರುವ ಅಭಿವೃದ್ಧಿ ಹಾಗೂ ಮುಂದಿನ ಅಭಿವೃದ್ಧಿಗಾಗಿ ಜನ ಕಾಂಗ್ರೆಸ್ ನ ಕೈ ಹಿಡಿಯಲಿದ್ದಾರೆ ಎಂದು ಸಚಿವ ಯು.ಟಿ.ಖಾದರ್ ಹೇಳಿದರು. ಕೆ.ಸಿ.ರೋಡಿನಿಂದ ಕೆ.ಸಿನಗರವೆರೆಗೆ ಮನೆ ಮನೆಗೆ ನಡೆದುಕೊಂಡು ತೆರಳಿ ಪ್ರಚಾರ ಕಾರ್ಯ ನಡೆಸಿದರು. ಅಪಪ್ರಚಾರಗಳಿಂದ ಅಭಿವೃದ್ಧಿಯನ್ನು ಸೋಲಿಸಲು ಅಸಾಧ್ಯ. ಕಳೆದ ಐದು ವರ್ಷಗಳಲ್ಲಿ ಕ್ಷೇತ್ರ ವ್ಯಾಪ್ತಿಯ ಜನತೆಗೆ ಮಾಡಿರುವ ಅಭಿವೃದ್ಧಿಯ ಕಾರ್ಯಗಳು ನೆನಪಿದೆ. ಪ್ರಚಾರ ಸಂದರ್ಭ ಎಲ್ಲರೂ ಆಶೀರ್ವಾದಿಸುತ್ತಲೇ ಬಂದಿದ್ದಾರೆ. ಇನ್ನಷ್ಟು ಅಭಿವೃದ್ಧಿ ನಡೆಯಲಿರುವ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಜನತೆ ಕಾಂಗ್ರೆಸನ್ನು ಬೆಂಬಲಿಸಲಿದ್ದಾರೆ ಎಂದರು.ಇದೇ ಸಂಧರ್ಭ ಕೆ.ಸಿ ನಗರದ ಫುಟ್ಬಾಲ್ ಆಟವಾಡುತ್ತಿದ್ದ ಯುವಕರ ಜೊತೆಗೆ ತಾವು ಬೆರೆತರು ಈ ವೇಳೆ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.

Read More

UN NETWORKS ಉಳ್ಳಾಲ : ಬಿಜೆಪಿ ಮಹಿಳಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಳ್ಳಾಲ ಮಾಸ್ತಿಕಟ್ಟೆಯಲ್ಲಿ ಮತಯಾಚನೆ ನಡೆಸಿದರು.ನಮಿತಾ ಶ್ಯಾಂ,ಲಲಿತಾ ಸುಂದರ್, ಧನಲಕ್ಷ್ಮಿಗಟ್ಟಿ, ರಾಜೀವಿ ಕೆಂಪುಮಣ್ಣು, ರೂಪಾ ಶೆಟ್ಟಿ, ಮಹಾಲಕ್ಷ್ಮಿ, ಮುಂತಾದವರು ಪಾಲ್ಗೊಂಡರು.

Read More

UN NETWORKS ತೊಕ್ಕೊಟ್ಟು: ಮಂಗಳೂರು ಕ್ಷೇತ್ರದಲ್ಲಿ ಜನರ ಸಮಸ್ಯೆಗಳಿಗೆ ನಿರಂತರವಾಗಿ ಧ್ವನಿ ಎತ್ತಿದ ಸಿಪಿಎಂ ಯುವ ಅಭ್ಯರ್ಥಿಯನ್ನು ಮತದಾರರು ಬೆಂಬಲಿಸಲಿದ್ದಾರೆ ಎಂದು ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್ ಹೇಳಿದ್ದಾರೆ. ಅವರು ತೊಕ್ಕೊಟ್ಟು ಒಳಪೇಟೆಯ ಸಿಪಿಎಂ ಕಚೇರಿಯಲ್ಲಿ ಬುಧವಾರ ನಡೆದ ಪ್ರಣಾಳಿಕೆ ಬಿಡುಗಡೆ ನಡೆಸಿ ಮಾತನಾಡಿದರು. ಸಿಪಿಎಂ ನಿರಂತರವಾಗಿ ಜನಸಾಮಾನ್ಯರ ಸಮಸ್ಯೆಗಳ ಕುರಿತು ಧ್ವನಿ ಎತ್ತುತ್ತಾ ಬಂದಿದೆ. ಕುಡಿಯುವ ನೀರು, ರೇಷನ್ ಕಾರ್ಡು ಸಮಸ್ಯೆ, ಸರಕಾರಿ ಬಸ್, ಕಡಲ್ಕೊರೆತ ಪರಿಹಾರ, ಹಕ್ಕುಪತ್ರ ವಿಚಾರಗಳ ಕುರಿತು ಮಂಗಳೂರು ಕ್ಷೇತ್ರದಲ್ಲಿ ಜನಪರ ಹೋರಾಟ ನಡೆಸಿದೆ. ಪ್ರಮುಖವಾಗಿ ಬೀಡಿ ಕಾರ್ಮಿಕರ ಸಮಸ್ಯೆಗಳಿಗೆ , ಕಟ್ಟಡ ಕಾರ್ಮಿಕರ ಸವಲತ್ತುಗಳಿಗೆ ಹೋರಾಟವನ್ನು ನಡೆಸುತ್ತಲೇ ಇದೆ. ಕ್ಷೇತ್ರದಲ್ಲಿ ಒಂದು ಬಾರಿ ಬಿಜೆಪಿ ಮತ್ತು ಎರಡು ಬಾರಿ ಸಿಪಿಎಂ ಶಾಸಕರು ಆಳ್ವಿಕೆ ನಡೆಸಿದ್ದಾರೆ. ಆದರೆ ದಶಕಗಳ ಸಮಸ್ಯೆಯಾಗಿರುವ ಕುಡಿಯುವ ನೀರು ಪೂರೈಸಲು ಕಾಂಗ್ರೆಸ್ ಶಾಸಕರಿಗೆ ಈವರೆಗೆ ಸಾಧ್ಯವಾಗಿಲ್ಲ. ಮನೆ ನಿವೇಶನಕ್ಕೆ ಆರ್ಥಿಕ ಸಾಲ, ಸರಕಾರಿ ಜಾಗದಲ್ಲಿ ನಿರಾಶ್ರಿತರಿಗೆ ನಿವೇಶನವನ್ನಾಗಲಿ ನೀಡಿಲ್ಲ.…

Read More

UN NETWORKS ಉಳ್ಳಾಲ: ಬಿಜೆಪಿ ಪಕ್ಷಕ್ಕಿಂತ ಕಾಂಗ್ರೆಸ್ ದೊಡ್ಡ ಕೋಮುವಾದಿ ಪಕ್ಷವಾಗಿದ್ದು, ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಮಹಾನ್ ನಾಯಕರೇ ಕಾಂಗ್ರೆಸ್ಸನ್ನು ಸೋಲಿಸಲಿದ್ದಾರೆ ಎಂದು ಜಾತ್ಯಾತೀತ ಜನತಾ ದಳದ ಜಿಲ್ಲಾ ಅಧ್ಯಕ್ಷ ಮಹಮ್ಮದ್ ಕುಂಞ ಹೇಳಿದರು. ಅವರು ಕೆ.ಸಿ ರೋಡಿನಲ್ಲಿ ಸೋಮವಾರ ಜರಗಿದ ಜಾತ್ಯಾತೀತ ಜನತಾದಳದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಚಿವ ಖಾದರ್ ಅವರ ದುರಹಂಕಾರದ ನಡೆಯಿಂದ ಜನಸಾಮಾನ್ಯರ ನಾಯಕ ಅಶ್ರಫ್ ಉಳ್ಳಾಲ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಾಧ್ಯವಾಗಿದೆ. ಜನಸಮಾನ್ಯರಿಗೆ ಸಿಗುವ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದಲ್ಲಿ ಮಾತ್ರ ಜನಸಾಮಾನ್ಯರಿಗೆ ರಾಜ್ಯದಲ್ಲಿ ಉಳಿಗಾಲವಿದೆ. ಕಾನೂನು ಸುವ್ಯವಸ್ಥೆ ನೆಲೆಯಾಗಲು ರಾಜ್ಯದಲ್ಲಿ ಜೆಡಿಎಸ್ ಬರಬೇಕಿದೆ. ಉಳ್ಳಾಲದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ತಮ್ಮ ಲಾಭಕ್ಕಾಗಿ ಬ್ಯಾಟಿಂಗ್ ನಡೆಸುತ್ತಿರುವ ವೈದ್ಯಕೀಯ ಕಾಲೇಜಿನ ಚೇರ್‍ಮೆನ್ ಸಹಿತ ಹಣವಂತರು ಜೆಡಿಎಸ್ ಅಭ್ಯರ್ಥಿಗೆ ಎಚ್ಚರಿಕೆ ನೀಡುವುದನ್ನು ಬಿಟ್ಟುಬಿಡಿ. ಅಮಾಯಕ ಯುವಕರನ್ನು ಜೈಲಿಗೆ ಹಾಕುವ ಕಾಂಗ್ರೆಸ್ಸಿನವರಿಗೆ ಜಿಲ್ಲೆಗೆ ಬೆಂಕಿ ಹಚ್ಚಲು ಮುಂದಾದ ಸಂಸದರ ವಿರುದ್ಧ ಪೆಟ್ಟಿ ಕೇಸು ಹಾಕಲು ಸಾಧ್ಯವಾಗಿಲ್ಲ. ಪಂಚಾಯತ್ ಅಧ್ಯಕ್ಷನನ್ನು ಹಾಡಹಗಲೇ ಕೊಂದವರನ್ನು…

Read More

UN NETWORKS ಉಳ್ಳಾಲ: ಉಳ್ಳಾಲದಲ್ಲಿ ಕಡಲ್ಕೊರೆತ, ಕುಡಿಯುವ ನೀರಿನ ಸಮಸ್ಯೆ ಹಲವು ದಶಕಗಳ ಸಮಸ್ಯೆಯಾಗಿದೆ. ಹಲವು ಇಲ್ಲಗಳ ಆಗರವಾಗಿದೆ. ಅಗ್ನಿಶಾಮಕ ದಳ, ಸುಸಜ್ಜಿತ ಕ್ರೀಡಾಂಗಣ, 100 ಬೆಡ್ ರೂಂನ ಸರಕಾರಿ ಆಸ್ಪತ್ರೆ, ಸರಕಾರಿ ಪಾಲಿ ಟೆಕ್ನಿಕ್ ಗಳನ್ನು ಪ್ರಭಾವಿ ಸಚಿವರಾಗಿದ್ದರು ಕ್ಷೇತ್ರಕ್ಕೆ ಸಂಪೂರ್ಣ ವಿಫಲವಾಗಿದ್ದಾರೆ. ಕ್ಷೇತ್ರದ ಜನಕ್ಕೆ ಚೂರಿ ಭಾಗ್ಯ ನೀಡಿರುವುದೇ ಖಾದರ್ ರವರ ಸಾಧನೆ ಎಂದು ಬಿ.ಜೆ.ಪಿ. ಅಭ್ಯರ್ಥಿ ಸಂತೋಷ್ ಕುಮಾರ್ ರೈ ಬೋಳಿಯಾರ್ ಆರೋಪಿಸಿದರು.ಅವರು ಅಸೈಗೋಳಿಯಲ್ಲಿ ನಡೆದ ಚುನಾವಣಾ ಬಹಿರಂಗ ಸಭೆಯಲ್ಲಿ ಹೇಳಿದರು. ಮಂಗಳೂರು ಕ್ಷೇತ್ರ ಸಾಮರಸ್ಯದ ಬೀಡಾಗಬೇಕು, ಅಭಿವೃದ್ಧಿಯ ಕೇಂದ್ರವಾಗಬೇಕು, ಅಪರಾಧ ಮುಕ್ತವಾಗಬೇಕು. ಇದಕ್ಕೆಲ್ಲಾ ಬಿ.ಜೆ.ಪಿ. ಯೇ ಸೂಕ್ತ ಆಯ್ಕೆ ಎಂದು ಸಾರ್ವಜನಿಕರಲ್ಲಿ ಮತ ಯಾಚಿಸಿದರು. ಜಿಲ್ಲಾ ವಕ್ತಾರ ವಿಕಾಸ್ ಪುತ್ತೂರು, ಮಾಜಿ ಶಾಸಕರಾದ ಕೆ. ಜಯ ರಾಮ್ ಶೆಟ್ಟಿ, ಕ್ಷೇತ್ರ ಚುನಾವಣಾ ಸಂಚಾಲಕ ಸತೀಶ್ ಕುಂಪಲ, ಸಹ ಸಂಚಾಲಕ ಚಂದ್ರಹಾಸ್ ಉಳ್ಳಾಲ, ಮುಖಂಡರಾದ ಚಂದ್ರಶೇಖರ ಉಚ್ಚಿಲ, ರವೀಂದ್ರ ಶೆಟ್ಟಿ, ಚಂದ್ರಹಾಸ್ ಅಡ್ಯಂತಾಯ, ಜಿ.ಪಂ. ಸದಸ್ಯೆ  ಧನಲಕ್ಷೀ…

Read More

UN NETWORKS ಉಳ್ಳಾಲ: ಆರಾಮವಾಗಿ ಕೋಕೊ ಕೋಲಾ ಕುಡಿಯುವ ಸಚಿವ ಖಾದರ್ ಕ್ಷೇತ್ರದ ಜನರಿಗೆ ಶಾಶ್ವತ ಕುಡಿಯುವ ನೀರು ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಂಸದ ನಳಿನ್ ಕಟೀಲ್ ಹೇಳಿದ್ದಾರೆ. ತೊಕ್ಕೊಟ್ಟು ವಿನಲ್ಲಿ ಬುಧವಾರ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಾದ್ಯಂತ ಚುನಾವಣೆಯ ಕಾವು ರಂಗೇರುತ್ತಿದ್ದು, ರಾಜಕೀಯ ಜಿದ್ದಾಜಿದ್ದಿಯ ಮೇಲಾಟಗಳು ನಡೆಯುತ್ತಿದೆ. ಮಂಗಳೂರು ಕ್ಷೇತ್ರದಲ್ಲಿ ಜನರ ಕೂಗು ಶಾಸಕರ ವಿರುದ್ದವಾಗಿದೆ. ಸಮೀಕ್ಷೆಯಲ್ಲೂ ಬಿಜೆಪಿ ಪರವಾಗಿ ವರದಿಗಳು ಬಂದಿವೆ. ಈ ಭಾಗದ ಶಾಸಕರು ಆಡಳಿತ ನಡೆಸಿದ ಆರಂಭದಿಂದಲೂ ಕ್ಷೇತ್ರ ವ್ಯಾಪ್ತಿಯಲ್ಲಿ ಮತೀಯವಾದಕ್ಕೆ ಹೆಚ್ಚಿನ ಪುಷ್ಠಿ ನೀಡುತ್ತಾ ಬಂದಿದ್ದಾರೆ. ಇದು ಜನರ ವಿರೋಧಕ್ಕೆ ಕಾರಣವಾಗಿದೆ. ದೊರೆಯುವ ಸಾಧನಗಳನ್ನು ಉಪಯೋಗಿಸಲು ವಿಫಲರಾಗಿರುವ ಸಚಿವರಾದ ಖಾದರ್, ಶಾಶ್ವತ ಯಾವುದೇ ಪ್ರಾಜೆಕ್ಟ್ ಗಳ ನಿರ್ಮಾಣಮಾಡಿಲ್ಲ. ರಸ್ತೆ,ಯೇ ಅಭಿವೃದ್ದಿ ಎಂದು ಹೇಳಿಕೊಂಡು ಬರುತ್ತಿರುವ ಅವರು ಶಾಶ್ವತ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ಜಿಲ್ಲಾ ವ್ಯಾಪ್ತಿಯಲ್ಲಿ ಮಂಗಳೂರು ಕ್ಷೇತ್ರದಲ್ಲಿ ಬಹುದೊಡ್ಡ ನೀರಿನ ಸಮಸ್ಯೆಯಿದೆ. ಆದರು ತಾನು ಆರಾಮವಾಗಿ ಕೋಕಾ ಕೋಲಾ ಕುಡಿದರೆ…

Read More

UN NETWORKS ಸೋಮೇಶ್ವರ : ಸೋಮೇಶ್ವರ ಕಡಲ ಕಿನಾರೆಗೆ ಸಂಬಂಧಿಕರ ಜೊತೆಗೆ ಬಂದ ಯುವಕನೋರ್ವ ನೀರಿನಲ್ಲಿ ಈಜಾಡುತ್ತಿದ್ದ ವೇಳೆ ಹಠಾತ್ತನೆ ಸಮುದ್ರದ ನೀರಿಗೆ ಕುಸಿದು ಬಿದ್ದಿದ್ದು ಸ್ಥಳೀಯರು ಸೇರಿ ಪ್ರಥಮ ಚಿಕಿತ್ಸೆ ನ್ಡೀ ಅಸ್ಪತ್ರೆಗೆ ಸಾಗಿಸುವ ಮದ್ಯೆ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ಯುವಕನನ್ನು ರಾಕೇಶ್ ಆಚಾರ್(38) ಎಂದು ಗುರುತಿಸಲಾಗಿದೆ. ಮೈಸೂರಿನ ಜೆಪಿನಗರ ನಿವಾಸಿಯಾಗಿರುವ ರಾಕೇಶ್ ಶಕ್ತಿನಗರದಲ್ಲಿ ಎ. 28ರಂದು ನಡೆದ ತನ್ನ ತಂಗಿಯ ನೂತನ ಮನೆಯ ಗೃಹಪ್ರವೇಶದಲ್ಲಿ ಭಾಗವಹಿಸಿದ್ದರು. ಸೋಮವಾರ ತಂಗಿಯ ಕುಟುಂಬದೊಂದಿಗೆ ತೊಕ್ಕೊಟ್ಟುವಿನ ದೊಡ್ಡಮನ ಮಗಳ ಮನೆಯಲ್ಲಿ ಊಟ ಮುಗಿಸಿ ಸಂಜೆ ಕಡಲ ಕಿನಾರೆಗೆ ಬಂದಿದ್ದು, ಕುಟುಬದ ಸದಸ್ಯರ ಜೊತೆ ಸಮುದ್ರದ ಬದಿಯಲ್ಲಿ ನೀರಿನಲ್ಲಿ ಈಜಾಡುತ್ತಿದ್ದ ವೇಳೆ ರಾಕೇಶ್ ಹಠಾತ್ ಕುಸಿದು ಬಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಸ್ಥಳೀಯ ಈಜುಗಾರರು ಅವರನ್ನು ಸಮುದ್ರದಿಂದ ಮೇಲೆತ್ತಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ವೇಳೆ ಮೃತಪಟ್ಟರು ಎಂದು ತಿಳಿದು ಬಂದಿದೆ. ತುತುಋ ಸಂದರ್ಭದಲ್ಲಿ ಅಯಂಬುಲೆನ್ಸ್ ಗೆ ಕರೆ ಮಾಡಿದರೂ…

Read More