Author: UllalaVani

Kannada News From Coastal Karnataka

ಮಂಗಳೂರು ವಿಧಾನ ಸಭಾ ಕ್ಷೇತ್ರದ ಪಂಚ ಗ್ಯಾರೆಂಟಿ ಉಳ್ಳಾಲ ಸಮಿತಿಯ ಅಧ್ಯಕ್ಷ ರಫೀಕ್ ಅಂಬ್ಲಮೊಗರು ನೇತೃತ್ವದಲ್ಲಿ ಶಕ್ತಿ ಯೋಜನೆಯಡಿಯಲ್ಲಿ 500ಕೋಟಿ ಉಚಿತ ಪ್ರಯಾಣ ನನಸಾದ ಹಿನ್ನೆಲೆಯಲ್ಲಿ ಪಜೀರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಜೀರ್ ಜಂಕ್ಷನ್ ನಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸಿಗೆ ಮಹಿಳೆಯರು ಆರತಿ ಬೆಳಗಿಸಿ ಸಂತೋಷ ವ್ಯಕ್ತ ಪಡಿಸಿದರು. ಕರ್ನಾಟಕ ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೆ.ಎಸ್.ಆರ್.ಟಿ.ಸಿ ಬಸ್ಸಿನ ಚಾಲಕ ಹಸನ್ ಮತ್ತು ನಿರ್ವಾಹಕ ಮೌಲಾನಾ ಸಾಬ್ ಅವರನ್ನು ಸನ್ಮಾನಿಸಿದರು.ಬಳಿಕ ಮಾತನಾಡಿದ ಅವರು ರಾಜ್ಯ ಸರಕಾರದ ಪಂಚ ಗ್ಯಾರೆಂಟಿ ಯೋಜನೆಯಲ್ಲಿ 500 ಕೋಟಿ ಮಹಿಳೆಯರು ಉಚಿತವಾಗಿ ರಾಜ್ಯ, ಜಿಲ್ಲೆ, ವಿವಿಧ ಪ್ರದೇಶಗಳಲ್ಲಿ ಸಂಚರಿಸಿದ್ದಾರೆ, ಇದರಿಂದಾಗಿ ಆರ್ಥಿಕ ಚಲನವಲನಗಳು ಹೆಚ್ಚಾಗಿದೆ, 500 ಕೋಟಿ ಮಹಿಳೆಯರಲ್ಲಿ 500 ಕೋಟಿ ಫಲಾನುಭವಿಗಳು ಬಡವರಾಗಿದ್ದು ಅವರಿಗೆ ಪರೋಕ್ಷವಾಗಿ ಶಕ್ತಿ ನೀಡುವ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿರುವು ನಮಗೆ ಗೌರವ ಮತ್ತು ಹೆಮ್ಮೆಯ ವಿಚಾರವಾಗಿದೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಜ‌ನರಿಗೆ ಇದರ ಪ್ರಯೋಜನ ಸಿಗಲಿ ಎಂದು ಹೇಳಿದರು.ಪಂಚ…

Read More

ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನ ಸಾನಿಧ್ಯದಲ್ಲಿ ಭಜನೆ ಸತ್ಸಂಗಗಳು ನಿರಂತರವಾಗಿ ನಡೆಯುವುದು ಒಳ್ಳೆಯ ವಿಷಯ ಇದರಿಂದ ಲೋಕಕ್ಕೆ ಕಲ್ಯಾಣವಾಗಲಿ. ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ನಡೆಯುವ ಇಂತಹ ಕಾರ್ಯಕ್ರಮಗಳು ಎಲ್ಲೆಡೆಯೂ ನಿರಂತರವಾಗಿ ನಡೆಯಲಿ ಎಂದು ತಲಪಾಡಿ ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಗಣೇಶ್ ಭಟ್ ಆಶೀರ್ವಚನ ನೀಡಿದರು. ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ, ಸೋಮೇಶ್ವರ ವಲಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ), ಮಂಗಳೂರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್, ಹಾಗೂ ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಭಜನೋತ್ಸವ ಕಾರ್ಯಕ್ರಮವನ್ನು ದೀಪಬೆಳಗಿಸಿ ಅವರು ಆಶೀರ್ವಚನ ನೀಡಿದರು.ಭಜನೆ, ಸತ್ಸಂಗ ಕಾರ್ಯಕ್ರಮಗಳು ದೇವಸ್ಥಾನ, ಮಠ ಮಂದಿರಗಳಲ್ಲಿ ಯಾವಾಗಲೂ ನಡೆಯುತ್ತಿರಬೇಕು. ಹಿಂದೂ ಸಂಸ್ಕೃತಿ- ಸಂಸ್ಕಾರವನ್ನು ತಿಳಿಸುವ ಬೆಳೆಸುವ ಕಾರ್ಯಕ್ರಮಗಳು ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಕೊಡಲಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಮಾಡೂರು ಶಿವಗಿರಿ ಶ್ರೀ ಶಿವ ದುರ್ಗಾಂಭ ಮಠದ ಪರಮಪೂಜ್ಯ ಶ್ರೀ ಶ್ರೀ ಶಿವಯೋಗಿ…

Read More

ಸೇವೆಯಲ್ಲಿ ನಾವು ತೃಪ್ತಿ ಕಾಣಬೇಕು. ಸೇವಾ ಚಟುವಟಿಕೆಗಳೊಂದಿಗೆ ಮಾನವೀಯ ಸಂಬಂಧವನ್ನು ಬೆಳೆಸುವುದೇ ಲಯನ್ಸ್ ಸಂಸ್ಥೆಯ ಉದ್ದೇಶ ಎಂದು ಅಂತರಾಷ್ಟ್ರೀಯ ಲಯನ್ಸ್ ವಿಚಾರಗಳ ಮುಖ್ಯ ಸಂಯೋಜಕ ವೆಂಕಟೇಶ್ ಹೆಬ್ಬಾರ್ ತಿಳಿಸಿದರು. ಕೊಲ್ಯ ಕುಲಾಲ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಛೋಟಾ ಮಂಗಳೂರು ಲಯನ್ಸ್ ಕ್ಲಬ್ ನ 2025-26ನೇ ಸಾಲಿನ ನೂತನ ಅಧ್ಯಕ್ಷ- ಪದಾಧಿಕಾರಿಗಳ ಪದಗ್ರಹಣವನ್ನು ನಡೆಸಿ ಪ್ರಮಾಣ ವಚನ ಬೋಧಿಸಿ, ವೆಂಕಟೇಶ್ ಹೆಬ್ಬಾರ್ ಲಯನ್ಸ್ ಸಂಸ್ಥೆಯ ಧ್ಯೇಯ ಉದ್ದೇಶಗಳ ಕುರಿತು ತಿಳಿಸಿದರು.ಹರಿಣಾಕ್ಷಿ ಕೊಲ್ಯ ನೂತನ ಅಧ್ಯಕ್ಷರಾಗಿ ದೀಪ ಬೆಳಗಿಸಿ ಅಧಿಕಾರ ಸ್ವೀಕರಿಸಿ, ತನ್ನ ಅಧಿಕಾರ ಅವಧಿಯಲ್ಲಿ ಆದಷ್ಟು ಸಾಮಾಜಿಕ ಸೇವಾ ಚಟುವಟಿಕೆಗಳನ್ನೂ ಅರ್ಥಪೂರ್ಣವಾಗಿ ನಡೆಸಿ, ಛೋಟಾ ಮಂಗಳೂರು ಲಯನ್ಸ್ ಕ್ಲಬ್‍ನ್ನು ಇನ್ನಷ್ಟು ಅಭಿವೃದ್ಧಿಯಲ್ಲಿ ಮುಂದುವರೆಸುವ ಪ್ರಯತ್ನ ಮಾಡುತ್ತೇನೆ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ತಿಳಿಸಿದರು.ಇಬ್ಬರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ಅರ್ಹ ಕುಟುಂಬಕ್ಕೆ ವೈದ್ಯಕೀಯ ವೆಚ್ಚದ ನೆರವು ಸೇವಾ ಚಟುವಟಿಕೆಯಾಗಿ ವಿತರಿಸಲಾಯಿತು.ಉಳ್ಳಾಲ ವೀರರಾಣಿ ಅಬ್ಬಕ್ಕ ಪ್ರಶಸ್ತಿ ಪುರಸ್ಕೃತೆ ಹಿರಿಯ ಸಾಮಾಜಿಕ ಕಾರ್ಯಕರ್ತೆ…

Read More

ಕೊಣಾಜೆ: ಮಂಗಳೂರು ವಿವಿಯಲ್ಲಿ ಪ್ರಾಧ್ಯಾಪಕರಾಗಿದ್ದುಕೊಂಡು ಇದೀಗ ಧಾರವಾಡ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕಗೊಂಡಿರುವ ಪ್ರೊ.ಎ.ಎಂ.ಖಾನ್ ಅವರನ್ನು ಮಂಗಳೂರು ವಿವಿ ವತಿಯಿಂದ ಅಭಿನಂದಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರು, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅನೇಕ ವರ್ಷಗಳ ಕಾಲ ಪ್ರಾಧ್ಯಾಪಕರಾಗಿದ್ದ ಪ್ರೊ.ಎ.ಎಂ.ಖಾನ್ ಅವರು ಆಡಳಿತ ವಿಭಾಗದಲ್ಲೂ ಉತ್ತಮ ಅನುಭವ ಹೊಂದಿದ್ದಾರೆ. ವಿವಿಧ ಸಂಶೋಧನೆ ಯೋಜನೆ ಸೇರಿದಂತೆ ಮಂಗಳೂರು ವಿವಿಯ ಅಭಿವೃದ್ಧಿಗೆ ಅನೇಕ ರೀತಿಯ ಕೊಡುಗೆ ನೀಡಿದ್ದಾರೆ. ಅವರ ಸಮರ್ಥ ನಾಯಕತ್ವದಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಇನ್ನಷ್ಟು ಅಭಿವೃದ್ಧಿ ಹೊಂದುವಂತಾಗಲಿ ಎಂದು ಹೇಳಿದರು.ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ‌ ಇದ‌ರ ನೂತನ ಕುಲಪತಿ ಪ್ರೊ.ಎ.ಎಂ.ಖಾನ್ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಕುಲಸಚಿವ ಕೆ.ರಾಜು ಮೊಗವೀರ, ಹಣಕಾಸು ಅಧಿಕಾರಿ ಪ್ರೊ.ವೈ ಸಂಗಪ್ಪ,‌ ಪರೀಕ್ಷಾಂಗ ಕುಲಸಚಿವ ಪ್ರೊ.ದೇವೇಂದ್ರಪ್ಪ, ಡಾ‌‌.ಕೆ.ಆರ್.ಶಾನಿ, ಡಾ.ವಜೀದಾ ಭಾನು ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಂಗಳೂರು ವಿವಿ ಶಿಕ್ಷಕೇತರ ಸಂಘದ ವತಿಯಿಂದಲೂ ಪ್ರೊ.ಎ.ಎಂ.ಖಾನ್ ಅವರನ್ನು ಅಭಿನಂದಿಸಲಾಯಿತು

Read More

ಉಳ್ಳಾಲ : ಬುಧವಾರ ಸುರಿದ ಭಾರೀ ಮಳೆಯಿಂದಾಗಿ ಉಳ್ಳಾಲದ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ, ಇದೇ ವೇಳೆ ಮಿಲ್ಲತ್‌ ನಗರದಲ್ಲಿ ಮನೆಯೊಂದಕ್ಕೆ ನೀರು ನುಗ್ಗಿದ್ದು ಮನೆ ಖಾಲಿ ಮಾಡಿದ ಕೆಲವೇ ಕ್ಷಣಗಳಲ್ಲಿ ಮನೆ ಯಜಮಾನ ಮೃತಪಟ್ಟಿದ್ದಾರೆ. ಮಿಲ್ಲತ್ ನಗರ ನಿವಾಸಿ ರಫೀಕ್ (55) ಎಂಬವರು ಮೃತರು. ಇವರ ಮನೆಯೊಳಗೆ ಮಳೆ ನೀರು ನುಗ್ಗಿದ್ದರಿಂದ ಮನೆಯೊಳಗಿದ್ದ ಸಾಮಗ್ರಿಗಳನ್ನು ಖಾಲಿ ಮಾಡಿ ಸಂಬಂಧಿಕರ ಮನೆಗೆ ಹೊರಟಿದ್ದರು. ಇದೇ ವೇಳೆ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವ ಸಂದರ್ಭ ದಾರಿಮಧ್ಯೆ ಮೃತಪಟ್ಟಿದ್ದಾರೆ. ಉಳ್ಳಾಲ‌ ದರ್ಗಾ ಸಮಿತಿಯ ಸದಸ್ಯರಾಗಿದ್ದರು. ಮೃತರು ಪತ್ನಿ, ಗಂಡು ಮತ್ತು ನಾಲ್ವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Read More

ಕಾರ್ಕಳ : ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ರವರ ತಂದೆ ಎಂ. ಕೆ. ವಾಸುದೇವ್ ರವರು ಅಲ್ಪಕಾಲದ ಅನಾರೋಗ್ಯದ ಪರಿಣಾಮ ಇಂದು ನಿಧನರಾಗಿದ್ದು, ಇವರ ಅಗಲಿಕೆಗೆ ಕರ್ನಾಟಕ ರಾಜ್ಯ ಫೆಡರೇಷನ್ ಆಫ್ ಕರ್ನಾಟಕ, ಕ್ವಾರಿ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ (ರಿ.) ಬೆಂಗಳೂರು ಇದರ ಅಧ್ಯಕ್ಷರಾದ ಡಾ. ರವೀಂದ್ರ ಶೆಟ್ಟಿ ಬಜೆಗೋಳಿ ಸಂತಾಪ ಸೂಚಿಸಿದ್ದಾರೆ.ಸಂಘದ ಹಿರಿಯ ಸ್ವಯಂಸೇವಕ, ಚಿಕ್ಕಮಗಳೂರು ರಾಷ್ಟೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಕಾರ್ಯವಾಹಕರಾಗಿ ಜವಾಬ್ದಾರಿಯನ್ನು ನಿರ್ವಹಿಸಿ ಎಂ.ಕೆ ವಾಸುದೇವ್ ಎಲ್ಲರ ಪ್ರೀತಿಯ “ವಾಸು ಮಾಷ್ಟ್ರು” ಎಂದೇ ಖ್ಯಾತರಾಗಿದ್ದರು. ಇಹಕಾಯವನ್ನು ಅಗಲಿದ ಅವರ ಆತ್ಮಕ್ಕೆ ಮೋಕ್ಷವನ್ನು ಭಗವಂತ ಕರುಣಿಸಲಿ ಮತ್ತು ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬವರ್ಗ, ಶಿಷ್ಯವರ್ಗ ಹಾಗೂ ಆತ್ಮೀಯರಿಗೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

Read More

ಉಳ್ಳಾಲ: ಉಳ್ಳಾಲ ತಾಲೂಕಿನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ, ಹಲಸು ಮೇಳ, ಆಟಿ ಆಹಾರೋತ್ಸವ, ಮತ್ತು ಕೃಷಿ ಪ್ರೇರಣೆ ಚಟುವಟಿಕೆಗಳು ಆ. 2 ಮತ್ತು 3 ರ ಶನಿವಾರ ಮತ್ತು ಭಾನುವಾರ ದಂದು ಅದ್ಧೂರಿಯಾಗಿ ಜರಗಲಿದೆ. ಈ ವಿಶೇಷ ಕಾರ್ಯಕ್ರಮವನ್ನು ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘ (K.V.S.S.) ಮುಂಚೂಣಿಯಲ್ಲಿದ್ದು, ಮಾಧ್ಯಮ ಕೇಂದ್ರ ತೊಕ್ಕೊಟ್ಟು ಮತ್ತು ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸಹಯೋಗದಲ್ಲಿ ಆಯೋಜಿಸಲಾಗಿದೆ. ಈ ಮೇಳದ ಮುಖ್ಯ ಆಕರ್ಷಣೆಗಳಲ್ಲೊಂದು ಹಲಸಿನ ನಾನಾ ಬಗೆಯ ಪೈರುಗಳು, ಉತ್ಪನ್ನಗಳು, ಹಾಗೂ ಜನಪರ ಪರಂಪರೆಯ ಆಟಿ ಆಹಾರ. ಜೊತೆಗೆ, ಕೃಷಿಕರಿಗೆ ಪ್ರೇರಣೆ ನೀಡುವ ಕಾರ್ಯಾಗಾರಗಳು, ಸುಸ್ಥಿರ ಕೃಷಿ ತಂತ್ರಗಳು ಹಾಗೂ ಸ್ಥಳೀಯ ಉತ್ಪನ್ನಗಳ ಪ್ರದರ್ಶನವೂ ಇರಲಿದೆ. ಮೀಡಿಯಾ ಪಾರ್ಟ್ನರ್‌ ಆಗಿ ಉಳ್ಳಾಲವಾಣಿ ಇದ್ದು, Bee Bharath Honey Farm ಮತ್ತು Udupi Naturals ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ರಮವು ಉಳ್ಳಾಲದ ಕೃಷಿಕರ, ಆಹಾರ ಪ್ರಿಯರ, ಮತ್ತು ಪರಿಸರಾಭಿಮಾನಿಗಳಿಗಾಗಿ ಒಂದು ವಿಶಿಷ್ಟ ವೇದಿಕೆಯಾಗಲಿದ್ದು, ಎಲ್ಲರಿಗೂ ಮುಕ್ತ…

Read More

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕೃಷ್ಣಾಪುರ ಶಾಖೆಯ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ಕೃಷ್ಣಾಪುರ ಶಾಖೆಯಲ್ಲಿ ಜರುಗಿತು. ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ ಪಿ.ಕೆ ಉಪಧ್ಯಾಯ, ಶ್ರೀನಿವಾಸ್ ರಾವ್, ರಾಧ, ಅಬ್ದುಲ್ ಖಾದರ್ ಹಾಗೂ ದೀಕ್ಷಿತ ರವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು.ಸಂಘದ ಸದಸ್ಯರಾದ ಪಿ.ಕೆ ಉಪಾಧ್ಯಯ ರವರು ಮಾತನಾಡಿ “ಸಹಕಾರ ಸಂಘಗಳಲ್ಲಿ ಬೆಳವಣಿಗೆಯಲ್ಲಿ ಠೇವಣಿದಾರರು ಹಾಗೂ ಸಾಲಗಾರರ ಪಾತ್ರ ತುಂಬಾ ಮಹತ್ವದಾಗಿದೆ. ಈ ನಿಟ್ಟಿನಲ್ಲಿ ಗ್ರಾಹಕರ ಸಭೆಯನ್ನು ಆಯೋಜಿಸಿ ಸಂಘದ ಗ್ರಾಹಕರನ್ನು ನೆನೆಪಿಸಿಕೊಳ್ಳುವ ಕಾರ್ಯ ಮಾಡಿರುವುದು ಶ್ಲಾಘನೀಯ” ವೆಂದರು.ಶ್ರೀ ಪಿ.ಎಚ್.ಎಂ ರಫೀಕ್ ರವರು ಮಾತನಾಡಿ “ಕೃಷ್ಣಾಪುರ ಶಾಖೆಯಲ್ಲಿ ಸಿಬ್ಬಂದಿಗಳ ಸೇವೆಯು ಉತ್ತಮವಾಗಿದ್ದು, ಇದು ಶಾಖೆಯ ಬೆಳವಣಿಗೆಗೆ ಕಾರಣ. ಆತ್ಮಶಕ್ತಿಯು ಹೀಗೆಯೆ ಉತ್ತಮ ಸೇವೆಗಳನ್ನು ನೀಡುತ್ತಾ ಇನ್ನಷ್ಟೂ ಬೆಳಗಲಿ” ಎಂದು ಶುಭಹಾರೈಸಿದರು. ಯಶಸ್ವಿನಿ ರವರು ಮಾತನಾಡಿ “ಆತ್ಮಶಕ್ತಿಯು ಬ್ಯಾಂಕಿಂಗ್ ಸೌಲಭ್ಯಗಳನ್ನು ಗ್ರಾಹಕ ಸ್ನೇಹಿ ಸೇವೆ ನೀಡುವುದರ ಮೂಲಕ ಮನೆ ಬಾಗಿಲಿಗೆ ತಲುಪಿಸುವಲ್ಲಿ…

Read More

ಉಳ್ಳಾಲ ತಾಲೂಕಿನಾದ್ಯಂತ ನಿರಂತರವಾಗಿ ಮಳೆ ಆಗುತ್ತಿರುವುದರಿಂದ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯೆ ಸಂಸ್ಥೆಗಳಿಗೆ ದಿನಾಂಕ 17.07.2025 ರಂದು ರಜೆ ಘೋಷಿಸಲಾಗಿದೆ ಎಂದು ಉಳ್ಳಾಲ ತಾಲೂಕು ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜು.15 ರಂದು ಭಾರೀ ಮಳೆ ಹಿನ್ನೆಲೆ ರಜೆ ಘೋಷಿಸಿದ ಬೆನ್ನಲ್ಲೇ, ಇಂದು ತಡರಾತ್ರಿ ಮಳೆ ಹಾಗೂ ಹವಾಮಾನ ಇಲಾಖೆ ವರದಿಯಂತೆ ನಾಳೆಯೂ ಭಾರೀ ಮಳೆಯಾಗುವ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ರಜೆ ಘೋಷಿಸಲಾಗಿದೆ.

Read More

ಪಂಡಿತ್‌ಹೌಸ್: ಟಯರ್ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗಲೇ ಪಂಡಿತ್ ಹೌಸ್ ನಿವಾಸಿ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿರುವ ಘಟನೆ ಮಂಗಳೂರು ಪದಂಗಡಿ ಅಜ್ಜನಕಟ್ಟೆ ಸಮೀಪದ ಟಯರ್ ಅಂಗಡಿಯಲ್ಲಿ ನಡೆದಿದೆ.ಪಂಡಿತ್ ಹೌಸ್, ವಿಜೇತನಗರ ಗಂಡಿ ನಿವಾಸಿ ವೇಣುಗೋಪಾಲ(40) ಸಾವನ್ನಪ್ಪಿದವರು. ಹಲವು ವರ್ಷಗಳಿಂದ ಟಯರ್ ಶಾಪ್ ನಲ್ಲಿ ಟೆಕ್ನೀಷಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವೇಣುಗೋಪಾಲ್, ಇಂದು ಸಂಜೆ ವೇಳೆ ಕೆಲಸ ನಿರ್ವಹಿಸುತ್ತಿದ್ದಾಗಲೇ ಕುಸಿದುಬಿದ್ದಿದ್ದರು. ಬಳಿಕ ಮೃತಪಟ್ಟಿದ್ದಾರೆ. ಹೃದಯಘಾತಕ್ಕೀಡಾಗಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಅವಿವಾಹಿತರಾಗಿರುವ ಇವರು ತಾಯಿ , ಇಬ್ಬರು ಸಹೋದರಿಯರು, ಓರ್ವ ಸಹೋದರನನ್ನು ಅಗಲಿದ್ದಾರೆ.

Read More