UN NETWORKS
ಉಳ್ಳಾಲ: ಉಪ್ಪಳ ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮ, ಜಗದ್ಗುರು ಶ್ರೀ ನಿತ್ಯಾನಂದ ಮಹಾಪಪೀಠಮ್ ಇವರಿಂದ ಶ್ರೀ ಗಾಯತ್ರೀ ದೇವಿಯ ಹಾಗೂ ಭಗವಾನ್ ಶ್ರೀ ನಿತ್ಯಾನಂದ ಗುರುದೇವರ ಪ್ರತಿಷ್ಠಾ ವರ್ಧಂತಿ ಮತ್ತು ಲೋಕಕಲ್ಯಾಣಾರ್ಥವಾಗಿ ` ನಕ್ಷತ್ರೇಷ್ಟಿ’ ಯಾಗ ಫೆ.1 ರಿಂದ 4ರ ವರೆಗೆ ಹಾಗೂ 15 ನೇ ವರ್ಷದ ಅಖಂಡ ಭಜನಾ ಸಪ್ತಾಹ ಫೆ.4 ರಿಂದ ಫೆ.11ರವರೆಗೆ ಜರಗಲಿದೆ ಎಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಹೇಳಿದ್ದಾರೆ.
ಗುರುವಾರ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು 2019 ರಲ್ಲಿ ನಡೆಯಲಿರುವ ಅತಿರಾತ್ರ ಸೋಮಯಾಗದ ಪೂರ್ವಭಾವಿಯಾಗ ನಕ್ಷತ್ರೇಷ್ಟಿ ಯಾಗ ಹಮ್ಮಿಕೊಳ್ಳಲಾಗಿದೆ. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮಿಗಳ ಮಾರ್ಗದರ್ಶನದಲ್ಲಿ, ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಪ್ರಧಾನ ಅರ್ಚಕ ಬ್ರಹ್ಮಶ್ರೀ ಕಮಲಾದೇವೀ ಪ್ರಸಾದ ಆಸ್ರಣ್ಣರ ಆಚರ್ಯಾತ್ವದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ ಮತ್ತು ಶ್ರೌತ ವಿದ್ವಾಂಸರಾದ ಶ್ರೀ ಕ್ಷೇತ್ರ ಗೋಕರ್ಣದ ವೇದಮೂರ್ತಿ ಗಣೇಶ ವಾಸುದೇವ ಜೋಗಳೇಕರ್ ರವರ ನೇತೃತ್ವದಲ್ಲಿ ಮತ್ತು ಆಯತಾಗ್ನಿ ಚಂದ್ರಶೇಖರ ಶರ್ಮಾ ಇವರ ಉಪಸ್ಥಿತಿಯಲ್ಲಿ ನಕ್ಷತ್ರೇಷ್ಟಿ ಯಾಗವು ನಡೆಯಲಿದೆ ಎಂದರು.
ಯಾಗದ ಪ್ರಯುಕ್ತ ನಡೆಯಲಿರುವ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ದೇಶವ್ಯಾಪಿಯ ಗಣ್ಯರು ಭಾಗವಹಿಸಲಿದ್ದಾರೆ.
ಸಾಮಾಜಿಕ ಮುಂದಾಳು ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಸ್ವಾಗತಿಸಿದರು. ಸುದ್ಧಿಗೋಷ್ಠಿಯಲ್ಲಿ ಯಾಗ ಸಮಿತಿಯ ಅಧ್ಯಕ್ಷ ಡಾ| ಶ್ರೀಧರ್ ಭಟ್ ಉಪ್ಪಳ ಉಪಸ್ಥಿತರಿದ್ದರು.


