Author: UllalaVani

Kannada News From Coastal Karnataka

UN NETWORKS ಕೋಟೆಕಾರ್: ಏನೋ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡು ಕಾಂಗ್ರೆಸ್‍ಗೆ ಸೇರಿದ್ದ ನಾನು ಅದರ ಒಳಗೆ ಹೋದ ನಂತರವೇ ಕಾಂಗ್ರೆಸ್ ಬಣ್ಣ ಹಾಗೂ ನೈಜ ಸಂಗತಿ ಅರಿವಾಗಿದೆ. ಇಂದು ನಾನು ಕಾಂಗ್ರೆಸ್‍ನಿಂದ ಬಿಜೆಪಿಗೆ ಬಂದಿದ್ದೇನೆ. ಕಾಂಗ್ರೆಸ್‍ನಲ್ಲಿರುವ ಇನ್ನಷ್ಟು ಜನ ಬಿಜೆಪಿಗೆ ಪರಿವರ್ತನೆಯಾಗಲಿದ್ದಾರೆ. ನಾಳೆ ಯು.ಟಿ.ಖಾದರ್ ಅವರು ಕೂಡಾ ಬಿಜೆಪಿ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಇದೆ ಎಂದು ಬಿಜೆಪಿ ಮುಖಂಡರಾದ ಹರಿಕೃಷ್ಣ ಬಂಟ್ವಾಳ್ ಅವರು ಹೇಳಿದರು. ಅವರು ಮಂಗಳೂರು ವಿಧಾನಸಭಾ ಕ್ಷೇತ್ರದ ಕೋಟೆಕಾರ್ ಬೀರಿಯಲ್ಲಿ ಸೋಮವಾರ ಸಂಜೆ ನಡೆದ ಬಿಜೆಪಿಯ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಕಳೆದ 60 ವರ್ಷದಿಂದ ದೇಶದಲ್ಲಿ ಆಳ್ವಿಕೆ ಮಾಡಿರುವ ಕಾಂಗ್ರೆಸ್ ಪಕ್ಷದಿಂದ ಇಂದಿಗೂ ದೇಶದಲ್ಲಿ ಜಾತಿಯ, ಧರ್ಮದ ಅಸಮಾನತೆಗೆ ಮುಕ್ತಿ ಸಿಕ್ಕಿಲ್ಲ, ಶ್ರೀಮಂತ ಬಡವ ಅಂತರಕ್ಕೆ ಮುಕ್ತಿ ಸಿಕ್ಕಿಲ್ಲ. ರಾಹುಲ್ ಗಾಂಧಿಯಂತವರು, ಸಿದ್ದರಾಮಯ್ಯನಂತವರು, ಯು.ಟಿ.ಖಾದರ್ ನಂತವರು ದೇಶದಲ್ಲಿ ಸಾವಿರಾರು ಜನ ಹುಟ್ಟುತ್ತಾರೆ. ಆದರೆ ನರೇಂದ್ರ ಮೋದಿಯಂತವರು ಒಬ್ಬರೇ ಹುಟ್ಟಲು ಸಾಧ್ಯ. ಮೋದಿಯ ಆಡಳಿತದಿಂದ ಇಂದು ವಿಶ್ವಗುರುವಾಗಿ ಬೆಳೆಯುತ್ತಿದ್ದು,…

Read More

UN NETWORKS ಉಳ್ಳಾಲ: ಕಾರ್ಯಗಾರಗಳ ಮೂಲಕ ಜ್ಞಾನ ವೃದ್ಧಿಸುವುದರ ಜತೆಗೆ ಪರಸ್ಪರ ಜ್ಞಾನ ಹಂಚಿಕೊಳ್ಳಲು ಸಾಧ್ಯ ಎಂದು ಬೆಂಗಳೂರು ನಿಮ್ಹಾನ್ಸ್ ನ ಸೈಕೋಫಾರ್ಮಕಾಲಜಿ ವಿಭಾಗ ಮುಖ್ಯಸ್ಥ ಡಾ| ಚಿತ್ತರಂಜನ್ ಅಂದ್ರಾಡೆ ಅಭಿಪ್ರಾಯಪಟ್ಟರು. ನಿಟ್ಟೆ ಮನೋವೈದ್ಯಶಾಸ್ತ್ರ ವಿಭಾಗ ಹಮ್ಮಿಕೊಂಡ ಕ್ಷೇಮ ಆಸ್ಪತ್ರೆಯ ಸೆಮಿನಾರ್ ಹಾಲ್ ನಲ್ಲಿ ಸೋಮವಾರ ` ಖಿನ್ನತೆ-ಶಮನಕಾರಿ ಮಧ್ಯಸ್ಥಿಕೆಗಳಲ್ಲಿ ನಾವೀನ್ಯತೆಗಳು ಹಾಗೂ ಕೆಟಮೈನ್ ಬಳಕೆಯ ಸಿದ್ಧಾಂತ ಮತ್ತು ಅಭ್ಯಾಸ ಕುರಿತ ಒಂದು ದಿನದ ಕಾರ್ಯಗಾರವನು ಉದ್ಘಾಟಿಸಿ ಮಾತನಾಡಿದರು. ಕಿಟಮೈನ್ ಅನಸ್ತೇಷಿಯಾ ವಿಭಾಗದಲ್ಲಿ ಹೆಚ್ಚು ಬಳಕೆ ಮಾಡಲಾಗುತ್ತಿದ್ದು, ಖಿನ್ನತೆಗೆ ಒಳಗಾದವರನ್ನು ನಿಯಂತ್ರಿಸಲು ಕಿಟಮೈನ್ ಬಳಕೆ ಮಾಡಲಾಗುತ್ತಿದೆ. ಆದರೆ ಕಿಟಮೈನ್ ಕುರಿತ ಅಪಪ್ರಚಾರಗಳು ಹೆಚ್ಚಿದ್ದು, ಈ ಕುರಿತು ವಿದ್ಯಾರ್ಥಿಗಳಲ್ಲಿ ಹಾಗೂ ವೈದ್ಯರಲ್ಲಿ ಹೆಚ್ಚಿನ ಜ್ಞಾನ ಅಗತ್ಯ ಇರಬೇಕಿದೆ ಎಂದರು. ಕೆ.ಎಸ್.ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಡೀನ್ ಡಾ|ಪಿ.ಯಸ್. ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಸಹ ಡೀನ್ ಡಾ| ಜಯಪ್ರಕಾಶ್ ಶೆಟ್ಟಿ, ವೈದ್ಯಕೀಯ ಅಧೀಕ್ಷಕ ಡಾ| ಶಿವಕುಮಾರ್ ಹಿರೇಮಠ, ನಿಟ್ಟೆ ಮನೋವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಸತೀಶ್…

Read More

UN NETWORKS ಉಳ್ಳಾಲ: ಉಳ್ಳಾಲಭಾಗದಲ್ಲಿ ಜಾತಿ ಧರ್ಮವನ್ನು ಬದಿಗಿಟ್ಟು ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದರ ಜೊತೆಗೆ ಆರ್ಥಿಕವಾಗಿ ಹಿಂದುಳಿದವರಿಗೆ ಬೆನ್ನೆಲುಬಾಗಿ ನಿಂತ ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ಐದು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವುದು ಶ್ಲಾಘನೀಯ ಎಂದು ಎಂದು ಸೈಯ್ಯಿದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಹೇಳಿದರು. ಅವರು ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ಇದರ ಐದು ವರ್ಷ ಪೂರೈಸಿದ ಅಂಗವಾಗಿ ಬಾಂಧವ್ಯ ಅನ್ನುವ ಸ್ಮರಣ ಸಂಚಿಕೆಯನ್ನು ಇತ್ತೀಚೆಗೆ ಮಾಸ್ತಿಕಟ್ಟೆಯ ಕಚೇರಿಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು. ಶಿಕ್ಷಣ, ಆರೋಗ್ಯ, ಹಿಂದುಳಿದವರ ಅಭಿವೃದ್ಧಿಯ ಉದ್ದೇಶವನ್ನಿಟ್ಟುಕೊಂಡು ಕಾರ್ಯಾಚರಿಸುತ್ತಿರುವ ಟ್ರಸ್ಟ್ ಐದು ವರ್ಷಗಳಲ್ಲಿ ಹಮ್ಮಿಕೊಂಡ ಕಾರ್ಯಕ್ರಮ ಸಮಾಜಕ್ಕೆ ಪೂರಕವಾಗಿದೆ. ಉಳ್ಳಾಲ ಭಾಗದಲ್ಲಿ ಇಂತಹ ಸಾಮರಸ್ಯಕ್ಕೆ ಪೂರಕವಾಗಿ ಕಾರ್ಯಾಚರಿಸುತ್ತಿರುವ ಟ್ರಸ್ಟ್ ಇನ್ನಷ್ಟು ಜನರ ಬಾಳಿಗೆ ಬೆಳಕಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ಇದರ ಅಧ್ಯಕ್ಷ ಅನ್ವರ್ ಹುಸೈನ್ ಮಾತನಾಡಿ ಐದು ವರ್ಷಗಳಿಂದ ಜನತೆಗೆ ಆಶಾಕಿರಣವಾಗಿ ಟ್ರಸ್ಟ್ ಸ್ಪಂಧಿಸುತ್ತಾ ಬಂದಿದೆ. ಮುಂದಿನ ದಿನಗಳಲ್ಲಿಯೂ…

Read More

UN NETWORKS ಉಳ್ಳಾಲ: ಕೇರಳ ರಾಜ್ಯ ಲಾಟರಿ ಈ ಬಾರಿ ಹೊಸಂಗಡಿಯ ಛಾಯಗ್ರಾಹಕರೊಬ್ಬರಿಗೆ ಒಲಿದಿದ್ದು, ಹೊಸಂಗಡಿ ಅಮ್ಮ ಲಾಟರಿ ಏಜೆನ್ಸಿಯಿಂದ ಎ.30ರಂದು 30 ರೂ. ನಲ್ಲಿ ಖರೀದಿಸಿದ ಕೇರಳ ರಾಜ್ಯ ಲಾಟರಿ ವಿನ್ ವಿನ್ ತಿ458 ಕ್ಕೆ ರೂ. 65 ಲಕ್ಷ ಒಲಿದಿದೆ. ಹೊಸಂಗಡಿ ಬಳಿಯ ಮಜಿಬೈಲು ಮಂಜಯ್ಯ ಹಿತ್ಲು ನಿವಾಸಿ ಪ್ರಭಾಕರ ಶೆಟ್ಟಿ ಅದೃಷ್ಟವಂತ. ಮಂಜೇಶ್ವರ ಬ್ಲಾಕ್ ಪಂಚಾಯಿತಿನ ಮಾಜಿ ಸದಸ್ಯರಾಗಿರುವ ಇವರು ಹವ್ಯಾಸಿ ಯಕ್ಷಗಾನ ಕಲಾವಿದರು ಹಾಗೂ ಕೃಷಿಕರಾಗಿದ್ದಾರೆ. ಸಿಪಿಎಂ ನೇತಾರರಾಗಿರುವ ಇವರು ಉಪ್ಪಳ ಶ್ರೀ ಸದಾಶಿವ ದೇವಸ್ಥಾನದ ಮಾಜಿ ಟ್ರಸ್ಟೀಯೂ ಆಗಿದ್ದಾರೆ. ವೃತ್ತಿಯಲ್ಲಿ ಛಾಯಗ್ರಾಹಕನಾಗಿರುವ ಪ್ರಭಾಕರ ಶೆಟ್ಟಿ ಎ.29ರ ಬೆಳಿಗ್ಗೆ ಮಂಗಳೂರಿಗೆ ಮದುವೆ ಸಮಾರಂಭಕ್ಕೆ ತೆರಳುವ ಸಂದರ್ಭ ಹೊಸಂಗಡಿಯಲ್ಲಿ ಅಮ್ಮ ಲಾಟರಿ ಏಜೆನ್ಸಿಯಿಂದ ಲಾಟರಿಯನ್ನು ಖರೀದಿಸಿದ್ದರು. ಎ.30 ರ ಸಂಜೆ ಹೊತ್ತಿಗೆ ಡ್ರಾ ಆಗುತ್ತಿದ್ದಂತೆ ಬೇರೊಂದು ಸಮಾರಂಭದಲ್ಲಿದ್ದ ಪ್ರಭಾಕರ್ ಶೆಟ್ಟಿ ಅವರು ಏಜೆನ್ಸಿಯಲ್ಲಿ ಕೇಳಿದ್ದಾರೆ. ಅದರಂತೆ ಏಜೆನ್ಸಿ ಮಾಲೀಕರು ನಂಬರು ನೀಡಿದ್ದು, ಆದರೆ ಪ್ರಭಾಕರ್ ಶೆಟ್ಟಿ ಟಿಕೇಟನ್ನು…

Read More

UN NETWORKS ಮಂಗಳೂರು : ಮಂಗಳೂರು ತಾಲೂಕಿನ ಗುರುಕಂಬಳದ ಎ.ಕೆ.ಯು ಅನುದಾನಿತ ಪ್ರೌಢಶಾಲೆಯಲ್ಲಿ ಸುಮಾರು 33 ವರ್ಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಅಬ್ದುಲ್ ರಹಿಮಾನ್ ಅವರ ವಿದಾಯ ಸನ್ಮಾನ ಸಮಾರಂಭವು ಇತ್ತೀಚೆಗೆ ಶಾಲಾ ಸಭಾಂಗಣದಲ್ಲಿ ನಡೆಯಿತು. ಸನ್ಮಾನವನ್ನು ನೆರವೇರಿಸಿ ಮಾತನಾಡಿದ ಜುಮ್ಮ ಮಸೀದಿ ಸೂರಲ್ಪಾಡಿ ಇದರ ಅಧ್ಯಕ್ಷರಾದ ಅಬ್ದುಲ್ ಮಜೀದ್‍ರವರು ಶಾಲೆಯಲ್ಲಿ ಕೇವಲ ಪಠ್ಯವನ್ನು ಬೋದಿಸಿದರೆ ಸಾಲದು ಪಠ್ಯೇತ್ತರ ಚಟುವಟಿಕೆಗಳನ್ನು ಹಮ್ಮಿ ಕೊಳ್ಳುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಬಹಳ ಪ್ರಮುಖ್ಯವಾಗಿ ಶಿಸ್ತನ್ನು ಕಲಿಸಿ ಕೊಡುವುದು ಕೂಡ ಅಷ್ಟೇ ಮುಖ್ಯ ವೆಂದರು. ಈ ನೆಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ್ಜರು ಸಂಸ್ಥೆಗೆ ನೀಡಿದ ಸೇವೆ ಅಪಾರ ವೆಂದು ಹೇಳಿದರು. ಮುಖ್ಯ ಅತಿಥಿಯಾಗಿ ಮಂಗಳೂರು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಸಂಘದ ಅಧ್ಯಕ್ಷರಾದ ತ್ಯಾಗಂ ಹರೇಕಳ ಇವರು ತನ್ನ ಅಭಿನಂದನಾ ಭಾಷಣದಲ್ಲಿ ಅಬ್ದುಲ್ ರಹಿಮಾನ್‍ರವರು ತಮ್ಮ ಸೇವಾ ಅವಧಿಯಲ್ಲಿ ಹಲವಾರು ವಿದ್ಯಾರ್ಥಿಗಳನ್ನು ರಾಜ್ಯಮಟ್ಟಕ್ಕೆ ಕಳಿಸಿ ಕೊಡುವುದರೊಂದಿಗೆ ಅಲ್ಲಿಯೂ ಉತ್ತಮ ಸಾಧನೆಯನ್ನು…

Read More

UN NETWORKS ಬಜ್ಪೆ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಜ್ಪೆ ಮತ್ತು ಸುಂಕದಕಟ್ಟೆ ವಲಯ ಹಾಗೂ ಕೆ.ಎಂ.ಸಿ ಆಸ್ಪತ್ರೆ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವು ಬಜ್ಪೆ ರೋಯಲ್ ಹೌಸ್ ನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಎಫ್.ಐ ಬಜ್ಪೆ ಡಿವಿಷನ್ ಅಧ್ಯಕ್ಷ ಇಸ್ಮಾಯಿಲ್ ಇಂಜಿನಿಯರ್ ವಹಿಸಿದರು. ವೇದಿಕೆಯಲ್ಲಿ ನಿವ್ರತ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಜ ವಿ ಮುಹಮ್ಮದ್, ಡಾ. ರಿತೇಶ್ ಶೆಟ್ಟಿ,ಅಲ್ ಹುದಾ ಜುಮಾ ಮಸ್ಜಿದ್ ಅಧ್ಯಕ್ಷ ಇಬ್ರಾಹಿಂ ಹಾಜಿ,ಕಾರ್ಯದರ್ಶಿ ಪಯಣಿಗ ಉಂಜಾಕ, ಹಿರಿಯ ನಾಗರಿಕ ಮುಹಮ್ಮದ್, ಸಾಯಿ ಮೆಡಿಕಲ್ ಮಾಲೀಕರಾದ ಚಂದ್ರಶೇಖರ್, ಕೆ.ಎಂ.ಸಿ ಆಸ್ಪತ್ರೆ ಡಾ.ಮುಕುಂದ,ಪಿ.ಎಫ್.ಐ ಬಜ್ಪೆ ಡಿವಿಷನ್ ಕಾರ್ಯದರ್ಶಿ ಮುಹಮ್ಮದ್ ರಿಯಾಝ್, ಪಿ.ಎಫ್.ಐ ಮೆಡಿಕಲ್ ಇಂಚಾಝ್ ಇಲ್ಯಾಸ್, ಪಿ.ಎಫ್.ಐ ಬಜ್ಪೆ ಏರಿಯಾ ಅಧ್ಯಕ್ಷ ಆಸೀಪ್, ಸುಂಕದಕಟ್ಟೆ ಕಾರ್ಯದರ್ಶಿ ರಹ್ಮತುಲ್ಲಾ ಉಪಸ್ಥಿತರಿದ್ದರು.

Read More

UN NETWORKS ಉಳ್ಳಾಲ: ತಂತ್ರಜ್ಞಾನ ಯುಗದ ವಿದ್ಯಾರ್ಥಿಗಳ ಬದಲಾವಣೆಗೆ ತಕ್ಕಂತೆ ಕಾಲೇಜಿನ ಉಪನ್ಯಾಸಕರು ಮತ್ತು ಹೆತ್ತವರು ತಮ್ಮ ಜ್ಞಾನ ಕೌಶಲ್ಯವನ್ನು ಬದಲಾಯಿಸಿಕೊಂಡರೆ ಮಾತ್ರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಸಾಧ್ಯ ಎಂದು ಜ್ಞಾನ ಆಯೋಗದ ಮಾಜಿ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅಭಿಪ್ರಾಯಿಸಿದ್ದಾರೆ. ಅವರು ದೇರಳಕಟ್ಟೆಯ ಯೇನೆಪೊಯ ವಿವಿ ಕ್ಯಾಂಪಸ್‍ನ ಯೆಂಡ್ಯೂರೆನ್ಸ್ ಸಭಾಂಗಣದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇಂದಿನ ಕಾಲದ ಮಕ್ಕಳು ಹಿಂದಿನ ಕಾಲದ ವ್ಯವಸ್ಥೆಯಲ್ಲಿ ಇಲ್ಲ. ತಂತ್ರಜ್ಞಾನಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳ ಕೌಶಲ್ಯ, ಕಾರ್ಯವೈಖರಿಯಲ್ಲಿ ಬದಲಾಗಿದ್ದಾರೆ. ಅವರ ಬದಲಾವಣೆ ಮತ್ತು ಅವರಿಗೆ ಬೇಕಾದ ಜ್ಞಾನವನ್ನು ನೀಡುವ ಕಾರ್ಯಕ್ಕೆ ಉಪನ್ಯಾಸಕರು ತಮ್ಮನ್ನು ಸಜ್ಜುಗೊಳಿಸಬೇಕಾಗಿದೆ. ಈ ರೀತಿಯಲ್ಲಿ ಕಾರ್ಯವಾದಾಗ ಯುವ ಜನಾಂಗ ಹೊಸ ವಿಚಾರಗಳ ಬಗ್ಗೆ ಅಭಿರುಚಿಯೊಂದಿಗೆ ನಾಯಕತ್ವವನ್ನು ವಹಿಸಕೊಳ್ಳಲು ಸಾಧ್ಯವಾಗುತ್ತದೆ ಎಂದರು. 80 ದಶಕದ ಡಿಜಿಟಲ್ ಕ್ರಾಂತಿಗೆ ಅಡಿಪಾಯ : ಇಂದು ಡಿಜಿಟಲ್ ಇಂಡಿಯಾ ವಿಚಾರದಲ್ಲಿ ಚರ್ಚೆಯಾಗುತ್ತಿದೆ. ಆದರೆ ಈ ಡಿಜಿಟಲ್ ಕ್ರಾಂತಿ 80ರ ದಶಕದಲ್ಲೇ ರಾಜೀವ್ ಗಾಂಧಿ ಕಾಲದಲ್ಲಿ ಅಡಿಪಾಯ ಹಾಕಲಾಗಿತ್ತು.…

Read More

UN NETWORKS ಉಳ್ಳಾಲ: ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾ ಶರೀಫ್ ಮತ್ತು ಕೇಂದ್ರ ಜುಮಾ ಮಸೀದಿ ಉಳ್ಳಾಲ ಇದರ ಅಂಗ ಸಂಸ್ಥೆ ಸಯ್ಯಿದ್ ಮದನಿ ಅರಬಿಕ್ ಎಜ್ಯುಕೇಶನಲ್ ಟ್ರಸ್ಟ್ ಇದರ ಅಧೀನದಲ್ಲಿರುವ ಮದ್ರಸಾ ಪಬ್ಲಿಕ್ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಒಂಬತ್ತು ವಿದ್ಯಾರ್ಥಿಗಳು ಸಾಧನೆಗೈದಿದ್ದು, ಮೇಲಂಗಡಿ ಮದರಸ ಪಾರಮ್ಯ ಮೆರೆದಿದೆ. 5ನೇ ತರಗತಿಯಲ್ಲಿ ಹಳೆಕೋಟೆ ಮರ್ಖಲ್ ಇಸ್ಲಾಂ ಮದ್ರಸದ ಅಖೀಫ ಬಾನು ಪ್ರಥಮ, ಮೇಲಂಗಡಿ ಖಂಝುಲ್ ಉಲೂಂ ಮದ್ರಸದ ಮರಿಯಮ್ ತಮನ್ನ ದ್ವಿತೀಯ ಹಾಗೂ ಇದೇ ಮದರಸದ ನಶ್ವಾ ತೃತೀಯ ಶ್ರೇಣಿ ಪಡೆದಿದ್ದಾರೆ. 7ನೇ ತರಗತಿಯಲ್ಲಿ ಮಿಲ್ಲತ್ ನಗರ ನೂರುಲ್ ಹುದಾ ಮದ್ರಸದ ರಿಲಾ ಫಾತಿಮ ಪ್ರಥಮ, ಇದೇ ಮದರಸದ ಸುಹಾನ ಜಸೀಲ ದ್ವಿತೀಯ ಹಾಗೂ ಕೋಟೆಪುರ ಹಯಾತುಲ್ ಇಸ್ಲಾಂ ಮದ್ರಸದ ಹಲೀಮ ಸಾನಿಯ ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. 10ನೇ ತರಗತಿಯಲ್ಲಿ ಮೇಲಂಗಡಿ ಖಂಝುಲ್ ಉಲೂಂ ಮದ್ರಸ ಮಹಮ್ಮದ್ ನಿಶಾಂ ಪ್ರಥಮ, ಮೇಲಂಗಡಿ ಖಂಝುಲ್ ಉಲೂಂ ಮದ್ರಸದ ಮುಹಮದ್ ಯಾಸೀನ್…

Read More

UN NETWORKS ಉಳ್ಳಾಲ: ಉಳ್ಳಾಲ ದೇರಳಕಟ್ಟೆ ತಾಜುಲ್ ಉಲಮಾ ಚಾರಿಟೇಬಲ್ ಟ್ರಸ್ಟ್(ರಿ) ಇದರ ವತಿಯಿಂದ ದೇರಳಕಟ್ಟೆಯ ಚಲ್ಲಿಯಡ್ಕದಲ್ಲಿ ನಿರ್ಮಿಸಿದ ತಾಜುಲ್ ಉಲಮಾ ಮಸ್ಜಿದ್ ಕಟ್ಟಡವನ್ನು ದ.ಕ ಜಿಲ್ಲಾ ಸಂಯುಕ್ತ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್-ಬುಖಾರಿ ಕೊರತ್ ಶನಿವಾರ ಉದ್ಘಾಟಿಸಿದರು. ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಇಬ್ರಾಹಿಂ ಮುಸ್ಲಿಯಾರ್ ಬೇಕಲ್, ಮಂಜನಾಡಿ ಅಲ್-ಮದೀನಾ ವಿದ್ಯಾಸಂಸ್ಥೆಯ ಶಿಲ್ಫಿ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್, ಮಾಣಿ ದಾರುಲ್ ಇರ್ಷಾದ್ ವಿದ್ಯಾಸಂಸ್ಥೆಯ ಅಧ್ಯಕ್ಷ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್, ಅಲ್-ಅನ್ಸಾರ್ ವಾರ ಪತ್ರಿಕೆಯ ನಿರ್ದೇಶಕ ಹಾಜಿ ಇಬ್ರಾಹೀಂ ಬಾವ ಮಂಗಳೂರು, ಎಸ್‍ವೈಎಸ್ ಮುಖಂಡ ಅಲವಿ ತಂಙಳ್ ಕಿನ್ಯ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್‍ನ ಕುಬೈಬ್ ತಂಙಳ್, ಸುನ್ನೀ ವಾಣಿ ವಾರ ಪತ್ರಿಕೆಯ ಸಂಪಾದಕ ಮುಹೀಯದ್ದೀನ್ ಸಖಾಫಿ ತೋಕೆ, ಮೊೈಲಾಂಜಿ ಮಾಸಿಕದ ಸಂಪಾದಕ ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ, ಬದ್ಯಾರ್ ಜುಮಾ ಮಸೀದಿ ಖತೀಬ್ ಇಸ್ಮಾಯಿಲ್ ಸಅದಿ ಉರುಮಣೆ, ಭಾರತಿಯ ಕೃಷಿಕ ಸಮಾಜದ ಅಧ್ಯಕ್ಷ ಎ.ಎ…

Read More

UN NETWORKS ಉಳ್ಳಾಲ: ಕಾಂಗ್ರೆಸ್ ಪಕ್ಷದಲ್ಲಿಯೇ ಹಲವು ವರ್ಷಗಳ ಕಾಲ ಇದ್ದು, ಉಳ್ಳಾಲ ಕ್ಷೇತ್ರದಲ್ಲಿ ಪಕ್ಷದ ಜವಾಬ್ದಾರಿಗಳನ್ನು ಹೊತ್ತು ಕಳೆದ ಐದು ವರ್ಷಗಳಿಂದ ಪಕ್ಷದಿಂದ ದೂರವಾಗಿದ್ದ ಉಳ್ಳಾಲನಗರಸಭೆಯ ಪಕ್ಷೇತರ ಅಭ್ಯರ್ಥಿ ಫಾರುಕ್ ಯು.ಹೆಚ್ ಸೇರಿದಂತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದಿನಕರ್ ಉಳ್ಳಾಲ ಸಹಿತ ಹಲವರ ತಂಡ ಶುಕ್ರವಾರ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿನ ಜೆಡಿಎಸ್ ಚುನಾವಣಾ ಕಾರ್ಯಾಲಯದಲ್ಲಿ ಸೇರ್ಪಡೆಗೊಂಡರು. ಪಕ್ಷಕ್ಕೆ ಸೇರ್ಪಡೆಗೊಂಡು ಬಳಿಕ ಮಾತನಾಡಿದ ನಗರಸಭೆ ಸದಸ್ಯ ಫಾರುಕ್ ಯು.ಹೆ ಮಂಗಳೂರು (ಉಳ್ಳಾಲ) ಕ್ಷೇತ್ರದ ಕಾಂಗ್ರೆಸ್ ನಲ್ಲಿ ಶಿಕ್ಷಿತರನ್ನು ಕಡೆಗಣಿಸುವ ಪರಿಪಾಠ ಶಾಸಕ ಖಾದರ್ ಅವರಿಂದ ಆಗಿದೆ. ತಮಗೆ ಬೇಕಾದವರನ್ನು ಗುಂಪು ಕೂಡಿಸಿಕೊಂಡು ಅವರ ಕೈಯಲ್ಲೇ ಜವಾಬ್ದಾರಿಯನ್ನು ನೀಡುವ ಕಾರ್ಯ ಆಗಿದೆ. ಅಹಂಕಾರದ ಮಾತುಗಳಿಂದ ನೊಂದು ಉಳ್ಳಾಲದಲ್ಲಿ ಜೆಡಿಎಸ್ ನ ಅಶ್ರಫ್ ಸ್ಪರ್ಧಿಸುತ್ತಿದ್ದಾರೆ. ಅಹಂಕಾರಿಗಳನ್ನು ಅಲ್ಲಾಹು ಎಂದಿಗೂ ಮೆಚ್ಚುವುದಿಲ್ಲ. ಬಿಜೆಪಿಯನ್ನು ಪರೋಕ್ಷವಾಗಿ ಗೆಲ್ಲಿಸುವ ತಂತ್ರ ಅನ್ನುವ ಅಪಪ್ರಚಾರದಲ್ಲೂ ಕಾಂಗ್ರೆಸ್ಸಿಗರು ತೊಡಗಿದ್ದಾರೆ. ಆದರೆ ಎಂತಹ ಪ್ರಚಾರ ನಡೆಸಿದರೂ ಖಾದರ್ ಸೋಲು ಖಚಿತ ಎಂದರು. ಜಾತ್ಯಾತೀತ ಜನತಾದಳದ…

Read More