UN NETWORKS
ಮುಡಿಪು: ದೇಶದ ಸಂವಿಧಾನದ ಕುರಿತು ತಿಳುವಳಿಕೆ ಮತ್ತು ಅದರ ಸಮರ್ಪಕವಾದ ಆಚರಣೆ ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಮಂಗಳೂರಿನ ಎ.ಸಿ.ಬಿ ಯ ಡಿ.ವೈ.ಎಸ್ .ಪಿ ಸುಧೀರ್ ಹೆಗಡೆ ಅಭಿಪ್ರಾಯಪಟ್ಟರು .
ಅವರು ಮುಡಿಪಿನ ಸೂರಜ್ ಶಿಕ್ಷಣ ಸಂಸ್ಥೆಯಲ್ಲಿ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ, ದೇಶದ ಪ್ರತಿಯೊಂದು ವಿಭಾಗದಲ್ಲೂ ಪ್ರತಿಯೊಂದು ಹಂತದಲ್ಲೂ ಸಂವಿಧಾನವಿದೆ ಆದರೆ ಅದಕ್ಕೆ ನಾವು ಎಷ್ಟು ಗೌರವ ಕೊಡಬೇಕೊ ಅಷ್ಟನ್ನು ನೀಡುತ್ತಿಲ್ಲ ,ಹೀಗಾಗದೇ ದೇಶದ ಕುರಿತು ಪ್ರೀತಿ, ಭಕ್ತಿ, ಬೆಳೆಯಬೇಕು ಎಂದರು.ಅಲ್ಲದೇ ಗಣರಾಜ್ಯೋತ್ಸವ ಆಚರಣೆಯ ಇತಿಹಾಸವನ್ನು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಡಾ.ಮಂಜುನಾಥ ರೇವಣ್ಕರ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ದೇಶದ ಇತಿಹಾಸದ ಕುರಿತು ಗೌರವ ಹೆಚ್ಚಾಗಬೇಕು ಎಂದರು.ಈ ಸಂದರ್ಭದಲ್ಲಿ ಸಂಸ್ಥೆಯ ಸಂಯೋಜಕರಾದ ಲಕ್ಷ್ಮೀಶ್ ಹೆಗಡೆ ಸೋಂದಾ, ಪ್ರಾಚಾರ್ಯರಾದ ಪ್ರಸನ್ನ ಕುಮಾರ್,ಮುಖ್ಯ ಶಿಕ್ಷಕಿ ವಿಮಲಾ ಶೆಟ್ಟಿ ಉಪಸ್ಥಿತರಿದ್ದರು. ಶಿಕ್ಷಕಿ ರಶ್ಮಿ ಸ್ವಾಗತಿಸಿದರು,ಉಪನ್ಯಾಸಕಿ ಸೀಮಾ ವಂದಿಸಿದರು,ದಿವ್ಯಶ್ರೀ ನಿರ್ವಹಿಸಿದರು.ನಂತರ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.


