Author: UllalaVani

Kannada News From Coastal Karnataka

UN NETWORKS ಉಳ್ಳಾಲ: ಸೋಮೇಶ್ವರದ ಉಚ್ಚಿಲ ಸಮುದ್ರ ತೀರದಲ್ಲಿ ಅಲೆಗಳ ರಭಸ ಶನಿವಾರ ತಡರಾತ್ರಿಯಿಂದ ಹೆಚ್ಚಿದ್ದು, 50 ರಷ್ಟು ಮನೆಗಳಿಗೆ ನೀರು ಅಪ್ಪಳಿಸುತ್ತಿದ್ದರೆ ಮೂರು ಕುಟುಂಬವನ್ನು ಭಾನುವಾರ ಸಂಜೆಯ ವೇಳೆ ಸ್ಥಳಾಂತರಿಸಲಾಗಿದೆ. ಶನಿವಾರ ತಡರಾತ್ರಿ ವೇಳೆ ಸಮುದ್ರದಲ್ಲಿ ಬೀಸಿದ ಗಾಳಿಯಿಂದ ಕಡಲಬ್ಬರ ಜೋರಾಗಿದೆ. ಸೋಮೇಶ್ವರದ ಉಚ್ಚಿಲದ ತೀರಾ ಅಪಾಯದಲ್ಲಿದ್ದ ಬೀಚ್ ರೋಡ್ ನಿವಾಸಿ ಗಳಿಗೆ ಮನೋಹರ್ ಉಚ್ಚಿಲ್, ರಾಮಚಂದ್ರ, ಸುಧೀರ್ ಎಂಬವರ ಕುಟುಂಬಗಳನ್ನು ಸಮೀಪದ ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಉಚ್ಚಿಲ ಬೀಚ್ ರೋಡ್ ಬಳಿಯಿರುವ ಸುಮಾರು 40 ಕ್ಕೂ ಅಧಿಕ ಮನೆಗಳಿಗೆ ಸಮುದ್ರದ ಅಲೆಗಳು ಭಾನುವಾರ ಸಂಜೆಯವರೆಗೂ ಅಪ್ಪಳಿಸುತ್ತಲೇ ಇವೆ. ಹಲವೆಡೆ ಮನೆ ಒಳಗಡೆ ನೀರು ನುಗ್ಗಿದ್ದು, ಇನ್ನು ಹಲವು ಮನೆಗಳ ಅಂಗಳ ಸಂಪೂರ್ಣ ಸಮುದ್ರದ ನೀರಿನಿಂದ ಜಲಾವೃತವಾಗಿದೆ. ಅಗ್ನಿ ಶಾಮಕದಳ ಭೇಟಿ : ಭಾನುವಾರ ಮಧ್ಯಾಹ್ನ ವೇಳೆ ಸಮುದ್ರದ ಅಲೆಗಳು ಜೋರಾಗಿ ಹೊಡೆಯಲು ಆರಂಭವಾದ ಹಿನ್ನೆಲೆಯಲ್ಲಿ ಸೋಮೇಶ್ವರ ಗ್ರಾಮ ಪಂಚಾಯತ್ ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಅಗ್ನಿ ಶಾಮಕ ದಳ ಭೇಟಿ…

Read More

UN NETWORKS ದೇರಳಕಟ್ಟೆ: ಯೆನೆಪೋಯ ವಿಶ್ವವಿದ್ಯಾನಿಲಯದ ಪರಿಸರ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ವಿಶ್ವ ಭೂ ದಿನಾಚರಣೆ ಕ್ಯಾಂಪಸ್‍ನಲ್ಲಿ ನಡೆಯಿತು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಎರೆಗೊಬ್ಬರ ತಯಾರಿಕೆಯ ತರಬೇತಿಯನ್ನು ನೀಡುವುದರ ಮೂಲಕ ಭೂಮಿಯನ್ನು ಮಲಿನ ಗೊಳಿಸುತ್ತಿರುವ ಘನ ತ್ಯಾಜ್ಯ ನಿರ್ವಹಣೆಯನ್ನು ಸೂಕ್ತವಾಗಿ ನಿರ್ವಹಿಸುವ ಬಗ್ಗೆ ಮಾಹಿತಿಯನ್ನು ಪರಿಸರ ಅಧ್ಯಯನ ಕೇಂದ್ರದ ಸಹಾಯಕ ನಿರ್ದೇಶಕಿ ಡಾ| ಭಾಗ್ಯ ಬಿ. ಶರ್ಮ ನೀಡಿ ದಿನದ ಮಹತ್ವವನ್ನು ತಿಳಿಸಿ ಪ್ರಾಕೃತಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಬಗ್ಗೆ ವಿದ್ಯಾರ್ಥಿಗಳಿಂದ ಪ್ರತಿಜ್ಞೆಯನ್ನು ಮಾಡಿಸಿದರು. ಫಾರ್ಮಸಿ ಕಾಲೇಜಿನ 55 ವಿದ್ಯಾರ್ಥಿಗಳು ಎರೆಗೊಬ್ಬರ ತಯಾರಿಕೆಯ ತರಬೇತಿಯಲ್ಲಿ ಪಾಲ್ಗೊಂಡಿದ್ದರು. ಯೆನೆಪೋಯ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಪ್ರೊ| ಮೊಹಮ್ಮದ್ ಗುಲ್ಜಾರ್ ಅಹಮದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

Read More

UN NETWORKS ದೇರಳಕಟ್ಟೆ : ರಾಮಕೃಷ್ಣ ಮಿಷನ್ ಸಹಯೋಗದೊಂದಿಗೆ ನಿಟ್ಟೆ ಇನ್‍ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ಇದರ ಆಶ್ರಯದಲ್ಲಿ “ಸ್ವಚ್ಛತಾ ಜಾಗೃತಿ ಕಾರ್ಯಕ್ರಮ” ಎನ್‍ಐಪಿಟಿ ಕ್ಯಾಂಪಸ್‍ನಲ್ಲಿ ನಡೆಯಿತು. ನಿಟ್ಟೆ ವಿಶ್ವವಿದ್ಯಾನಿಲಯದ ಕುಲಸಚಿವೆ ಅಲ್ಕಾ ಕುಲಕರ್ಣಿ ಮಾತನಾಡಿ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯದ ಮೂಲಕ ಸಾಮಾಜಿಕವಾಗಿ ತೊಡಗಿಸಿಕೊಳ್ಳುವ ಕಾರ್ಯ ಶ್ಲಾಘನೀಯವಾಗಿದ್ದು, ಕಾಲೇಜಿನ ಮುಖ್ಯಸ್ಥರ ಮತ್ತು ರಾಮಕೃಷ್ಣ ಮಿಷನ್ ಸಹಯೋಗದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು. ಕಾರ್ಯಕ್ರಮದಲ್ಲಿ ಸ್ವಚ್ಛ ಭಾರತ್ ಕಾರ್ಯಕ್ರಮದಡಿ ಪ್ರಸಿದ್ಧಿಯನ್ನು ಪಡೆದಿರುವ ಪ್ರದಾನಿಯವರ ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ಪ್ರಸಿದ್ಧಿಯನ್ನು ಪಡೆದಿರುವ ಪುಣೆಯ ಪಿಂಪ್ರಿಯ ನಿವೃತ್ತ ಶಿಕ್ಷಕ ಚಂದ್ರಕಾಂತ್ ಕುಲಕರ್ಣಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾಲೇಜು ಕ್ಯಾಂಪಸ್ ಸೇರಿದಂತೆ ವಸತಿ ನಿಲಯಗಳಿಗೆ ತೆರಳಿ ಸ್ವಚ್ಛತಾ ಕಾರ್ಯದ ಕೈಪಿಡಿಯ ಮೂಲಕ ಮಾಹಿತಿ ನೀಡುವ ಕಾರ್ಯವನ್ನು ನಡೆಸಿದರು. ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಡಾ| ದಿನೇಶ್ ಕುಮಾರ್ ಕೆ.ಯು. ಸ್ವಾಗತಿಸಿದರು ಸಹ ಪ್ರಾಧ್ಯಾಪಕ ರಾಕೇಶ್ ಕೃಷ್ಣ ಕಾರ್ಯಕ್ರಮ ಸಂಯೋಜಿಸಿದ್ದರು. ಸಹ…

Read More

UN NETWORKS ಉಳ್ಳಾಲ : ಮುಗ್ದ ಬಾಲಕಿ ಮೇಲೆ ನಡೆದಂತಹ ಕ್ರೂರ ಕೃತ್ಯ ಮುಂದಿನ ದಿನಗಳಲ್ಲಿ ಯಾವುದೇ ಹೆಣ್ಮಕ್ಕಳಿಗೂ ನಡೆಯದಿರಲಿ ಎನ್ನುವ ಪ್ರಾರ್ಥನೆ ಪ್ರತಿಯೊಬ್ಬರೂ ಮಾಡಬೇಕಾಗಿದೆ ಎಂದು ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹೇಳಿದರು. ದರ್ಗಾ ವತಿಯಿಂದ ಶುಕ್ರವಾರ ದರ್ಗಾ ವಠಾರದಲ್ಲಿ ಜರಗಿದ ಉತ್ತರಭಾರತದಲ್ಲಿ ಅಪ್ರಾಪ್ತ ಬಾಲಕಿ ಮೇಲಾದ ಅತ್ಯಾಚಾರ, ಕೊಲೆ ಕೃತ್ಯ ಖಂಡಿಸಿ, ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿ ನಡೆದ ಸಾಮೂಹಿಕ ಪ್ರಾರ್ಥನೆ ಹಾಗೂ ಹಕ್ಕೊತ್ತಾಯ ಸಭೆಯಲ್ಲಿ ಮಾತನಾಡಿದರು. ಕೃತ್ಯ ಅಂತಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಗೆ ಕಪ್ಪು ಚುಕ್ಕೆಯಾಗಿದೆ. ಆದರೂ ಪ್ರಧಾನಿ ಈ ವಿಚಾರದಲ್ಲಿ ಮೌನವಾಗಿರುವುದು ಸರಿಯಲ್ಲ. ಹೇಯ ಕೃತ್ಯ ಎಷ್ಟೊಂದು ಪರಿಣಾಮ ಬೀರಿದೆ ಎಂದರೆ ಮಕ್ಕಳೂ ಬೀದಿಗಿಳಿಯುತ್ತಿರುವುದನ್ನು ಗಮನಿಸಿದಾಗ ಅರಿವಿಗೆ ಬರುತ್ತದೆ. ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ದರ್ಗಾ ವತಿಯಿಂದ ಜಿಲ್ಲಾಧಿಕಾರಿ ಮುಖಾಂತರ ಪ್ರಧಾನಿಯವರಿಗೆ ಹಕ್ಕೊತ್ತಾಯ ಸಲ್ಲಿಸಲಾಗುವುದು ಎಂದರು. ದರ್ಗಾ ಉಪಾಧ್ಯಕ್ಷ ಯು.ಕೆ.ಇಸ್ಮಾಯಿಲ್ ಮೋನು, ಬಾವಾ ಮುಹಮ್ಮದ್, ಕೋಶಾಧಿಕಾರಿ ಯು.ಕೆ.ಇಲ್ಯಾಸ್, ಲೆಕ್ಕ…

Read More

UN NETWORKS ಮುಡಿಪು: ಎಸ್ಸೆಸ್ಸೆಫ್ ಮಧ್ಯನಡ್ಕ ಶಾಖೆಯ ವತಿಯಿಂದ ಮದ್ಯನಡ್ಕ ಮಸೀದಿಯಿಂದ ಮಿತ್ತಕೋಡಿ ತನಕ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಿತು. ಎಸ್ಸೆಸ್ಸೆಫ್ ಮಧ್ಯನಡ್ಕ ಶಾಖೆಯ ಗೌರವಾಧ್ಯಕ್ಷ ಕೆ ಬಿ ಮಧ್ಯನಡ್ಕ ಉಸ್ತಾದ್, ಮಸೀದಿ ಅಧ್ಯಕ್ಷರಾದ ಎಂ ಅಲಿ ಕುಂಞಿ ಹಾಜಿ, ಶಾಖಾ ಉಪಾಧ್ಯಕ್ಷ ಇಸ್ಹಾಕ್ ಎಂ ,ಎಸ್ ವೈ ಎಸ್ ಅದ್ಯಕ್ಷರಾದ ಅಬೂಬಕ್ಕರ್ ಎಂ ಉಪಸ್ಥಿತರಿದ್ದರು. ಎಸ್ ವೈ ಎಸ್ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಮಾತನಾಡಿ ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆ ಜಾರಿಯಾಗುವವರೆಗೆ ನಮ್ಮ ಪ್ರತಿಭಟನೆ ಮುಂದುವರಿಯಲಿದೆಯೆಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದರು. ಎಸ್ ವೈ ಎಸ್ ಜೊತೆಕಾರ್ಯದರ್ಶಿ ಮಜೀದ್ ಕೆ ಎಂ,ಉಪಾದ್ಯಕ್ಷ ಹಸೈನಾರ್ ಸೀಗೆ ಮುಂತಾದವರು ಉಪಸ್ಥಿತರಿದ್ದರು.

Read More

UN NETWORKS ಕೊಣಾಜೆ: ದೇಶದ್ರೋಹಿ ಶಕ್ತಿಗಳಿಗೆ, ಉಗ್ರಗಾಮಿ ಚಟುವಟಿಕೆ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳಿಗೆ ಕರಾವಳಿ ತೀರಗಳು ಅತ್ಯಂತ ಸುಲಭದ ರಹದಾರಿಯಾಗಿರುವುದರಿಂದ ಕರಾವಳಿ ಭದ್ರತೆಯ ವಿಷಯವು ಅತ್ಯಂತ ಪ್ರಮುಖ ರಕ್ಷಣಾತ್ಮಕ ಜವಾಬ್ಧಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ಕೆ.ಎಸ್.ಆರ್.ಪಿ.ಯ ಎಡಿಜಿಬಿ ಭಾಸ್ಕರ ರಾವ್ ಅವರು ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗ ಮತ್ತು ಬೆಂಗಳೂರಿನ ಐ.ಸಿ.ಎಸ್.ಬಿ. ಇದರ ಆಶ್ರಯದಲ್ಲಿ ವಿವಿಯ ಒಳಾಂಗಣ ಸಭಾಂಗಣದಲ್ಲಿ `ಕರಾವಳಿ ಭದ್ರತೆ: ಸವಾಲುಗಳು ಮತ್ತು ಕಳವಳಗಳು’ ಎಂಬ ವಿಷಯದ ಕುರಿತು ರಾಷ್ಟ್ರೀಯ ಸಮ್ಮೇಳನದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ಕರ್ನಾಟಕ ರಾಜ್ಯವು ಸುಮಾರು 320 ಕೀಮೀ ಉದ್ದದ ಕರಾವಳಿ ತೀರವನ್ನು ಹೊಂದಿದ್ದು, ಕರಾವಳಿಯ ಭದ್ರತೆಯ ವಿಷಯವುಕೂಡಾ ಒಂದು ಗಂಭೀರವಾದ ವಿಚಾರವಾಗಿದೆ. ದೇಶವು ಅತೀ ಹೆಚ್ಚು ಕರಾವಳಿ ಪ್ರದೇಶಗಳನ್ನು ಹೊಂದಿರುವ ಕಾರಣ ಹಿಂದಿನಿಂದ ಇದರ ಭದ್ರತೆಯ ವಿಷಯದಲ್ಲಿ ಕ್ರಮಗಳನ್ನು ಅನುಸರಿಸಿಕೊಂಡು ಬಂದಿದೆ. ಹಾಗೆಯೇ ಇಂದಿನ ಆಧುನಿಕತೆಯ ಕಾಲಘಟ್ಟದಲ್ಲಿ ಕರಾವಳಿಯ ರಕ್ಷಣೆಯೂ ಒಂದು ಸವಾಲಾಗಿದ್ದು ರಕ್ಷಣಾತ್ಮಕ ವ್ಯವಸ್ಥೆಯಲ್ಲಿ ನೂತನ ಆವಿಷ್ಟಾರಗಳೊಂದಿಗೆ…

Read More

UN NETWORKS ಉಳ್ಳಾಲ: ಜಮ್ಮುವಿನ ದೇವಸ್ಥಾನದಲ್ಲಿ ನಡೆದಿರುವ ಅಪ್ರಾಪ್ತೆ ಬಾಲಕಿ ಅತ್ಯಾಚಾರ ದೇವರನ್ನೇ ಅತ್ಯಾಚಾರ ಮಾಡಿದಂತೆ ಎಂದು ಚಿಂತಕ ಹಾಗೂ ಪ್ರಾಧ್ಯಾಪಕ ಪ್ರೊ.ಪಟ್ಟಾಭಿರಾಮ ಸೋಮಯಾಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರು ಅಡ್ಕರೆಪಡ್ಪು ಇಲ್ಲಿನ ಅಲ್ ಇಹ್ಸಾನ್ ಯೂತ್ ಅಸೋಸಿಯೇಷನ್ ವತಿಯಿಂದ ದೇರಳಕಟ್ಟೆ ಸಿಟಿ ಗ್ರೌಂಡಿನಲ್ಲಿ ಶುಕ್ರವಾರ ಜಮ್ಮುವಿನ ಅಪ್ರಾಪ್ತೆ ಬಾಲಕಿ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ಜರಗಿದ ಬೃಹತ್ ಹಕ್ಕೊತ್ತಾಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಪೊಲೀಸ್ ಇಂಟಲಿಜೆನ್ಸ್ ಸರಿಯಾಗಿ ಶೂಟಿಂಗ್ ಮಾಡಿ, ಮಾಧ್ಯಮದವರು ಸರಿಯಾಗೇ ಹೇಳಿಕೆಗಳನ್ನು ದಾಖಲಿಸಿ, ದೇಶದ ಎಲ್ಲಿ ಬೇಕಾದರೂ ಇಂತಹ ಹೇಳಿಕೆಯನ್ನೇ ನೀಡುತ್ತೇನೆ ಎಂದು ಖಡಾಖಂಡಿತವಾಗಿ ಹೇಳುತ್ತೇನೆ ಎಂದರು. ಬಸವಣ್ಣನವರ ವಚನವನ್ನು ತಪ್ಪಾಗಿ ನುಡಿದಾಗ ಹಿಯ್ಯಾಳಿಸಿದವರಿಗೆ ಅವರ ವಚನಗಳನ್ನು ನೈಜವಾಗಿ ಅಧ್ಯಯನ ನಡೆಸುತ್ತಿದ್ದಲ್ಲಿ ದೇಶದಾದ್ಯಂತ ಇಂತಹ ಭಯಭೀತ ವಾತಾವರಣ ಸೃಷ್ಟಿಯಾಗುತ್ತಿರಲಿಲ್ಲ. ಜಮ್ಮು ಕಾಶ್ಮೀರದ ದೇವಸ್ಥಾನವೊಂದರಲ್ಲಿ ಅತ್ಯಾಚಾರಕ್ಕೀಡಾಗಿ ಹತ್ಯೆಗೀಡಾದ ಮುಗ್ಧ ಬಾಲಕಿಯ ಕುಟುಂಬವನ್ನು ಅಲೆಮಾರಿ ಅನ್ನುವವರಿಗೆ, ತಮ್ಮ ಪ್ರಧಾನಿಯೂ ವಿದೇಶಗಳಲ್ಲೇ ಇರುವ ಅಲೆಮಾರಿ ಅನ್ನುವುದು ಗಮನದಲ್ಲಿರಬೇಕು. ಬಾಲಕಿ ಅತ್ಯಾಚಾರ ಪ್ರಕರಣ…

Read More

UN NETWORKS ಬಂಟ್ವಾಳ: ಜಮ್ಮು ಕಾಶ್ಮೀರದಲ್ಲಿ ಹಾಗೂ ಉತ್ತರ ಪ್ರದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನ ಖಂಡಿಸಿ ಬಂಟ್ವಾಳ ತಾಲೂಕಿನ ಗಡಿಯಾರದ ಇತಿಕಾಫ್ ಮೀಲಾದ್ ಕಮಿಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಗಡಿಯಾರ ಜಂಕ್ಷನ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಮಂದಿ ಭಿತ್ತಿಚಿತ್ರಗಳನ್ನ ಹಿಡಿದು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪತ್ರಕರ್ತ ಶಂಶೀರ್ ಬುಡೋಳಿ, ಈ ಎರಡು ಪ್ರಕರಣಗಳನ್ನ ವಿರೋಧಿಸಿ ಇವತ್ತು ದೇಶಾದ್ಯಂತ ಹೋರಾಟ ನಡೆಯುತ್ತಿದೆ. ಜಾತಿ, ಧರ್ಮ ಮೀರಿ ಇವತ್ತು ನಡೆಯುತ್ತಿರುವ ಹೋರಾಟದ ಉದ್ದೇಶ ನ್ಯಾಯವೇ ಹೊರತು ಬಲಪ್ರದರ್ಶನವಲ್ಲ. ದೇಶದ ಜನರ ಒಗ್ಗಟ್ಟಿನ ಹೋರಾಟಕ್ಕೆ ನ್ಯಾಯ ಸಿಗಬೇಕು. ಕಾನೂನು ಬಲಗೊಳ್ಳಬೇಕು ಅಂದರು. ಇದೇ ವೇಳೆ ಝೈನುಲ್ ಅಕ್ಬರ್, ಹಮೀದ್ ದಾರಿಮಿ ಸಂಪ್ಯ, ರಶೀದ್ ಸಖಾಫಿ ಗಡಿಯಾರ ಮಾತನಾಡಿದರು. ಪ್ರತಿಭಟನೆಯಲ್ಲಿ ಅಬ್ದುಲ್ ಮಜೀದ್ ದಾರಿಮಿ, ಸ್ವಾದೀಕ್ ಮುಹಿನಿ, ಸಿದ್ದೀಕ್ ಫೈಝಿ ಉಪಸ್ಥಿತರಿದ್ದರು. ಜೊತೆಗೆ ಇತಿಕಾಫ್ ಮೀಲಾದ್ ಕಮಿಟಿಯ ಪದಾಧಿಕಾರಿಗಳಾದ ಅಬ್ದುಲ್ ರಶೀದ್ ಗಡಿಯಾರ, ಅಬ್ದುಲ್ ಅಝೀಝ್ ಗಡಿಯಾರ, ಹೈದರ್…

Read More

UN NETWORKS ತೊಕ್ಕೊಟ್ಟು: ಪೋಕ್ಸೋ ಕಾಯಿದೆ ಜಾರಿಯಲ್ಲಿದ್ದರೂ ದೇಶದ ಕೆಲವು ರಾಜ್ಯಗಳಲ್ಲಿ ಅತ್ಯಾಚಾರ ಪ್ರಕರಣ ಕಡಿಮೆ ಆಗಿಲ್ಲ. ಹಾಗಾಗಿ ಜನರ ಬೇಡಿಕೆಯಂತೆ ಅತ್ಯಾಚಾರಿಗಳಿಗೆ ಮರಣದಂಡನೆಯಂತಹ ಕಠಿಣ ಶಿಕ್ಷೆ ಕೊಡುವುದೊಂದೇ ಉಳಿದ ದಾರಿಯಾಗಿದ್ದು ಅಂತಹ ಪ್ರಕರಣದಲ್ಲಿ ಕೇಸ್ ದಾಖಲಾದರೆ ಜಾಮೀನು ಕೊಡಲು ಅವಕಾಶವೇ ಇರದಂತಹ ಕಾನೂನು ರಚನೆ ಆಗಬೇಕಿದೆ ಎಂದು ಸಚಿವ ಯು.ಟಿ. ಖಾದರ್ ಹೇಳಿದರು. ಜಮ್ಮು ಕಾಶ್ಮೀರ, ಉತ್ತರ ಪ್ರದೇಶ , ಗುಜರಾತ್‍ನಲ್ಲಿ ಬಾಲೆಯರ ಮೇಲೆ ನಡೆದ ಅತ್ಯಾಚಾರ, ಹತ್ಯೆ ಖಂಡಿಸಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ತೊಕ್ಕೊಟ್ಟು ಜಂಕ್ಷನ್‍ನಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಬಾಲಕಿಯರ ಅತ್ಯಾಚಾರ ಕೃತ್ಯ ನಡೆಸಿದವರಿಗೆ ಕಠಿಣ ಶಿಕ್ಷೆ ಆಗಬೇಕು. ಕಾಂಗ್ರೆಸ್ ರಾಷ್ಟ್ರವ್ಯಾಪಿ ಕೇಂದ್ರದ ಸರಕಾರಕ್ಕೆ ಪ್ರತಿಭಟನೆ ನಡೆಸುವ ಮೂಲಕ ಎಚ್ಚರಿಕೆ ಕೊಡುತ್ತಿದೆ. ಜೊತೆಗೆ ಅಪರಾಗಳ ಪರವಾಗಿ ಬೆಂಬಲಿಸುವವರಿಗೆ ಅದಕ್ಕಿಂತ ದೊಡ್ಡ ಶಿಕ್ಷೆ ಕೊಡಿಸಬೇಕು. ಆ ಮೂಲಕ ಅಪರಾಗಳಿಗೆ ಕಠಿಣ ಶಿಕ್ಷೆ ಕೊಡುವುದರಿಂದ ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ಒದಗಿಸಿಕೊಟ್ಟಂತಾಗುತ್ತದೆ ಎಂದರು. ದೇಶದಲ್ಲಿ ಮಹಾರಾಷ್ಟ್ರ, ಉತ್ತರ…

Read More

UN NETWORKS ಮಂಗಳೂರು: ಕುಪ್ಪೆಪದವು ಕಿಲೆಂಜಾರು ನಡಿಕಂಬಳ ಗುತ್ತಿನಲ್ಲಿ ನಡೆದ ಮಂಗಳೂರು ತೆಂಗು ಮಂಡಳಿಯ ಕಲ್ಪವೃಕ್ಷ ಕಲ್ಪ ಸಭೆಯಲ್ಲಿ ತೆಂಗು ಅಭಿವೃದ್ಧಿ ಮಂಡಳಿ ಬೆಂಗಳೂರಿನಿಂದ ತೆಂಗು ಬೆಳೆಗಾರರಿಗೆ ವಿವಿಧ ಸವಲತ್ತುಗಳ ವಿತರಣೆ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಭಟ್, ಎನ್.ಕೆ ಇದಿನಬ್ಬ, ಸುದೀಶ್ ಮಯ್ಯ, ರೊನಾಲ್ಡ್ ಡಿಸೋಜ, ಇರುವೈಲ್ ದೇವರಾಜ್, ಶೇಖ್ ಅಬ್ದುಲ್ಲಾ ಉಪಸ್ಥಿತರಿದ್ದರು. ರೈತ ಸಂಘದ ಕಾರ್ಯದರ್ಶಿ ಮನೋಹರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Read More