Author: UllalaVani

Kannada News From Coastal Karnataka

UN NETWORKS ಮಂಗಳೂರು: ಸಿದ್ದರಾಮಯ್ಯ ಸಂಪುಟದಲ್ಲಿ ಆಹಾರ ಹಾಗೂ ನಾಗರೀಕ ಸರಬರಾಜು ಸಚಿವರಾಗಿದ್ದ ಯು.ಟಿ.ಖಾದರ್ ಕರ್ನಾಟಕ ವಿಧಾನಸಭೆ ಚುನಾವಣೆ 2018ರಲ್ಲಿ ಜಯಭೇರಿ ಬಾರಿಸಿದ್ದಾರೆ. ಹಾಲಿ ಶಾಸಕ ಯು.ಟಿ.ಖಾದರ್ ಕುಟುಂಬ ಮಂಗಳೂರು ಕ್ಷೇತ್ರದಲ್ಲಿ ಪ್ರಭಾವಿತರು. 1972, 1978, 1999 ಹಾಗೂ 2004 ರಲ್ಲಿ ಯು.ಟಿ.ಖಾದರ್ ತಂದೆ ಯು.ಟಿ.ಫರೀದ್ ಗೆಲುವು ಸಾಧಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ ಕುತೂಹಲ ಕೆರಳಿಸಿರುವ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಯು ಟಿ ಖಾದರ್ ಗೆಲುವು ಸಾಧಿಸಿರುವುದಕ್ಕೆ ಹರ್ಷ ವ್ಯಕ್ತವಾಗುತ್ತಿದೆ. ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದ ಸಚಿವ ಯು.ಟಿ.ಖಾದರ್ ಈ ಬಾರಿ ಅಧಿಕ ಮತಗಳ ಅಂತರದಿಂದ ಗೆದ್ದು ವಿಜಯದ ನಗೆ ಬೀರಿದ್ದಾರೆ. ಸಚಿವ ಯು ಟಿ ಖಾದರ್ ತಮ್ಮ ಕ್ಷೇತ್ರದ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಿದ್ದು, ಅವರ ಅಭಿವೃದ್ಧಿ ಕಾರ್ಯಗಳೇ ಗೆಲುವಿಗೆ ಕಾರಣವಾಗಿದೆ. ಈ ಬಾರಿ ಸಂತೋಷ್ ರೈ ಬೋಳಿಯಾರ್ ವಿರುದ್ಧ ಕಣಕ್ಕೆ ಇಳಿದಿದ್ದ ಸಚಿವ ಯು.ಟಿ…

Read More

UN NETWORKS ಮಂಗಳೂರು : ಕರ್ನಾಟಕ ವಿಧಾನ ಸಭೆ ಚುನಾವಣೆಯ ದಕ ಜಿಲ್ಲೆ ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದ ಎಲ್ಲಾ ಫಲಿತಾಂಶ ಹೊರ ಬಿದ್ದಿದ್ದು , ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಮಂಗಳೂರು (ಹಳೇ ಉಳ್ಳಾಲ )ಕ್ಷೇತ್ರ ಹೊರತು ಪಡಿಸಿ ಉಳಿದೆಲ್ಲ ಕಡೆ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಕುಂದಾಪುರ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಗೆಲುವನ್ನು ಸಾಧಿಸಿದ್ದಾರೆ. ಇದು ಕರಾವಳಿ ಜಿಲ್ಲೆಯಲ್ಲಿಯೇ ದಾಖಲೆಯ ಗೆಲುವು ಆಗಿದೆ. ಮಂಗಳೂರು ದಕ್ಷಿಣದಲ್ಲಿ ವೆದವ್ಯಾಸ ಕಾಮತ್ 9,248 ಮತಗಳ ಅಂತರ ಮಂಗಳೂರು ಉತ್ತರ ಡಾ ಭರತ್ ಶೆಟ್ಟಿ 23,384 ಮತಗಳ ಅಂತರ ಮಂಗಳೂರು (ಉಳ್ಳಾಲ) ಯುಟಿ ಖಾದರ್ 15,866 ಮತಗಳ ಅಂತರ ಮೂಡಬಿದಿರೆ ಉಮಾನಾಥ ಕೋಟ್ಯಾನ್ 25964 ಮತಗಳ ಅಂತರ ಬಂಟ್ವಾಳ ರಾಜೇಶ್ ನೈಕ್ 8541 ಮತಗಳ ಅಂತರ ಬೆಳ್ತಂಗಡಿ ಹರೀಶ್ ಪೂಂಜ 7836 ಮತಗಳ ಅಂತರ ಪುತ್ತೂರು ಸಂಜೀವ ಸುಳ್ಯ ಎಸ್ ಅಂಗಾರ…

Read More

UN NETWORKS ಉಳ್ಳಾಲ: ಇನ್ನೋವಾ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಾಡೂರು ನಿವಾಸಿ ಶಿವಮೊಗ್ಗ ಸಾಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಸಾವನ್ನಪ್ಪಿದ್ದಾರೆ. ಮಾಡೂರು ಬಲ್ಯ ನಿವಾಸಿ ಪ್ರವೀಣ್ ಅಜಿಲ ಬಲ್ಯ(35) ಮೃತರು. ಮಂಗಳೂರಿನ ಎ.ಬಿ ಶೆಟ್ಟಿ ವೃತ್ತದಲ್ಲಿರುವ ಮಾರ್ಗದರ್ಶಿ ಚಿಟ್ ಫಂಡ್ಸ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇವರು ಸಂಸ್ಥೆಯ ಏಳು ಮಂದಿ ಸಹುದ್ಯೋಗಿಗಳೊಂದಿಗೆ ಮಂತ್ರಾಲಯ ದರ್ಶನಕ್ಕೆ ತೆರಳಿದ್ದರು. ಅಲ್ಲಿಂದ ಶುಕ್ರವಾರ ವಾಪಸ್ಸಾಗುತ್ತಿದ್ದ ಸಂದರ್ಭ ಶಿವಮೊಗ್ಗದ ಸಾಗರ ಸಮೀಪ ಇನೋವಾ ಕಾರು ಮರಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಪ್ರವೀಣ್ ಗಂಭೀರವಾಗಿ ಗಾಯಗೊಂಡಿದ್ದರು. ಬೆನ್ನು ಮೂಳೆ ಮುರಿತಕ್ಕೆ ಒಳಗಾಗಿದ್ದವರನ್ನು ಶಿವಮೊಗ್ಗದ ಆಸ್ಪತ್ರೆ ಗೆ ದಾಖಲಿಸಲಾಗಿತ್ತು. ಭಾನುವಾರ ರಾತ್ರಿ ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ. ಕಾರಿನಲ್ಲಿ ದ್ದ ಇನ್ನೊಬ್ಬರಿಗೆ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಉಳಿದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

Read More

UN NETWORKS ಉಳ್ಳಾಲ: ಮತದಾನ ಕೇಂದ್ರಕ್ಕೆ ದ್ವಿಚಕ್ರ, ರಿಕ್ಷಾ ಸೇರಿದಂತೆ ಕಾರುಗಳಲ್ಲಿ ಮತ ಚಲಾಯಿಸಲು ಆಗಮಿಸುವುದು ಸರ್ವೇ ಸಾಮಾನ್ಯ. ಆದರೆ ಈ ಮತದಾನ ಕೇಂದ್ರದಲ್ಲಿ ಒಂದು ಪ್ರದೇಶದ ಜನರಿಗೆ ಮತ ಚಲಾಯಿಸ ಬೇಕಾದರೆ ಇವರಿಗೆ ದೋಣಿಯೇ ಸಂಪರ್ಕ ಸೇತುವೆ . ಇದು ಮಂಗಳೂರು ವಿಧಾನಸಭಾ ಕ್ಷೇತ್ರದ ಪಾವೂರು ಉಳಿಯ ನಿವಾಸಿಗಳ ಸ್ಥಿತಿ. ನೇತ್ರಾವತಿ ನದಿಯ ನಡುಗುಡ್ಡೆಯಾಗಿರುವ ಉಳಿಯ ಕುದ್ರುವಿನಲ್ಲಿ ಸುಮಾರು 51 ಮನೆಗಳಿದ್ದು, 150ಕ್ಕೂ ಹೆಚ್ಚು ಮತದಾರರಿದ್ದಾರೆ ಮತ ಚಲಾಯಿಸಲಿ ಇವರು ದೋಣಿಗಳನ್ನೇ ಆಶ್ರಯಿಸಬೇಕಾಗಿದ್ದು, ಶನಿವಾರ ಬೆಳಗ್ಗೆಯೇ ಇಲ್ಲಿನ ಹೆಚ್ಚಿನ ಮತದಾರರು ಮತದಾನ ಕೇಂದ್ರ ಸಂಕ್ಯೆ 61ರ ಗಾಡಿಗದ್ದೆ ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಗೆ ದೋಣಿಯಲ್ಲಿ ಆಗಮಿಸಿ ಮತ ಚಲಾಯಿಸಿದರು. ಮತದಾನ ಕೇಂದ್ರಕ್ಕೆ ಮತದಾರರಿಗೆ ಸಾರಿಗೆ ವ್ಯವಸ್ಥೆಯನ್ನು ವಿವಿಧ ರಾಜಕೀಯ ಪಕ್ಷಗಳು ಮಾಡಿದಂತೆ ಇಲ್ಲಿಯೂ ದೋಣಿಯ ವ್ಯವಸ್ಥೆಯನ್ನು ರಾಜಕೀಯ ಪಕ್ಷವೊಂದು ವಹಿಸಿಕೊಂಡಿದೆ. ದೋಣಿಯಿಂದ ಇಳಿದು ಸುಮಾರು ಒಂದು ಕಿ.ಮೀ. ದಾರಿಯನ್ನು ರಸ್ತೆಯಲ್ಲಿ ಕ್ರಮಿಸಲಿದ್ದು, ಇಲ್ಲಿನ ಮತದಾರರಿಗೆ ಕಾರಿನ ವ್ಯವಸ್ಥೆಯನ್ನು ಮಾಡಿದ್ದಾರೆ.

Read More

UN NETWORKS ಉಳ್ಳಾಲ: ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಮತದಾರರಿಂದ ಮಧ್ಯಾಹ್ನ ತನಕ ನೀರಸ ಪ್ರಕ್ರಿಯೆ ಆದರೂ ಸಂಜೆಯಾಗುತ್ತಲೇ ಐವತ್ತು ಶೇ. ಮತ ಚಲಾವಣೆ ಆಗಿದೆ. ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಯು.ಟಿ ಖಾದರ್ ಅವರು ತಾಲೂಕು ಪಂಚಾಯಿತಿ ಸದಸ್ಯ ಜಬ್ಬಾರ್ ಬೋಳಿಯಾರ್ ಸೇರಿದಂತೆ ಕಾರ್ಯಕರ್ತರೊಂದಿಗೆ ಆಗಮಿಸಿ ಬೋಳಿಯಾರಿನ ರಂತಡ್ಕ ಕರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ 7.30ಕ್ಕೆ ಮತ ಚಲಾಯಿಸಿದರು. ರಾಜ್ಯ ಸರಕಾರದ ಜನಪರ ಕಾರ್ಯಕ್ರಮಗಳು ಹಾಗೂ ಮಂಗಳೂರು ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಕ್ರಮಗಳು ಜನತೆ ಮತ್ತೆ ಮತ್ತೆ ಶಾಸಕನನ್ನಾಗಿ ಆರಿಸುವ ಪೂರ್ಣ ವಿಶ್ವಸ ವ್ಯಕ್ತಪಡಿಸಿದರು. ಬಿಜೆಪಿ ಅಭ್ಯರ್ಥಿ ಸಂತೋಷ್ ಕುಮಾರ್ ರೈ ಬೋಳಿಯಾರು ಅವರು ಸರಿಯಾಗಿ 7.00ಗಂಟೆಗೆ ಪಜೀರು ಪಾನೆಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಂಧುಗಳ ಜೊತೆಗೂಡಿ ಆಗಮಿಸಿ ಮತ ಚಾಲಯಿಸಿದರು. ಬಳಿಕ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಅಡಳಿತ ವೈಫಲ್ಯ, ಕೇಂದ್ರದಲ್ಲಿ ಮೋದಿ ಸರಕಾರದ ಜನಪರ ಯೋಜನೆಗಳು ಮಂಗಳೂರು ಕ್ಷೇತ್ರ ಬಿಜೆಪಿ ಶಾಸಕನನ್ನು ವಿಧಾನ ಸಭೆ…

Read More

UN NETWORKS ಮಂಗಳೂರು: ಬಂಟ್ವಾಳದ ವಾಮದಪದವಿನ ಎಚ್.ಅಬ್ದುಲ್ ರಹಿಮಾನ್ ಹಾಗೂ ಜಮೀಳಾ ರವರ ಪುತ್ರರಾದ, ಪ್ರಸ್ತುತ ಮಂಗಳೂರಿನ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಮುಸ್ತಫಾ ಬಸ್ತಿಕೋಡಿ ರವರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಮುಸ್ತಫಾ ಬಸ್ತಿಕೋಡಿ ರವರು “High Performance Computing” ಫೀಲ್ಡ್ ನ ” Programing Paradigm for Parallel Architectures ” ಎಂಬ ವಿಷಯದಲ್ಲಿ ಸಂಶೋಧನೆ ಮಾಡಿ ಸಲ್ಲಿಸಿದ ಪ್ರಬಂಧಕ್ಕೆ ಪಿಎಚ್ಡಿ ಪದವಿ ಲಭಿಸಿದೆ. ‘ King Abdul Azeez University, Jiddah’ ಇದರಲ್ಲಿ ಪ್ರಾಧ್ಯಾಪಕರಾಗಿರುವ ಡಾ.ವಸೀಂ ಅಹ್ಮದ್ ರವರ ಮಾರ್ಗದರ್ಶನದಲ್ಲಿ ಹಾಗೂ NITK ಸುರತ್ಕಲ್ ಇದರಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಚಂದ್ರಶೇಖರ್ ರವರ ಸಹಮಾರ್ಗದರ್ಶನದಲ್ಲಿ ಕಳೆದ ವರುಷ ಇದೇ ವಿಷಯದಲ್ಲಿ ‘University of central Florida, Orlando, USAಯಲ್ಲಿ ನಡೆದ ಅಂತರಾಷ್ಟ್ರೀಯ ಕಾನ್ಫರೆನ್ಸ್ ನಲ್ಲಿ ಪ್ರಬಂಧ ಮಂಡನೆ ಮಾಡಿದ್ದರು.

Read More

UN NETWORKS ಮುಡಿಪು: ಮೋದಿ ಅಲೆ ಆಸ್ತಿಯಲ್ಲ. ಮೋದಿ ಅಲೆಯಿಂದ ರಾಜಕೀಯ ಬದಲಾವಣೆ ಸಾಧ್ಯವಿಲ್ಲ. ಮಂಗಳೂರು ಕ್ಷೇತ್ರದಲ್ಲಿ ಸಚಿವ ಯು.ಟಿ. ಖಾದರ್ ಮಾಡಿರುವ ಸಾಧನೆಗೆ ಪೂರಕವಾಗಿ ಮತದಾರರು ಸ್ಪಂದಿಸಲಿದ್ದಾರೆ. ಖಾದರ್ ಸೋಲಿಲ್ಲದ ಸರದಾರ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೇಂದ್ರ ಸಚಿವ ಗುಲಾಂ ನಬಿ ಅಝಾದ್ ಹೇಳಿದರು. ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮುಡಿಪಿನಲ್ಲಿ ಬುಧವಾರ ರಾತ್ರಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ನನಗೆ ಅಧಿಕಾರ ಕೊಡಿ. ನಾನು ವಿದೇಶದಲ್ಲಿರುವ ಕಪ್ಪು ಹಣ ತರುತ್ತೇನೆ ಎಂದು ಮೋದಿ ಹೇಳಿದ್ದರು. ಆದರೆ ಅವರಿಗೆ ಅಧಿಕಾರಕ್ಕೆ ಬಂದ ಮೇಲೆ ಈವರೆಗೆ ಕಪ್ಪು ಹಣ ಪತ್ತೆ ಮಾಡಲು ಆಗಲಿಲ್ಲ. ಅವರಿಗೆ ಭರವಸೆ ಈಡೇರಿಸಲು ಆಗಿಲ್ಲ. ಸಿದ್ದರಾಮಯ್ಯ ಸರಕಾರ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಸಫಲವಾಗಿದೆ. ಕ್ಷೇತ್ರಕ್ಕಾಗಿ ದುಡಿದ ಖಾದರ್‍ನಂತಹ ಶಾಸಕರು, ಸಚಿವರು ನಮಗೆ ಬೇಕು. ಅವರನ್ನು ಆರಿಸಿ ಕಳುಹಿಸುವ ಕೆಲಸ ನಿಮ್ಮ ಮುಂದಿದೆ ಎಂದರು. ಕಾಂಗ್ರೆಸ್ ಮುಖಂಡ ರಾಜ್ ಬಬ್ಬರ್ ಮಾತನಾಡಿ, ಚುನಾವಣೆ…

Read More

UN NETWORKS ಉಳ್ಳಾಲ: ಮಂಗಳೂರು ಕ್ಷೇತ್ರದಲ್ಲಿ ಜೆಡಿಎಸ್‍ಗೆ ಮುಸ್ಲಿಂ ಲೀಗ್ ಬೆಂಬಲ ನೀಡಲಿದ್ದು ಈ ಭಾಗದಲ್ಲಿ ಮುಸ್ಲಿಂ ಅಭ್ಯರ್ಥಿಗಳೇ ಹೆಚ್ಚಾಗಿರುವುದರಿಂದ ಅವರಿಗಾದ ಅನ್ಯಾಯದ ಕುರಿತು ಜೆಡಿಎಸ್ ಧ್ವನಿ ಎತ್ತುವ ವಿಶ್ವಾಸ ಇದೆ. ಅದಕ್ಕಾಗಿ ಮುಸ್ಲಿಂ ಲೀಗ್ ಬೆಂಬಲಿಸಲಿದೆ ಎಂದು ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ಸಿದ್ದಿಕ್ ತಲಪಾಡಿ ಹೇಳಿದರು.

Read More

UN NETWORKS ಉಳ್ಳಾಲ: ಮಿಝೋರಾಂನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸಮ್ಮಿಶ್ರ ಸರಕಾರ ನಡೆಸುತ್ತಿದ್ದು ಇತರ ಭಾಗದಲ್ಲಿ ಬದ್ಧ ವೈರಿಯಂತೆ ನಾಟಕ ಮಾಡುತ್ತಿದೆ. ಜನತೆ ಅದನ್ನು ಅರ್ಥ ಮಾಡಿಕೊಂಡು ಪ್ರಾದೇಶಿಕ ಪಕ್ಷದತ್ತ ಒಲವು ಹರಿಸಲಿದ್ದಾರೆ ಎಂದು ಮಂಗಳೂರು ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಕೆ. ಅಶ್ರಫ್ ಹೇಳಿದರು. ಉಳ್ಳಾಲ ಮಾಸ್ತಿಕಟ್ಟೆಯಲ್ಲಿರುವ ಜೆಡಿಎಸ್ ಚುನಾವಣಾ ಕಾರ್ಯಾಲಯದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಉಳ್ಳಾಲದಲ್ಲಿ ನಿರಂತರವಾವಗಿ ಗಲಭೆಯ ಮೂಲಕ ಸಾಮರಸ್ಯ ಕದಡುತ್ತಿರುವುದರಿಂದ ನೊಂದವರ ಹಾಗೂ ಜೈಲುಪಾಲಾದವರ ನೋವು ಸಾಕಷ್ಟಿದೆ. ಅವೆಲ್ಲದ್ದಕ್ಕೂ ಜೆಡಿಎಸ್ ಅಧಿಕಾರಕ್ಕೆ ಬಂದರೆ ನ್ಯಾಯ ಕೊಡಲಿದ್ದೇವೆ ಎಂದರು.

Read More

UN NETWORKS ಉಳ್ಳಾಲ: ಉಳ್ಳಾಲ ಭಾಗದಲ್ಲಿ ಜಾತ್ಯಾತೀತ ಜನತಾ ದಳದ ಅಭ್ಯರ್ಥಿ ನಿರಂತರವಾಗಿ ಸ್ಪರ್ಧಿಸುತ್ತಿದ್ದರೂ ಈ ಬಾರಿ ಸಮರ್ಥ ನಾಯಕ, ಶಾಂತಿ ಸಾಮರಸ್ಯವನ್ನು ಬಯಸುವ ಅಭ್ಯರ್ಥಿಗೆ ಮತಯಾಚನೆ ವೇಳೆ ಸಿಕ್ಕಂತಹ ಅಭೂತಪೂರ್ವ ಬೆಂಬಲದಿಂದ ಗೆಲುವು ನಿಶ್ಚಿತ ಎಂದು ಜಾತ್ಯಾತೀತ ಜನತಾದಳದ ಮಂಗಳೂರು ಕ್ಷೇತ್ರ ಅಧ್ಯಕ್ಷ ಮೋಹನದಾಸ್ ಶೆಟ್ಟಿ ಹೇಳಿದರು. ಉಳ್ಳಾಲ ಮಾಸ್ತಿಕಟ್ಟೆಯ ಚುನಾವಣಾ ಕಚೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕ್ಷೇತ್ರದ ಜನತೆ ನಾಯಕತ್ವ ಗುರುತಿಸಿ ಬಹುಮತದಿಂದ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ. ಕ್ಷೇತ್ರದ ಶಾಂತಿ, ಸಾಮರಸ್ಯ ಬಯಸುವವರು ಅಶ್ರಫ್ ಅವರನ್ನು ಬೆಂಬಲಿಸಬೇಕಿದೆ. ಅನ್ಯಾಯದ ವಿರುದ್ಧ ನಿರಂತರ ಹೋರಾಟಗಳ ಮೂಲಕ ಸಮರ್ಥ ನಾಯಕ ಅನಿಸಿಕೊಂಡವರಿಗೆ ಈ ಬಾರಿ ಚುನಾವಣೆಯಲ್ಲಿ ಅಭೂತಪೂರ್ವ ಬೆಂಬಲ ಸಿಗಲಿದೆ ಎಂದರು. ಮುಖಂಡ ಝಾಕಿರ್ ಹುಸೈನ್ ಉಳ್ಳಾಲ್ ಮಾತನಾಡಿ ಜಾತಿ-ಧರ್ಮಗಳ ನಡುವೆ ಕಲಹ ನಡೆಸಿರುವುದು ಮಂಗಳೂರು ಕ್ಷೇತ್ರದ ಶಾಸಕರ ಸಾಧನೆ. ಮಹಿಳಾ ಮತದಾರರು ಹೆಚ್ಚಾಗಿ ತೊಂದರೆಗೀಡಾಗಿದ್ದು, ಸರಕಾರಿ ಕಾಲೇಜುಗಳಿಲ್ಲದೆ ಇರುವುದರಿಂದ ಹೆಣ್ಮಕ್ಕಳಿಗೆ ತೊಂದರೆ ಅಗಿದೆ. ಜೆಡಿಎಸ್‍ಗೆ ಮತಹಾಕಿದರೆ ಬಿಜೆಪಿ…

Read More