Author: UllalaVani

Kannada News From Coastal Karnataka

UN NETWORKS ಉಳ್ಳಾಲ: ಸಮಾಜದ ಕಟ್ಟಕಡೆಯ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಸಮಯದಲ್ಲಿ ಉಳ್ಳಾಲದ ಬ್ರಹ್ಮಶ್ರೀ ಬಿಲ್ಲವ ವೇದಿಕೆ ದತ್ತು ಸ್ವೀಕಾರದಂತಹ ಮಹತ್ಕಾರ್ಯ ನಡೆಸುತ್ತಿರುವ ಕಾರ್ಯ ಎಲ್ಲರಿಗೂ ಮಾದರಿ ಎಂದು ಅಖಿಲ ಭಾರತ ಬಿಲ್ಲವರ ಯೂನಿಯನ್ ಇದರ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ಅಭಿಪ್ರಾಯಪಟ್ಟರು. ಅವರು ಉಳ್ಳಾಲ ಬ್ರಹ್ಮಶ್ರೀ ಬಿಲ್ಲವ ವೇದಿಕೆ ಇದರ ಆಶ್ರಯದಲ್ಲಿ ಕೊಲ್ಯ ಸೌಭಾಗ್ಯ ಸದನದಲ್ಲಿ ಭಾನುವಾರ ಜರಗಿದ 16 ನೇ ವರ್ಷದ ಶೈಕ್ಷಣಿಕ ದತ್ತು ಸ್ವೀಕಾರ ಹಾಗೂ ಬ್ರಹ್ಮಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ 40 ವಿದ್ಯಾರ್ಥಿಗಳ ದತ್ತು ಸ್ವೀಕಾರ, 28 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, 10 ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಆರ್ಥಿಕ ನೆರವು ಮತ್ತು 100 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ನಡೆಸಿ ಮಾತನಾಡಿದರು. ಶೈಕ್ಷಣಿಕ ದತ್ತು ಸ್ವೀಕಾರದ ಮೂಲಕ ವಿದ್ಯಾರ್ಥಿಗಳಲ್ಲಿ ಶಕ್ತಿ, ಉತ್ಸಾಹ ನೀಡಿ ಶಿಕ್ಷಣಕ್ಕೆ ಪ್ರೋತ್ಸಾಹಿಸುವಂತಾಗುತ್ತದೆ. ಆರ್ಥಿಕ ಮುಗ್ಗಟ್ಟಿನಿಂದ ಹಲವರ ಶಿಕ್ಷಣ ಮೊಟಕು ಆಗುವ ಸಂದರ್ಭವಿತ್ತು. ಸಂಘಟನೆಗಳಿಂದ ದೊರೆಯುವ ಸಹಕಾರವನ್ನು ಪಡೆಯುವ ವಿದ್ಯಾರ್ಥಿಗಳು ಗುರಿ ಮತ್ತು…

Read More

UN NETWORKS ಉಳ್ಳಾಲ: ರಾಜ್ಯದಲ್ಲಿ ಶೇ.78 ರಷ್ಟು ಮುಸ್ಲಿಮರಿದ್ದು, ಅವರ ಮತದಾನದಿಂದ ರಾಜ್ಯದಲ್ಲಿ 78 ಕಾಂಗ್ರೆಸ್ ಸೀಟುಗಳು ಬಂದಿವೆ. ಈ ನಿಟ್ಟಿನಲ್ಲಿ ಹಿಂದಿನ ಸರಕಾರದ ಅವಧಿಯಲ್ಲಿ ಎರಡು ದೊಡ್ಡ ಖಾತೆಯನ್ನು ಯಶಸ್ವಿಯಾಗಿ ನಿಭಾಯಿಸಿದ ಯು.ಟಿ.ಖಾದರ್ ಅವರಿಗೆ ಸಮ್ಮಿಶ್ರ ಸರಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ತಬೂಖ್ ದಾರಿಮಿ ಒತ್ತಾಯಿಸಿದ್ದಾರೆ. https://www.youtube.com/watch?v=qVLrmXr2oMw&feature=youtu.be ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕೋಮುವಾದಿ ಶಕ್ತಿಯನ್ನು ದೂರಮಾಡಲು ಕಾಂಗ್ರೆಸ್ -ಜೆಡಿಎಸ್ ರಚಿಸಿದ ನೂತನ ಸರಕಾರಕ್ಕೆ ಅಭಿನಂದನೆಗಳು. ರಾಜ್ಯದ ಬುದ್ಧಿವಂತರಿಂದಾಗಿ ಕೋಮುವಾದಿಗಳಿಗೆ ಅವಕಾಶವಿಲ್ಲ ಅನ್ನುವ ಸಂದೇಶ ದೇಶದ ಪ್ರಜೆಗಳಿಗೆ ತಲುಪಿದೆ. ಕಳೆದ ಚುನಾವಣೆಯಲ್ಲಿ ಶೇ . 20 ರಷ್ಟು ಲಿಂಗಾಯತರು, ಶೇ.11 ವಕ್ಕಲಿಗರು, ಶೇ. 78 ಮುಸ್ಲಿಮರು , ಶೇ. 60 ಕುರುಬರು, ಶೇ.37 ಎಸ್.ಸಿ , ಎಸ್.ಟಿ ಶೇ. 37 ಮತ್ತು ಒಬಿಸಿಯವರು ಮತ ಚಲಾಯಿಸಿದ್ದಾರೆ. ಆದರೆ ಶೇ. 78 ರಷ್ಟು ಮುಸ್ಲಿಮರ ಮತ ಚಲಾವಣೆಯಿಂದ ರಾಜ್ಯದಲ್ಲಿ 78 ಸೀಟುಗಳು ಕಾಂಗ್ರೆಸ್ಸಿಗೆ ಬಂದಿದೆ. ಈ ನಿಟ್ಟಿನಲ್ಲಿ ಉಪಮುಖ್ಯಮಂತ್ರಿ ಪಟ್ಟವನ್ನು ಮುಸ್ಲಿಂ…

Read More

UN NETWORKS ಉಳ್ಳಾಲ: ನಾಲ್ಕು ಕಾರುಗಳ ನಡುವೆ ಸರಣಿ ಅಪಘಾತ ನಡೆದಿರುವ ಘಟನೆ ರಾ.66 ರ ನೇತ್ರಾವತಿ ಸೇತುವೆಯಲ್ಲಿ ಶುಕ್ರವಾರ ಮಧ್ಯಾಹ್ನ ವೇಳೆ ಸಂಭವಿಸಿದೆ. ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ಸಂಚರಿಸುತ್ತಿದ್ದ ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ನೇತ್ರಾವತಿ ಸೇತುವೆಯಲ್ಲಿ ಅಮಿತ ವೇಗದಲ್ಲಿ ಕೇರಳ ಕಡೆಗೆ ಸಾಗುತ್ತಿದ್ದ ಡಸ್ಟರ್ ಕಾರಿನ ಚಾಲಕ ಹಠಾತ್ತನೆ ಬ್ರೇಕ್ ಹಾಕಿದ ಪರಿಣಾಮವಾಗಿ ಹಿಂಬದಿಯಲ್ಲಿದ್ದ ಹೋಂಡ ಸಿಟಿ ಕಾರು ಹಿಂಬದಿಗೆ ಗುದಿದ್ದು, ಅದೇ ರೀತಿಯಲ್ಲಿ ಅದರ ಹಿಂದೆ ಇದ್ದ ಇಕೋ ಸ್ಪೋಟ್ರ್ಸ್ ಕಾರು , ಅದರ ಹಿಂದೆಯಿದ್ದ ಆಲ್ಟೋ ಕಾರು ಢಿಕ್ಕಿ ಹೊಡೆದಿದೆ. ಏಕಕಾಲದಲ್ಲಿ ನಾಲ್ಕು ಕಾರುಗಳ ಮಧ್ಯೆ ಅಪಘಾತ ನಡೆದು ಸರಣಿ ಆಪಘಾತ ಸಂಭವಿಸಿದೆ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಕಡಲ್ಕೊರೆತಕ್ಕೆ ಶಾಶ್ವತ ತಡೆಗೋಡೆ ಕಾಮಗಾರಿಯ ಸೊತ್ತುಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಸೇತುವೆಯ ಮಧ್ಯಭಾಗದಲ್ಲಿ ಕೆಟ್ಟು ನಿಂತ ಪರಿಣಾಮ ಡಸ್ಟರ್ ಕಾರಿನ ಚಾಲಕ ಹಠಾತ್ ಬ್ರೇಕ್ ಹಾಕಿದ್ದಾನೆ ಎನ್ನಲಾಗಿದೆ. ಇದರಿಂದಾಗಿ ಹಿಂಬದಿಯಲ್ಲಿದ್ದ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

UN NETWORKS ಉಳ್ಳಾಲ: ಸಯ್ಯದ್ ಮದನಿ ಅರಬಿಕ್ ಎಜುಕೇಶನಲ್ ಟ್ರಸ್ಟ್ ಉಳ್ಳಾಲ ವತಿಯಿಂದ ನಡೆಸಲಾದ 2018 ನೇಸಾಲಿನ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ಮೇಲಂಗಡಿ ಖಂಝುಲ್ ಉಲೂಂ ಮದ್ರಸದ 7ನೇ ತರಗತಿಯ ಮುಹಮ್ಮದ್ ಅಫ್ರಾಝ್ 523 (89%), ನಶೀಫಾ521(89%) , 5 ನೇ ತರಗತಿಯ ಮರ್ಯಂ ತಮನ್ನ591(85%) ನಶ್ವಾ 572 (82%) ಅಂಕಗಳನ್ನ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

Read More

UN NETWORKS ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಸಂಶೋಧನ ವಿದ್ಯಾರ್ಥಿ ಸಿ.ಎಸ್.ಕಾಳಿಪ್ರಸಾದ್ ಅವರು ಮಂಡಿಸಿದ `ಸ್ಡಡೀಸ್ ಆನ್ ಟ್ರಾನ್ಸ್‍ಪೋರ್ಟ್ ಆಂಡ್ ಡಿಸ್ಟ್ರಿಬ್ಯೂಷನ್ ಆಫ್ ರೇಡಿಯೋ ನ್ಯೂಕ್ಲೈಡ್ಸ್ ಇನ್ ಮೇಜರ್ ರಿವರ್ ಎಕೋ ಸಿಸ್ಟಮ್ ಆಫ್ ಸೌಥ್ ಕರ್ನಾಟಕ’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯವು ಪಿಎಚ್‍ಡಿ ಪದವಿ ನೀಡಿದೆ. ಹಾಸನ ಜಿಲ್ಲೆಯ ಬಾಗೇಶ್‍ಪುರ ಗ್ರಾಮದ ಬಿ.ಶಿವಾನಂದಪ್ಪ ಮತ್ತು ಆರ್.ಲೀಲಾವತಿ ದಂಪತಿಗಳ ಪುತ್ರನಾಗಿರುವ ಇವರು ವಿವಿ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ವೈ.ನಾರಾಯಣ ಅವರು ಮಾರ್ಗದರ್ಶನ ನೀಡಿದ್ದರು.

Read More

UN NETWORKS ದೇರಳಕಟ್ಟೆ: ಜ್ಯಾತಿಯಾತೀತ ಜನತಾದಳ ಯುವ ಘಟಕ ಇದರ ಸಭೆಯು ಇಂದು ದೇರಳಕಟ್ಟೆ ಪಕ್ಷದ ಕಚೇರಿಯಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಮೋಹನ್ ದಾಸ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಈ ಸಭೆಯಲ್ಲಿ ಜೆ.ಡಿ.ಎಸ್.ಜಿಲ್ಲಾ ಮುಖಂಡರುಗಳಾದ ಮಾಜಿ ಮೇಯರ್ ಕೆ.ಅಶ್ರಫ್.ನಝೀರ್ ಉಳ್ಳಾಲ್.ಅಝೀಝ್ ಮಲಾರ್.ಉಸ್ಮಾನ್ ಅಕ್ಶಾ.ಸ್ವಾಲಿಹ್ ಹರೇಕಳ.ಮುಂತಾದ ಹಲವಾರು ಪ್ರಮುಖರು ಬಾಗವಹಿಸಿದರು. ಸಭೆಯಲ್ಲಿ ನೂತನ ಸಮಿತಿಯನ್ನು ಆಯ್ಕೆಗೊಳಿಸಲಾಯಿತು.ಜೆ.ಡಿ.ಎಸ್.ಯುವ ಘಟಕ ಬೆಲ್ಮ ದೇರಳಕಟ್ಟೆ ಇದರ ನೂತನ ಅಧ್ಯಕ್ಷರಾಗಿ ನೌಷಾದ್ ದೇರಳಕಟ್ಟೆ,ಉಪಾಧ್ಯಕ್ಷರಾಗಿ ಅಶ್ರಫ್ ಕಾನೆಕೆರೆ,ಪ್ರದಾನ ಕಾರ್ಯದರ್ಶಿಯಾಗಿ ಪವಾಝ್.ದೇರಳಕಟ್ಟೆ,ಹಾಗೂ ಕೋಶಾಧಿಕಾರಿಯಾಗಿ ಸುಹೈಬ್ ದೇರಳಕಟ್ಟೆ, ಹಾಗೂ 30 ಮಂದಿ ಕಾರ್ಯಕರ್ತರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಗೊಳಿಸಲಾಯಿತು.

Read More

UN NETWORKS ಕೊಂಡಾಣ: ಅದು ದೈವತ್ವ ತುಂಬಿದ ತುಳುನಾಡ ಮಣ್ಣಿನ ಕಡೆಯ ಜಾತ್ರಾ ಮಹೋತ್ಸವ. ಇಲ್ಲಿನ ಕಾರ್ಣಿಕದ ದೈವಗಳ ಜಾತ್ರೆ ಮುಗಿದ ಬಳಿಕ ತುಳುನಾಡಿನ ಮತ್ತೆಲ್ಲೂ ಜಾತ್ರಾ ಮಹೋತ್ಸವ ನಡೆಯುವುದೇ ಇಲ್ಲ. ಹೀಗಾಗಿಯೇ ಇತಿಹಾಸ ಪ್ರಸಿದ್ದ ದೈವಿಕ ಪುಣ್ಯ ಕ್ಷೇತ್ರವಾದ ಆ ಮಣ್ಣಿನಲ್ಲಿ ಸದ್ಯ ಜಾತ್ರಾಮಹೋತ್ಸವದ ಸಂಭ್ರಮ ಮನೆ ಮಾಡಿದೆ. ಅದುವೇ ತುಳುನಾಡಿನ ಅತ್ಯಂತ ಕಾರ್ಣಿಕ ಕ್ಷೇತ್ರವೆಂದೇ ಪ್ರಸಿದ್ದಿ ಪಡೆದ ಕೊಂಡಾಣ ಶ್ರೀಪಿಲಿಚಾಮುಂಡಿ,ಬಂಟ, ಮುಂಡತ್ತಾಯ (ವೈದ್ಯನಾಥ)ದೈವಸ್ಥಾನ ಕ್ಷೇತ್ರ. ಶ್ರೀಕ್ಷೇತ್ರ ಕೊಂಡಾಣದಲ್ಲಿ ಮೇ.22 ಮತ್ತು 23ರಂದು ವಾರ್ಷಿಕ ಜಾತ್ರೋತ್ಸವ ಅತ್ಯಂತ ಸಂಭ್ರಮ ಸಡಗರದಿಂದ ನಡೆಯುತ್ತದೆ. ಕ್ಷೇತ್ರದ ಕಾರ್ಣಿಕ ದೈವಗಳಾದ ಪಿಲಿಚಾಮುಂಡಿ, ಬಂಟ ಮತ್ತು ವೈದ್ಯನಾಥನಿಗೆ ನೇಮೋತ್ಸವಗಳು ನಡೆದು ಜಾತ್ರೋತ್ಸವಕ್ಕೆ ಅಧಿಕೃತ ತೆರೆ ಬೀಳುತ್ತದೆ. ಇದಾದ ಬಳಿಕ ತುಳುನಾಡು ಎಂದು ಕರೆಸಿಕೊಳ್ಳುವ ಉಡುಪಿ-ದ.ಕ ಜಿಲ್ಲೆಯ ಯಾವುದೇ ಭಾಗದಲ್ಲಿ ದೈವಸ್ಥಾನಗಳು ಜಾತ್ರೋತ್ಸವಗಳು ನಡೆಯುವುದಿಲ್ಲ ಎನ್ನುವುದು ವಾಡಿಕೆ. ಹೀಗಾಗಿ ತುಳುನಾಡಿನ ಮಟ್ಟಿಗೆ ಶ್ರೀಕ್ಷೇತ್ರ ಕೊಂಡಾಣದ ಬಂಡಿ ಉತ್ಸವ ಕಡೆಯ ಜಾತ್ರಾ ಸಂಭ್ರಮ ಎನ್ನುವುದು ಉಲ್ಲೇಖನಿಯ. ಈ ಮಧ್ಯೆ…

Read More

UN NETWORKS ಉಳ್ಳಾಲ: ಬೈಕಿಗೆ ಲಾರಿಯೊಂದು ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ , ಎಂಸಿಎಫ್ ಉದ್ಯೋಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದವರು ಶನಿವಾರ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮುಡಿಪು ಕೊಡಕ್ಕಲ್ ನಿವಾಸಿ ಮಹೇಶ್ ಭಟ್ ಕೊಡಕ್ಕಲ್ (32) ಮೃತರು. ಮಂಗಳೂರಿನ ಕೊಟ್ಟಾರದಲ್ಲಿ ಮೇ.19 ರಂದು ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಅವರು ಸಾವನ್ನಪ್ಪಿದ್ದಾರೆ. ವಿವಾಹಿತರಾಗಿರುವ ಇವರು ಪತ್ನಿ ಹಾಗೂ ಒಂದೂವರೆ ಹರೆಯದ ಮಗುವಿನ ಜೊತೆಗೆ ಶಕ್ತಿನಗರ ಸಮೀಪ ರೂಮಿನಲ್ಲಿ ವಾಸಿಸುತ್ತಿದ್ದರು. ಎಂದಿನಂತೆ ಬೈಕಿನಲ್ಲಿ ಕೆಲಸಕ್ಕೆ ಹೊರಟಿದ್ದವರು ಪತ್ನಿ ಸಂಗೀತಾ ಅವರನ್ನು ನಂತೂರು ಸಮೀಪ ಬಿ.ಎಡ್ ಕಾಲೇಜಿಗೆ ಬಿಟ್ಟು, ಬೈಕಂಪಾಡಿ ಎಂಸಿಎಫ್ ಕಡೆಗೆ ಪ್ರಯಾಣ ಬೆಳೆಸಿದ್ದರು. ದಾರಿಮಧ್ಯೆ ಕೊಟ್ಟಾರ ಫ್ಲೈಓವರ್ ತಲುಪುತ್ತಿದ್ದಂತೆ ಹಿಂಬದಿಯಿಂದ ಬರುತ್ತಿದ್ದ ಕಂಟೈನರ್ ಲಾರಿ ಹಿಂಬದಿಯಿಂದ ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕಿನಿಂದ ರಸ್ತೆಗೆ ಬಿದ್ದ ಮಹೇಶ್ ಅವರ ತಲೆಯ ಭಾಗಕ್ಕೆ ಗಾಯವಾಗಿತ್ತು. ಅಪಘಾತಕ್ಕೆ ಕಾರಣವಾದ ಲಾರಿ ಢಿಕ್ಕಿ ಹೊಡೆದು ಪರಾರಿಯಾಗಿದ್ದು, ಇದನ್ನು ಮಹೇಶ್ ಅವರ ಬೈಕಿನ…

Read More

UN NETWORKS ಉಳ್ಳಾಲ: ಹೆತ್ತವರು ಮಕ್ಕಳನ್ನು ಸಮಾಜದೊಂದಿಗೆ ಬೆರೆಯಲು ಬಿಡದ ಕಾರಣ ಮಕ್ಕಳಿಗೆ ಸಮಾಜದ ಮೇಲೆ ಅಭಿಮಾನ ಕಡಿಮೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಮಕ್ಕಳನ್ನು ಸಮಾಜದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಅವರಿಗೆ ಸಂಸ್ಕಾರ ನೀಡುವ ಕಾರ್ಯ ಮಾಡಬೇಕು ಎಂದು ಕರ್ನಾಟಕ ಸರಕಾರಿ ಅಪೆಕ್ಸ್ ಬ್ಯಾಂಕ್ ಬೆಂಗಳೂರು ಇಲ್ಲಿನ ನಿವೃತ್ತ ವ್ಯವಸ್ಥಾಪಕ ಹಾಗೂ ಬೆಂಗಳೂರು ಬಿಲ್ಲವ ಅಸೋಸಿಯೇಷನ್‍ನ ಖಜಾಂಚಿ ಮಾಚ ಬಿಲ್ಲವ ಅಭಿಪ್ರಾಯಪಟ್ಟರು. ಅವರು ಬಿಲ್ಲವ ಸೇವಾ ಸಮಾಜ ಕೊಲ್ಯ ಸೋಮೇಶ್ವರ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಕೊಲ್ಯ ಇಲ್ಲಿ ಏರ್ಪಡಿಸಿದ್ದ ಪ್ರತಿಭಾನ್ವಿತ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಕ್ಕಳು ಪುಸ್ತಕ ವಿದ್ಯಾರ್ಥಿವೇತನ ಪಡೆದರೆ ಸಾಲದು ತಾವು ಸಮಾಜದಿಂದ ಪಡೆದ ಈ ಶೈಕ್ಷಣಿಕ ಕೊಡುಗೆಯನ್ನು ಜ್ಞಾಪಕದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಸದೃಡರಾದಾಗ ಉಳಿದ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಸಂಘಕ್ಕೆ ಸಹಕಾರ ನೀಡುವ ಕಾರ್ಯ ಮಾಡಬೇಕು. ಕಳೆದ ಹಲವು ವರ್ಷಗಳಿಂದ ಬೆಂಗಳೂರಿನ…

Read More

UN NETWORKS ಕೊಣಾಜೆ: ಮಕ್ಕಳಿಗೆ ಶಾಲಾ ಪರಿಕರಗಳನ್ನು ನೀಡುವ ಸಂದರ್ಭ ಅದರ ಮೇಲಿನ ಜವಾಬ್ದಾರಿಯನ್ನೂ ತಿಳಿಸುವ ಕಾರ್ಯ ಆದಾಗ ಮಕ್ಕಳಿಗೆ ಅದರ ಮೌಲ್ಯದ ಅರಿವಾಗುತ್ತದೆ ಎಂದು ಮಂಗಳೂರು ವಿವಿ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ| ಬೋಜ ಪೂಜಾರಿ ಅಭಿಪ್ರಾಯಪಟ್ಟರು. ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದಿಂದ ರವಿವಾರ ನಡೆದ ಉಚಿತ ಪುಸ್ತಕ ವಿತರಣೆ ಹಾಗೂ ಭವಿಷ್ಯ ನಿರ್ಮಾಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಹಿಂದಿನ ಕಾಲದಲ್ಲಿ ಹೆತ್ತವರು ತಮ್ಮ ಮಕ್ಕಳಿಗೆ ಅಪರೂಪಕ್ಕೆ ಒಂದರಂತೆ ಪೆನ್ಸಿಲ್ ಸೇರಿದಂತೆ ಶಾಲಾ ಪರಿಕರಗಳನ್ನು ನೀಡುತ್ತಿದ್ದರು. ಆದರೆ ಇಂದು ದಿನಕ್ಕೊಂದು ಪೆನ್ಸಿಲ್ ಸೇರಿದಂತೆ ಶಾಲಾ ಪರಿಕರಗಳ ಮೇಲೆ ಮಕ್ಕಳಿಗೆ ಜವಾಬ್ದಾರಿ ಮತ್ತು ಮೌಲ್ಯದ ಅರಿವಿರುವುದಿಲ್ಲ. ಈ ನಿಟ್ಟಿನಲ್ಲಿ ಮಕ್ಕಳಿಗೆ ಯಾವುದೇ ವಸ್ತು ನೀಡಿದಾಗ ಅದರ ಮೌಲ್ಯವನ್ನು ತಿಳಿಸುವ ಕಾರ್ಯ ಆಗಬೇಕು ಎಂದ ಅವರು ಇಂದಿನ ವಿದ್ಯಾರ್ಥಿಗಳು ಚುರುಕಾಗಿದ್ದು, ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯ ಬಳಿಕ ಯಾವ ಕೋರ್ಸು ಆಯ್ಕೆ ಮಾಡಬೇಕು ಎನ್ನುವ ಗೊಂದಲ ನಿವಾರಣೆಗೆ ಇಂತಹ ಕಾರ್ಯಾಗಾರಗಳು ಪೂರಕ…

Read More