Author: UllalaVani

Kannada News From Coastal Karnataka

UN NETWORKS ಉಳ್ಳಾಲ: ತುಳುನಾಡಿನ ಜನರಲ್ಲಿ ನಾವೆಲ್ಲ ತುಳುವೆರ್ ಎನ್ನುವ ಭಾವನೆ ಮೂಡಿದಾಗ ಎಲ್ಲಾ ಜಾತಿ ಧರ್ಮದ ಜನರು ಸಾಮರಸ್ಯದೊಂದಿಗೆ ಸಹಬಾಳ್ವೆ ನಡೆಸಲು ಸಾಧ್ಯ ಎಂದು ಉಳ್ಳಾಲ ವಲಯ, ಬಂಟರ ಸಂಘ ಕಟ್ಟಡ ಸಮಿತಿ ಅಧ್ಯಕ್ಷ ಬಿ. ವಿವೇಕ್ ಶೆಟ್ಟಿ ಬೊಲ್ಯಗುತ್ತು ಅಭಿಪ್ರಾಯಪಟ್ಟರು. ಬಂಟರ ಸಂಘ ಉಳ್ಳಾಲ ವಲಯದ ಆಶ್ರಯದಲ್ಲಿ ಕೊಣಾಜೆ ಅಸೈಗೋಳಿಯ ಬಂಟರ ಭವನದಲ್ಲಿ ನಡೆದ ವಿವಿಧ ಜಾತಿ ಸಮುದಾಯಗಳ ಪ್ರಮುಖರ ಸಮಾಗಮ ತುಳುವೆರೆ ಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಹಾರಾಷ್ಟ್ರದ ಮುಂಬಯಿಯಂತಹ ಮಹಾನಗರದಲ್ಲಿ ತುಳುನಾಡು ಸೇರಿದಂತೆ ದೇಶ ವಿದೇಶದ ಜನರು ಉತ್ತಮ ಸಹಬಾಳ್ವೆ ನಡೆಸುತ್ತಿದ್ದಾರೆ. ಇದ್ಕೆ ಮುಖ್ಯ ಕಾರಣ ಅಲ್ಲಿ ಮರಾಠಿ ಭಾಷೆಯನ್ನಾಡುವ ಮೂಲ ನಿವಾಸಿಗರು ಮತ್ತು ಹೊರಗಿನಿಂದ ಬಂದಂತಹ ಜನರು ಹಾಲು ಸೆಕ್ಕರೆಯಂತೆ ಜೀವನ ಸಾಗಿಸುತ್ತಿದ್ದಾರೆ. ಅದರಲ್ಲೂ ಮುಂಬಯಿಯಲ್ಲಿ ವಾಸಿಸುವ ತುಳುವರು ನಾವು ಬಂಟರು, ಬಿಲ್ಲವರು, ಮೊಗವೀರರು ಎನ್ನದೇ ನಾವೆಲ್ಲ ತುಳುವರು ಎನ್ನುವ ಕಲ್ಪನೆ. ಈ ನಿಟ್ಟಿನಲ್ಲಿ ಇಂದಿನ ಯುವ ಜನರಲ್ಲೂ ಜಾತಿ ಧರ್ಮದ ತಾರತಮ್ಯ ಬಾರದೆ…

Read More

UN NETWORKS ಉಳ್ಳಾಲ: ಬಂಟರ ಭವನ ನಿರ್ಮಾಣವಾದರೆ ಸಾಲದು ಆರ್ಥಿಕವಾಗಿ ಹಿಂದುಳಿದ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಅದರ ಪ್ರಯೋಜನ ಮುಟ್ಟಿದರೆ ಮಾತ್ರ ನಾವು ನಿರ್ಮಿಸಿದ ಈ ಭವನ ಸಾರ್ಥಕವಾಗಲು ಸಾಧ್ಯ ಎಂದು ಉಳ್ಳಾಲ ವಲಯ ಬಂಟರ ಸಂಘದ ಕಟ್ಟಡ ಸಮಿತಿ ಅಧ್ಯಕ್ಷ ಹಾಗೂ ಮುಂಬೈಯ ಉದ್ಯಮಿ ಬಿ. ವಿವೇಕ್ ಶೆಟ್ಟಿ ಬೊಲ್ಯಗುತ್ತು ಅಭಿಪ್ರಾಯಪಟ್ಟರು. ಅವರು ಬಂಟರ ಸಂಘ ಉಳ್ಳಾಲ ವಲಯದ ಆಶ್ರಯದಲ್ಲಿ ರವಿವಾರ ನಡೆದ ಉಳ್ಳಾಲ ಬಂಟೋತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಮಾಜದಲ್ಲಿ ಅನೇಕ ಮಂದಿ ಆರ್ಥಿಕವಾಗಿ ನೊಂದವರು ಇದ್ದಾರೆ. ಆದರೆ ಅವರು ಸಮಾಜದ ಬಳಿ ಸಹಾಯ ಕೇಳಿಕೊಂಡು ಬರುವುದಿಲ್ಲ. ನಾವು ಅಂತವರನ್ನು ಗುರುತಿಸಿ ಅವರ ಆರೋಗ್ಯ, ಶೈಕ್ಷಣಿಕವಾಗಿ ಅಭಿವೃದ್ಧಿ ಮಾಡಿದರೆ ಮಾತ್ರ ಇಂತಹ ಸಮಾಜಕ್ಕೆ ನೀಡಿದ ಕೊಡುಗೆ ಸಾರ್ಥಕ್ಯವನ್ನು ಪಡೆಯಲು ಸಾಧ್ಯ ಎಂದ ಅವರು ಜೀವನದಲ್ಲಿ ನಿವೃತ್ತಿ ಎಂಬುದು ಇರಬಾರದು. ಅದೇ ರೀತಿ ಬಂಟರ ಭವನದ ಈ ಕಾರ್ಯಕ್ರಮ ಸಮಾರೋಪವಾಗದೆ ಇದು ಪ್ರಾರಂಭವಾಗಿದ್ದು, ಈ…

Read More

UN NETWORKS ಅಸೈಗೋಳಿ: ಬಂಟರು ಮೂಲತಃ ಕೃಷಿಕ ಮನೆತನವಾಗಿದ್ದರೂ ಹಂತ ಹಂತವಾಗಿ ಎಲ್ಲ ರಂಗದಲ್ಲಿ ಸಾಧನೆಗೈಯುತ್ತಾ ಮುಂಚೂಣಿಯಲ್ಲಿದ್ದಾರೆ. ಹಾಗಾಗಿ ಬಂಟ ಸಮಾಜಕ್ಕೆ ದೇಶ ವಿದೇಶದಲ್ಲಿ ಉತ್ತಮ ಹೆಸರು ಪ್ರಾಪ್ತವಾಗಿದೆ. ಅದು ಶಾಶ್ವತವಾಗಿ ಉಳಿಯಬೇಕಾದರೆ ಬಂಟ ಸಮಾಜದ ಪ್ರತಿಯೊಬ್ಬರು ಶೈಕ್ಷಣಿಕವಾಗಿ ಪ್ರಗತಿ ಕಾಣಬೇಕು.ಹಾಗೆಯೇ ತಲೆತಲಾಂತರದಿಂದ ಪಾಲಿಸಿಕೊಂಡು ಬಂದಿರುವ ಉತ್ತಮ ಸಂಪ್ರದಾಯ ಮುರಿಯದೆ ಮುಂದುವರಿಸಬೇಕು. ನಾವು ಎಷ್ಟೇ ಶ್ರೀಮಂತಿಕೆ ಹೊಂದಿದರೂ ನಮ್ಮ ಭವಿಷ್ಯವನ್ನು ರೂಪಿಸಿದ ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳುವ ಮೂಲಕ ನಮ್ಮದಾದ ಸಂಸ್ಕಾರ ಸಂಸ್ಕೃತಿ ಸಂಪ್ರದಾಯ ಶಾಶ್ವತವಾಗಿ ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮದು ಎಂದು ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಪಯ್ಯಡೆ ಅಭಿಪ್ರಾಯಪಟ್ಟರು. ಬಂಟರ ಸಂಘ ಉಳ್ಳಾಲ ವಲಯ ಕೊಣಾಜೆ ಅಸೈಗೋಳಿಯಲ್ಲಿ ಸುಮಾರು ಮೂರು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ನೂತನ “ಬಂಟರ ಭವನ’ವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.ನೂತನ ಬಂಟರ ಭವನದ ಮೂಲಕ ಬಂಟರ ಸಂಘ ಉಳ್ಳಾಲ ವಲಯ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದಂತಾಗಿದೆ. ಈ ಕನಸಿನ ಕಟ್ಟಡದಲ್ಲಿ ಬಹಳಷ್ಟು ಕಾರ್ಯಕ್ರಮಗಳು…

Read More

UN NETWORKS ಮಂಗಳೂರು :ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಅಭಿವೃಧ್ಧಿಗೆ ಅಥವಾ ವಿದ್ಯಾಭ್ಯಾಸಕ್ಕೆ ಸಮುದಾಯದ ಸಹಕಾರ ಪ್ರೋತ್ಸಾಹ ಅತೀ ಹೆಚ್ಚಾಗಿರುತ್ತದೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಯಾದ್ಯಂತ ಸಮುದಾಯದ ಶೈಕ್ಷಣಿಕ ಅಭಿವೃದ್ಧಿಯನ್ನು ಮಾತ್ರ ತನ್ನ ಧ್ಯೇಯವಾಗಿಸಿರುವ ಜಮೀಯ್ಯತ್ತುಲ್ ಫಲಾಹ್ ಸಂಸ್ಥೆಯು ಸಮುದಾಯದ ಶೈಕ್ಷಣಿಕಾಭಿವೃದ್ಧಿಗೆ ಸಹಕರಿಸುತ್ತದೆ ಎಂದು ಜಿಲ್ಲಾ ಜಮೀಯ್ಯತ್ತುಲ್ ಫಲಾಹ್ನ ಅಧ್ಯಕ್ಷರು ಹಾಗೂ ದ.ಕ.ಜಿ.ಪಂ ಸದಸ್ಯರು ಆದ ಹಾಜಿ. ಶಾಹುಲ್ ಹಮೀದ್‍ರವರು ಹೇಳಿದರು. ಅವರು ಇತ್ತೀಚಿಗೆ ಜಮೀಯ್ಯತ್ತುಲ್ ಫಲಾಹ್ ಮಂಗಳೂರು ತಾಲೂಕು ವತಿಯಿಂದ ಉಚಿತ ಪುಸ್ತಕ ವಿತರಣೆ ಮಾಡುತ್ತಾ ಮಾತನಾಡಿದ ಅವರು ಪ್ರಸಕ್ತ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾದ ಮುಸ್ಲಿಂ ವಿದ್ಯಾರ್ಥಿಗಳಲ್ಲಿ ತೆರ್ಗಡೆಯ ಶೇಕಡಾವಾರು ಹೆಚ್ಚಾಗಿರುವುದು ಸಂತಸ ತಂದಿದೆ. ಈ ನಿಟ್ಟಿನಲ್ಲಿ ದ.ಕ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆಯೊಂದಿಗೆ ಜಮೀಯತ್ತುಲ್ ಫಲಾಹ್ ಸಂಸ್ಥೆಯು ಶ್ಲಾಘನೀಯ ಕಾರ್ಯವೆಸಗಿದೆ ಎಂದರು . ಜಮೀಯ್ಯತ್ತುಲ್ ಫಲಾಹ್ ಮಂಗಳೂರು ತಾಲೂಕು ಅಧ್ಯಕ್ಷ ಹಾಜಿ ಇಬ್ರಾಹಿಂ ಕೋಡಿಜಾಲ್ ರವರು ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ವಿದೇಶಿ ಪ್ರತಿನಿಧಿಗಳಾದ ಮಹಮ್ಮದ್…

Read More

UN NETWORKS ಉಳ್ಳಾಲ: ಕೊಣಾಜೆ ಠಾಣಾ ವ್ಯಾಪ್ತಿಯ ನರಿಂಗಾನ ಗ್ರಾಮದ ಕೊಲ್ಲರಕೋಡಿ ಎಂಬಲ್ಲಿರುವ ಮದ್ರಸವೊಂದಕ್ಕೆ ಕಿಡಿಗೇಡಿಗಳು ಕಲ್ಲೆಸೆದು ಹಾನಿಗೊಳಿಸಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮಂಜೇಶ್ವರ ಮೂಲದ ಭರತ್ ಮತ್ತು ಮಿಥುನ್ ಎಂದು ಗುರುತಿಸಲಾಗಿದೆ. ಕೊಲ್ಲರಕೋಡಿಯ ನೂರುಲ್ ಉಲೂಮ್ ಮದ್ರಸಕ್ಕೆ ಕಿಡಿಗೇಡಿಗಳು ಶುಕ್ರವಾರ ಬೈಕ್‍ನಲ್ಲಿ ಆರೋಪಿಗಳು ಕಲ್ಲೆಸಿದ್ದರು. ಈ ಸಂದರ್ಭದಲ್ಲಿ ಮದ್ರಸದ ಬಳಿ ಇದ್ದ ಅಬ್ದುಲ್ ಮಜೀದ್ ಎಂಬವರು ಗೊಬ್ಬೆ ಹೊಡೆದಾಗ ಅವರಿಗೂ ಆರೋಪಿಗಳು ಬೆದರಿಕೆಯೊಡ್ಡಿ ಅಲ್ಲಿಂದ ಪರಾರಿಯಾಗಿದ್ದರು. ಬಳಿಕ ಸ್ಥಳೀಯರು ಒಟ್ಟು ಸೇರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ಮಂಜನಾಡಿ ಜಾತ್ರಾ ಉತ್ಸವಕ್ಕೆ ಬಂದು ಇದೇ ದಾರಿಯಲ್ಲಿ ಹಿಂದಿರುವಾಗ ಮದ್ರಸಕ್ಕೆ ಕಲ್ಲೆಸೆದು ಪರಾರಿಯಾಗಿದ್ದರು. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

UN NETWORKS ಉಳ್ಳಾಲ: ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ (ರಿ) ವತಿಯಿಂದ ದೇರಳಕಟ್ಟೆ ಪರಿಸರದಲ್ಲಿ ಸ್ವಚ್ಚತಾ ಅಭಿಯಾನ ನಡೆಯಿತು. ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ (ರಿ) ಅಧ್ಯಕ್ಷ ಹಾಜಿ ಇಲ್ಯಾಸ್ ಡಿ, ಪ್ರ.ಕಾರ್ಯದರ್ಶಿ ಅಮೀರ್ ಹುಸೈನ್, ಜೊತೆ ಕಾರ್ಯದರ್ಶಿ ಅಬ್ದುಲ್‌ ಮುತ್ತಲಿಬ್, ದೇರಳಕಟ್ಟೆ ಪಬ್ಲಿಕ್ ಸ್ಕೂಲ್‌ ಟ್ರಸ್ಟ್ ಅಧ್ಯಕ್ಷ ಹಾಜಿ‌ ಅಬೂಬಕ್ಕರ್ ನಾಟೆಕಲ್, ಬದ್ರಿಯ ಜುಮಾ‌ ಮಸೀದಿ ಅಧ್ಯಕ್ಷ ಹಾಜಿ ಅಬ್ಬಾಸ್ ಡಿ, ಉಪಾಧ್ಯಕ್ಷ ಅಬ್ದುಲ್‌ ಅಝೀಝ್ ಎನ್‌. ಕಾರ್ಯದರ್ಶಿ ಅಬ್ದುಲ್‌ ಆರ್ ಅಹ್ಮದ್, ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ನೌಫಲ್. ಬಿ, ಮುಂತಾದವರು ಸ್ವಚ್ಚತಾ ಅಭಿಯಾನದಲ್ಲಿ ಭಾಗವಹಿಸಿದವರು.

Read More

UN NETWORKS ಬೆಂಗಳೂರು : ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರು ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಗುರುವಾರ ಬೆಳಗ್ಗೆ 9 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಿದರು. 2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನು ಪಡೆದು ಜಯಗಳಿಸಿತ್ತು. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ 75 ವರ್ಷದ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಪ್ರಮಾಣ ವಚನ ಬೋಧಿಸಿದರು. ಹಸಿರು ಶಾಲು ಹೊದ್ದು ಮತ್ತೆ ಮುಖ್ಯಮಂತ್ರಿಯಾದ ಯಡಿಯೂರಪ್ಪ ಬಿಳಿಯ ಸಫಾರಿ ಸೂಟು ಧರಿಸಿದ್ದ ಬಿ.ಎಸ್.ಯಡಿಯೂರಪ್ಪ ಅವರು, ಹಸಿರು ಶಾಲು ಹೊದ್ದಿದ್ದಾರೆ. ದೇವರು ಮತ್ತು ರೈತರ ಹೆಸರಿನಲ್ಲಿ ಯಡಿಯೂರಪ್ಪ ಅವರು ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

Read More

UN NETWORKS ಉಳ್ಳಾಲ: ಯೆನೆಪೋಯ ವಿಶ್ವವಿದ್ಯಾನಿಲಯದ ಪರಿಸರ ಅಧ್ಯಯನ ಕೇಂದ್ರವು ವಿದ್ಯಾರ್ಥಿಗಳಲ್ಲಿ ಪಕ್ಷಿಗಳ ಸಂರಕ್ಷಣೆಗೆ ನೀರು, ಆಹಾರ ಹಾಗೂ ಮಣ್ಣಿನ ಗೂಡು ಅಳವಡಿಸುವ ಜಾಗೃತಿ ಕಾರ್ಯಕ್ರಮ ಯೆನೆಪೋಯ ವಿವಿಯಲ್ಲಿ ನಡೆಯಿತು. ಪರಿಸರ ಅಧ್ಯಯನ ಕೇಂದ್ರದ ಸಹಾಯಕ ನಿರ್ದೇಶಕಿ ಡಾ| ಭಾಗ್ಯ ಬಿ. ಶರ್ಮ ಭೂಮಿಯು ಕೇವಲ ಮಾನವರಿಗಲ್ಲ, ಎಲ್ಲಾ ಜೀವಿಗಳಿಗೆ ಸೇರಿದ್ದು ಹಾಗೂ ಮಾನವನು ವಿವಿಧ ರೀತಿಯ ಜೀವಿಗಳೊಂದಿಗೆ ಭೂಮಿಯನ್ನು ಹಂಚಿಕೊಂಡಿರುತ್ತಾನೆ ಎಂದರು. ಸಂಪನ್ಮೂಲ ವ್ಯಕ್ತಿ ನಿತ್ಯಾನಂದ ಶೆಟ್ಟಿ ಬದ್ಯಾರು ಮಾತನಾಡಿ ವಲಸೆ ಪಕ್ಷಿಗಳ ಸಂಖ್ಯೆಯನ್ನು ಕಡಿಮೆ ಮಾಡದೆ ಇದ್ದರೆ ನಮ್ಮ ಪರಿಸರದ ಸುತ್ತ ಹಕ್ಕಿಗಳ ಕಲರವವನ್ನು ಕೇಳಲು ಅಸಾದ್ಯ. ವಿನಾಶದ ಅಂಚಿಗೆ ಸಾಗುತ್ತಿರುವ ಪಕ್ಷಿಗಳನ್ನು ಕಾಪಾಡುವ ಜವಾಬ್ದಾರಿ ಬುದ್ಧಿವಂತ ಪ್ರಾಣಿಯದ ಮಾನವನಿಗೆ ಸೇರಿದ್ದು ಎಂದರು. ಸಂಪನ್ಮೂಲ ವ್ಯಕ್ತಿ ರಮ್ಯ ಮಾತನಾಡಿ ಪರಿಸರ ರಕ್ಷಣೆ ನಮ್ಮ ಹೊಣೆ ಪಕ್ಷಿ ಪತಂಗಗಳ ಉಳಿವಿಗೆ ನಮ್ಮ ಪಾತ್ರ ಮಹತ್ತರವಾದದ್ದು ಅದನ್ನು ಚೆನ್ನಾಗಿ ನಿಭಾಯಿಸಬೇಕು ಎಂದರು. ದಿನದ ಕಾರ್ಯಕ್ರಮವಾಗಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಮಣ್ಣಿನ ಮಡಕೆಯ ಕೃತಕ…

Read More

UN NETWORKS ದೇರಳಕಟ್ಟೆ: ನಿಟ್ಟೆ ವಿವಿ ಸಾರ್ವಜನಿಕ ಆರೋಗ್ಯ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು ಯುನೈಟೆಡ್ ಸ್ಟೇಟ್ಸ್‍ನ ಮಿನ್ನೇಸೋಟ ವಿಶ್ವವಿಶ್ವವಿದ್ಯಾನಿಲಯದಲ್ಲಿ ಸಾರ್ವಜನಿಕ ಆರೋಗ್ಯ ವಿಚಾರದಲ್ಲಿ ಮೂರು ವಾರಗಳ ನಡೆಯಲಿರುವ ಬೇಸಿಗೆ ಶಿಕ್ಷಣ ತರಭೇತಿಯಲ್ಲಿ ಭಾಗವಹಿಸಲಿದ್ದಾರೆ. ನಿಟ್ಟೆ ವಿಶ್ವವಿದ್ಯಾನಿಲಯ ಮತ್ತು ಯು.ಎಸ್.ನ ಮಿನ್ನೆಸೋಟ ವಿಶ್ವವಿದ್ಯಾನಿಲಯ ಶೈಕ್ಷಣಿಕ ಒಡಂಬಡಿಕೆಯಂತೆ ವಿವಿಯ ಸಾರ್ವಜನಿಕ ಆರೋಗ್ಯ ವಿಭಾಗದ ವಿದ್ಯಾರ್ಥಿಗಳ ನಾಲ್ಕನೇ ಬ್ಯಾಚ್ ಮೇ 21 ರಿಂದ ಜೂನ್ 9ರವರೆಗೆ ನಡೆಯುವ ತರಭೇತಿಯಲ್ಲಿ ಭಾಗವಹಿಸಲಿದ್ದಾರೆ. ಸಾರ್ವಜನಿಕ ಆರೋಗ್ಯದ ವಿಭಾಗದ ಡಾ| ಸುಗಂಧ ಬಿ.ಕೆ, ಡಾ| ನಿವೇದಿತಾ ಲೈಮಾಯಂ ಮತ್ತು ಡಾ| ಸುನೀಲಾ ದೀಕ್ಷಿತ್ ಅವರು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಜಾಗತಿಕ ಮಾನ್ಯತೆಯ ವಿಚಾರ ಮತ್ತು ತಂತ್ರಜ್ಞಾನದ ಬಳಕೆ, ಜಾಗತಿಕ ಆಹಾರ ವ್ಯವಸ್ಥೆಗಳ ಬಗ್ಗೆ ಮಂಡಿಸಿದ ಅಧ್ಯಯನಕ್ಕೆ ವಿದ್ಯಾರ್ಥಿವೇತನದಲ್ಲಿ ತರಭೇತಿಯನ್ನು ಪಡೆಯಲು ತೆರಳಲಿದ್ದು, ಮಿನ್ನೆಸೋಟ ವಿದ್ಯಾರ್ಥಿಗಳು ಚಳಿಗಾಲದ ಸಂದರ್ಭದಲ್ಲಿ ಮಂಗಳೂರಿನ ನಿಟ್ಟೆ ವಿವಿಗೆ ಭೇಟಿ ನೀಡಿ ಅಧ್ಯಯನ ನಡೆಸುತ್ತಿದ್ದಾರೆ. ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ| ಸತೀಶ್ ಕುಮಾರ್ ಭಂಡಾರಿ, ಕುಲಸಚಿವೆ ಡಾ|…

Read More

UN NETWORKS ಉಳ್ಳಾಲ: ಮಂಗಳೂರಿನ ಬೋಂದೇಲ್‍ನಲ್ಲಿ ಮತ ಎಣಿಕೆ ಒಂದೆಡೆಯಾದರೆ ಕ್ಷೇತ್ರದ ವಿಜಯ ಮಾಲೆ ಯಾರಿಗೆ, ಮತ್ತು ರಾಜ್ಯದಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೆ ಎನ್ನುವ ಕುತೂಹಲ ಕ್ಷೇತ್ರದ ಜನತೆಯಲ್ಲಿ ಕುತೂಹಲ. ಮಂಗಳೂರು ಕ್ಷೇತ್ರದ(ಉಳ್ಳಾಲ)ಲ್ಲಿ ಬೆಳಗ್ಗಿನಿಂದಲೇ ಜಂಕ್ಷನ್ ಪ್ರದೇಶಗಳಲ್ಲಿ ಜನರಿದೆ ಬಿಕೋ ಎನ್ನುತ್ತಿದ್ದರೆ, ಜನರೆಲ್ಲ ಟಿ.ವಿ. ಅಳವಡಿಸಿರುವ ಅಂಗಡಿಗಳಲ್ಲಿ, ತಮ್ಮ ತಮ್ಮ ಮನೆಗಳಲ್ಲಿ ಕುತೂಹಲದಿಂದ ಫಲಿತಾಂಶ ವೀಕ್ಷಣೆಯಲ್ಲಿ ತೊಡಗಿಸಿಕೊಂಡರು. ಮಂಗಳೂರು ಕ್ಷೇತ್ರದಲ್ಲಿ ಮಂಗಳವಾರ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿತ್ತು.ಬೋಳಿಯಾರ್, ಮುಡಿಪು, ದೇರಳಕಟ್ಟೆ, ತೊಕ್ಕೊಟ್ಟು, ಉಳ್ಳಾಲ ಸೇರಿದಂತೆ ಹೆಚ್ಚಿನ ಜಂಕ್ಷನ್‍ಗಳಲ್ಲಿ ಜನಸಂಖ್ಯೆ ವಿರಳವಾಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಅಂಗಡಿಗಳ ಮುಂದೆ ಜನರು ಕುತೂಹಲದಲ್ಲಿ ಟಿ.ವಿ.ಯನ್ನು ವೀಕ್ಷಿಸುವುದು ಕಂಡು ಬಂದರೆ, ಬೋಳಿಯಾರ್ ಪ್ರದೇಶದಲ್ಲಿ ಬೆಳಗ್ಗೆ 10 ಗಂಟೆಯಾದರೂ ಅಂಗಡಿಗಳು ತೆರೆದಿರಲಿಲ್ಲ.ವಾಹನ ಸಂಚಾರ ವಿರಳತೆ ಮತ್ತು ಜನರೋಡಾಟ ಕಡಿಮೆಯಾದ್ದರಿಂದ ರಿಕ್ಷಾ ಚಾಲಕರು ಬಾಡಿಗೆಯಿಲ್ಲದೆ ಮೊಬೈಲ್‍ಗಳಲ್ಲಿ ಫಲಿತಾಂಶ ವೀಕ್ಷಿಸುವುದು ಕಂಡು ಬಂತು.  ಚುನಾವಣಾ ಫಲಿತಾಂಶ ಕಾರ್ಯಕರ್ತರಲ್ಲಿ ನಿರಾಸಕ್ತಿ : ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಠಿಣ ಸ್ಪರ್ಧೆಯಿದೆ.…

Read More