UN NETWORKS
ಉಳ್ಳಾಲ: ಮತದಾನ ಕೇಂದ್ರಕ್ಕೆ ದ್ವಿಚಕ್ರ, ರಿಕ್ಷಾ ಸೇರಿದಂತೆ ಕಾರುಗಳಲ್ಲಿ ಮತ ಚಲಾಯಿಸಲು ಆಗಮಿಸುವುದು ಸರ್ವೇ ಸಾಮಾನ್ಯ. ಆದರೆ ಈ ಮತದಾನ ಕೇಂದ್ರದಲ್ಲಿ ಒಂದು ಪ್ರದೇಶದ ಜನರಿಗೆ ಮತ ಚಲಾಯಿಸ ಬೇಕಾದರೆ ಇವರಿಗೆ ದೋಣಿಯೇ ಸಂಪರ್ಕ ಸೇತುವೆ .
ಇದು ಮಂಗಳೂರು ವಿಧಾನಸಭಾ ಕ್ಷೇತ್ರದ ಪಾವೂರು ಉಳಿಯ ನಿವಾಸಿಗಳ ಸ್ಥಿತಿ. ನೇತ್ರಾವತಿ ನದಿಯ ನಡುಗುಡ್ಡೆಯಾಗಿರುವ ಉಳಿಯ ಕುದ್ರುವಿನಲ್ಲಿ ಸುಮಾರು 51 ಮನೆಗಳಿದ್ದು, 150ಕ್ಕೂ ಹೆಚ್ಚು ಮತದಾರರಿದ್ದಾರೆ ಮತ ಚಲಾಯಿಸಲಿ ಇವರು ದೋಣಿಗಳನ್ನೇ ಆಶ್ರಯಿಸಬೇಕಾಗಿದ್ದು, ಶನಿವಾರ ಬೆಳಗ್ಗೆಯೇ ಇಲ್ಲಿನ ಹೆಚ್ಚಿನ ಮತದಾರರು ಮತದಾನ ಕೇಂದ್ರ ಸಂಕ್ಯೆ 61ರ ಗಾಡಿಗದ್ದೆ ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಗೆ ದೋಣಿಯಲ್ಲಿ ಆಗಮಿಸಿ ಮತ ಚಲಾಯಿಸಿದರು.
ಮತದಾನ ಕೇಂದ್ರಕ್ಕೆ ಮತದಾರರಿಗೆ ಸಾರಿಗೆ ವ್ಯವಸ್ಥೆಯನ್ನು ವಿವಿಧ ರಾಜಕೀಯ ಪಕ್ಷಗಳು ಮಾಡಿದಂತೆ ಇಲ್ಲಿಯೂ ದೋಣಿಯ ವ್ಯವಸ್ಥೆಯನ್ನು ರಾಜಕೀಯ ಪಕ್ಷವೊಂದು ವಹಿಸಿಕೊಂಡಿದೆ. ದೋಣಿಯಿಂದ ಇಳಿದು ಸುಮಾರು ಒಂದು ಕಿ.ಮೀ. ದಾರಿಯನ್ನು ರಸ್ತೆಯಲ್ಲಿ ಕ್ರಮಿಸಲಿದ್ದು, ಇಲ್ಲಿನ ಮತದಾರರಿಗೆ ಕಾರಿನ ವ್ಯವಸ್ಥೆಯನ್ನು ಮಾಡಿದ್ದಾರೆ.


