UN NETWORKS
ಉಳ್ಳಾಲ: ಮಿಝೋರಾಂನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸಮ್ಮಿಶ್ರ ಸರಕಾರ ನಡೆಸುತ್ತಿದ್ದು ಇತರ ಭಾಗದಲ್ಲಿ ಬದ್ಧ ವೈರಿಯಂತೆ ನಾಟಕ ಮಾಡುತ್ತಿದೆ. ಜನತೆ ಅದನ್ನು ಅರ್ಥ ಮಾಡಿಕೊಂಡು ಪ್ರಾದೇಶಿಕ ಪಕ್ಷದತ್ತ ಒಲವು ಹರಿಸಲಿದ್ದಾರೆ ಎಂದು ಮಂಗಳೂರು ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಕೆ. ಅಶ್ರಫ್ ಹೇಳಿದರು.
ಉಳ್ಳಾಲ ಮಾಸ್ತಿಕಟ್ಟೆಯಲ್ಲಿರುವ ಜೆಡಿಎಸ್ ಚುನಾವಣಾ ಕಾರ್ಯಾಲಯದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಉಳ್ಳಾಲದಲ್ಲಿ ನಿರಂತರವಾವಗಿ ಗಲಭೆಯ ಮೂಲಕ ಸಾಮರಸ್ಯ ಕದಡುತ್ತಿರುವುದರಿಂದ ನೊಂದವರ ಹಾಗೂ ಜೈಲುಪಾಲಾದವರ ನೋವು ಸಾಕಷ್ಟಿದೆ. ಅವೆಲ್ಲದ್ದಕ್ಕೂ ಜೆಡಿಎಸ್ ಅಧಿಕಾರಕ್ಕೆ ಬಂದರೆ ನ್ಯಾಯ ಕೊಡಲಿದ್ದೇವೆ ಎಂದರು.


