UN NETWORKS ಹರೇಕಳ : ಕ್ಷೇತ್ರದ ಉದ್ದಗಲಕ್ಕೂ ಪ್ರತಿಯೊಂದು ಬೂತ್ ಮಟ್ಟದ ಕಾರ್ಯಕರ್ತರು ಸ್ಥಳೀಯ ಸಂಸ್ಥೆಯ ಸದಸ್ಯರು ಹಾಗೂ ಹಿತೈಷಿಗಳು ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಹಗಲಿರುಳು ಕಾಂಗ್ರೆಸ್ ಪಕ್ಷ ಮತ್ತು ಯು.ಟಿ.ಖಾದರ್ ಅವರ ಪರವಾಗಿ ದುಡಿಯುತ್ತಿರುವುದು ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವನ್ನು ಖಚಿತಗೊಳಿಸಿದೆ ಎಂದು ಹರೇಕಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದೆಬ್ಬೇಲಿ ಮಹಾಬಲ ಹೆಗ್ಡೆ ಅಭಿಪ್ರಾಯಪಟ್ಟರು. ಹರೇಕಳ ಗ್ರಾಮ ವ್ಯಾಪ್ತಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೀವಾಲ ಅವರ ನೇತೃತ್ವದಲ್ಲಿ ಮಂಗಳೂರು ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಸಚಿವ ಯು.ಟಿ.ಖಾದರ್ ಅವರ ಪರವಾಗಿ ಮತಯಾಚನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದರು. ಕಳೆದ ಆವಧಿಯಲ್ಲಿ ಶಾಸಕರಾಗಿ ಮತ್ತು ರಾಜ್ಯದ ಸಚಿವರಾಗಿ ಆರೋಗ್ಯ ಮತ್ತು ಆಹಾರ ಇಲಾಖೆಯನ್ನು ಅತ್ಯುತ್ತಮವಾಗಿ ನಿರ್ವಹಿಸಿ ಹಲವಾರು ಜನೋಪಯೋಗಿ ವಿನೂತನವಾದ ಕಾರ್ಯಕ್ರಮಗಳನ್ನು ಜಾರಿಗೆ ತಂದು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿಗೆ ಪಾತ್ರರಾಗಿದ್ದು, ರಾಜ್ಯದ ಉದ್ದಗಲಕ್ಕೂ ತಮ್ಮ ಉತ್ತಮವಾದ ಹೆಸರನ್ನು ಮೂಡಿಸಿದ್ದಾರೆ. ರಾಷ್ಟ್ರಮಟ್ಟದ ಗಮನಸೆಳೆದ ಖಾತೆ : ಆರೋಗ್ಯ ಸಚಿವರಾಗಿದ್ದಾಗ ಎಂಡೋಸಂತ್ರಸ್ಥರಿಗೆ ಪ್ಯಾಕೇಜ್,…
Author: UllalaVani
UN NETWORKS ಪೆರ್ಮನ್ನೂರು: ಮಂಗಳೂರು ವಿಧಾನ ಸಭಾ ಕ್ಷೇತ್ರದ ಬಿ.ಜೆ.ಪಿ. ಅಭ್ಯರ್ಥಿ ಸಂತೋಷ್ ಕುಮಾರ್ ರೈ ಬೋಳಿಯಾರ್ ರವರು ಪೆರ್ಮನ್ನೂರು ಗ್ರಾಮದ ಕೆರೆಬೈಲ್ ಪರಿಸರದಲ್ಲಿ ಮನೆ ಮನೆ ಬೇಟಿ ನೀಡಿ ಮತಯಾಚಿಸಿದರು. ಈ ಸಂಧರ್ಭದಲ್ಲಿ ಮಹಾರಾಷ್ಟ್ರ ಸಂಸದರಾದ ಗೋಪಾಲ್ ಶೆಟ್ಟಿ, ಬಿ.ಜೆ.ಪಿ. ಮುಂಬಯಿ ವಕ್ತಾರರಾದ ನಿರಂಜನ್ ಶೆಟ್ಟಿ, ಹರೀಶ್ ಶೆಟ್ಟಿ, ನಗರ ಸಭೆ ಸದಸ್ಯೆ ಸರಿತಾ ಜೀವನ್, ಕ್ಷೇತ್ರ ಉಪಾಧ್ಯಕ್ಷರಾದ ಯಶವಂತ್ ಅಮೀನ್, ಹರಿಯಪ್ಪ ಸಾಲ್ಯಾನ್, ಮಾಧ್ಯಮ ಸಂಚಾಲಕರಾದ ಜೀವನ್ ಕುಮಾರ್ ತೊಕ್ಕೋಟು, ಬಾಲಕೃಷ್ಣ ಶೆಟ್ಟಿ ಉಳ್ಳಾಲ ಗುತ್ತು, ನಾರಾಯಣ ಬಿ.,ಲೋಕೇಶ್ ಶೆಟ್ಟಿ, ರೋಹಿತಾಕ್ಷ,ರಾಜೇಶ್ ಯು.ಬಿ., ಪ್ರದೀಪ್, ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.
UN NETWORKS ಕುತ್ತಾರ್: ಮಾಜಿ ಕೇಂದ್ರ ಸಚಿವರು,ರಾಜ್ಯಸಭಾ ಸದಸ್ಯರಾದ ಸೆಲ್ಜಾ ಕುಮಾರಿ ಹರಿಯಾಣ ಅವರು ಮಂಗಳೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಯು.ಟಿ.ಖಾದರ್ ಪರ ದೇರಳಕಟ್ಟೆಯ ಕುತ್ತಾರ್ ಜಂಕ್ಷನ್ ನಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದರು.ಈ ಸಂಧರ್ಭ ಯು.ಟಿ.ಖಾದರ್ ಹಾಗೂ ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು ಭಾಗವಹಿಸಿದರು.
UN NETWORKS ಜೆದ್ದಾ: ಸೌದಿ ಅರೇಬಿಯದ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿ ಕಾಂಗ್ರೆಸ್ ನ ಪತಾಕೆ ಹಾರಿಸಿದ ಕೀರ್ತಿ ಸೌದಿ ಅರೇಬಿಯದ ವಾಣಿಜ್ಯ ನಗರ ಜಿದ್ದಾಕ್ಕೆ ಸಲ್ಲುತ್ತದೆ. ಮಾತ್ರವಲ್ಲ ಸಾರ್ವತ್ರಿಕ ಚುನಾವಣೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ಇಷ್ಟೊಂದು ಪ್ರಮಾಣದಲ್ಲಿ ಮತದಾನ ಮಾಡಲು ತಾಯ್ನಾಡಿಗೆ ತೆರಳುತ್ತಿದ್ದು ಅದರಲ್ಲೂ ಮುಖ್ಯವಾಗಿ ಕರಾವಳಿ ಭಾಗದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಈಗಾಗಲೇ ಊರಿಗೆ ತಲುಪಿದ್ದು ಚುನವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಜೆದ್ದಾದಿಂದ ಶಕೀಲ್ ದೇರಳಕಟ್ಟೆ ನೇತ್ರತ್ವದ ಮೊದಲ ತಂಡವು ಇಂದು ತಾಯ್ನಾಡಿಗೆ ತಲುಪಲಿದ್ದು ಇನ್ನೂ ಇಂತಹ ಅನೇಕ ತಂಡಗಳು ಸೌದಿ ಅರೇಬಿಯದಿಂದ ಅತೀ ಶೀಘ್ರದಲ್ಲಿ ಭಾರತಕ್ಕೆ ಬಂದಿಳಿಯಳಿದೆ.
UN NETWORKS ಉಳ್ಳಾಲ: ಬಿಜೆಪಿ ದೇಶಕ್ಕೆ ಮಾರಕ. ಕರ್ನಾಟಕ ವಿಧಾನಸಭೆ ಫಲಿತಾಂಶ ಮುಂದಿನ ಲೋಕಸಭೆ ಚುನಾವಣೆಗೆ ಲಾಭ ತರಲಿದೆ. ಅದಕ್ಕಾಗಿ ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬರಲು ಎಂದಿಗೂ ಅವಕಾಶ ಮಾಡಿಕೊಡಬಾರದು ಎಂದು ಸಿಪಿಎಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ ಹೇಳಿದರು. ತೊಕ್ಕೊಟ್ಟು ಬಸ್ಸು ನಿಲ್ದಾಣದಲ್ಲಿ ಗುರುವಾರ ನಡೆದ ಸಿಪಿಎಂ ಪಕ್ಷದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ದೇಶಾದ್ಯಂತ ಬಿಜೆಪಿ ಸರಕಾರದ ವಿರುದ್ದ ಜನ ಏಳಬೇಕಿದೆ. ಅತ್ಯಾಚಾರ, ಅನಾಚಾರಗಳಲ್ಲೇ ಬಿಜೆಪಿ ಸರಕಾರ ತೊಡಗಿಸಿಕೊಂಡಿದೆ. ಬಿಜೆಪಿಯಂತೆಯೇ ರಾಜ್ಯದ ಕಾಂಗ್ರೆಸ್ ಪಕ್ಷಕ್ಕೆ ಸಾಮಾಜಿಕ ಬದ್ಧತೆ ಇಲ್ಲದಂತಾಗಿದೆ. ಸಿದ್ದ ರಾಮಯ್ಯ ನವರ ನೀತಿ ಬಿಜೆಪಿಗೆ ಹೊರತಾಗಿಲ್ಲ. ಕಾರ್ಪೊರೇಟ್ ಕಂಪೆನಿಗಳಿಗೆ ಸರಕಾರ ಸಹಕರಿಸುತ್ತಾ ಬಂದಿದೆ. ನಿರುದ್ಯೋಗ ಸಮಸ್ಯೆ ಅಗಾಧ ಪ್ರಮಾಣದಲ್ಲಿದೆ, ಭೂಮಿಯ ಪ್ರಶ್ನೆ ಬಹುದೊಡ್ಡ ಸಮಸ್ಯೆಯಾಗಿತ್ತು. ಅದಕ್ಕಾಗಿ ಸಿಪಿಎಂ 4,500 ಕಿ.ಮೀ ಪಾದಯಾತ್ರೆ ನಡೆಸಿ ಹೋರಾಟದ ಫಲವಾಗಿ ಜನರಿಗೆ ಹಕ್ಕುಪತ್ರ ಸಿಕ್ಕಿದೆ. ಕನಿಷ್ಟ ಕೂಲಿ ವಿಚಾರದ ಲ್ಲಿಯೂ ಸಿಪಿಎಂ ಹೋರಾಟ ನಡೆಸಿತ್ತು. ಮಹಾದಾಯಿ ನೀರಿನ ವಿಚಾರ, ಪಡಿತರ…
UN NETWORKS ಉಳ್ಳಾಲ: ಮಂಗಳೂರಿನಿಂದ ಸಕಲೇಶಪುರಕ್ಕೆ ತೆರಳುತ್ತಿದ್ದ ಇನೋವಾ ಕಾರು ಮೂಡಿಗೆರೆ ತಾಲೂಕಿನ ಕೃಷ್ಣಾಪುರದ ರಾ.ಹೆ. ಯಲ್ಲಿ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಆರು ಮಂದಿಯನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮೃತರನ್ನು ಮಂಜನಾಡಿ ಗ್ರಾಮದ ನಾಟೆಕಲ್‍ನ ಅಸ್ಮಾ(50) ಹಾಗೂ ಸೌದಾ (48) ಎಂದು ಗುರುತಿಸಲಾಗಿದೆ. ನಾಟೆಕಲ್‍ನಿಂದ ಸಕಲೆಶಪುರಕ್ಕೆ ತಮ್ಮ ಕುಟುಂಬದೊಂದಿಗೆ ತೆರಳುತ್ತಿದ್ದಾಗ ಮೂಡಿಗೆರೆಯಿಂದ ಗೋಣಿಬೀಡು ಕಡೆಗೆ ಸಾಗುತ್ತಿದ್ದ ಲಾರಿ ಕೃಷ್ಣಾಪುರದ ಬಳಿ ಮುಖಾಮುಖಿ ಢಿಕ್ಕಿ ಹೊಡೆದಿದ್ದು ಅಪಘಾತದ ಪರಿಣಾಮ ಇಬ್ಬರು ಸ್ತಳದಲ್ಲೇ ಸಾವನ್ನಪ್ಪಿದರು. ಗಂಭೀರ ಗಾಯಗೊಂಡಿರುವ ಇಸ್ಮಾಯಿಲ್(60), ತಮ್ಸಿಯಾ(40), ಅಯಾನ್(10), ತನೀಸ್(16), ಸೀದಾ(16) ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
UN NETWORKS ಉಳ್ಳಾಲ: ಸಾಮಾಜಿಕ ಜಾಲತಾಣಗಳಲ್ಲಿ ವಿರೋಧಿಗಳು ಮಾಡುತ್ತಿರುವ ಅಪಪ್ರಚಾರಗಳಿಗೆ ಜನ ಕಿವಿಗೊಡದೆ, ಉಳ್ಳಾಲ ಭಾಗದಲ್ಲಿ ಆಗಿರುವ ಅಭಿವೃದ್ಧಿ ಹಾಗೂ ಮುಂದಿನ ಅಭಿವೃದ್ಧಿಗಾಗಿ ಜನ ಕಾಂಗ್ರೆಸ್ ನ ಕೈ ಹಿಡಿಯಲಿದ್ದಾರೆ ಎಂದು ಸಚಿವ ಯು.ಟಿ.ಖಾದರ್ ಹೇಳಿದರು. ಕೆ.ಸಿ.ರೋಡಿನಿಂದ ಕೆ.ಸಿನಗರವೆರೆಗೆ ಮನೆ ಮನೆಗೆ ನಡೆದುಕೊಂಡು ತೆರಳಿ ಪ್ರಚಾರ ಕಾರ್ಯ ನಡೆಸಿದರು. ಅಪಪ್ರಚಾರಗಳಿಂದ ಅಭಿವೃದ್ಧಿಯನ್ನು ಸೋಲಿಸಲು ಅಸಾಧ್ಯ. ಕಳೆದ ಐದು ವರ್ಷಗಳಲ್ಲಿ ಕ್ಷೇತ್ರ ವ್ಯಾಪ್ತಿಯ ಜನತೆಗೆ ಮಾಡಿರುವ ಅಭಿವೃದ್ಧಿಯ ಕಾರ್ಯಗಳು ನೆನಪಿದೆ. ಪ್ರಚಾರ ಸಂದರ್ಭ ಎಲ್ಲರೂ ಆಶೀರ್ವಾದಿಸುತ್ತಲೇ ಬಂದಿದ್ದಾರೆ. ಇನ್ನಷ್ಟು ಅಭಿವೃದ್ಧಿ ನಡೆಯಲಿರುವ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಜನತೆ ಕಾಂಗ್ರೆಸನ್ನು ಬೆಂಬಲಿಸಲಿದ್ದಾರೆ ಎಂದರು.ಇದೇ ಸಂಧರ್ಭ ಕೆ.ಸಿ ನಗರದ ಫುಟ್ಬಾಲ್ ಆಟವಾಡುತ್ತಿದ್ದ ಯುವಕರ ಜೊತೆಗೆ ತಾವು ಬೆರೆತರು ಈ ವೇಳೆ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.
UN NETWORKS ಉಳ್ಳಾಲ : ಬಿಜೆಪಿ ಮಹಿಳಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಳ್ಳಾಲ ಮಾಸ್ತಿಕಟ್ಟೆಯಲ್ಲಿ ಮತಯಾಚನೆ ನಡೆಸಿದರು.ನಮಿತಾ ಶ್ಯಾಂ,ಲಲಿತಾ ಸುಂದರ್, ಧನಲಕ್ಷ್ಮಿಗಟ್ಟಿ, ರಾಜೀವಿ ಕೆಂಪುಮಣ್ಣು, ರೂಪಾ ಶೆಟ್ಟಿ, ಮಹಾಲಕ್ಷ್ಮಿ, ಮುಂತಾದವರು ಪಾಲ್ಗೊಂಡರು.
UN NETWORKS ತೊಕ್ಕೊಟ್ಟು: ಮಂಗಳೂರು ಕ್ಷೇತ್ರದಲ್ಲಿ ಜನರ ಸಮಸ್ಯೆಗಳಿಗೆ ನಿರಂತರವಾಗಿ ಧ್ವನಿ ಎತ್ತಿದ ಸಿಪಿಎಂ ಯುವ ಅಭ್ಯರ್ಥಿಯನ್ನು ಮತದಾರರು ಬೆಂಬಲಿಸಲಿದ್ದಾರೆ ಎಂದು ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್ ಹೇಳಿದ್ದಾರೆ. ಅವರು ತೊಕ್ಕೊಟ್ಟು ಒಳಪೇಟೆಯ ಸಿಪಿಎಂ ಕಚೇರಿಯಲ್ಲಿ ಬುಧವಾರ ನಡೆದ ಪ್ರಣಾಳಿಕೆ ಬಿಡುಗಡೆ ನಡೆಸಿ ಮಾತನಾಡಿದರು. ಸಿಪಿಎಂ ನಿರಂತರವಾಗಿ ಜನಸಾಮಾನ್ಯರ ಸಮಸ್ಯೆಗಳ ಕುರಿತು ಧ್ವನಿ ಎತ್ತುತ್ತಾ ಬಂದಿದೆ. ಕುಡಿಯುವ ನೀರು, ರೇಷನ್ ಕಾರ್ಡು ಸಮಸ್ಯೆ, ಸರಕಾರಿ ಬಸ್, ಕಡಲ್ಕೊರೆತ ಪರಿಹಾರ, ಹಕ್ಕುಪತ್ರ ವಿಚಾರಗಳ ಕುರಿತು ಮಂಗಳೂರು ಕ್ಷೇತ್ರದಲ್ಲಿ ಜನಪರ ಹೋರಾಟ ನಡೆಸಿದೆ. ಪ್ರಮುಖವಾಗಿ ಬೀಡಿ ಕಾರ್ಮಿಕರ ಸಮಸ್ಯೆಗಳಿಗೆ , ಕಟ್ಟಡ ಕಾರ್ಮಿಕರ ಸವಲತ್ತುಗಳಿಗೆ ಹೋರಾಟವನ್ನು ನಡೆಸುತ್ತಲೇ ಇದೆ. ಕ್ಷೇತ್ರದಲ್ಲಿ ಒಂದು ಬಾರಿ ಬಿಜೆಪಿ ಮತ್ತು ಎರಡು ಬಾರಿ ಸಿಪಿಎಂ ಶಾಸಕರು ಆಳ್ವಿಕೆ ನಡೆಸಿದ್ದಾರೆ. ಆದರೆ ದಶಕಗಳ ಸಮಸ್ಯೆಯಾಗಿರುವ ಕುಡಿಯುವ ನೀರು ಪೂರೈಸಲು ಕಾಂಗ್ರೆಸ್ ಶಾಸಕರಿಗೆ ಈವರೆಗೆ ಸಾಧ್ಯವಾಗಿಲ್ಲ. ಮನೆ ನಿವೇಶನಕ್ಕೆ ಆರ್ಥಿಕ ಸಾಲ, ಸರಕಾರಿ ಜಾಗದಲ್ಲಿ ನಿರಾಶ್ರಿತರಿಗೆ ನಿವೇಶನವನ್ನಾಗಲಿ ನೀಡಿಲ್ಲ.…
UN NETWORKS ಉಳ್ಳಾಲ: ಬಿಜೆಪಿ ಪಕ್ಷಕ್ಕಿಂತ ಕಾಂಗ್ರೆಸ್ ದೊಡ್ಡ ಕೋಮುವಾದಿ ಪಕ್ಷವಾಗಿದ್ದು, ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಮಹಾನ್ ನಾಯಕರೇ ಕಾಂಗ್ರೆಸ್ಸನ್ನು ಸೋಲಿಸಲಿದ್ದಾರೆ ಎಂದು ಜಾತ್ಯಾತೀತ ಜನತಾ ದಳದ ಜಿಲ್ಲಾ ಅಧ್ಯಕ್ಷ ಮಹಮ್ಮದ್ ಕುಂಞ ಹೇಳಿದರು. ಅವರು ಕೆ.ಸಿ ರೋಡಿನಲ್ಲಿ ಸೋಮವಾರ ಜರಗಿದ ಜಾತ್ಯಾತೀತ ಜನತಾದಳದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಚಿವ ಖಾದರ್ ಅವರ ದುರಹಂಕಾರದ ನಡೆಯಿಂದ ಜನಸಾಮಾನ್ಯರ ನಾಯಕ ಅಶ್ರಫ್ ಉಳ್ಳಾಲ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಾಧ್ಯವಾಗಿದೆ. ಜನಸಮಾನ್ಯರಿಗೆ ಸಿಗುವ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದಲ್ಲಿ ಮಾತ್ರ ಜನಸಾಮಾನ್ಯರಿಗೆ ರಾಜ್ಯದಲ್ಲಿ ಉಳಿಗಾಲವಿದೆ. ಕಾನೂನು ಸುವ್ಯವಸ್ಥೆ ನೆಲೆಯಾಗಲು ರಾಜ್ಯದಲ್ಲಿ ಜೆಡಿಎಸ್ ಬರಬೇಕಿದೆ. ಉಳ್ಳಾಲದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ತಮ್ಮ ಲಾಭಕ್ಕಾಗಿ ಬ್ಯಾಟಿಂಗ್ ನಡೆಸುತ್ತಿರುವ ವೈದ್ಯಕೀಯ ಕಾಲೇಜಿನ ಚೇರ್‍ಮೆನ್ ಸಹಿತ ಹಣವಂತರು ಜೆಡಿಎಸ್ ಅಭ್ಯರ್ಥಿಗೆ ಎಚ್ಚರಿಕೆ ನೀಡುವುದನ್ನು ಬಿಟ್ಟುಬಿಡಿ. ಅಮಾಯಕ ಯುವಕರನ್ನು ಜೈಲಿಗೆ ಹಾಕುವ ಕಾಂಗ್ರೆಸ್ಸಿನವರಿಗೆ ಜಿಲ್ಲೆಗೆ ಬೆಂಕಿ ಹಚ್ಚಲು ಮುಂದಾದ ಸಂಸದರ ವಿರುದ್ಧ ಪೆಟ್ಟಿ ಕೇಸು ಹಾಕಲು ಸಾಧ್ಯವಾಗಿಲ್ಲ. ಪಂಚಾಯತ್ ಅಧ್ಯಕ್ಷನನ್ನು ಹಾಡಹಗಲೇ ಕೊಂದವರನ್ನು…

