UN NETWORKS
ಮಂಗಳೂರು : ಕರ್ನಾಟಕ ವಿಧಾನ ಸಭೆ ಚುನಾವಣೆಯ ದಕ ಜಿಲ್ಲೆ ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದ ಎಲ್ಲಾ ಫಲಿತಾಂಶ ಹೊರ ಬಿದ್ದಿದ್ದು , ಬಿಜೆಪಿ ಭರ್ಜರಿ ಜಯ ಸಾಧಿಸಿದೆ.
ಮಂಗಳೂರು (ಹಳೇ ಉಳ್ಳಾಲ )ಕ್ಷೇತ್ರ ಹೊರತು ಪಡಿಸಿ ಉಳಿದೆಲ್ಲ ಕಡೆ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಕುಂದಾಪುರ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಗೆಲುವನ್ನು ಸಾಧಿಸಿದ್ದಾರೆ.
ಇದು ಕರಾವಳಿ ಜಿಲ್ಲೆಯಲ್ಲಿಯೇ ದಾಖಲೆಯ ಗೆಲುವು ಆಗಿದೆ. ಮಂಗಳೂರು ದಕ್ಷಿಣದಲ್ಲಿ ವೆದವ್ಯಾಸ ಕಾಮತ್ 9,248 ಮತಗಳ ಅಂತರ ಮಂಗಳೂರು ಉತ್ತರ ಡಾ ಭರತ್ ಶೆಟ್ಟಿ 23,384 ಮತಗಳ ಅಂತರ ಮಂಗಳೂರು (ಉಳ್ಳಾಲ) ಯುಟಿ ಖಾದರ್ 15,866 ಮತಗಳ ಅಂತರ ಮೂಡಬಿದಿರೆ ಉಮಾನಾಥ ಕೋಟ್ಯಾನ್ 25964 ಮತಗಳ ಅಂತರ ಬಂಟ್ವಾಳ ರಾಜೇಶ್ ನೈಕ್ 8541 ಮತಗಳ ಅಂತರ ಬೆಳ್ತಂಗಡಿ ಹರೀಶ್ ಪೂಂಜ 7836 ಮತಗಳ ಅಂತರ ಪುತ್ತೂರು ಸಂಜೀವ ಸುಳ್ಯ ಎಸ್ ಅಂಗಾರ 11712 ಮತಗಳ ಅಂತರದಿಂದದಿಂದ ಗೆಲುವು ಸಾಧಿಸಿದ್ದಾರೆ.


