ನರಿಂಗಾನ: ಮೂಗಿನ ಅಲರ್ಜಿ, ಸೈನಸೈಟಿಸ್ ಹಾಗೂ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ಸಾರ್ವಜನಿಕರಿಗಾಗಿ ಯೆನೆಪೋಯ ಆಯುರ್ವೇದ ಆಸ್ಪತ್ರೆಯಲ್ಲಿ ಉಚಿತ ಮೂಗಿನ ಅಲರ್ಜಿ ಮತ್ತು ಸೈನಸೈಟಿಸ್ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರವು ಜುಲೈ 2 ಹಾಗೂ ಜುಲೈ 4, 2026ರಂದು ಬೆಳಿಗ್ಗೆ 9.00ರಿಂದ ಸಂಜೆ 4.00ರವರೆಗೆ ನಡೆಯಲಿದೆ. ಯೆನೆಪೋಯದ ಆಯುರ್ವೇದ ಸೇವೆಗಳಲ್ಲಿ ಪಂಚಕರ್ಮ ಸೇರಿದಂತೆ ವಿವಿಧ ಚಿಕಿತ್ಸೆಗಳು ಲಭ್ಯವಿವೆ.

ಆಗಾಗ್ಗೆ ಸೀನು ಬರುವುದು, ಮೂಗು ಕಟ್ಟಿಕೊಳ್ಳುವುದು, ಮೂಗಿನಿಂದ ನೀರು ಹರಿಯುವುದು, ಸೈನಸ್ ಸಮಸ್ಯೆ ಹಾಗೂ ಅದರಿಂದ ಉಂಟಾಗುವ ತಲೆನೋವಿನಿಂದ ಬಳಲುತ್ತಿರುವವರು ಈ ಶಿಬಿರದಲ್ಲಿ ಭಾಗವಹಿಸಿ ತಜ್ಞ ಆಯುರ್ವೇದ ವೈದ್ಯರಿಂದ ಸಲಹೆ ಮತ್ತು ಚಿಕಿತ್ಸೆಯನ್ನು ಪಡೆಯಬಹುದು.
ಶಿಬಿರದಲ್ಲಿ ಪಂಚಕರ್ಮ (ನಸ್ಯ) ಚಿಕಿತ್ಸೆ ಹಾಗೂ ಒಂದು ವಾರದ ಔಷಧಿಗಳನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ. ಸಾರ್ವಜನಿಕರು ಈ ವಿಶೇಷ ಆರೋಗ್ಯ ಶಿಬಿರದ ಸದುಪಯೋಗ ಪಡೆದು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಸ್ಥಳ: ಯೆನೆಪೋಯ ಆಯುರ್ವೇದ ಆಸ್ಪತ್ರೆ,ನರಿಂಗಾನ
ದಿನಾಂಕ: 02-07-2026 ಹಾಗೂ 04-07-2026
ಸಮಯ: ಬೆಳಿಗ್ಗೆ 9.00 ರಿಂದ ಸಂಜೆ 4.00 ರವರೆಗೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 79754 88496.

