Author: UllalaVani

Kannada News From Coastal Karnataka

UN NETWORKS ತೊಕ್ಕೊಟ್ಟು : ಮತಯಾಚನೆ ಸಂದರ್ಭ ಕ್ಷೇತ್ರದುದ್ದಕ್ಕೂ ಮೂಲ ಸೌಕರ್ಯಗಳ ಕೊರತೆ ಎದ್ದುಕಾಣುತ್ತಿದೆ. ಅಭಿವೃದ್ಧಿ ಹೆಸರಲ್ಲಿ ಕೇವಲ ಪ್ರಚಾರಕ್ಕೆ ಮಾತ್ರ ಶಾಸಕರು ಸೀಮಿತವಾಗಿದ್ದಾರೆ. ರೋಸಿಹೋಗಿರುವ ಮತದಾರರು ಬದಲಾವಣೆ ಬಯಸಿ ಬಿಜೆಪಿ ಅಭ್ಯರ್ಥಿಯನ್ನು ಜಯಗಳಿಸಲಿದ್ದಾರೆ ಎಂದು ಮಂಗಳೂರು ಕ್ಷೇತ್ರ ಬಿಜೆಪಿ ಅಭ್ಯರ್ಥಿ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೇಳಿದರು. ತೊಕ್ಕೊಟ್ಟು ಕಾಪಿಕಾಡಿನ ಚುನಾವಣಾ ಕಾರ್ಯಾಲಯದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ತಲೆ ಎತ್ತು ನಿಂತಿವೆ. ಅವರಿಗೆ ಮೂಲಭೂತ ಸೌಕರ್ಯಗಳನ್ನು ವ್ಯವಸ್ಥೆ ಮಾಡಿ ಕೊಡದೇ ಇರುವುದರಿಂದ ರಸ್ತೆ ಬದಿ ಉದ್ದಕ್ಕೂ ತ್ಯಾಜ್ಯದ ರಾಶಿಯಿದೆ. ಚರಂಡಿ ವ್ಯವಸ್ಥೆಯಿಲ್ಲದೆ ಅಲ್ಲಲ್ಲಿ ಕೊಳಚೆ ನೀರು ಇಕ್ಕಟ್ಟಾಗಿದೆ. ಇಂತಹ ಅವ್ಯವಸ್ಥೆಯಿಂದ ಜನರ ಆರೋಗ್ಯವೂ ಹದಗೆಟ್ಟಿರುವುದನ್ನು ಮತಯಾಚನೆ ಸಂದರ್ಭ ಕಣ್ಣಾರೆ ಕಂಡಿದ್ದೇವೆ. ತಾವು ಜಿಲ್ಲಾ ಪಂಚಾಯಿತಿ ಇದ್ದಂತಹ ಅವಧಿಯಲ್ಲಿ ಸದಸ್ಯರೆಲ್ಲರೂ ನಿರ್ಣಯ ಕೈಗೊಂಡು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೆ ನಿರ್ಣಯ ಕೈಗೊಂಡಿದ್ದರೂ, ಶಾಸಕರು ಅದನ್ನು ತಡೆಹಿಡಿದು ಇಡೀ ಕ್ಷೇತ್ರದ…

Read More

UN NETWORKS ಮಂಗಳೂರು: ವಿಶ್ವ ರೆಡ್ ಕ್ರಾಸ್ ದಿನಾಚರಣೆ ಅಂಗವಾಗಿ ನಗರದ ಮೇರಿಹಿಲ್‍ನಲ್ಲಿರುವ ಗೃಹರಕ್ಷಕ ದಳದ ಕಚೇರಿಯಲ್ಲಿ ಮಂಗಳವಾರ ಗಿಡ ನೆಡುವ ಕಾರ್ಯಕ್ರಮ ಜರುಗಿತು. “ಮಾನವೀಯತೆಯಿಂದ ಶಾಂತಿಯ ಕಡೆಗೆ” ಎಂಬ ಧ್ಯೇಯ ವಾಕ್ಯ ಹೊಂದಿರುವ ರೆಡ್‍ಕ್ರಾಸ್ ಸಂಸ್ಥೆ ಜಗತ್ತಿನ ಅತಿ ದೊಡ್ಡ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯಾಗಿದ್ದು, ಜಾಗತಿಕವಾಗಿ ಲಕ್ಷಾಂತರ ಮಂದಿ ಕಾರ್ಯಕರ್ತರು “ರೆಡ್‍ಕ್ರಾಸ್ ಸಂಸ್ಥೆ”ಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟ ಡಾ. ಮುರಲೀ ಮೋಹನ ಚೂಂತಾರು ಹೇಳಿದರು. ಉಪಸಮಾದೇಷ್ಟ ಶ್ರೀ ರಮೇಶ್, ಮಂಗಳೂರು ಘಟಕದ ಘಟಕಾಧಿಕಾರಿ ಮಾರ್ಕ್‍ಶೇರಾ, ಹಿರಿಯ ಗೃಹರಕ್ಷಕ ರಮೇಶ್ ಭಂಡಾರಿ, ರಾಜಶ್ರೀ, ಲೀಲಾ ಕುಕ್ಯಾನ್, ಕೇಶವ ಸೇರಿದಂತೆ 80 ಮಂದಿ ಗೃಹರಕ್ಷಕರು ಉಪಸ್ಥಿತರಿದ್ದರು.

Read More

UN NETWORKS ತೊಕ್ಕೊಟ್ಟು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮಂಗಳೂರು ಕ್ಷೇತ್ರ ಬಿಜೆಪಿ ಅಭ್ಯರ್ಥಿ ಸಂತೋಷ್ ರೈ ಬೋಳಿಯಾರ್ ಪರ ಕೊಲ್ಯದಿಂದ ತೊಕ್ಕೊಟ್ಟುವರೆಗೆ ರೋಡ್ ಶೋ ನಡೆಸಿದರು. ಸಾವಿರಾರು ಕಾರ್ಯಕರ್ತರು ರ್ಯಾಲಿಯಲ್ಲಿ ಭಾಗವಹಿಸಿದ್ದರಿಂದ ಉಳ್ಳಾಲ ವ್ಯಾಪ್ತಿಯಲ್ಲಿ ಬಿಜೆಪಿ ಅಲೆ ಎದ್ದಿದೆ ಅನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿಬಂತು. ಕೊಲ್ಯ ಸೌಭಾಗ್ಯಸಭಾ ಭವನದ ಎದುರುಗಡೆಯಿಂದ ತೊಕ್ಕೊಟ್ಟುವಿನ ಉಳ್ಳಾಲ ವೃತ್ತದವರೆಗೆ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ರೋಡ್ ಷೋ ನಡೆಸಿದರು. ಕೀಲು ಕುದುರೆ, ಗೊಂಬೆ ನೃತ್ಯ, ನಾಸಿಕ್ ಬ್ಯಾಂಡ್ ಸಹಿತ ಕಾರ್ಯಕರ್ತರು ಷಾ ಮೆರವಣಿಗೆಯಲ್ಲಿ ಪಾಲ್ಗೊಂಡರು. ನಿಗದಿತ ಕಾಪಿಕಾಡಿನಿಂದ ತೊಕ್ಕೊಟ್ಟು ಕಲ್ಲಾಪುವರೆಗೆ ನಡೆಯಬೇಕಾಗಿದ್ದ ರೋಡ್ ಷೋ ಸಂಚಾರ ವ್ಯವಸ್ಥೆಗೆ ಅಡ್ಡಿಯುಂಟಾಗುವ ಉದ್ದೇಶದಿಂದ ಕೊಲ್ಯದಿಂದ ಆರಂಭಿಸಿ ತೊಕ್ಕೊಟ್ಟು ಉಳ್ಳಾಲ ವೃತ್ತದಲ್ಲಿ ಕೊನೆಗೊಳಿಸಲಾಯಿತು. ತೊಕ್ಕೊಟ್ಟು ಪಟ್ಟಣದಲ್ಲಿ ಸಾಗಬೇಕಾಗಿದ್ದ ರ್ಯಾಲಿ ತೊಕ್ಕೊಟ್ಟು ಪ್ರವೇಶಿಸಬೇಕಾದ ಉಳ್ಳಾಲ ವೃತ್ತದಲ್ಲೇ ಪೊಲೀಸರು ತಡೆಹಿಡಿದರಿಂದಾಗಿ ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿತು. ಛಾಯಚಿತ್ರ ತೆಗೆದ ಷಾ ರಸ್ತೆಯಿಂದ ಛಾಯಚಿತ್ರಗಳನ್ನು ಸೆರೆಹಿಡಿಯುತ್ತಿದ್ದ ಮಾಧ್ಯಮ ಮಂದಿಯನ್ನು ತಮ್ಮ ರ್ಯಾಲಿಯ ವಾಹನದೊಳಕ್ಕೆ…

Read More

UN NETWORKS ಉಳ್ಳಾಲ: ಅಹಿಂದ ಜನರು ಒಗ್ಗಟ್ಟಾಗುವುದನ್ನು ಆರಂಭದಿಂದಲೂ ವಿರೋಧಿಸುತ್ತಿರುವ ಜೆಡಿಎಸ್‍ನ ದೇವೇಗೌಡ ಮತ್ತು ಕುಮಾರಸ್ವಾಮಿ, ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಸಹಕರಿಸುವ ಉದ್ದೇಶದಿಂದ ಮಂಗಳೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ ಎಂದು ದಕ್ಷಿಣ ಕನ್ನಡ ಅಹಿಂದ ಜನಚಳುವಳಿಯ ಉಪಾಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಆರೋಪಿಸಿದ್ದಾರೆ. ತೊಕ್ಕೊಟ್ಟು ಖಾಸಗಿ ಹೊಟೇಲಿನಲ್ಲಿ ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು. ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಕೆಲಸಮಾಡಿ, ಬಿಜೆಪಿ ಅಭ್ಯರ್ಥಿ ಪರ ಸಹಕರಿಸುವ ಉದ್ದೇಶದಿಂದ ಜಾತ್ಯಾತೀತ ಜನತಾದಳದ ಮುಖಂಡರು ಬಿ.ಎಂ .ಅಶ್ರಫ್ ಅವರಿಗೆ ನಿರ್ದೇಶನ ನೀಡಿ, ಮಾಜಿ ಮೇಯರ್ ಅಶ್ರಫ್ ಅವರನ್ನು ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಮಾಡಿದ್ದಾರೆ. ಇದು ಬಿಜೆಪಿ ಬೆಂಬಲವಾಗಿ ಸ್ಪರ್ಧಿಸುತ್ತಿರುವುದು ಸ್ಪಷ್ಟವಾಗಿದೆ. ಬಿಜೆಪಿ ಅಭ್ಯರ್ಥಿ ಸಂತೋಷ್ ರೈ ಬೋಳಿಯಾರ್ ಕೂಡಾ ಕೋಮುಶಕ್ತಿಗಳ ಮತ್ತು ಅಸಮಾನತೆ ಹೇರುವ ಶಕ್ತಿಗಳ ಕೈಗೊಂಬೆಯಾಗಿದ್ದಾರೆ. ಅಲ್ಪಸಂಖ್ಯಾತರು, ಹಿಂದುಳಿಸಲ್ಪಟ್ಟ ಜನ ಹಾಗೂ ದಲಿತರು ಎಚ್ಚೆತ್ತು ಕೋಮುಶಕ್ತಿಗಳನ್ನು ಹಾಗೂ ರಾಜಕೀಯ ವ್ಯಾಪಾರಿಗಳಾದ ಬಿಜೆಪಿ ಮತ್ತು ಜೆಡಿಎಸ್ ಅನ್ನು…

Read More

UN NETWORKS ಉಳ್ಳಾಲ: ಉಳ್ಳಾಲ ವಿಧಾನ ಸಭೆಯ ಅಧಿವೇಶನದಲ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ ರಾಣಿ ಅಬ್ಬಕ್ಕಳನ್ನು ಅವಮಾನಿಸಿದಾಗ ಈ ಭಾಗದ ಶಾಸಕರು ಮೌನವಾಗಿದ್ದು ಅವರನ್ನು ಸಮರ್ಥಿಸಿ ಮಾತನಾಡಿದ್ದು ರಾಣಿ ಅಬ್ಬಕ್ಕಳಿಗೆ ಮಾತ್ರವಲ್ಲ, ಮಹಿಳೆಯರಿಗೆ ಮಾಡಿದ ಅವಮಾನ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನಮಿತಾ ಶ್ಯಾಂ ಆರೋಪಿಸಿದರು. ತೊಕ್ಕೊಟ್ಟಿನ ಖಾಸಗಿ ಹೋಟೆಲ್‍ನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿರುವ ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರ ವೈದ್ಯಕೀಯ ವಿದ್ಯಾರ್ಥಿನಿ ಅಪಹರಣ, ಅತ್ಯಾಚಾರ ಹಾಗೂ ಬ್ಲಾಕ್ ಮೇಲ್ ಪ್ರಕರಣ ಮುಂದೆ ನಡೆದ ಘಟನೆಗಳು ಸಚಿವ ಖಾದರ್ ಅವರ ಅಸಲು ಬಂಡವಾಳ ತೆರೆದಿಟ್ಟದೆ. ಅಪರಾಧಿಗಳು ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದರೂ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಾಗದಂತೆ ಮಾಡಿದ ಕಾಣ ಕೈ ಯಾವುದೆಂದು ಸಚಿವರು ತಿಳಿಸಬೇಕು. ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡಬೇಕಾದ ಸಚಿವರು ಆರೋಪಿಗಳ ಬೆನ್ನ ಹಿಂದೆ ನಿಂತಿರುವುದು ಹಾಗೂ ಬಳಿಕ ತನ್ನ ಪಕ್ಷದಲ್ಲಿ ಪದಾಧಿಕಾರಿ ಮಾಡಿರುವುದು ದುರಂತ. ಅಂತಹ ಶಾಸಕರಿಂದ ಮಹಿಳೆಯರ ರಕ್ಷಣೆ…

Read More

UN NETWORKS ಉಳ್ಳಾಲ: ಮಂಗಳೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವ ಮೂಲಕ ಚರಿತ್ರೆಯನ್ನೇ ನಿರ್ಮಿಸಬೇಕಿದೆ ಎಂದು ಕಾಸರಗೋಡು ಬಿಜೆಪಿ ಮುಖಂಡ ಸುರೇಂದ್ರನ್ ಹೇಳಿದ್ದಾರೆ. ಅವರು ಮುಡಿಪು ಗರಡಿಪಳ್ಳದಿಂದ , ಮುಡಿಪು ಮುಡಿಪಿನ್ನಾರ್ ದೈವಸ್ಥಾನದವರೆಗೆ ಜರಗಿದ ಬೃಹತ್ ರೋಡ್ ಶೋ ಮತ್ತು ಮುಡಿಪು ಜಂಕ್ಷನ್ನಿನಲ್ಲಿ ಭಾನುವಾರ ಜರಗಿದ ಬಹಿರಂಗ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ದೇಶಾದ್ಯಂತ ಎರಡು ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಇದೆ. ಪ್ರಧಾನಿಯವರು ಹೇಳಿದಂತೆ ಕಾಂಗ್ರೆಸ್ಸಿನ ಸ್ಥಿತಿ ಪಿಪಿಪಿ ಆಗಲಿದ್ದು, ಪಂಜಾಬ್ , ಪಾಂಡಿಚ್ಚೇರಿ, ಮತ್ತೊಂದು ರಾಜ್ಯದಲ್ಲಿ ಪಾರ್ಟಿ ಮಾತ್ರ ಉಳಿದಿದೆ.ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿರಮಾನಾಥ ರೈ ಅಲ್ಲ ಹಣಾನಾಥ ರೈ, ಇನ್ನೊಂದು ಖಾದರ್ ಅಲ್ಲ ಲೂಟಿ ಖಾದರ್ ಕಾಂಗ್ರೆಸ್ ಅಂದರೆ ಕರ್ನಾಟಕದ ಖಜಾನೆಯನ್ನೇ ಕೊಳ್ಳೆ ಹೊಡೆಯುವ ಪಾರ್ಟಿಯಾಗಿದೆ. ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಕೇರಳದಲ್ಲಿ ಸರೀತಾ ವೇಣುಗೋಪಾಲ ಅನ್ನುವ ಖ್ಯಾತಿ ಇದೆ.ಕರ್ನಾಟಕ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಅರೆಬ್ಬಿ ಕಡಲಲ್ಲಿ ಧೂಳೀಪಟವಾಗಲಿದೆ. ಮೇ.14 ರ ಬೆಳಿಗ್ಗೆ ಸೂರ್ಯೋದಯಕ್ಕೆ…

Read More

UN NETWORKS ಉಳ್ಳಾಲ: ಕಾಂಗ್ರೆಸ್ ಜಯಶಾಲಿಯಾದರೆ ಭಾರತ ವಿಜಯಿಯಾದಂತೆ , ರಾಜ್ಯದಲ್ಲಿ ಸಾಮರಸ್ಯ, ಪ್ರಜಾಪ್ರಭುತ್ವದ ಅಳಿವು ಉಳಿವಿನ ಪ್ರಶ್ನೆ ಕರ್ನಾಟಕ ಚುನಾವಣೆಯಾಗಿದೆ ಎಂದು ಕಣ್ಣೂರು ಮಾಜಿ ಸಂಸದ ಅಬ್ದುಲ್ಲಾ ಕುಟ್ಟಿ ಹೇಳಿದ್ದಾರೆ. ಅವರು ಕಾಂಗ್ರೆಸ್ ಅಭ್ಯರ್ಥಿ ಪರ ಬೆಳ್ಮ ಪಂ. ವ್ಯಾಪ್ತಿಯ ದೇರಳಕಟ್ಟೆ ಭಾಗದಲ್ಲಿ ಮತಯಾಚನೆ ನಡೆಸಿ ಮಾತನಾಡಿದರು. ರಾಹುಲ್ ಗಾಂಧಿಯನ್ನು ಕರೆಯೋಣ ರಾಷ್ಟ್ರವನ್ನು ರಕ್ಷಿಸೋಣ ಅನ್ನುವ ಮಾತಿನೊಂದಿಗೆ ಮುಂಬರುವ ಚುನಾವಣೆಯನ್ನು ಎಲ್ಲರೂ ಎದುರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕಾಂಗ್ರೆಸ್ ಅನ್ನು ಬೆಂಬಲಿಸುವ ಮೂಲಕ ಕ್ಷೇತ್ರದ ಅಭ್ಯರ್ಥಿ ಯು.ಟಿ.ಖಾದರ್ ಅವರನ್ನು ಬೆಂಬಲಿಸಬೇಕಿದೆ. ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲಿ ಉಳ್ಳಾಲ ಭಾಗದಲ್ಲಿ ಬಹಳ ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು, ಕೋಟ್ಯಂತರ ಅನುದಾನದ ಆಸ್ಪತ್ರೆಯ ನಿರ್ಮಾಣವೂ ಕ್ಷೇತ್ರದಲ್ಲಿ ಆಗಿದೆ ಎಂದರು. ಈ ವೇಳೆ ಝುಲ್ಫೀಕಾರ್ ಆಲಿ, ಕಾಸರಗೋಡು ಜಿ.ಪಂ ಸದಸ್ಯ ಹರ್ಷಾದ್ ವರ್ಕಾಡಿ, ಬೆಳ್ಮ ಗ್ರಾ.ಪಂ ಉಪಾಧ್ಯಕ್ಷ ಅಬ್ದುಲ್ ಸತ್ತಾರ್ ಸಿ.ಎಂ ರವೂಫ್, ಟಿ.ಎಸ್.ನಾಸೀರ್, ಬೆಳ್ಮ ಗ್ರಾ.ಪಂ ಸದಸ್ಯ ಯೂಸುಫ್ ಬಾವಾ , ಮುಖಂಡ ರವಿರಾಜ್ ಶೆಟ್ಟಿ,…

Read More

UN NETWORKS ಸಜಿಪನಡು: ಸಮಸ್ತ ಜಂ-ಇಯ್ಯತುಲ್ ಮುಅಲ್ಲಿಮೀನ್ ಸಜಿಪ ರೇಂಜ್, ಸಮಸ್ತ ಮದ್ರಸ ಮ್ಯಾನೇಜ್‍ಮೆಂಟ್ ಸಜಿಪ ರೇಂಜ್ ಇವರ ವತಿಯಿಂದ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‍ನ ಸಹಯೋಗದಲ್ಲಿ ಸ್ವಚ್ಛತಾ ಕಾರ್ಯಕ್ರಮವು ಸಜಿಪನಡು ಪರಿಸರದಲ್ಲಿ ನಡೆಯಿತು. ಸಜಿಪ ರೇಂಜ್‍ಗೊಳಪಟ್ಟ ವಿವಿಧ ಮದ್ರಸಗಳ ಅಧ್ಯಾಪಕರು ಮತ್ತು ಟ್ಯಾಲೆಂಟ್ ಕಾರ್ಯಕರ್ತರು ಸಜಿಪನಡು ಪರಿಸರದ ರಸ್ತೆಬದಿಯಲ್ಲಿದ್ದ ಕಸಕಡ್ಡಿಗಳನ್ನು ಹೆಕ್ಕಿ ಹಾಗೂ 2 ಬಸ್ ನಿಲ್ದಾಣಗಳನ್ನು ಗುಡಿಸಿ ತೊಳೆದು ಶುಚಿಗೊಳಿಸಿದರು. ಮದ್ರಸ ಅಧ್ಯಾಪಕರ ಈ ಮಾದರಿ ಕಾರ್ಯಕ್ರಮಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದರು. ಪರಿಸರ ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಜಿಪ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್‍ನ ಅಧ್ಯಕ್ಷ ಅಬ್ದುಲ್ ರಹ್‍ಮಾನ್ ಫೈಝಿ ಬೋಳಿಯಾರ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಫೈಝಿ ಕೋಲ್ಪೆ, ಜೊತೆ ಕಾರ್ಯದರ್ಶಿ ಇಲ್ಯಾಸ್ ಅರ್ಶದಿ ಬೈಲಗುತ್ತು, ಪರೀಕ್ಷಾ ಬೋರ್ಡು ಚಯರ್‍ಮೆನ್ ಪಿ.ಎ.ಎಂ ಶರೀಫ್ ಮೌಲವಿ, ಸಜಿಪ ಖತೀಬ್ ಅಬ್ದುಲ್ಲಾ ಬಾಖವಿ, ಖಾಸಿಂ ದಾರಿಮಿ ಆಲಂಪಾಡಿ, ಮುನೀರ್ ಮೌಲವಿ ಕಜೆ, ಇಬ್ರಾಹಿಂ ಮುಸ್ಲಿಯಾರ್ ಆಲಂಪಾಡಿ, ಹಸೈನಾರ್ ಮುಸ್ಲಿಯಾರ್ ಸಜಿಪ, ಸಿದ್ದೀಖ್ ದಾರಿಮಿ ಅಸೈಗೋಳಿ,…

Read More

UN NETWORKS ಕೋಟೆಕಾರು: ಸಮಾಜ ಸಂಘಟನೆಯಲ್ಲಿ ಯುವ ಸಮುದಾಯದ ಪಾತ್ರ ಮಹತ್ವದ್ದಾಗಿದ್ದು, ಸಾಮಾಜಿಕ ಕಾರ್ಯಗಳೊಂದಿಗೆ ಸಮಾಜದ ಅಭಿವೃದ್ಧಿಗೆ ಯುವಜನರು ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಪುತ್ತೂರು ಇಲ್ಲಿನ ಪ್ರಾಧ್ಯಾಪಕ ಉದಯ ಕುಮಾರ್ ಎಸ್. ಅಭಿಪ್ರಾಯಪಟ್ಟರು. ರಾಮರಾಜ ಕ್ಷತ್ರಿಯ ಸೇವಾ ಸಂಘ ಉಳ್ಳಾಲ ವಲಯ, ಕೋಟೆಕಾರು, ಇದರ ಆಶ್ರಯದಲ್ಲಿ ಕೋಟೆಕಾರಿನ ಶ್ರೀ ಶೃಂಗೇರಿ ಮಠದ ಆವರಣದಲ್ಲಿ `ಯುವ ಕ್ಷಾತ್ರ ಉಳ್ಳಾಲ ” ನೂತನ ಸಂಘಟನೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಮರಾಜ ಕ್ಷತ್ರಿಯ ಸೇವಾ ಸಂಘ ಉಳ್ಳಾಲ ವಲಯ ಅಧ್ಯಕ್ಷ ಸೀತಾರಾಮ ಕೊಪ್ಪಲು ನೂತನ ಸಂಘಟನೆಯನ್ನು ಉದ್ಘಾಟಿಸಿ ಹಿರಿಯ ಮಾರ್ಗದರ್ಶನದಲ್ಲಿ ಯುವ ಜನರು ಸಮಾಜದ ಕಾರ್ಯದಲ್ಲಿ ಕೆಲ ಸಮಯವನ್ನು ಮೀಸಲಿಡುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು. ಉದ್ಯಮಿ ಪಮ್ಮಿ ಯಾನೆ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲು, ಬಿ.ಕೆ. ಮೂರ್ತಿ ಪಾರೆಮನೆ, ಹಿರಿಯ ನ್ಯಾಯವಾದಿ ರಾಘವೇಂದ್ರ ರಾವ್ ,ಪ್ರಶೀಲ್ ಇನ್ಪ್ರಾಟೆಕ್‍ನ ಅನಿಲ್ ರಾವ್, ಮಿಸ್ಟ್ರಸ್ ಇಂಡಿಯಾ ವಲ್ಡ್ ಪ್ರಶಸ್ತಿ ವಿಜೇತೆ ತೃಪ್ತಿ…

Read More

UN NETWORKS ತಲಪಾಡಿ: ಚೀನಾದಲ್ಲಿ ನಡೆದ ಅಂತರಾಷ್ಟ್ರೀಯ ಟೈಕ್ವಾಂಡೋ ಚಾಂಪಿಯನ್‍ಶಿಪ್‍ನಲ್ಲಿ ಭಾರತವನ್ನು ಪ್ರತಿನಿಧಿಸಿದ ತಲಪಾಡಿಯ ಶಾರದಾ ವಿದ್ಯಾನಿಕೇತನದ ವಿದ್ಯಾರ್ಥಿಗಳು 8 ಪದಕಗಳನ್ನು ಗಳಿಸಿದ್ದಾರೆ. ಶಾರದಾ ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿನ ರೀಪು ದಮನ್ ಸಿಂಗ್ ಒಂದು ಚಿನ್ನ ಮತ್ತು ಒಂದು ಕಂಚಿನ ಪದಕ ಪಡೆದರೆ, ಪ್ರೌಢಶಾಲಾ ವಿದ್ಯಾರ್ಥಿ ಯಶಸ್ ಆರ್. ಗೌಡ ಒಂದು ಬೆಳ್ಳಿ ಮತ್ತು ಒಂದು ಕಂಚು, ಸಾತ್ವಿಕ್ ಜಿ. ನವೀನ್ ಒಂದು ಬೆಳ್ಳಿ ಮತ್ತು ಒಂದು ಕಂಚು, ಕೀರ್ತನ್ ವಿ. ಒಂದು ಕಂಚು, ಶ್ರೀಚರಣ್ ರೆಡ್ಡಿ ಒಂದು ಕಂಚಿನ ಪದಕವನ್ನು ಪಡೆದಿದ್ದಾರೆ.

Read More