Author: UllalaVani

Kannada News From Coastal Karnataka

UN NETWORKS ಹರೇಕಳ: ಸೌಜನ್ಯ ಸ್ಕೌಟ್‍ದಳ, ನೇತ್ರಾವತಿ ಇಕೋಕ್ಲಬ್ ಹರೇಕಳ ವತಿಯಿಂದ ಹರೇಕಳ ರಾಮಕೃಷ್ಣ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಗಿಡಕ್ಕೆ ನೀರು ಹಾಕುವ ಮುಖೇನ ಉದ್ಘಾಟಿಸಿದ ಮಂಗಳೂರಿನ ಉಪವಲಯ ಅರಣ್ಯಾಧಿಕಾರಿ ರವಿ ಕುಮಾರ್ ರವರು ದಿನಾಚರಣೆಯ ಮಹತ್ವವನ್ನು ತಿಳಿಯ ಪಡಿಸುವುದರೊಂದಿಗೆ “ಕಾಡು ನಾಶದಿಂದ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗುತ್ತದೆ. ನಾವು ಬದುಕಲು ಸಸಿನೆಟ್ಟು ಪೋಷಿಸುವಂತಹ ಅರಣೀಕರಣ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಹಮ್ಮಿಕೊಂಡು ಕಾರ್ಯಗತವಾಗಬೇಕು. ಈ ನಿಟ್ಟಿನಲ್ಲಿ ಅರಣ್ಯ ವಿಭಾಗದಿಂದ ಎಲ್ಲಾ ಸಲಹೆ-ಸಹಕಾರಗಳನ್ನು ನೀಡಲು ಸಿದ್ಧ” ಎಂದರು. ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯಲ್ಲಿ ಪ್ರಾಧ್ಯಾಪಕರಾಗಿರುವ ಪ್ರೊ. ಪ್ರಶಾಂತ್ ನಾೈಕ್‍ರವರು ಇಂದು ಕ್ಯಾನ್ಸರ್ ಪೀಡಿತರ ಸಂಖ್ಯೆ ಅಪಾಯಕಾರಿ ಮಟ್ಟದಲ್ಲಿ ಏರುತ್ತಿದೆ. ಇದಕ್ಕೆ ಮುಖ್ಯ ಕಾರಣಗಳಲ್ಲಿ ಒಂದು ಪ್ಲಾಸ್ಟಿಕ್ ಮಾಲಿನ್ಯ. ಪ್ಲಾಸ್ಟಿಕ್‍ನಲ್ಲಿ ಇರುವ ಪುರಾನ್, ಒನ್‍ಫಿನಾಲ್, ಡೈಯಾಕ್ಲಿನ್, ಕ್ಯಾನ್ಸರ್ ಕಾರಕಗಳಾಗಿವೆ. ನಾವು ಬಳಸಿ ಎಸೆಯುವ ಪ್ಲಾಸ್ಟಿಕ್‍ನಿಂದ ಪರಿಸರದಲ್ಲಿ ನಾನಾ ಸಮಸ್ಯೆಗಳ ಜೊತೆಗೆ ತೀವ್ರತರವಾದ ಆರೋಗ್ಯ ದುಷ್ಪರಿಣಾಮಗಳಿಗೆ ಕಾರಣವಾಗಿದೆ. ಆದುದರಿಂದ ಈ ವರ್ಷದ ವಿಶ್ವ…

Read More

UN NETWORKS ಮಂಗಳೂರು: ಮಂಗಳೂರಿನ ಸರೋಜಿನಿ ಭಟ್ ಪ್ರತಿಷ್ಠಾನ, ಹವ್ಯಕ ಸಭಾ ಮಂಗಳೂರು ಆಶ್ರಯದಲ್ಲಿ ತೇಜಸ್ವಿನಿ ಆಸ್ವತ್ರೆ ಸಹಕಾರದೊಂದಿಗೆ ನಗರದ ಕದ್ರಿ ನಂತೂರಿನ ಭಾರತಿ ಕಾಲೇಜಿನಲ್ಲಿ ರಕ್ತದಾನ ಶಿಬಿರ ಭಾನುವಾರ ರಕ್ತದಾನ ಶಿಬಿರ ನಡೆಯಿತು. ನಗರದ ಖ್ಯಾತ ವಕೀಲ ಕೇಶವ ನಂದೋಡಿ ಕಾರ್ಯಕ್ರಮ ಉದ್ಘಾಟಿಸಿದರು. ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ಜಿಲ್ಲಾ ಗೃಹರಕ್ಷಕದ¼ದ ಕಾರ್ಯದರ್ಶಿ ಡಾ. ಮುರಲೀ ಮೋಹನ್ ಚೂಂತಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ರಕ್ತದಾನದಿಂದ ಸಾಮರಸ್ಯ ವೃದ್ಧಿಯಾಗುತ್ತದೆ ಎಂದರು.ಮಂಗಳೂರು ಹವ್ಯಕ ಸಭಾ ಮಧ್ಯವಲಯ ಕಾರ್ಯದರ್ಶಿ ಭಾಸ್ಕರ ಹೊಸಮನೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 21ನೇ ಬಾರಿ ರಕ್ತದಾನ ಮಾಡಿದ ಜಯಪ್ರಕಾಶ್ ಅವರನ್ನು ಗೌರವಿಸಲಾಯಿತು. ಮಂಗಳೂರು ಹವ್ಯಕ ಸಭಾದ ಅಧ್ಯಕ್ಷ ಶ್ರೀಕೃಷ್ಣ ನೀರಮೂಲೆ ಕಾರ್ಯಕ್ರಮ ನಿರೂಪಿಸಿದರು. ತೇಜಸ್ವಿನಿ ಆಸ್ವತ್ರೆಯ ಡಾ. ಶ್ರೀದೇವಿ ಮತ್ತು ತಂಡದವರು ಶಿಬಿರಕ್ಕೆ ಸಹಕರಿಸಿದರು. 20ಮಂದಿ ಶಿಬಿರದಲ್ಲಿ ರಕ್ತದಾನ ಮಾಡಿದರು.

Read More

UN NETWORKS ಉಳ್ಳಾಲ: ವೈದ್ಯಕೀಯ ಕ್ಷೇತ್ರದಲ್ಲಿ ಅನುಭೂತಿ, ಸಹಾನುಭೂತಿ , ಮಾನವೀಯತೆಯನ್ನು ಪ್ರತಿಪಾದಿಸುವುದರ ಜತೆಗೆ ಹಿಂದಿನ ವೈದ್ಯ ವಿಜ್ಞಾನದ ಕಲೆಯನ್ನು ಪುನರ್ ಸ್ಥಾಪಿಸುವ ಉದ್ದೇಶದೊಂದಿಗೆ ಯುನೆಸ್ಕೋ ದ ಜೈವಿಕ ನೀತಿಶಾಸ್ತ್ರ ವಿಭಾಗಗಳನ್ನು ಹುಟ್ಟಿಹಾಕಿಕೊಂಡಿದೆ ಎಂದು ಯುನೆಸ್ಕೋ ಚೇರ್ ಇನ್ ಬಯೋಎಥಿಕ್ಸ್ ಹೈಫಾ ದ ಪ್ರೊ. ರಸ್ಸೆಲ್ ಡಿಸೋಜಾ ಅಭಿಪ್ರಾಯಪಟ್ಟರು.ಅವರು ಹೈಫಾ,ದ ಯುನೆಸ್ಕೋ ಚೇರ್ ಇನ್ ಬಯೋ ಎಥಿಕ್ಸ್ ಇದರ ಅಂತರಾಷ್ಟ್ರೀಯ ನೆಟ್‍ವರ್ಕ್‍ನಡಿ ನಿಟ್ಟೆ (ಸ್ವಾಯುತ್ತೆಗೊಳ್ಳಲಿರುವ ವಿ.ವಿ) ಯಲ್ಲಿ ಆರಂಭಿಸಿದ ಜೈವಿಕ ನೀತಿಶಾಸ್ತ್ರದ ವಿದ್ಯಾರ್ಥಿ ವಿಭಾಗವನ್ನು ಸೋಮವಾರ ದೇರಳಕಟ್ಟೆ ಕ್ಷೇಮ ಆಸ್ಪತ್ರೆಯ ಸೆಮಿನಾರ್ ಹಾಲ್ ನಲ್ಲಿ ಉದ್ಘಾಟಿಸಿ ಮಾತನಾಡಿದರು. ದೇಶದಾದ್ಯಂತ 65 ವಿದ್ಯಾರ್ಥಿ ತಂಡಗಳು ಸಕ್ರಿಯವಾಗಿ ಹೈಫಾ ಯುನೆಸ್ಕೋದ ಜೈವಿಕ ನೀತಿಶಾಸ್ತ್ರ ವಿಂಗ್‍ನಡಿ ಕಾರ್ಯಾಚರಿಸುತ್ತಿದೆ. ಶೇ.80-90 ವಿದ್ಯಾರ್ಥಿಗಳು ಜನರ ರಕ್ಷಣೆ, ಆರೈಕೆ, ಜವಾಬ್ದಾರಿಯನ್ನು ಮನದಲ್ಲಿಟ್ಟುಕೊಂಡು ವೈದ್ಯಕೀಯ ಕ್ಷೇತ್ರಕ್ಕೆ ಕಾಲಿಡುತ್ತಾರೆ. ಅದನ್ನು ಸಾಕಾರಗೊಳಿಸುವ ಉದ್ದೇಶದೊಂದಿಗೆ ಯುನೆಸ್ಕೋ ಕಾರ್ಯಾಚರಿಸುತ್ತಿದೆ. ಕೇರಳ ಭಾಗದಲ್ಲಿ ಹಿಂದಿನ ಆರೋಗ್ಯ ನೀತಿಗಳು ಈಗಲೂ ಪಾಲನೆಯಾಗುತ್ತಿದೆ. ಇತರೆಡೆ ಇದನ್ನು ಪಾಲನೆ ಮಾಡುವ ಉದ್ದೇಶದ…

Read More

UN NETWORKS ಇರಾ: ವಿಶ್ವ ಪರಿಸರ ದಿನಾಚರಣೆಯ ಸಲುವಾಗಿ ಇರಾ ಗ್ರಾಮ ಪಂಚಾಯತ್ ಹಾಗು ಇರಾ ತಾಳಿತ್ತಬೆಟ್ಟು ದ.ಕ.ಜಿ.ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಗಿಡ ನೆಡುವ ಮೂಲಕ ಆಚರಿಸಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ, ಉಪಾಧ್ಯಕ್ಷೆ ಚಂದ್ರಾವತಿ ಕರ್ಕೇರ, ಪಂಚಾಯತ್ ಸದಸ್ಯರಾದ ಮೊಯಿದಿನ್ ಕುಂಞಿ, ಗೋಪಾಲ ಅಶ್ವತ್ಥಡಿ, ರಮೇಶ್ ಪೂಜಾರಿ, ಎಂ.ಬಿ.ಉಮರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಳಿನಿ.ಎ.ಕೆ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮುರಳೀಧರ ಭಂಡಾರಿ, ಶಾಲಾ ಶಿಕ್ಷಕ ವೃಂದ, ಪಂಚಾಯತ್ ಸಿಬ್ಬಂದಿ ವರ್ಗ ಈ ಸಂದರ್ಭದಲ್ಲಿ ಉಪಸ್ಥಿತಿತರಿದ್ದರು. ಶಿಕ್ಷಕರಾದ ಶಂಕರ್ ಸ್ವಾಗತಿಸಿ, ಜೋನ್ ಫೆರ್ನಾಂಡೀಸ್ ಧನ್ಯವಾದ ಸಲ್ಲಿಸಿದರು.

Read More

UN NETWORKS ಮಂಗಳೂರು: ಬಡ ರಿಕ್ಷಾ ಚಾಲಕರನ್ನು ಗುರುತಿಸಿ ಅವರಿಗೆ ಕಿಟ್ ವಿತರಣೆ ಮತ್ತು ಇಫ್ತಾರ್ ಕೂಟ ಏರ್ಪಡಿಸುವುದು ಉತ್ತಮ ಕಾರ್ಯವಾಗಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕಾದ ಅನಿವಾರ್ಯತೆ ಇದೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು. ಅವರು ಮಾಸ್ತಿಕಟ್ಟೆ ಅಝಾದ್‍ನಗರ ರಿಕ್ಷಾಚಾಲಕರ ಸಂಘದ ವತಿಯಿಂದ ಭಾನುವಾರ ಮಾಸ್ತಿಕಟ್ಟೆಯಲ್ಲಿ ನಡೆದ ಇಫ್ತಾರ್ ಕೂಟ ಮತ್ತು ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಕಿಟ್ ವಿತರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಇಫ್ತಾರ್ ಮತ್ತು ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾಜಿ ತಾ.ಪಂ. ಸದಸ್ಯ ಮುಸ್ತಫಾ, ಲಿಬ್‍ಝತ್, ಮಾಸ್ತಿಕಟ್ಟೆ ಅಝಾದ್‍ನಗರ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ನಝೀರ್, ಕಾರ್ಯದರ್ಶಿ ರವೂಪ್, ಸದಸ್ಯರಾದ ಸತ್ತಾರ್, ಅಂತೋನಿ, ಸವೇರ, ಕಬೀರ್, ಖಲೀಲ್, ಅಶ್ರಫ್, ಕರಾಮತ್ತ್ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 67 ಮಂದಿ ಬಡ ರಿಕ್ಷಾ ಚಾಲಕರಿಗೆ ಕಿಟ್ ವಿತರಣೆ ಮಾಡಲಾಯಿತು.

Read More

UN NETWORKS ದೇರಳಕಟ್ಟೆ: ದ್ವೇಷ ರಾಜಕಾರಣ ಕಾಂಗ್ರೆಸ್ ಸಂಸ್ಕೃತಿಯಲ್ಲ. ಅದು ಬಿಜೆಪಿಯ ಸಂಸ್ಕೃತಿ. ನಮ್ಮದು ಏನಿದ್ದರೂ ಪ್ರೀತಿಯ ರಾಜಕಾರಣ. ಜಿಲ್ಲೆಯಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್‍ಗೆ ಹಿನ್ನಡೆಯಾಗಿದ್ದರೂ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಗಳಿಸುವುದರಲ್ಲಿ ಕಾರ್ಯಕರ್ತರ ಪರಿಶ್ರಮವೇ ಕಾರಣ. ಮುಂದಿನ ಲೋಕಸಭೆ ಚುನಾವಣೆಗೆ ನಾವೆಲ್ಲರೂ ಸಿದ್ದರಾಗಬೇಕಿದೆ ಎಂದು ಶಾಸಕ ಯು.ಟಿ.ಖಾದರ್ ಅವರು ಅಭಿಪ್ರಾಯಪಟ್ಟರು. ಅವರು ದೇರಳಕಟ್ಟೆಯ ಖಾಸಗಿ ಸಭಾಂಗಣದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರಿಗೆ ಅಭಿನಂದನೆ ಕಾರ್ಯಕ್ರಮ ಹಾಗೂ ಇಪ್ತಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು.ಮಂಗಳೂರು ಕ್ಷೇತ್ರದ ಜನತೆ ಅತ್ಯಂತ ಪ್ರೀತಿ ವಿಶ್ವಾಸ ನಂಬಿಕೆಯೊಂದಿಗೆ ಮತ್ತೆ ನನ್ನನ್ನು ಆಯ್ಕೆ ಮಾಡಿದ್ದಾರೆ. ಅವರ ಪ್ರೀತಿ ವಿಶ್ವಾಸದಂತೆ ಕ್ಷೇತ್ರದ ಅಭಿವೃದ್ದಿಗಾಗಿ ಪ್ರಯತ್ನ ಪಡುತ್ತೇನೆ. ಈ ಬಾರಿ ಕ್ಷೇತ್ರದಲ್ಲಿ ಮತಗಳ ಅಂತರ ಕಡಿಮೆಯಾಗಿದೆ ಎಂದು ಯಾರೂ ಬೇಸರಪಡುವ ಅಗತ್ಯವಿಲ್ಲ, ಮುಂದಿನ ಚುನಾವಣೆಯಲ್ಲಿ ಬಡ್ಡಿ ಸಮೇತ ಹೆಚ್ಚುವರಿ ಮತಪಡೆಯುವಲ್ಲಿ ನಾವು ತೊಡಗಿಸಿಕೊಳ್ಳೋಣ ಎಂದರು. ಕಾಂಗ್ರೆಸ್ ಮುಖಂಡ ಮುಸ್ತಫಾ ಹರೇಕಳ ಅವರು ಮಾತನಾಡಿ, ಕ್ಷೇತ್ರದಲ್ಲಿ ಯಾವುದೇ ಜಾತಿ ಮತ ಬೇದ ನೋಡದೆ ಪ್ರತಿಯೊಬ್ಬರ…

Read More

UN NETWORKS ಕುಂಪಲ: ಕುಂಪಲದಲ್ಲಿ ಶ್ರೀ ಕೃಷ್ಣನ ಆರಾಧನೆಯ ಮೂಲಕ ಈ ಭಾಗದಲ್ಲಿ ಧಾರ್ಮಿಕ ಜಾಗೃತಿಯೊಂದಿಗೆ ಸಮಾಜದ ಸಂಘಟನೆಗೆ ಮಂದಿರವು ಕೆಲಸ ಮಾಡುತ್ತಿದೆ. ಒಂದು ಊರಿನ ಜನರು ಉತ್ಸವಗಳ ಮೂಲಕ ಒಂದಾಗುವುದರಿಂದ  ಕೃಷ್ಣನ ಗೀತ ಸಂದೇಶ ಸಾಕಾರವಾಗಿದೆ ಎಂದು  ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ ಅವರು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಸಭಾಭವನದಲ್ಲಿ ಭಾನುವಾರ ಜರಗಿದ 21ನೇ ವರ್ಷದ ಕುಂಪಲ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವದ ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದುರ್ಗಾಪರಮೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಭವಾನಿ ಶಂಕರ ಶಾಂತಿ ಕಾರ್ಯಕ್ರಮ ಉದ್ಘಾಟಿಸಿದರು. ಮಂದಿರದ ಗೌರವಾದ್ಯಕ್ಷ ಕೇಶವದಾಸ್ ಬಗಂಬಿಲ, ಉತ್ಸವ ಸಮಿತಿ ಅಧ್ಯಕ್ಷ ಶಿವಾನಂದ ಟೈಲರ್, ಗೌರವಾದ್ಯಕ್ಷ ಎಸ್.ಎಸ್.ನಾಯ್ಕ್, ಕಾರ್ಯದರ್ಶಿ ಹರೀಶ್ ಮೂರುಕಟ್ಟ, ಕೋಶಾಧಿಕಾರಿ ಆನಂದ.ಎನ್.ಕುಂಪಲ, ಸಲಹೆಗಾರ ಲಕ್ಷ್ಮಣ್ ಕಿರೋಡಿಯನ್, ಮಂದಿರದ ಕಾರ್ಯದರ್ಶಿ ರವೀಂದ್ರ ಕುಂಪಲ,  ಅರ್ಚಕ ಉಗ್ಗಪ್ಪ ಟೈಲರ್, ಶ್ರೀನಿದಿ ಜುವೆಲ್ಲರ್ ಮಾಲಕ ಜಗದೀಶ್ ಆಚಾರ್ಯ, ಆಡಳಿತ ಮಂಡಳಿ ಸದಸ್ಯರಾದ ಮಾಧವ…

Read More

UN NETWORKS ಮಲಾರ್ : ವಿದ್ಯಾರ್ಥಿಗಳಿಗೆ ಶಾಲಾ ಪುಸ್ತಕ ಹಾಗೂ ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವದ ಕುರಿತು ತರಬೇತಿ ಮಲಾರ್ ಶಾಲಾ ಮುಂಭಾಗದಲ್ಲಿ ನಡೆಯಿತು. ಪಾಪ್ಯುಲರ್ ಫ್ರಂಟ್ ನ ಪ್ರಾರಂಭದಲ್ಲಿ ಸ್ಕೂಲ್ ಚಲೋ ಕಾರ್ಯಕ್ರಮ ಮಾಡಿದ್ದು ಇವತ್ತಿಗೂ ಮಾದರಿಯಾಗಿ ಮುಂದುವರಿಯುತ್ತಾ ವಿದ್ಯಾರ್ಥಿಗಳ ಪ್ರಗತಿಗೆ ಕಾರಣರಾಗಿದ್ದೇವೆ ಮುಂದೆಯೂ ಅನೇಕ ಕಾರ್ಯವನ್ನು ವಿದ್ಯಾರ್ಥಿಗಳಿಗೆ ಮಾಡಲಿದ್ದೇವೆ ಎಂದು ಹಾರಿಶ್ ಮಲಾರ್ ಕರೆನಿಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಎಮ್.ಬಶೀರ್ ನೆರವೇರಿಸಿದರು.ಹೆಲ್ಪ್ ಲೈನ್ ಅದ್ಯಕ್ಷ ಕಬೀರ್ ಮಲಾರ್.ಅಲ್ ಅಮೀನ್ ಅದ್ಯಕ್ಷ ಮುನೀರ್.ಎಮ್.ಇ.ಎಸ್ ಅದ್ಯಕ್ಷ ಇಸ್ಮಾಯಿಲ್ ಕೋಡಿ.ಕಮರ್.ಝಾಹಿದ್ ಉಪಸ್ಥಿತಿಯಿದ್ದರು.ಸುಫೈದ್ ಸ್ವಾಗತಿಸಿ ಅನ್ಸಾರ್ ಇನೊಳಿ ನಿರೂಪಿಸಿ

Read More

UN NETWORKS ಕೈರಂಗಳ:ಇಲ್ಲಿನ ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ಇದರ ವತಿಯಿಂದ ಶಾಲಾ ವಿಧ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮವು ಕೈರಂಗಳ ಅ.ಹಿ.ಪ್ರಾ ಶಾಲೆಯಲ್ಲಿ ಜರುಗಿತು.ಕಾರ್ಯಕ್ರಮಕ್ಕೆ ಜೆ.ಎಂ.ಆರ್ ಪಡಿಕ್ಕಲ್ ಖತೀಬ್ ನಾಸೀರುದ್ದೀನ್ ಮದನಿ ದುವಾ ಮೂಲಕ ಚಾಲನೆ ನೀಡಿದರು.ಶಾಲಾ ಮುಖ್ಯೋಪಾಧ್ಯಾಯರಾದ ಶಿವರಾಮ್ ಭಟ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದ ಉಧ್ಘಾಟನೆಯನ್ನು,ತಾ.ಪಂ ಸದಸ್ಯರಾದ ಹೈದರ್ ಕೈರಂಗಳ ಉಧ್ಘಾಟಿಸಿ ಮಾತನಾಡುತ್ತಾ ಅಲ್-ಅಮೀನ್ ಸಂಸ್ಥೆ ಯು ನಿಷ್ಕಂಳಕ ಮನಸ್ಸಿನಿಂದ ಸಮಾಜಕ್ಕೆ ಅರ್ಪಿಸುತ್ತಿರುವ ಸೇವೆಯು ಮಹತ್ತರವಾಗಿದೆ,ಸಂಸ್ಥೆಯ ಕಾರ್ಯಚಟುವಟಿಕೆಗಳು ಶ್ಲಾಘನೀಯ ಎಂದರು. ಕಾರ್ಯಕ್ರಮ ದಲ್ಲಿ ತೋಟಾಲ್ ಜುಮಾ ಮಸ್ಜಿದ್ ಖತೀಬ್ ಮುಹಿಯ್ಯದ್ದೀನ್ ಸಹದಿ ತೋಟಾಲ್,ನರಿಂಗಾನ ಗ್ರಾ.ಪಂ ಸದಸ್ಯರಾದ ಮುರಳೀಧರ್ ಶೆಟ್ಟಿ ಮೋರ್ಲ,ಕೈರಂಗಳ ಗ್ರಾ.ಪಂ ಸದಸ್ಯ ಲೋಹಿತ್.ವಿ ಗಟ್ಟಿ,ಸಂಸ್ಥೆಯ ಗೌರವಾಧ್ಯಕ್ಷ ಅಹ್ಮದ್ ಕುಂಙಿ, ಸಮಾಜಸೇವಕ ರಹಿಮಾನ್ ಹೂಹಾಕುವ ಕಲ್ಲು,ಗೌಸಿಯಾ ಯಂಗ್ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ಇಬ್ರಾಹಿಂ ಪಾರೆ,ಬದ್ರುಲ್ ಹುದಾ ಅಸೋಸಿಯೇಷನ್ ಅಧ್ಯಕ್ಷ ಪೈಝಲ್ ಪಡಿಕ್ಕಲ್,ಅನ್ಸಾರ್ ಪಡಿಕ್ಕಳ್,ಸ್ಥಳೀಯರಾದ ಹೈದರ್ ಮಲಿ,ಶಾಕಿರ್,ಇಬ್ರಾಹಿಂ, ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ಅಧ್ಯಕ್ಷ ಹಂಝ.ಬಿ ಮತ್ತಿತರು ಉಪಸ್ಥಿತರಿದ್ದರು. ಬಳಿಕ ಕೈರಂಗಳ ಶಾಲಾ ಮುಖ್ಯೋಪಾಧ್ಯಾಯರಾಗಿ…

Read More

UN NETWORKS ಬೋಳಿಯಾರ್: ಬಿಜೆಪಿ ಇಂದು ದೇಶದಲ್ಲಿ ಬೆಳೆಯಲು ಪಕ್ಷದ ಹಿರಿಯರು ಹಾಕಿದ ಅಡಿಪಾಯದಿಂದ ಸಾಧ್ಯವಾಗಿದ್ದು, ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ 61 ಸಾವಿರ ಮತಗಳು ಪಡೆಯಲು ಪಕ್ಷದ ಚಿಹ್ನೆಯಾದ ತಾವರೆ ಮತ್ತು ಪ್ರತೀ ಕಾರ್ಯಕರ್ತರ ಅವಿರತ ಶ್ರಮದಿಂದ ಸಾಧ್ಯವಾಗಿದೆ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣಾ ಸಂದರ್ಭದಲ್ಲಿ ದುಡಿದ ಪಕ್ಷದ ಕಾರ್ಯಕರ್ತರಿಗೆ ಏರ್ಪಡಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಷೇತ್ರದಲ್ಲಿ ಕಳೆದ ಚುನಾವಣೆಗೆ ಹೋಲಿಸಿದರೆ ಸುಮಾರು 20 ಸಾವಿರ ಅ„ಕ ಮತಗಳು ಬಂದಿದೆ. ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದರೂ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸೋತರು ಹೆಚ್ಚುವರಿ ಮತಗಳನ್ನು ಪಡೆದ ಗೆಲುವು ನಮ್ಮಲ್ಲಿದೆ. ಈ ಮತಗಳು ಉಆವುದೇ ವೈಯಕ್ತಿಕ ಮತಗಳು ಅಲ್ಲ ಬಿಜೆಪಿ ಪಕ್ಷದ ಚಿಹ್ನೆ ಮತ್ತು ಕಾರ್ಯಕರ್ತರ ಬೆವರಿನ ಹನಿ ಮತಗಳಾಗಿ ಪರಿವರ್ತನೆಯಾಗಿದ್ದು, ಮುಂದಿನ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಬಲಗೊಳಿಸಲು ಇಂದಿನಿಂದಲೇ…

Read More