UN NETWORKS ಉಳ್ಳಾಲ: ವೈದ್ಯಕೀಯ ವಿದ್ಯಾರ್ಥಿಗಳಿದ್ದ ಕಾರು ರಿಕ್ಷಾವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ರಿಕ್ಷಾ ಚಾಲಕ ಗಂಭೀರವಾಗಿ ಗಾಯಗೊಂಡು, ರಿಕ್ಷಾದಲ್ಲಿದ್ದ ಪ್ರಯಾಣಿಕರೂ ಗಾಯಗೊಂಡಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕುದಕಟ್ಟೆ ಯೆನೆಪೋಯ ಆಸ್ಪತ್ರೆ ಎದುರುಗಡೆ ಶನಿವಾರ ತಡರಾತ್ರಿ ಸಂಭವಿಸಿದೆ. ರಿಕ್ಷಾ ಚಾಲಕ ಅಸೈಗೋಳಿ ನಿವಾಸಿ ದಿವಾಕರ್ (35) ಗಂಭೀರ ಗಾಯಗೊಂಡಿದ್ದಾರೆ. ದೇರಳಕಟ್ಟೆಯಿಂದ ಕುತ್ತಾರು ಸಿಲಿಕೋನಿಯಾ ಫ್ಲಾಟಿನ ಕಡೆಗೆ ಬಾಡಿಗೆ ಕೊಂಡೊಯ್ಯುತ್ತಿದ್ದ ರಿಕ್ಷಾಗೆ, ಎದುರಿನಿಂದ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದ ಬಂದ ನಾಲ್ವರು ವೈದ್ಯಕೀಯ ವಿದ್ಯಾರ್ಥಿ-ವಿದ್ಯಾರ್ಥಿನಿಯರಿದ್ದ ಕಾರು ಮುಖಾಮುಖಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ರಿಕ್ಷಾ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಚಾಲಕನನ್ನು ಅವಶೇಷಗಳಿಂದ ಹೊರ ತೆಗೆಯಲು ಕೆಲ ಸಮಯ ತಗಲಿತು. ತಲೆ ಹಾಗೂ ಕಾಲಿನ ಭಾಗಕ್ಕೆ ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಲ್ಪಟ್ಟರೆ, ಹಿಂಬದಿಯಲ್ಲಿದ್ದ ಮೂವರು ಪ್ರಯಾಣಿಕರನ್ನು ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರ್ಯಾಷ್ ಡ್ರೈವಿಂಗ್ : ಕಾರು ಚಾಲಕ ವೈದ್ಯಕೀಯ ವಿದ್ಯಾರ್ಥಿ ಪಾರ್ಟಿ ಮುಗಿಸಿ ಅಮಿತ ವೇಗದಲ್ಲಿ ಕಾರು…
Author: UllalaVani
UN NETWORKS ಕೊಣಾಜೆ: ದೇಶದ ಅಭಿವೃದ್ಧಿಯಲ್ಲಿ ವಿಜ್ಞಾನ ಕ್ಷೇತ್ರದ ಸಂಶೋಧನೆ ಮಹತ್ವದ್ದಾಗಿದ್ದು ಭಾರತೀಯ ಪ್ರತಿಭಾವಂತ ವಿದ್ಯಾರ್ಥಿಗಳು ವಿದೇಶಕ್ಕೆ ತೆರಳಿ ತಮ್ಮಲ್ಲಿರುವ ಜ್ಞಾನವನ್ನು ಅಲ್ಲಿ ಹಂಚುವುದರಿಂದ ತಮ್ಮ ಸಂಶೋಧನೆ ನಡೆಸುವ ಸಂಸ್ಥೆ ಪೇಟೆಂಟ್ ಪಡೆಯುವ ಮೂಲಕ ಅದರ ಪೂರ್ಣ ಪ್ರಮಾಣದ ಲಾಭ ಪಡೆಯುತ್ತದೆ. ಹಾಗಾಗಿ ಭಾರತೀಯ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಮಾತೃಭೂಮಿಯಲ್ಲಿಯೇ ಸಂಶೋಧನೆಗೆ ಬಳಸುವ ಮೂಲಕ ಭಾರತಕ್ಕೆ ಪೂರ್ಣ ಪ್ರಮಾಣದ ಲಾಭವನ್ನು ದೊರಕುವಂತೆ ಮಾಡಬೇಕು. ಅಂತಹ ಕಾರ್ಯದಿಂದ ವಿದೇಶಿಯರ ಮುಂದೆ ನಾವು ಸದಾ ಕೈಚಾಚುವ ಅನಿವಾರ್ಯತೆಯನ್ನು ತಪ್ಪಿಸಬಹುದು ಎಂದು ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು. ಅವರು ಶನಿವಾರ ಮಂಗಳೂರು ವಿವಿಯ ಮಂಗಳಾ ಆಡಿಟೋರಿಯಂನಲ್ಲಿ ವಿವಿ ಕುಲಪತಿ ಪ್ರೊ.ಕೆ. ಭೈರಪ್ಪ ಅವರಿಗೆ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಸಾಹಿತಿಗಳು ಹಾಗೂ ವಿಜ್ಞಾನಿಗಳು ಉತ್ತಮ ಆಡಳಿತಗಾರರಾಗಲು ಸಾಧ್ಯವಿಲ್ಲ ಎಂಬ ಮಾತು ಇದೆಯಾದರೂ ಅದನ್ನು ತಪ್ಪು ಎಂದು ತೋರಿಸಿಕೊಟ್ಟವರಲ್ಲಿ ಕುವೆಂಪು ಸಾಲಿಗೆ ಮಂಗಳೂರು ವಿವಿಯಲ್ಲಿ ಕಾರ್ಯ ನಿರ್ವಹಿಸಿದ ಪ್ರೊ.ಕೆ. ಭೈರಪ್ಪ ಅವರು ಉದಾಹರಣೆ.…
UN NETWORKS ಉಳ್ಳಾಲ: ವಿದ್ಯಾರ್ಥಿಗಳಲ್ಲಿ ಪರಿಸರದ ಕುರಿತು ಕಾಳಜಿ ಅಗತ್ಯವಿದ್ದು, ಶಿಕ್ಷಣದೊಂದಿಗೆ ಪರಿಸರ ರಕ್ಷಣೆಗೆ ಆದ್ಯತೆ ನೀಡುತ್ತಿದ್ದು, ಈ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಶಿಕ್ಷಣ ಸಂಸ್ಥೆಯಿಂದ ನಡೆಯಲಿದೆ ಎಂದು ಪಾನೀರ್‍ನ ಆಸ್ಸಿಸಿ ಸೆಂಟ್ರಲ್ ಸ್ಕೂಲ್‍ನ ಪ್ರಾಂಶುಪಾಲೆ ಸಿಸ್ಟರ್ ಜೂಲಿಯಾನ ಪಾೈಸ್ ಅಭಿಪ್ರಾಯಪಟ್ಟರು. ದೇರಳಕಟ್ಟೆಯ ಪಾನೀರ್‍ನಲ್ಲಿರುವ ಅಸ್ಸಿಸಿ ಸೆಂಟ್ರಲ್ ಸ್ಕೂಲ್‍ನಲ್ಲಿ ಶಾಲಾ ಪ್ರಾರಂಬೊತ್ಸವ ಪ್ರಯುಕ್ತ ಸ್ವಚ್ಛ ಪರಿಸರ ಸಂದೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಭಾಸ್ಕರ ರೈ, ಚಿತ್ರಕಲಾ ಶಿಕ್ಷಕ ಸೂರ್ಯಕಾಂತ್ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು. ಸ್ವಚ್ಛ ಪರಿಸರ ಜಾಗೃತಿ ಪ್ರಯುಕ್ತ ಪರಿಸರಸದಲ್ಲಿ ವಿವಿಧ ಗಿಡಗಳ ಬೀಜ ಹಾಕಲಾಯಿತು.
UN NETWORKS ಉಳ್ಳಾಲ: ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡುವುದು ದೇವರ ಕೆಲಸವಾಗಿದ್ದು, ಇಂತಹ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಡೈಮಂಡ್ ಸ್ಪೋಟ್ರ್ಸ್ ಮತ್ತು ಕಲ್ಚರಲ್ ಎಸೋಸಿಯೇಶನ್ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಮಾಜಿಕ ಸೇವೆಯನ್ನು ನಡೆಸಲಿ ಎಂದು ಸಯ್ಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಚಾಲನೆ ನೀಡಿದರು. ಉಳ್ಳಾಲ ಮುಕ್ಕಚ್ಚೇರಿ ಡೈಮಂಡ್ ಸ್ಪೋಟ್ರ್ಸ್ ಮತ್ತು ಕಲ್ಚರಲ್ ಎಸೋಸಿಯೇಶನ್ ವತಿಯಿಂದ ಉಳ್ಳಾಲ ಒಂಭತ್ತುಕೆರೆ ದ,ಕ,ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಳೆದ 24 ವರ್ಷದಿಂದ ಉಳ್ಳಾಲ ಮುಕ್ಕಚ್ಚೇರಿ ಅಂಗನವಾಡಿ ಕಾರ್ಯಕರ್ತೆಯಾಗಿ ಮತ್ತು ಸರಕಾರದಿಂದ ಸಿಗುವ ಸವಲತ್ತುಗಳನ್ನು ಜನಸಾಮಾನ್ಯರಿಗೆ ಒದಗಿಸುವ ಕೆಲಸವನ್ನು ನಿರ್ವಹಿಸುತ್ತಿರುವ ಧರ್ಮಿಣಿಯವರನ್ನು ಸನ್ಮಾನಿಸಲಾಯಿತು. ಸಾಮಾಜಿಕ ಕಾರ್ಯಕರ್ತ ಯು.ಬಿ. ಮಾರಪ್ಪ, ಉಳ್ಳಾಲ ನಗರ ಸಭೆ ಸದಸ್ಯ ಮುಹಮ್ಮದ್ ಮುಕ್ಕಚ್ಚೇರಿ, ಶಾಲಾ ಮುಖ್ಯೋಪದ್ಯಾಯಿನಿ ಪುಷ್ಪಾ, ಡೈಮಂಡ್ ಸ್ಪೋಟ್ರ್ಸ್ ಮತ್ತು ಕಲ್ಚರಲ್ ಎಸೋಸಿಯೇಶನ್ ಉಪಾಧ್ಯಕ್ಷ ಖಾಲೀದ್, ವ್ಯವಸ್ಥಾಪಕ ಇಂತಿಯಾಝ್ ಶೇಖ್,ಕೋಶಾಧಿಕಾರಿ ಇಕ್ಬಾಲ್, ಸದಸ್ಯರಾದ ಹನೀಫ್ ಗೋವಾ, ಇಮ್ತಿಯಾಝ್, ಸಿದ್ದೀಕ್, ಇಜಾಝ್,…
UN NETWORKS ಉಳ್ಳಾಲ: ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗಲು ಜವಬ್ದಾರಿಯಿಂದ ಕರ್ತವ್ಯ ನಿರ್ವಹಿಸುವುದು ಹಾಗೂ ದಕ್ಷತೆ ಕಾಪಾಡಿಕೊಳ್ಳುವುದು ಅತಿ ಮುಖ್ಯ ಎಂದು ದೇರಳಕಟ್ಟೆಯ ಕಣಚೂರು ವೈದ್ಯಕೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಅಬ್ದುಲ್ ರಹಿಮಾನ್ ಹೇಳೀದರು. ನಾಟೆಕಲ್‍ನ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಶುಕ್ರವಾರ ನಡೆದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಗಾರದಿಂದ ಪರಸ್ಪರ ಜ್ಞಾನ ಹಂಚುವ ಕಾರ್ಯ ನಡೆಯುತ್ತದೆ. ಹಾಗೆಯೇ ತಮ್ಮ ಕ್ಷೇತ್ರದಲ್ಲಾಗುತ್ತಿರುವ ಆವಿಷ್ಕಾರ ಸಂಶೋಧನೆಗಳನ್ನು ಅರಿಯಲು ಸಾಧ್ಯವಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು, ವೈದ್ಯರು, ತಜ್ಞರು ಕಾರ್ಯಗಾರದಲ್ಲಿ ಪಾಲ್ಗೊಳ್ಳುವ ಮೂಲಕ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ.ಎಚ್.ಎಸ್. ವಿರೂಪಾಕ್ಷ, ವೈದ್ಯಕೀಯ ಅಧೀಕ್ಷಕ ಡಾ. ದೇವಿಪ್ರಸಾದ್ ಶೆಟ್ಟಿ, ಕೆಎಂಸಿಯ ಡಾ. ಅಣ್ಣಯ್ಯ ಕುಲಾಲ್, ಹಾಗೂ ಸಹಾಯಕ ಡೀನ್ ಡಾ. ಶ್ರೀಶ ಉಪಸ್ಥಿತರಿದ್ದರು. ಕಾರ್ಯಗಾರ ಮುಖ್ಯ ಸಂಘಟನೆ ಕಾರ್ಯದರ್ಶಿ ಡಾ. ಶಕುಂತಲಾ ಆರ್.ರೈ ಸ್ವಾಗತಿಸಿದರು. ಕಾರ್ಯಕ್ರಮ ಸಂಘಟಕ ಡಾ. ರೋಶನ್ ಎಸ್…
UN NETWORKS ತಲಪಾಡಿ:ತಲಪಾಡಿಯ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ನಿಖಿಲ್ ಎನ್ ಶೆಟ್ಟಿ ಇವರು ಭಾರತದ ಸ್ಪೋರ್ಟ್ಸ್ ಅತೋರಿಟಿ ವತಿಯಿಂದ ಟೈಕ್ವೋಂಡೊ ತರಬೇತಿ ಪಡೆಯಲು ಆಯ್ಕೆಯಾಗಿರುತ್ತಾರೆ.ಇವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಗೂ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಿಂದ ಎಸ್. ಎ. ಐ ಗೆ ಆಯ್ಕೆಯಾಗಿರುವ ಪ್ರಥಮ ವಿದ್ಯಾರ್ಥಿಯಾಗಿರುತ್ತಾರೆ. ಶಾಲಾ ಆಡಳಿತ ಮಂಡಳಿ, ಶಿಕ್ಷಕ ಹಾಗೂ ಶಿಕ್ಷಕೇತರ ವರ್ಗದವರು ವಿದ್ಯಾರ್ಥಿಯನ್ನು ಅಭಿನಂದಿಸಿರುತ್ತಾರೆ.
UN NETWORKS ಹರೇಕಳ: ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ವಿನೂತನವಾಗಿ “ಚಿಣ್ಣರ ನಡಿಗೆ ವಿದ್ಯಾದೇಗುಲ ಕಡೆಗೆ” ಎನ್ನುವ ಶೀರ್ಷಿಕೆ ಅಡಿಯಲ್ಲಿ ಆಚರಿಸಲ್ಪಡಲಾಯಿತು. ಎಂಟನೇಯ ತರಗತಿಗೆ ನೂತನವಾಗಿ ಸೇರ್ಪಡೆಗೊಂಡ 88 ವಿದ್ಯಾರ್ಥಿಗಳನ್ನು ಮಾವಿನ ಎಲೆ ತೋರಣ ಮತ್ತು ಬಾಳೆಗಿಡಗಳಿಂದ ಶೃಂಗರಿಸಲ್ಪಟ್ಟ ಸ್ವಾಗತ ಕಮಾನುನಲ್ಲಿ ಬ್ಯಾಂಡ್ ಸೆಟ್ ವಾದ್ಯ ಘೋಷಗಳೊಂದಿಗೆ ಶಾಲಾ ಸಭಾಂಗಣದ ಕಡೆ ಬರಮಾಡಿಕೊಳ್ಳಲಾಯಿತು. ಮೊದಲಿಗೆ ಶಾಲಾ ಶಿಕ್ಷಕಿ ವೃಂದದವರಾದ ಉಷಾಲತ, ಮೋಹಿನಿ, ಕುಮುದ, ಸ್ಮಿತಾ, ನೂತನ ಇವರುಗಳು ನೂತನ ಮಕ್ಕಳನ್ನು ಆರತಿ ಬೆಳಗಿ, ಹಣೆಗೆ ಕುಂಕುಮವನ್ನಿಟ್ಟು ಸ್ವಾಗತಿಸಿದರು. ನಂತರ ವಿದ್ಯಾರ್ಥಿಗಳು ತಮ್ಮ ಪೋಷಕರ ಪಾದ ಮುಟ್ಟಿ ಆಶೀರ್ವಾದ ತೆಗೆದುಕೊಂಡಾಗ ಮಕ್ಕಳಿಗೆ ಅಕ್ಷತೆ ಮತ್ತು ಹೂವನ್ನು ಹಾಕಿ ಗೌರವಿಸಲಾಯಿತು. ಅದರಂತೆ ಹೆತ್ತವರು ಶಿಕ್ಷಕ ವೃಂದದವರಿಗೆ ಗುರುದಕ್ಷಿಣೆಯನ್ನು ನೀಡಿ ಗೌರವ ಸಲ್ಲಿಸಿದರು. ತದ ನಂತರ ನಡೆದ ಸೊಗಸಾದ ಸಭಾ ಕಾರ್ಯಕ್ರಮವನ್ನು ಹಿಂಗಾರವನ್ನು ಅರಳಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡಿದ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕಿ ಸಾವಿತ್ರಿ ಎಸ್.ರಾವ್‍ರವರು ಮಕ್ಕಳು ಅತ್ಯಧಿಕ ಅಂಕಗಳನ್ನು ಪಡೆದ…
UN NETWORKS ತೊಕ್ಕೊಟ್ಟು: ಎಡಬಿಡದೆ ಸುರಿದ ಮಳೆಯಿಂದಾಗಿ ತೊಕ್ಕೊಟ್ಟು ಜಂಕ್ಷನ್‍ನಲ್ಲಿರುವ ಪ್ರದೇಶವು ಜಲಾವೃತಗೊಂಡಿದ್ದು ಅಂಗಡಿ ಮುಂಗಟ್ಟುಗಳಿಗೆ ಮಳೆ ನೀರು ನುಗ್ಗಿ , ಸಾರ್ವಜನಿಕರಿಗೆ ಹಾಗೂ ವರ್ತಕರಿಗೆ ತುಂಬಾ ತೊಂದರೆಯಾಗಿರುವುದನ್ನು ಗಮನಿಸಿದ ಸಂಸದ ನಳಿನ್ ಕುಮಾರ್ ಕಟೀಲ್‍ರವರು ತ್ವರಿಗ ಕಾಮಗಾರಿಗೆ ಆದೇಶಿಸಿದ್ದು ಬುಧವಾರ ಕಾಮಗಾರಿ ನಡೆದಿದೆ. ಮಂಗಳವಾರ ತೊಕ್ಕೊಟ್ಟು ಜಂಕ್ಷನ್‍ನಲ್ಲಿ ಮಳೆ ನೀರಿನಿಂದಾಗುತ್ತಿರುವ ತೊಂದರೆಯನ್ನು ಪರಿಶೀಲಿಸುವಂತೆ ರಾಷ್ಟ್ರೀಯ ಹೆದ್ದಾರಿ ಮತ್ತು ನಗರಸಭೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಆ ಪ್ರದೇಶದ ಕಾಮಗಾರಿಗಳ ತೊಂದರೆ ಮತ್ತು ಸರಾಗವಾಗಿ ನೀರು ಹರಿದು ಹೋಗಲು ವ್ಯವಸ್ಥೆಗಳನ್ನು ಮಾಡುವಂತೆ ಸೂಚಿಸಿದ್ದು ಅದರಂತೆ ಬುಧವಾರ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ನೇತೃತ್ವದಲ್ಲಿ ಕಾಮಗಾರಿಗಳು ಬಾಕಿ ಇದ್ದ ಎಲ್ಲ ಪ್ರದೇಶಗಳ ವೀಕ್ಷಣೆ ನಡೆಸಿ ತಕ್ಷಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಅಜಿತ್, ಶಿವಪ್ರಸಾದ್, ನವಯುಗ್‍ನ ಯೋಗೇಂದ್ರ ರೆಡ್ಡಿ, ಉಳ್ಳಾಲ ನಗರ ಸಭೆಯ ಅಧಿಕಾರಿಗಳಾದ ಗೋಪಾಲಕೃಷ್ಣ, ದಿನಕರ ಶೆಟ್ಟಿ, ಮಾಜಿ ಕೌನ್ಸಿಲರ್ ದಯಾನಂದ ತೊಕ್ಕೊಟ್ಟು, ಜೀವನ್ ಕುಮಾರ್ ತೊಕ್ಕೊಟ್ಟು,…
UN NETWORKS ಉಳ್ಳಾಲ : ಉಳ್ಳಾಲದಾದ್ಯಂತ ಮಂಗಳವಾರ ಸುರಿದ ಮಳೆಗೆ ತೊಕ್ಕೊಟ್ಟು ಜಂಕ್ಷನ್, ಕುತ್ತಾರು ಜಂಕ್ಷನ್ ಜಲಾವೃತಗೊಂಡಿದ್ದು, ತೊಕ್ಕೊಟ್ಟುವಿನಲ್ಲಿ ಹೋಟೆಲ್ ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಉಳ್ಳಾಲದಲ್ಲಿ ಸಮುದ್ರ ಬಿರುಸುಗೊಂಡಿದ್ದು, ಯಾವುದೇ ಹಾನಿಯಾಗಿಲ್ಲ. ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಜಂಕ್ಷನ್‍ನಲ್ಲಿ ಫ್ಲೈಓವರ್ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಕಾಮಗಾರಿಗೆ ಸಂಬಂಧಪಟ್ಟಂತೆ ರಸ್ತೆಯನ್ನು ಅಗೆದಿದ್ದು, ಮಂಗಳವಾರ ಸುರಿದ ಭಾರೀ ಮಳೆಗೆ ಫ್ಲೈ ಓವರ್‍ಗೆ ತೆಗೆದಿದ್ದ ಹೊಂಡದಲ್ಲಿ ನೀರು ತುಂಬಿ ರಸ್ತೆ ಮತ್ತು ಪಕ್ಕದ ಮೂರು ಕಟ್ಟಡಗಳಲ್ಲಿರುವ ಅಂಗಡಿಗಳಿಗೆ ನೀರು ತುಂಬಿದೆ. ಹೆದ್ದಾರಿಯಲ್ಲಿ ನೀರು ನಿಂತ ಪರಿಣಾಮ ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ಸಂಚರಿಸುವ ವಾಹನಗಳಿಗೆ ಸಂಚಾರಕ್ಕೆ ತಡೆಯಾಯಿತು. ಘಟನೆಗೆ ಸಂಬಂ„ಸಿದಂತೆ ಉಳ್ಳಾಲ ಮುಖ್ಯಾ„ಕಾರಿಗಳು ಜನಪ್ರತಿನಿಧಿಗಳು ಭೇಟಿ ನೀಡಿದ್ದು, ಹೆದ್ದಾರಿ ಇಲಾಖೆಯ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು. ರಾತ್ರಿ ವೇಳೆಯೂ ಅಂಗಡಿಗಳಿಗೆ ನೀರು ತುಂಬಿರುವುದನ್ನು ಅಂಗಡಿ ಮಾಲೀಕರುಇ ಸೇರಿದಂತೆ ನೌಕರರು ಶ್ರ,ಮಪಟ್ಟರು. ಕೃತಕ ನೆರೆಯಿಂದ ಲಕ್ಷಾಂತರ ನಷ್ಟ ಅಂದಾಜಿಸಲಾಗಿದೆ. ಬಿರುಸುಗೊಂಡ ಸಮುದ್ರ : ಉಳ್ಳಾಲ ಸೇರಿದಂತೆ…
UN NETWORKS ಉಳ್ಳಾಲ: ಸಿಡಿಲು ಬಡಿದು ಸೋಮೇಶ್ವರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮನೆಗೆ ಅಪಾರ ಹಾನಿಯುಂಟಾಗಿದ್ದು, ಇದೇ ವೇಳೆ ಸಮೀಪದ ಮನೆಗಳಿಗೂ ಹಾನಿಯಾಗಿರುವ ಘಟನೆ ಕುಂಪಲ ಕೃಷ್ಣನಗರದ ಎರಡನೇ ಕ್ರಾಸಿನಲ್ಲಿ ಭಾನುವಾರ ತಡರಾತ್ರಿ ವೇಳೆ ಸಂಭವಿಸಿದೆ. ಸೋಮೇಶ್ವರ ಗ್ರಾ.ಪಂ ಉಪಾಧ್ಯಕ್ಷೆ ಸುಶೀಲಾ.ಯಸ್.ನಾಯಕ್ ಹಾಗೂ ಅವರ ಪತಿ ನಿವೃತ್ತ ತಹಶೀಲ್ದಾರ್ ಆಗಿರುವ ಎಸ್.ಎಸ್ ನಾಯಕ್ ಅವರು ಮನೆಯೊಳಗಿದ್ದ ಸಂದರ್ಭ ಘಟನೆ ಸಂಭವಿಸಿದೆ. ಭಾನುವಾರ ಸಂಜೆಯಿಂದ ಭಾರೀ ಗುಡುಗು ಸಹಿತ ಮಳೆಯಾಗಿದ್ದು, ಪರಿಣಾಮವಾಗಿ ತಡರಾತ್ರಿ ಸುಶೀಲಾ ಅವರ ಮನೆಯ ತಾರಸಿಗೆ ಬಡಿದು ಸಿಮೆಂಟು ಎದ್ದುಬಂದಿದ್ದು, ತಾರಸಿಯ ಮೇಲೆ ಕಿರಿದಾದ ಹೊಂಡ ಉಂಟಾಗಿದೆ. ಮನೆಯೊಳಗಿದ್ದ ಇಲೆಕ್ಟ್ರಾನಿಕ್ಸ್ ಸಾಮಗ್ರಿಗಳೆಲ್ಲ ಹಾನಿಯಾಗಿದೆ. ಎರಡು ತಿಂಗಳ ಹಿಂದೆಯಷ್ಟೇ ಮನೆಯ ಗೃಹಪ್ರವೇಶವಾಗಿತ್ತು. ಸ್ಥಳಕ್ಕೆ ಸೋಮೇಶ್ವರ ಗ್ರಾ.ಪಂ ಅಧ್ಯಕ್ಷ ರಾಜೇಶ್ ಉಚ್ಚಿಲ್ ಭೇಟಿ ನೀಡಿದರು.

