UN NETWORKS
ಉಳ್ಳಾಲ: ರಾಜ್ಯದಲ್ಲಿ ಶೇ.78 ರಷ್ಟು ಮುಸ್ಲಿಮರಿದ್ದು, ಅವರ ಮತದಾನದಿಂದ ರಾಜ್ಯದಲ್ಲಿ 78 ಕಾಂಗ್ರೆಸ್ ಸೀಟುಗಳು ಬಂದಿವೆ. ಈ ನಿಟ್ಟಿನಲ್ಲಿ ಹಿಂದಿನ ಸರಕಾರದ ಅವಧಿಯಲ್ಲಿ ಎರಡು ದೊಡ್ಡ ಖಾತೆಯನ್ನು ಯಶಸ್ವಿಯಾಗಿ ನಿಭಾಯಿಸಿದ ಯು.ಟಿ.ಖಾದರ್ ಅವರಿಗೆ ಸಮ್ಮಿಶ್ರ ಸರಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ತಬೂಖ್ ದಾರಿಮಿ ಒತ್ತಾಯಿಸಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕೋಮುವಾದಿ ಶಕ್ತಿಯನ್ನು ದೂರಮಾಡಲು ಕಾಂಗ್ರೆಸ್ -ಜೆಡಿಎಸ್ ರಚಿಸಿದ ನೂತನ ಸರಕಾರಕ್ಕೆ ಅಭಿನಂದನೆಗಳು. ರಾಜ್ಯದ ಬುದ್ಧಿವಂತರಿಂದಾಗಿ ಕೋಮುವಾದಿಗಳಿಗೆ ಅವಕಾಶವಿಲ್ಲ ಅನ್ನುವ ಸಂದೇಶ ದೇಶದ ಪ್ರಜೆಗಳಿಗೆ ತಲುಪಿದೆ. ಕಳೆದ ಚುನಾವಣೆಯಲ್ಲಿ ಶೇ . 20 ರಷ್ಟು ಲಿಂಗಾಯತರು, ಶೇ.11 ವಕ್ಕಲಿಗರು, ಶೇ. 78 ಮುಸ್ಲಿಮರು , ಶೇ. 60 ಕುರುಬರು, ಶೇ.37 ಎಸ್.ಸಿ , ಎಸ್.ಟಿ ಶೇ. 37 ಮತ್ತು ಒಬಿಸಿಯವರು ಮತ ಚಲಾಯಿಸಿದ್ದಾರೆ. ಆದರೆ ಶೇ. 78 ರಷ್ಟು ಮುಸ್ಲಿಮರ ಮತ ಚಲಾವಣೆಯಿಂದ ರಾಜ್ಯದಲ್ಲಿ 78 ಸೀಟುಗಳು ಕಾಂಗ್ರೆಸ್ಸಿಗೆ ಬಂದಿದೆ. ಈ ನಿಟ್ಟಿನಲ್ಲಿ ಉಪಮುಖ್ಯಮಂತ್ರಿ ಪಟ್ಟವನ್ನು ಮುಸ್ಲಿಂ ಸಮುದಾಯಕ್ಕೆ ನೀಡಬೇಕು.
ಸಿದ್ಧರಾಮಯ್ಯ ನೇತೃತ್ವದ ಸರಕಾರದಲ್ಲಿ ಮಹತ್ವದ ಖಾತೆಯನ್ನು ನಿಭಾಯಿಸಿದ ಜಿಲ್ಲೆಯವರೇ ಆಗಿರುವ ಸಚಿವ ಯು.ಟಿ.ಖಾದರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕಿದೆ. ಈ ಮೂಲಕ 78 ಮತ ಚಲಾಯಿಸಿದ ನಾಗರಿಕರಿಗೆ ನ್ಯಾಯ ನೀಡಿದಂತಾಗುತ್ತದೆ. ಅಲ್ಲದೆ ಮುಂದಿನ ಲೋಕಸಭೆ ಚುನಾವಣೆಯನ್ನು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಲು ಉತ್ತಮ ದಾರಿಯಾಗುತ್ತದೆ ಎಂದರು.


