Author: UllalaVani

Kannada News From Coastal Karnataka

ಉಳ್ಳಾಲ: ಜೆಸಿಐ ಮಂಗಳಗಂಗೋತ್ರಿ ವತಿಯಿಂದ ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇತ್ತೀಚೆಗೆ ಜರಗಿದ ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಣೆ ಸಮಾರಂಭದಲ್ಲಿ 35 ವರ್ಷಗಳ ಕಾಲ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿ, ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಐದು ವರ್ಷಗಳಿಂದ ಸೇವೆಗೈದು, ಕೋವಿಡ್ ಎರಡನೇ ಅಲೆಯ ಸಂದರ್ಭ ಎರಡು ತಿಂಗಳುಗಳ ರಜೆಯನ್ನು ಪಡೆಯದೆ ಕರ್ತವ್ಯಕ್ಕೆ ಹಾಜರಾದ ಹಾಗೂ ಮೇ.31 ರಂದು ನಿವೃತ್ತಿ ಹೊಂದಲಿರುವ ಯೋಗಿನಿ ಕೆ.ಟಿ ಸುವರ್ಣ ಇವರನ್ನು ಅಭಿನಂದಿಸಲಾಯಿತು.ಈ ಸಂದರ್ಭ ಹರೇಕಳ ಶ್ರೀ ರಾಮಕೃಷ್ಣ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರ ರೈ ಕಲ್ಲಿಮಾರು , ರೇಚಲ್ ಸಂಸ್ಥೆಯ ನಿರ್ದೇಶಕಿ ನಿರ್ಮಾ ಡಿಸೋಜ, , ಸ್ಥಾಪಕ ಅಧ್ಯಕ್ಷ ತ್ಯಾಗಂ ಹರೇಕಳ, ಕೊಣಾಜೆ ಮಂಗಳಗಂಗೋತ್ರಿ ಜೆಸಿಐ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹ, ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ ಡಾ. ಮಿಸ್ರಿಯಾ, ಲ್ಯಾಬ್ ಟೆಕ್ನಿಕಲ್ ಅಧಿಕಾರಿ ಜಲೀಲ್ ಇಬ್ರಾಹಿಂ, ಸಿಸ್ಟರ್ ಮರಿಯಮ್ಮ, ಪೆÇಸಕುರಲ್ ಸಂಸ್ಥೆ ನಿರ್ದೇಶಕ ವಿದ್ಯಾಧರ್ ಶೆಟ್ಟಿ, ಕಾರ್ಯದರ್ಶಿ ಪ್ರತಿಮಾ…

Read More

ಉಳ್ಳಾಲ: ಕುತ್ತಾರು ಜಂಕ್ಷನ್ ಅಭಿವೃದ್ಧಿಗೆ ನೀಲಿನಕ್ಷೆ ತಯಾರಾಗಿದೆ. ಅಭಿವೃದ್ಧಿ ಸಂದರ್ಭ ರಸ್ತೆ ಬದಿಯ ಮೀನು ಮತ್ತು ತರಕಾರಿ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಬೇಕು. ಅವರಿಗಾಗಿ ಮಿನಿ ಮಾರುಕಟ್ಟೆಯನ್ನು ಜಂಕ್ಷನ್ ನಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಸರಕಾರದ ಆದ್ಯತೆಯಂತೆ ಅಂಗಡಿಗಳನ್ನು ಪಡೆದುಕೊಳ್ಳಬಹುದು ಎಂದು ಶಾಸಕ ಯು.ಟಿ ಖಾದರ್ ಹೇಳಿದರು.ಅವರು ಕುತ್ತಾರು ಜಂಕ್ಷನ್ನಿನಲ್ಲಿ ಮುನ್ನೂರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಕೈಗೊಂಡಿರುವ ಶ್ರಮಾದಾನ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು.ಕೋವಿಡ್ -19 ಕಾರ್ಯಾಚರಣೆ ನಡುವೆಯೂ ರಜೆಯ ದಿನವನ್ನು ಉಪಯೋಗಿಸಿಕೊಂಡು ಗ್ರಾ.ಪಂ ಅಧ್ಯಕ್ಷರು , ಉಪಾಧ್ಯಕ್ಷರು ಹಾಗೂ ಸದಸ್ಯರು ಸೇರಿಕೊಂಡು ಶ್ರಮಾದಾನ ಕೈಗೊಂಡಿರುವ ಕಾರ್ಯ ಶ್ಲಾಘನೀಯ. ಈ ಮೂಲಕ ಗಾಂಧೀಜಿಯ ಕನಸನ್ನು ನನಸುಗೊಳಿಸುವ ಕಾರ್ಯವಾಗಿದೆ ಎಂದ ಅವರು ರೂ. 20 ಕೋಟಿ ಅನುದಾನದಲ್ಲಿ ದೇರಳಕಟ್ಟೆಯಿಂದ ಕುತ್ತಾರು ಜಂಕ್ಷನ್ ಚತುಷ್ಪಥ ರಸ್ತೆಗೆ ಅನುದಾನ ಮಂಜೂರಾಗಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ. ಈ ಸಂದರ್ಭ ಜನನಿಬಿಡ ಮತ್ತು ಹಲವು ಮಳಿಗೆಗಳ ಕೇಂದ್ರ ಸ್ಥಾನ ಆಗಿರುವ ಕುತ್ತಾರು ಜಂಕ್ಷನ್ ಅಭಿವೃದ್ಧಿಯ ನೀಲಿನಕ್ಷೆಯನ್ನು ತಯಾರಿಸಲಾಗಿದೆ. ಅಭಿವೃದ್ಧಿ…

Read More

ಉಳ್ಳಾಲ: ಅಂಬ್ಲಮೊಗರು ಜನತೆಗೆ ನೀರಿನ ಸಮಸ್ಯೆ ಉದ್ಭವವಾದಾಗ ಗ್ರಾ.ಪಂ ಆಡಳಿತ ಮುಂದೆ ನಿಂತು ಕೊಳವೆ ಬಾವಿ ವ್ಯವಸ್ಥೆಯನ್ನು ಕಲ್ಪಿಸಿದೆ. ಈ ಮೂಲಕ ಕುಡಿಯುವ ನೀರಿಗಾಗಿ ಇಡಲಾದ ಅನುದಾನವನ್ನು ಸಮರ್ಪಕವಾಗಿ ಉಪಯೋಗಿಸಲಾಗಿದೆ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.ಅವರು ಅಂಬ್ಲಮೊಗರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಕ ಜಂಕ್ಷನ್ ಸಮೀಪ ಶಾಸಕರ ಅನುದಾನದಲ್ಲಿ ನಿರ್ಮಿಸಲಾದ ಕೊಳವೆ ಬಾವಿಗೆ ಚಾಲನೆ ನೀಡಿ ಭಾನುವಾರ ಮಾತನಾಡಿದರು.ಉಪಕಾರ ಮಾಡಿದ ಸಂಸ್ಕೃತಿಯನ್ನು ಮರೆಯುವ ಜನರಲ್ಲ ಅಂಬ್ಲಮೊಗರು ಗ್ರಾಮದವರು. ಈ ಭಾಗದ ಮಕ್ಕಳಿಂದ ವಯಸ್ಸಾದವರಿಗೆ ಅಂಬ್ಲಮೊಗರು ಗ್ರಾಮದ ಅಭಿವೃದ್ಧಿಗೆ ಕಾಂಗ್ರೆಸ್ ಶ್ರಮಿಸಿದೆ ಎಂಬುದು ಗೊತ್ತಿದೆ. ಈ ನಿಟ್ಟಿನಲ್ಲಿ ಜನ ಎಂದಿಗೂ ಕಾಂಗ್ರೆಸನ್ನು ಮರೆಯಲು ಅಸಾಧ್ಯ. ಊರಿನ ಹಿರಿಯರಿಂದ ಕಿರಿಯರವರೆಗೆ ತಾಳ್ಮೆಯಿಂದ ಸಹಕರಿಸುತ್ತಿರುವ ಹಿನ್ನೆಲೆಯಲ್ಲಿ ಮುಂದೆಯೂ ಹಂತಹಂತವಾಗಿ ಅಭಿವೃದ್ಧಿ ಕಾರ್ಯ ಮುಂದುವರಿಯಲಿದೆ ಎಂದರು.ಈ ವೇಳೆ ಅಂಬ್ಲಮೊಗರು ಗ್ರಾ.ಪಂ. ಅಧ್ಯಕ್ಷೆ ಲತಾ, ಉಪಾಧ್ಯಕ್ಷ ಇಕ್ಬಾಲ್, ತಾ.ಪಂ ಮಾಜಿ ಸದಸ್ಯ ಸುದರ್ಶನ್ ಶೆಟ್ಟಿ , ಗ್ರಾ.ಪಂ ಸದಸ್ಯರುಗಳಾದ ಸುಗಂದ್ ಶಟ್ಟಿ, ಸುಭಾಷ್ ಶೆಟ್ಟಿ, ರವಿ ಪೂಜಾರಿ,…

Read More

ಉಳ್ಳಾಲ: ಸಮುದ್ರದ ದಡಕ್ಕೆ ಮೀನುಗಾರಿಕಾ ಬೋಟ್ ಅಪ್ಪಳಿಸಿರುವ ಘಟನೆ ಉಳ್ಳಾಲದ ಕೋಡಿ ಸಮುದ್ರ ತೀರದಲ್ಲಿ ಭಾನುವಾರ ತಡರಾತ್ರಿ 1.30 ಗಂಟೆಗೆ ನಡೆದಿದೆ. ಸಮುದ್ರ ಮಧ್ಯೆ ಮೀನುಗಾರಿಕೆಗೆಂದು (ಕೊಳಾಯಿ )ನಿಲ್ಲಿಸಿದ್ದ ಸಂದರ್ಭ ಹಗ್ಗ ತುಂಡಾಗಿ ದಡಕ್ಕೆ ಅಪ್ಪಳಿಸಿದೆ ಎಂದು ಬೋಟ್ ಮಾಲೀಕರು ತಿಳಿಸಿದ್ದಾರೆ.ತಮಿಳು ಮೂಲದ ಅನೀಸ್, ಸೂಸರಾಜ್, ಸಲೀಂ, ಮೊಯ್ದೀನ್, ರಾಜ್, ಜಾಜ್9 ,ರಾಜೀವ್ ಗಾಂಧಿ, ತಂಗಾರ್, ಬನ್ನಾನ್ ರಕ್ಷಣೆಗೊಳಗಾದವರು.ಬೋಳಾರದ ಫಾರುಕ್ ಮತ್ತು ಉಳ್ಳಾಲ ಮುಕ್ಕಚ್ಚೇರಿಯ ಅಶ್ರಫ್ ಹೆಚ್. ಎಂಬವರಿಗೆ ಸೇರಿದ ‘ಅಝ್ನಾನ್’ ಹೆಸರಿನ ಮೀನುಗಾರಿಕಾ ಬೋಟ್ ದಡಕ್ಕೆ ಅಪ್ಪಳಿಸಿದೆ. ಶನಿವಾರ ರಾತ್ರಿ 10 ಗಂಟೆ ವೇಳೆಗೆ 10 ಜನ ಮೀನುಗಾರರಿದ್ದ ಬೋಟ್ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಸಮುದ್ರದ ಮಧ್ಯೆ ಬೋಟನ್ನು ಕೊಳಾಯಿ ಹಾಕಿ ನಿಲ್ಲಿಸಲಾಗಿತ್ತು. ಈ ವೇಳೆ ಜೋರಾಗಿ ಬೀಸಿದ ಗಾಳಿಗೆ ಹಗ್ಗ ತುಂಡಾಗಿ ಉಳ್ಳಾಲ ಕೋಡಿ ಸಮುದ್ರ ತೀರದತ್ತ ಧಾವಿಸಿದ ಬೋಟ್ ದಡಕ್ಕೆ ಅಪ್ಪಳಿಸಿದೆ. ಸ್ಥಳೀಯ ಮನೆಮಂದಿಗೆ ಸಿಡಿಲು ಬಡಿದಂತಹ ಸದ್ದು ಕೇಳಿ ಹೊರನೋಡಿದಾಗ ಮೀನುಗಾರಿಕಾ ಬೋಟ್ ಕಡಲ್ಕೊರೆತ ತಡೆಗೆ…

Read More

ಉಳ್ಳಾಲ: ಕಾರಣಿಕ ಕ್ಷೇತ್ರ ಕೊಂಡಾಣ ಶ್ರೀ ಪಿಲಿಚಾಮುಂಡಿ ಬಂಡ ಮುಂಡತ್ತಾಯ ದೈವಸ್ಥಾನದ ವಾರ್ಷಿಕ ಜಾತ್ರೆ ಕೊರೊನಾ ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ ಹಿನ್ನೆಲೆಯಲ್ಲಿ ಈ ಬಾರಿಯೂ ರದ್ದುಗೊಳಿಸಲಾಗಿದೆ.ಕಳೆದ ವರ್ಷವೂ ರದ್ದಾಗಿದ್ದು, ಕಳೆದ ವರ್ಷ ಜಾತ್ರೆ ರದ್ದಾದ ಕಾರಣಕ್ಕೆ ಪ್ರಾಯಶ್ಚಿತ್ತ ರೂಪದಲ್ಲಿ ಒಂದು ತಿಂಗಳ ಹಿಂದೆ ಜಾತ್ರೆ ನಡೆಸಲು ಮುಜರಾಯಿ ಇಲಾಖೆ ಅನುಮತಿ ನೀಡಿತ್ತು. ಆದರೆ ಈ ಬಾರಿಯೂ ಕೊರೊನಾ ಮಹಾಮಾರಿ ಹರಡುವಿಕೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೊರಡಿಸಿರುವ ಆದೇಶಗಳ ಹಿನ್ನೆಲೆಯಲ್ಲಿ ಜಾತ್ರೆ ರದ್ದಾಗಿದೆ. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್ ಮತ್ತು ಆಡಳಿತ ಮಂಡಳಿ ಹಾಗೂ ಊರ ಹತ್ತು ಸಮಸ್ತರು ಜೊತೆ ಸೇರಿ ದೈವಗಳಲ್ಲಿ ಕ್ಷಮಾಪಣೆ ಬೇಡಿ ಇಂದು ಪ್ರಾರ್ಥನೆ ಸಲ್ಲಿಸಿದ್ದಾರೆ.

Read More

ಉಳ್ಳಾಲ: ಅಂಗಡಿ ಬಳಿ ಮಾಸ್ಕ್ ಧರಿಸದೇ ಕುಳಿತಿದ್ದವರಿಗೆ ಎಚ್ಚರಿಕೆ ನೀಡಿದ ಕಿನ್ಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ವ್ಯಕ್ತಿಯೋರ್ವನ ವಿರುದ್ದ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಿನ್ಯಾ ಬೆಳರಿಂಗೆ ನಿವಾಸಿ ಸಾಕಿರ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಬೆಳರಿಂಗೆ ಬಳಿಯ ಕೆಬಿಎಂ ಜನರಲ್ ಸ್ಟೋರ್ ಬಳಿ ಮಾಸ್ಕ್ ಹಾಕದೇ ಕುಳಿತಿದ್ದವರಿಗೆ ಕಿನ್ಯಾ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿ ಮಹಮ್ಮದ್ ಅಶ್ರಫ್ ಎಚ್ಚರಿಕೆ ನೀಡಿದ್ದರು. ಈ ವೇಳೆ ತಗಾದೆ ತೆಗೆದ ಸಾಕಿರ್ ,ತನ್ನ ಮನೆಯ ಅಂಗಳದಲ್ಲಿ ಕುಳಿತಿದ್ದೇನೆ. ಮಾಸ್ಕ್ ಹಾಕಬೇಕೆಂದೇನಿಲ್ಲ. ಏನು ಬೇಕಾದರೂ ಮಾಡಿ ‘ ನೀವ್ಯಾರು ಕೇಳಲು’ ಎಂದು ಉಡಾಫೆಯಾಗಿ ವರ್ತಿಸಿದ್ದಾನೆ. ಈ ಕುರಿತು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಉಳ್ಳಾಲ ಠಾಣೆಯಲ್ಲಿ ನೀಡಿರುವ ದೂರಿನಂತೆ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯಿದೆ ಉಲ್ಲಂಘನೆ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.

Read More

ಉಳ್ಳಾಲ: ಮುಂಭಾಗದ ಟಯರ್ ಸಿಡಿದು ಡಿವೈಡರ್ ದಾಟಿದ ಕಾರು ಎದುರಿನಿಂದ ಬರುತ್ತಿದ್ದ ಸ್ಕೂಟರಿಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರಿನ ಹಿಂಬದಿ ಸವಾರೆ ವಸಂತಿ ಎಂಬವರು ಫ್ಲೈವರಿನಿಂದ ಕೆಳಗೆ 10 ಮೀ ಕೆಳಕ್ಕೆ ರಸ್ತೆಗೆ ಬಿದ್ದು ಮೃತಪಟ್ಟು, ಪುತ್ರಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತೊಕ್ಕೊಟ್ಟು ಫ್ಲೈಓವರ್ ನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆಕುಂಪಲದ ಆಶ್ರಯಕಾಲನಿ ನಿವಾಸಿ ವಸಂತಿ ನಾಯರ್ (45) ಮೃತಪಟ್ಟವರು . ಪುತ್ರಿ ಶ್ರೀಜಾ ( 20) ಎಂಬವರನ್ನು ಗಂಭೀರ ಸ್ಥಿತಿಯಲ್ಲಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲಕ ಶಮಿತ್ ಎಂಬಾತನನ್ನು ನಾಗುರಿ ಸಂಚಾರಿ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಕುಂಪಲದಿಂದ ಜೆಪ್ಪಿನಮೊಗರುವಿನ ತಾಯಿ ಮನೆಗೆ ವಸಂತಿ ಅವರು ಮಗಳ ಜೊತೆಗೆ ಸ್ಕೂಟರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಎದುರಿನಿಂದ ತೊಕ್ಕೊಟ್ಟು ಫ್ಲೈಓವರ್ ನಲ್ಲಿ ಕಲ್ಲಾಪು ಕಡೆಯಿಂದ ಕಾಪಿಕಾಡು ಕಡೆಯತ್ತ ಬರುತ್ತಿದ್ದ ಕಾರಿನ ಎದುರುಗಡೆಯ ಟಯರ್ ಸಿಡಿದಿದ್ದು, ಇದರಿಂದ ನಿಯಂತ್ರಣ ತಪ್ಪಿದ ಕಾರು ಡಿವೈಡರ್ ದಾಟಿ ಎದುರಿನಿಂದ ಬರುತ್ತಿದ್ದ ಸ್ಕೂಟರಿಗೆ ಢಿಕ್ಕಿ ಹೊಡೆದಿದೆ. ಈ…

Read More

ವರದಿ : ಅರ್ಚನಾ ಎಂ. ಬಂಗೇರ ಕುಂಪಲ ಮಂಗಳೂರು: ದಿ ನ್ಯೂಯಾರ್ಕ್ ನಲ್ಲಿ ನಡೆಯುವ ಫಿಲಂ ಫೆಸ್ಟಿವಲ್ ಗೆ ಭಾರತದ ವತಿಯಿಂದ ಆಯ್ಕೆಯಾದ ಎಲ್ಲಾ ಭಾಷೆಗಳ ಚಲನಚಿತ್ರಗಳ ನಡುವೆ ನೀಲಿಹಕ್ಕಿ ಶಿರಸಿ ಭಾಷೆ ಚಿತ್ರ ಕೂಡ ಆಯ್ಕೆಯಾಗಿದೆ.ನೀಲಿಹಕ್ಕಿಚಿತ್ರದಲ್ಲಿ ಸಿದ್ದಾರ್ಥ ಎಂಬ ಹೆಸರಿನ ಪಾತ್ರದಾರಿಯಾಗಿ ಮಂಗಳೂರಿನ ಅಮನ್. ಎಸ್. ಕರ್ಕೇರಾ ಅವರು ಬಾಲನಟನಾಗಿ ಬಣ್ಣಹಚ್ಚಿ ಅದರಲ್ಲೂ ಬೆಸ್ಟ್ ಚೈಲ್ಡ್ ಆರ್ಟಿಸ್ಟ್ ಗೆ ನೊಮಿನೇಟ್ ಆಗಿರುವುದು ಭಾರತ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸದ್ದಿಲ್ಲದೆ ಮಿಂಚುತ್ತಿದ್ದರೂ ಇನ್ನೂ ತೆರೆಮರೆಯಲ್ಲಿರುವ ಕರಾವಳಿಯ ನವಿರಾದ ಕೇಶ ರಾಶಿಯ ಹಾಲುಗೆನ್ನೆ ಸವಿ ಅಕ್ಕರೆಯ ಮುದ್ದುಮುಖದ ಸೌಂದರ್ಯಗಣಿ, ತುಳುನಾಡಿನ ಬಹುಮುಖ ಬಾಲಪ್ರತಿಭೆ, ಬಾಲನಟ, ವಿ.ಜೆ ಅಮನ್.ಎಸ್. ಕರ್ಕೇರ ಅವರ ಸಾಧನೆಯ ಯಶೋಗಾಥೆ.ನೀರಿಗಿಂತ ತಿಳಿಯಾದದ್ದು-ಜ್ಞಾನ ಪ್ರತಿಭೆ ಎನ್ನುವುದು ದೇವರು ಕೊಟ್ಟ ವರ, ದೇವರ ಅಪ್ಪಣೆ ವಿನಹಃ ಹುಲ್ಲು ಕಡ್ಡಿಯೂ ಅಲುಗಾಡದು. ಸಾಧನೆ ಎಂಬುವುದು ಸಾಗರವಿದ್ದಂತೆ,ಬಗೆದಷ್ಟು ಮುಗಿಯದು. ಮನಸ್ಸಿದ್ದರೆ ಮಾರ್ಗವೆಂಬಂತೆ ಸಾಧನೆ ಫಲಪ್ರದವಾಗಲು ಗುರು, ನಿರ್ದಿಷ್ಟ ಗುರಿ,ಕಠಿಣ ಪರಿಶ್ರಮ,ಧ್ಯೇಯ, ಮಾರ್ಗದರ್ಶನ ಅತ್ಯಗತ್ಯ.ಬೆಳೆಯುವ…

Read More

ಉಳ್ಳಾಲ: ಜೆಸಿಐ  ಮಂಗಳಗಂಗೋತ್ರಿ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಧೈರ್ಯದಿಂದ ಮುನ್ನಡೆಯುವ ಆತ್ಮಸ್ಥೈರ್ಯ ಕೊಡುವಂತಹ ಕಾರ್ಯ ಆಗಿದೆ ಎಂದು  ಹರೇಕಳ ಶ್ರೀ ರಾಮಕೃಷ್ಣ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರ  ರೈ ಕಲ್ಲಿಮಾರು ಹೇಳಿದರು.ಅವರು  ನಾಟೆಕಲ್ ಪ್ರಾಥಮಿಕ ಕೇಂದ್ರದಲ್ಲಿ ಬುಧವಾರ ಜೆಸಿಐ ಮಂಗಳಗಂಗೋತ್ರಿ ವತಿಯಿಂದ 30 ಮಂದಿ ಆಶಾ ಕಾರ್ಯಕರ್ತೆಯರಿಗೆ  ಕಿಟ್ ವಿತರಣೆ  ನಡೆಸಿ ಮಾತನಾಡಿದರು.ವ್ಯಕ್ತಿತ್ವ ವಿಕಸನ ಸಂಸ್ಥೆಯಾಗಿರುವ  ಜೆ.ಸಿ ಐ ಅತ್ಯುತ್ತಮವಾಗಿ ಕಾರ್ಯಾಚರಿಸುತ್ತಿದೆ. ಜೆಸಿಐ  ಸೇರಿಕೊಂಡವರು ವ್ಯಕ್ತಿತ್ವ ರೂಪಿಸಿಕೊಂಡವರುಜೆಸಿಐನಲ್ಲಿ ತೊಡಗಿಸಿಕೊಂಡ ಅನೇಕರು ಸಮಾಜಕ್ಕೆ ಸ್ಪಂಧಿಸಿ ಶಿಕ್ಷಕರಾದವರು.  ಕೊರೊನಾ ಸಂಧಿಗ್ಧ ಕಾಲದಲ್ಲಿ  ಕಟ್ಟ ಕಡೆಯದಾಗಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಕಿಟ್ ನೀಡುವುದು ಮಾನವೀಯತೆಗೆ ಸ್ಪರ್ಶ ಕೊಡುವಂತಹ ಕಾರ್ಯಕ್ರಮ.  ಆಶಾ ಕಾರ್ಯಕರ್ತೆಯರಿಗೆ ಎಲ್ಲಿಯೂ ತೊಂದರೆಯಾಗದಂತೆ ನೋಡಿಕೊಳ್ಳುವುದು ನಾಗರಿಕರ ಜವಾಬ್ದಾರಿ . ವಿಭಿನ್ನ ಸ್ವಭಾವದ ಜನ ವಿಭಿನ್ನವಾಗಿ ಮಾತನಾಡುತ್ತಾರೆ, ಆಶಾ ಕಾರ್ಯಕರ್ತೆಯರು ತಾಳ್ಮೆಯಲ್ಲಿದ್ದುಕೊಂಡು   ದೇವರ ಕೆಲಸ ಎಂದುಕೊಂಡು ಕಾರ್ಯನಿರ್ವಹಿಸಿ ಎಂದರು.ರೇಚಲ್ ಸಂಸ್ಥೆಯ ನಿರ್ದೇಶಕಿ  ನಿರ್ಮಾ ಡಿಸೋಜ ಮಾತನಾಡಿ,ಇತರರ ಸೇವೆ ಮಾಡುವ ಸಂದರ್ಭ ತಮ್ಮಲ್ಲಿ ಆತ್ಮಸ್ಥೈರ್ಯವನ್ನು ತುಂಬಲು…

Read More