Author: UllalaVani

Kannada News From Coastal Karnataka

ಕೊಣಾಜೆ : ಹೆಚ್ಚಾಗಿ ಮೊಬೈಲಿನಲ್ಲಿ ಮಾತನಾಡುತ್ತಿರುವುದನ್ನು ತಾಯಿ ಪ್ರಶ್ನಿಸಿದಕ್ಕೆ ಬಾಲಕಿಯೋರ್ವಳು ಮನೆ ಬಿಟ್ಟು ನಾಪತ್ತೆಯಾಗಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳೆಪುಣಿಯಲ್ಲಿ ನಡೆದಿದೆ.ಈ ಕುರಿತು ತಾಯಿ ಮೀನಾಕ್ಷಿ ಕೊಣಾಜೆ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಜು.6 ರಂದು ಮೀನಾಕ್ಷಿ ಅವರು ಮುಡಿಪು ಪೇಟೆಗೆ ಮಗನ ಜೊತೆಗೆ ಬೆಳಿಗ್ಗೆ 7.30 ರ ಸುಮಾರಿಗೆ ತೆರಳಿದ್ದರು. ಈ ವೇಳೆ ಬಾಳೆಪುಣಿ ಗ್ರಾಮದ ಕುಕ್ಕುದಕಟ್ಟೆ ಸೈಟ್ ನಲ್ಲಿದ್ದ ಕುಮಾರಿ ದೀಕ್ಷಾ (18) ಒಬ್ಬಳೇ ಮನೆಯಲ್ಲಿದ್ದವಳು ನಾಪತ್ತೆಯಾಗಿದ್ದಾಳೆ. ದೀಕ್ಷಾ ಹೆಚ್ಚಾಗಿ ಮೊಬೈಲಿನಲ್ಲಿ ಮಾತನಾಡುತ್ತಿದ್ದುದನ್ನು ತಾಯಿ ಪ್ರಶ್ನಿಸಿದ್ದರು. ಇದೇ ಕಾರಣವನ್ನು ಮುಂದಿಟ್ಟುಕೊಂಡು ಬಾಲಕಿ ನಾಪತ್ತೆಯಾಗಿರುವ ಸಾಧ್ಯತೆ ಇದೆ ಎಂದು ದೂರು ದಾಖಲಿಸಿದ್ದಾರೆ.

Read More

ಉಳ್ಳಾಲ: ಮಹಾಮಾರಿ ಕೊರೊನಾ ಆಮ್ಲಜನಕದ ಅಗತ್ಯತೆಯನ್ನು ಜನರಿಗೆ ತೋರಿಸಿಕೊಟ್ಟಿದೆ. ಈ ನಿಟ್ಟಿನಲ್ಲಿ ಆಮ್ಲಜನಕ ಪೂರೈಸುವ ಗಿಡಗಳ ಸಂರಕ್ಷಣೆ ಅತ್ಯಗತ್ಯ. ಅದಕ್ಕಾಗಿ ಎಲ್ಲರೂ ಪರಿಸರವನ್ನು ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಅಧ್ಯಕ್ಷ ಹಾಗೂ ಜಿ.ಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.ಅವರು ಶ್ರೀ ಬಾಲಕೃಷ್ಣ ಮಂದಿರ ಕುಂಪಲ ಇದರ ರಜತ ವರ್ಷದ ಸಾಮಾಜಿಕ ಕಾರ್ಯಕ್ರಮದ ಅಂಗವಾಗಿ ಭಾರತ ಸರಕಾರದ ನೆಹರು ಯುವ ಕೇಂದ್ರ, ಮಂಗಳೂರು ಇದರ ಸಹಕಾರದೊಂದಿಗೆ ಬಗಂಬಿಲದ ಹಿಂದೂ ರುದ್ರಭೂಮಿಯಲ್ಲಿ ಮೂರುಕಟ್ಟ ಮಿತ್ರ ಮಂಡಲಿ, ಜೈಭಾರತ್ ಫ್ರೆಂಡ್ಸ್ ಕ್ಲಬ್ ಕುಂಪಲ. ವಾಸುಕಿ ಫ್ರೆಂಡ್ಸ್ ಚಿತ್ರಾಂಜಲಿನಗರ, ಮಹಾದೇವಿ ಮಂದಿರ ಬಗಂಬಿಲ, ಬಗಂಬಿಲ ಫ್ರೆಂಡ್ಸ್ ಸರ್ಕಲ್ , ಬಗಂಬಿಲ, ಹಿಂದೂ ಯುವಸೇನೆ ಮಹಾದೇವಿ ಶಾಖೆ ಬಗಂಬಿಲ ಇವುಗಳ ಜಂಟಿ ಆಶ್ರಯದಲ್ಲಿ ಶನಿವಾರ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುವುದರ ಮೂಲಕ ಆಚರಿಸಿದರು.ಪರಿಸರವನ್ನು ಬೆಳೆಸುವ ಕಾರ್ಯಕ್ಕೆ ಕೈ ಹಾಕಿ ಹಿಂದೂ ರುದ್ರಭೂಮಿ ಪರಿಸರ ಒಳ್ಳೆಯ ರೀತಿಯಲ್ಲಿ ಕಾಣುವಂತೆ ವಿಶ್ವ ಪರಿಸರ…

Read More

ಉಳ್ಳಾಲ: ತಂಡವೊಂದು ಯುವಕನಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಧರ್ಮನಗರದಲ್ಲಿ ಇಂದು ಸಂಜೆ ನಡೆದಿದೆ.ಗುರುವಾರ ತೊಕ್ಕೊಟ್ಟು ಬಳಿ ಸಂಭವಿಸಿದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಹಲ್ಲೆ ನಡೆದಿದೆ ಎನ್ನಲಾಗಿದೆ. ಧರ್ಮನಗರ ನಿವಾಸಿ ದಿವಾಕರ ಆಚಾರ್ಯ ಹಲ್ಲೆಗೊಳಗಾದವರು. ರಸ್ತೆ ಬದಿಯಲ್ಲಿ ನಿಂತಿದ್ದ ದಿವಾಕರ್ ಅವರ ಮೇಲೆ ಬೈಕಿನಲ್ಲಿ ಬಂದ ತಂಡ ಯದ್ವಾತದ್ವ ಹಲ್ಲೆ ನಡೆಸಿ ಪರಾರಿಯಾಗಿದೆ. ಗಾಯಾಳು ದಿವಾಕರ್ ಅವರನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಉಳ್ಳಾಲ: ಜನಸಂಖ್ಯೆ ಆಧಾರದಲ್ಲಿ ಗ್ರಾಮಮಟ್ಟದಲ್ಲಿ ವ್ಯಾಕ್ಸಿನೇಷನ್ ವಿತರಿಸುವ ಕುರಿತು ಸರಕಾರದ ಗಮನಕ್ಕೆ ತರುತ್ತೇನೆ. ಹಿರಿಯರಿಗೆ ಹಾಗೂ ಯುವಕರಿಗೆ ಸಮಪಾಲಾಗಿ ವ್ಯಾಕ್ಸಿನೇಷನ್ ಪೂರೈಸುವ ಪ್ರಯತ್ನವನ್ನು ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಅವರು ಸೋಮೇಶ್ವರ ಪುರಸಭೆಯಲ್ಲಿ ಶನಿವಾರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆಗೆ ಹಮ್ಮಿಕೊಂಡಿದ್ದ ಕೋವಿಡ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ವ್ಯಾಕ್ಸಿನೇಷನ್ ಆರಂಭದಲ್ಲಿ ಯಾರೂ ತೆಗೆದುಕೊಳ್ಳಲು ಮುಂದಾಗಲಿಲ್ಲ. ಆದರೆ ಇದೀಗ ಒಮ್ಮಿಂದೊಮ್ಮೆಲೇ ಎಲ್ಲರೂ ವ್ಯಾಕ್ಸಿನ್ ಗಾಗಿ ಮುಗಿಬೀಳುವುದರಿಂದ ಕೊರತೆ ಉಂಟಾಗುವುದು ಸಹಜ. ಸರಕಾರ ಎಲ್ಲರಿಗೂ ವ್ಯಾಕ್ಸಿನ್ ಸಿಗುವಂತೆ ಪ್ರಯತ್ನವನ್ನು ಇಲಾಖೆಗಳ ಮುಖೇನ ಶ್ರಮವಹಿಸಿ ನಡೆಸುತ್ತಿದೆ. ಈವರೆಗೆ ಪುರಸಭೆ ಆಧಾರದಲ್ಲಿ ವ್ಯಾಕ್ಸಿನ್ ವಿತರಿಸುತ್ತಿರುವುದು ಗೊಂದಲಗಳಿಗೆ ಕಾರಣವಾಗುತ್ತಿದೆ. ಮುಂದಿನ ದಿನಗಳಲ್ಲಿ ಜನಸಂಖ್ಯೆ ಆಧಾರದಲ್ಲಿ ವ್ಯಾಕ್ಸಿನ್ ವಿತರಿಸುವ ಕುರಿತು ಸರಕಾರದ ಗಮನಕ್ಕೆ ತರುವುದಾಗಿ ತಿಳಿಸಿದ ಸಚಿವರು, ಸೋಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿ ಬರುವ ಸೋಂಕಿತರ ವಿವರವನ್ನು ಪಡೆದರು.ಶಾಸಕ ಯು.ಟಿ ಖಾದರ್ ಮಾತನಾಡಿ ಕೋಟೆಕಾರು, ಸೋಮೇಶ್ವರ, ತಲಪಾಡಿ, ಭಾಗಕ್ಕೆ 40 ವ್ಯಾಕ್ಸಿನ್ ವಿತರಣೆಯಾದರೆ, ಕಿನ್ಯಾ ಗ್ರಾಮಕ್ಕೆ 30…

Read More

ಉಳ್ಳಾಲ: ಊರವರ ಬೇಡಿಕೆಗೆ ಅನುಸಾರವಾಗಿ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪಂಚಾಯಿತಿನಿಂದ ಬರುವ ಯೋಜನೆಯಿಂದ ಕುಡಿಯುವ ನೀರಿನ ಯೋಜನೆ ಮುಂದಿನ ದಿನಗಳಲ್ಲಿ ಆಗಲಿದೆ. ಯಾತ್ರಿ ನಿವಾಸ ಕಾಮಗಾರಿ ಸಂದರ್ಭ ಸ್ಥಳೀಯರ ಸಹಕಾರ ಅಗತ್ಯ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.ಅವರು ಮಂಜನಾಡಿ ಜಮಾಅತಿನ ಮಸೀದಿ ವಠಾರದಲ್ಲಿ ಪ್ರವಾಸೋದ್ಯಮ ಇಲಾಖೆ ಅನುದಾನದಡಿ ನಿರ್ಮಾಣಗೊಳ್ಳಲಿರುವ ಯಾತ್ರಿ ನಿವಾಸದ ಶೌಚಾಲಯಕ್ಕೆ ಶನಿವಾರ ಶಿಲನ್ಯಾಸ ನೆರವೇರಿಸಿ ಮಾತನಾಡಿದರು.ಮಂಜನಾಡಿ ಗ್ರಾಮ ಹಂತಹಂತವಾಗಿ ಅಭಿವೃದ್ಧಿಯಾಗುತ್ತಿದೆ. ಮಂಜನಾಡಿ ಮಸೀದಿಯೂ ಪ್ರದೇಶದ ಕೇಂದ್ರಬಿಂದುವಿನಲ್ಲಿರುವುದರಿಂದ ಜನ ಹೆಚ್ಚಿನ ಸಂಖ್ಯೆಯಲ್ಲಿ ಸಂದರ್ಶನಕ್ಕೆ ಆಗಮಿಸುತ್ತಾರೆ. ಅವರ ಅನುಕೂಲಕ್ಕಾಗಿ ಯಾತ್ರಿ ನಿವಾಸದ ಕಾಮಗಾರಿ ಆರಂಭವಾಗಲಿದೆ. ಅದಕ್ಕೆ ಪೂರಕವಾಗಿ ಶೌಚಾಲಯದ ನಿರ್ಮಾಣವೂ ಶೀಘ್ರವೇ ಆಗಲಿದೆ. ಈಗಾಗಲೇ ಕಂಪೌಂಡ್ ನಿರ್ಮಾಣದ ಕಾಮಗಾರಿ ಪೂರ್ಣಗೊಂಡಿದೆ. ಗ್ರಾಮದ ಅಭಿವೃದ್ಧಿಗೆ ಹಚ್ಚಿನ ಗಮನ ಹರಿಸಲಾಗಿದೆ. ಹಂತಹಂತವಾಗಿ ನಡೆಸಲಾಗುವುದು ಎಂದರು.ಮಂಜನಾಡಿ ಮಸೀದಿಯ ಉಸ್ತಾದ್ ಅಹಮ್ಮದ್ ಬಾಖವಿ ದುಆ ನೆರವೇರಿಸಿದರು.ಮಂಜನಾಡಿ ಜಮಾಅತ್ ಅಧ್ಯಕ್ಷ ಮೈಸೂರ್ ಬಾವಾ , ಕಾರ್ಯದರ್ಶಿ ಅಝೀಜ್ ಪರ್ತಿಪ್ಪಾಡಿ, ಉಪಾಧ್ಯಕ್ಷ ಎನ್. ಎಸ್ ಕರೀಂ ,…

Read More

ಉಳ್ಳಾಲ: ಇಲ್ಲಿನ ನಗರಸಭಾ ವ್ಯಾಪ್ತಿ ಸಮುದ್ರ ಮತ್ತು ನೇತ್ರಾವತಿ ನದಿಯನ್ನು ಹೊಂದಿರುವುದರಿಂದ ಈ ಭಾಗದಲ್ಲಿ ಮಳೆಗಾಲದ ಸಂದರ್ಭದಲ್ಲಿ ಪ್ರಾಕೃತಿಕ ವಿಕೋಪ ತಡೆಯುವ ನಿಟ್ಟಿನಲ್ಲಿ ಆದರ ನಿರ್ವಹಣೆಗೆ ಬೇಕಾದ ವ್ಯವಸ್ಥೆಗೆ ನಗರಸಭೆಯ ಅಧಿಕಾರಿಗಳೊಂದಿಗೆ, ಜನಪ್ರತಿನಿಧಿಗಳ ಕಾರ್ಯ ಅತ್ಯಂತ ಪ್ರಮುಖವಾಗಿದ್ದು, ಸಮುದ್ರ ಮತ್ತು ನದಿ ತಟದ ಮೀನುಗಾರರ, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ವಿಕೋಪ ಎದುರಿಸಲು ಬೇಕಾದ ಕ್ರಮವನ್ನು ಕೈಗೊಳ್ಳಬೇಕು ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ. ಖಾದರ್ ತಿಳಿಸಿದರು.ಉಳ್ಳಾಲ ನಗರಸಭಾ ಸಭಾಂಗಣದಲ್ಲಿ ಪ್ರಕೃತಿ ವಿಕೋಪ ಮುನ್ನೆಚ್ಚರಿಕೆಯ ಪೂರ್ವಭಾವಿ ಸಭೆಯಲ್ಲಿ ಉಳ್ಳಾಲ ತಾಲೂಕಿಗೆ ನಿಯೋಜಿತ ನೂತನ ತಹಶೀಲ್ದಾರ್, ನಗರಸಭಾ ಕಮಿಷನರ್ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳ, ಸಿಬ್ಬಂದಿಗಳ ಮತ್ತು ನಗರಸಭಾ ಸದಸ್ಯರೊಂದಿಗೆ ಚರ್ಚೆ ನಡೆಸಿ ಮಾತನಾಡಿದರು.ನದಿ ತಟದಲ್ಲಿ ತುರ್ತುಕ್ರಮವಾಗಿ ದೋನಿಗಳ ಅಗತ್ಯ ಇದೆ. ಇದಕ್ಕೆ ಸ್ಥಳೀಯ ಮೀನುಗಾರರ ಸಹಕಾರ ಪಡೆದುಕೊಳ್ಳಬಹುದು, ಇದರೊಂದಿಗೆ ಅಗ್ನಿಶಾಮಕದಳ, ಆಂಬುಲೆನ್ಸ್ ವ್ಯವಸ್ಥೆಯನ್ನು ಆಯಕಟ್ಟಿನ ಪ್ರದೇಶದಲ್ಲಿ ನಿಯೋಜಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರವೂ ಅಗತ್ಯ ಎಂದರು.ಈ ಸಂದರ್ಭದಲ್ಲಿ ನಗರಸಭಾ…

Read More

ಉಳ್ಳಾಲ: ರಾಜ್ಯ ಸರಕಾರ ಟೈಲರ್ ನವರಿಗೆ ಘೋಷಣೆ ಮಾಡಿದ ಪರಿಹಾರದ ಸಹಾಯಧನವನ್ನು ಕೇವಲ ಬಿಪಿಎಲ್ ಕಾರ್ಡುದಾರರಿಗೆ ಮಾತ್ರ ನೀಡುವುದರಿಂದ ಶೇ.70 ಕ್ಕಿಂತ ಹೆಚ್ಚಿನ ಕಾರ್ಮಿಕರು ಸೌಲಭ್ಯ ವಂಚಿತರಾಗಿದ್ದಾರೆ. ಸಹಾಯಧನ ಪಡೆಯುವ ಕೊನೆಯ ದಿನಾಂಕವನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಉಳ್ಳಾಲ ಕ್ಷೇತ್ರ ಸಮಿತಿ ವತಿಯಿಂದ ಶಾಸಕ ಯು.ಟಿ ಖಾದರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.ಪರಿಹಾರ ಮೊತ್ತ ರೂ.2,000 ಘೋಷಣೆ ಮಾಡುವ ಮೂಲಕ ಟೈಲರ್ ನವರಿಗೆ ನಿರಾಸೆ ಮಾಡಲಾಗಿದೆ. ಕಳೆದ ಬಾರಿ ಘೋಷಿಸಿದ ರೂ. 5,000 ಮೊತ್ತವನ್ನು ಕೊನೆಯ ಹಂತದಲ್ಲಿ ತಡೆಹಿಡಿದಿರುವುದರಿಂದ ಈ ಬಾರಿಯಾದರೂ ಅಷ್ಟೇ ಮೊತ್ತ ಘೋಷಿಸುವ ವಿಶ್ವಾಸವಿತ್ತು. ಒಂದೂವರೆ ತಿಂಗಳು ಅಂಗಡಿ ಬಂದ್ ಮಾಡಿ ಬಾಡಿಗೆ ಕೊಡಲು, ಲೋನ್ ಕಟ್ಟಲು , ದಿನ ಸಾಮಗ್ರಿ ಖರೀದಿಸಲು ಕಷ್ಟಕರವಾಗಿರುವ ಸಮಯದಲ್ಲಿ ರೂ.5,000 ಸಹಾಯಧನವನ್ನು ನೀಡಬೇಕು. ಮೇ.19ರ ಒಳಗೆ ಸ್ಮಾರ್ಟ್ ಕಾರ್ಡು ಮಾಡಿದ ಸದಸ್ಯರಿಗೆ ಮಾತ್ರ ಸೌಲಭ್ಯ ಎಂದು ನಮೂದಿಸಲಾಗಿದೆ. ಆ ಬಳಿಕ ಆನ್ಲೈನ್ ನಲ್ಲಿ ಸಲ್ಲಿಸಿದ ಅರ್ಜಿಗಳನ್ನು…

Read More

ಕುರ್ನಾಡು : ಕೊರೊನಾ ಕಾರಣದಿಂದ ಮೊದಲನೆಯ ಅಲೆ, ಎರಡನೆಯ ಅಲೆಯಿಂದಾದ ನಷ್ಟ ಸಂಕಷ್ಟ ತಪ್ಪಿಸಲು ಸಾಧ್ಯವಿಲ್ಲ. ಆದರೆ ಮುಂದೆ ಯಾವುದೇ ಅನಾಹುತ ನಡೆಯದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮದು ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.ಕರ್ಣಾಟಕ ಸರಕಾರ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಯು. ಟಿ. ಖಾದರ್ ಅವರ ಸೂಚನೆಯಂತೆ ಕುರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ನಡೆದ ವೈದ್ಯರ ನಡೆ ಹಳ್ಳಿಯ ಕಡೆ ಗ್ರಾಮ ಮಟ್ಟದಲ್ಲಿ ಮನೆ ಮನೆ ಭೇಟಿ ಹಾಗೂ ಅನಾರೋಗ್ಯ ಪೀಡಿತರಿಗೆ ಧೈರ್ಯ ತುಂಬುವ ವಿನೂತನ ಕಾರ್ಯಕ್ರಮಕ್ಕೆ ಅವರು ಆನ್ಲೈನ್ ಮೂಲಕ ಚಾಲನೆ ನೀಡಿ ಮಾತನಾಡಿದರು.ಇದೊಂದು ಮಾದರಿ ಕಾರ್ಯಕ್ರಮವಾಗಿದ್ದು ಆರೋಗ್ಯಕ್ಕೆ ಸಂಬಂಧಪಟ್ಟಂತೆ ನಮ್ಮ ಜಿಲ್ಲೆಯಲ್ಲಿರುವ ವೈದ್ಯಕೀಯ ಸೌಲಭ್ಯವನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕು. ಈ ಕಾರ್ಯಕ್ರಮದಲ್ಲಿ ವೈದ್ಯರು ಕೇವಲ ಕೊರೊನಾ ಪರೀಕ್ಷೆ ಮಾತ್ರ ಮಾಡುವುದಲ್ಲ, ಅದರ ಜೊತೆಗೆ ಇತರ ಪರೀಕ್ಷೆ ಮಾಡುವ ಮೂಲಕ ಮನೆ ಬಾಗಿಲಲ್ಲಿ ಸೇವೆ…

Read More

ಉಳ್ಳಾಲ: ಕೋವಿಡ್ ಲಾಕ್ಡೌನ್ ಉಲ್ಲಂಘಿಸಿ ಕಾರ್ಯಾಚರಿಸುತ್ತಿದ್ದ ಎರಡು ಅಂಗಡಿ ಗಳ ವಿರುದ್ಧ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕೆಸಿರೋಡ್ ನಲ್ಲಿ ಇರುವ ಗ್ರೀನ್ ಟ್ರೇಡರ್ಸ್ ಹಾಗೂ ಮಾಸ್ತಿ ಕಟ್ಟೆ ಯಲ್ಲಿ ಇರುವ ಕಾರ್ ವಾಶ್ ನಲ್ಲಿ ಎಂದಿನಂತೆ ಕೆಲಸ ಕಾರ್ಯಗಳು ನಡೆಯುತ್ತಿದ್ದವು. ಈ ಬಗ್ಗೆ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ದಾಳಿ ನಡೆಸಿ ಕೆಲಸ ಕಾರ್ಯಗಳನ್ನು ಸ್ಥಗಿತ ಗೊಳಿಸುವಂತೆ ಸೂಚಿಸಿದ್ದರು. ಅಲ್ಲದೆ ಕೋವಿಡ್ ಲಾಕ್ಡೌನ್ ಉಲ್ಲಂಘಿಸಿ ದ ಕಾರಣಕ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಉಳ್ಳಾಲ, ತೊಕ್ಕೊಟ್ಟು , ಕಿನ್ಯ ಮುಂತಾದ ಪ್ರದೇಶಗಳಲ್ಲಿ ಅನಗತ್ಯ ವಾಗಿ ಓಡಾಡುತ್ತಿದ್ದ 25 ವಾಹನ ಗಳನ್ನು ವಶಪಡಿಸಿಕೊಂಡ ಉಳ್ಳಾಲ ಪೊಲೀಸರು ವಾಹನದ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.

Read More

ಮಾಧವಪುರ: ಲಾಕ್‍ಡೌನ್ ಉಲ್ಲಂಘಿಸಿ ಮೂರು ಬೈಕುಗಳಲ್ಲಿ ತಿರುಗುತ್ತಿದ್ದ ಮೂವರ ವಿರುದ್ಧ ಲಾಕ್ಡೌನ್ ಆದೇಶ ಉಲ್ಲಂಘಿಸಿದ ಕಾಯ್ದೆಯಡಿ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮೂರು ಬೈಕುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.ಪಿಎಸ್ ಐ ರೇವಣ್ಣ ಸಿದ್ಧಪ್ಪ ರೌಂಡ್ಸ್ ನಲ್ಲಿದ್ದ ಸಂದರ್ಭ ಕಿನ್ಯಾ ಗ್ರಾಮದ ಮಾಧವಪುರ ಬಸ್ ನಿಲ್ದಾಣದ ಬಳಿ ಮೂರು ಮಂದಿ ಮೂರು ಬೈಕುಗಳಲ್ಲಿ ಅನಾವಶ್ಯವಾಗಿ ತಿರುಗಾಡುತ್ತಿದ್ದರು. ಮೂರು ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಸೂಚಿಸಿದಾಗ ನಿಲ್ಲಿಸದೆ ಪರಾರಿಯಾಗಿದ್ದರು. ಬಳಿಕ ಪರಿಶೀಲನೆ ನಡೆಸಿದಾಗ KA 19 EW 2549 , (2) KE 19 HB 4139 (3) KA 19 EJ 6357 ಮೂರು ಬೈಕ್ ಗಳ ಪತ್ತೆಯಾಗಿದೆ. ಮೂರನ್ನು ವಶಕ್ಕೆ ಪಡೆದುಕೊಂಡಿರುವ ಉಳ್ಳಾಲ ಪೊಲೀಸರು ಮೂವರ ವಿರುದ್ಧ ಲಾಕ್ಡೌನ್ ಆದೇಶ ಉಲ್ಲಂಘಿಸಿದ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More