ಉಳ್ಳಾಲ: ಮುಡಿಪು ಒಳಪ್ರದೇಶಗಳ ಜನರ ಬಹುಬೇಡಿಕೆಯ ಆಂಬ್ಯುಲೆನ್ಸ್ ವ್ಯವಸ್ಥೆ ಇದೀಗ ಫಲಪ್ರದವಾಗಿದೆ. ಸರ್ವಧರ್ಮದವರನ್ನು ಗೌರವಯುತವಾಗಿ ಕಾಣುತ್ತಿದ್ದ ಬೇಕಲ್ ಉಸ್ತಾದರ ಹೆಸರಿನಲ್ಲಿ ಭಾರತ್ ಬೀಡಿ ಸಂಸ್ಥೆ ನೀಡಿರುವ ಆಂಬ್ಯುಲೆನ್ಸ್ ಸೇವೆ ಜನರಿಗೆ ಸಹಕಾರಿಯಾಗಲಿ ಎಂದು ಶಾಸಕ ಯು.ಟಿ ಖಾದರ್ ಹೇಳಿದರು. ಅವರು ಶ್ರೀ ಅನಂತ್ ಜಿ.ಪೈ ಸ್ಮರಣಾರ್ಥ ಭಾರತ್ ಬೀಡಿ ವಕ್ಸ್ ್ ಪ್ರೈ. ಲಿಮಿಟೆಡ್ ಇವರು ಯು.ಟಿ ಫರೀದ್ ಫೌಂಡೇಶನ್ ಸಹಯೋಗದೊಂದಿಗೆ ದಾನವಾಗಿ ನೀಡಿದ ಬೇಕಲ್ ಉಸ್ತಾದ್ ಮೆಮೋರಿಯಲ್ ಫೌಂಡೇಶನ್ ಹೆಸರಿನ ಆಂಬ್ಯುಲೆನ್ಸ್ ಸೇವೆಯನ್ನು ಮುಡಿಪು ಜಂಕ್ಷನ್ನಿನಲ್ಲಿ ಗುರುವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಕರಾವಳಿ ಪ್ರದೇಶದ ಧಾರ್ಮಿಕ ವಿಧ್ವಾಂಸರಲ್ಲಿ ತನ್ನದೇ ಹೆಸರು ಮೂಡಿಸಿ, ಸರ್ವಧರ್ಮದವರನ್ನು ಗೌರವಯುತವಾಗಿ ಕಾಣುತ್ತಿದ್ದ ಬೇಕಲ್ ಉಸ್ತಾದ ಪರಿಚಿತರಿಲ್ಲದವರು ಯಾರಿಲ್ಲ. ಜೀವಿತಾವಧಿಯ ಸಂಪೂರ್ಣ ಅವಧಿಯಲ್ಲಿ ಸಹೋದರತೆಯ ಪ್ರೀತಿ ವಿಶ್ವಾಸವನ್ನು ಬೋಧಿಸಿದ ಬೇಕಲ ಉಸ್ತಾದರು ಕಳೆದ ವರ್ಷ ಅಗಲಿರುವುದು ಎಲ್ಲರಿಗೂ ತುಂಬಲಾರದ ನಷ್ಟವಾಗಿದೆ. ಕುಟುಂಬದವರು ಅವರ ಹೆಸರಿನಲ್ಲಿ ಬೇಕಲ್ ಉಸ್ತಾದ್ ಮೆಮೋರಿಯಲ್ ಟ್ರಸ್ಟ್ ಆರಂಭಿಸಿದ್ದಾರೆ. ಮುಡಿಪು ಅಭಿವೃದ್ಧಿಯ ಪ್ರದೇಶವಾಗಿದೆ.…
Author: UllalaVani
ಉಳ್ಳಾಲ: ಗ್ರಾಮದಲ್ಲಿ 44 ಮಂದಿ ಪರೀಕ್ಷೆ ಮಾಡಿಸಿರುವವರ ಪೈಕಿ 21 ಮಂದಿಗೆ ಕೋವಿಡ್ ಪಾಸಿಟಿವ್ ಆಗಿರುವುದು ಗಂಭೀರ ವಿಚಾರ. ಕೂಡಲೇ ಎಲ್ಲರೂ ಜಾಗರೂಕರಾಗಿ ಜಿಲ್ಲಾಡಳಿತದ ಕ್ರಮದೊಂದಿಗೆ ಕೈಜೋಡಿಸಿ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.ಅವರು ಮಂಜನಾಡಿ ಗ್ರಾಮ ಪಂಚಾಯತ್ ನ ದಿ.ಯು.ಟಿ ಫರೀದ್ ಸಭಾಂಗಣದಲ್ಲಿ ಜರಗಿದ ಕೋವಿಡ್-19 ಟಾಸ್ಕ್ ಫೆÇೀಸ್9 ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಕೋವಿಡ್ ನಿಯಂತ್ರಣಕ್ಕೆ ಅನುಗುಣವಾಗಿ ಟಾಸ್ಕ್ ಫೆÇೀಸ್9 ಕಾರ್ಯನಿರ್ವಹಿಸುತ್ತಾ ಮುಂದುವರಿಯಬೇಕು. ಲಾಕ್ ಡೌನ್ ಕೊರೊನಾಕ್ಕೆ ಔಷಧಿಯಲ್ಲ. ಹಿಂದೆ ಲಾಕ್ಡೌನ್ ಮಾಡಿದ ನಂತರವೂ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಲೇ ಬಂದಿದೆ. ಸಮರ್ಪಕವಾಗಿ ತಳಮಟ್ಟದಲ್ಲಿ ಆಕ್ಷನ್ ಪ್ಲಾನ್ ರಚಿಸಿದಲ್ಲಿ ಮಾತ್ರ ನಿಯಂತ್ರಣ ಸಾಧ್ಯ. ಗ್ರಾಮಮಟ್ಟ ಮಾತ್ರವಲ್ಲ ವಾಡ್9 ಮಟ್ಟದಲ್ಲೂ ಸಮಿತಿಯನ್ನು ರಚನೆ ಮಾಡಬೇಕು. ಪಾಸಿಟಿವ್ ಪ್ರಕರಣ ಕುರಿತು ಮಾಹಿತಿ ಗ್ರಾ.ಪಂ ಸದಸ್ಯರಲ್ಲಿ ಇರಬೇಕು. ಕೋವಿಡ್ ಟೆಸ್ಟ್ ನೀಡಿದವರು ವರದಿ ಬರುವವರೆಗೆ ಸುತ್ತಾಡದಂತೆ ಬೀಟ್ ಪೆÇಲೀಸರು ಕ್ರಮಕೈಗೊಳ್ಳಬೇಕು. ಅದನ್ನು ಅಧಿಕಾರಿಗಳು ಪರಿಶೀಲಿಸುತ್ತಿರಬೇಕು ಎಂದರು.ಉಪತಹಶೀಲ್ದಾರ್ ವಿನೋದಾ ಯಸ್. ರಾವ್ , ತಾ.ಪಂ ಕಾರ್ಯನಿರ್ವಹಣಾ ಅಧಿಕಾರಿ…
ಉಳ್ಳಾಲ: ಗ್ರಾಮೀಣ ಮಟ್ಟದ ಜಂಕ್ಷನ್‍ಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಭವಿಷ್ಯದಲ್ಲಿ ಹೆಚ್ಚಿನ ಜನಜಂಗುಳಿ ಉಂಟಾದಾಗ, ವಾಹನಗಳ ಓಡಾಟಕ್ಕೆ ಅಡಚಣೆಯಾಗದೆ, ಇನ್ನಷ್ಟು ಅಭಿವೃದ್ಧಿಗೆ ಕುಂಠಿತವಾಗಬಾರದು ಅನ್ನುವ ಉದ್ದೇಶವನ್ನಿಟ್ಟುಕೊಂಡು ಮಂಗಳೂರು ಕ್ಷೇತ್ರದ ಗ್ರಾಮೀಣ ಭಾಗದಲ್ಲಿರುವ ಹಲವು ಜಂಕ್ಷನ್ನುಗಳ ಅಭಿವೃದ್ಧಿ ಕಾರ್ಯ ನಡೆಸಲಾಗುತ್ತಿದೆ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.ಅವರು ನಾಟೆಕಲ್ ಜಂಕ್ಷನ್ನಿನಲ್ಲಿ ರಸ್ತೆ ಅಗಲೀಕರಣ ಹಾಗೂ ಸರ್ಕಲ್ ನಿರ್ಮಾಣದ ಕಾಮಗಾರಿಯನ್ನು ಮಂಗಳವಾರ ವೀಕ್ಷಿಸಿ ಮಾತನಾಡಿದರು.ನಾಟೆಕಲ್, ಕಲ್ಕಟ್ಟ , ಡಿ.ಜಿ ಕಟ್ಟೆ, ಮೊಂಟೆಪದವು ಜಂಕ್ಷನ್ನುಗಳ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಿದೆ. ದೇರಳಕಟ್ಟೆ ಮತ್ತು ಅಸೈಗೋಳಿ ಜಂಕ್ಷನ್ನಿನ ಅಭಿವೃದ್ಧಿ ಶೀಘ್ರದಲ್ಲಿ ನಡೆಯಲಿದೆ. ರೂ.10 ಕೋಟಿ ಅನುದಾನದಡಿ ಕುತ್ತಾರಿನಿಂದ ದೇರಳಕಟ್ಟೆವರೆಗಿನ ಚತುಷ್ಪಥ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ತೊಕ್ಕೊಟ್ಟುವಿನಿಂದ ಕುತ್ತಾರು ರಸ್ತೆಗೆ ರೂ.24 ಕೋಟಿ ಮಂಜೂರಾಗಿದೆ. ಆದರೆ ಅನುದಾನ ಬಿಡುಗಡೆಯಾಗದ ಕೊರತೆಯಿಂದ ಕಾಮಗಾರಿ ಕುಂಠಿತವಾಗಿದೆ. ಹಾಗೂ ದೇರಳಕಟ್ಟೆಯಿಂದ ಕಂಬ್ಲಪದವು ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮಾಡುವ ಮುಂದಿನ ಯೋಜನೆ ಶೀಘ್ರದಲ್ಲೇ ಆರಂಭವಾಗಲಿದೆ. ಕಾಂಗ್ರೆಸ್…
ಉಳ್ಳಾಲ: ಹರೇಕಳ -ಅಡ್ಯಾರು ಅಣೆಕಟ್ಟು ಕಾಮಗಾರಿಗೆ ಚಂಡಾಮಾರುತದಿಂದಾಗಿ ಕೋಟ್ಯಂತರ ನಷ್ಟ ಉಂಟಾಗಿದೆ. ಈ ಬಗ್ಗೆ ಕಂಪೆನಿಗೆ ಆಗಿರುವ ನಷ್ಟದ ಕುರಿತು ರಾಜ್ಯ ಸರಕಾರದ ಗಮನಕ್ಕೆ ತರುತ್ತೇನೆ ಎಂದು ಅಲೆಮಾರಿ ಮತ್ತು ಅರೆ ಅಲೆಮಾರಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು.ಅವರು ರೂ.200 ಕೋಟಿ ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಹರೇಕಳ-ಅಡ್ಯಾರು ಅಣೆಕಟ್ಟಿನ ಕಾಮಗಾರಿಗೆ ಚಂಡಾಮಾರುತದ ಪರಿಣಾಮ ನದಿ ನೀರು ನುಗ್ಗಿ ಆಗಿರುವ ಅನಾಹುತವನ್ನು ದೋಣಿ ಮುಖೇನ ತೆರಳಿ ಹರೇಕಳ ಗ್ರಾಮಸ್ಥರ ಜೊತೆಗೆ ವೀಕ್ಷಿಸಿ ಮಾತನಾಡಿದರು. ತೌಟ್ಕೇ ಚಂಡಮಾರುತದ ಪರಿಣಾಮ ಮಂಗಳೂರು ಕ್ಷೇತ್ರದಲ್ಲಿಯೇ ಬಹಳಷ್ಟು ಅನಾಹುತಗಳು ಸಂಭವಿಸಿದೆ. ಉಳ್ಳಾಲ ಕೋಡಿಯಿಂದ ಮೊಗವೀರಪಟ್ನ, ಸೋಮೇಶ್ವರ ಉಚ್ಚಿಲದವರೆಗೆ ಚಂಡಾಮಾರುತದ ಪರಿಣಾಮವನ್ನು ಉಸ್ತುವಾರಿ ಸಚಿವರ ಭೇಟಿ ವೇಳೆ ವೀಕ್ಷಿಸಿದ್ದೇನೆ. ಹರೇಕಳ ಗ್ರಾಮಕ್ಕೆ ಸರಕಾರ ನೀಡಿರುವ ಉತ್ತಮ ಯೋಜನೆಯಾದ ಹರೇಕಳ -ಅಡ್ಯಾರು ಅಣೆಕಟ್ಟು ನಿರ್ಮಾಣ ಕಾಮಗಾರಿಗೂ ಬಹಳ ನಷ್ಟ ಉಂಟಾಗಿದೆ. ಚಂಡಾಮಾರುತದ ಪರಿಣಾಮದಿಂದಾಗಿ ಕಾಮಗಾರಿಗೆ ಬೇಕಾದ ಸಿಮೆಂಟ್, ಸ್ಟೀಲ್ , ಯಂತ್ರಗಳು ನೀರಿನಲ್ಲಿ ಮುಳುಗಿ ರೂ.10 ಕೋಟಿ ನಷ್ಟ…
ಉಳ್ಳಾಲ: ಪಾರ್ಸೆಲ್ ತಿಂಡಿ ಪಡೆದ ಹಣವನ್ನು ಕೇಳಿದ ಕ್ಯಾಷಿಯರ್ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆಗೆ ಯತ್ನಿಸಿದ್ದಲ್ಲದೆ, ಹೊಟೇಲಿನೊಳಗೆ ಅಕ್ರಮ ಪ್ರವೇಶ ಮಾಡಿ ದಾಂಧಲೆ ನಡೆಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮದನಿನಗರದಲ್ಲಿ ಭಾನುವಾರ ತಡರಾತ್ರಿ ವೇಳೆ ಸಂಭವಿಸಿದೆ.ಮದನಿನಗರ ಬಳಿಯಿರುವ ಕ್ಯಾಲಿಕಟ್ ಕಿಚನ್‍ಗೆ ಆರೋಪಿಗಳಾದ ಲುಕ್ಮಾನ್, ಅಜ್ಮಾಲ್, ರಿಜ್ವಾನ್, ಇಮ್ರಾನ್, ನವಾಝ್, ನಿಝಾಂ , ಇರ್ಫಾನ್ ಮತ್ತು ತೌಫೀಕ್ ಸೇರಿದಂತೆ ತಂಡ ಬಂದಿತ್ತು. ಇವರು ಹೊರಗಿನಿಂದ ನಿಂತು ತಿಂಡಿ ತಿನಿಸಿಗೆ ಆರ್ಡರ್ ಮಾಡಿದಾಗ ಕ್ಯಾಷಿನಲ್ಲಿದ್ದ ಸತೀಶ್ ಅವರು ತಿಂಡಿಯ ಮೊತ್ತವನ್ನು ಪಾವತಿಸುವಂತೆ ಹೇಳಿದ್ದರು. ಇದರಿಂದ ರೊಚ್ಚಿಗೆದ್ದ ತಂಡ ಇನ್ನಷ್ಟು ಜನರನ್ನು ಸೇರಿಸಿಕೊಂಡು ಕೈಯಲ್ಲಿ ಕಲ್ಲು ದೊಣ್ಣೆಗಳನ್ನು ಹಿಡಿದುಕೊಂಡು ಬಂದು ಹೊಟೇಲಿನ ಒಳಗೆ ಅಕ್ರಮವಾಗಿ ಪ್ರವೇಶಿಸಿ ಏ ಬೇವರ್ಸಿಗಳಾ ನಿಮಗೆ ನಾವು ಕೇಳುವಾಗ ಉಚಿತ ತಿಂಡಿ ಕೊಡಲು ಆಗುವುದಿಲ್ಲವಾ? ನಾವು ನಿಮಗೆ ಹಣ ಕೊಡಬೇಕಾ’ ಎಂದು ಬೈಯ್ಯುತ್ತಾ ಕೌಂಟರಿನಲ್ಲಿದ್ದ ಸತೀಶ್ ಅವರ ಮೇಲೆ ಲುಕ್ಮಾನ್ ಎಂಬಾತ ಕೈಯಲ್ಲಿದ್ದ ದೊಣ್ಣೆಯಿಂದ ತಲೆಗೆ ಜೋರಾಗಿ ಬಡಿದಿದ್ದಾರೆ.…
ಉಳ್ಳಾಲ: ಲಾಕ್ ಡೌನ್ ನಡುವೆಯೇ ಯುವಕನೋರ್ವ ನಾಪತ್ತೆಯಾಗಿರುವ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಲಪಾಡಿ ಗ್ರಾಮದ ವಿದ್ಯಾನಗರ ಬಳಿಯ ಫಲಾಹ್ ಶಾಲೆ ಬಳಿ ನಿವಾಸಿ ಯು.ನಝೀರ್ ಎಂಬವರ ಪುತ್ರ ಶೇಖ್ ಝಾಯಿದ್ ನಿಝ್ಮಾನ್ (19) ನಾಪತ್ತೆಯಾದವರು. ಮೇ.13 ರಂದು ಮದ್ಯಾಹ್ನ ಮನೆಯಿಂದ ಹೊರಹೋದವರು ಮನೆಗೆ ವಾಪಸ್ಸಾಗಿಲ್ಲ. ಮನೆ ಸುತ್ತಮುತ್ತಲು, , ಸಂಬಂಧಿಕರ ಮನೆ, ಸ್ನೇಹಿತರ ಮನೆಯಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ. ಈ ಬಗ್ಗೆ ತಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಂತೆ ನಾಪತ್ತೆ ಪ್ರಕರಣ ದಾಖಲಾಗಿದೆ.
UN networks ಉಳ್ಳಾಲ: ಹಿಂದೂ ದೇವರುಗಳ ನಿಂದಿಸಿದ ತೊಕ್ಕೊಟ್ಟು ನಿವಾಸಿ ಉದ್ಯಮಿಯನ್ನು ಉಳ್ಳಾಲ ಪೊಲೀಸರು ಇಂದು ಬಂಧಿಸಿದ್ದಾರೆ. ಆರೋಪಿ ಹಿಂದೂ ದೇವರುಗಳ ವಿರುದ್ಧ ನಿಂದನೆಯ ಮಾತುಗಳನ್ನು ಆಡಿದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.ತೊಕ್ಕೊಟ್ಟು ಸ್ಮಾರ್ಟ್ ಸಿಟಿ ವಸತಿ ಸಂಕೀರ್ಣದಲ್ಲಿ ಇರುವ ಸ್ವಾಲಿಝ್ ಇಕ್ಬಾಲ್ (45) ಬಂಧಿತ. ಫರ್ನಿಚರ್ ಅಂಗಡಿ ಸಹಿತ ವಿವಿಧ ಉದ್ಯಮಗಳನ್ನು ನಡೆಸುತ್ತಿದ್ದ ಸ್ವಾಲಿಝ್ ಇಕ್ಬಾಲ್ ಚಾಮುಂಡೇಶ್ವರಿ ದೇವಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ವೀಡಿಯೋ ಮೂರು ದಿನಗಳಿಂದ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ವೈರಲ್ ಆಗುತ್ತಿದ್ದಂತೆ, ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಹಿಂದೂ ಸಂಘಟಕರು ದೂರು ದಾಖಲಿಸಿದ್ದರು. ಅದರಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಾಗಿದ್ದು, ಇಂದು ಉಳ್ಳಾಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಉಳ್ಳಾಲ: ಸೋಮೇಶ್ವರ ಹಿಂದೂ ರುದ್ರಭೂಮಿ ತಡೆಗೋಡೆ ಸಮುದ್ರಪಾಲಾದ ಪ್ರದೇಶಕ್ಕೆ ಬಂದರು ಅಧಿಕಾರಿಗಳ ಜೊತೆಗೆ ಸೋಮೇಶ್ವರ ಪುರಸಭೆ ಪೌರಾಯುಕ್ತೆ ವಾಣಿ ಆಳ್ವ ಭೇಟಿ ನೀಡಿದರು.ಸದ್ಯಕ್ಕೆ ತಾತ್ಕಾಲಿಕ ಕಾಮಗಾರಿಯ ಅಂದಾಜು ಮತ್ತು ಹೆಚ್ಚಿನ ಪರಿಹಾರ ಒದಗಿಸುವ ಕುರಿತು ಅಧಿಕಾರಿಗಳ ಜೊತೆಗೆ ಚರ್ಚಿಸಿರುವುದಾಗಿ ವಾಣಿ ಆಳ್ವ ತಿಳಿಸಿದ್ದಾರೆ.
ಉಳ್ಳಾಲ: ಅರಬ್ಬೀ ಸಮುದ್ರದ ಆಗ್ನೇಯ ಭಾಗದಲ್ಲಿ ಆಗಿರುವ ವಾಯುಭಾರ ಕುಸಿತದ ಎಫೆಕ್ಟ್ ಉಳ್ಳಾಲಕ್ಕೂ ತಟ್ಟಿದೆ. 50 ಕ್ಕೂ ಅಧಿಕ ಮನೆಗಳು ಅಪಾಯದಂಚಿನಲ್ಲಿದ್ದರೆ, ಸೋಮೇಶ್ವರ ಹಿಂದೂ ರುದ್ರಭೂಮಿಯ ತಡೆಗೋಡೆ ಪಾಲಾಗಿದೆ. ಉಳ್ಳಾಲದ ಸುಭಾಷನಗರ, ಕೈಕೋ, ಹಿಲೆರಿಯಾನಗರ, ಮುಕ್ಕಚ್ಚೇರಿ, ಒಂಭತ್ತುಕೆರೆ, ಸೋಮೇಶ್ವರ , ಉಚ್ಚಿಲ ಭಾಗದಲ್ಲಿ ಸಮುದ್ರದ ಅಲೆಗಳು ಕೆಲ ಮೀ. ಎದುರುಬಂದಿದೆ. ತೆಂಗಿನಮರಗಳು ಸಮುದ್ರಪಾಲಾದರೆ, ಸೋಮೇಶ್ವರದ ಹಿಂದೂ ರುದ್ರಭೂಮಿಯ ದೊಡ್ಡದಾದ ತಡೆಗೋಡೆ ಕಡಲಿಿಿಿನ ಪಾಲಾಗಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಕಾರವಾರ ಸೇರಿದಂತೆ ಜಿಲ್ಲೆಯ ಕರಾವಳಿಯ ವಿವಿಧೆಡೆ ಮಳೆಯಾಗಲಿದೆ. ಸಮುದ್ರದ ಆಗ್ನೆಯ ಭಾಗದಲ್ಲಿ ವಾಯುಭಾರ ಕುಸಿತವಾಗಿದ್ದು, ಮೇ 14 ರ ನಂತರ ಚಂಡಮಾರುತವಾಗಿ ಪರಿವರ್ತನೆಯಾಗಬಹುದು.ಹೀಗಾಗಿ ಮೇ. 15 ಹಾಗೂ 16 ರಂದು ಕರಾವಳಿ ಜಿಲ್ಲೆಗಳಲ್ಲಿ 120-200 ಮಿ.ಮೀ ಮಳೆ ಬೀಳುವ ಮುನ್ಸೂಚನೆಯಿದ್ದು, ಜಿಲ್ಲೆಯ ಎಲ್ಲಾ ಮೀನುಗಾರರು ಹಾಗೂ ಸಾರ್ವಜನಿಕರು ಸಮುದ್ರದ ಕಡೆಗೆ ಬರದಿರುವಂತೆ ಎಚ್ಚರಿಕೆ ನೀಡಲಾಗಿದೆ.ಮೀನುಗಾರಿಕೆಗೆ ತೆರಳಿರುವ ಮೀನುಗಾರರು ಕೂಡಲೇ ದಡಕ್ಕೆ ಮರಳುವಂತೆ ಕೋಸ್ಟ್ ಗಾರ್ಡ್ ಮತ್ತು ಮೀನುಗಾರಿಕಾ ಇಲಾಖೆಯಿಂದ…
ತೊಕ್ಕೊಟ್ಟು: ಅಂಗಡಿಯಲ್ಲಿದ್ದ ಮಹಿಳೆಯಲ್ಲಿ ನೀರು ಕೇಳಿ ಕಳ್ಳರಿಬ್ಬರು ನಗದು ದೋಚಿದ ಘಟನೆ ತೊಕ್ಕೊಟ್ಟು ಒಳಪೇಟೆಯ ಟಿ.ಸಿ ರೋಡ್ ನಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಟಿ.ಸಿ ರೋಡಿನಲ್ಲಿರುವ ಅನುಸೂಯ ಎಂಬವರ ಅಂಗಡಿಯಿಂದ ನಗದು ಕಳವು ನಡೆದಿದೆ. ಇಂದು ಬೆಳಿಗ್ಗೆ ಬೈಕಿನಲ್ಲಿ ಬಂದಿದ್ದ ಆಗಂತುಕನೋರ್ವ ಅಂಗಡಿಯಲ್ಲಿ ಸಿಗರೇಟು ಕೇಳಿದ್ದನು. ಸಿಗರೇಟು ಪಡೆದು ಅಲ್ಲಿಯೇ ಸೇದಲು ಮುಂದಾದಾಗ ಅನುಸೂಯ ಅವರು ಅಲ್ಲಿ ಸೇದದಂತೆ ಸೂಚಿಸಿದ್ದರು. ಆ ಬಳಿಕ ಕುಡಿಯಲು ನೀರು ಕೇಳಿದ್ದಾನೆ. ಇದೇ ವೇಳೆ ಅವರು ಫ್ರಿಡ್ಜ್ ನಿಂದ ನೀರು ತೆಗೆಯುವಷ್ಟರಲ್ಲಿ ಅಂಗಡಿಯೊಳಗೆ ನುಗ್ಗಿದ ಕಳ್ಳ ಅಲ್ಲಿದ್ದ ಪರ್ಸನ್ನು ಎಳೆದೊಯ್ದು, ತೊಕ್ಕೊಟ್ಟು ಜಂಕ್ಷನ್ ಕಡೆಗೆ ಬೈಕಿನಲ್ಲಿ ಪರಾರಿಯಾಗಿದ್ದಾನೆ. ಪರ್ಸಿನಲ್ಲಿದ್ದ ರೂ.35,000 ನಗದು ಕಳ್ಳಕಳವುಗೈದಿದ್ದಾನೆ. ಅಂಗಡಿಗೆ ಸಾಮಗ್ರಿಗಳು ಬರುವ ಸಮಯವಾಗಿದ್ದರಿಂದ ಪರ್ಸಿನಲ್ಲಿ ನಗದನ್ನು ಇಟ್ಟಿದ್ದರು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಳ್ಳರ ಸುಳಿವು ಎದುರುಗಡೆ ಇರುವ ಖಾಸಗಿ ನರ್ಸಿಂಗ್ ಕಾಲೇಜಿನ ಸಿಸಿಟಿವಿಯಲ್ಲಿ ದಾಖಲೆಯಾಗಿರುವ ಸಾಧ್ಯತೆ ಇದೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.

