ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುಂಪಲ: ಭಾರತದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಭಗತ್‍ಸಿಂಗರಂತಹ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವ ಕಾರ್ಯ ಮಾಡುತ್ತಿರುವ ಭಗತ್ ಸಿಂಗ್ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯವಾಗಿದ್ದು, ಅವರ ಆದರ್ಶ, ಚಿಂತನೆಗಳನ್ನು ಇಂದಿನ ಯುವಜನತೆ ಅಳವಡಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ಜಯರಾಮ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಭಗತ್‍ಸಿಂಗ್ ಪ್ರತಿಷ್ಠಾನ ಕೇಂದ್ರ ಸಮಿತಿ ಉಳ್ಳಾಲ ಇದರ ಆಶ್ರಯದಲ್ಲಿ ಭಗತ್‍ಸಿಂಗರ ಜನ್ಮದಿನೋತ್ಸವದ ಅಂಗವಾಗಿ ಯುವ ಉದ್ಯಮಿ ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕøತ ರಿಷಿ ಹಾರ್ಡ್‍ವೇರ್‍ನ ಮಾಲಕ ಸತೀಶ್ ಕರ್ಕೇರ ಅವರಿಗೆ ಭಗತ್‍ಸಿಂಗ್ ಉದ್ಯಮಶೀಲತಾ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ಉದ್ಯಮದೊಂದಿಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸತೀಶ್ ಕರ್ಕೇರ ಅವರನ್ನು ಭಗತ್‍ಸಿಂಗ್ ಪ್ರತಿಷ್ಠಾನ ಗುರುತಿಸಿ ಗೌರವಿಸುವುದು ಶ್ಲಾಘನೀಯ. ಕೇಂದ್ರ ಸರಕಾರದ ಮುದ್ರಾ ಯೋಜನೆಯನ್ನು ಭಗತ್‍ಸಿಂಗ್ ಪ್ರತಿಷ್ಠಾನದ ಪ್ರತಿಯೊಬ್ಬ ಸದಸ್ಯರು ಸದುಪಯೋಗಪಡಿಸಿಕೊಂಡು ಯಶಸ್ವಿ ಉದ್ಯಮಿಯಾಗಿ ಉದ್ಯೋಗ ಸೃಷ್ಟಿಸಿ ಎಂದರು. ಸನ್ಮಾನ ಸ್ವೀಕರಿಸಿದ ಉದ್ಯಮಿ ಸತೀಶ್ ಕರ್ಕೇರ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಗತ್‍ಸಿಂಗ್ ಪ್ರತಿಷ್ಠಾನದ…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ನಿಟ್ಟೆ ಉಷಾ ಇನ್ಸಿ ್ಟಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ನ ವತಿಯಿಂದ ಕ್ಷೇಮ ಅಡಿಟೋರಿಯಮ್‍ನಲ್ಲಿ ಪ್ರಥಮ ಬಿ.ಎಸ್ಸಿ, ಪ್ರಥಮ ಪಿಬಿ.ಬಿ.ಎಸ್ಸಿ, ಪ್ರಥಮ ಜಿ.ಎನ್.ಎಮ್. ಹಾಗೂ ಪ್ರಥಮ ಎಮ್.ಎಸ್ಸಿ ಶುಶ್ರೂಷ ವಿದ್ಯಾರ್ಥಿಗಳಿಗೆ ಫ್ರೆಶರ್ಸ್ ಡೇ ಮಂಗಳವಾರ ನಡೆಯಿತು. ಮುಖ್ಯ ಅತಿಥಿಗಳಾಗಿ ಎ.ಬಿ. ಶೆಟ್ಟಿ ಮೆಮೋರಿಯಲ್ ಇನ್ಸಿ ್ಟಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ಸ್ನಾತಕೋತ್ತರ ವಿಭಾಗ ಡೈರೆಕ್ಟರ್ ಡಾ. ಬಿ. ರಾಜೇಂದ್ರಪ್ರಸಾದ್ ಭಾಗವಹಿಸಿದ್ದರು. ಉಪಪ್ರಾಂಶುಪಾಲೆ ಪ್ರೊ. ಸಬಿತಾ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕ್ಲೀಟಾ ಪಿಂಟೋ ಉಪಸ್ಥಿತರಿದ್ದರು. ದ್ವಿತೀಯ ವರ್ಷದ ಬಿ.ಎಸ್ಸಿ ವಿದ್ಯಾರ್ಥಿಗಳಾದ ವಿಕ್ಟೋರಿಯ, ಮಾಯಾಂಕ್ ಭಟ್ ಕಾರ್ಯಕ್ರಮ ನಿರೂಪಿಸಿದರು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಎಸ್.ಎಸ್.ಎಫ್ ತೊಕ್ಕೊಟ್ಟು ಸೆಕ್ಟರ್‍ನ ಪಟ್ಲ ಶಾಖೆಯ ವತಿಯಿಂದ ಪ್ರತಿಭೋತ್ಸವ ಕಾರ್ಯಕ್ರಮವು ಇತ್ತೀಚೆಗೆ ಪಟ್ಲ ಮದ್ರಾಸಾ ಹಾಲ್ ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮದ್ರಸ ಸದರ್ ಅಬ್ದುಲ್ ರಹಮಾನ್ ಉದ್ಘಾಟಿಸಿದರು. ಈ ಸಂದರ್ಭ ಕೋಶಾಧಿಕಾರಿ ತೌಸೀದ್, ಶೌಕತ್, ಉಪಾಧ್ಯಕ್ಷ ಶರೀಫ್, ಸೆಕ್ಟರ್ ಕಾರ್ಯದರ್ಶಿ ಜುನೈದ್ ಪಟ್ಲ, ಮಸೀದಿ ಕಾರ್ಯದರ್ಶಿ ಹಾರಿಶ್, ಸದ್ದಾಂ ಉಪಸ್ಥಿತರಿದ್ದರು. ಶಾಖಾ ಕಾರ್ಯದರ್ಶಿ ಸಾಲಿಂ ಸ್ವಾಗತಿಸಿದರು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ದೇಶದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿಯಾದ ಅಬ್ಬಕ್ಕಳ ದೇಶಪ್ರೇಮ, ಸ್ವಾಭಿಮಾನ, ಸೌಹಾರ್ದತೆಯನ್ನು ಎತ್ತಿ ತೋರಿಸುವಂತಹ ಈ ಅಬ್ಬಕ್ಕ ಉತ್ಸವವು ಜನರ ಉತ್ಸವ ಎಂದು ಮಾಜಿ ಶಾಸಕ ಹಾಗೂ ಸಮಿತಿಯ ಸ್ವಾಗತಧ್ಯಕ್ಷ ಕೆ.ಜಯರಾಮ ಶೆಟ್ಟಿ ಅಭಿಪ್ರಾಯಪಟ್ಟರು. ತೊಕ್ಕೊಟ್ಟು ಒಳಪೇಟೆಯಲ್ಲಿರುವ ಕ್ಲಿಕ್ ಮ್ಯಾರೇಜ್ ಹಾಲ್‍ನಲ್ಲಿ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ 19ನೇ ವರ್ಷದ ಅಬ್ಬಕ್ಕ ಉತ್ಸವದ ಪ್ರಥಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಅಬ್ಬಕ್ಕ ಉತ್ಸವವನ್ನು ಕಳೆದ ಹಲವು ವರ್ಷಗಳಿಂದ ಯಶಸ್ವಿಯಾಗಿ ಆಚರಿಸುತ್ತಾ ಬರುತ್ತಿರುವುದು ಪ್ರಶಂಸನೀಯ. ಊರಿನ ಎಲ್ಲಾ ಧರ್ಮದವರೂ, ವರ್ಗದವರು ಪಾಲ್ಗೊಂಡು ಆಚರಿಸುವ ಈ ಉತ್ಸವವು ಸರಕಾರದ ಪ್ರೋತ್ಸಾಹದಿಂದ ಇನ್ನಷ್ಟೂ ಯಶಸ್ವಿಯಾಗಲೆಂದು ಹಾರೈಸಿದರು. ಈ ಸಭೆಯಲ್ಲಿ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಪದಾಧಿಕಾರಿಗಳಾದ ಯು. ಸದಾನಂದ ಬಂಗೇರ, ಫಾ. ಪ್ರವೀಣ್ ಜೋಯ್ ಸಲ್ಡಾನಾ, ತೋನ್ಸೆಪುಷ್ಕಳ್ ಕುಮಾರ್, ಯು.ಪಿ.ಆಲಿಯಬ್ಬ, ಡಿ.ಎನ್.ರಾಘವ, ಎಂ.ವಾಸುದೇವ ರಾವ್, ಅಬ್ದುಲ್ ಅಜೀಜ್ ಹಕ್, ಲಕ್ಷ್ಮೀನಾರಾಯಣ ರೈ, ಹರೇಕಳ ತ್ಯಾಗಂ ಹರೇಕಳ, ಲೋಕನಾಥ ರೈ, ತುಕರಾಮ,…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಸರಿಯಾದ ಯೋಜನೆ ರೂಪಿಸದೆ ಹೆದ್ದಾರಿ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ತೊಕ್ಕೊಟ್ಟು ಜಂಕ್ಷನ್ನಿನ ಫ್ಲೈಓವರ್ ನಿರ್ಮಾಣದಲ್ಲಿ ವಿಳಂಬವಾಗಿದೆ. ಇದರಿಂದ ಜನ ಸಂಕಷ್ಟಕ್ಕೀಡಾಗುತ್ತಿದ್ದರೂ ಸಂಸದರ ಧೋರಣೆ ನೀತಿಯೇ ಕಾರಣ ಎಂದು ಡಿವೈಎಫ್ ಐ ಉಳ್ಳಾಲ ವಲಯ ಕಾರ್ಯದರ್ಶಿ ಜೀವನ್ ರಾಜ್ ಕುತ್ತಾರ್ ಹೇಳಿದ್ದಾರೆ. ಅವರು ಉಳ್ಳಾಲ ವಲಯ ಡಿವೈಎಫ್ ಐ ಸಮಿತಿ ವತಿಯಿಂದ ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ವಿಳಂಬ ನೀತಿಯನ್ನು ಖಂಡಿಸಿ, ಟ್ರಾಫಿಕ್ ಜಾಮ್ ಪರಿಹಾರಕ್ಕೆ ಆಗ್ರಹಿಸಿ, ರಾ.ಹೆ66 ರ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಒತ್ತಾಯಿಸಿ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ನಿಧಾನಗತಿಯಿಂದ ಸಾಗುತ್ತಿರುವ ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿಯಿಂದ ಜನ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಸರಿಯಾದ ಯೋಜನೆಯನ್ನು ರೂಪಿಸದೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಇದರಿಂದ ಕಾಮಗಾರಿ ವಿಳಂಬವಾಗುತ್ತಿದೆ. ತೊಕ್ಕೊಟ್ಟುವಿನ ಫ್ಲೈಓವರ್ ಕಾಮಗಾರಿ ಮುಗಿಯದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರು ಸರಿಯಾದ ಸಮಯಕ್ಕೆ ಕಾರ್ಯಕ್ಷೇತ್ರಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಸಂಜೆ ವೇಳೆ ಯುವತಿಯರು 4 ಗಂಟೆಗೆ ಕಾರ್ಯಕ್ಷೇತ್ರವನ್ನು ಬಿಟ್ಟರೂ…
ಬೆಂಗಳೂರು: ಕಳಸ ಬಂಡೂರಿ ಹಾಗೂ ಮಹದಾಯಿ ಯೋಜನೆಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗೆ ಶನಿವಾರ ಕರೆ ನೀಡಿದ ಬಂದ್ ಗೆ ರಾಜಧಾನಿ ಬೆಂಗಳೂರು, ಬಾಗಲಕೋಟೆ, ಹುಬ್ಬಳ್ಳಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳು ಭಾರೀ ಬೆಂಬಲ ವ್ಯಕ್ತಪಡಿಸಿದೆ. ಆದರೆ ದಕ್ಷಿಣ ಕನ್ನಡ ಹಾಗೂ ಉಡುಪಿ, ಭಟ್ಕಳ, ರಾಯಚೂರು, ಬೀದರ್, ಕಾರವಾರ ಸೇರಿದಂತೆ ಹಲವೆಡೆ ಬಂದ್‍ನ ಬಿಸಿ ತಟ್ಟಿಲ್ಲ, ಶನಿವಾರದಂದು ರಾಜ್ಯದಲ್ಲಿ ಅನೇಕ ಸಂಘಟನೆಗಳು ಕರೆ ನೀಡಿದ್ದ ಬಂದ್ ಗೆ ಬೆಂಗಳೂರಿನ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಮುಂಜಾನೆಯಿಂದ ಬಹುತೇಕ ಅಂಗಡಿ, ಮುಂಗಟ್ಟುಗಳು ಮುಚ್ಚಿ ಬಂದ್ ಗೆ ಬೆಂಬಲ ನೀಡಿದೆ. ಮೆಟ್ರೋ, ಆಟೋ, ಟ್ಯಾಕ್ಸಿ, ವಿರಳವಾಗಿ ರಸ್ತೆಗಿಳಿದಿದೆ. ಬಿಎಂಟಿಸಿ ಹಾಗೂ ಕೆಎಸ್‍ಆರ್‍ಟಿಸಿ ಬಸ್ಸುಗಳ ಸಂಚಾರ ಸ್ಥಗಿತಗೊಂಡಿರುವ ಕಾರಣ ಅನೇಕ ಜನರು ಬಸ್ಸಿಲ್ಲದೇ ಪರಡಾಡುವಂತಹ ಸ್ಥಿತಿ ಎದುರಾಗಿದೆ. ಇನ್ನು ಕಳಸ ಬಂಡೂರಿ ಯೋಜನೆ ಅನುಷ್ಠಾನಕ್ಕೆ ತರುವಂತೆ ಆಗ್ರಹಿಸಿ ವಿವಿಧ ರೈತಪರ ಸಂಘಟನೆಗಳು ನಗರದ ಪ್ರಮುಖ ಸ್ಥಳಗಳಲ್ಲಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಕನ್ನಡ ಪರ ಸಂಘಟನೆಗಳು…
ಬೆಂಗಳೂರು: ದ್ವಿಚಕ್ರ ವಾಹನ ಸವಾರರಿಗೆ ಅಪ್ರಿಯವೆನಿಸುವ ಸುದ್ದಿ ಸಾರಿಗೆ ಇಲಾಖೆಯಿಂದ ಬಂದಿದೆ. ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಈ ಬಗ್ಗೆ ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದ್ದು, ಅಧಿಕೃತ ಘೋಷಣೆಯಷ್ಟೆ ಬಾಕಿಯಿದೆ. ಅಧಿಕೃತವಾಗಿ ಕಡ್ಡಾಯ ಆದೇಶ ಜಾರಿಗೊಳಿಸುವ ಮುನ್ನ ಸಾರ್ವಜನಿಕರಿಂದ ಸಲಹೆ, ಸೂಚನೆಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ನವೆಂಬರ್ ವೇಳೆಗೆ ಮೊದಲ ನಗರವಾಗಿ ಬೆಂಗಳೂರಿನಲ್ಲಿ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯವಾಗಲಿದೆ. ನಂತರ ಉಳಿದ ಎಲ್ಲ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಈ ಆದೇಶ ಜಾರಿಗೆ ಬರಲಿದೆ. ಈ ಬಗ್ಗೆ ಸಾರಿಗೆ ಇಲಾಖೆ ಆಯುಕ್ತ ರಾಮೇಗೌಡ, ಅಪಘಾತ ಪ್ರಕರಣಗಳಲ್ಲಿ ಹಿಂಬದಿ ಸವಾರರೇ ಹೆಚ್ಚಾಗಿ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ರಾಜ್ಯದಲ್ಲಿ 1.5 ಕೋಟಿಗೂ ಅಧಿಕ ದ್ವಿಚಕ್ರ ವಾಹನಗಳಿವೆ. ಬೆಂಗಳೂರು ಒಂದರಲ್ಲೇ 35 ಲಕ್ಷ ದ್ವಿಚಕ್ರ ವಾಹನಗಳಿವೆ. ಈ ಹಿನ್ನೆಲೆಯಲ್ಲಿ ಮೊದಲಿಗೆ ಬೆಂಗಳೂರಿನಲ್ಲಿ ಜಾರಿಗೆ ತಂದು ನಂತರ ಉಳಿದ ಎಲ್ಲ ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿ ಕಡ್ಡಾಯಗೊಳಿಸುವ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಪ್ರತಿಯೊಬ್ಬರು ಅಕ್ಷರ ಜ್ಞಾನಿಗಳಾದಾಗ ಮಾತ್ರ ಶೋಷಣೆಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ. ಉದಾತ್ತ ಮಾನವತಾವಾದಿ ಅಂಬೇಡ್ಕರ್ ಅವರು ದೇಶಕ್ಕೆ ಭದ್ರವಾದ ಸಂವಿಧಾನವನ್ನು ಕಟ್ಟಿಕೊಡುವುದರೊಂದಿಗೆ ಸಮಾಜದಲ್ಲಿ ಏಕತೆಯೊಂದಿಗೆ ಶೋಷಣೆಮುಕ್ತ ಸಮಾಜವನ್ನು ಕಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ಅಂಬೇಡ್ಕರ್ ಅವರ 125ನೇ ವರ್ಷಾಚರಣೆ ಕಾರ್ಯಕ್ರಮವು ಜನರಲ್ಲಿ ಜಾಗೃತಿಯ ಭಾವದೊಂದಿಗೆ ಸಮಾನತೆಯ ಬಲಿಷ್ಠ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಅಭಿಪ್ರಾಯ ಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾನಿಲಯ ಅಂಬೇಡ್ಕರ್ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಗುರುವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 125 ನೇ ಅಂಬೇಡ್ಕರ್ ಜಯಂತಿ ಸಂಭ್ರಮ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ದೇಶಕ್ಕೆ ಸ್ವಾತಂತ್ರ ಸಿಕ್ಕಿತ್ತು ಆದರೆ ಸಾಮಾಜಿಕ ಸ್ವಾತಂತ್ರ ಎಲ್ಲರಿಗೂ ಸಿಕ್ಕಿರಲಿಲ್ಲ. ಸಾಮಾಜಿಕ ಬದಲಾವಣೆ ತರುವಂತಹದ್ದು ಕೂಡಾ ಅಷ್ಟು ಸುಲಭದ ಕೆಲಸವಲ್ಲ. ಅಂದಿನ ಕಾಲದಲ್ಲಿ ದೇವರಾಜ ಅರಸು ಅವರು ಹಿಂದುಳಿದ ಪರ ಜನರ ಕಾಳಜಿಯಿಂದ…
ಸೌದಿ ಅರೇಬಿಯಾ: ಹಜ್ ಕಾಲ್ತುಳಿತದಲ್ಲಿ ಮೃತ ಯಾತ್ರಾರ್ಥಿಗಳ ಹೆಣಗಳ ರಾಶಿಯ ನಡುವೆ ಹಲವರು ಜೀವಂತವಿದ್ದರೆ, ರಕ್ಷಣಾ ಸಿಬ್ಬಂದಿ ಶ್ರಮ ಮೀರಿ ಕಾರ್ಯಾಚರಣೆ ಮುಂದುವರಿಸಿ ಅವರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಒಟ್ಟು 4000 ಸಿಬ್ಬಂದಿ 220 ಆಂಬ್ಯುಲೆನ್ಸ್ ಗಳ ಮೂಲಕ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಸಿಎನ್ ಎನ್ ವರದಿ ಮಾಡಿದೆ. ಪವಿತ್ರ ಹಜ್ ಯಾತ್ರೆಯ ಕಡೆಯ ದಿನವಾದ ಗುರುವಾರದಂದು ಕಾಲ್ತುಳಿತಕ್ಕೆ ಸಿಲುಕಿ 717ಕ್ಕೂ ಮಂದಿ ಮೃತಪಟ್ಟು 860ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ 14 ಮಂದಿ ಭಾರತೀಯರು ಮೃತ ಪಟ್ಟಿದ್ದು ಅವರಲ್ಲಿ ಒಬ್ಬರು ತೆಲಂಗಾಣದ ಮಹಿಳೆ ಎಂದು ಗುರುತಿಸಲಾಗಿದೆ. ಗುಜರಾತ್ ನ ಒಂಭತ್ತು, ಜಾರ್ಖಂಡ್ ನ ಇಬ್ಬರು, ತಮಿಳುನಾಡಿನ ಓರ್ವ ಸೇರಿ ಒಟ್ಟು ಹದಿನಾಲ್ಕು ಮಂದಿ ಭಾರತೀಯರು ಸಾವನ್ನಪ್ಪಿದ್ದು ಇನ್ನು 13 ಮಂದಿಗೆ ಗಂಭೀರವಾಗಿ ಗಾಯಗಳಾಗಿವೆ. ಮೆಕ್ಕಾದ ಪ್ರಮುಖ ಮಸೀದಿಯಿಂದ ಸುಮಾರು 7ಕಿ.ಮೀ. ದೂರವಿರುವ ಮೀನಾದಲ್ಲಿ ಗುರುವಾರದಂದು ಬೆಳಿಗ್ಗೆ ಈ ಘಟನೆ ಸಂಭವಿಸಿದೆ. ಲಕ್ಷಾಂತರ ಮಂದಿ ಒಂದೇ ಸ್ಥಳದಲ್ಲಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಜನರ ಆರೋಗ್ಯಕ್ಕೆ ಒಳಿತಾಗುವ ದೃಷ್ಟಿಯಿಂದ ಕೆ.ಎಸ್.ಹೆಗ್ಡೆ ಸಹಭಾಗಿತ್ವದೊಂದಿಗೆ ಸ್ಫೂರ್ತಿ ಪಾಲಿಕ್ಲಿನಿಕ್ ಗುಣಮಟ್ಟದ ಸೇವೆಯನ್ನು ಒದಗಿಸುತ್ತಾ ಬಂದಿದ್ದು, ಇದೀಗ ಆರಂಭಗೊಂಡ ಸುಸಜ್ಜಿತ ಪ್ರಯೋಗಾಲಯ ಮತ್ತು ಫಿಸಿಯೋಥೆರಪಿ ಘಟಕವೂ ಉತ್ತಮವಾಗಿ ಕಾರ್ಯ ನಿರ್ವಹಿಸಲಿದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ ಡಾ.ಶಾಂತಾರಾಮ ಶೆಟ್ಟಿ ಹೇಳಿದರು. ಅವರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆ ಸಹಭಾಗಿತ್ವದಲ್ಲಿ ತೊಕ್ಕೊಟ್ಟು ಭಟ್ನಗರದ ಸ್ಪೂರ್ತಿ ಪಾಲಿಕ್ಲಿನಿಕ್‍ನಲ್ಲಿ ನೂತನವಾಗಿ ಆರಂಭಗೊಂಡ ಫಿಸಿಯೋಥೆರಪಿ ವಿಭಾಗವನ್ನು ಉದ್ಘಾಟಿಸಿದರು. ಪ್ರಯೋಗಾಲಯವನ್ನು ನಿಟ್ಟೆ ವಿ.ವಿ ಉಪಕುಲಪತಿ ಡಾ. ರಮಾನಂದ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭ ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜಿನ ಡೀನ್ ಡಾ.ಸತೀಶ್ ಕುಮಾರ್ ಭಂಡಾರಿ, ಮೆಡಿಕಲ್ ಸುರಿಟೆಂಡೆಂಟ್ ಡಾ.ಕರುಣಾ ರಮೇಶ್, ವೈಸ್ ಡೀನ್ ಡಾ.ಪ್ರಕಾಶ್, ಕ್ಷೇಮದ ಕುಲಸಚಿವ ಡಾ.ಜೆ.ಪಿ ಶೆಟ್ಟಿ, ಸ್ಫೂರ್ತಿ ಪಾಲಿಕ್ಲಿನಿಕ್‍ನ ಆಡಳಿತ ನಿರ್ದೇಶಕ ಡಾ. ವಿಕ್ರಂ ಶೆಟ್ಟಿ, ಮಕ್ಕಳ ತಜ್ಞ ಡಾ.ಕಿಶನ್ ಆಳ್ವ, ಕಣ್ಣಿನ ತಜ್ಞ ಡಾ.ವಸಂತಿ, ಫಿಸಿಷಿಯನ್ ಡಾ.ಸುರೇಶ್.ಜಿ, ಡಾ.ಅಭಿಜಿತ್ ಶೆಟ್ಟಿ, ಡಾ.ಶ್ರೀನಾಥ್ ಕಾಮತ್, ಡಾ.ಶ್ರೀನಿವಾಸ್ ಭಟ್, ಡಾ.ಗಿರೀಶ್, ಡಾ.ದೀಪಾ…

