


ಉಳ್ಳಾಲ: ಸಮುದ್ರದ ದಡಕ್ಕೆ ಮೀನುಗಾರಿಕಾ ಬೋಟ್ ಅಪ್ಪಳಿಸಿರುವ ಘಟನೆ ಉಳ್ಳಾಲದ ಕೋಡಿ ಸಮುದ್ರ ತೀರದಲ್ಲಿ ಭಾನುವಾರ ತಡರಾತ್ರಿ 1.30 ಗಂಟೆಗೆ ನಡೆದಿದೆ. ಸಮುದ್ರ ಮಧ್ಯೆ ಮೀನುಗಾರಿಕೆಗೆಂದು (ಕೊಳಾಯಿ )ನಿಲ್ಲಿಸಿದ್ದ ಸಂದರ್ಭ ಹಗ್ಗ ತುಂಡಾಗಿ ದಡಕ್ಕೆ ಅಪ್ಪಳಿಸಿದೆ ಎಂದು ಬೋಟ್ ಮಾಲೀಕರು ತಿಳಿಸಿದ್ದಾರೆ.
ತಮಿಳು ಮೂಲದ ಅನೀಸ್, ಸೂಸರಾಜ್, ಸಲೀಂ, ಮೊಯ್ದೀನ್, ರಾಜ್, ಜಾಜ್9 ,ರಾಜೀವ್ ಗಾಂಧಿ, ತಂಗಾರ್, ಬನ್ನಾನ್ ರಕ್ಷಣೆಗೊಳಗಾದವರು.
ಬೋಳಾರದ ಫಾರುಕ್ ಮತ್ತು ಉಳ್ಳಾಲ ಮುಕ್ಕಚ್ಚೇರಿಯ ಅಶ್ರಫ್ ಹೆಚ್. ಎಂಬವರಿಗೆ ಸೇರಿದ ‘ಅಝ್ನಾನ್’ ಹೆಸರಿನ ಮೀನುಗಾರಿಕಾ ಬೋಟ್ ದಡಕ್ಕೆ ಅಪ್ಪಳಿಸಿದೆ. ಶನಿವಾರ ರಾತ್ರಿ 10 ಗಂಟೆ ವೇಳೆಗೆ 10 ಜನ ಮೀನುಗಾರರಿದ್ದ ಬೋಟ್ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಸಮುದ್ರದ ಮಧ್ಯೆ ಬೋಟನ್ನು ಕೊಳಾಯಿ ಹಾಕಿ ನಿಲ್ಲಿಸಲಾಗಿತ್ತು. ಈ ವೇಳೆ ಜೋರಾಗಿ ಬೀಸಿದ ಗಾಳಿಗೆ ಹಗ್ಗ ತುಂಡಾಗಿ ಉಳ್ಳಾಲ ಕೋಡಿ ಸಮುದ್ರ ತೀರದತ್ತ ಧಾವಿಸಿದ ಬೋಟ್ ದಡಕ್ಕೆ ಅಪ್ಪಳಿಸಿದೆ. ಸ್ಥಳೀಯ ಮನೆಮಂದಿಗೆ ಸಿಡಿಲು ಬಡಿದಂತಹ ಸದ್ದು ಕೇಳಿ ಹೊರನೋಡಿದಾಗ ಮೀನುಗಾರಿಕಾ ಬೋಟ್ ಕಡಲ್ಕೊರೆತ ತಡೆಗೆ ಹಾಕಲಾದ ಬಂಡೆಗಳಿಗೆ ಅಪ್ಪಳಿಸಿ ನಿಂತಿದೆ. ಬೋಟಿನಲ್ಲಿದ್ದ 10 ಮಂದಿ ಕಾರ್ಮಿಕರು ಹೊರಗೆ ಜಿಗಿದು ರಕ್ಷಣೆಗೊಳಗಾಗಿದ್ದು, ಈ ಪೈಕಿ ತೀವ್ರ ಅಸ್ವಸ್ಥನಾಗಿದ್ದರಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕಾಗಮಿಸಿದ ಉಳ್ಳಾಲ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

