ಉಳ್ಳಾಲ: ಕೊರೊನಾದಿಂದಾಗಿ ಇಡೀ ಸಮಾಜಕ್ಕೆ ಕತ್ತಲೆ ಕವಿದಿರುವ ಇಂತಹ ಸಂದರ್ಭದಲ್ಲಿಯೂ ಆಶಾಕಿರಣವಾಗಿ ಆಶಾ ಕಾರ್ಯಕರ್ತೆಯರು ಸಮಾಜದಲ್ಲಿ ಮುಂಚೂಣಿಯಲ್ಲಿದ್ದುಕೊಂಡು ಕೆಲಸ ಮಾಡುತ್ತಿದ್ದು, ಅವರ ಸೇವೆ ಶ್ಲಾಘನೀಯವಾದುದು ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ಏಳು ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಭಾನುವಾರ ನಾಟೆಕಲ್, ಕೋಟೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಉಳ್ಳಾಲದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಭಿನಂದನೆ ಹಾಗೂ ಪೆÇ್ರೀತ್ಸಾಹ ಧನವನ್ನು ವಿತರಿಸಿ ಅವರು ಮಾತನಾಡಿದರು.ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಬೆಂಗಳೂರಿನ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಮಾತನಾಡಿ, ನರೇಂದ್ರ ಮೋದಿಯವರು ಕೊರೊನಾದಂತಹ ಸಂದಿಗ್ಧತೆಯ ಕಾಲದಲ್ಲೂ ಉತ್ತಮ ಆಡಳಿತದೊಂದಿಗೆ, ಕೊರೊನಾ ನಿಯಂತ್ರಣಕ್ಕಾಗಿ ಹಗಲಿರುಲು ಶ್ರಮಿಸುತ್ತಿದ್ದಾರೆ. ಅಲ್ಲದೆ ಕೊರೊನಾ ಸಂಕಷ್ಟ ಕಾಲದಲ್ಲಿ ಸಮಾಜದ ಸ್ವಾಸ್ಥ್ಯ ವನ್ನು ಕಾಪಾಡುವಲ್ಲಿ ಆಶಾಕಾರ್ಯಕರ್ತೆಯರ ಪಾತ್ರವು ಪ್ರಮುಖವಾದದ್ದು. ಸಮಾಜದಲ್ಲಿ ಅವರನ್ನು ಗೌರವಿಸುವ ಕೆಲಸಗಳು ಆಗಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ರಾಜ್ಯ ಅಲೆಮಾರಿ ಅರೆ ಅಲೆಮಾರಿ ನಿಗಮದ ರಾಜ್ಯ ಅಧ್ಯಕ್ಷ…
Author: UllalaVani
ಉಳ್ಳಾಲ: ಡಾ.ಶಕೀಲ್ ಚಾರಿಟೇಬಲ್ ಟ್ರಸ್ಟ್ ದೇರಳಕಟ್ಟೆ ಇದರ ಆಶ್ರಯದಲ್ಲಿ 3000 ಅರ್ಹ ಬಡ ಕುಟುಂಬಗಳಿಗೆ ಅಕ್ಕಿ ವಿತರಣೆ ಕಾರ್ಯಕ್ರಮವು ಭಾನುವಾರ ದೇರಳಕಟ್ಟೆಯ ನೇತಾಜಿ ಸುಬಾಶ್ಚಂದ್ರಬೋಸ್ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕೊಣಾಜೆ ಪೆÇೀಲಿಸ್ ಠಾಣೆಯ ಅಧಿಕ್ಷಕ ಮಲ್ಲಿಕಾರ್ಜುನ ಅವರು ಮಾತನಾಡಿ, ಕೊರೊನ ಸಮಯದಲ್ಲಿ ಯಾರೂ ಕೂಡಾ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಕೆಲವು ಸಮಾಜ ಸೇವಾ ಸಂಘಟನೆಗಳು ಸೌಹಾರ್ದತೆಯೊಂದಿಗೆ ಇಂತಹ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯವಾಗಿದೆ. ಇಂತಹ ಕೆಲಸಗಳು ಸಮಾಜದಲ್ಲಿ ಹೆಚ್ಚೆಚ್ಚು ನಡೆಯಬೇಕಿದೆ ಎಂದರು.ಬೋಳಾ ನರಿಂಗಾನ ಚಚ್9 ನ ಧರ್ಮ ಗುರು ಫಾದರ್ ಮೈಕಲ್,ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಕೆ.ಶೆಟ್ಟಿ ಉಳಿದೊಟ್ಟುರೆಂಜಾಡಿ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಮೊಹಮ್ಮದ್ ಹನೀಫ್, ಶ್ರೀ ಅಯ್ಯಪ್ಪ ಸ್ವಾಮೀ ದೇವಸ್ಥಾನದ ಸಮಿತಿ ಅಧ್ಯಕ್ಷ ಜಗದೀಶ್ ರೈ, ಬೆಳ್ಮ ಗ್ರಾ.ಪಂ ಆಧ್ಯಕ್ಷ ಬಿ.ಎಂ ಅಬ್ದುಲ್ ಸತ್ತಾರ್, ಎಸ್ ಕೆಎಸ್ಸೆಸ್ಸಫ್ ಉಳ್ಳಾಲ ಕ್ಲಸ್ಟರ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ದಾರಿಮಿ, ದೇರಳಕಟ್ಟೆ ಬದ್ರಿಯ…
ಉಳ್ಳಾಲ: ಬ್ಯಾಟರಿ ಅಂಗಡಿ ಬೆಂಕಿಗೆ ಆಹುತಿಯಾದ ಘಟನೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.ಕುಂಪಲ ನಿವಾಸಿ ಭರತ್ ಎಂಬವರಿಗೆ ಸೇರಿದ ಗೋಲ್ಡನ್ ಇಲೆಕ್ಟ್ರಿಕಲ್ಸ್ ಅಂಗಡಿ ಇದಾಗಿದೆ. ಇಂದು ಬೆಳಗ್ಗಿನ ಜಾವ ಅಂಗಡಿಗೆ ಆಗಮಿಸಿದ್ದ ಭರತ್ ಅವರು ದೇವರಿಗೆ ದೀಪ ಇಟ್ಟು ಬಳಿಕ ಲಾಕ್ಡೌನ್ ಹಿನ್ನೆಲೆಯಲ್ಲಿ ಅಂಗಡಿಗೆ ಶಟರ್ ಹಾಕಿ ತೆರಳಿದ್ದರು. ಆದರೆ ಸ್ವಲ್ಪ ಹೊತ್ತಿನಲ್ಲಿ ಅಂಗಡಿಯೊಳಗಿನಿಂದ ಹೊಗೆ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರು ಶಟರ್ ಒಡೆದು ಒಳನೋಡಿದಾಗ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣ ಸ್ಥಳೀಯರೆಲ್ಲರೂ ಸೇರಿಕೊಂಡು ನೀರು ಹಾಕಿ ನಂದಿಸಲು ಯತ್ನಿಸಿದರೂ ವಿಫಲವಾಯಿತು. ಬಳಿಕ ಯುವಕರ ತಂಡವೊಂದು ನೀರಿನ ಟ್ಯಾಂಕರ್ ಸ್ಥಳಕ್ಕೆ ಕರೆಯಿಸಿ ಅದರ ಮೂಲಕ ನೀರು ಹಾಯಿಸಿ ಬೆಂಕಿಯನ್ನು ನಂದಿಸಿದ್ದಾರೆ. ಅಗ್ನಿ ಶಾಮಕ ದಳಕ್ಕೆ ದೂರು ನೀಡಲಾದರೂ, ಮಂಗಳೂರಿನಿಂದ ತೊಕ್ಕೊಟ್ಟುವಿಗೆ ಆಗಮಿಸುವಷ್ಟರಲ್ಲಿ ಸ್ಥಳೀಯರು ಸೇರಿಕೊಂಡು ಬೆಂಕಿಯನ್ನು ನಂದಿಸಿ ಆಗಿತ್ತು.
ಕೊಣಾಜೆ ಪಾವೂರಿನಲ್ಲಿ ಮೇ 20ರಂದು ತಮ್ಮ ಮಗಳ ಮದುವೆ ಕಾರ್ಯಕ್ರಮ ನಡೆಸಲು ಶೋಭ ಎಂಬುವರು ಪಾವೂರು ಪಂಚಾಯತಿಯಿಂದ ಅನುಮತಿ ಪಡೆದಿದ್ದರು. ಮದುವೆಗೆ ಮಾತ್ರ ಅನುಮತಿ ಪಡೆದ ವಧುವಿನ ಕಡೆಯವರು ಮದುವೆಯ ಮುನ್ನ ದಿನ ರಾತ್ರಿ ಮೆಹಂದಿ ಕಾರ್ಯಕ್ರಮದಲ್ಲಿ ಸಾಮೂಹಿಕ ನೃತ್ಯ ಮಾಡಿ, ಲಾಕ್ಡೌನ್ ನಿಯಮ ಉಲ್ಲಂಘಿಸಿದ್ದಾರೆ.ಅನುಮತಿ ಇಲ್ಲದಿದ್ದರೂ ಧ್ವನಿವರ್ಧಕ ಬಳಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನೃತ್ಯ ಮಾಡಿದ್ದಾರೆ. ಇದರ ವಿಡಿಯೋ ಗಮನಕ್ಕೆ ಬಂದ ಬಳಿಕ ಪಾವೂರು ಪಂಚಾಯತಿ ಪಿಡಿಓ ಸುಧಾರಾಣಿ ಅವರು ಕೋವಿಡ್ ನಿಯಮಾವಳಿ ಉಲ್ಲಂಘಿಸಿರುವುದರಿಂದ ಕಾನೂನು ಕ್ರಮ ಕೈಗೊಳ್ಳುವಂತೆ ಕೋಣಾಜೆ ಪೊಲೀಸ್ ಠಾಣೆಯಲ್ಲಿ ಸೂಚಿಸಿದ್ದಾರೆ. ಅವರ ಆದೇಶ ಅನ್ವಯ ದೂರು ದಾಖಲಿಸಿಕೊಳ್ಳಲಾಗಿದೆ.
ಉಳ್ಳಾಲ : ವೈಯಕ್ತಿಕ ವರ್ಚಸ್ಸಿನ ಪ್ರದರ್ಶನ ಮಾಡುವ ನಿಟ್ಟಿನಲ್ಲಿ ಕೆಲವರ ಮೇಲಿನ ಸೇಡನ್ನು ತೀರಿಸಲು ಶ್ರೀ ಕ್ಷೇತ್ರ ಕೊಂಡಾಣವನ್ನು ವೇದಿಕೆ ಮಾಡಿರುವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಕ್ರಮ ಇಡೀ ಗ್ರಾಮಸ್ಥರು ಮತ್ತು ಶ್ರೀ ಕ್ಷೇತ್ರದ ಭಕ್ತಾಧಿಗಳಿಗೆ ನೋವನ್ನು ತಂದಿದ್ದು, ಶ್ರೀ ಕ್ಷೇತ್ರದಲ್ಲಿ ಈ ಹಿಂದೆ ನಡೆದಂತೆ ಸಂಪ್ರಾದಾಯ, ಕಟ್ಟುಕಟ್ಟಳೆಯಂತೆ ಕಾರ್ಯಕ್ರಮಗಳನ್ನು ನಡೆಸಬೇಕು ಇದಕ್ಕೆ ವ್ಯವಸ್ಥಾಪನಾ ಸಮಿತಿ ವ್ಯವಸ್ಥೆ ಮಾಡಬೇಕು ಹೊರತು ಕಟ್ಟುಕಟ್ಟಳೆಯನ್ನು ಉಲ್ಲಂಘಿಸಿ ಕಾರ್ಯಕ್ರಮಗಳನ್ನು ನಡೆಸಬಾರದು,ವ್ಯವಸ್ಥಾಪನಾ ಸಮಿತಿ, ದೈವಸ್ಥಾನಕ್ಕೆ ಸಂಬಂಧಪಟ್ಟವರು ಮತ್ತು ಗ್ರಾಮಸ್ಥರು ಒಂದು ಸೇರಿ ಸಭೆ ನಡೆಸಿ ಸಮನ್ವಯ ಸಮಿತಿ ರಚಿಸಿ ಸಮಸ್ಯೆ ಬಗೆಹರಿಸುವ ಕಾರ್ಯ ಆಗಬೇಕು ಎಂದು ಶ್ರೀ ಕ್ಷೇತ್ರ ಕೊಂಡಾಣದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ರೈ ಕೋಟೆಕಾರು ಗುತ್ತು ಅಭಿಪ್ರಾಯಪಟ್ಟರು. ಶ್ರೀ ಕ್ಷೇತ್ರ ಕೊಂಡಾಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಧಾರ್ಮಿಕ ದತ್ತಿ ಇಲಾಖೆಯ ಕಾನೂನು ಇಡೀ ರಾಜ್ಯಕ್ಕೆ ಒಂದೇ ಕಾನೂನು ಆದರೆ ತುಳುನಾಡಿನ ದೈವಾರಾದನೆ ಕಟ್ಟುಪಾಡುಗಳ ಕುರಿತು ಪ್ರಸ್ತಾಪ ಇಲ್ಲ. ದೇವಸ್ಥಾನದಲ್ಲಿ…
ಉಳ್ಳಾಲ: ಕೇಂದ್ರ ಮತ್ತು ರಾಜ್ಯ ಸರಕಾರ ಎಪಿಎಂಸಿಯನ್ನು ಖಾಸಗೀಕರಣಗೊಳಿಸುವ ಮೂಲಕ ದೇಶದ ಬೆನ್ನೆಲುಬು ರೈತನಿಗೆ ಅನ್ಯಾಯ ಮಾಡುವುದರ ಜೊತೆಗೆ ವಿದ್ಯುತ್ ಶಕ್ತಿ ಇಲಾಖೆಯನ್ನು ಖಾಸಗೀಕರಣಗೊಳಿಸಿ ರೈತರನ್ನು ಕಂಗಾಲಾಗಿ ಮಾಡಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್ ಹೇಳಿದರು.ಅವರು ಕಿಸಾನ್ ಸಂಯುಕ್ತ ಮೋರ್ಚಾ ದೇಶವ್ಯಾಪಿ ಕರೆ ನೀಡಿರುವ ಕಪ್ಪು ಪಟ್ಟಿ ಪ್ರದರ್ಶನ ಅಂಗವಾಗಿ ಕುತ್ತಾರು ತೇವುಲದಲ್ಲಿ ಹಮ್ಮಿಕೊಂಡ ಕಪ್ಪು ಪಟ್ಟಿ ಪ್ರದರ್ಶನದಲ್ಲಿ ಭಾಗವಹಿಸಿ ಮಾತನಾಡಿದರು.ರೈತರ ಉತ್ಪತ್ತಿಗೆ ಎಪಿಎಂಸಿ ಯಲ್ಲಿ ಸೂಕ್ತ ಬೆಲೆ ದೊರೆಯುತಿತ್ತು. ಇದೀಗ ಅದನ್ನು ಖಾಸಗೀಕರಣಗೊಳಿಸು ಮೂಲಕ ರೈತರನ್ನು ಕಂಗಾಲಾಗಿ ಮಾಡಿದೆ.ಹೋರಾಟ ನಡೆಸಿ ಪಡೆದಂತಹ ಕೃಷಿಭೂಮಿಯನ್ನು ಭೂಸುಧಾರಣೆ ಕಾಯಿದೆ ಜಾರಿಗೆ ತಂದು ಬಂಡವಾಳಶಾಹಿ, ಬಹುರಾಷ್ಟ್ರೀಯ ಕಂಪೆನಿಗಳ ಪಾಲಾಗುವ ವ್ಯವಸ್ಥೆ ಸರಕಾರ ಮಾಡಿದೆ. ಇದೆಲ್ಲವನ್ನು ಮುಂದಿಟ್ಟು 500 ರೈತ ಸಂಘಟನೆಗಳು ದೆಹಲಿಯಲ್ಲಿ ಆರು ತಿಂಗಳಿನಿಂದ ಬಿಸಿಲು-ಮಳೆಯೆನ್ನದೆ ಕುಳಿತು ಪ್ರತಿಭಟನೆ ನಡೆಸುತ್ತಿದೆ. 180 ದಿನಗಳ ಪ್ರತಿಭಟನೆ ಮುಂದುವರಿದರೂ ಕೇಂದ್ರ ಸರಕಾರ ಮಾತ್ರ ಕಿವಿ ಕೇಳಿಸದ ರೀತಿಯಲ್ಲಿ ವರ್ತಿಸಿ ರೈತವಿರೋಧಿ, ಜನವಿರೋಧಿಯಾಗಿ…
ಉಳ್ಳಾಲ: ಕುತ್ತಾರು ಜಂಕ್ಷನ್ ಅಭಿವೃದ್ಧಿಗೆ ನೀಲಿನಕ್ಷೆ ತಯಾರಾಗಿದೆ. ಅಭಿವೃದ್ಧಿ ಸಂದರ್ಭ ರಸ್ತೆ ಬದಿಯ ಮೀನು ಮತ್ತು ತರಕಾರಿ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಬೇಕು. ಅವರಿಗಾಗಿ ಮಿನಿ ಮಾರುಕಟ್ಟೆಯನ್ನು ಜಂಕ್ಷನ್ ನಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಸರಕಾರದ ಆದ್ಯತೆಯಂತೆ ಅಂಗಡಿಗಳನ್ನು ಪಡೆದುಕೊಳ್ಳಬಹುದು ಎಂದು ಶಾಸಕ ಯು.ಟಿ ಖಾದರ್ ಹೇಳಿದರು.ಅವರು ಕುತ್ತಾರು ಜಂಕ್ಷನ್ನಿನಲ್ಲಿ ಮುನ್ನೂರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಕೈಗೊಂಡಿರುವ ಶ್ರಮಾದಾನ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು.ಕೋವಿಡ್ -19 ಕಾರ್ಯಾಚರಣೆ ನಡುವೆಯೂ ರಜೆಯ ದಿನವನ್ನು ಉಪಯೋಗಿಸಿಕೊಂಡು ಗ್ರಾ.ಪಂ ಅಧ್ಯಕ್ಷರು , ಉಪಾಧ್ಯಕ್ಷರು ಹಾಗೂ ಸದಸ್ಯರು ಸೇರಿಕೊಂಡು ಶ್ರಮಾದಾನ ಕೈಗೊಂಡಿರುವ ಕಾರ್ಯ ಶ್ಲಾಘನೀಯ. ಈ ಮೂಲಕ ಗಾಂಧೀಜಿಯ ಕನಸನ್ನು ನನಸುಗೊಳಿಸುವ ಕಾರ್ಯವಾಗಿದೆ ಎಂದ ಅವರು ರೂ. 20 ಕೋಟಿ ಅನುದಾನದಲ್ಲಿ ದೇರಳಕಟ್ಟೆಯಿಂದ ಕುತ್ತಾರು ಜಂಕ್ಷನ್ ಚತುಷ್ಪಥ ರಸ್ತೆಗೆ ಅನುದಾನ ಮಂಜೂರಾಗಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ. ಈ ಸಂದರ್ಭ ಜನನಿಬಿಡ ಮತ್ತು ಹಲವು ಮಳಿಗೆಗಳ ಕೇಂದ್ರ ಸ್ಥಾನ ಆಗಿರುವ ಕುತ್ತಾರು ಜಂಕ್ಷನ್ ಅಭಿವೃದ್ಧಿಯ ನೀಲಿನಕ್ಷೆಯನ್ನು ತಯಾರಿಸಲಾಗಿದೆ. ಅಭಿವೃದ್ಧಿ…
ಉಳ್ಳಾಲ: ತೊಕ್ಕೊಟ್ಟು ಮುಖ್ಯರಸ್ತೆಯಿಂದ ಭಟ್ನಗರ, ಚೆಂಬುಗುಡ್ಡೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ಮೂರು ವರ್ಷಗಳ ಹಿಂದೆಯೇ ಅನುದಾನ ದೊರೆತರೂ , ಗುತ್ತಿಗೆದಾರರು ಕೆಲಸವನ್ನು ನಿಧಾನವಾಗಿ ಮಾಡಿದ್ದರಿಂದಾಗಿ ವಿಳಂಬವಾಗಿತ್ತು. ಇದೀಗ ಸುಸಜ್ಜಿತ ರಸ್ತೆಯ ನಿರ್ಮಾಣ ಸ್ಥಳೀಯ ಯುವಕರ ಮುತುವರ್ಜಿಯಿಂದ ನಡೆಯುತ್ತಿದೆ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.ಅವರು ತೊಕ್ಕೊಟ್ಟು- ಭಟ್ನಗರ- ಚೆಂಬುಗುಡ್ಡೆ ರಸ್ತೆ ಅಭಿವೃದ್ಧಿ ಕಾರ್ಯವನ್ನು ಭಾನುವಾರ ವೀಕ್ಷಿಸಿ ಮಾತನಾಡಿದರು.ರಸ್ತೆ ಅವ್ಯವಸ್ಥೆ ಕುರಿತು ಸ್ಥಳೀಯ ಯುವಕರು, ಊರಿನವರು, ಗುತ್ತಿಗೆದಾರರನ್ನು ಮತ್ತು ಅಧಿಕಾರಿಗಳನ್ನು ಪ್ರಶ್ನಿಸಿದ್ದರು. ಅದರಂತೆ ಅವರಿಗೆ ಸ್ಪಷ್ಟೆ ಸೂಚನೆಯನ್ನು ನೀಡಿದ ಪರಿಣಾಮ ಕಾಮಗಾರಿ ಆರಂಭವಾಗಿದೆ. ಅದರ ಗುಣಮಟ್ಟವನ್ನು ಉಳ್ಳಾಲ ನಗರಸಭೆ ಆಡಳಿತ ನೋಡುತ್ತಿದೆ. ಹಿಂದೂ ರುದ್ರಭೂಮಿ, ಜುಮಾ ಮಸೀದಿ ಸಂಪರ್ಕಿಸುವ ಪ್ರಮುಖ ಲಿಂಕ್ ರಸ್ತೆ ಇದಾಗುವುದರಿಂದ ಬಹಳಷ್ಟು ಮಂದಿ ರಸ್ತೆಯನ್ನು ಅವಲಂಬಿತರಾಗಿದ್ದಾರೆ. ಶೀಘ್ರವೇ ಕಾಮಗಾರಿ ಪೂರ್ಣಗೊಂಡು ತೊಕ್ಕೊಟ್ಟುವಿನ ಮಾದರಿ ರಸ್ತೆಯಾಗಲಿ ಎಂದರು.ಈ ಸಂದರ್ಭ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಈಶ್ವರ್ ಉಳ್ಳಾಲ್, ಉಳ್ಳಾಲ ನಗರಸಭೆ ಅಧ್ಯಕ್ಷೆ ಚಿತ್ರಾ ಚಂದ್ರಕಾಂತ್, ಉಪಾಧ್ಯಕ್ಷ ಐಯೂಬ್ ಮಂಚಿಲ,…
ಉಳ್ಳಾಲ: ಪ್ರತಿ ತಾಲೂಕು ಆಸ್ಪತ್ರೆಗಳನ್ನು ಬೇರೆ ಬೇರೆ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಯವರು ನಿರ್ವಹಿಸಬೇಕು. ಈ ಮೂಲಕ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ಬರುವಂತಹ ರೋಗಿಗಳ ಒತ್ತಡವನ್ನು ಕಡಿತಗೊಳಿಸಬೇಕು ಎಂದು ಶಾಸಕ ಯು.ಟಿ ಖಾದರ್ ಹೇಳಿದರು.ಅವರು ಉಳ್ಳಾಲದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಕೋವಿಡ್-19 ನಿರ್ವಹಣೆಗೆ ಸಜ್ಜುಗೊಳ್ಳುತ್ತಿರುವ ಆಸ್ಪತ್ರೆ ವಠಾರವನ್ನು ವೀಕ್ಷಿಸಿ ಮಾತನಾಡಿದರು.ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರವನ್ನು ತುರ್ತು ಸಂದರ್ಭ ಕೋವಿಡ್ ಕೇರ್ ಆಸ್ಪತ್ರೆಯಾಗಿ ನಿರ್ಮಿಸಲು ಹಂತ ಹಂತದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಲಸಿಕೆ, ಗರ್ಭಿಣಿಯರು ಸಹಿತ ನಿತ್ಯ ಬರುವ ರೋಗಿಗಳಿಗೆ ತೊಂದರೆಯಾಗದ ರೀತಿಯಲ್ಲಿ ವಿಭಾಗವನ್ನು ಮಾಡಲಾಗುತ್ತಿದೆ.ಹೆರಿಗೆ, ಇಂಜೆಕ್ಷನ್ ಬರುವವರಿಗೆ ಬೇರೆಯೇ ಜಾಗದಲ್ಲಿ ಪ್ರವೇಶ ಮತ್ತು ಚಿಕಿತ್ಸೆ. ಕೋವಿಡ್ ಸಂಬಂಧಿಸಿದ ರೋಗಿಗಳಿಗೆ ಬೇರೆಯದೇ ಆದ ಫಿವರ್ ಕ್ಲಿನಿಕ್, ಪ್ರವೇಶ ಹಾಗೂ ಆಕ್ಸಿಜನ್ ಲೆವೆಲ್ ಕಡಿಮೆ ಆಗಿ ಬಂದವರನ್ನು ತಕ್ಷಣ ಮೇಲಿನ ಮಹಡಿಯಲ್ಲಿ ದಾಖಲುಗೊಳಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.ವೈದ್ಯರ ಸೇವೆ ಹಾಗೂ ಆಸ್ಪತ್ರೆಯ ಸಂಪೂರ್ಣ ನಿರ್ವಹಣೆಯನ್ನು ಯೆನೆಪೋಯ ಸಂಸ್ಥೆ ವಹಿಸಿಕೊಂಡಿದೆ. 20 ನರ್ಸುಗಳು, 12 ವೈದ್ಯರುಗಳು,…
ಉಳ್ಳಾಲ: ಕೊಂಡಾಣ ಶ್ರೀ ಪಿಲಿಚಾಮುಂಡಿ ಬಂಟ ಮತ್ತು ಮುಂಡತ್ತಾಯ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಭಕ್ತಾಧಿಗಳ ದಿಕ್ಕು ತಪ್ಪಿಸುವ ಪ್ರಯತ್ನಗಳನ್ನು ಒಂದು ತಂಡ ಮಾಡುತ್ತಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್ ಆರೋಪಿಸಿದ್ದಾರೆ.ಕೊಂಡಾಣ ಶ್ರೀ ಪಿಲಿಚಾಮುಂಡಿ ಬಂಟ ಮತ್ತು ಮುಂಡತ್ತಾಯ ದೈವಸ್ಥಾನದ ವಠಾರದಲ್ಲಿ ಸೋಮವಾರ ವ್ಯವಸ್ಥಾಪನಾ ಸಮಿತಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಮೇ.23 ರಂದು ವ್ಯವಸ್ಥಾಪನಾ ಸಮಿತಿ ಭಂಡಾರಮನೆಗೆ ಹಾಕಿದ ಬೀಗವನ್ನು ಒಡೆದು ಅಕ್ರಮವಾಗಿ ಪ್ರವೇಶಗೈದ ಮುತ್ತಣ್ಣ ಶೆಟ್ಟಿ ಎಂಬವರು ಪೂಜೆ ನೆರವೇರಿಸಿದ್ದಾರೆ. ಕೊರೊನಾ ಕಾರಣದಿಂದ ನಿಲ್ಲಿಸಲ್ಪಟ್ಟ ಜಾತ್ರೆಗೆ ಬದಲಾಗಿ ಹೋಮ ಮಾಡಲು ಸಿದ್ಧತೆ ಮಾಡಲಾಗಿತ್ತು . ಆದರೆ ಧಾರ್ಮಿಕ ದತ್ತಿ ಇಲಾಖೆ ವ್ಯವಸ್ಥಾಪನಾ ಸಮಿತಿ ಮೂಲಕ ಭಂಡಾರಮನೆಯ ಬಾಗಿಲಿಗೆ ಹಾಕಿಸಿದ್ದ ಬೀಗದ ಮೇಲೆ ಮುತ್ತಣ್ಣ ಶೆಟ್ಟಿ ಎಂಬವರು ಮತ್ತೊಂದು ಬೀಗ ಹಾಕಿದ್ದರು. ಇದರಿಂದ ಹೋಮ ನೆರವೇರಿಸಲು ಅಸಾಧ್ಯವಾಗಿತ್ತು.ಅದಕ್ಕಾಗಿ ಅರ್ಚಕ ಕಾರಂತರ ಉಪಸ್ಥಿತಿಯಲ್ಲಿ ಹೊರಗಿನಿಂದಲೇ ವ್ಯವಸ್ಥಾಪನಾ ಸಮಿತಿ ಪ್ರಾರ್ಥನೆ ನಡೆಸಿ ವಾಪಸ್ಸಾಗಿದ್ದರು. ಮರುದಿನ ಮುತ್ತಣ್ಣ…

