Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
All News

ʻಶಾಸಕರು ಅರ್ಧ ಬಿಟ್ಟ ಕಾಂಕ್ರೀಟಿಕರಣವನ್ನು ನಾನೇ ಪೂರ್ಣಗೊಳಿಸುತ್ತೇನೆ ʼ : ಅಧ್ಯಕ್ಷೆ ದಿವ್ಯಾ ಸತೀಶ್‌ ಶೆಟ್ಟಿ , ಕೋಟೆಕಾರು ರಾಮಾಶ್ರಯ ರಸ್ತೆ ಉದ್ಘಾಟನೆಯಲ್ಲಿ ಭರವಸೆ

UllalaVaniBy UllalaVaniJune 26, 2026Updated:June 26, 2026No Comments4 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

ಉಳ್ಳಾಲ:  ರಾಮಾಶ್ರಯ ರಸ್ತೆ ಕಾಂಕ್ರೀಟಿಕರಣ ಇಲ್ಲಿನ ಜನರ ಬಹುಬೇಡಿಕೆಯಾಗಿತ್ತು, ಹಿರಿಯ ಬಿಜೆಪಿ ಕಾರ್ಯಕರ್ತರು  ರಸ್ತೆಗಾಗಿ ಸತತ ಪ್ರಯತ್ನ ಮಾಡುತ್ತಿದ್ದರು. ಸಂಸದರು, ವಿಧಾನಪರಿಷತ್‌  ಸದಸ್ಯರು, ಪಟ್ಟಣ ಪಂಚಾಯತ್‌ ಆಡಳಿತದಿಂದ  ಕಾಂಕ್ರೀಟ್‌ ರಸ್ತೆ  ಪೂರ್ಣಗೊಂಡಿದೆ. ತಪ್ಪು ಹುಡುಕುವ ಸಾಕಷ್ಟು ಪ್ರಯತ್ನಗಳಾಗುತ್ತಿದೆ, ಅಭಿವೃದ್ಧಿ ಸಂದರ್ಭ ಎಲ್ಲಾ ವರ್ಗದವರನ್ನು ಗೌರವಿಸಿ ಸಿಕ್ಕಿದ ಅನುದಾನದಲ್ಲಿ  ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದೇವೆ  ಎಂದು   ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಹೇಳಿದರು.

ಕೋಟೆಕಾರು ಪಟ್ಟಣ ಪಂಚಾಯತ್‌  ಇದರ  ರೂ. ೫ ಲಕ್ಷ  ಅನುದಾನದಲ್ಲಿ ಕಾಂಕ್ರೀಟಿಕರಣಗೊಂಡ  ೧೧ನೇ ವಾರ್ಡಿನ ಶ್ರೀ ರಾಮಾಶ್ರಯ ರಸ್ತೆಯನ್ನು    ಉದ್ಘಾಟಿಸಿದರು. 

ಮಡ್ಯಾರ್‌ ರಾಮಾಶ್ರಯ ರಸ್ತೆ ಹಾಳಾಗಿದ್ದು, ಸ್ಥಳೀಯ ಬಿಜೆಪಿ ಕಾರ್ಯಕರ್ತರುಗಳಾದ ಜಯಂತ್‌, ಜೀವನ್‌  ಸಹಿತ  ಎಲ್ಲಾ ಕಾರ್ಯಕರ್ತರು ನಾಗರಿಕರು ಹಲವು ಬಾರಿ ಬೇಡಿಕೆಗಳನ್ನು ಮುಂದಿರಿಸಿದ್ದರು. ಪಟ್ಟಣ ಪಂಚಾಯಿತಿ ಆಡಳಿತ ಸತತ ೮ ವರ್ಷಗಳಿಂದ  ಸತತ ಪ್ರಯತ್ನ ಮಾಡುತ್ತಿದ್ದರು. ಇದೀಗ ಅಧ್ಯಕ್ಷರು ಹಾಗೂ ಸರ್ವ ಸದಸ್ಯರ  ಸಹಕಾರದೊಂದಿಗೆ  ಸುಸಜ್ಜಿತ ಕಾಂಕ್ರೀಟ್‌ ರಸ್ತೆ ನಿರ್ಮಾಣಗೊಂಡಿದೆ. ಸಂಸದರು, ವಿಧಾನಪರಿಷತ್‌ ಸದಸ್ಯರ ಅನುದಾನವನ್ನು  ಒದಗಿಸಿರುವುದರ ಮುಖೇನ ಪಟ್ಟಣ ಪಂಚಾಯತ್‌ ಮೇಲೆ ವಿಶ್ವಾಸವಿಟ್ಟು  ಮತ ಚಲಾಯಿಸಿದವರಿಗೆ ನ್ಯಾಯವನ್ನು ಒದಗಿಸುತ್ತಿದೆ. ಉಳ್ಳಾಲದ ಶಾಸಕರು ಮಂತ್ರಿಗಳಾಗಿದ್ದಾರೆ, ಸದ್ಯ ೫ -೧೦ ಕೋಟಿ ರೂ  ಕೋಟೆಕಾರು ಪಟ್ಟಣ ಪಂಚಾಯಿತಿಗೆ ಮಂತ್ರಿಗಳು ತಂದುಕೊಟ್ಟು  ಅಭಿವೃದ್ಧಿಗೆ ಸಹಕರಿಸಲಿ.  ಪಟ್ಟಣ ಪಂಚಾಯಿತಿ ಭಾಗದಲ್ಲಿ ಅನೇಕ ಸಮಸ್ಯೆಗಳಿವೆ , ಅದನ್ನು ಸರಿಪಡಿಸಲು ಶಾಸಕರು ಸಹಕರಿಸಲಿ ಎಂದ ಅವರು  ಜಲಜೀವನ್‌ ಮಿಷನ್‌ ಕೇಂದ್ರ ಸರಕಾರ ನೀಡಿದೆ. ರಾಜ್ಯ ಸರಕಾರವೂ ಅನುದಾನವನ್ನು ಪೂರೈಸಲಿ.  ವಿಕಾಸ, ವಿಶ್ವಾಸ ಮತ್ತು ಜನ ಕಲ್ಯಾಣದಂತೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಪ್ರಧಾನಿ  ಮೋದಿಯವರ ಕಾರ್ಯಕ್ಕೆ ಶಕ್ತಿ ಕೊಡುವ ಕೆಲಸವಾಗಿದೆ ಎಂದರು.

ಬಿಜೆಪಿ ಮಂಗಳೂರು   ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಜಗದೀಶ್‌ ಆಳ್ವ ಕುವೆತ್ತಬೈಲ್‌ ಮಾತನಾಡಿ ʻ ಕೋಟೆಕಾರು ಪ.ಪಂ ಆಡಳಿತ ಗ್ರಾಮದ ಮೂಲಭೂತ ಸೌಕರ್ಯಗಳಿಗೆ ಸ್ಪಂಧಿಸುತ್ತಾ, ಉತ್ತಮ ಕಾರ್ಯಗಳನ್ನು ನಡೆಸುತ್ತಾ ಬಂದಿದೆ. ಬಹುವರ್ಷಗಳ ಕನಸು ರಾಮಾಶ್ರಯ ರಸ್ತೆಯ ಕಾಂಕ್ರೀಟಿಕರಣವನ್ನು ಪೂರ್ಣಗೊಳಿಸಿ ಉತ್ತಮ ರಸ್ತೆಯನ್ನು ರಚಿಸಿದ್ದಾರೆ. ಎಲ್ಲಾ ಮನೆಮಂದಿಗೂ ಸಂಬಂಧಿಸಿದ ರಸ್ತೆಯಾಗಿರುವುದರಿಂದ   ಪ.ಪಂ ಆಡಳಿತ ಉತ್ತಮ ಸಹಕಾರವನ್ನು ನೀಡಿದೆ.  ಸಂಸದರು,ವಿಧಾನಪರಿಷತ್‌ ಸದಸ್ಯರು ಎಲ್ಲರ ಸಹಕಾರದೊಂದಿಗೆ ಉತ್ತಮ ಅನುದಾನ ಕ್ಷೇತ್ರಕ್ಕೆ ಬರುತ್ತಿದೆ, ಉತ್ತಮ ಕಾರ್ಯಕ್ಕೆ ಅವರ ಪ್ರೋತ್ಸಾಹ ಸದಾ ಸಿಗುತ್ತಿದೆ ಎಂದರು. 

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು  ಪ್ರೇಮನಂದ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರು ರವೀಂದ್ರ ಶೆಟ್ಟಿ ಉಳಿದೋಟ್ಟು,  ಜಿಲ್ಲಾ ಉಪಾಧ್ಯಕ್ಷರು ಮಂಗಳೂರು ಮಂಡಲದ ಪ್ರಭಾರಿಗಳು ಪೂಜಾ ಪೈ, ಜಿಲ್ಲಾ ಕಾರ್ಯದರ್ಶಿ ಧನಲಕ್ಷ್ಮೀ ಗಟ್ಟಿ, ಜಿಲ್ಲಾ ಪ್ರಕೋಷ್ಟಗಳ ಸಂಚಾಲಕರು ಸುಧೀರ್ ಕುಮಾರ್ ಶೆಟ್ಟಿ ಕಣ್ಣೂರು,  ಜಿಲ್ಲಾ ವಕ್ತಾರರಾದ ಜೀವನ್ ತೊಕ್ಕೊಟ್ಟು, ಜಿಲ್ಲಾ ಮಾಧ್ಯಮ  ಸಹಪ್ರಮುಖ್ ಹೇಮಂತ್ ಶೆಟ್ಟಿ ದೇರಳಕಟ್ಟೆ, ಕೋಟೆಕಾರ್ ಪಟ್ಟಣ ಪಂಚಾಯತ್ ಉಪಾಧ್ಯಕ್ಷರು ಪ್ರವೀಣ್ ಐ ಬಗಂಬಿಲ, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಪ್ರವೀಣ್ ಕೊಂಡಾಣ, ಮಂಗಳೂರು ಮಂಡಲ ಉಪಾಧ್ಯಕ್ಷರುಗಳಾದ ರವಿ ಶಂಕರ್ ಸೋಮೇಶ್ವರ, ರಮೇಶ್ ಬೆದ್ರೋಳಿಕೆ, ಕಿಶೋರ್ ಕುಮಾರ್ ಕುತ್ತಾರು, ಮಂಗಳೂರು ಮಂಡಲ ಕಚೇರಿ ಕಾರ್ಯದರ್ಶಿ ಸುಜಾತಾ ಬಿ ಶೆಟ್ಟಿ, ಮಂಗಳೂರು ಮಂಡಲದ ಯುವ, ರೈತ, ಮಹಿಳಾ,  ಮೋರ್ಚಾದ ಅಧ್ಯಕ್ಷರುಗಳಾದ, ಮುರಳೀಧರ ಕೊಣಾಜೆ, ಪದ್ಮನಾಭ ಗಟ್ಟಿ ಕೊಣಾಜೆ, ಮಾಧವಿ ಉಳ್ಳಾಲ, ಮಂಡಲ ಒಬಿಸಿ ಪ್ರಧಾನ ಕಾರ್ಯದರ್ಶಿ ಶೇಖರ್ ಕನೀರುತೋಟ,  ಸಾಮಾಜಿಕ ಜಾಲತಾಣ ಸಂಚಾಲಕರು ಗಣೇಶ್ ಭಂಡಾರಿ ನಡಾರ್,   ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ  ಸ್ವಪ್ನ ಶೆಟ್ಟಿ,  ವಿನುತಾ ದೇವಾಡಿಗ, ಮಂಡಲ ರೈತಮೋರ್ಚಾ ಸದಸ್ಯರಾದ ಪದ್ಮನಾಭ ಪಾದೆ, ಕೋಟೆಕಾರ್ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅತುಲ್  ಬಗಂಬಿಲ, ಕೋಟೆಕಾರು,  ಕೊಂಡಾಣ, ಕೋಟೆಕಾರು ಮಹಾ ಶಕ್ತಿ ಕೇಂದ್ರ ಪ್ರಮುಖ್ ದೇವೀಶ್ ಪೂಜಾರಿ ,  ಕೋಟೆಕಾರು, ಕೊಂಡಾಣ ಶಕ್ತಿ ಕೇಂದ್ರ ಪ್ರಮುಖ್ ನಿತಿನ್ ಪೂಜಾರಿ, ಶರತ್ ಶೆಟ್ಟಿ, ಬಿಜೆಪಿ 11ನೇ ವಾರ್ಡ್  ಅಧ್ಯಕ್ಷರಾದ ಜೀವನ್ ಕೆ ಪಿ,  ಬಿಜೆಪಿ ಮಂಗಳೂರು ಮಂಡಲದ ವಿವಿಧ  ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಕಾರ್ಯದರ್ಶಿಗಳು ಪ್ರಮುಖರು, ಪರಿವಾರದ ಪ್ರಮುಖರು,  ಸ್ಥಳೀಯ ನಿವಾಸಿ, ಜಯಂತ್ ರೈ, ರಾಜೇಶ್ ಪೆರಾವೋ, ಪ್ರಿಯಾ ಎನ್ ಬಂಗೇರ, ದಿನೇಶ್ ಮಡ್ಯಾರ್,  ಸಂತೋಷ್ ರೈ ಮಡ್ಯಾರ್ ಸುಶಾಂತ್ ಮಡ್ಯಾರ್, ರಾಮಚಂದ್ರ ಮಡ್ಯಾರ್, ಇತರ ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಮಂಗಳೂರು ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ರಾಜ್ ಕೆ ಆರ್, ಸ್ವಾಗತಿಸಿದರು. ಮಂಗಳೂರು ಮಂಡಲದ ಪ್ರಧಾನ ಕಾರ್ಯದರ್ಶಿ ದಯಾನಂದ್ ತೊಕ್ಕೊಟ್ಟು  ವಂದಿಸಿದರು,

ಶಾಸಕರು ರಸ್ತೆ ಮಧ್ಯಭಾಗದಲ್ಲೇ ಕಾಮಗಾರಿ  ನಡೆಸದೇ ಇರುವುದು ಧರ್ಮಬೇಧವಲ್ಲವೇ? : ದಿವ್ಯಾ ಸತೀಶ್‌  ಶೆಟ್ಟಿ 

ರಾಜಕೀಯಕ್ಕಾಗಿ ಧರ್ಮವನ್ನು ಎಳೆದುತಂದು ನನ್ನ ವಿರುದ್ಧ ಅಪಪ್ರಚಾರ ಮಾಡಿದವರು ಇಂದು  ರಸ್ತೆಯ ಮಧ್ಯಭಾಗದಲ್ಲೇ ಕಾಂಕ್ರೀಟಿಕರಣಗೊಳಿಸದೇ ಬಾಕಿ ಮಾಡಿರುವುದು ಸರಿಯೇ? ಶಾಸಕರು ರಾಜಕೀಯ ಮಾಡಿದ್ದಾರೆ, ಮಧ್ಯದಲ್ಲಿ ಒಂದು ಪೀಸ್‌ ಅನ್ನೇ ಬಿಟ್ಟಿದ್ದಾರೆ, ಆ ಕೆಲಸವನ್ನು ನಾನೇ ಮಾಡಿಕೊಡುತ್ತೇನೆ . ಎರಡು ಬಾರಿ ಕೌನ್ಸಿಲರ್‌ ಆದರೂ ಧರ್ಮ ಕೇಳಿ ಕೆಲಸ ಮಾಡಿದವಳಲ್ಲ. ೮ ವರ್ಷಕ್ಕಿಂತ ಮುಂಚೆಯೇ ರಸ್ತೆಯ ಬೇಡಿಕೆ ಇಡಲಾಗಿತ್ತು. ಆರಂಭದಲ್ಲೇ ರಸ್ತೆ ಮಾಡಬೇಕು ಅನ್ನುವ ಮನಸ್ಸಿದ್ದರೂ  ಅನುದಾನದ ಕೊರತೆಯಿಂದ ಅಸಾಧ್ಯವಾಗಿತ್ತು.   ರಾಮಾಶ್ರಯ ರಸ್ತೆಯ ಎಂಟ್ರೆನ್ಸ್‌ ಮಾಡಿದಲ್ಲಿ ಎಲ್ಲರಿಗೂ ಉಪಯೋಗವಾಗುವುದು  ಅನ್ನುವ ದೃಷ್ಟಿಯಿಂದ ರೂ.೫ ಲಕ್ಷ ಅನುದಾನ ಕಾದಿರಿಸಲಾಯಿತು. ಆದರೆ ಎರಡು ಮನೆಯವರು ಸೇರಿಕೊಂಡು ತಮ್ಮ ಮನೆ ಎದುರುಗಡೆ  ಕಾಂಕ್ರೀಟಿಕರಣ ಮಾಡುತ್ತಿಲ್ಲ ಅನ್ನುತ್ತಾ ಕಾಂಗ್ರೆಸ್‌ ಮುಖಂಡರ ಜೊತೆಗೆ ಸೇರಿಕೊಂಡು ಧರ್ಮವನ್ನು ಎಳೆದು ತಂದಿದ್ದರು. ಇಲ್ಲಿ ಧರ್ಮವನ್ನು ಎಳೆದುತರುವ  ಉದ್ದೇಶವಾದರೂ ಏನಿತ್ತು?. ಸ್ಥಳೀಯ ಕೌನ್ಸಿಲರ್‌ ಮಾತು ಕೇಳಿ ಶಾಸಕರು ರಸ್ತೆಯ ವಿಚಾರಕ್ಕೆ ಕೈ ಹಾಕಿ ರಾಜಕೀಯ ಮಾಡಿದ್ದಾರೆ. ಅಧ್ಯಕ್ಷೆ ಇರುವಾಗಲೇ ಮುಖ್ಯಾಧಿಕಾರಿಗೆ ಕಕರೆ ಮಾಡಿದ ಶಾಸಕರು  ರಸ್ತೆ ಕೆಲಸ ನಿಲ್ಲಿಸುವಂತೆ ಮಾಡಿದ್ದಾರೆ.  ಮತ್ತೆ ಕೆಲಸ ಮುಂದುವರಿಸಲು ಮುಂದಾದಾಗ  ರಸ್ತೆಯ ಜಾಗ ಖಾಸಗಿ ಅನ್ನುವ ವಿರೋಧವನ್ನು ವ್ಯಕ್ತಪಡಿಸಿದರು.  ಪ.ಪಂ ಕೈಗೊಂಡ ಕಾಮಗಾರಿ ಎಲ್ಲವೂ  ಕಾನೂನು ಪ್ರಕಾರದಲ್ಲಿಯೇ ನಡೆದರೆ, ರಸ್ತೆಯ ಕೊನೇ ಭಾಗದಲ್ಲಿ ನಡೆಸಿರುವುದು ರಾಜಕೀಯ ಪ್ರಭಾವ ಹಾಗೂ ಕಾನೂನು ಉಲ್ಲಂಘಿಸಿ ನಡೆಸಲಾಗಿದೆ. ಕಾನೂನು ಪ್ರಕಾರ  ರಸ್ತೆ ಕಾಮಗಾರಿಯನ್ನು ಅಗಲೀಕರಣಗೊಳಿಸಿ ಕಾಂಕ್ರೀಟಿಕರಣ ಮಾಡುವ ವ್ಯವಸ್ಥೆಯಲ್ಲಿದ್ದೆವು.  ಇಲ್ಲಿ ಯಾರೂ ಮನೆಯಿಂದ ಹಣ ತಂದು ರಸ್ತೆ ಮಾಡುವುದಲ್ಲ ಅನ್ನುವುದನ್ನು ಗೊಂದಲ ಸೃಷ್ಟಿಸಿ ರಾಜಕೀಯ ಮಾಡುವವರು ನೆನಪಪಿನಲ್ಲಿಡಬೇಕಿದೆ ಎಂದರು. 

ರಸ್ತೆ ಕಾಮಗಾರಿಗೆ   ಸಚಿವ ಯು.ಟಿ.ಖಾದರ್‌ ಅವರು   ರಾಜಕೀಯ ಪ್ರದರ್ಶನಕ್ಕಾಗಿ ಬರುವುದು ಬೇಡ:  ಮೋಹನ್ ರಾಜ್ ಕೆ ಆರ್  

ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ರಾಜ್ ಕೆ ಆರ್  ಮಾತನಾಡಿ,   ೫ ಲಕ್ಷ ರೂ.ಸಣ್ಣ  ರಸ್ತೆ ಕಾಮಗಾರಿಗೆ   ಸಚಿವ ಯು.ಟಿ.ಖಾದರ್‌ ಅವರು   ರಾಜಕೀಯ ಪ್ರದರ್ಶನಕ್ಕಾಗಿ ಬರುವುದು ಬೇಡ. ಬಿಜೆಪಿ ಮತಗಳು ಹೆಚ್ಚಿರುವ ಕೋಟೆಕಾರು, ಸೋಮೇಶ್ವರ ಪಟ್ಟಣಪಂಚಾಯಿತಿ  ಹಲವು ವರ್ಷಗಳಿಂದ  ಬಾಕಿ ಉಳಿದಿರುವ ಕಾಮಗಾರಿಗಳ ಪಟ್ಟಿಯನ್ನು ಮುಂದಿಡುತ್ತೇನೆ, ಅದನ್ನು ನಡೆಸಿ ತೋರಿಸಿರಿ.  ಚಿಕ್ಕ ಕಾಮಗಾರಿ ನಡೆಸಿ ದೊಡ್ಡ ಬಿಲ್ಡಪ್‌ ಕೊಡಬೇಡಿ . ಸ್ಥಳೀಯ ಕೌನ್ಸಿಲರ್‌ ಹೇಳಿದಂತೆ  ನಡೆಯಬೇಡಿ. ಸ್ಥಳೀಯ ಕೌನ್ಸಿಲರ್‌ ʻಕುಣಿಯಲು ಗೊತ್ತಿಲ್ಲದವ ಅಂಗಳವೇ ಸರಿಯಿಲ್ಲ ಅನ್ನುವ ವರ್ತನೆಯವರು.  ಕೊಂಡಾಣ ಭಾಗದ ಮರಿಯನಪಾಲು ಶಾಲು ಹಾಕಿದ್ದಾರೆ,ಆದರೆ ಈವರೆಗೂ  ರಸ್ತೆಯನ್ನು ಮಾಡಲೇ ಇಲ್ಲ.   ಎಲ್ಲರ ಗೌರವ ಸ್ವೀಕಾರ ಮಾಡಿ, ಎಲ್ಲರಿಗೂ ಸಮಾನವಾಗಿ ಹಂಚುವ ಬದಲು  ರಾಜಕೀಯ ಮಾಡುತ್ತಿದ್ದೀರ.  ಮುಂದೆ ಬರುವ ಚುನಾವಣೆಯಲ್ಲಿ  ಮತದಾರ ಬಾಂಧವರು ತಮ್ಮ ಜಾತ್ಯಾತೀತ ಮುಖವಾಡವನ್ನು ಕಳಚಲಿದ್ದಾರೆ ಎಂದು ಎಚ್ಚರಿಸಿದರು.  

ʻಎರಡು ಮನೆಯವರಿಂದಾಗಿ ರಾಜಕೀಯ : ರಾಜೇಶ್‌ ಫೆರಾವೋ 

ಅಧ್ಯಕ್ಷೆ ದಿವ್ಯಾ ಶೆಟ್ಟಿ ಹಲವು ವರ್ಷಗಳಿಂದ ಕೌನ್ಸಿಲರ್‌ ಆಗಿದ್ದವರು. ಈತನಕ ಧರ್ಮ ನೋಡಿ ರಾಜಕೀಯ ಮಾಡಿದವರಲ್ಲ.  ರಸ್ತೆಯ  ಮುಂದಿನ ಭಾಗದಲ್ಲಿ  ಕಾಮಗಾರಿಗೆ ಮುಂದಾದಾಗ ಎರಡು ಕ್ರೈಸ್ತ ಸಮುದಾಯದವರು ಬಿಡಲಿಲ್ಲ, ಅವರಿಗೆ  ಕಾಂಗ್ರೆಸ್ಸಿನವರು ಸಪೋರ್ಟ್‌ ಮಾಡಿದ್ದರಿಂದಾಗಿ   ಕಾಮಗಾರಿಯನ್ನು ಸ್ಥಗಿತಗೊಳಿಸಿ  ರಸ್ತೆಯ  ಕೊನೇಯ ಭಾಗದಲ್ಲಿ ಮಾಡಬೇಕಾಯಿತು. ಎಲ್ಲಾ ಧರ್ಮೀಯರಿಗೂ ಸಪೋರ್ಟ್‌ ಮಾಡುವ  ಅಧ್ಯಕ್ಷೆಯಿರುವಾಗ ಉಳಿದವರು ಬೇಧಭಾವವನ್ನು ನಿಲ್ಲಿಸಬೇಕು. 

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಯುವತಿಯರೇ, ಬದುಕು ಅಂದರೆ ಸೋಲಿಗೆ ಶರಣಾಗುವುದು ಅಲ್ಲ

August 7, 2026

ಹೆಸರಾಂತ ರೂಪದರ್ಶಿ ಕೃತಿ ಬಂಗೇರ ಆತ್ಮಹತ್ಯೆಗೆ ಶರಣು..!

August 7, 2026

ಮಂಗಳೂರು ವಿವಿಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರೊಫೆಸರ್‌ ಡಾ.ವಹೀದಾ ಸುಲ್ತಾನಾ ನಿಧನ

August 7, 2026
Leave A Reply

Advertise
ಸಂಪರ್ಕಿಸಿ

ಸ್ತನ್ಯಪಾನದ ಮಹತ್ವದ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಅಗತ್ಯವಿದೆ : ರೋಟರಿ ಡೌನ್‌ಟೌನ್ ಕ್ಲಬ್ ಅಧ್ಯಕ್ಷ ಉಮೇಶ್‌ ಗಟ್ಟಿ

August 8, 2026

ಹಣ ಇಲ್ಲದಿದ್ದರೆ ಯಾರೂ ಸಾಯಬಾರದು – ಸಂವಿಧಾನದ ಪರಿಚ್ಛೇದ 21ರ ಬೆಳಕಿನಲ್ಲಿ ತುರ್ತಾಗಿ ಆರೋಗ್ಯ ಸಚಿವ ಯು.ಟಿ ಖಾದರ್ ಕೂಡಲೇ ಸ್ಪಂದಿಸುವ ಅಗತ್ಯ ಇದೆ.

August 1, 2026

ತಂದೆಯ ಸಾವು; ವಿಧವೆ ತಾಯಿಯ ಜವಾಬ್ದಾರಿ ಹೊತ್ತಿದ್ದ ಯುವತಿ ಈಗ ಐಸಿಯುನಲ್ಲಿ….! ಸುಮಾರು ₹20 ಲಕ್ಷ ಚಿಕಿತ್ಸಾ ವೆಚ್ಚ; ಆರೋಗ್ಯ ಸಚಿವ ಯು.ಟಿ.ಖಾದರ್‌ ಸಹಕಾರ ಅಗತ್ಯ

July 31, 2026

ಸಾವಿರ ವರ್ಷ ಕಳೆದರೂ ಕೊರೋನಾ ವೈರಸ್ ಇರುತ್ತೆ- ಭಯ ಬೇಡ ಎಚ್ಚರವಿರಲಿ: ಆರೋಗ್ಯ ಸಚಿವ ಯು.ಟಿ. ಖಾದರ್

July 22, 2026
suddi

ಚಾಲಕನ ನಿಯಂತ್ರಣ ತಪ್ಪಿದ ಶಾಲಾ ಬಸ್‌ವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ..!! ಕೂದಲೆಳೆಯ ಅಂತರದಲ್ಲಿ ತಪ್ಪಿದ ಅನಾಹುತ

By UllalaVaniAugust 11, 20260

ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿದ ಶಾಲಾ ಬಸ್‌ವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ…

ಮಗುವಿಗೆ ಮೊದಲ ಆರು ತಿಂಗಳು ಎದೆ ಹಾಲು ಮಾತ್ರ ನೀಡಬೇಕು: ಶ್ರೀಧರ್‌ ಎಂ.ಎಸ್‌

August 11, 2026

“ಆಟಿ ತಿಂಗಳಿಗೂ ತುಳುವರಿಗೂ ಅವಿನಾಭಾವ ಸಂಬಂಧ”-ಉಪನ್ಯಾಸಕಿ ಪಲ್ಲವಿ ರಾಜೇಶ್

August 11, 2026

ಉತ್ಸವಗಳು ವ್ಯಕ್ತಿಯ ಮನಸ್ಸಿನ ಸಾಂಸ್ಕೃತಿಕ ಪ್ರಜ್ಞೆಯನ್ನು ಹೆಚ್ಚಿಸುತ್ತದೆ – ರವಿ ರೈ ಫಜೀರು

August 11, 2026
1 2 3 … 2,055 Next
Automatic YouTube Gallery

ಆಟಿ ತಿಂಗಳಿಗೂ ತುಳುವರಿಗೂ ಅವಿನಾಭಾವ ಸಂಬoಧ-ಉಪನ್ಯಾಸಕಿ ಪಲ್ಲವಿ ರಾಜೇಶ್

ದೇವಾಡಿಗ ಸಮಾಜ ಸೇವಾ ಸಂಘ ಪಾವಂಜೆ ವತಿಯಿಂದ `ಆಟಿಡೊಂಜಿ ಐತಾರ'; ಕಾರ್ಯಕ್ರಮ ಉದ್ಘಾಟಿಸಿದ ಸಾಮಾಜಿಕ ಕಾರ್ಯಕರ್ತ ಅಶೋಕ್
"ತುಳುವರಿಗೂ ಪ್ರಕೃತಿಗೂ ಅವಿನಾಭಾವ ಸಂಬoಧ"-ಉಪನ್ಯಾಸಕಿ ಪಲ್ಲವಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ...
ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಆಟಿ ತಿಂಗಳಿಗೂ ತುಳುವರಿಗೂ ಅವಿನಾಭಾವ ಸಂಬoಧ-ಉಪನ್ಯಾಸಕಿ ಪಲ್ಲವಿ ರಾಜೇಶ್
Now Playing
ಆಟಿ ತಿಂಗಳಿಗೂ ತುಳುವರಿಗೂ ಅವಿನಾಭಾವ ಸಂಬoಧ-ಉಪನ್ಯಾಸಕಿ ಪಲ್ಲವಿ ರಾಜೇಶ್
ದೇವಾಡಿಗ ಸಮಾಜ ಸೇವಾ ಸಂಘ ಪಾವಂಜೆ ವತಿಯಿಂದ `ಆಟಿಡೊಂಜಿ ಐತಾರ'; ಕಾರ್ಯಕ್ರಮ ...
ದೇವಾಡಿಗ ಸಮಾಜ ಸೇವಾ ಸಂಘ ಪಾವಂಜೆ ವತಿಯಿಂದ `ಆಟಿಡೊಂಜಿ ಐತಾರ'; ಕಾರ್ಯಕ್ರಮ ಉದ್ಘಾಟಿಸಿದ ಸಾಮಾಜಿಕ ಕಾರ್ಯಕರ್ತ ಅಶೋಕ್
"ತುಳುವರಿಗೂ ಪ್ರಕೃತಿಗೂ ಅವಿನಾಭಾವ ಸಂಬoಧ"-ಉಪನ್ಯಾಸಕಿ ಪಲ್ಲವಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ...
ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಸೆ.6,7 ರಂದು ಬಾಕ್ರಬೈಲ್‌ನಲ್ಲಿ 10ನೇ ವರ್ಷದ ಮೊಸರು ಕುಡಿಕೆ ಉತ್ಸವ
Now Playing
ಸೆ.6,7 ರಂದು ಬಾಕ್ರಬೈಲ್‌ನಲ್ಲಿ 10ನೇ ವರ್ಷದ ಮೊಸರು ಕುಡಿಕೆ ಉತ್ಸವ
ಶಿವಶಕ್ತಿ ಫ್ರೆಂಡ್ಸ್, ಬಾಕ್ರಬೈಲು ವತಿಯಿಂದ;ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ...
ಶಿವಶಕ್ತಿ ಫ್ರೆಂಡ್ಸ್, ಬಾಕ್ರಬೈಲು ವತಿಯಿಂದ;ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 10ನೇ ವರ್ಷದ ಮೊಸರು ಕುಡಿಕೆ ಉತ್ಸವ

ಸೆ.6,7ರಂದು ಬಾಕ್ರಬೈಲು ಮೂಡಾಯಿಬೆಟ್ಟು ಮೈದಾನದಲ್ಲಿ ಆಯೋಜನೆ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ...
ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version