ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುಂಪಲ: ಮಂಗಳೂರಿನಿಂದ ಕೇರಳ ಕಡೆಗೆ ಸರಕು ಹೇರಿಕೊಂಡು ಸಾಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 66ರ ಕುಂಪಲ ಬೈಪಾಸ್ ಸಮೀಪ ಡಿವೈಡರಿಗೆ ಢಿಕ್ಕಿ ಹೊಡೆದು ಚಕ್ರಗಳು ಕಳಚಿ ಉರುಳಿಬಿದ್ದಿರುವ ಘಟನೆ ಮಂಗಳವಾರ ನಸುಕಿನ ಜಾವ ನಡೆದಿದೆ. ಘಟನೆಯಲ್ಲಿ ಲಾರಿ ಡ್ರೈವರ್ ಹಾಗೂ ಕ್ಲೀನರ್ ಪವಾಡಸದೃಶವಾಗಿ ಪಾರಾಗಿದ್ದಾರೆ.
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ:ಅಪರಾಧ, ಕೊಲೆ, ಅತ್ಯಾಚಾರ ನಡೆಸಿ ಜೈಲುಪಾಲಾಗುವ ಅಪರಾಧಿಗಳಿಗೆ ದಿನಕ್ಕೆ ರೂ.80 ಹಣವನ್ನು ವ್ಯಯಿಸುವ ಸರಕಾರ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ದಿನಕ್ಕೆ ಕೇವಲ ರೂ. 12 ಹಣವನ್ನು ವ್ಯಯಿಸುವ ಮೂಲಕ ವಿದ್ಯಾರ್ಥಿಗಳನ್ನು ಖೈದಿಗಳಿಗಿಂತ ಕಡೆಯಾಗಿ ನೋಡಲಾಗುತ್ತಿದೆ ಎಂದು ಜಿಲ್ಲಾ ಎಸ್ ಎಫ್ ಐ ಅಧ್ಯಕ್ಷ ನಿತಿನ್ ಕುತ್ತಾರ್ ಖೇದ ವ್ಯಕ್ತಪಡಿಸಿದರು. ಅವರು ಎಸ್ ಎಫ್ ಐ ಉಳ್ಳಾಲ ವಲಯದ ಆಶ್ರಯದಲ್ಲಿ ರಾಜ್ಯದ ಬಜೆಟಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ನೀಡುವಂತೆ ಆಗ್ರಹಿಸಿ ಉಳ್ಳಾಲದ ಅಬಕ್ಕ ವೃತ್ತದ ಸಮೀಪ ಮಂಗಳವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳಿದ್ದು, ಶಿಕ್ಷಣ ನೀತಿಯೇ ಗೊಂದಲಮಯವಾಗಿದೆ. ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ವಿದ್ಯಾರ್ಥಿಗಳೇ ಕಾಣೆಯಾಗುತ್ತಿದ್ದಾರೆ. ಶಾಲಾ ಸಿಬ್ಬಂದಿಗೆ ಸರಿಯಾದ ವೇತನವನ್ನು ನೀಡದೆ ವಿದ್ಯಾರ್ಥಿಗಳಿಂದ ಅಭಿವೃದ್ಧಿ ಶುಲ್ಕವನ್ನು ಪಡೆಯುವುದರ ಮೂಲಕ ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆತ್ತವರು ಹಿಂಜರಿಯುವ ವಾತಾವರಣ ನಿರ್ಮಾಣವಾಗಿದೆ. ಸರಕಾರಿ ಪದವಿ, ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳ ಸಂಖ್ಯೆ ಕಡಿಮೆಯಿದ್ದು,…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಸೋಮೇಶ್ವರ: ಹೆತ್ತವರಿಗೆ, ಶಿಕ್ಷಕರಿಗೆ ಮಕ್ಕಳ ಬೆಳವಣಿಗೆ ಕುರಿತ ಮಾಹಿತಿ ಕಾರ್ಯಕ್ರಮ ಅವಶ್ಯಕ, ಎಳೆ ವಯಸ್ಸಿನಲ್ಲಿ ಒಳ್ಳೆಯ ವಿಚಾರಗಳನ್ನು ಅರಿವು ಮೂಡಿಸಿದಾಗ ಆತ ಒಳ್ಳೆಯ ವಿದ್ಯಾರ್ಥಿಯಾಗಲು ಸಾಧ್ಯ ಎಂದು ಸೋಮೇಶ್ವರ ಪಂಚಾಯಿತಿ ಅಧ್ಯಕ್ಷ ರಾಜೇಶ್ ಉಚ್ಚಿಲ್ ಅಭಿಪ್ರಾಯಪಟ್ಟರು. ಅವರು ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕರಿಗಳ ಕಚೇರಿ, ದಕ್ಷಿಣ ವಲಯ ಶಿಕ್ಷಣ ಸಂಪನ್ಮೂಲ ಕೇಂದ್ರ, ಪಡಿ ಸಂಸ್ಥೆ ಮಂಗಳೂರು ಇವರ ಸಹಯೋಗದಲ್ಲಿ ಬಂಟ್ವಾಳದ ಎಸ್.ಎಂ ಚಾರಿಟೇ¨ಲ್ ಟ್ರಸ್ಟ್ ಮತ್ತು ಸೋಮೇಶ್ವರ ಗ್ರಾಮ ಪಂಚಾಯತ್ ಆಶ್ರಯದಲ್ಲಿ ಶನಿವಾರ ಪಿಲಾರಿನ ದಕ್ಷಿಣ ಕನ್ನಡ ಜಿಲ್ಲಾಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಗು ಸ್ನೇಹಿ ಶಾಲೆ ಮತ್ತು ಮಗು ಸ್ನೇಹಿ ಪಂಚಾಯತ್ ಕುರಿತು ಮಾಹಿತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಧುನಿಕ ತಂತ್ರಜ್ಞಾನಗಳಿಂದ ಶಿಕ್ಷಕರ ಕೆಲಸ ಸರಳವಾಗಿ ಆಗಿದೆ. ಈ ನಡುವೆ ವಿದ್ಯಾರ್ಥಿಗಳನ್ನು ಗುಣಾತ್ಮಕ ಚಿಂತನೆಗಳ ಮೂಲಕ ಬೆಳೆಸುವ ಕಾರ್ಯ ಶಿಕ್ಷಕರಿಂದ ಮತ್ತು ಹೆತ್ತವರಿಂದ ಆಗಬೇಕಿದೆ ಎಂದರು. ಕ್ಷೇತ್ರ ಶಿಕ್ಷಣ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ವೈದ್ಯಕೀಯ ಕ್ಷೇತ್ರದಲ್ಲಿ ಕೊನೆಯ ಆಯ್ಕೆ ನರ್ಸಿಂಗ್ ಪದವಿಯನ್ನು ಆಯ್ಕೆ ಮಾಡಲಾಗುತ್ತಿದೆ. ಆದರೆ ನರ್ಸಿಂಗ್ ಕೆಲಸದಷ್ಟು ಶ್ರೇಷ್ಟ ಕಾರ್ಯ ಬೇರೊಂದಿಲ್ಲ. ಅಸಹಾಯಕರ ಬಾಳಿಗೆ ನೆರವಾಗುವ ವೃತ್ತಿ ನರ್ಸಿಂಗ್ ಮಾತ್ರವಾಗಿದೆ ಎಂದು ಕಾಸರಗೋಡು ಮಾಲೀಕ್ ದೀನಾರ್ ನಸಿರ್ಂಗ್ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಆಲೀಸ್ ಡೇನಿಯಲ್ ಅಭಿಪ್ರಾಯಪಟ್ಟರು. ಅವರು ದೇರಳಕಟ್ಟೆ ನಿಟ್ಟೆ ವಿಶ್ವವಿದ್ಯಾನಿಲಯದ ಕ್ಷೇಮ ಆಡಿಟೋರಿಯಂನಲ್ಲಿ ಶನಿವಾರ ಜರಗಿದ ನಿಟ್ಟೆ ಉಷಾ ನರ್ಸಿಂಗ್ ವಿದ್ಯಾ ಸಂಸ್ಥೆಗಳ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ನರ್ಸಿಂಗ್ ಪದವಿ ಪಡೆದವರಲ್ಲಿ ರಕ್ಷಣೆ ಅನ್ನುವುದು ರಕ್ತಗತವಾಗಿರಬೇಕು. ಯಾವುದೇ ರೋಗಿಯನ್ನು ತನ್ನ ಸಂಬಂಧಿ ಅಥವಾ ಹೆತ್ತವರ ಸಮಾನವಾಗಿ ಅರಿತು ಕಾರ್ಯ ನಿರ್ವಹಿಸಿದಾಗ ವೃತ್ತಿಯಲ್ಲಿ ಯಶಸ್ಸು ಕಾಣಬಹುದು. ಅಮೆರಿಕಾದಲ್ಲಿ ದಾದಿಯರೇ ಕ್ಲಿನಿಕ್ ಇಟ್ಟುಕೊಂಡು ರೋಗಿಗಳ ಶುಶ್ರೂಷೆಯಲ್ಲಿ ಸ್ವತಂತ್ರ್ಯವಾಗಿ ತೊಡಗಿಕೊಳ್ಳುತ್ತಾರೆ. ಭಾರತದಲ್ಲಿಯೂ ಅಂತಹ ನೀತಿ ಜಾರಿಯಾದಲ್ಲಿ ವೈದ್ಯರ ಅನುಭವಕ್ಕಿಂತ ಹೆಚ್ಚಿನ ಅನುಭವ ಇರುವ ದಾದಿಯರು ರೋಗಿಗಳಿಗೆ ಉತ್ತಮ ಸೇವೆಯನ್ನು ಒದಗಿಸಬಹುದಾಗಿದೆ. ದಾದಿಯರು ಮಾಡುವ ಸೇವೆಯಲ್ಲಿ ಗುಣಮಟ್ಟ ಕಾಯ್ದಿರಿಸುವಿಕೆ , ಪ್ರಯತ್ನ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕಿನ್ಯ: ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಚಾರಿಟೇಬಲ್ ಟ್ರಸ್ಟ್ ಕಿನ್ಯ ಬೆಳರಿಂಗೆ ಇಲ್ಲಿ ನಡೆಯುತ್ತಿರುವ ಶ್ರೀ ಮಲರಾಯ ಧೂಮಾವತಿ ಬಂಟ ದೈವಸ್ಥಾನದ ಜೀಣೋದ್ಧಾರಕ್ಕೆ ಪರಮಪೂಜ್ಯ ಡಾ. ಡಿ. ವಿರೇಂದ್ರ ಹೆಗ್ಡೆಯವರು ನೀಡಿದ 2 ಲಕ್ಷ ಡಿ.ಡಿಯನ್ನು ಮಂಗಳೂರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಸುಧೀರ್ ಕುಮಾರ್ ಬಂಟ್ವಾಳ, ಯೋಜನಾಧಿಕಾರಿ ರಾಘವ ಎಮ್., ಇವರು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಬಾಬು ಕಿನ್ಯ ಇವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ರಾಜೇಂದ್ರ ಶೆಟ್ಟಿ, ಯಶವಂತ್ ಬೆಳರಿಂಗೆ, ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಭವ್ಯ ಬೆಳರಿಂಗೆ, ಸುರೇಶ್ ಬೆಳರಿಂಗೆ, ಮುಂತಾದವರು ಉಪಸ್ಥಿತರಿದ್ದರು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಅಪರಿಚಿತನೋರ್ವ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೈದಿರುವ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ. ಅಪರಿಚಿತ ವ್ಯಕ್ತಿಯೋರ್ವ ಸೇತುವೆ ಬದಿಯಿಂದ ನಡೆದುಕೊಂಡು ಬಂದು ನಡುಭಾಗದಲ್ಲಿ ಏಕಾಏಕಿ ನದಿಗೆ ಧುಮುಕಿದ್ದಾನೆ. ಇದನ್ನು ಸೇತುವೆಯಲ್ಲಿ ತೆರಳುತ್ತಿದ್ದ ವಾಹನ ಸವಾರರು ಹಾಗೂ ನದಿಯಲ್ಲಿ ಮರಳು ತೆಗೆಯುತ್ತಿದ್ದ ದೋಣಿಯಲ್ಲಿದ್ದವರು ಕಂಡಿದ್ದಾರೆ. ಕೂಡಲೇ ದೋಣಿಯಲ್ಲಿದ್ದವರು ರಕ್ಷಣೆಗೆ ಮುಂದಾದರೂ ಆ ವೇಳೆಗಾಗಲೇ ಅಪರಿಚಿತ ನದಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ. ಸ್ಥಳಕ್ಕೆ ಉಳ್ಳಾಲ ಪೊಲೀಸರು ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದಾರೆ. ಹಾರುವ ಸಂದರ್ಭ ಚಪ್ಪಲಿಗಳನ್ನು ಮೇಲಿರಿಸಿ ವ್ಯಕ್ತಿ ಹಾರಿದ್ದು, ಎರಡು ಚಪ್ಪಲಿಗಳನ್ನು ಪೊಲೀಸರು ವಶಕ್ಕೆ ತೆಗದುಕೊಂಡಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ :ಉಳ್ಳಾಲ ನಗರಸಭಾ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‍ನ ಹಿರಿಯ ನಾಯಕ ಹುಸೈನ್ ಕುಂಞಮೋನು ಅಧ್ಯಕ್ಷರಾಗಿ ಜಯಗಳಿಸಿದ್ದು, ಉಪಾಧ್ಯಕ್ಷರಾಗಿ ಕಾಂಗ್ರೆಸ್‍ನ ಚಿತ್ರಕಲಾ ಚಂದ್ರಕಾಂತ್ ಜಯಗಳಿಸಿದ್ದಾರೆ. ಉಳ್ಳಾಲ ನಗರಸಭೆಯ ಎರಡನೇ ಅವಧಿಯ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕುಂಞಮೋನು 17 ಮತಗಳನ್ನು ಪಡೆದು ವಿಜಯಿಯಾದರೆ, ಪ್ರತಿಸ್ಪರ್ಧಿ ಬಿಜೆಪಿಯ ಪೆÇಡಿಮೋನು 7 ಮತಗಳನ್ನು ಪಡೆದು ಪರಾಜಯಗೊಂಡರು. ಪಕ್ಷೇತರ ಸದಸ್ಯರೊಬ್ಬರು ಮತದಾನ ನಡೆಸದೆ ತಟಸ್ಥರಾಗಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್„ಸಿದ್ದ ಕಾಂಗ್ರೆಸ್‍ನ ಚಿತ್ರಕಲಾ ಚಂದ್ರಕಾಂತ್ 17 ಮತಗಳನ್ನು ಪಡೆದು ವಿಜಯಿಯಾದರೆ, ಬಿಜೆಪಿಯ ಮಹಾಲಕ್ಷ್ಮಿ 7 ಮತಗಳನ್ನು ಪಡೆದು ಪರಾಜಯಗೊಂಡರು. ಕಾಂಗ್ರೆಸ್‍ನ ಆಂತರಿಕ ಚುನಾವಣೆಯಲ್ಲಿ ಹುಸೈನ್ ಕುಂಞಮೋನು ಜಯ : ಉಳ್ಳಾಲ ನಗರಸಭಾ ಚುನಾವಣೆಯ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‍ನಿಂದ ಹುಸೈನ್ ಕುಂಞಮೋನು, ಮಹಮ್ಮದ್ ಮುಸ್ತಾಫ, ಫಾರೂಕ್ ಉಳ್ಳಾಲ್, ಅಶ್ರಫ್ ಬಾವ ಕೋಡಿ ಆಕಾಂಕ್ಷಿಗಳಾಗಿದ್ದರು. ಹಿರಿಯರ ಹಿನ್ನಲೆಯಲ್ಲಿ ಹುಸೈನ್ ಕುಂಞಮೋನು ಆಯ್ಕೆಗೆ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ:ಅಂಗಾಂಗ ಕಸಿ ಕ್ರಿಯೆ ಪ್ರಕ್ರಿಯೆಯಲ್ಲಿ ಸರಕಾರದ ಜತೆಗೆ ಝೋನಲ್ ಕೋ ಆರ್ಡಿನೇಷನ್ ಕಮಿಟಿ ಆಫ್ ಕರ್ನಾಟಕ ಕೈಜೋಡಿಸುವ ಮೂಲಕ ಅನೇಕ ಆಸ್ಪತ್ರೆಗಳನ್ನು ನೋಂದಾಯಿಸಿಕೊಂಡಿದ್ದು, ಈ ಮೂಲಕ ಅಂಗಾಂಗ ಇಲ್ಲದವರ ಬಾಳಿನಲ್ಲಿ ಬೆಳಕಾಗಿದೆ ಎಂದು ಬೆಂಗಳೂರು ಝೆಡ್ ಸಿಸಿಕೆ ಇದರ ಕಾರ್ಯಕಾರಿಣಿ ಸದಸ್ಯ ಹಾಗೂ ಕಿಮ್ಸ್ ಆಸ್ಪತ್ರೆಯ ಮೂತ್ರಶಾಸ್ತ್ರ ವಿಭಾಗದ ಡಾ.ಜಿ.ಕೆ.ವೆಂಕಟೇಶ್ ಅಭಿಪ್ರಾಯಪಟ್ಟರು. ಅವರು ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆಡಿಟೋರಿಯಂನಲ್ಲಿ ಗುರುವಾರ ಜರಗಿದ ವಿಶ್ವ ಮೂತ್ರಕೋಶ ದಿನಾಚರಣೆ ಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೆನೆಪೋಯ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಎಂ ವಿಜಯ ಕುಮಾರ್ ಮಾತನಾಡಿ ರೋಗದ ಕುರಿತ ತಪಾಸಣೆ ಅಗತ್ಯ , ಕಾಲದಲ್ಲಿ ಪರಿಶೀಲನೆ ನಡೆಸುವ ಮೂಲಕ ರೋಗದ ಪತ್ತೆಹಚ್ಚುವಿಕೆಯಿಂದ ಪೂರ್ವ ಚಿಕಿತ್ಸೆಯನ್ನು ನಡೆಸುವುದರೊಂದಿಗೆ ಕಾಯಿಲೆಗಳನ್ನು ದೂರವಾಗಿಸಬಹುದು. ಆಸ್ಪತ್ರೆಗಳು ಉಚಿತ ಪರಿಶೀಲನೆಗೆ ಸಿದ್ಧವಾಗಿದ್ದರೂ, ಜನರು ಅದರ ಸದುಪಯೋಗ ಪಡೆಯುತ್ತಿಲ್ಲ. ಚಿಂತನೆಗಳನ್ನು ಬದಲಾಯಿಸಿ ರೋಗದ ಪರಿಶೀಲನೆ ಕುರಿತು ಜನ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಸೋಮೇಶ್ವರ: ಅದು ಅಜ್ಜಿ, ತಾಯಿ ಮತ್ತು ಇಬ್ಬರು ಹೆಣ್ಣು ಮಕ್ಕಳ ಪುಟ್ಟ ಸಂಸಾರ. ಇಬ್ಬರು ಹೆಣ್ಮಕ್ಕಳು ಮಂಗಳೂರಿನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳು. ಅದೊಂದು ಶಾಲಾ ಪ್ರವಾಸದ ಸಂದರ್ಭ ಕುಟುಂಬದ ಕಿರಿಯ ಜೀವ ಪಿಲಿಕುಳ ದೋಣಿ ದುರಂತದಲ್ಲಿ ಬಲಿಯಾದರೆ, ಇದ್ದ ಆಕೆಯ ಸಹೋದರಿ ತಂಗಿಯ ಸಾವಿನಿಂದ ನೊಂದು 15 ವರ್ಷಗಳಿಂದ ಮಾನಸಿಕ ಅಸ್ವಸ್ಥಳಾಗಿ ಮನೆಯ ಕೋಣೆ ಸೇರಿದ್ದಳು. ಇಂದು ಸೋಮೇಶ್ವರ ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಮತ್ತು ಬಿಜೆಪಿ ಕಾರ್ಯಕರ್ತರ ತಂಡ 29 ರ ಹರೆಯದ ಯುವತಿಯನ್ನು ಕೋಣೆಯಿಂದ ಬಿಡುಗಡೆಗೊಳಿಸಿ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದಾರೆ. ಕೂಳೂರಿನ ಗೋಪಾಲ್ ಮತ್ತು ಸ್ವರ್ಣಲತಾ ದಂಪತಿಗೆ ಬೀನಾ ಮತ್ತು ಅನುಷಾ ಇಬ್ಬರು ಹೆಣ್ಮಕ್ಕಳಿದ್ದರು. ಕ್ರಮೇಣ ಸ್ವರ್ಣಲತಾ ಅವರು ಸೋಮೇಶ್ವರ ರೈಲ್ವೇ ಗೇಟ್ ಬಳಿಯ ತಾಯಿ ಜಲಜಾಕ್ಷಿ ಅವರ ಮನೆಯನ್ನೇ ಮಕ್ಕಳ ಸಮೇತ ಸೇರಿದ್ದರು. ಅಲ್ಲಿಂದಲೇ ಬೀನಾ ಮತ್ತು ಅನುಷಾ ಮಂಗಳೂರಿನ ಸೈಂಟ್ ಆ್ಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾಭ್ಯಾಸ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ವೈದ್ಯಕೀಯ ಕ್ಷೇತ್ರ ವ್ಯಾಪಾರಿಕರಣವಾಗುವುದರಿಂದ ಹಣವಿದ್ದವರು ವೈದ್ಯರಾಗುತ್ತಿದ್ದು, ಇದರಿಂದ ಅಮಾಯಕ ರೋಗಿಗಳು ಬಲಿಯಾಗುವ ಸ್ಥಿತಿ ಎದುರಾಗಿದೆ ಎಂದು ಭಾರತ್ ಮಾತಾ ಪೌಂಡೇಶನ್ ಹಾಗೂ ಬೆಥನಿ ಚ್ಯಾರಿಟೇಬಲ್ ಟ್ರಸ್ಟಿನ ಉಪಾಧ್ಯಕ್ಷೆ ಹಾಗೂ ವಕೀಲೆ ಫ್ಲೋರೆನ್ಸ್ ಮೆಂಡಿಸ್ ಅಭಿಪ್ರಾಯಪಟ್ಟರು. ಅವರು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಕಾಲೇಜಿನ ಫಿಸಿಯೋತೆರಫಿ ವಿಭಾಗದ ಕ್ಷೇಮ ಆಡೊಟೋರಿಯಂನಲ್ಲಿ ಬುಧವಾರ ಜರುಗಿದ ವಾರ್ಷಿಕ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ಪ್ರಸುತ್ತ ಕಾಲದಲ್ಲಿ ಯಾವುದು ಉದಾತ್ತವಲ್ಲ. ವೈದ್ಯ ವೃತ್ತಿಯು ವ್ಯವಹಾರಿಕವಾಗಿ ಮಾರ್ಪಡಾಗಿದೆ. ಇದು ವೈದ್ಯಕೀಯ ಕ್ಷೇತ್ರಕ್ಕೆ ತೀರ ಕಳವಳಕಾರಿ ಸಂಗತಿ. ಹಣವಿದ್ದವರು ಫ್ಯಾಷನ್‍ಗಾಗಿ ವೈದ್ಯರಾಗುತ್ತಿದ್ದು, ಇದರಿಂದ ಜ್ಞಾನವಿಲ್ಲದವರು ಬೇಜವಾಬ್ದಾರಿತನದಿಂದ ವರ್ತಿಸಿ ಜೀವವನ್ನು ಉಳಿಸುವ ಬದಲು ಜೀವವನ್ನು ತೆಗೆಯುವವರಾಗಿದ್ದಾರೆ. ಸಮರ್ಪಣಾಭಾವ ಕೌಶಲ್ಯ ಆಸಕ್ತಿ ಮಾನವೀಯತೆ ಉಳ್ಳವರು ಮಾತ್ರ ಉತ್ತಮ ವೈದ್ಯರಾಗಲು ಸಾಧ್ಯ. ರೋಗಿಗಳ ಭಾವನೆಯನ್ನು ಅರ್ಥೈಸಿ ಸೇವೆಯನ್ನು ಮುಂದುವರಿಸಿ ಎಂದ ಅವರು ಪ್ರಸುತ್ತ ಕಾಲಘಟ್ಟದಲ್ಲಿ ಪ್ರೀತಿ ಮಾಯವಾಗುತ್ತಿದ್ದು, ನಾನು ನನ್ನದು ಎಂಬ ಸ್ವಾರ್ಥ ಭಾವನೆಯಿಂದಾಗಿ ಸುಂದರ ಸಮುದಾಯವನ್ನು ನಿರ್ಮಿಸಲು…

