ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮಂಜನಾಡಿ: ಮಾನವ ಮೊದಲು ತನ್ನ ಆತ್ಮವನ್ನು ಶುದ್ದಿ ಮಾಡಿಕೊಳ್ಳಬೇಕು.ಹೃದಯ ಶುದ್ದಿ ಇಲ್ಲದಿದ್ದರೆ ಅಭಿವೃದ್ಧಿ ಕುಂಠಿತವಾಗಬಹುದು. ಮನುಷ್ಯನ ಅಂತರಾಳದಲ್ಲಿರುವ ವಿಚಾರಗಳನ್ನು ಹೊರ ಹಾಕುವುದು ನಾಲಿಗೆ. ನಾಲಿಗೆ ಎನ್ನುವ ಒಂದು ಅಂಗ ಮಾನವನಿಗೆ ಇಲ್ಲದಿದ್ದರೆ ಮಾನವ ಸಮೂಹ ಈ ಹಂತಕ್ಕೆ ಬೆಳೆದು ಬರುತ್ತಿರಲಿಲ್ಲ ಎಂದು ಉಡುಪಿ ಸಂಯುಕ್ತ ಖಾಝಿ ಬೇಕಲ ಇಬ್ರಾಹಿಂ ಮುಸ್ಲಿಯಾರ್ ನುಡಿದರು.
ಅವರು ಅಲ್ ಮದೀನ ಯತೀಂಖಾನ ಮಂಜನಾಡಿಯಲ್ಲಿ ಕರ್ನಾಟಕ ರಾಜ್ಯ ಎಸ್‍ಎಸ್‍ಎಫ್ ವತಿಯಿಂದ ಮೂರು ದಿನಗಳ ಕಾಲ ನಡೆಯುವ ರಾಜ್ಯ ಮಟ್ಟದ ಪ್ರತಿಭೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಎಲ್ಲಾ ಘಟನೆಗಳು ನಡೆದು ಹೋಗುವುದು ಮಾನವನಿಂದ ಬಿತ್ತರವಾಗುವ ಮಾತಿನಿಂದ.ಆದ್ದರಿಂದ ಮಾತನಾಡುವ ಸಂದರ್ಭ ಆಲೋಚಿಸಿ ಮಾತನಾಡಬೇಕು ಜತೆಗೆ ಹೃದಯವನ್ನು ಶುದ್ಧಿ ಮಾಡಿಕೊಳ್ಳಬೇಕು.ಹೃದಯ ಶುದ್ಧಿ ಮಾಡಿಕೊಳ್ಳದೇ ಯಾವುದೇ ಕಾರ್ಯ ಮಾಡಿದರೂ ಪ್ರಯೋಜನ ಸಿಗದು ಎಂದು ಸಲಹೆ ನೀಡಿದರು.
ಹುಸೈನ್ ಸಅದಿ ಮುಖ್ಯ ಭಾಷಣ ಮಾಡಿದರು.ಮಾಣಿ ಉಸ್ತಾದ್, ಇಸ್ಮಾಯಿಲ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಸ್ಸಯ್ಯಿದ್ ಸಿಟಿಎಂ ಉಮರ್ ಅಸ್ಸಖಾಫ್ ತಂಙಳ್ ವಹಿಸಿದ್ದರು, ಅಲ್ ಮದೀನ ಅಧ್ಯಕ್ಷ ಪಿಎಂ ಅಬ್ಬಾಸ್ ಮುಸ್ಲಿಯಾರ್ ಧ್ವಜಾರೋಹಣ ನೆರವೇರಿಸಿದರು.ಉಳ್ಳಾಲ ಖಾಝಿ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ದುವಾ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಎಸ್.ಪಿ. ಹಂಝ ಸಖಾಫಿ ಬಂಟ್ವಾಳ, ಖಾದರ್ ಸಖಾಫಿ, ಶಾಫಿ ಸಅದಿ ಬೆಂಗಳೂರು, ಎಸ್.ಕೆ. ಖಾದರ್ ಹಾಜಿ,ಮುನೀರ್ ಬಾವ,ಹಾಫಿಳ್ ಯಾಕೂಬ್ ಸಅದಿ ಸಈದುದ್ದೀನ್ ತಂಙಳ್ ಶಿವಮೊಗ್ಗ, ಅಸ್ಸಯ್ಯಿದ್ ಆಮೀಮ್ ಶಿಹಾಬ್ ತಂಙಳ್ ಮೂಡುಗೆರೆ, ಅಸ್ಸಯ್ಯದ್ ಸಿಟಿಎಂ ಸಲೀಂ ತಂಙಳ್ ಕೆ.ಸಿ.ರೋಡ್, ಮೌಲಾನಾ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ಅಶ್ರಫ್ ಸಅದಿ ಮಲ್ಲೂರು, ಮುಹಮ್ಮದ್ ಅಲಿ ಸಖಾಫಿ, ಎಂ.ಬಿ. ಮುಹಮ್ಮದ್ ಸ್ವಾದಿಕ್, ಅಬ್ದುರ್ರಶೀದ್ ಝೈನಿ, ಆಲಿಕುಂಞÂಪಾರೆ, ಮುಹಮ್ಮದ್ ಅಶ್ರಫ್ ಕಿನ್ಯ, ಹಸನ್ ಹಾಜಿ ಮುಡಿಪು, ಟಿ.ಎಸ್. ಇಸ್ಮಾಯಿಲ್ ಮೊದಲಾದವರು ಉಪಸ್ಥಿತರಿದ್ದರು.



