ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಕೇಂದ್ರ ಸರಕಾರದ ಸುತ್ತೋಲೆಯಂತೆ ಸರಕಾರಿ ಇಲಾಖೆಗಳ ಜಂಟಿ ಆಶ್ರಯದೊಂದಿಗೆ ಉಳ್ಳಾಲದಾದ್ಯಂತ ಸರಕಾರಿ ಕಚೇರಿ, ಆಸ್ಪತ್ರೆಗಳನ್ನು ಸ್ವಚ್ಛಗೊಳಿಸಿ, ಅದರ ಮೌಲ್ಯಮಾಪನ ನಡೆಸಲಾಗಿದೆ ಎಂದು ಉಳ್ಳಾಲ ನಗರಸಭೆ ಪೌರಾಯುಕ್ತೆ ರೂಪಾ.ಟಿ.ಶೆಟ್ಟಿ ಹೇಳಿದ್ದಾರೆ. ಅವರು ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಉಳ್ಳಾಲ ನಗರಸಭೆ ಮತ್ತು ಉಳ್ಳಾಲ ಪೊಲೀಸ್ ಠಾಣೆ ಜಂಟಿ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು. ಉಳ್ಳಾಲದಾದ್ಯಂತ ಸರಕಾರಿ ಕಟ್ಟಡಗಳ ಶೌಚಾಲಯ ಸಹಿತ ಕಟ್ಟಡದ ಸುತ್ತಲಿನ ವಾತಾವರಣವನ್ನು ಶುಚಿಗೊಳಿಸಲಾಗಿದೆ. ಸರಕಾರಿ ಕಚೇರಿ ಅಧಿಕಾರಿಗಳ ಸಮೇತ ಸಿಬ್ಬಂದಿ ಶುಚಿಗೊಳಿಸಿ ಸ್ವಯಂ ಮೌಲ್ಯಮಾಪನ ನಡೆಸಲಾಗಿದೆ ಎಂದರು. ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞÂಮೋನು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಚಿತ್ರಾ ಚಂದ್ರಕಾಂತ್, ಎಸಿಪಿ ಕಲ್ಯಾಣಿ ಶೆಟ್ಟಿ, ಉಳ್ಳಾಲ ಎಸ್.ಐ ಭಾರತಿ, ನಗರಸಭೆ ಸದಸ್ಯೆ ಮುಸ್ತಾಫ, ಹಿರಿಯ ಆರೋಗ್ಯ ನಿರೀಕ್ಷಕ ಜಯಶಂಕರ್, ಕಿರಿಯ ಆರೋಗ್ಯ ನಿರೀಕ್ಷಕ ರಾಜೇಶ್, ಆರೋಗ್ಯ ನಿರೀಕ್ಷಕ ಸಾಜಿತ್, ಪೌರ ಕಾರ್ಮಿಕ ಅಂಗಾರ ಮೊದಲಾದವರು ಉಪಸ್ಥಿತರಿದ್ದರು.
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಹರೇಕಳ: ಬೇಸಿಗೆಯ ಸುಡು ಬಿಸಿಲು, ಎತ್ತರ ಪ್ರದೇಶದ ಜನರು ನೀರಿಲ್ಲದೆ ಬಹುದೂರ ನಡೆದುಕೊಂಡು ಸಾಗಿ ಬೋರ್‍ವೆಲ್ ಬಡಿದು ನೀರು ತರುವ ಸಾಹಸ, 5 ಕ್ಕೂ ಅಧಿಕ ಬೋರ್ ವೆಲ್ ಕೊರೆದರೂ ನೀರು ಸಿಗದೆ ನಿರಾಸೆ, ಆದರೆ ಸದ್ಯ ಹರೇಕಳ ಗ್ರಾಮದ ಕುತ್ತಿಮೊಗೆರು ಸಮೀಪ ಸಚಿವರು , ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಗ್ರಾಮ ಪಂಚಾಯತ್ ಸಹಯೋಗದಿಂದ ಖಾಸಗಿ ವ್ಯಕ್ತಿಯೊಬ್ಬರ ದಾನದ ಜಾಗದಲ್ಲಿ ನಿರ್ಮಾಣವಾದ ಬೃಹತ್ ಬಾವಿಯಿಂದ ಗ್ರಾಮದ ಜನರ ಬಾಯಾರಿಕೆ ಈಡೇರಿದೆ. ಭಾನುವಾರ ಹರೇಕಳ ಗ್ರಾಮದ ಕುತ್ತಿಮೊಗರು ಸಮೀಪ ರೂ.15 ಲಕ್ಷ ಅನುದಾನದಲ್ಲಿ ನಿರ್ಮಿಸಲಾದ ಬಾವಿಯನ್ನು ಉದ್ಘಾಟಿಸಿ ಮಾತನಾಡಿದರು. ಬಳಿಕ ಮಾತನಾಡಿದ ಅವರು ಬಹುಕಾಲದ ಕುಡಿಯುವ ನೀರಿನ ಸಮಸ್ಯೆ ಹರೇಕಳದ ಜನರನ್ನು ತೊಂದರೆಗೀಡು ಮಾಡಿತ್ತು. ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಅಲ್ಲಲ್ಲಿ ಬೋರ್‍ವೆಲ್ ನಿರ್ಮಿಸಿದರೂ ಪ್ರಯೋಜನವಾಗಿರಲಿಲ್ಲ. ಆದರೆ ಬಾವಿ ನಿರ್ಮಾಣದಿಂದ ಗ್ರಾಮದ ಜನರ ಚಿಂತೆ ದೂರವಾಗಿದ್ದು, ಕೃಷಿ ಚಟುವಟಿಕೆಗಳಿಗೂ ಪೂರಕವಾಗಿದೆ. ಕುತ್ತಿಮೊಗರು, ಅಂಬ್ಲಮೊಗರು, ತಲಪಾಡಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೋಟೆಕಾರು: ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಇನ್ನೊಬ್ಬರ ಕಷ್ಟದಲ್ಲಿ ನೆರವಾಗುವ ಎಸ್ ವೈಎಸ್ ಸೆಂಟರಿನ ಕಾರ್ಯ ಶ್ಲಾಘನೀಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಸುನ್ನೀ ಯುವಜನ ಸಂಘ ಕೆ.ಸಿ.ರೋಡು ಘಟಕದ ಆಶ್ರಯದಲ್ಲಿ ಭಾನುವಾರ ಕೋಟೆಕಾರು ಖಾಸಗಿ ಸಭಾಂಗಣದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ದೂರದರ್ಶಿತ್ವದ ಕಾರ್ಯಕ್ರಮ ಇದಾಗಿದ್ದು, ಇಲ್ಲಿ ಮದುವೆಯಾದವರು ಮುಂದೆ ಕುಟುಂಬ ನಿರ್ವಹಣೆಯನ್ನು ಸರಿಯಾಗಿ ನಿರ್ವಹಿಸಿ ಮತ್ತೆ ಇನ್ನೊಬ್ಬರ ಬಾಳಿನಲ್ಲಿ ಬೆಳಕಾಗುವ ರೀತಿಯಲ್ಲಿ ಬಾಳುವಂತಾಗಬೇಕು ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುನ್ನೀ ಯುವಜನ ಸಂಘದ ರಾಜ್ಯಾಧ್ಯಕ್ಷ ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್ ಮಾತನಾಡಿ ಸಾಂತ್ವನ ಯೋಜನೆಯಡಿ ಬಡ ಹೆಣ್ಮಕ್ಕಳ ಮದುವೆ, ಆರ್ಥಿಕವಾಗಿ ಹಿಂದುಳಿದವರಿಗೆ ಮನೆ ಕಟ್ಟುವ ಸಾಮಾಜಿಕ ಕೆಲಸ ಎಸ್‍ವೈಎಸ್ ಮಾಡುತ್ತಿದೆ .ಯುವಕರಲ್ಲಿ ಧಾರ್ಮಿಕ ಜ್ಞಾನ ಮೂಡಿಸಿ ಬಲಿಷ್ಟಗೊಳಿಸುವ ಉದ್ದೇಶ ಸಂಘಟನೆ ಹೊಂದಿದ್ದು ಇತರ ಸಾಮಾಜಿಕ ಸೇವೆಗಳನ್ನು ಸಾಂತ್ವನ ಯೋಜನೆಯಡಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಮಾನಸಿಕ ರೋಗಿಗಳಿಗೆ ಸ್ಪಂಧಿಸುವ ಸ್ವಯಂ ಸೇವಾ ಸಂಸ್ಥೆಗಳಿಗೆ ಸರಕಾರದಿಂದ ಮಾನಸಿ ಆಧಾರ ಯೋಜನೆ ಮೂಲಕ ಸಹಕಾರ ನೀಡುವ ಕಾರ್ಯ ಆಗುತ್ತಿದ್ದು, ಇದನ್ನು ಉಪಯೋಗಿಸುವ ಮೂಲಕ ಮಾನಸಿಕವಾಗಿ ಬಳಲುತ್ತಿರುವವರ ಬಾಳಿಗೆ ಬೆಳಕಾಗುವ ಕೆಲಸವನ್ನು ಮಾಡಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಅವರು ತೊಕ್ಕೊಟ್ಟುವಿನಲ್ಲಿ ಭಾನುವಾರ ನಡೆದ ಹೆಲ್ಪ್ ಇಂಡಿಯಾ ಫೌಂಡೇಶನ್ ನ ಕಚೇರಿ ಉದ್ಘಾಟನೆ ಹಾಗೂ ಬಡ ಅಂಗವಿಕಲರಿಗೆ ವ್ಹೀಲ್ ಚೇರ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸ್ವಾರ್ಥವಿಲ್ಲದೆ , ಜಾತಿ, ಮತ ಬೇಧಭಾವವಿಲ್ಲದೆ ಎಲ್ಲರಿಗೂ ಮನುಷ್ಯತ್ವದ ರೂಪ ಕೊಟ್ಟು ಬಾಳು ಕೊಡುತ್ತಿರುವ ಫೌಂಡೇಶನ್ನಿನ ರಾಝಿಕ್ ಉಳ್ಳಾಲ್ ಅವರ ಕಾರ್ಯ ಶ್ಲಾಘನೀಯವಾಗಿದೆ. ಮಾನವೀಯತೆಯ ಬಾಳು ಇರದ ಜೀವನ ವ್ಯರ್ಥವಾಗಿರುತ್ತದೆ. ಮಾನಸಿಕ ರೋಗಿಗಳ ಆರೈಕೆಯ ಮೈಲಕ ಫೌಂಡೇಶನ್ ಯುವಕರಿಗೆ ಮಾದರಿಯಾಗಿದೆ. ಮಾನಸಿಕ ರೋಗಿಗಳಿಗೆಬೇಕಾದ ಪುನರ್ವಸತಿ ಕೇಂದ್ರಗಳ ಸ್ಥಾಪನಗೆ ಸರಕಾರದಿಂದ ಹೆಚ್ಚು ಒತ್ತು ನೀಡಲಾಗುವುದು. ದೊಡ್ಡ ಯೋಜನೆಯಾಗಿರುವುದರಿಂದ ಸರಕಾರದಿಂದ ಅದನ್ನು ನಿಭಾಯಿಸಲು ಸಾಧ್ಯವಿಲ್ಲದಿರುವುದರಿಂದ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಕೇಂದ್ರ ಸರಕಾರ ಚಿನ್ನಾಭರಣ ಉದ್ಯಮದ ಮೇಲೆ ವಿಧಿಸಿರುವ ಅಬಕಾರಿ ಸುಂಕದಿಂದ ಸ್ವರ್ಣವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ತೊಂದರೆಯಾಗಿದ್ದು ಈ ಬಗ್ಗೆ ಈಗಾಗಲೇ ದೇಶದಾದ್ಯಂತ 26 ದಿನಗಳ ಮುಷ್ಕರ ನಡೆದಿದ್ದು , ಇನ್ನೂ ಎ.10ರವರೆಗೆ ಮುಷ್ಕರವನ್ನು ಮುಂದುವರೆಸಲಿದ್ದೇವೆ ಎಂದು ಉಡುಪಿ ಸ್ವರ್ಣ ವ್ಯಾಪಾರಿ ಸಂಘದ ಅಧ್ಯಕ್ಷ ಜಯ ಆಚಾರ್ಯ ತಿಳಿಸಿದ್ದಾರೆ. ಅವರು ಭಾನುವಾರ ತೊಕ್ಕೊಟ್ಟು ರತ್ನಂ ಹೊಟೇಲಿನಲ್ಲಿ ಜರಗಿದ ತೊಕ್ಕೊಟ್ಟು ವಲಯದ ಸ್ವರ್ಣ ವ್ಯಾಪಾರಿ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಜ್ಯುವೆಲ್ಲರಿ ಮಾಲೀಕರಿಗೆ ಭೂಗತ ದೊರೆಗಳಿಂದ ಬರುತ್ತಿದ್ದ ಹಫ್ತಾ ಬೆದರಿಕೆಯನ್ನು ಪೊಲೀಸ್ ಇಲಾಖೆ ಮತ್ತು ಸಂಘಟನೆ ಸಹಯೋಗದಿಂದ ನಿಲ್ಲಿಸಲು ಸಾಧ್ಯವಾಗಿದೆ. ಅವಳಿ ಜಿಲ್ಲೆಗಳ 27 ಸ್ವರ್ಣೋದ್ಯಮಿಗಳ ಬಳಿ ಲೈಸೆನ್ಸ್‍ವುಳ್ಳ ರೈಫಲ್ ಗಳಿವೆ. ಇದು ಸಂಘಟನೆ ಮುಖೇನ ಪೊಲೀಸ್ ಅಧಿಕಾರಿಗಳ ಮನವರಿಕೆಯಿಂದ ಸಾಧ್ಯವಾಗಿದೆ. 30 ಜಿಲ್ಲೆಗಳಲ್ಲಿ ಸಂಘಟನೆಯಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿರುವ ಅಬಕಾರಿ ಸುಂಕದ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕಿದೆ. 21 ದಿನಗಳ ಕಾಲ ದೇಶಾದ್ಯಂತ ಬಂದ್…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುತ್ತಾರು: ತೊಕ್ಕೊಟ್ಟು ಸಮೀಪದ ಕುತ್ತಾರುಗುತ್ತುವಿನ ಮಾಜಿ ಶಾಸಕ ಕೆ. ಜಯರಾಮಶೆಟ್ಟಿ ಅವರ ಮನೆ ಪರಿಸರದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದ್ದು ಸುತ್ತಮುತ್ತಲಿನ ಜನರಲ್ಲಿ ಆತಂಕ ಮೂಡಿಸಿದೆ. ಕುತ್ತಾರುಗುತ್ತುವಿನ ಗದ್ದೆಯೊಂದರಲ್ಲಿ ಸ್ಥಳೀಯ ಆನಂದ ಬೆಳ್ಚಾಡ ಎಂಬವರು ಕೆಲಸ ಮಾಡುತ್ತಿದ್ದ ಸಂದರ್ಭ ಮಧ್ಯಮ ಗಾತ್ರದ ಚಿರತೆಯೊಂದು ಗುಡ್ಡೆ ಪ್ರದೇಶದಿಂದ ಶರವೇಗದಲ್ಲಿ ಓಡಿ ಹತ್ತಿರದಲ್ಲೇ ಇರುವ ದೈವಸ್ಥಾನದ ಹಾದಿಯಲ್ಲಿ ಮರೆಯಾಗಿದೆ. ಈ ಬಗ್ಗೆ ಅವರು ಸ್ಥಳೀಯರಲ್ಲಿ ತಿಳಿಸಿದಾಗ ಅದಾಗಲೇ ಕೆಲವರು ಚಿರತೆಯನ್ನು ಕಂಡ ಬಗ್ಗೆ ತಮ್ಮ ಅನುಭವ ತಿಳಿಸಿದ್ದಾರೆ. ಮಾಜಿ ಶಾಸಕ ಜಯರಾಮಶೆಟ್ಟಿ ಅವರ ಮಗನಿಗೂ ಚಿರತೆ ಕಾಣಸಿಕ್ಕಿತ್ತೆನ್ನಲಾಗಿದ್ದು ಅವರು ಈ ವಿಷಯವನ್ನು ಲಘುವಾಗಿ ಪರಿಗಣಿಸಿದ್ದರು. ಪರಿಸರದ ಅನೇಕ ಮಂದಿ ಇದೀಗ ಚಿರತೆಯನ್ನು ಕಂಡಿದ್ದು ಆತಂಕದಲ್ಲಿ ದಿನಕಳೆಯುವಂತಾಗಿದೆ. -ಕುತ್ತಾರುಗುತ್ತು ಪರಿಸರದಲ್ಲಿ ಹಚ್ಚಹಸಿರು, ದಟ್ಟ ಪೆÇದೆಗಳು ವಿಶಾಲವಾದ ಕೃಷಿಭೂಮಿ ಹೊಂದಿದ್ದು ಜಾನುವಾರುಗಳನ್ನು ಸಾಕಲಾಗುತ್ತಿದ್ದು, ಚಿರತೆಯು ಅವುಗಳ ಮೇಲೆಯೂ ದಾಳಿಯೂ ನಡೆಸುವ ಸಂಭವ ಹೆಚ್ಚಿದೆ. ಕೃಷ್ಣ ಶೆಟ್ಟಿ ಕುತ್ತಾರುಗುತ್ತು ನಿವಾಸಿ -ಚಿರತೆ ಪ್ರತ್ಯಕ್ಷವಾದ ಬಗ್ಗೆ ಜಿಲ್ಲಾಧಿಕಾರಿಯವರಿಗೆ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕಿನ್ಯ: ಸಾಮರಸ್ಯ ಮತ್ತು ಸೌಹಾರ್ದತೆಗೆ ಶಾಲೆಯೇ ಮೊದಲ ಪಾಠಶಾಲೆ, ಈ ಮೂಲಕ ಸಮಾಜದಲ್ಲಿ ನೆಮ್ಮದಿಯ ವಾತಾವರಣ ಮೂಡಿಸಬಹುದು ಎಂದು ತೊಕ್ಕೊಟ್ಟು ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಧರ್ಮ ಕೇಂದ್ರದ ಧರ್ಮಗುರು ಫಾ. ಡಾ.ಜೆ.ಬಿ ಸಲ್ದಾನ ಅಭಿಪ್ರಾಯಪಟ್ಟರು. ಕಿನ್ಯ ಬೆಳರಿಂಗೆ ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಪುನ:ಪ್ರತಿಷ್ಠೆ, ಬ್ರಹ್ಮಕಲಶ ಮತ್ತು ಧರ್ಮನೇಮದ ಪ್ರಯುಕ್ತ ಮಂಗಳವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. ಪ್ರತಿಯೊಂದು ಧರ್ಮದ ಧಾರ್ಮಿಕ ಶುಭ ಸಮಾರಂಭಗಳಲ್ಲಿ ಎಲ್ಲ ಧರ್ಮೀಯರು ಸಮಾನವಾಗಿ ಪಾಲ್ಗೊಳ್ಳುವ ಮೂಲಕ ಕೋಮು ಸೌಹಾರ್ದತೆಯ ಜೊತೆಗೆ ಸಾಮರಸ್ಯ ವಾತಾವರಣ ಮೂಡಲು ಸಾಧ್ಯ. ಮಕ್ಕಳಿಗೆ ಶಾಲೆಯಲ್ಲಿ ಸೌಹಾರ್ದತೆಯ ಪಾಠ ಸಿಕ್ಕಾಗ ಶಿಕ್ಷಕರು ಉದಾತ್ತ ನೀತಿ ಬೋಧನೆ ಮಾಡುವುದರಿಂದ ಪರಿಸರ ಪ್ರಶಾಂತವಾಗಿರುತ್ತದೆ. ಆ ನಿಟ್ಟಿನಲ್ಲಿ ಕಿನ್ಯ ಬೆಳರಿಂಗೆಯ ಶ್ರೀ ಮಲರಾಯ ಧೂಮವತಿ ಬಂಟ ದೈವಗಳ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಧಾರ್ಮಿಕ ಸಭೆಯಲ್ಲಿ ಅನ್ಯ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಬಾಳೆಪುಣಿ :ಶುಭ ಸಮಾರಂಭ ಮತ್ತು ದೈವದ ಕೋಲ ಮೊದಲಾದ ಸಂದರ್ಭದಲ್ಲಿ ಅಮಲು ಪದಾರ್ಥ ಸೇವಿಸುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕು. ದುಶ್ಚಟಗಳಿಂದ ಮುಕ್ತರಾಗಬೇಕು. ಹಣ ಕೂಡಿಡುವ ಅತಿಯಾದ ಆಸೆಗಳೇ ಎಲ್ಲರನ್ನೂ ಹಾಳು ಮಾಡುತ್ತದೆ. ಯಾವತ್ತೂ ಹಣದ ಹಿಂದೆ ಬೀಳದೇ ಸತ್ಯ, ನ್ಯಾಯ, ಧರ್ಮವನ್ನು ಅನುಸರಿಸಬೇಕು ಎಂದು ಮಾಣಿಲ ಶ್ರೀ ಧಾಮ ಶ್ರೀ ಮಹಾಲಕ್ಷ್ಮೀಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಕರೆ ನೀಡಿದರು. ಅವರು ಸೋಮವಾರ ಬಾಳೆಪುಣಿ ಗ್ರಾಮದ ಮೂಳೂರು ಶ್ರೀ ಮೂಲಾಪುರ ಪರಮೇಶ್ವರ ದೇವಸ್ಥಾನದ ಶ್ರೀ ದೇವರ ಪುನಃಪ್ರತಿಷ್ಠೆ ಹಾಗೂ ಅಷ್ಟಬಂಧ ಬ್ರಹ್ಮಕಲಶಾಭಿಷೇಕದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಿದರು. ಎತ್ತಿನಹೊಳೆ ಯೋಜನೆಯಿಂದ ಸಮಾಜ ಅಧಃಪತನ : ಮಾಣಿಲ ಶ್ರೀ ಎತ್ತಿನಹೊಳೆ ಯೋಜನೆಯಿಂದ ಸಮಾಜದ ಅಧಃಪತನ ಖಂಡಿತ. ಪ್ರಜೆಗಳು ಪಾವತಿಸಿದ ತೆರಿಗೆಯನ್ನು ಪೆÇೀಲು ಮಾಡುವ ಈ ಯೋಜನೆಯ ಮೂಲಕ ಪ್ರಸ್ತುತ ಸಾವಿರಾರು ಕೋಟಿ ರೂ.ಗಳಲ್ಲದೇ ಪ್ರತಿವರ್ಷವೂ 2500 ಕೋಟಿ ರೂ.ಗಳನ್ನು ಖಾಲಿ ಮಾಡುವ ಸಾಧ್ಯತೆಯಿದೆ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ತಂತ್ರಜ್ಞಾನದ ಯುಗದಲ್ಲಿ ಜೀವನದ ಮೌಲ್ಯಗಳನ್ನು ಕಳೆದುಕೊಳ್ಳದೆ, ಶಿಕ್ಷಕರ ಉತ್ತಮ ಮಾರ್ಗದರ್ಶನವನ್ನು ಪಾಲಿಸುವುದರ ಮೂಲಕ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದು ಮಣಿಪಾಲ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಹಾಗೂ ಮಣಿಪಾಲ ವಿಶ್ವವಿದ್ಯಾಲಯದ ಉಪಾಧ್ಯಕ್ಷ ಡಾ.ರಾಮ್ ನಾರಾಯಣ್ ಅಭಿಪ್ರಾಯಪಟ್ಟರು. ಅವರು ದೇರಳಕಟ್ಟೆಯ ಎ.ಬಿ.ಶೆಟ್ಟಿ ದಂತ ಮಹವಿದ್ಯಾಲಯದ 31 ನೇ ವಾರ್ಷಿಕೋತ್ಸವ ಸಮಾರಂಭವನ್ನು ಸೋಮವಾರ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಡಿಟೋರಿಯಂನಲ್ಲಿ ಉದ್ಘಾಟಿಸಿದರು. ಶಿಕ್ಷಕರು ವಿದ್ಯಾರ್ಥಿಗಳ ಮೇಲಿನ ಪ್ರೀತಿ ಮತ್ತು ಬಾಂಧವ್ಯವನ್ನು ಬೆಳೆಸುವುದರ ಮೂಲಕ ಉತ್ತಮ ಪ್ರಜೆಗಳನ್ನು ರೂಪಿಸಲು ಸಾಧ್ಯ. ಅಂತರ್ಜಾಲದ ಮೂಲಕ ಸ್ಮಾಟ್ ್ ಫೋನನ್ನೇ ಪ್ರಪಂಚವಾಗಿರಿಸಿರುವ ಯುವ ಸಮುದಾಯ ಜೀವನದ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ. ಕಂಪ್ಯೂಟರಿನ ಮೌಸ್ ನಲ್ಲಿ ಯಶಸ್ಸಿದೆ ಎಂದು ಭಾವಿಸುವವರು ಜೀವನದ ಕುರಿತ ವಿಮರ್ಶೆ ಮಾಡಬೇಕಿದೆ. ಮನುಷ್ಯನ ಅಭಿವೃದ್ಧಿ ತಂತ್ರಜ್ಞಾನದಿಂದ ನಡೆಸಲು ಮುಂದಾಗಿರುವವರು ಮಾನವೀಯತೆಯನ್ನು ಮೈಗೂಡಿಸಿಕೊಳ್ಳಬೇಕಿದೆ. ಇನ್ನೊಬ್ಬರನ್ನು ಬಲಿಷ್ಠರನ್ನಾಗಿಸುವುದು, ಮನುಷ್ಯನನ್ನು ಉಪಯೋಗಿಸಿ ವಸ್ತುಗಳನ್ನು ಸಂಪಾದಿಸುವ ಬದಲು ಮನುಷ್ಯನನ್ನು ಪ್ರೀತಿಸಿ ವಸ್ತುಗಳನ್ನು ಗಳಿಸಿ, ದೂರುವಿಕೆಯನ್ನು ಸವಾಲಾಗಿ ಸ್ವೀಕರಿಸುವ ಮೂಲಕ ಯಶಸ್ವಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತಲಪಾಡಿ: ಕೇಂದ್ರ ಸರಕಾರ ಗ್ರಾಮೀಣ ಭಾಗದ ಮಹಿಳೆಯರಿಗೆ ಸ್ವಾವಲಂಬನೆ ಜೀವನ ನಡೆಸಲು ಎಲ್ಲಾ ರೀತಿಯ ಸಹಕಾರ ನೀಡಲಿದೆ. ಮಹಿಳೆ ಸ್ವಾವಲಂಬಿಯಾದಲ್ಲಿ ಕುಟುಂಬದ ಅಭಿವೃದ್ಧಿ ಜತೆಗೆ ಗ್ರಾಮದ ಅಭಿವೃದ್ಧಿಯೂ ಸಾಧ್ಯ ಎಂದು ಸೋಮೇಶ್ವರ ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ ಅಭಿಪ್ರಾಯಪಟ್ಟರು. ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು , ಸ್ತ್ರೀ ಶಕ್ತಿ ಗೊಂಚಲು ಗುಂಪುಗಳು ಕೋಟೆಕಾರು ಇವರ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ತಲಪಾಡಿಯ ವಿಶ್ವಾಸ್ ಆಡಿಟೋರಿಯಂನಲ್ಲಿ ಮಂಗಳವಾರ ಜರಗಿದ ಸ್ತ್ರೀಶಕ್ತಿ ಮಹಿಳಾ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಹಿಳಾ ಸಂಘಗಳಲ್ಲಿ ಸ್ವಉದ್ಯೋಗ, ಸ್ವಾವಲಂಬನೆ ಪಾಠದ ಜತೆಗೆ ಮಹಿಳಾ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವಂತೆ ಮಹಿಳೆಯರನ್ನು ಬೆಳೆಸಬೇಕು. ಎಲ್ಲಾ ಮಹಿಳೆಯರನ್ನು ಒಗ್ಗಟ್ಟಾಗಿಸುವ ಕಾರ್ಯಕ್ರಮ ನಡೆಸುವ ಸ್ತ್ರೀ ಶಕ್ತಿ ಸಂಘಗಳ ಕಾರ್ಯ ಶ್ಲಾಘನೀಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಲಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಆಳ್ವ ವಹಿಸಿದ್ದರು. ತಲಪಾಡಿ…

