ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮಂಗಳೂರು: ಕಳೆದ ವಾರ ನಗರ ಸಬ್ ಜೈಲಿನಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನ ಅಧೀಕ್ಷಕ ಸೇರಿ ಮೂವರು ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದೆ.

ಜೈಲಿನ ಅಧೀಕ್ಷಕ ಓಬಳೇಶ್ವರ ಸೇರಿದಂತೆ ನಾಲ್ವರನ್ನು ಕರ್ತವ್ಯಲೋಪ ಎಸಗಿದ್ದಾರೆ ಎಂಬ ಆರೋಪದಡಿಯಲ್ಲಿ ಅಮಾನತುಗೊಳಿಸುವಂತೆ ಮಂಗಳೂರು ಪೊಲೀಸ್ ಆಯುಕ್ತ ಎಸ್.ಮುರುಗನ್ ಶಿಫಾರಸು ಮಾಡಿದ್ದರು. ಈ ಹಿನ್ನಲೆಯಲ್ಲಿ ಇಂದು ಬಂದೀಖಾನೆ ಇಲಾಖೆ ಎಡಿಜಿಪಿ ಕಮಲ್ ಪಂತ್ ನಾಲ್ವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ನವೆಂಬರ್ 2 ರಂದು ವಿಚಾರಣಾಧೀನ ಕೈದಿಗಳ ಎರಡು ತಂಡಗಳ ನಡುವೆ ನಡೆದ ಮಾರಾಮಾರಿಯಲ್ಲಿ ಭೂಗತ ಪಾತಕಿ ದಾವೂದ್ ಸಹಚರ ಎನ್ನಲಾದ ಮಾಡೂರು ಇಸುಬು ಹಾಗೂ ಅವನ ಸಹಚರ ಗಣೇಶ್ ಶೆಟ್ಟಿ ಕೊಲೆಯಾಗಿತ್ತು. ಇವರ ಜೊತೆ ೭ಮಂದಿ ಗೈದಿಗಳು ಹಾಗೂ ಜೈಲು ಸುಪರಿಂಟೆಂಡೆಂಟ್ ಗಾಯಗೊಂಡಿದ್ದರು.
ಭೂಗತ ಪಾತಕಿ ವಿಕ್ಕಿ ಶೆಟ್ಟಿ ಸಹಚರ ಆಕಾಶ್ ಭವನ ಶರಣ್ ಹಾಗೂ ಆತನ ತಂಡ ಈ ಕೊಲೆ ಮಾಡಿದ್ದರು.
ಕೈದಿಗಳ ಹತ್ಯೆಯ ನಂತರ ಜೈಲಿನೊಳಗೆ ನಡೆದ ತಪಾಸಣೆಯಲ್ಲಿ ೧೭ಮೊಬೈಲ್ ಫೋನ್ ಹಾಗೂ ಮಾರಾಕಾಸ್ತ್ರಗಳು ಪತ್ಯೆಯಾಗಿದ್ದವು.


