ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಹಾರ್ಡ್‍ವೇರ್ ಅಂಗಡಿ ಮಾಲೀಕನಿಗೆ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದ ಪ್ರಮುಖ ಆರೋಪಿಯನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಮುಡಿಪು ಕೈರಂಗಳದ ನವಾಝ್ (28) ಬಂಧಿತ. ಫೆ.23 ರಂದು ಮುಡಿಪು ಪೇಟೆಯಲ್ಲಿ ಅರಫಾ ಹಾರ್ಡ್‍ವೇರ್ ಅಂಗಡಿ ಮಾಲೀಕರಾದ ಮಹಮ್ಮದ್ ಹನೀಫ್ ಎಂಬವರಿಗೆ ತಲೆಗೆ ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದ್ದರು. ಕೃತ್ಯ ಎಸಗಿದ ತಂಡದಲ್ಲಿ ನವಾಝ್ ಮತ್ತು ಆತನ ಸಹಚರರು ಭಾಗಿಯಾಗಿದ್ದರು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದ ಕೊಣಾಜೆ ಪೊಲೀಸರು ಪ್ರಮುಖ ಆರೋಪಿ ನವಾಜ್ ನನ್ನು ಬಂಧಿಸಿ, ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ವೈದ್ಯ ವಿದ್ಯಾರ್ಥಿಗಳ ಅಪಹರಣಕಾರ: ಆರೋಪಿ ನವಾಝ್ ರಾಜ್ಯಾದ್ಯಂತ ಸುದ್ಧಿ ಗಳಿಸಿದ್ದ ದೇರಳಕಟ್ಟೆ ವೈದ್ಯ ವಿದ್ಯಾರ್ಥಿ-ವಿದ್ಯಾರ್ಥಿನಿ ಅಪಹರಣ ನಡೆಸಿ ಲೈಂಗಿಕ ಶೋಷಣೆ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಇತ್ತೀಚೆಗೆ ಜೈಲಿನಿಂದ ಬಿಡುಗಡೆಗೊಂಡ ಈತ ಮತ್ತೆ ಅಪರಾಧ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದಾನೆ. ಈ ಹಿಂದೆ ಮುಡಿಪುವಿನಲ್ಲಿ ನಡೆದ ಗಲಭೆ ಪ್ರಕರಣದಲ್ಲಿಯೂ ಆರೋಪಿಯಾಗಿದ್ದಾನೆ. ಪೊಲೀಸ್ ಆಯುಕ್ರ ಚಂದ್ರಶೇಖರ್, ಡಿಸಿಪಿಗಳಾದ ಶಾಂತರಾಜು…
Author: UllalaVani
ವಜ್ರ ಗುಜರನ್, ಮಾಡೂರು ಉಳ್ಳಾಲ: ಅಂದು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನಗಳು ಹೋಗುವುದೇ ಕಷ್ಟದಾಯಕ. ಆದರೆ ವಿಳಂಬವಾದರೂ ಕುಂದಾಪುರ -ತಲಪಾಡಿ ಹೆದ್ದಾರಿ ಅಗಲೀಕರಣ ಕಾಮಗಾರಿಯ ಕೊನೆ ಹಂತದಲ್ಲಿ ಅತಿ ಉದ್ದನೆಯ ನೂತನ ನೇತ್ರಾವತಿ ಸೇತುವೆ ಕೆಲಸ ಪೂರ್ಣಗೊಂಡು ಇದೀಗ ಸುಗಮ ಸಂಚಾರಕ್ಕೆ ಯೋಗ್ಯವಾಗಿದೆ. ಆದರೆ ರಾತ್ರಿ ಸಮಯದಲ್ಲಿ ಹಳೇಯ ಮತ್ತು ನೂತನ ಸೇತುವೆಯುದ್ದಕ್ಕೂ ದಾರಿದೀಪಗಳು ಇಲ್ಲದೇ ಇರುವುದರಿಂದ ದುರ್ಘಟನೆಗಳು ಸಂಭವಿಸುವ ಭೀತಿಯ ವಾತಾವರಣ ವಾಹನ ಸವಾರರಲ್ಲಿ ಹಾಗೂ ಪಾದಚಾರಿಗಳಲ್ಲಿ ಮನೆ ಮಾಡಿದೆ. ಬ್ರಿಟೀಷ್ ಕಾಲದಿಂದ ಹಳೇಯ ಸೇತುವೆ ಆರಂಭಗೊಂಡಿದೆ. ಅದರ ದಾರಿಯುದ್ಧಕ್ಕೂ ಒಂದು ಸಮಯದಲ್ಲಿ ಸೋಡಿಯಂ ದಾರಿದೀಪಗಳನ್ನು ಅಳವಡಿಸಲಾಗಿತ್ತು. ಆದರೆ ನೂತನ ಸೇತುವೆ ಶುಭಾರಂಭಗೊಂಡ ನಂತರದ ದಿನಗಳಲ್ಲಿ ಒಂದು ಕಿ.ಮೀ ಅಂತರದ ಎರಡು ಸೇತುವೆಯೂ ರಾತ್ರಿ ಸಂದರ್ಭ ಕಗ್ಗತ್ತಲಲ್ಲಿ ಮುಳುಗುತ್ತಿದೆ. ಪಾದಚಾರಿಗಳಲ್ಲಿ ಭೀತಿ : ಹಳೇಯ ಸೇತುವೆಯಲ್ಲಿ ಪಾದಚಾರಿಗಳಿಗೆ ಹೋಗಲು ಫುಟ್‍ಪಾತ್ ಇದೆ. ಅದರಲ್ಲಿ ನಸುಕಿನ ಜಾವ ಮತ್ತು ಸಂಜೆ ವೇಳೆ ವಾಕಿಂಗ್ ಮತ್ತು ಪಾದಚಾರಿಗಳು ಹೋಗುವವರಿದ್ದಾರೆ. ಆದರೆ ದಾರಿದೀಪಗಳು ಇಲ್ಲದೇ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ರಿಕ್ಷಾದಲ್ಲಿ ಗಾಂಜಾ ಸಾಗಾಟ ನಡೆಸುತ್ತಿದ್ದ ಆರೋಪಿಯನ್ನು ಕೊಣಾಜೆ ಪೊಲೀಸರು ಮಂಜನಾಡಿಯ ಉರುಮನೆ ಎಂಬಲ್ಲಿಂದ ಮಂಗಳವಾರ ಬಂಧಿಸಿ ಸುಮಾರು 450 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಮಂಜನಾಡಿ ನೆತ್ತಿಲಪದವು ನಿವಾಸಿ ಆತಿಂ(28) ಬಂಧಿತ. ಮಂಜನಾಡಿ ಕಡೆಯಿಂದ ರಿಕ್ಷಾದಲ್ಲಿ ಗಾಂಜಾ ಸಾಗಾಟ ನಡೆಸುತ್ತಿರುವ ಮಾಹಿತಿ ಪಡೆದ ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಈತನಿಂದ ರಿಕ್ಷಾ , 450 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಕೊಣಾಜೆ ಠಾಣಾಧಿಕಾರಿ ಅಶೋಕ್ ಮತ್ತು ಪಿಎಸ್‍ಐ ಸುಧಾಕರ್ ಹಾಗೂ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಜೀವಶಾಸ್ತ್ರ ಹಾಗೂ ರಸಾಯನ ಶಾಸ್ತ್ರ ವಿಭಿನ್ನ ಅಧ್ಯಯನವಾಗಿದ್ದು ಇವೆರಡರ ಕೂಡುವಿಕೆಯ ಅಧ್ಯಯನಗಳ ಕುರಿತು ಮತ್ತು ಸಂಶೋಧನೆಗೆ ವಿದ್ಯಾರ್ಥಿಗಳು ಹೆಚ್ಚಿನ ಮಹತ್ವ ನೀಡಬೇಕಿದೆ ಎಂದು ಎಂದು ಪದ್ಮಭೂಷಣ ಪುರಸ್ಕøತ ಹಾಗೂ ಬೆಂಗಳೂರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ನಿವೃತ್ತ ನಿರ್ದೆಶಕ ಪಿ. ಬಲರಾಮ ತಿಳಿಸಿದ್ದಾರೆ. ಅವರು ಮಂಗಳೂರು ವಿಶ್ವ ವಿದ್ಯಾನಿಲಯದ ವಿಜ್ಷಾನ ವಿಭಾಗದ ನೂತನ ಜೀವರಸಾಯನ ಶಾಸ್ತ್ರ ಸಂಶೋಧನಾ ಪ್ರಯೋಗಲಯ, ಜೀವಶಾಸ್ತ್ರ ಪ್ರಯೋಗಲಯವನ್ನು ಉದ್ಘಾಟಸಿ ಬಳಿಕ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಆಡಿಟೋರಿಯಂನಲ್ಲಿ ವಿದ್ಯಾರ್ಥಿಗಳಿಗಾಗಿ ನಡೆದ ` ಜೀವಶಾಸ್ತ್ರದಲ್ಲಿ ರಾಸಾಯನಿಕ ಸಂವಹನ’ ಕುರಿತ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ರಚನೆಗಳು ಮತ್ತು ಸೂತ್ರಗಳು ಇರುವ ರಸಾಯನಿಕ ಶಾಸ್ತ್ರದ ಪುಸ್ತಕಗಳನ್ನು ವಿದ್ಯಾರ್ಥಿಗಳು ದ್ವೇಷಿಸುವಂತಾಗಿದೆ. ಆದರೆ ಭಾಷೆಗಳ ಮೂಲಕ ಅರಿಯುವುದರೊಂದಿಗೆ ಅದನ್ನು ಸರಳವನ್ನಾಗಿಸಬಹುದು. ಉಗಿ (ಸ್ಟೀಂ) ರಾಸಾಯನಿಕ ಅಲ್ಲ ಎಂಬ ಐತಿಹಾಸಿಕ ತೀರ್ಪನ್ನು ಮುಂಬೈ ಹೈಕೋಟ್ ್ ಹಲವು ವರ್ಷಗಳ ಹಿಂದೆ ಪ್ರಕಟಿಸಿತ್ತು. ತೆರಿಗೆ ವಿನಾಯಿತಿಗೆ ವಿಚಾರದ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು : ವಿಭಿನ್ನ ಮತಕ್ಕೆ ಸೇರಿದ ವಿದ್ಯಾರ್ಥಿ ಜೋಡಿ ಐಸ್ ಕ್ರೀಂ ಪಾರ್ಲರಿನಲ್ಲಿರುವ ಬಗ್ಗೆ ಇರುವ ಮಾಹಿತಿ ಪಡದ ಉಳ್ಳಾಲ ಪೊಲೀಸರು ಹಿಂದು ಸಂಘಟನೆಗಳು ದಾಳಿನಡೆಸುವ ಮುನ್ನ ವಶಕ್ಕೆ ಪಡೆದುಕೊಂಡಿರುವ ಘಟನೆ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಬುಧವಾರ ನಡೆದಿದೆ. ಮಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಾದ ಮುಸ್ಲಿಂ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿ ಹಾಗೂ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿನಿ ಜತೆಯಾಗಿ ಬೈಕಿನಲ್ಲಿ ತೊಕ್ಕೊಟ್ಟು ಜಂಕ್ಷನ್ ಸಮೀಪ ಇರುವ ಐಸ್ ಕ್ರೀಂ ಪಾರ್ಲರಿಗೆ ಆಗಮಿಸಿತ್ತು. ಈ ಬಗ್ಗೆ ಮಾಹಿತಿ ಪಡೆದ ಹಿಂದು ಸಂಘಟನೆ ಕಾರ್ಯಕರ್ತರು ಪಾರ್ಲರ್ ಹೊರಗಡೆ ಜಮಾಯಿಸಲು ಆರಂಭಿಸುತ್ತಿದ್ದಂತೆ ಉಳ್ಳಾಲ ಪೊಲೀಸರಿಗೆ ಮಾಹಿತಿ ರವಾನೆಯಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿ ಇಬ್ಬರನ್ನು ವಿಚಾರಿಸಿ, ಎಚ್ಚರಿಕೆ ನೀಡಿ ಬಿಟ್ಟು ಬಿಟ್ಟಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಪಕ್ಷದಲ್ಲಿ ನಿಯತ್ತು , ಪ್ರಾಮಾಣಿಕತೆಯನ್ನು ಇರಿಸಿಕೊಂಡವರನ್ನು ಪಕ್ಷ ಒಂದು ರೀತಿಯಲ್ಲಿ ಗುರುತಿಸುತ್ತದೆ. ಈ ಮೂಲಕ ಪಕ್ಷದ ಗೌರವವನ್ನು ಉಳಿಸುವ ಕಾರ್ಯವನ್ನು ಚುನಾಯಿತ ಅಭ್ಯರ್ಥಿಗಳು ಮಾಡಬೇಕು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅವರು ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮುಡಿಪು ಆಡಿಟೋರಿಯಂನಲ್ಲಿ ಮಂಗಳವಾರ ಆಯೋಜಿಸಲಾದ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಭಿನಂದನೆ ಹಾಗೂ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ನಡೆದ ಕೃತಜ್ಞತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಬಿಜೆಪಿಯವರು ಪ್ರಚಾರದ ಮೂಲಕ ಮತ ಕೇಳಲು ಹೋಗುವುದಿಲ್ಲ. ಅಪಪ್ರಚಾರವನ್ನೇ ನಡೆಸುವ ಮೂಲಕ ಮತ ಯಾಚಿಸುತ್ತಿದ್ದಾರೆ. ಅದು ಅವರಿಗೆ ಕಂಠಕವಾಗಿ ಪರಿಣಮಿಸಿದೆ. ವಾಟ್ಸ್ಯ್‍ಪ್ ಸಂದೇಶದಿಂದ ಮತ ಬೀಳುವುದಿಲ್ಲ, ಬದಲಾಗಿ ಮನುಷ್ಯರೊಳಗಿನ ಸಂಬಂಧವನ್ನು ಅರಿತು, ಅವರ ಒಳಿತಿಗೆ ಪ್ರಯತ್ನಿಸಿದಾಗ ಮಾತ್ರ ಮತ ಸಿಗುತ್ತದೆ ಅನ್ನುವುದನ್ನು ಬಿಜೆಪಿಯವರು ಅರಿತುಕೊಳ್ಳಬೇಕಿದೆ ಎಂದ ಅವರು ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾಯಿತ ಅಭ್ಯರ್ಥಿಗಳು ಜನರ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಕೊಣಾಜೆ ಗಾಮದ ಪಟ್ಟೋರಿಯ ಶ್ರೀ ಪಟ್ಟೋರಿತ್ತಾಯ, ಪಿಲಿಚಾಮುಂಡಿ ಹಾಗೂ ಪರಿವಾರ ದೈವಗಳ ದೈವಸ್ಥಾನದ ನೂತನ ಗರ್ಭಗುಡಿ ಗೋಪುರ ಪುನರ್ ಪ್ರತಿಷ್ಠಾ ಬ್ರಹ್ಮಕಲಾಶಾಭಿಷೇಕದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಮಂಗಳವಾರ ಕೋಡಿ ಪಟ್ಟಿಸ್ಥಾನ ಪಟ್ಟೋರಿಯಲ್ಲಿ ನಡೆಯಿತು. ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ರಘುರಾಮ ಕಾಜವ ಪಟ್ಟೋರಿ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಪಟ್ಟೋರಿಯ ಶ್ರೀ ಪಟ್ಟೋರಿತ್ತಾಯ, ಪಿಲಿಚಾಮುಂಡಿ ಹಾಗೂ ಪರಿವಾರ ದೈವಗಳ ದೈವಸ್ಥಾನದ ಜೀರ್ಣೋದ್ದಾರದ ಕೆಲಸ ಭರದಿಂದ ನಡೆಯುತ್ತಿದ್ದು ಇದರ ನೂತನ ಗರ್ಭಗುಡಿ, ಗೋಪುರ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕವು ಹಾಗೂ ವರ್ಷಾವಧಿ ಸಾನದಾಯನ ಜಾತ್ರಾ ಮಹೋತ್ಸವು ಎ.20ರಿಂದ ಎ.23ರವರೆಗೆ ಕ್ಷೇತ್ರದಲ್ಲಿ ನಡೆಯಲಿದೆ. ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಜೀರ್ಣೋದ್ದಾರ ಸಮಿತಿಯ ಶ್ರೀನಿವಾಸ ಕಾಜವ ಪಟ್ಟೋರಿ, ಕೋಶಾಧಿಕಾರಿ ದಿವಾಕರ ಭಂಡಾರಿ, ಸಂಚಾಲಕರಾದ ಸಂತೋಷ್ ಕುಮಾರ್ ಶೆಟ್ಟಿ, ಪ್ರದಾನ ಕಾರ್ಯದರ್ಶಿ ರಾಮಕೃಷ್ಣ ಪಟ್ಟೋರಿ, ಕರುಣಾಕರ ಕಾನ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಂಗಳೂರು ವಿಭಾಗದ ನಿರ್ದೇಶಕರಾದ ಸುದೀರ್ ಕುಮಾರ್, ಯೋಜನಾಧಿಕಾರಿ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸೇವಾ ಸಂಘ (ಎಸ್‍ವೈಎಸ್) ಮುಡಿಪು ಸೆಂಟರ್ ಇದರ ಆಶ್ರಯದಲ್ಲಿ 13 ಆದರ್ಶ ಜೋಡಿಗಳ ಉಚಿತ ಸಾಮೂಹಿಕ ವಿವಾಹ ಸಮಾರಂಭವು ಮುಡಿಪು ಬಾಳೆಪುಣಿ ಪಂಚಾಯಿತಿ ಮೈದಾನದ ತಾಜುಲ್ ಉಲಮಾ ವೇದಿಕೆಯಲ್ಲಿ ಭಾನುವಾರ ನಡೆಯಿತು. ವಿವಾಹ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅಖಿಲಾ ಭಾರತ ಸುನ್ನೀ ಜಂಇಯತ್ತುಲ್ ಉಲಮಾ ಇದರ ಪ್ರದಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್, ಮನುಷ್ಯ ಮನುಷ್ಯನಾಗಿ ಜೀವಿಸಬೇಕಾದರೆ ಸಮುದಾಯದಲ್ಲಿರುವ ಕಡ್ಡಾಯ ಕಾರ್ಯಗಳನ್ನು ನೆರವೇರಿಸಬೇಕು. ಉಚಿತ ಸಾಮೂಹಿಕ ವಿವಾಹದಂತಹ ಉತ್ತಮ ಸಮಾಜಮುಖೀ ಕಾರ್ಯಗಳಿಗೆ ಪ್ರೋತ್ಸಾಹ ನೀಡಬೇಕು. ಇಂತಹ ಕಾರ್ಯಕ್ರಮಗಳಿಂದ ಬಹಳಷ್ಟು ಬಡಕುಟುಂಬಗಳ ಸಮಸ್ಯೆಗಳು ನಿವಾರಣೆಯಾಗಲು ಸಾಧ್ಯ ಎಂದು ಹೇಳಿದರು. ಸಾಮೂಹಿಕ ವಿವಾಹ ಸಮಾರಂಭದಲ್ಲಿ ಉಮ್ಮರುಲ್ ಫಾರೂಕ್ ಬೋಳಿಯಾರ್-ಜಮೀಲಾ ಕೊಳಕೆ, ಉಸ್ಮಾನ್ ಬರುವ-ರಮ್ಲತ್ ಸಾಬಿರಾ, ಮಹಮ್ಮದ್ ಅಬ್ದುಲ್ಲಾ ರಾಮನಗರ-ಝೀನತ್ ಬಡಕಜೆಕಾರು, ಮಹಮ್ಮದ್ ರಪೀಕ್ ಕಿನ್ಯಾ- ಆಯಿಶಾ ಕೆದುಮೂಲೆ, ಸಮೀರ್ ಗೋಳಿತೊಟ್ಟು ಪುತ್ತೂರು-ಅಫ್ಸಾ ಮುದುಂಗಾರು ಕಟ್ಟೆ, ಮಹಮ್ಮದ್ ಸಿರಾಝ್…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಶಿಕ್ಷಿತ ಮಾನವ ಸಂಪನ್ಮೂಲದ ಮಹತ್ವವನ್ನು ಮನಗಾಣುತ್ತಾ, ಮಾನ್ಯ ವಿತ್ತ ಮಂತ್ರಿಗಳು 2016-17ನೇ ವಾರ್ಷಿಕ ಆಯವ್ಯಯ ಪತ್ರದಲ್ಲಿ ಕೆಲವಾರು ಮಹತ್ವದ ಘೋಷಣೆಗಳನ್ನು ಮಾಡಿರುತ್ತಾರೆ. ಖಾಸಗಿ ಮತ್ತು ಸಾರ್ವಜನಿಕ ಕ್ಷೇತ್ರಗಳೆರಡರಲ್ಲೂ ಹತ್ತು ಜಾಗತಿಕ ಮಟ್ಟದ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿ ಪಡಿಸುವುದು, ದೇಶದಾದ್ಯಂತ 1500 ಬಹು ಕೌಶಲ್ಯ ಕೇಂದ್ರಗಳನ್ನು ಸುಮಾರು 1700 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದು, 1000 ಕೋಟಿ ರೂಪಾಯಿಯ ಹೂಡಿಕೆಯೊಂದಿಗೆ ಡಿಜಿಟಲ್ ರೆಪೆÇೀಸಿಟರಿಯನ್ನು ಸ್ಥಾಪಿಸುವುದು ಮುಂತಾದುವು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಬಲ್ಲ ಅಂಶಗಳು. ಇವುಗಳೊಂದಿಗೆ, ಸುಸ್ಥಿರ ಶೈಕ್ಷಣಿಕ ನೀತಿಗಳು ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ನಾಯಕತ್ವದ ಬೆಳವಣಿಗೆಗೆ ಸಹಕಾರಿಯಾಗಬಲ್ಲ ಸಂಸ್ಥೆಗಳ ಪ್ರಾಯೋಜಕತ್ವ ಬಹುಶಃ ಶೈಕ್ಷಣಿಕ ಕ್ಷೇತ್ರಕ್ಕೆ ವಿತ್ತ ಮಂತ್ರಿಗಳು ಕೊಡಮಾಡಬಲ್ಲ ಉತ್ಕೃಷ್ಟ ಕೊಡುಗೆಗಳಾಗಬಹುದಿತ್ತೇನೋ. ಡಾ|| ಎಂ.ಎಸ್. ಮೂಡಿತ್ತಾಯ ಕುಲಸಚಿವರು, ನಿಟ್ಟೆ ವಿಶ್ವವಿದ್ಯಾನಿಲಯ ಮಂಗಳೂರು
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಉಭಯ ಸಾಧಕರನ್ನು ಜೀವಮಾನ ಸಾಧನೆಗಾಗಿ ನಿಟ್ಟೆ ವಿವಿ ಹಾಗೂ ಕ್ಷೇಮ ಅಕಾಡೆಮಿಯಿಂದ ರಾಷ್ಟ್ರೀಯ ವಿಜ್ಞಾನ ಸಪ್ತಾಹ-2016ರಲ್ಲಿ ಸನ್ಮಾನಿಸುವ ಮೂಲಕ ನಿಟ್ಟೆ ವಿವಿ ಶ್ಲಾಘನೀಯ ಕಾರ್ಯ ನಿರ್ವಹಿಸಿದೆ. ಉಭಯ ಸಾಧಕರ ಹಿಂದಿನ ಶ್ರಮ, ಛಲ, ಸಂಶೋಧನಾ ಯಶಸ್ಸು ಎಲ್ಲವೂ ಕ್ಷೇಮ ಸಂಶೋಧನಾ ವಿದ್ಯಾರ್ಥಿಗಳ ವಿಜ್ಞಾನವನ್ನು ಹೆಚ್ಚಿಸುವಲ್ಲಿ ಬಹಳಷ್ಟು ಪ್ರಯೋಜನವಾಗಲಿದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಸಹ ಕುಲಾಪತಿ ಪ್ರೊ. ಡಾ| ಎಂ. ಶಾಂತಾರಾಮ್ ಶೆಟ್ಟಿ ಅಭಿಪ್ರಾಯಪಟ್ಟರು. ರಾಷ್ಟಿ ್ರೀಯ ವಿಜ್ಞಾನ ಸಪ್ತಾಹ-2016 ಅಂಗವಾಗಿ ದೇರಳಕಟ್ಟೆಯ ಕ್ಷೇಮ ಮೆಡಿಕಲ್ ಆಕಾಡೆಮಿಯ ಸೆಮಿನಾರ್ ಹಾಲ್‍ನಲ್ಲಿ ನಿಟ್ಟೆ ವಿಶ್ವವಿದ್ಯಾಲಯ ಹಾಗೂ ಕ್ಷೇಮ ಮೆಡಿಕಲ್ ಅಕಾಡೆಮಿ ಜಂಟಿ ಆಶ್ರಯದಲ್ಲಿ ಸೋಮವಾರ ನಡೆದ ವೈದ್ಯಕೀಯ ಕ್ಷೇತ್ರದಲ್ಲಿನ ಜೀವಮಾನ ಸಾಧನೆಗಾಗಿ ಉಭಯ ಸಾಧಕರಾದ ವೆಲ್ಲೂರು ಸಿಎಂಸಿಯ ಮೆಡಿಸಿನ್ ವಿಭಾಗದ ನಿವೃತ್ತ ಪ್ರೊ ಡಾ| ವಿ. ಐ. ಮಥನ್ ಹಾಗೂ ಪ್ರೊ. ಡಾ| ಮಿನ್ನಿ ಮಥನ್ ಅವರನ್ನು ಸನ್ಮಾನಿಸಿ ಮಾತನಾಡಿದರು. ಯಾವುದೇ…

