ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕಣಚೂರು: ರಾಜ್ಯದಲ್ಲಿ ಶಿಶು ಮರಣ ಪ್ರಮಾಣ ಒಂದು ವರ್ಷದಲ್ಲಿ 140 ರಿಂದ 131ಕ್ಕೆ ಇಳಿಕೆಯಾಗಿದ್ದು, ಸರಕಾರ ಹೆರಿಗೆ ಮತ್ತು ಶಿಶು ಅಭಿವೃದ್ಧಿಗಾಗಿ ಖಾಸಗಿ ಆಸ್ಪತ್ರೆಗಳ ಜತೆಗೆ ಸೇರಿಕೊಂಡು ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅವರು ನಾಟೆಕಲ್ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಬುಧವಾರ ನಡೆದ ಕಣಚೂರು ಶಿಶು ಭವಿಷ್ಯ ನಿಧಿಗೆ ಚಾಲನೆ ನೀಡಿ ಮಾತನಾಡಿದರು. ಹೆರಿಗೆ ಸಮಯದಲ್ಲಿ ತಾಯಿ ಮಗು ಆರೋಗ್ಯಯುತವಾದಲ್ಲಿ ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯ. ಹೆರಿಗೆ ಸಂಬಂಧಿಸಿ ಉಚಿತ ಸವಲತ್ತುಗಳನ್ನು ನೀಡಿ, ಅದೇ ಮಕ್ಕಳು ದೊಡ್ಡವರಾದ ಬಳಿಕವೂ ಸಹಕರಿಸುವ ಕಣಚೂರು ಸಂಸ್ಥೆಯ ಯೋಜನೆ ಗ್ರಾಮೀಣ ಭಾಗದ ಜನರಿಗೆ ತುಂಬಾ ಸಹಕಾರಿಯಾಗಲಿದೆ. ಗ್ರಾಮೀಣ ಭಾಗಗಳಲ್ಲಿ ಆಸ್ಪತ್ರೆ ಸ್ಥಾಪಿಸಿ ಅಲ್ಲಿನ ಜನರಿಗೆ ಆರೋಗ್ಯ ಒದಗಿಸುವ ಕಾರ್ಯ ನಡೆಸುವ ಸಂಸ್ಥೆಯ ಕಾರ್ಯ ಶ್ಲಾಘನೀಯ. ರಾಜ್ಯದಲ್ಲಿ 2014ರಲ್ಲಿ ಶಿಶು ಮರಣದ ಸಂಖ್ಯೆ 140 ರಷ್ಟು ಇದ್ದು,…
Author: UllalaVani
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಈ ನೆಲದ ಅನ್ನ ತಿಂದು, ನೀರು ಕುಡಿದು ಕೆಲ ವಿಕೃತ ಮನಸ್ಸುಗಳು ದೇಶವನ್ನು ತುಂಡರಿಸುವ ಮಾತುಗಳನ್ನು ಆಡಿದರೆ ಯಾವ ದೇಶಪ್ರೇಮಿ ತಾನೆ ಸುಮ್ಮನಿರಲು ಸಾಧ್ಯ ಎಂದು ಕನ್ನಡ ವಿಭಾಗದ ವಿದ್ಯಾರ್ಥಿ ಶ್ಯಾಮ್ ಪ್ರಸಾದ್ ಹೇಳಿದರು. ದೆಹಲಿಯ ಜೆಎನ್‍ಯು ವಿವಿಯಲ್ಲಿ ನಡೆದ ರಾಷ್ಟ್ರವಿರೋಧಿ ಹೇಳಿಕೆಯನ್ನು ವಿರೋಧಿಸಿ ಕೊಣಾಜೆಯ ಮಂಗಳೂರು ವಿವಿಯ ಪ್ರವೇಶದ್ವಾರದಿಂದ ಮಂಗಳಾ ಸಭಾಂಗಣದ ವರೆಗೆ ರಾಷ್ಟ್ರ ಧ್ವಜ ಹಿಡಿದುಕೊಂಡು ಬುಧವಾರ ನಡೆದ ತಿರಂಗಾ ರ್ಯಾಲಿಯಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಸುಕ್ಷಿತಾ ರಾವ್ ಅವರು ಈ ದೇಶವನ್ನು ತುಂಡರಿಸುವ ಮಾತುಗಳನ್ನಾಡುವ ಕೆಲ ಒಡಕಿನ ಧ್ವನಿಗಳಿಗೆ ಉತ್ತರವಾಗಿ ಸಾವಿರ ಸಾವಿರ ಯಾಕೂಬ್ ಅಥವಾ ಅಫ್ಜಲ್‍ನಿಂದ ಸಾಧ್ಯವಿಲ್ಲ ಎಂದರು. ನಮ್ಮ ಹೆಮ್ಮೆಯ ಭಾರತಾಂಬೆ ಬಂಜೆಯಲ್ಲ ಆಕೆ ನಮ್ಮಂತಹ ಸಾವಿರಾರು ದೇಶಪ್ರೇಮಿಗಳನ್ನು ಹುಟ್ಟುಹಾಕಿದ್ದಾರೆ. ನಮ್ಮ ದೇಶದಲ್ಲಿದ್ದುಕೊಂಡೇ ಪ್ರತ್ಯೇಕ ಕಾಶ್ಮೀರ ಬಗ್ಗೆ ಬೇಡಿಕೆ, ಜೊತೆಗೆ ಅಫ್ಜಲ್‍ಗುರುವಂತಹ ವಿರೋಧಿಗಳಿಗೆ ಬೆಂಬಲ ಸೂಚಿಸುವ ಕೆಲವು ವಿಕೃತ ಮನಸ್ಸುಗಳನ್ನು ದೂರವಿಡಬೇಕು ಎಂದು…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಪಾನೀರು: ವಿಶ್ವವಿದ್ಯಾನಿಲಯಗಳಲ್ಲಿ ಕಲೆ ಆಧಾರಿತ ಚಲನಚಿತ್ರಗಳ ಅಧ್ಯಯನದ ಬಗ್ಗೆ ಹೆಚ್ಚಿನ ಒಲವು ನೀಡಬೇಕಿದ್ದು, ವಿದೇಶದ ವಿ.ವಿಗಳಲ್ಲಿ ಹಾಲಿವುಡ್ ಚಿತ್ರಗಳಿಗೆ ಇರುವಂತೆ ಚಲನಚಿತ್ರ ಸಕ್ರ್ಯೂಟ್‍ಗಳ ಸ್ಥಾಪನೆ ದೇಶದಲ್ಲಿಯೂ ಆಗುವ ಮೂಲಕ ಚಲನಚಿತ್ರಗಳು ಮನರಂಜನೆಗೆ ಮಾತ್ರವಲ್ಲ ಯುವಸಮುದಾಯದ ವಿಕಸನಕ್ಕೂ ದಾರಿಯಾಗಬೇಕು ಎಂದು ಮೂರು ರಾಷ್ಟ್ರಪ್ರಶಸ್ತಿ ಪುರಸ್ಕøತ ಚಲನಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ತಿಪಟೂರಿನ ಬಿ.ಯಸ್.ಲಿಂಗದೇವರು ಅಭಿಪ್ರಾಯಪಟ್ಟರು. ಅವರು ನಿಟ್ಟೆ ವಿಶ್ವವಿದ್ಯಾನಿಲಯದ ಸಮೂಹ ಮಾಧ್ಯಮದ ವತಿಯಿಂದ ದೇರಳಕಟ್ಟೆ ಪಾನೀರು ಕ್ಯಾಂಪಸ್ಸಿನಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಮೀಡಿಯ ಫೆಸ್ಟ್ -2016 ಕ್ಕೆ ಚಾಲನೆ ನೀಡಿ ಮಾತನಾಡಿದರು. ಶಿಕ್ಷಣ ವ್ಯವಸ್ಥೆ ಕಾರ್ಖಾನೆಗಳ ರೀತಿಯಲ್ಲಿ ಕಾರ್ಯಚರಿಸುತ್ತಿದೆ. ಶಿಕ್ಷಣ ಪಡೆದುಕೊಂಡವರು ಸಾಮಾನ್ಯ ಜ್ಞಾನವನ್ನು ಪಡೆಯದೆ ಸೀಮಿತ ಕ್ಷೇತ್ರಗಳಲ್ಲಿ ಮಾತ್ರ ಉಳಿದುಕೊಳ್ಳುತ್ತಿದ್ದಾರೆ. ಇಂದು ವಿದ್ಯುನ್ಮಾನ ಮಾಧ್ಯಮಗಳು ಮತ್ತು ಚಲನಚಿತ್ರಗಳು ವೈಯಕ್ತಿಕ ವರ್ತನೆಗಳನ್ನು ಬದಲಾಯಿಸುವತ್ತ ಪ್ರಭಾವ ಬೀರುತ್ತಿದೆ. ಸಿನಿಮಾ ಅಧ್ಯಯನದ ಕಾಲೇಜುಗಳು ಹಲವು ಇದೆ. ಆದರೆ ಚಲನಚಿತ್ರಗಳ ಶಾಸ್ತ್ರೀಯ ಅಭ್ಯಾಸ ಮಾಡುವ ಯಾವುದೇ ಕಾಲೇಜುಗಳಿಲ್ಲ. ಕಲೆ ಆಧಾರಿತವಾಗಿರಬೇಕಾದ ಚಿತ್ರಗಳು ಫ್ಯಾಷನ್…
ಉಳ್ಳಾಲ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ವಿದ್ಯಾರ್ಥಿ ಜೀವನದಲ್ಲಿ ಕಾಲೇಜಿನ ಕ್ಲಾಸ್ ರೂಂ ಮತ್ತು ಪುಸ್ತಕದಲ್ಲಿ ಸಿಗುವ ಜ್ಞಾನದೊಂದಿಗೆ ಕ್ರೀಡಾಂಗಣದಲ್ಲಿ ಸಿಗುವ ಜ್ಞಾನವು ಸೇರಿದರೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾ„ಪತಿ ಪ್ರೊ. ಡಾ| ಶಾಂತಾರಾಮ ಶೆಟ್ಟಿ ಅಬಿಪ್ರಾಯಪಟ್ಟರು. ಅವರು ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಆಡಿಟೋರಿಯಂನಲ್ಲಿ ದಕ್ಷಿಣ ಭಾರತ ಮಟ್ಟದ ದಂತ ಮತ್ತು ವೈದ್ಯಕೀಯ ವಿಜ್ಞಾನ ಕಾಲೇಜುಗಳ ಅಂತರ್ ಕಾಲೇಜು ಕ್ರೀಡಾಕೂಟ ` 6ನೇ ನಿಟ್ಟೆ ಎಕೋಲೇಟ್ಸ್ 2016′ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಪುಸ್ತಕಗಳು ನಮ್ಮ ಜೀವನದಲ್ಲಿ ಅತೀ ಮುಖ್ಯ ಅಲ್ಲ. ಹೊಸ ಹೊಸ ತಂತ್ರಜ್ಞಾನಗಳ ಜ್ಞಾನ ಅಗತ್ಯ ಅದರೊಂದಿಗೆ ಕ್ರೀಡಾಕೂಟದಲ್ಲಿ ಬೇರೆ ಬೇರೆ ಕಾಲೇಜುಗಳ ವಿದ್ಯಾರ್ಥಿಗಳು, ಒದೆಡೆ ಸೇರಿದಾಗ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು, ಸೋಲು, ಗೆಲುವಿನ ಬಗ್ಗೆ ಚಿಂತನೆ ನಡೆಸಲು ಸಹಕಾರಿ. ಕ್ರೀಡೆಯಲ್ಲಿ ಸೂಲು ಗೆಲವು ಸಹಜ ಆದರೆ ಅದರೊಂದಿಗೆ ಮುಂದಿನ ದಿನಗಳಲ್ಲಿ ಸೋಲನ್ನು ಸವಾಲಾಗಿ ಸ್ವೀಕರಿಸಿ ಗೆಲುವು ಸಾ„ಸುವ ಪ್ರಯತ್ನ ಅತೀ ಮುಖ್ಯ ಎಂದರು.…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಟೂರಿಸ್ಟ್ ವಾಹನಗಳಿಗೆ ಸಿಗುವ ಬಾಡಿಗೆಗೆ ಕಲ್ಲು ಹಾಕುವ ಕೆಲಸವನ್ನು ಪರ್ಮಿಟ್ ಇರುವ ವಾಹನಗಳು ಮಾಡುತ್ತಿದ್ದರೂ, ಅದರ ವಿರುದ್ಧ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳು ಅವರ ಜತೆಗೆ ಶಾಮೀಲಾಗಿ ಸರಕಾರಕ್ಕೆ ಮೋಸ ಮಾಡುತ್ತಿದ್ದಾರೆ. ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡುವುದರ ಜತೆಗೆ ಜಿಲ್ಲೆಯಾದ್ಯಂತ ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಹಾಗೂ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಷನ್ನಿನ ಜಿಲ್ಲೆ ಅಧ್ಯಕ್ಷ ಮೋನಪ್ಪ ಭಂಡಾರಿ ಹೇಳಿದ್ದಾರೆ. ಅವರು ತೊಕ್ಕೊಟ್ಟು ಟೂರಿಸ್ಟ್ ಕಾರು ಮತ್ತು ವ್ಯಾನ್ ಚಾಲಕ ಮಾಲಕರ ಸಂಘದ ವತಿಯಿಂದ ಪರವಾನಿಗೆ ಇಲ್ಲದ ಬಸ್ಸುಗಳು ಮತ್ತು ಖಾಸಗಿ ಕಾರುಗಳು ಪ್ರವಾಸಿ ಬಾಡಿಗೆ ಮಾಡುವುದರ ವಿರುದ್ಧವಾಗಿ ಮಂಗಳವಾರ ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ ಹಮ್ಮಿಕೊಂಡ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದರು. ಟ್ರಿಪ್ ನಿಲ್ಲಿಸಿ ಬಾಡಿಗೆ ನಡೆಸುವ ಬಸ್ಸುಗಳ ಪರ್ಮಿಟ್ ರದ್ದುಗೊಳಿಸಬೇಕಾದ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಸರಕಾರಿ ಅಧಿಕಾರಿಗಳು ಬಸ್ಸು ಮಾಲೀಕರ ಜತೆಗೆ ಶಾಮೀಲಾಗಿ ಲಂಚ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ದೇರಳಕಟ್ಟೆ ವೈದ್ಯಕೀಯ ಕಾಲೇಜು ವಿದ್ಯಾರ್ಥಿ ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕೇರಳ ಕಣ್ಣೂರಿನ ಪಯ್ಯಂಬಲ್ ರಾಯಲ್ ಹೆಲೆನ್ ಫ್ಲಾಟಿನ ನಿವಾಸಿ ವಿನೋದ್ ವರ್ಗೀಸ್ ಎಂಬವರ ಪುತ್ರ ಮ್ಯಾಥ್ಯಿವ್ ವರ್ಗೀಸ್ (20) ಮೃತ ವಿದ್ಯಾರ್ಥಿ. ಇವರು ದೇರಳಕಟ್ಟೆ ಖಾಸಗಿ ಕಾಲೇಜಿನಲ್ಲಿ ತೃತೀಯ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದರು. ಮಾ.4 ಶುಕ್ರವಾರ ದೇರಳಕಟ್ಟೆಯಿಂದ ಕುತ್ತಾರು ಕಡೆಗೆ ತೆರಳುತ್ತಿದ್ದಾಗ ಮ್ಯಾಥಿವ್ ಚಲಾಯಿಸುತ್ತಿದ್ದ ಕಾರು ನಿತ್ಯಾನಂದನಗರ ಸಮೀಪ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿತ್ತು. ಪರಿಣಾಮ ಮ್ಯಾಥಿವ್ ಮತ್ತು ಸಂಶಾದ್ ಎಂಬವರು ಗಂಭೀರವಾಗಿ ಗಾಯಗೊಂಡರೆ, ಜಾರ್ಜ್ ರೋಹನ್, ಕೌಶಿಕ್ ಥೋಮಸ್, ರಾಜು ಎಂಬವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸದ್ಯ ಚೇತರಿಸುತ್ತಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ವಿದ್ಯಾರ್ಥಿ ಹೆತ್ತವರು ವಿನೋದ್ ವರ್ಗೀಸ್ ದಂಪತಿ ಇಬ್ಬರು ಕೇರಳದಲ್ಲಿ ಖ್ಯಾತ ವೈದ್ಯರಾಗಿದ್ದು, ಕಿರಿಯ ಸಹೋದರಿ ದೇರಳಕಟ್ಟೆಯಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯನ್ನು ಅಗಲಿದ್ದಾರೆ.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಸೋಮೇಶ್ವರ: ಸೋಮೇಶ್ವರದ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ಸಾವಿರಾರು ಭಕ್ತರು ಬೆಳಗ್ಗಿನಿಂದ ದೇವರ ದರ್ಶನ ಪಡೆದು ರಾತ್ರಿ ಜಾಗರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ವಿವಿಧ ಸಂಘದ ಹಾಗೂ ಭಜನಾ ಮಂಡಳಿಗಳ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಸಜಿಪ: ಮಂಗಳೂರು ವಿಧಾನಸಭಾ ಕ್ಷೇತ್ರದ ಸಜಿಪನಡು ಗ್ರಾಮದ ಅತೀ ಎತ್ತರವಾದ ಪ್ರದೇಶದಲ್ಲಿರುವ ಕಂಚಿನಡ್ಕ ಪದವು ಸೈಟ್ ನಿವಾಸಿಗಳಿಗೆ ಮೂಲಭೂತ ಸೌಕರ್ಯದ ಕೊರತೆಯನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡುತ್ತಿದ್ದು, ರಸ್ತೆ ನಿರ್ಮಾಣ ಸೇರಿದಂತೆ ಕೆಲವೊಂದು ಮೂಲಭೂತ ಸೌಕರ್ಯವನ್ನು ಈಗಾಗಲೇ ಯಶಸ್ವಿಯಾಗಿ ನಡೆಸಿದೆ. ಆದರೆ ನೀರಿನ ಸಮಸ್ಯೆ ಪರಿಹಾರವಾಗಿರಲಿಲ್ಲ. ಹೆಲ್ಪ್ ಇಂಡಿಯಾ ಸಂಸ್ಥೆಯ ರಾಝಿಕ್ ಉಳ್ಳಾಲ್ ಸಮಾಜಕ್ಕೆ ಕೊಡುಗೆಯಾಗಿ ದಾನಿಯೋರ್ವರು ನೀರಿನ ಶಾಶ್ವತ ಯೋಜನೆಯನ್ನು ಮಾಡುವ ಇರಾದೆಯನ್ನು ತಿಳಿಸಿದ್ದರು. ಈ ಹಿನ್ನಲೆಯಲ್ಲಿ ರಾಝಿಕ್ ಅವರಿಗೆ ಈ ಸ್ಥಳದಲ್ಲಿ ನೀರಿನ ಶಾಶ್ವತ ಯೋಜನೆ ನಡೆಸಲು ಕೇಳಿಕೊಂಡತೆ ಬಾವಿ ನಿರ್ಮಾಣ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಸೈಟ್ ನಿವಾಸಿಗಳ ಉಪಯೋಗಕ್ಕೆ ಬಿಟ್ಟು ಕೊಟ್ಟಿದ್ದು, ಈ ಬಾವಿಯನ್ನು ಇಲ್ಲಿನ ನಿವಾಸಿಗಳು ಸಮಾಜದ ಆಸ್ತಿ ಸಂಪತ್ತಿನಂತೆ ರಕ್ಷಿಸುವ ಕಾರ್ಯ ಮಾಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಆಭಿಪ್ರಾಯಪಟ್ಟರು. ಅವರು ಸಜಿಪ ಗ್ರಾಮದ ಕಂಚಿನಡ್ಕಪದವು ಸೈಟ್ ನಿವಾಸಿಗಳಿಗೆ ಹೆಲ್ಪ್ ಇಂಡಿಯಾ ಫೌಂಡೇಶನ್ ವತಿಯಿಂದ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಪಜೀರು: ದೇಶದಲ್ಲಿ ಅನಾದಿಕಾಲದಿಂದಲೂ ಗೋವಿನ ಬಗ್ಗೆ ಪೂಜ್ಯನೀಯ ಭಾವವನ್ನು ಬೆಳೆಸಿಕೊಂಡು ಬಂದ ಸಂಸ್ಕøತಿ ನಮ್ಮದು. ತಾಯಿಯ ರೂಪದಲ್ಲಿ ನಾವು ಕಾಣುವ ಗೋವು ಅದು ದೇಶದ ಸಂಪತ್ತು ಆಗಿದೆ. ಆದರೆ ನಾವು ಗೋವಿನ ಬದಲು ಹುಲಿಯನ್ನು ರಾಷ್ಟ್ರೀಯ ಪ್ರಾಣಿ ಎಂದು ಕರೆದಿರುವುದು ವಿಪರ್ಯಾಸ. ಇನ್ನಾದರೂ ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವ ಕೆಲಸ ಆಗಬೇಕಾಗಿದೆ ಜೊತೆಗೆ ಗೋಹತ್ಯೆ ನಿಷೇದ ಕಾನೂನನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕಾದ ಅನಿವಾರ್ಯತೆ ಇದೆ ಎಂದು ವಿಶ್ವಹಿಂದೂ ಪರಿಷತ್‍ನ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಗೋಪಾಲ್‍ಜೀ ಅವರು ಹೇಳಿದರು. ಅವರು ಪಜೀರು ಬೀಜಗುರಿಯ ಗೋವನಿತಾಯ ಟ್ರಸ್ಟ್‍ನ 16 ನೇ ವರ್ಷಾಚರಣೆ ಅಂಗವಾಗಿ ನೂತನ ಗೊಶಾಲೆಯ ಶಿಲಾನ್ಯಾಸ ಕಾರ್ಯಕ್ರಮದ ಅಂಗವಾಗಿ ಭಾನುವಾರ ನಡೆದ ಸ¨ssÁ ಕಾರ್ಯಕ್ರಮದಲ್ಲಿ `ಗೋ ಸಂತತಿಯ ಅಭಿವೃದ್ದಿಯಲ್ಲಿ ಸಂಘ ಸಂಸ್ಥೆಗಳ ಪಾತ’್ರ ಎಂಬ ವಿಷಯದಲ್ಲಿ ಅವರು ಮಾತನಾಡಿದರು. ದೇಶೀ ಹಸುವಿನ ಹಾಲು ಅದು ಅಮೃತ ಇದ್ದ ಹಾಗೆ. ಆದ್ದರಿಂದ ದೇಶಿ ಹಸುಗಳ ಸಂರಕ್ಷಣೆಯ ಜೊತೆಗೆ ಗೋವಿನ ಮಹತ್ವದ…
ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಅಸೈಗೊಳಿ: ಇತ್ತೀಚಿಗೆ ಫೇಸ್‍ಬುಕ್, ವಾಟ್ಸ್ ಆ್ಯಪ್ ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕ ಯುವಕರು ತಪ್ಪು ದಾರಿ ಹಿಡಿಯುವುತ್ತಿರುವ ಉದಾಹರಣೆ ಬಹಳಷ್ಟು ಇದೆ. ಆದರೆ ಕೆಲವೊಮ್ಮೆ ಇಂತಹ ಸಾಮಾಜಿಕ ಜಾಲತಾಣಗಳು ಸಮಾಜದಲ್ಲಿ ಕಷ್ಟದಲ್ಲಿರುವವರ ಕಣ್ಣೀರೊರೆಸುವ ಕೆಲಸಗಳಿಗೆ ಉಪಯೋಗವಾಗುತ್ತಿರುವುದನ್ನು ನಾವು ಕಾಣಬಹುದು. ಕಳೆದ ಕೆಲವು ದಿನಗಳ ಹಿಂದೆ ಬೈಕ್ ಅಪಘಾತವಾಗಿ ಆಸ್ಪತ್ರೆಯಲ್ಲಿ ಗಂಭೀರವಾಗಿದ್ದ ಬಡ ಕುಟುಂಬದ ಯುವಕನಿಗೆ ಹತ್ತಾರು ಯುವಕರು ಸೇರಿಕೊಂಡು ರಚಿಸಿದ್ದ ವಾಟ್ಸ್ ಆ್ಯಪ್ ಬಳಗವೊಂದು ಮಾನವೀಯತೆಯ ನೆಲೆಯಲ್ಲಿ ಆತನ ನೆರವಿಗೆ ನಿಂತು ಆರ್ಥಿಕ ಸಹಾಯ ಮಾಡಿದೆ. ಅಸೈಗೊಳಿಯ ಫರ್ನಿಚರ್ ಅಂಗಡಿಯೊಂದರಲ್ಲಿ ಮರದ ಕೆಲಸ ಮಾಡಿಕೊಂಡಿದ್ದ ಪಾವೂರಿನ ದೀಕ್ಷಿತ್ ಎಂಬ ಯುವಕ ಇತ್ತೀಚೆಗೆ ಬೈಕ್ ಅವಘಡ ಸಂಭವಿಸಿ ಆಸ್ಪತ್ರೆಗೆ ದಾಖಲಾಗಿದ್ದ. ಅಪಘಾತದಲ್ಲಿ ತಲೆಯ ಭಾಗಕ್ಕೆ ಬಲವಾದ ಏಟು ಬಿದ್ದು ಗಂಭೀರ ಗಾಯವಾಗಿತ್ತು. ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ದೀಕ್ಷಿತ್‍ನನ್ನು ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೊಲಸೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆಗೆ ಹಣ ಕಟ್ಟಲು…

