Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕಿನ್ಯ: ಕಿನ್ಯ ಬೆಳರಿಂಗೆಯ ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಪುನ:ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ, ಧರ್ಮನೇಮೋತ್ಸವದ ಅಂಗವಾಗಿ ತಲಪಾಡಿ ದೇವಿಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಕಿನ್ಯ ಬೆಳರಿಂಗೆಯ ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ದೈವಸ್ಥಾನದವರೆಗೆ ನಡೆದ ಹೊರೆ ಕಾಣಿಕೆ ಮೆರವಣಿಗೆಗೆ ಮುಸ್ಲಿಮರು ತಂಪು ಪಾನೀಯ ನೀಡುವುದರ ಮೂಲಕ ಸಾಮರಸ್ಯ ಮೆರೆದದರು. ಕಿನ್ಯಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿರಾಜ್ ಕಿನ್ಯಾ ನೇತೃತ್ವದಲ್ಲಿ ಹೊರೆಕಾಣಿಕೆಯಲ್ಲಿ ಪಾಲ್ಗೊಂಡವರಿಗೆ ತಂಪು ಪಾನೀಯ ನೀಡಲಾಯಿತು. ಹಲವು ಕಿ.ಮೀ ನಡೆಯುತ್ತಾ ಸಾಗಿದ ಹಿಂದೂ ಭಕ್ತಾಧಿಗಳಿಗೆ ತಂಪು ಪಾನೀಯವನ್ನು ವಿತರಿಸಲಾಯಿತು. ಪ್ರತೀ ಎಲ್ಲಾ ಜಾತಿ ಧರ್ಮದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದರ ಮುಖೇನ ಭಾಗದ ಜನ ಸೌಹಾರ್ದತೆ ಜತೆಗೆ ಪ್ರೀತಿಯಿಂದ ಬದುಕುತ್ತಿದ್ದೇವೆ. ಇಂತಹ ಸಂಬಂಧವನ್ನು ಗಟ್ಟಿಗೊಳಿಸುವುದು ಇಂತಹ ಕಾರ್ಯಕ್ರಮಗಳಿಂದ ಸಾಧ್ಯ ಎಂದು ಸಿರಾಜ್ ಹೇಳಿದರು. ಈ ವೇಳೆ ಕಿನ್ಯಾ ಗ್ರಾ. ಪಂ ಸದಸ್ಯರಾದ ಮಹಮ್ಮದ್, ಅಬುಸಾಲಿ, ಮಹಾಬಲ ಪೂಂಜಾ, ಫಾರುಕ್ ಕಿನ್ಯಾ ಮೊದಲಾದವರು ತಂಪುಪಾನೀಯ ಹಂಚುವ ನೇತೃತ್ವ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಪಿಲಾರ್: ಬೆಂಗಳೂರಿನ ರಾಜೀವ ಗಾಂಧಿ ವಿಶ್ವವಿದ್ಯಾಲಯದಲ್ಲಿ ನಡೆದ ವೈದ್ಯಕೀಯ ಸ್ನಾತ್ತಕೋತ್ತರ ಪರೀಕ್ಷೆಯಲ್ಲಿ ಫಾರೆನಿಕ್ಸ್ ಮೆಡಿಸಿನ್ ವಿಭಾಗದ ಪಿಲಾರ್ ಅಂಬಿಕಾರೋಡ್ ನಿವಾಸಿ ಡಾ.ಶೃತಿ.ಪಿ ಎಂಟನೇ ರ್ಯಾಂಕನ್ನು ಗಳಿಸಿರುತ್ತಾರೆ. ವರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಪೂರೈಸಿದ್ದು, ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತ್ತಕೋತ್ತರ ಪದವಿಯನ್ನು ಪಡೆದಿದ್ದರು. ಸದ್ಯ ಚೆನ್ನೈನ ಸವೀತಾ ವೈದ್ಯಕೀಯ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಕೋಟೆಕಾರು ಸಿಂಡಿಕೇಟ್ ಬ್ಯಾಂಕಿನ ಉಪಪ್ರಬಂಧಕ ಪ್ರಭಾಕರ್ ಕೆ. ಮತ್ತು ಶಾರದಾ ದಂಪತಿ ಪುತ್ರಿ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಜನಾಡಿ: ರಾಜ್ಯದಲ್ಲಿಯೇ ಮೊದಲ ಬಾರಿ ಮಂಜನಾಡಿ ಪಂಚಾಯಿತಿಗೆ ಉಳಿದ ಪಂಚಾಯಿತಿಗಳಿಗಿಂತ ಹೆಚ್ಚುವರಿ ಅನುದಾನ ಮಂಜೂರಾಗಿದ್ದು, ಇದು ಹೆಚ್ಚು ಜನಸಂಖ್ಯೆ ಇರುವ ಮಂಜನಾಡಿ ಗ್ರಾಮದ ಅಭಿವೃದ್ಧಿಗೆ ಸಚಿವರ ಶ್ರಮದಿಂದ ದೊರೆತ ಕೊಡುಗೆ ಎಂದು ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಾಹಕ ಅಭಿಯಂತರ ಎ.ಯಸ್.ರಾವ್ ಅಭಿಪ್ರಾಯಪಟ್ಟರು. ಅವರು ಮಂಜನಾಡಿ ಗ್ರಾಮ ಪಂಚಾಯತ್ ಗ್ರಾಮ ವಿಕಾಸ ಯೋಜನೆ ಬಗ್ಗೆ ಮಂಜನಾಡಿಯ ಮಂಗಳಾಂತಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಜರಗಿದ ವಿಶೇಷ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯದ ಎಲ್ಲಾ ಪಂಚಾಯಿತಿಗೆ ರೂ. 75 ಲಕ್ಷ ಅನುದಾನ ಮಂಜೂರಾಗಿದೆ. ಆದರೆ ಮಂಜನಾಡಿ ಪಂಚಾಯಿತಿಗೆ ರೂ. 1.5 ಕೋಟಿ ಅನುದಾನವನ್ನು ಮಂಜೂರುಗೊಳಿಸಲಾಗಿದೆ. ಇದು ಹೆಚ್ಚು ಜನಸಂಖ್ಯೆ ಇರುವ ಮಂಜನಾಡಿ ಗ್ರಾಮದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಗ್ರಾಮದ ಜನರ ಪ್ರಸ್ತಾವನೆ ಪಡೆದು ಶಾಸಕರು ರಾಜ್ಯದಲ್ಲಿ ಪ್ರಥಮ ಬಾರಿ ಒಂದು ಪಂಚಾಯಿತಿಗೆ ದೊಡ್ಡ ಮೊತ್ತದ ಅನುದಾನವನ್ನು ದೊರಕಿಸಿದ್ದಾರೆ. ಸರಕಾರ ಸಾಮಾಜಿಕ ಆಡಿಟ್ ಅನ್ನುವ ಕಾನೂನು ಜಾರಿಗೆ ತಂದಿದ್ದು, ಇದರಲ್ಲಿ ಜನರೇ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಕನಕದಾಸರ ನಂಟು ಇರುವ ಕರಾವಳಿಯಲ್ಲಿ ಇಂದು ದೌರ್ಜನ್ಯ, ಹಿಂಸೆಗಳೂ ಹೆಚ್ಚುತ್ತಿದ್ದು, ಇಂದಿನ ಕರಾವಳಿ ಮೊದಲಿನ ಕರಾವಳಿಯಾಗಿ ಉಳಿದಿಲ್ಲ ಎಂಬುದು ಆತಂಕದ ವಿಷಯವಾಗಿದೆ. ಇಂತಹ ಸಂದರ್ಭದಲ್ಲಿ ಕನಕದಾಸರ ನೆನಪು ಮತ್ತು ಅವರ ಚಿಂತನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದು ಪತ್ರಕರ್ತೆ ಡಾ.ಆರ್.ಪೂರ್ಣಿಮಾ ಅವರು ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ವಿವಿಯ ಹಳೆಸೆನೆಟ್ ಸಭಾಂಗಣದಲ್ಲಿ ಗುರುವಾರ ನಡೆದ `ಕನಕಗಂಗೋತ್ರಿ’ ಕನಕದಾಸರ ಕೀರ್ತನ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತವು ಬಹುತ್ವದ ನೆಲೆಯಲ್ಲಿ ಬೆಳೆದಿರುವಂತಹ ದೇಶವಾಗಿದ್ದು, ಇಲ್ಲಿಯ ಸಂಸ್ಕøತಿ, ಧರ್ಮ ಮುಂತಾದವುಗಳು ಬಹುತ್ವದ ಸ್ವರೂಪದಲ್ಲಿರುವುದನ್ನು ನಾವು ಗಮನಿಸಬಹುದಾಗಿದೆ. ದೇಶದಲ್ಲಿ ಹಿಂದಿನಿಂದಲೂ ಜಾತಿ, ಅಧಿಕಾರ, ಶೋಷಣೆಯ ವಿರುದ್ದ ಸಂಘರ್ಷಗಳು ನಡೆದಿರುವದನ್ನು ನಾವು ಇತಿಹಾಸದ ಮೂಲಕ ಅರಿತುಕೊಳ್ಳುತ್ತೇವೆ. ಸುಮಾರು 12ನೇ ಶತಮಾನದ ಸಮಯದಲ್ಲಿ ಶೋಷಣೆಗಳ ವಿರುದ್ದ ಧ್ವನಿ ಕೇಳಿಬಂದು ವಚನಕಾರರ ಮೂಲಕ ಪರ್ಯಾಯ ಸಂಸ್ಕøತಿಯು ಬೆಳವಣಿಗೆಗೊಂಡಿತ್ತು. ಇಂತಹ ಚಳುವಳಿಯಲ್ಲಿ ಯಾರೂ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು :ವಿವಾಹಿತ ಮಹಿಳೆಯೋರ್ವಳು ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿರುವ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಂಡಾರ ಬೈಲು ನಿವಾಸಿ ಅಶ್ವಿನಿ(29) ಹಾಗೂ ಸಾನ್ವಿ(4), ಸಾತ್ವಿಕ್(1.8) ನಾಪತ್ತೆಯಾದವರು. ಕಳೆದ ಐದು ವರ್ಷದ ಹಿಂದೆ ಬಂಟ್ವಾಳ ತಾಲೂಕಿನ ಮಾರ್ನಬೈಲ್ ಗೆ ಅಶ್ವಿನಿಯನ್ನು ವಿವಾಹ ಮಾಡಿಕೊಡಲಾಗಿತ್ತು. ಅಸೌಖ್ಯದಿಂದ ಬಳಲುತ್ತಿದ್ದ ಅಶ್ವಿನಿ 3ತಿಂಗಳ ಹಿಂದೆ ತನ್ನ ತಾಯಿ ಮನೆಗೆ ಬಂದಿದ್ದರು. ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆಯ ಬಳಿಕ ತಾಯಿ ಮನೆಯಲ್ಲಿಯೇ ಉಳಿದಿದ್ದ ಅಶ್ವಿನಿಯ ತಾಯಿಗೆ ಹೃದಯಾಘಾತವಾಗಿದ್ದ ಹಿನ್ನಲೆಯಲ್ಲಿ ಕೊಲ್ಯದಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ತೆರಳಿದ್ದರು. ಮಾರ್ಚ್ 16ರಂದು ಚಿಕ್ಕಮ್ಮ ಸ್ವಸಹಾಯ ಸಂಘದ ಮೀಟಿಂಗ್ ಹೋದ ಸಮಯದಲ್ಲಿ ಅಶ್ವಿನಿ ತನ್ನ ಇಬ್ಬರು ಮಕ್ಕಳ ಜೊತೆಗೆ ಮನೆ ಬಿಟ್ಟು ಹೋದವರು ವಾಪಾಸ್ಸಾಗದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ತಂದೆ ಸುರೇಶ್ ನೀಡಿದ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ವಿದ್ಯಾ ಸಂಸ್ಥೆಗಳು ಹಣ ಮಾಡುವ ಕಂಪೆನಿಗಳಾಗದೇ, ಮಾನವೀಯತೆಗೆ ಒತ್ತು ಕೊಡುವ ಸಂಸ್ಥೆಗಳಾಗಬೇಕಿದೆ. ಈ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿರುವ ಯೆನೆಪೋಯ ವಿಶ್ವವಿದ್ಯಾಲಯದ ಕಾರ್ಯವೈಖರಿ ಶ್ಲಾಘನೀಯ ಎಂದು ಜರ್ಮನಿಯ ಜೊಹನೆಸ್ ಗುಟನ್ ಬರ್ಗ್ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ನಿರ್ದೇಶಕ ಡಾ.ನೋರ್ಬರ್ಟ್ ಪೌಲ್ ಹೇಳಿದ್ದಾರೆ. ಅವರು ಜರ್ಮನಿಯ ಜೊಹನೆಸ್ ಗುಟೆನ್ ಬರ್ಗ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಯೇನೆಪೋಯ ವಿಶ್ವವಿದ್ಯಾಲಯದ ನೀತಿಶಾಸ್ತ್ರ ಕೇಂದ್ರವು ಐದು ವರ್ಷ ಪೂರೈಸಿದ ಪ್ರಯುಕ್ತ ಶುಕ್ರವಾರ ದೇರಳಕಟ್ಟೆ ಯೆನೆಪೋಯ ವೈದ್ಯಕೀಯ ಕಾಲೇಜಿನ ಉಪನ್ಯಾಸ ಕೇಂದ್ರದಲ್ಲಿ ಜರಗಿದ ಗೋಚರತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ವೈದ್ಯಕೀಯ ಶಿಕ್ಷಣ ಕ್ಷೇತ್ರಗಳು ಬಹುತೇಕ ವ್ಯಾವಹಾರಿಕವಾಗಿ ಮಾರ್ಪಾಡಾಗಿವೆ. ಇದರಿಂದ ವೈದ್ಯಕೀಯ ನೀತಿಶಾಸ್ತ್ರ ಮರೆಯಾಗುತ್ತಿದೆ. ಆರ್ಥಿಕವಾಗಿಯೂ ವೈದ್ಯಕೀಯ ಕ್ಷೇತ್ರಗಳು ಹಿಂದುಳಿದಿಲ್ಲ. ಈ ನಡುವೆ ಮಾನವೀಯತೆಗೆ ಹೆಚ್ಚಿನ ಒತ್ತು ನೀಡಿ, ಬಡ ಮತ್ತು ಗ್ರಾಮೀಣ ವರ್ಗದವರ ಸೇವೆಯಲ್ಲಿ ಯೆನೆಪೋಯ ವಿಶ್ವವಿದ್ಯಾಲಯ ತೊಡಗಿರುವುದು ವೈದ್ಯಕೀಯ ಕ್ಷೇತ್ರದಲ್ಲಿರುವವರಿಗೆ ಮಾದರಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೆನೆಪೋಯ ವಿಶ್ವವಿದ್ಯಾಲಯದ ಕುಲಸಚಿವ ಡಾ. ರಘುವೀರ್…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ದೇರಳಕಟ್ಟೆಯಿಂದ ಹುಬ್ಬಳ್ಳಿಗೆ ಫ್ಲೈವುಡ್ ಸಾಗಿಸುತ್ತಿದ್ದ ಗೂಡ್ಸ್ ಲಾರಿ ತೊಕ್ಕೊಟ್ಟಿನ ನಿರ್ಮಾಣ ಹಂತದ ಫ್ಲೈಓವರ್ ಕಮರಿಗೆ ಬಿದ್ದು ಲಾರಿ ಮಾಲಕ ಗಾಯಗೊಂಡಿರುವ ಘಟನೆ ಗುರುವಾರ ಬೆಳಿಗ್ಗೆ ತೊಕ್ಕೊಟ್ಟಿನಲ್ಲಿ ನಡೆದಿದೆ. ಮೊಯಿದಿನ್ ಕುಂಞÂ ಗಾಯಗೊಂಡ ಲಾರಿ ಮಾಲಕ. ತೊಕ್ಕೊಟ್ಟಿನಲ್ಲಿ ಫ್ಲೈಓವರ್ ಕೆಲಸ ಪ್ರಗತಿಯಲ್ಲಿದ್ದು, ಫ್ಲೈವುಡ್ ಸಾಗಿಸುತ್ತಿದ್ದ ಲಾರಿ ಚಾಲಕ ಪಿಂಟೋ ಅತಿವೇಗವಾಗಿ ಚಲಾಯಿಸಿ ನಿಯಂತ್ರಣ ಕಳೆದುಕೊಂಡು ರಸ್ತೆಬದಿಯಲ್ಲಿ ಫ್ಲೈಓವರ್ ಕಾಮಗಾರಿಗೆ ಅಗೆಯಲಾಗಿದ್ದ ಹೊಂಡಕ್ಕೆ ಲಾರಿ ಉರುಳಿಬಿದ್ದಿದೆ. ಘಟನೆಯಲ್ಲಿ ಲಾರಿ ಚಾಲಕ ಗಾಯವಿಲ್ಲದೆ ಪಾರಾಗಿದ್ದು, ಗಾಯಾಳು ಲಾರಿ ಮಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳ್ಳಾಲ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕಲ್ಲಾಪು: ದೇಶದಾದ್ಯಂತ 16,000 ಕ್ಕೂ ಹೆಚ್ಚು ಅನುಗ್ರಹ ದೃಷ್ಟಿದಾನ್ ಮೂಲಕ ನೇತ್ರ ಚಿಕಿತ್ಸೆಯನ್ನು ನಡೆಸಿದ್ದು, ಗ್ರಾಮೀಣ ಭಾಗದ ಕಣ್ಣಿನ ತೊಂದರೆ ಇರುವ ಬಡ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸಂಸ್ಥೆಯು ಭರಿಸಲಿದ್ದು, ಇದು ಸಂಸ್ಥೆಯ ಸಾಮಾಜಿಕ ಅಂಗದ ಕಾರ್ಯ ಹಾಗೂ ಜಿಲ್ಲೆಯ ಎರಡನೇ ಶಿಬಿರ ಇದಾಗಿದೆ ಎಂದು ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್‍ನ ಮಹಾಪ್ರಬಂಧಕ ಎ.ಕೆ ಕುಂದು ಅಭಿಪ್ರಾಯಪಟ್ಟರು. ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್, ಅನುಗ್ರಹ ದೃಷ್ಠೆದಾನ್, ಕಲ್ಲಾಪು ಸೇವಾಸಮಿತಿ, ಕಲ್ಲಾಪು,ಉಡುಪಿ ಮತ್ತು ಮಂಗಳೂರಿನ ಪ್ರಸಾದ್ ನೇತ್ರಾಲಯ ಕಣ್ಣಿನ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಉಡುಪಿ ಮತ್ತು ಮಂಗಳೂರಿನ ಅಂಧತ್ವ ನಿವಾರಣಾ ವಿಭಾಗ ಇವರ ಜಂಟಿ ಆಶ್ರಯದಲ್ಲಿ ಕಲ್ಲಾಪು ಪಟ್ಲ ಶಾಲೆಯಲ್ಲಿ ಗುರುವಾರ ನಡೆದ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಉಳ್ಳಾಲ ನಗರಸಭೆ ಅಧ್ಯಕ್ಷ ಕುಂಞಮೋನು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಪೌರಾಯುಕ್ತೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಬೀರಿ: ಜಗತ್ತು ಡಿಜಿಟಲೀಕರಣವಾಗಿ ಬದಲಾಗುತ್ತಿದ್ದು, ಡಿಜಿಟಲ್ ತಂತ್ರಜ್ಞಾನಗಳು ವಿಶ್ವದ ಮುಖವನ್ನೇ ಬದಲಾಯಿಸುತ್ತಿದ್ದರೂ ಮನುಷ್ಯ ಮಾನವೀಯತೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಮಂಗಳೂರಿನ ಬಿಷಪ್ ರೆ. ಫಾದರ್ ಅಲೋಷಿಯಸ್ ಪಾವ್ಲ್ ಡಿಸೋಜಾ ಅಭಿಪ್ರಾಯಪಟ್ಟರು . ಅವರು ಬೀರಿ ಮಾಡೂರಿನ ಸಂತ ಅಲೋಷಿಯಸ್ ಕಾಲೇಜಿನ ಮಾಹಿತಿ ತಂತ್ರಜ್ಞಾನ ಶಾಲೆ ಮತ್ತು ಬಯೋ ಇನ್ಫಾರ್ಮೇಟಿಕ್ಸ್ ವಿಭಾಗ ಗುರುವಾರ ಕ್ಯಾಂಪಸ್ಸಿನ ಅರ್ತೂರು ಶೀಣೈ ಆಡಿಟೋರಿಯಂನಲ್ಲಿ ಹಮ್ಮಿಕೊಂಡ ಎಪಿಟೋಮ್ -2016 ರಾಷ್ಟ್ರಮಟ್ಟದ ಅಂತರ್ ಕಾಲೇಜು ಮಾಹಿತಿ ತಂತ್ರಜ್ಞಾನ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಮಾಹಿತಿ ತಂತ್ರಜ್ಞಾನ, ನ್ಯಾನೋ ತಂತ್ರಜ್ಞಾನಗಳು ಆವರಿಸಿ ಜಗತ್ತು ಅಭಿವೃದ್ಧಿ ಪಥದಲ್ಲಿದೆ. ಆದರೆ ಬದುಕಿನ ಮೂಲ ಆಗಿರುವ ಮಾನವೀಯತೆ, ಸಂಬಂಧಗಳು ಮರೆಯಾಗುತ್ತಿವೆ. ಸಮಾಜದಲ್ಲಿ ಉತ್ತಮ ಜೀವನ ನಿರ್ವಹಿಸಲು ಮಾನವೀಯ ಮೌಲ್ಯಗಳು ಅತ್ಯಗತ್ಯ. ಈ ನಿಟ್ಟಿನಲ್ಲಿ ಉತ್ತಮ ಮನುಷ್ಯನೆನಿಸಲು ಉತ್ತಮ ಗುಣನಡತೆ ಜ್ಞಾನದ ಹಸಿವು, ಘನತೆಯ ದೃಷ್ಟಿಯನ್ನು ಪ್ರದರ್ಶಿಸುವಿಕೆ, ಭಾವನೆಗಳನ್ನು ಬೆಳೆಸಿ, ತಾಳ್ಮೆ, ಗುರಿ, ಒಳ್ಳೆಯ ಗೆಳೆಯರು, ತ್ಯಾಗ, ಧನಾತ್ಮಕ ಚಿಂತನೆಗಳು, ಕುಟುಂಬವನ್ನು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ತಪ್ಪು ಮಾಡುವ ವಿದ್ಯಾರ್ಥಿಗಳನ್ನು ತಿದ್ದಬೇಕಾದ ವಿಶ್ವವಿದ್ಯಾನಿಲಯಗಳು ತಪ್ಪು ಮಾಡುತ್ತಿರುವುದು ಶಿಕ್ಷಣ ವ್ಯವಸ್ಥೆಯ ದುರಾವಸ್ಥೆಯನ್ನು ಎತ್ತಿ ತೋರಿಸುತ್ತಿದ್ದು, ಫಲಿತಾಂಶದಲ್ಲಿ ಗೊಂದಲ ಉಂಟು ಮಾಡಿ ಬಡ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಆಟವಾಡುವ ಅಧ್ಯಾಪಕರುಗಳ ವಿರುದ್ಧ ಶೀಘ್ರವೇ ಕ್ರಮಕೈಗೊಳ್ಳಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಉಪಾಧ್ಯಕ್ಷ ಮಹಮ್ಮದ್ ತಫ್ಸೀಕ್ ಆಗ್ರಹಿಸಿದ್ದಾರೆ. ಅವರು ಮಂಗಳೂರು ವಿಶ್ವವಿದ್ಯಾನಿಲಯ ಫಲಿತಾಂಶದ ಗೊಂದಲಮಯ ಫಲಿತಾಂಶವನ್ನು ಸರಿಪಡಿಸುವಂತೆ ಆಗ್ರಹಿಸಿ ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಸೌಧದ ಎದುರು ಕ್ಯಾಂಪಸ್ ಫ್ರೆಂಟ್ ಆಪ್ ಇಂಡಿಯಾ ಜಿಲ್ಲಾ ಘಟಕಾ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಮೌಲ್ಯಮಾಪನವನ್ನು ಖಾಸಗಿ ಕಂಪೆನಿಗಳಿಗೆ ನೀಡಿರುವುದು ತಪ್ಪು. ಖಾಸಗಿ ಕಂಪೆನಿಗಳ ಬೇಜವಾಬ್ದಾರಿ ನೀತಿಯಿಂದ ಜನವರಿಯಲ್ಲಿ ಬರಬೇಕಾದ ಫಲಿತಾಂಶ ಒಂದು ತಿಂಗಳು ತಡವಾಗಿ ಪ್ರಕಟವಾಗಿದೆ. ಇದರಿಂದ ಒಂದು ಸೆಮಿಸ್ಟರ್‍ನಲ್ಲಿ ಅನುತ್ತೀರ್ಣರಾದವರು ಒಂದು ವರ್ಷವನ್ನೇ ಕಳೆಯುವಂತಾಗಿದೆ. ಈ ನಡುವೆ ಸೆನೆಟ್ ಸಭೆಯಲ್ಲಿ ಸೆಮಿಸ್ಟರ್ ನಲ್ಲಿ ಅನುತ್ತೀರ್ಣರಾದವರು ಮುಂದೆ ತರಗತಿಗೆ ಹೋಗಲು ತಡೆಯುವ ಆದೇಶವನ್ನು ಮಾಡಿರುವುದು ಖಂಡನೀಯ.…

Read More