ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ತಾಯಿ ಮಡಿಲು ಸಂಸ್ಕಾರದ ಕೇಂದ್ರಗಳಾಗಬೇಕು. ಅವರು ಯುವಪೀಳಿಗೆಯಲ್ಲಿ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಅರಿವು ಮೂಡಿಸಿದಾಗ ಸಂಸ್ಕಾರಯುತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಕೇಮಾರು ಶ್ರೀ ಸಾಂದೀಪನಿ ಮಠದ ಶ್ರೀ ಈಶ ವಿಠಲ ದಾಸ ಸ್ವಾಮೀಜಿ ಹೇಳಿದರು.
ಅವರು ತೊಕ್ಕೊಟ್ಟಿನ ಭಗತ್ ಸೇವಾ ಸಿಂಗ್ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ತೊಕ್ಕೊಟ್ಟು ಒಳಪೇಟೆಯ ಡಾ. ಬಿ.ಆರ್. ಅಂಬೇಡ್ಕರ್ ಮೈದಾನದಲ್ಲಿ ಭಾನುವಾರ ನಡೆದ ಗೂಡುದೀಪ ಸಂಗಮ-ದೀಪಾವಳಿ ಸಂಭ್ರಮ -2015 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂಸ್ಕøತಿ ವಿಕೃತಿಯಲ್ಲಿ ಮರೆಯಾಗುತ್ತಿದೆ. ಸನ್ಮಾನ ಪ್ರಶಸ್ತಿಗಳು ಮಾರಾಟದ ವಸ್ತುಗಳಾಗಿವೆ. ಪ್ರಶಸ್ತಿಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ಅರ್ಹತೆಯುಳ್ಳ ವ್ಯಕ್ತಿಗೆ ಸಾಧನಾ ಪ್ರಶಸ್ತಿಯನ್ನು ನೀಡಿರುವುದು ಶ್ಲಾಘನೀಯ. ಮದ್ಯ ಸಮಾಜದಲ್ಲಿ ಬದುಕುತ್ತಿರುವ ಎಲ್ಲರೂ ಉತ್ಸವದ ದಿನಗಳಂದು ಮದ್ಯ ಸೇವಿಸದೆ ಇರುವುದರಿಂದ ಹಬ್ಬಗಳ ಮಹತ್ವವನ್ನು ಉಳಿಸುವ ಕಾರ್ಯ ನಡೆಸಬೇಕು. ಮಹಿಳೆಯರು ಮದ್ಯ ಸಂಸ್ಕøತಿಯತ್ತ ವಾಲದೇ, ಸಂಸ್ಕಾರದ ಕೇಂದ್ರಗಳಾಗಬೇಕಿದೆ. ಮಕ್ಕಳಿಗೆ ಸಂಸ್ಕಾರಯುಕ್ತ ವಿದ್ಯೆಯನ್ನು ಕೊಡುವ ಪ್ರಯತ್ನ ತಾಯಂದಿರಿಂದ ಆಗಬೇಕಿದೆ ಎಂದರು.
ವಿಧಾನಪರಿಷತ್ನ ಮುಖ್ಯಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ ದೇಶದ ಹಿತಕ್ಕಾಗಿ ಜೀವನವನ್ನು ಸಮರ್ಪಿಸಿದ ಭಗತ್ ಸಿಂಗ್ ಹೆಸರಲ್ಲಿ ಕಾರ್ಯಕ್ರಮಗಳು ನಡೆಯುತ್ತಿರುವುದು ಶ್ಲಾಘನೀಯ. ದೀಪಾವಳಿ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸುವ ಮೂಲಕ ಸಮಾಜದ ಎಲ್ಲರಿಗೂ ಪರಂಪರೆಯ ಆಚರಣೆಯನ್ನು ನೆನಪಿಸುವಂತಹ ಕಾರ್ಯವನ್ನು ಮಾಡುತ್ತಿರುವ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ. ಭಗವಂತನ ಕುರಿತು ಯುವಮನಸ್ಸುಗಳಲ್ಲಿ ಅರಿವು ಮೂಡಿಸಿದಾಗ ಭವಿಷ್ಯ ಉಜ್ವಲವಾಗುವುದು. ಸಂಘಟನೆಗಳು ಸಂಸ್ಕಾರವನ್ನು ಬೆಳೆಸುವ ಕಾರ್ಯ ನಡೆಸಬೇಕಿದೆ ಹೊರತು ಮತಾಂತರ, ಅನಾಚಾರಗಳನ್ನು ನಡೆಸಿದವರ ಜಯಂತಿ ಆಚರಣೆಗೆ ಮುಂದಾಗಿರುವ ಸರಕಾರದ ಕ್ರಮ ವನ್ನು ವಿರೋಧಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಂiÀiನ್ನು ಮಾತೃಭೂಮಿ ಸಹಕಾರಿ ಸಂಘದ ನಿರ್ದೇಶಕ ಕೆ.ಟಿ.ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ, ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್ , ಉಳ್ಳಾಲ ನೇತ್ರಾವತಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟುಗುತ್ತು, ವಕೀಲ ಮಧುಸೂದನ್ ಭಟ್, ಉದ್ಯಮಿ ಪ್ರಕಾಶ್ ಮಲ್ಲಿ, ದೆಬ್ಬೇಲಿ ಮನೋಜ್ ಕುಮಾರ್ ಹೆಗ್ಡೆ, ಪ್ರವೀಣ್ ಕುಮಾರ್ ಜೆ. , ಗೋಕರ್ಣನಾಥ ಬ್ಯಾಂಕ್ ನೌಕರರ ಸಂಘದ ಕಾರ್ಯದರ್ಶಿ ಹರೀಶ್ ಮುಂಡೋಳಿ, ಶಿವಾಜಿ ಫ್ರೆಂಡ್ಸ್ ಸರ್ಕಲ್ ನ ಆನಂದ ಧರ್ಮನಗರ, ಸೋಮೇಶ್ವರ ಪಂಚಾಯಿತಿ ಸದಸ್ಯ ಮಾಧವ ಗಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಪ್ರವೀಣ್ .ಎಸ್.ಕುಂಪಲ ಉಪಸ್ಥಿತರಿದ್ದರು.
ಸಾಮಾಜಿಕ ಸೇವೆ ಮತ್ತು ಸಾಂಸ್ಕøತಿಕ ಘಟಕಗಳಲ್ಲಿ ಸಾಧನೆಗೈದ ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ ಇವರಿಗೆ ಭಗತ್ ಸಿಂಗ್ ಯುವಸಾಧನಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಆಧುನಿಕ ಮತ್ತು ಸಾಂಪ್ರದಾಯಿಕ ವಿಭಾಗಗಳಲ್ಲಿ ಒಟ್ಟು 110 ಗೂಡುದೀಪಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪ್ರತಿಷ್ಠಾನದ ಗೌರವಾಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟ್ಟು ಸ್ವಾಗತಿಸಿದರು. ಕೃಷ್ಣ ತೊಕ್ಕೊಟ್ಟು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಕಿರಣ್ ಕೊಲ್ಯ ವಂದಿಸಿದರು.
ಫಲಿತಾಂಶ:
ಆಧುನಿಕ ವಿಭಾಗ: ಪ್ರಥಮ – ನವಚೇತನ ಗೇಮ್ಸ್ ಟೀಂ ಕುಲಶೇಖರ, ದ್ವಿತೀಯ- ಕಿಶೋರ್ ಗಟ್ಟಿ ಕುತ್ತಾರ್ , ತೃತೀಯ-ಶ್ರೀನಿವಾಸ್, ಪುರುಷೋತ್ತಮ ಕುಡುಪು, ಚತುರ್ಥ-ಸೋಮೇಶ್ವರ ಫ್ರೆಂಡ್ಸ್
ಸಾಂಪ್ರದಾಯಿಕ ವಿಭಾಗ :
ಪ್ರಥಮ- ಅನನ್ಯ.ಹೆಚ್. ಕುಂಪಲ, ದ್ವಿತೀಯ-ನಿತ್ಯಾನಂದ ಯುವಕ ಮಂಡಲ ತೊಕ್ಕೊಟ್ಟು, ಗೌರೀಶ್ ಕಾರ್ ಸ್ಟ್ರೀಟ್ , ತೃತೀಯ- ಮಹೇಶ್ ರಾವ್ ಚಿಲಿಂಬಿ, ಚತುರ್ಥ – ಕಾರ್ತಿಕ್ ಶೇಟ್ ಕೊಡಿಯಾಲಗುತ್ತು.










