Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ತೊಕ್ಕೊಟ್ಟಿನ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ತೊಕ್ಕೊಟ್ಟುವಿನಿಂದ ಒಳಪೇಟಯ ಓವರ್ ಬ್ರಿಡ್ಜ್ ಬಳಿಯ ಯು.ಎಸ್.ಕಾಂಪ್ಲೆಕ್ಸ್‍ಗೆ ಸ್ಥಳಾಂತರಗೊಂಡ ಶಾಖೆಯನ್ನು ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣಪ್ಪ ಸಾಲ್ಯಾನ್, ಎಸ್‍ಸಿಡಿಸಿಸಿ ಬ್ಯಾಂಕ್ ನಿರ್ದೇಶಕರುಗಳಾದ ಸದಾಶಿವ ಉಳ್ಳಾಲ್ ಹಾಗೂ ಟಿ.ಜಿ.ರಾಜಾರಾಂ ಭಟ್ ಉಪಸ್ಥಿತರಿದ್ದರು. ಉಪ ಮಹಾ ಪ್ರಧಾನ ವ್ಯವಸ್ಥಾಪಕ ಸತೀಶ್ .ಎಂ ಸ್ವಾಗತಿಸಿದರು. ಕಟ್ಟಡದ ಮಾಲಕಿ ಪ್ರಭಾವತಿ ಹಾಗೂ ಶಾಖಾ ವ್ಯವಸ್ಥಾಪಕ ರಾಧಾಕೃಷ್ಣ .ಎಂ.ಜೆ ಅವರನ್ನು ಸನ್ಮಾನಿಸಲಾಯಿತು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ವಿಶ್ವನಾಥ ನಾಯರ್ ಸ್ವಾಗತಿಸಿ ವಂದಿಸಿದರು.

Read More

ಪೇಶಾವರ:ಪಾಕಿಸ್ತಾನದ ವಿಶ್ವ ವಿದ್ಯಾಲಯವೊಂದರ ಮೇಲೆ ಉಗ್ರರು ದಾಳಿ ನಡೆಸಿದ ಘಟನೆ ಬುಧವಾರ ನಡೆದಿದೆ. ಮೂವರು ಉಗ್ರರು ನಡೆಸಿದ ದಾಳಿಯಲ್ಲಿ ಕೆಮೆಸ್ಟ್ರಿ ಪ್ರೊಫೆಸರ್ ಸಾವನ್ನಪ್ಪಿದ್ದು, 50 ಮಂದಿ ಗಾಯಗೊಂಡಿರುವುದಾಗಿ ಪಾಕ್ ನ ಮಾಧ್ಯಮದ ವರದಿಗಳು ತಿಳಿಸಿವೆ. ಮೂವರು ಬಂದೂಕುಧಾರಿ ಉಗ್ರರು ಪೇಶಾವರದಲ್ಲಿನ ಬಚಾ ಖಾನ್ ವಿಶ್ವವಿದ್ಯಾಲಯದ ಮೇಲೆ ದಾಳಿ ಮಾಡಿದ್ದು, ವಿಶ್ವವಿದ್ಯಾಲಯದೊಳಗೆ ಭಾರೀ ಪ್ರಮಾಣದಲ್ಲಿ ಸ್ಫೋಟದ ಶಬ್ಧಗಳು ಕೇಳಿಬರುತ್ತಿದೆ ಮೂಲಗಳಿಂದ ತಿಳಿದುಬಂದಿದೆ. ಪಾಕ್ ಸೇನಾಪಡೆ ಯೂನಿರ್ವಸಿಟಿ ಸುತ್ತಮುತ್ತ ಸುತ್ತವರಿದಿದ್ದಾರೆ. ಪಾಕ್ ಸೇನಾಪಡೆ ಮತ್ತು ಉಗ್ರರ ನಡುವೆ ಗುಂಡಿನ ಕಾಳಗ ಮುಂದುವರಿದಿದೆ. ಬಚಾಖಾನ್ ಯೂನಿರ್ವಸಿಟಿಯೊಳಗೆ 3 ಸಾವಿರ ಮಂದಿ ಇದ್ದಿರುವುದಾಗಿ ವರದಿ ತಿಳಿಸಿದ್ದು, ಈಗಾಗಲೇ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿದೆ. 50 ವಿದ್ಯಾರ್ಥಿಗಳಲ್ಲಿ 5 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಈಗಾಗಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಉಗ್ರರರನ್ನು ಸದೆಬಡಿಯಲು ಈಗಾಗಲೇ ಸ್ಥಳಕ್ಕಾಗಮಿಸಿರುವ ವಿಶೇಷ ಭದ್ರತಾ ಪಡೆಗಳು ಉಗ್ರರೊಂದಿಗೆ ಗುಂಡಿನ ಚಕಮಕಿ ನಡೆಸುತ್ತಿದ್ದಾರೆ. ಪಾಕ್ ಸೇನಾ ಪಡೆ ನಡೆಸಿದ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಜಾನುವಾರುಗಳನ್ನು ಕಳವುಗೈಯ್ಯಲು ಕಾರೊಂದರಲ್ಲಿ ಹೊಂಚು ಹಾಕುತ್ತಿದ್ದ ಮೂವರು ಕುಖ್ಯಾತ ಜಾನುವಾರು ಚೋರರನ್ನು ಉಳ್ಳಾಲ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿಯಿಂದ ಮಂಗಳವಾರ ತಡರಾತ್ರಿ 3.30ಕ್ಕೆ ಬಂಧಿಸಿದ್ದು, ಅವರಿಂದ ಡಕಾಯಿತಿಗೆ ಬಳಸಲಾಗುತ್ತಿದ್ದ ತಲವಾರು, ಮೆಣಸಿನ ಹುಡಿ, ಹಗ್ಗ ಮೊದಲಾದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಮುಖ ಆರೋಪಿ ಚೆಂಬುಗುಡ್ಡೆಯ ಇರ್ಷಾದ್ (30) ಹಾಗೂ ಫರಿಂಗಿಪೇಟೆಯ ಇಮ್ರಾನ್(24), ಮಂಜನಾಡಿ ಕಲ್ಕಟ್ಟದ ಮುತಲಿಬ್ (35) ಬಂಧಿತರು. ಇವರ ಜತೆಗಿದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ತವೇರಾ ಕಾರಿನ ನಂಬರ್ ಪ್ಲೇಟನ್ನು ಬದಲಿಸಿ ಐವರ ತಂಡ ತಲಪಾಡಿ ಭಾಗದಲ್ಲಿ ಜಾನುವಾರು ಕಳವು ನಡೆಸಲು ಹೊಂಚುಹಾಕುತ್ತಿದ್ದ ಸಂದರ್ಭ ಖಚಿತ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿಗಳು ದನ, ಆಡು, ಕುರಿ ಹಾಗೂ ಸರ ಕಳವು ಜಾಲದಲ್ಲಿ ಸಕ್ರಿಯವಾಗಿದ್ದು, ಸೋಮವಾರ ರಾತ್ರಿ ವೇಳೆ ಮನೆಮಂದಿಗೆ ಹೆದರಿಸಿ ಜಾನುವಾರು ಕಳವಿಗೆ ಯತ್ನಿಸಲು ತೆರಳುತ್ತಿದ್ದಾಗ ಸೆರೆ ಸಿಕ್ಕಿದ್ದಾರೆ. ಚೆಂಬುಗುಡ್ಡೆಯ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ:  ಮಂಗಳೂರು ವಿಶ್ವವಿದ್ಯಾನಿಲಯದ ಆತಿಥ್ಯದಲ್ಲಿ ಮಂಗಳಗಂಗೋತ್ರಿ ಕ್ಯಾಂಪಸ್‍ನಲ್ಲಿ ನಡೆಯುತ್ತಿರುವ 31ನೆಯ ದಕ್ಷಿಣ ವಲಯ ಅಂತರ್ ವಿವಿ ಯುವಜನೋತ್ಸವ `ವೇವ್ಸ್-2015’ನ ಸ್ಪರ್ದೆಯ ಪ್ರಥಮ ದಿನವಾದ ಬುಧವಾರ ಮಿಮಿಕ್ರಿ ಮತ್ತು ಮೈಮ್ ಸೇರಿದಂತೆ ವಿವಿಧ ಸ್ಪರ್ಧೆಗಳು ಗಮನ ಸೆಳೆಯಿತು. ಕ್ಯಾಂಪಸ್‍ನ ಪ್ರಮುಖ ವೇದಿಕೆಯಾದ ಮಂಗಳಾ ಆಡಿಟೋರಿಯಂನ ಡಾ| ಶಿವರಾಮ ಕಾರಂತ ವೇದಿಕೆಯಲ್ಲಿ ಮಿಮಿಕ್ರಿ ಮತ್ತು ಮೈಮ್ ಸ್ಪರ್ಧೆ ನಡೆದರೆ, ಡಾ| ಕಯ್ಯಾರ ಕಿಂಜಣ್ಣ ರೈ ವೇದಿಕೆಯಲ್ಲಿ ಪಾಶ್ಚಾತ್ಯ ಮತ್ತು ಭಾರತೀ ಸಮೂಹ ಗಾನ ಸ್ಪರ್ಧೆ ನಡೆಯಿತು. ವಿe್ಞÁನ ಸಂಕೀರ್ಣದ ಗಿರಿಬಾಲೆ ವೇದಿಕೆಯಲ್ಲಿ ಹಿಂದುಸ್ಥಾನಿ ಮತ್ತು ಕರ್ನಾಟಿಕ್ ಶಾಸ್ತ್ರೀಯ ಗಾಯನ , ತಾಳವಾದ್ಯ ಸ್ಪರ್ಧೆ ನಡೆಯಿತು. ಹಳೆ ಸೆನೆಟ್ ಸಭಾಂಗಣದ ಪಂಜೆ ಮಂಗೇಶರಾಯ ವೇದಿಕೆಯಲ್ಲಿ ರಸಪ್ರಶ್ನೆ ಸ್ಪರ್ಧೆ ನಡೆದರೆ ಮಾನವಿಕ ಮತ್ತು ಯೋಗಿಕ್ ಸೈನ್ಸ್ ಬ್ಲಾಕ್‍ನ ಬಿ.ಎಂ. ಇದಿನಬ್ಬ ವೇದಿಕೆಯಲ್ಲಿ ಸ್ಪಾಟ್ ಪೈಂಟಿಂಗ್ ಮತ್ತು ಸ್ಪಾಟ್ ಫೋಟೋಗ್ರಾಫಿ ಸ್ಪರ್ಧೆ ನಡೆಯಿತು. ಕ್ವಿಜ್ ಕೇರಳಕ್ಕೆ ಪ್ರಶಸ್ತಿ : ಸ್ಪರ್ಧೆಯ ಎಲ್ಲಾ ವಿಜೇತರ ವಿವರ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಪೆರ್ಮನ್ನೂರು: ಪೆರ್ಮನ್ನೂರಿನ ಸಂತ ಸೆಬಾಸ್ತಿಯನ್ನರ ಚರ್ಚ್‍ನಲ್ಲಿ ವಾರ್ಷಿಕ ಮಹೋತ್ಸವದಲ್ಲಿ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ರೆ| ಡಾ| ಎಲೋಷಿಯಸ್ ಪಾವ್ಲ್ ಡಿ.ಸೋಜ ವಿಶೇಷ ಪೂಜೆ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಚರ್ಚ್‍ನ ಪ್ರಧಾನ ಧರ್ಮಗುರುಗಳಾದ ಜೆ.ಬಿ.ಸಲ್ದಾನ, ಫಾ| ರೂಪೇಶ್ ಮಾಡ್ತ, ಫಾ| ಪ್ರವೀಣ್ ಜಾಯ್ ಡಿ.ಸೋಜ ಮತ್ತಿತರರು ಉಪಸ್ಥಿತರಿದ್ದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಮಾನಸಿಕ, ದೈಹಿಕ, ವರದಕ್ಷಿಣೆಗಾಗಿ ಕಿರುಕುಳ ನೀಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪ ಹೊಂದಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೊಳಗಾಗಿದ್ದಾನೆ. ಘಟನೆಯ ವಿವರ: ಕೊಣಾಜೆ ಗ್ರಾಮದ ಅಡ್ಕರೆಪಡ್ಪು ನಿವಾಸಿ ಹಸನಬ್ಬ ಎಂಬವರ ಮಗಳು ರಮ್ಲತ್ ಅವರಿಗೆ ನಡಾರ್-ಮಾಡೂರು ನಿವಾಸಿ ಅಬೂಬಕ್ಕರ್ ಸಿದ್ದೀಕ್ ಎಂಬಾತನ ಜೊತೆ 15 ವರ್ಷಗಳ ಹಿಂದೆ ವಿವಾಹವಾಗಿದ್ದು ಅವರಿಗೆ ಮೂರು ಮಕ್ಕಳಿದ್ದಾರೆ. ಕಳೆದ ಐದು ವರ್ಷಗಳ ಹಿಂದೆ ಅಬೂಬಕ್ಕರ್ ಸಿದ್ದೀಕ್, ಅತ್ತೆ ನೆಬಿಸಾ, ನಾದಿಯರಾದ ಮುಮ್ತಾಜ್, ಅಸ್ಮಾ. ಆಕೆಯ ಗಂಡ ಯೂನುಸು ಸೇರಿಕೊಂಡು ರಮ್ಲತ್‍ಗೆ ಮಾನಸಿಕ, ದೈಹಿಕ ಹಿಂಸೆ ನೀಡಿ ಐದು ಲಕ್ಷ ರೂಪಾಯಿ ಮತ್ತು ಚಿನ್ನಾಭರಣ ತರುವಂತೆ ಪೀಡಿಸುತ್ತಾ ಬಂದಿದ್ದರು. ಈ ಹಿನ್ನೆಲೆಯಲ್ಲಿ ಎರಡು ಬಾರಿ ಮುಖಂಡರ ಸಮ್ಮುಖದಲ್ಲಿ ರಾಜಿ ಪಂಚಾಯಿತಿಗೆ ನಡೆದಿದ್ದು ನಿಷ್ಪ್ರಯೋಜಕವಾಗಿತ್ತು. ಇದರಿಂದ ಬೇಸತ್ತ ರಮ್ಲತ್ ಕಳೆದ ತಿಂಗಳು 13ರಂದು ತವರಿಗೆ ಬಂದು ಗಂಡನ ಮನೆಯಲ್ಲಿ ಹಿಂಸೆ ತಾಳಲಾಗುತ್ತಿಲ್ಲ ಎಂದು ಅಲವತ್ತುಕೊಂಡು ಮರುದಿನ ಆತ್ಮಹತ್ಯೆಗೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ : ನೂತನ ಸ್ಥಾಯಿ ಸಮಿತಿ ಅಧ್ಯಕ್ಷರ ಜತೆಗೆ ಸೇರಿಕೊಂಡು ಪೌರಾಯುಕ್ತರು ಹಾಗೂ ಸಿಬ್ಬಂದಿ ವರ್ಗ ಸೌಹಾರ್ದತೆಯಿಂದ ಕರ್ತವ್ಯ ನಿರ್ವಹಿಸಿ ಉಳ್ಳಾಲವನ್ನು ಸುಂದರ, ಸ್ವಚ್ಛವಾಗಿ ರೂಪಿಸಲು ಶ್ರಮಿಸುವೆವು ಎಂದು ನಗರಸಭೆ ಅಧ್ಯಕ್ಷೆ ಎಂ.ಗಿರಿಜಾ ಬೈ ಹೇಳಿದ್ದಾರೆ. ಅವರು ಉಳ್ಳಾಲನಗರಸಭೆಯಲ್ಲಿ ಸೋಮವಾರ ಜರಗಿದ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಅಬ್ದುಲ್ ಫತ್ತಾಕ್ ಅವರಿಗೆ ನಡೆದ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಅಲ್ಲೇ ಸರಿಪಡಿಸಿ ತಪ್ಪಿಹೋಗಲು ಅವಕಾಶ ಕೊಡದೆ ಉತ್ತಮ ಮಾರ್ಗದರ್ಶನದ ಜತೆಗೆ ಬಾಕಿಯಿರುವ ಎಲ್ಲಾ ಸಮಸ್ಯೆಗಳನ್ನು ಹೋಗಲಾಡಿಸಲು ಶಕ್ತಿ ಮೀರಿ ಪ್ರಯತ್ನಿಸೋಣ ಎಂದರು. ನಗರಸಭೆ ಸದಸ್ಯ ಮುಸ್ತಾಫ ಅಬ್ದುಲ್ಲಾ ಮಾತನಾಡಿ ನಗರಸಭೆಯ 27 ಸದಸ್ಯರು ಜತೆಗಿದ್ದೇವೆ. ಬೇಕಾದ ಅನುದಾನವನ್ನು ಉಳ್ಳಾಲಕ್ಕೆ ಸಚಿವರು ತರುತ್ತಲೇ ಇದ್ದು, ಅದರ ವಿನಿಯೋಗವನ್ನು ಎಲ್ಲರೂ ಮಾಡುವುದರ ಜತೆಗೆ , ಸ್ಥಾಯಿ ಸಮಿತಿ ಅಧ್ಯಕ್ಷರ ಗೌರವ ನೀಡುವುದರೊಂದಿಗೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸೋಣ ಎಂದರು. ಈ ಸಂದರ್ಭ ಉಪಾಧ್ಯಕ್ಷೆ ರಝಿಯಾ ಇಬ್ರಾಹಿಂ,…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಕಲೆಯ ಕುರಿತು ಸಂರಕ್ಷಣೆ, ಸಂವರ್ಧನ, ಅಧ್ಯಯನಗಳು ಆಗಬೇಕಿದ್ದು, ಸಾಂಸ್ಕøತಿಕ ನೀತಿಗಳ ಜಾರಿ ಹಾಗೂ ಬದಲಾವಣೆ ವಿಶ್ವವಿದ್ಯಾನಿಲಯಗಳಿಂದ ಆಗಬೇಕಿದೆ ಎಂದು ಯಕ್ಷಗಾನ ವಿದ್ವಾಂಸ ಪ್ರೊ. ಎಂ. ಪ್ರಭಾಕರ ಜೋಶಿ ಹೇಳಿದರು. ಅವರು ಸೋಮವಾರ ನವದೆಹಲಿಯ ಅಸೋಸಿಯೇಟ್ ಆಫ್ ಇಂಡಿಯನ್ ಯುನಿವರ್ಸಿಟಿ (ಎಐಯು) ಹಾಗೂ ಕೇಂದ್ರ ಯುವಜನಸೇವೆ ಮತ್ತು ಕ್ರೀಡಾ ಸಚಿವಾಲಯದ ಸಹಯೋಗದಲ್ಲಿ ಕೊಣಾಜೆಯ ಮಂಗಳೂರು ವಿವಿಯ ಆತಿಥ್ಯದಲ್ಲಿ ಮಂಗಳಗಂಗೋತ್ರಿಯ ಕ್ಯಾಂಪಸ್‍ನ ಮಂಗಳ ಸಭಾಂಗಣದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ 31ನೆಯ ದಕ್ಷಿಣ ವಲಯ ಅಂತರ್ ವಿವಿ ಯುವಜನೋತ್ಸವ `ವೇವ್ಸ್-2015’ಗೆ ಚಾಲನೆ ನೀಡಿ ಮಾತನಾಡಿದರು. ಯುವಜನಾಂಗ ಕಲೆ ಹಾಗೂ ಸಂಸ್ಕøತಿಯಿಂದ ಹಿಂದೆ ಸರಿಯುತ್ತಿದೆ ಅನ್ನುವ ಮಾತು ಸುಳ್ಳಾಗಿದೆ. ಇಂತಹ ಸಾಂಸ್ಕøತಿಕ ಕಲೆಗಳ ಪ್ರವಾಹವಾಗಿರುವ ದೇಶದಲ್ಲಿ ಲಕ್ಷಾಂತರ ಯುವ ಸಮುದಾಯ ಕಲೆಯಲ್ಲಿ ಅಪಾರ ಆಸಕ್ತಿಯನ್ನು ಹೊಂದಿದೆ. ಇದಕ್ಕೆ ಅಂತರ್ಜಾಲದಲ್ಲಿ ದೇಶದ ವಿವಿಧ ಸಂಸ್ಕøತಿಗಳ ಪರಿಚಯ ಹಾಗೂ ಮಾಹಿತಿ ಲಭ್ಯವಿರುವುದೇ ಸಾಕ್ಷಿಯಾಗಿದೆ. ಯುವಪೀಳಿಗೆಯ ಸಂಸ್ಕøತಿಯ ಅರಿವು ಮತ್ತು ಪಾಲ್ಗೊಳ್ಳುವಿಕೆ ಇದ್ದರೂ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿದ ಓಮ್ನಿ ಕಾರು ಬೇಲಿಯೊಂದಕ್ಕೆ ಡಿಕ್ಕಿ ಹೊಡೆದ ಘಟನೆ ಪಂಪ್ ವೆಲ್ ಸಮೀಪದ ಪಡೀಲ್ ನಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದ್ದು, ನುಜ್ಜುಗುಜ್ಜಾದ ಕಾರೊಳಗಡೆ ಸಿಲುಕಿದ್ದ ಚಾಲಕನನ್ನು ಹೊರತೆಗೆಯಲು ಸ್ಥಳೀಯರು ಹಾಗೂ ಪೊಲೀಸರು ಅರ್ಧ ಗಂಟೆಯ ಕಾಲ ಕಾರ್ಯಾಚರಣೆ ನಡೆಸಿ ಹೊರತೆಗೆದಿದ್ದಾರೆ. ಮಾರಿಪಳ್ಳ ನಿವಾಸಿ ಮಹಮ್ಮದ್ (25) ಗಂಭೀರ ಗಾಯಗೊಂಡವರು. ಮಂಗಳೂರಿನಿಂದ ಮಾರಿಪಳ್ಳ ಕಡೆಗೆ ಓಮ್ನಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಪಡೀಲ್ ಸಮೀಪ ನಿಯಂತ್ರಣ ಕಳೆದುಕೊಂಡ ಚಾಲಕ ರಸ್ತೆ ಬದಿಯಲ್ಲಿ ವಸತಿ ಸಂಕೀರ್ಣ ನಿರ್ಮಾಣ ಕಾಮಗಾರಿಗೆ ಹಾಕಲಾಗಿದ್ದ ಕಬ್ಬಿಣದ ಬೇಲಿಗೆ ಕಾರು ಡಿಕ್ಕಿ ಹೊಡೆದಿದೆ, ಪರಿಣಾಮ ಕಾರಿನ ಎದುರು ಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಮಹಮ್ಮದ್ ಅದರ ಒಳಗಡೆಯೇ ಸಿಲುಕಿದ್ದರು. ರಸ್ತೆಯಿಂದ ಕೆಲ ದೂರದಷ್ಟು ಕಾರು ಚಲಿಸಿದ್ದರಿಂದ ಕೆಲ ಸಮಯ ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ ಕುಂಬಳೆಯ ಸಿಡಿಮದ್ದು ಪ್ರದರ್ಶನ ಕಾಂiÀರ್iಕ್ರಮದಲ್ಲಿ ಭಾಗವಹಿಸಿ ಬೈಕಿನಲ್ಲಿ ಹಿಂತಿರುಗುತ್ತಿದ್ದ ಕಲ್ಲಡ್ಕ ನಿವಾಸಿಗಳಿಬ್ಬರು ರಸ್ತೆಬದಿಯಲ್ಲಿ ಕಾರಿನ ಹೆಡ್ ಲೈಟ್ ಉರಿಯುತ್ತಿರುವುದನ್ನು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: 37ರ ಹರೆಯದ ವ್ಯಕ್ತಿಯೋರ್ವ ನಾಪತ್ತೆಯಾಗಿರುವ ಕುರಿತು ನಾಲ್ಕು ವರ್ಷಗಳ ಬಳಿಕ ಉಳ್ಳಾಲ ಠಾಣೆಯಲ್ಲಿ ಆತನ ಸಹೋದರ ನಾಪತ್ತೆ ದೂರು ದಾಖಲಿಸಿದ್ದಾರೆ. ಉಳ್ಳಾಲದ ಅಕ್ಕರೆಕೆರೆ ನಿವಾಸಿ ಅಬ್ದುಲ್ ನಾಸಿರ್ (37) ಎಂಬವರು ನಾಪತ್ತೆಯಾದವರು. 2011 ರಲ್ಲಿ ಅಬ್ದುಲ್ ನಾಸಿರ್ ಮನೆಮಂದಿಗೆ ಹೇಳದೆ ಹೋಗಿ ಈವರೆಗೂ ನಾಪತ್ತೆಯಾಗಿದ್ದಾರೆ. ಇವರ ಇರುವಿಕೆಯ ಬಗ್ಗೆ ಈವರೆಗೂ ಯಾವುದೇ ಮಾಹಿತಿಗಳಿಲ್ಲ. ಆದರೆ ಮುಂಬಯಿಯಲ್ಲಿರುವ ಗುಮಾನಿ ಇದೆಯಾದರೂ ಮನೆಮಂದಿಯ ಸಂಪರ್ಕದಲ್ಲಿಲ್ಲ ಎಂದು ಸಹೋದರ ಮಹಮ್ಮದ್ ಇಕ್ಬಾಲ್ ಎಂಬವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಹಿಂದೆಯೂ 2 ವರ್ಷ ನಾಪತ್ತೆಯಾಗಿದ್ದ: ಸಹೋದರ ನಾಸಿರ್ ಆಗಾಗ ಮನೆ ಬಿಟ್ಟು ಹೋಗುವ ಚಾಳಿಯವನಾಗಿದ್ದು, ಮನೆಯವರಲ್ಲಿ ಹೇಳದೆ ಹೊರಗಡೆ ಹೋಗಿ ಮನಸಾದಾಗ ವಾಪಾಸು ಬರುತ್ತಿದ್ದ. 2009ರ ಇಸವಿಯಲ್ಲಿ ಮನೆಬಿಟ್ಟು ಹೋದಾತ ಎರಡು ವರ್ಷ ಕಳೆದ ಬಳಿಕ 2011ರಲ್ಲಿ ವಾಪಸ್ಸಾಗಿದ್ದ. ಮತ್ತೆ ಅದೇ ಇಸವಿಯಲ್ಲಿ ಯಾರಲ್ಲೂ ಹೇಳದೇ ನಾಪತ್ತೆಯಾಗಿದ್ದು, ವಾಪಸ್ಸು ಬರುವನೆಂದು ಮನೆಮಂದಿ ಭರವಸೆಯಿಂದಿದ್ದರೂ ನಾಲ್ಕು ವರ್ಷಗಳಾದರೂ ಬಾರದೇ ಇದ್ದುದರಿಂದ ಉಳ್ಳಾಲ…

Read More