UN NETWORKS ಬೋಳಿಯಾರ್: ಅಹಾರ ಸಚಿವ ಯು.ಟಿ ಖಾದರ್ 48ನೇ ಹುಟ್ಟುಹಬ್ಬವನ್ನು ಬೋಳಿಯಾರು ಜೆ.ಎಂ.ಜೆ ಹಾಲ್ ನಲ್ಲಿ ಯು.ಟಿ ಖಾದರ್ ಅಭಿಮಾನಿಗಳ ಬಳಗ ಬೋಳಿಯಾರು ವತಿಯಿಂದ ಆಚರಿಸಲಾಯಿತು. ಕೆಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದರು.ಮಂಗಳೂರು ಗ್ರಾ.ಪಂ ಅಧ್ಯಕ್ಷ ಮುಹಮ್ಮದ್ ಮೋನು, ಸದಸ್ಯ ಬಿ.ಕೆ ಅಬ್ದುಲ್ ಜಬ್ಬಾರ್, ರಮೇಶ್ ಶೆಟ್ಟಿ, ಪಾವೂರು ಗ್ರಾ.ಪಂ ಅಧ್ಯಕ್ಷ ಫೀರೋಝ್ ಮುಂತಾದ ವರು ಭಾಗಿ.
Author: UllalaVani
UN NETWORKS ಉಳ್ಳಾಲ : ಕೂಲಿ ಕಾರ್ಮಿಕರು, ಬಡವರು, ದುಡಿಯುವ ಜನರ ಪರವಾಗಿ ಇಂದಿರಾ ಗಾಂಧಿ ಪಡಿತರ ವ್ಯವಸ್ಥೆ ಜಾರಿಗೆ ತಂದಿದ್ದರೆ, ಈಗಿನ ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟೀನ್ ಮುಖಾಂತರ ಅನ್ನಾಹಾರ ನೀಡುವ ಯೋಜನೆ ಜಾರಿಗೆ ತಂದಿದೆ, ಜನವರಿ ಮೊದಲ ವಾರದಿಂದ ಉಳ್ಳಾಲದ ವಿವಿಧೆಡೆ ಕ್ಯಾಂಟೀನ್ ಆರಂಭಿಸಲು ಕ್ಯಾಬಿನೆಟ್ ಒಪ್ಪಿಗೆ ನೀಡಿದೆ ಎಂದು ಆಹಾರ ಸಚಿವ ಯು.ಟಿ.ಖಾದರ್ ತಿಳಿಸಿದರು. ಮಂಗಳೂರು ಕ್ಷೇತ್ರ ಯುವಕಾಂಗ್ರೆಸ್ ಆಶ್ರಯದಲ್ಲಿ ಗುರುವಾರ ದೇರಳಕಟ್ಟೆಯಲ್ಲಿ ಯು.ಟಿ.ಖಾದರ್ ಅವರ 49ನೇ ಹುಟ್ಟುಹಬ್ಬದ ಪ್ರಯುಕ್ತ ಅಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ನೆರವೇರಿಸಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿಯೇ ವಿನೂತನ ಯೋಜನೆಗಳನ್ನು ಜಾರಿ ತಂದ ಕೀರ್ತಿ ಕರ್ನಾಟಕ ಸರಕಾರಕಿದೆ. ಈ ಯೋಜನೆಯನ್ನುಫಲಾನುಭವಿಗಳಿಗೆ ಮುಟ್ಟಿಸುವ ಕಾರ್ಯ ಸ್ಥಳಿಯಾಡಳಿತ ಸಂಸ್ಥೆಗಳೊಂದಿಗೆ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು. ರಾಜಕೀಯ ಜೀವನದಲ್ಲಿ ಕಷ್ಟ, ಪ್ರತಿಭಟನೆ, ಟೀಕೆ, ಸಮಸ್ಯೆ ಎಲ್ಲವನ್ನೂ ಎದುರಿಸಿ ಮುಂದೆ ಹೋಗಬೇಕಾಗುತ್ತದೆ. ನಮ್ಮ ವಿರುದ್ಧ ಯಾರೇ ಆದರೂ ಷಡ್ಯಂತ್ರ ರೂಪಿಸಿದರೆ ಅವರ ವಿರುದ್ಧ…
UN NETWORKS ಮುಡಿಪು: ರಾಜ್ಯದಲ್ಲಿ ಸ್ವಯಂಘೋಷಿತ ಪ್ರಗತಿಪರರು, ವಿಚಾರಧಾರಿಗಳು ಎಂದು ಹೇಳಿಕೊಳ್ಳುತ್ತಿರುವವರು ಹಿಂದೂ ಧರ್ಮದ ವಿಚಾರಧಾರೆಗಳನ್ನು ವಿರೋಧಿಸಿ, ನಿಂಧಿಸಿ ದಾರಿತಪ್ಪಿಸುವ ಷಡ್ಯಂತ್ರವನ್ನು ಮಾಡುತ್ತಿದ್ದಾರೆ. ಮತ್ತೊಂದೆಡೆಯಲ್ಲಿ ನಮ್ಮ ಜಿಲ್ಲೆಯಲ್ಲಿ ಪೂಜ್ಯನೀಯ ಭಾವದಿಂದ ಆರಾಧಿಸುತ್ತಿರುವ ಕೊರಗಜ್ಜ, ದೇಯಿಬೈದೆತಿಗೆ ಅವಮಾನ ಮಾಡುವಂತಹ ಹೀನ ಕೃತ್ಯ ಮಾಡುತಿದ್ದರೂ ಸರಕಾರ ಕಣ್ಣುಮುಚ್ಚಿ ಕುಳಿತಿದ್ದು, ಈ ನಿಟ್ಟಿನಲ್ಲಿ ಹಿಂದೂ ಸಮಾಜ ಒಗ್ಗಟ್ಟಾಗಬೇಕಾದ ಅನಿವಾರ್ಯತೆ ಇದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾಣಿ ಮಂಡಲದ ಕಾರ್ಯವಾಹಕ ಪ್ರಥ್ವಿರಾಜ್ ಕಲ್ಲಡ್ಕ ಅವರು ಹೇಳಿದರು. ಅವರು ಮುಡಿಪುವಿನಲ್ಲಿ ಬುಧವಾರ ಹಿಂದು ಜಾಗರಣ ವೇದಿಕೆ ಮತ್ತು ವಿಶ್ವ ಹಿಂದೂ ಪರಿಷತ್ ವತಿಯಿಂದ ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನಾ ಪ್ರದರ್ಶನ ಮತ್ತು ಖಂಡನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಜಾತ್ಯಾತೀತ ನೆಲೆಯಲ್ಲಿ ಒಂದಾಗಿರುವ ಹಿಂದೂ ಧರ್ಮವನ್ನು ಒಡೆಯುವ ಕೆಲಸಕ್ಕೆ ರಾಜ್ಯ ಸರಕಾರ ಮುಂದಾಗುತ್ತಿರುವುದರ ಜೊತೆಗೆ ಹಿಂದೂ ಧಾರ್ಮಿಕ ಮುಖಂಡರನ್ನು, ನಾಯಕರನ್ನು ಬಂಧಿಸುವ ಮೂಲಕ ಕಟ್ಟಿ ಹಾಕುವ ಪ್ರಯತ್ನವನ್ನು ಮಾಡುತ್ತಿದೆ. ಅಲ್ಲದೆ ಗೌರಿ ಹತ್ಯೆಯ…
UN NETWORKS ಉಳ್ಳಾಲ: ಸಮಕಾಲೀನ ಜಗತ್ತಿನ ಆಧ್ಯಾತ್ಮಿಕ ನಾಯಕ ಸಾತ್ವಿಕ ವಿದ್ವಾಂಸ ಮರ್ಹೂಂ ಪೊಸೋಟ್ ತಙಳ್ ಹಾಗೂ ಇತ್ತೀಚೆಗೆ ನಿಧನರಾದ ಕೆಸಿಎಫ್ ಸಂಸ್ಥಾಪಕ ಸದಸ್ಯ,ಉದಾರಿ,ಸಂಘಟನಾ ಚತುರ ಮರ್ಹೂಂ ಅಬ್ದುರ್ರಹ್ಮಾನ್ ಕೈರಂಗಳ ರವರ ಅನುಸ್ಮರಣಾ ಕಾರ್ಯಕ್ರಮವು ಶರಫುಲ್ ಉಲಮಾ ಪಿ.ಎಂ ಅಬ್ಬಾಸ್ ಉಸ್ತಾದ್ (ಅಲ್ ಮದೀನ) ಇವರ ಅಧ್ಯಕ್ಷತೆಯಲ್ಲಿ ರಿಫಾಯಿ ಮಸ್ಜಿದ್ ಗುಂಡುಕಟ್ಟೆ ವಿದ್ಯಾನಗರದಲ್ಲಿ ನಡೆಯಿತು. ಪ್ರಸ್ತುತ ಕಾರ್ಯಕ್ರಮವನ್ನು ಮೋಯದ್ದೀನ್ ಸಹದಿ ಉದ್ಘಾಟನ ಗೈದರು.ಅಬೂಬಕ್ಕರ್ ಮದನಿ ತೋಟಾಲ್ ಪ್ರಾಸ್ತಾವಿಕ ಭಾಷಣ ಮಾಡಿ ಸಂಘಟನೆ ಪ್ರಯೋಜನೆಯನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಅನುಸ್ಮರಣಾ ಸಂದೇಶನಗೈದ ಯುವ ವಿದ್ವಾಂಸ ಅಬ್ದುಲ್ಲತೀಫ್ ಸಹದಿ ಅಲ್ ಹಸ್ಸಾ ಅಬ್ದುರ್ರಹ್ಮಾನ್ ಕೈರಂಗಳ ನಡೆದು ಬಂದ ಹಾದಿಯನ್ನು ಕೇಳುಗರ ಮನ ಮುಟ್ಟುವಂತೆ ವಿವರಿಸಿದರು. ದುಃಅ ಅಶೀರ್ವಚನ ಗೈದ ಸಹ್ಯಿದ್ ಶಹೀರ್ ತಙಳ್ ಅಲ್ ಬುಖಾರಿ ಪೊಸೋಟ್ ಮಾತನಾಡಿ ಅಬ್ದುರ್ರಹ್ಮಾನ್ ಕೈರಂಗಳ ಇಂದು ಜಗತ್ತಿನ ವಿವಿಧ ಕಡೆ ಗುರುತಿಸಿ ಕೊಳ್ಳಲು ಅವರನ್ನು ಸ್ಮರಿಸಲು ಅವರಿಗೆ ಖತಮುಲ್ ಖುರ್’ಹಾನ್ ತಹ್ಲೀಲ್ ಸಮರ್ಪಿಸಲು ಅವರ ಸಂಘಟನಾ ಸೇವೆಯೇ ಕಾರಣ ಎಂದರು.…
UN NETWORKS ಉಳ್ಳಾಲ: ಧಾರ್ಮಿಕ ವಿದ್ಯಾಭ್ಯಾಸಕ್ಕೆ ಬೇಕಾದ ಎಲ್ಲಾ ವ್ಯೆವಸ್ಥೆಗಳು ಇದ್ದರೂ ಕೂಡಾ ವಿದ್ಯಾಭ್ಯಾಸ ಮಾಡುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಇಬ್ರಾಹಿಂ ಮುಸ್ಲಿಯಾರ್ ಬೇಕಲ ಅಭಿಪ್ರಾಯಪಟ್ಟರು. ಅವರು ಶೈಖಾ ಮರ್ಕಝ್ ಯೂತ್ ವೆಲ್ಫೇರ್ ಅಸೋಸಿಯೇಶನ್ ನ 19ನೇ ವಾಷಿಕಕೊತ್ಸವ ನೆನಪಿಗೆ ಅಬ್ಬು ಹಾಜಿ ಖುತುಬಿನಗರ ಕೊಡುಗೆಯಾಗಿ ನಿರ್ಮಿಸಿಕೊಟ್ಟ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಲೌಕಿಕ ವಿದ್ಯಾಭ್ಯಾಸದ ಜತೆ ಧಾರ್ಮಿಕ ವಿದ್ಯೆಗೆ ಮಹತ್ವ ನೀಡಿದಾಗ ಮಾತ್ರ ಇಸ್ಲಾಂ ಧರ್ಮ ಬೆಳವಣಿಗೆ ಹೊಂದಲು ಸಾಧ್ಯ ಎಂದು ಹೇಳಿದರು. ಸುರಿಬೈಲ್ ದಾರುಲ್ ಅಶ್-ಅರಿಯ್ಯಾ ವಿದ್ಯಾ ಸಂಸ್ಥೆ ಯ ಮ್ಯಾನೇಜರ್ ಸಿ.ಎಚ್ ಮುಹಮ್ಮದಾಲಿ ಸಖಾಫಿ ಮಾತನಾಡಿ ಕಿನ್ಯಾ ಗ್ರಾಮದಲ್ಲಿ ಇರುವ ಬಡ ಹೆಣ್ಣಿನ ಮದುವೆ, ಮನೆ ಕಟ್ಟಲು, ವಿದ್ಯಾಭ್ಯಾಸ ಮುಂತಾದ ವಿಚಾರದಲ್ಲಿ ಹೆಚ್ಚಿನ ಅಧ್ಯತೆವಹಿಸಿ ಬಡರಿಗೆ ಅಶಾಕಿರಣವಾಗಿ ಬೆಳೆದು ಬಂದಿದೆ ಎಂದು ಹೇಳಿದರು. ಅಸೋಸಿಯೇಶನ್ ಅಧ್ಯಕ್ಷ ಕೆ.ಎ ಅಬೂಬಕ್ಕರ್ ಮಾತನಾಡಿದರು, ಖುತುಬಿ ನಗರ ಖತೀಬ್ ಶಫೀಕ್ ಸಅದಿ ವಿಷಯ ಮಂಡಿಸಿದರು. ಈ…
UN NETWORKS ಕಣಚೂರು: ನಾಟೆಕಲ್ ಕಣಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಅಮೆರಿಕಾದ ಟೆಕ್ಸಾಸ್‍ನ ಪ್ರಿಸಿಷನ್ ಆರ್ಥಪೆಡಿಕ್ಸ್ ಜತೆಗೆ ಜ್ಞಾನ ಬದಲಾವಣೆ ಮತ್ತು ಕೀಲು ಬದಲಿ ಶಸ್ತ್ರಚಿಕಿತ್ಸೆಯ ಕುರಿತು ಒಪ್ಪಂದ ಮಾಡಿಕೊಂಡಿದ್ದು, ಇದರ ಅಂಗವಾಗಿ ಮೂಳೆಚಿಕಿತ್ಸೆ ವಿಭಾಗದ ವಿವಿಧ ವೈದ್ಯರ ಸಮ್ಮುಖದಲ್ಲಿ `ಸಂಪೂರ್ಣ ಕೀಲು ಶಸ್ತ್ರಚಿಕಿತ್ಸೆಯ’ ನೇರ ಪ್ರಸಾರವನ್ನು ಕಣಚೂರು ಆಸ್ಪತ್ರೆಯ ಆಡಿಟೋರಿಯಂನಲ್ಲಿ ಮಾಡಲಾಗಿದೆ ಎಂದು ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮೂಳೆಚಿಕಿತ್ಸೆ ವಿಭಾಗ ಮುಖ್ಯಸ್ಥ ಡಾ. ಜಲಾಲುದ್ದೀನ್ ಎಂ. ವಿ ತಿಳಿಸಿದ್ದಾರೆ. ನಾಟೆಕಲ್ ಕಣಚೂರು ಆಸ್ಪತ್ರೆಯಲ್ಲಿ ಸೋಮವಾರ ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೀಲು ಬದಲಾವಣೆ ಕ್ಷೇತ್ರದಲ್ಲಿ ಜ್ಞಾನಾರ್ಜನೆ ಮತ್ತು ತರಬೇತಿಯನ್ನು ಒದಗಿಸುವ ಸಲುವಾಗಿ ಕಣಚೂರು ಸಂಸ್ಥೆ ಟೆಕ್ಸಾಸ್ ಮೂಲದ ಆರ್ಥಪೆಡಿಕ್ಸ್ ಸಂಸ್ಥೆ ಜತೆಗೆ ಕೈಜೋಡಿಸಿದೆ. ಕೆನರಾ ಆರ್ಥಪೆಡಿಕ್ಸ್ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಪೂರ್ಣ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಯ ನೇರಪ್ರಸಾರವನ್ನು ಆಸ್ಪತ್ರೆ ಆಡಿಟೋರಿಯಂನಲ್ಲಿ ಆಯೋಜಿಸಿತ್ತು. ಬಡಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಅಂತಾರಾಷ್ಟ್ರೀಯ ಸಂಸ್ಥೆ ಜತೆಗೆ ಕೈಜೋಡಿಸಲಾಗಿದೆ. ರೋಗಿಗಳನ್ನು ಅತಿಥಿಯಂತೆ ಆಸ್ಪತ್ರೆ ನೋಡಿಕೊಳ್ಳುತ್ತಿದ್ದು, ಹಣ…
UN NETWORKS ಉಪ್ಪಿನಂಗಡಿ : ಸಮಾಜಕ್ಕೆ ಸರಿಯಾದ ದಿಗ್ದರ್ಶನ ನೀಡಿ ಸತ್ಪಥಕ್ಕೆ ಕೊಂಡೊಯ್ಯುವ ಬಹಳ ದೊಡ್ಡ ಜವಾಬ್ದಾರಿಯು ಧಾರ್ಮಿಕ ವಿದ್ವಾಂಸರ ಮೇಲಿದ್ದು ಅದನ್ನು ನಿರ್ವಹಣೆ ಮಾಡಲು ಅಗತ್ಯವಾದ ಪ್ರಾಮಾಣಿಕತೆ, ಬಧ್ದತೆ, ಮತ್ತು ಪ್ರಾಯೋಗಿಕ ತರಬೇತಿ ಉಲಮಾಗಳಿಗೆ ಅನಿವಾರ್ಯ ವಾಗಿದೆ ಎಂದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಕಾರ್ಯದರ್ಶಿ ಮೌಲಾನಾ ಪೆರೋಡ್ ಅಬ್ದುಲ್ರಹ್ಮಾನ್ ಸಖಾಫಿ ಪ್ರಸ್ತಾಪಿಸಿದರು. ಕರ್ನಾಟಕ ಜಂಇಯ್ಯತುಲ್ ಉಲಮಾದ ವತಿಯಿಂದ ಉಪ್ಪಿನಂಗಡಿ ತಾಜುಲ್ ಉಲಮಾ ವೇದಿಕೆಯಲ್ಲಿ ಹಮ್ಮಿಕೊಂಡ ಬೃಹತ್ ಉಲಮಾ ಕಾನ್ಫರೆನ್ಸ್ ನ ಉದ್ಘಾಟನಾ ಸಂಗಮದಲ್ಲಿ ಅವರು “ಉಲಮಾಗಳ ಜವಾಬ್ದಾರಿ” ಎಂಬ ವಿಷಯ ದಲ್ಲಿ ಉಪನ್ಯಾಸ ಮಾಡುತ್ತಿದ್ದರು. ಆ ಬಗ್ಗೆ ಜಾಗೃತಿ ಮೂಡಿಸಲು ಹಮ್ಮಿಕೊಂಡ ಉಲಮಾ ಕಾನ್ಫರೆನ್ಸ್ ಕಾಲ ಘಟ್ಟದ ಬಲು ದೊಡ್ಡ ಬೇಡಿಕೆಯ ಈಡೇರಿಕೆಗೆ ಸಮರ್ಪಕ ಹೆಜ್ಜೆ ಯಾಗಿದ್ದು ಉಲಮಾಗಳ ನಾಯಕತ್ವದಲ್ಲಿ ಸಮುದಾಯವು ಪರಂಪರಾಗತ ಅಹ್ಲುಸ್ಸುನ್ನತಿ ವಲ್ ಜಮಾ ಅತಿನ ತತ್ವಾದರ್ಶಗಳ ತಳಹದಿಯಲ್ಲಿ ಒಗ್ಗಟ್ಟಿನಲ್ಲಿ ಮುಂದುವರಿಯ ಬೇಕೆಂದು ಅವರು ಕರೆ ನೀಡಿದರು. ಸಮಾವೇಶದಲ್ಲಿ ಕರ್ನಾಟಕ ಸುನ್ನೀ ಕೋ…
UN NETWORKS ಬಂಟ್ವಾಳ: ತಾಲೂಕು, ಕಾವಳಪಡೂರು ಗ್ರಾಮದ ವಗ್ಗ ಸರ್ಕಾರಿ ಫ್ರೌಢ ಶಾಲಾ ವಿಭಾಗದ ಪ್ರಭಾರ ಮುಖ್ಯೋಪಾದ್ಯಾಯರಾದ ಆಂಗ್ಲ ಭಾಷಾ ಶಿಕ್ಷಕ, ಸ್ವಚ್ಚ ಸುಂದರ ಶಾಲಾ ಪರಿಸರ ನಿರ್ಮಿಸುವಲ್ಲಿ ಆಧುನಿಕ ಮೂಲ ಸಾಮರ್ಥಗಳ ಜೊತೆಗೆ ಕಲಿಕೆಯ ಭದ್ರ ಬುನಾದಿ ಹಾಕಿ ಪ್ರಾಮಾಣಿಕ ಪ್ರಯತ್ನದ ಮೂಲಕ ಯಶಸ್ವಿ 2017-18 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಶೇಖ್ ಆದಂ ಸಾಹೇಬ್ ಅವರಿಗೆ ಜವಾನ್ ಫ್ರೆಂಡ್ಸ್ ಬಿ.ಸಿ.ರೋಡ್ ವತಿಯಿಂದ ಸರಕಾರಿ ಪದವಿಪೂರ್ವ ಕಾಲೇಜು ವಗ್ಗದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜವಾನ್ ಫ್ರೆಂಡ್ಸ್ ತಂಡದ ಸದಸ್ಯ ಹಾಗೂ ವಗ್ಗ ಶಾಲೆಯ ಹಳೆ ವಿದ್ಯಾರ್ಥಿ ನೌಶಾದ್ ವಗ್ಗ ಮಾತನಾಡಿ ಆದಂ ಸಾಹೇಬ್ ಅವರು ಮಾದರಿ ಶಿಕ್ಷಕರಾಗಿದ್ದಾರೆ ವಿದ್ಯಾರ್ಥಿಗಳೊಂದಿಗೆ ಮತ್ತು ಪೋಷಕರೊಂದಿಗೆ ಬೆರೆತುಕೊಳ್ಳುವ ಇವರ ಉತ್ತಮ ನಡತೆಯೇ ಅವರ ಪ್ರಶಸ್ತಿಗೆ ಕಾರಣವಾಗಿದೆ . ಮುಂದಿನ ದಿನಗಳಲ್ಲಿ ಅವರಿಗೆ ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ ದೊರಕಲಿ ಎಂದು ಶುಭಹಾರೈಸಿದರು. ಈ ಸಂದರ್ಭದಲ್ಲಿ ಜವಾನ್…
UN NETWORKS ತೊಕ್ಕೊಟ್ಟು: ಪೆರ್ಮನ್ನೂರು ಸಂತ ಸೆಬಾಸ್ತಿಯನ್ನರ ಧರ್ಮಕೇಂದ್ರದ ಶತಮಾನೋತ್ಸವ ವರ್ಷದ ಅಂಗವಾಗಿ ಸಿ.ಎಲ್.ಸಿ. ಪೆರ್ಮನ್ನೂರು ಇದರ ವತಿಯಿಂದ ಕುಟುಂಬ ಸಂಭ್ರಮ ಕಾರ್ಯಕ್ರಮ ಧರ್ಮಕೇಂದ್ರದ ಮೈದಾನದಲ್ಲಿ ನಡೆಯಿತು. ಅಂತರಾಷ್ಟ್ರೀಯ`ಮಿಸ್ಟರ್ ವಲ್ರ್ಡ್’ ಖ್ಯಾತಿಯ ಬಾಡಿ ಬಿಲ್ಡರ್ ರೈಮಂಡ್ ಡಿ’ಸೋಜಾ, ಬಾಡಿ ಬಿಲ್ಡರ್ಸ್ ಎಸೋಸಿಯೇಶನ್‍ನ ಅಧ್ಯಕ್ಷ ಭಾಸ್ಕರ ತೊಕ್ಕೊಟ್ಟು, ಅಂತರರಾಷ್ಟ್ರೀಯ ಪವರ್ ಲಿಫ್ಟರ್ ಗೀತಾ ಬಾಯಿ, ಏಕಲವ್ಯ ಪ್ರಶಸ್ತಿ ಪುರಸ್ಕೃತ ಬಾಡಿ ಬಿಲ್ಡರ್ ರೋಶನ್ ಫೆರಾವೋ ಇವರನ್ನು ಸನ್ಮಾನಿಸಿದರು. ಧರ್ಮಕೇಂದ್ರದ ಪ್ರಧಾನಗುರು ಫಾದರ್ ಜೆ.ಬಿ. ಸಲ್ದಾನ ಅವರ ಸನ್ಮಾನ ಕಾರ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ಚರ್ಚ್‍ನ ವಿವಿಧ ವಾರ್ಡ್‍ನವರಿಗೆ ಸ್ಪರ್ಧೆ ಏರ್ಪಡಿಸಲಾಯಿತು.
UN NETWORKS ಉಳ್ಳಾಲ: ಸಮಾಜದಲ್ಲಿನ ಬಡ-ನಿರ್ಗತಿಕರ ಆರೋಗ್ಯ ಕಾಪಾಡುವಲ್ಲಿ ಯುವಕರು ಸಂಘಟಿತರಾಗಿ ಉಚಿತ ವೈದ್ಯಕೀಯ ಶಿಬಿರ ನಡೆಸುವುದರೊಂದಿಗೆ, ಸೌಹಾರ್ದಯುತ ಸಮಾಜ ನಿರ್ಮಾಣದಲ್ಲಿ ಕೈ ಜೋಡಿಸುವುದು ಕಾಲ ಘಟ್ಟದ ಅನಿವಾರ್ಯತೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕಿ ಹಾಗೂ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಶಕುಂತಲಾ ಶೆಟ್ಟಿ ಹೇಳಿದರು. ಇತ್ತಿಫಾಕ್ ಮೀಲಾದ್ ಕಮಿಟಿ ಜೋಗಿಬೆಟ್ಟು, ಗಡಿಯಾರ ಹಾಗೂ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ನಾಟೆಕಲ್, ಮಂಗಳೂರು ಇದರ ಸಹಯೋಗದೊಂದಿಗೆ ಸರಕಾರಿ ಪ್ರಾಥಮಿಕ ಶಾಲೆ ಗಡಿಯಾರ ಇಲ್ಲಿ ನಡೆದ ಉಚಿತ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಎಂ.ಜೆ.ಎಂ. ಗಡಿಯಾರ್ ಇಲ್ಲಿನ ಖತೀಬರಾದ ಟಿ.ಪಿ. ಜಮಾಲುದ್ದೀನ್ ದಾರಿಮಿ ಪ್ರಾರ್ಥಿಸಿದರು. ಕಣಚೂರು ಸಮೂಹ ಸಂಸ್ಥೆಯ ಅಧ್ಯಕ್ಷರಾದ ಹಾಜಿ ಯು.ಕೆ. ಮೋನು ಅಧ್ಯಕ್ಷತೆಯನ್ನು ವಹಿಸಿದ್ದರು. ಸುಮಾರು 400ಕ್ಕೂ ಅಧಿಕ ಮಂದಿ ಈ ಶಿಬಿರದ ಸದುಪಯೋಗವನ್ನು ಪಡೆದುಕೊಂಡರು. ಮುಖ್ಯ ಅತಿಥಿಗಳಾಗಿ ಎಂ.ಜೆ.ಎಂ. ಗಡಿಯಾರ್‍ನ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಪಾರ್ಪಕಜೆ, ಸರಕಾರೀ ಪ್ರಾರ್ಥಮಿಕ ಶಾಲೆ ಗಡಿಯಾರಿನ ಸಹ ಶಿಕ್ಷಕರಾದ ಸದಾನಂದ ಶೆಟ್ಟಿ ನೇರಳಕಟ್ಟೆ…

