Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಪಜೀರು: ಬೈಕ್ ಅಪಘಾತಕ್ಕೀಡಾಗಿ ಸಹಸವಾರ ಮೃತಪಟ್ಟಿರುವ ಘಟನೆ ಪಜೀರು ಗ್ರಾಮದ ಕಂಬ್ಲಪದವು ಎಂಬಲ್ಲಿ ಗುರುವಾರ ತಡರಾತ್ರಿ ವೇಳೆ ಸಂಭವಿಸಿದೆ. ಸಹಸವಾರ ಮುಡಿಪು ನಿವಾಸಿ ಯೋಗೀಂದ್ರ(35) ಮೃತರು. ದೇರಳಕಟ್ಟೆಯಿಂದ ಮುಡಿಪು ಕಡೆಗೆ ತೆರಳುತ್ತಿದ್ದ ಎ.ಪಿ.ಅಶ್ರಫ್ ಎಂಬವರ ಬೈಕಿನಲ್ಲಿ ಯೋಗೀಂದ್ರ ಅವರು ಪ್ರಯಾಣಿಸುತ್ತಿದ್ದರು. ಕಂಬ್ಲಪದವು ಬಳಿ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದ ಬೈಕ್ ರಸ್ತೆಯ ಎಡ ದಿಕ್ಕಿನಲ್ಲಿ ಹಾಕಲಾಗಿದ್ದ ಮಣ್ಣಿನ ದಿಬ್ಬಕ್ಕೆ ಡಿಕ್ಕಿ ಹೊಡೆದು ಮಗುಚಿಬಿದ್ದ ಪರಿಣಾಮ ಯೋಗೀಂದ್ರ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಸ್ಥಳೀಯ ಪರಮೇಶ್ವರ್ ಎಂಬವರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಿದ್ದರು. ಆದರೆ ಯೋಗೀಂದ್ರ ದಾರಿಮಧ್ಯೆ ಮೃತಪಟ್ಟಿದ್ದಾರೆ. ಕೊಣಾಜೆ ಠಾಣೆಯಲ್ಲಿ ಬೈಕ್ ಸವಾರ ಅಶ್ರಫ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಗಾರೆ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕ ಕೆಳಗೆ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾದವರು ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆಗೆ ಗುತ್ತಿಗೆದಾರನ ನಿರ್ಲಕ್ಷ್ಯವೇ ಕಾರಣ ಎಂದು ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿದೆ. ಲಿಪು ನಾಯ್ಕ್ (24) ಮೃತ ಕಾರ್ಮಿಕ. ಜ.11 ರಂದು ಮುಡಿಪುವಿನ ಶೋಭಾ ಡೆವಲಪ್ಪರ್ಸ್ ಸಂಸ್ಥೆಯಲ್ಲಿ ಸಿಮೆಂಟ್ ಗಾರೆಗೆ ನೀರು ಹಾಯಿಸುತ್ತಿದ್ದ ಸಂದರ್ಭ ಕಾಲು ಜಾರಿ ಇಮ್ಮುಖವಾಗಿ ನೆಲಕ್ಕೆ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರ ಸಂಬಂಧಿಕರು ಲಿಪು ನಾಯ್ಕ್ ಸಾವಿಗೆ ಗುತ್ತಿಗೆದಾರನ ನಿರ್ಲಕ್ಷ್ಯವೇ ಕಾರಣ, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿ ಕೊಣಾಜೆ ಠಾಣೆಗೆ ಮೃತರ ಸಂಬಂಧಿಕರು ದೂರು ನೀಡಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ : ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕಳೆದ ಐದು ದಿನಗಳಿಂದ ನಡೆದ 31ನೆಯ ದಕ್ಷಿಣ ವಲಯ ಅಂತರ್ ವಿವಿ ಯುವಜನೋತ್ಸವ `ವೇವ್ಸ್’-2015ರಲ್ಲಿ ಕೇರಳದ ವಿ.ವಿ.ಗಳು ಪಾರಮ್ಯ ಮೆರೆದಿದ್ದು, ತಿರುವನಂತಪುರದ ಯುನಿವರ್ಸಿಟಿ ಆಫ್ ಕೇರಳ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರೆ ಕೊಟ್ಟಾಯಂನ ಮಹಾತ್ಮಾಗಾಂ„ ವಿಶ್ವವಿದ್ಯಾಲಯ ರನ್ನರ್ ಅಪ್ ಪಡೆದುಕೊಂಡು ಫೆಬ್ರವರಿಯಲ್ಲಿ ಮೈಸೂರಿನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಂಡಿದೆ. ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ. ಕೆ. ಭೈರಪ್ಪ ಮಾತನಾಡಿ ಮಂಗಳೂರು ಸಂಸ್ಕ ೃತಿಯ ನೆಲವಾಗಿದ್ದು ಯುವಜನೋತ್ಸವದಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಎಲ್ಲ ರಂಗದಲ್ಲಿ ತೊಡಗಿಸಕೊಳ್ಳಲು ಸಹಾಯವಾಗುತ್ತದೆ. ಹಾಗಾಗಿ ಇಂತಹ ವೇದಿಕೆಯಲ್ಲಿ ಪಾಲುಪಡೆಯುವ ಅವಕಾಶಕ್ಕಾಗಿ ವಿದ್ಯಾರ್ಥಿಗಳು ಹೆಚ್ಚಿನ ಗಮನ ಹರಿಸಬೇಕು . ಯುವಜನೋತ್ಸವದ ಯಶಸ್ವಿ ಆಯೋಜನೆಯಿಂದ ಮಂಗಳೂರು ವಿವಿಯ ಕೀರ್ತಿ ಶಿಖರಕ್ಕೇರಿದೆ. ಯುವಜನೋತ್ಸವ ಯಶಸ್ವಿಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು. ತೈವಾನ್‍ನಲ್ಲಿ ನಡೆದ ಅಂತರಾಷ್ಟಿ ್ರೀಯ ಸಮ್ಮೇಳನದಲ್ಲಿ ಭಾಗವಹಿಸುವ ಅನಿವಾರ್ಯತೆ ಇದ್ದುದರಿಂದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೈರಂಗಳ: ಕೈರಂಗಳದ ಪುಣ್ಯಕೋಟಿನಗರದ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ಶಾರದೋತ್ಸವದ ಅಂಗವಾಗಿ ಶ್ರೇಷ್ಠಭಾರತ (ವಿಜ್ಞಾನ, ಸಂಸ್ಕøತಿ, ಜೀವವೈವಿಧ್ಯ, ವೃಕ್ಷ ಸಂಪತ್ತು) ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಯಿತು. ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ, ಕಾರ್ಯಕ್ರಮವನ್ನು ಉದ್ಘಾಟಿಸಿ ವಸ್ತು ಪ್ರದರ್ಶನ ವೀಕ್ಷಣೆಗೆ ಚಾಲನೆ ನೀಡಿದರು. ಸಂಸ್ಥೆಯ ಮಾರ್ಗದರ್ಶಕ ಪಿ.ಶಂಕರ ಭಟ್, ಸಂಸ್ಥೆಯ ಸಂಚಾಲಕ ಟಿ. ಜಿ. ರಾಜಾರಾಮ ಭಟ್, ಆಡಳಿತ ಮಂಡಳಿಯ ಹಿರಿಯ ಸದಸ್ಯರಾದ ಬಾಲಕೃಷ್ಣ ರೈ ಮುಂಡಾಜೆ, ಸತ್ಯನಾರಾಯಣ ಎಸ್. ಎಡಂಬಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಇಸ್ಲಾಂ ಧರ್ಮದ ಸಿದ್ಧಾಂತಗಳನ್ನು ಅನುಕರಣೆ ಮಾಡಿ ಪ್ರವಾದಿಯವರ ಉಪದೇಶಗಳನ್ನು ಸಮುದಾಯದತ್ತ ತಲುಪಿಸುವ ಕಾರ್ಯ ನಾವು ಮಾಡಬೇಕು. ಮುಸ್ಲಿಮರು ದಾರಿ ತಪ್ಪದಂತೆ ಅವರಿಗೆ ಶಿಕ್ಷಣ ಒದಗಿಸಿಕೊಡುವ ವ್ಯವಸ್ಥೆಯನ್ನು ಎಸ್‍ವೈಎಸ್ ವತಿಯಿಂದ ಆಗಬೇಕು ಎಂದು ಡಿ.ಕೆ. ಉಮ್ಮರ್ ಸಖಾಫಿ ಹೇಳಿದರು. ಅವರು ದೇರಳಕಟ್ಟೆಯ ಸುನ್ನಿ ಸೆಂಟರ್‍ನಲ್ಲಿ ನಡೆದ ಎಸ್‍ವೈಎಸ್ ಬ್ರಾಂಚ್ ಎಕ್ಸಿಕ್ಯುಟಿವ್ ಕ್ಯಾಂಪ್‍ನಲ್ಲಿ ಭಾಗವಹಿಸಿ ಮಾತನಾಡಿದರು. ಎಸ್‍ವೈಎಸ್ ದೇರಳಕಟ್ಟೆ ಸೆಂಟರ್ ಅಧ್ಯಕ್ಷ ಏಷ್ಯನ್ ಬಾವ ಹಾಜಿ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಎಸ್‍ವೈಎಸ್ ಕಾರ್ಯದರ್ಶಿ ಸಿದ್ದೀಕ್ ಸಖಾಫಿ ಮೂಳೂರು ಕಾರ್ಯಕ್ರಮ ಉದ್ಘಾಟಿಸಿದರು. ಸುರಿಬೈಲ್ ದಾರುಲ್ ಅಶ್-ಅರಿಯ್ಯಾ ಮೆನೇಜರ್ ಮುಹಮ್ಮದಾಲಿ ಸಖಾಫಿ ವಿಚಾರ ಮಂಡನೆ ಮಾಡಿದರು. ವಿ.ಯು. ಇಸ್ಹಾಕ್ ಝುಹ್‍ರಿ ಕಾನೆಕೆರೆ ಸಂಘಟನೆಯ ಬಗ್ಗೆ ಮಾಹಿತಿ ನೀಡಿದರು. ಸಯ್ಯಿದಲವಿ ತಂಙಳ್ ಕಿನ್ಯ ಅತಿಥಿಗಳನ್ನು ಸ್ವಾಗತಿಸಿದರು. ಇಸ್ಮಾಯಿಲ್ ಕಿನ್ಯ ವಂದಿಸಿದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೋಟೆಕಾರು: ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ವಾಹನ ಸಾಲ ಬಿಡುಗಡೆ ಕಾರ್ಯಕ್ರಮ ಸಂಘದ ಆವರಣದಲ್ಲಿ ಇತ್ತೀಚೆಗೆ ನಡೆಯಿತು. ವಾಹನ ಸಾಲ ಪಡೆದ ಪ್ರಥಮ ಗ್ರಾಹಕ ನವೀನ್ ಮತ್ತು ಯು.ಕೆ.ಗೋಪಾಲ ಅವರಿಗೆ ವಾಹನದ ಕೀಲಿ ಕೈ ಹಸ್ತಾಂತರಿಸಲಾಯಿತು. ವಿತರಣೆ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಕೆ. ಕೃಷ್ಣಪ್ಪ ಸಾಲ್ಯಾನ್, ಉಪಾಧ್ಯಕ್ಷ ಮೊೈದಿನ್ ಕುಂಞ ಮರಾಠಿಮೂಲೆ, ನಿರ್ದೇಶಕರಾದ ಅರುನ್ ಕುಮಾರ್ ತೊಕ್ಕೊಟ್ಟು, ಉದಯ ಶೆಟ್ಟಿ, ಗಣೇಶ್ ಶೆಟ್ಟಿ, ನಾರಾಯಣ ತಲಪಾಡಿ, ಪದ್ಮಾವತಿ ಎಸ್. ಶೆಟ್ಟಿ, ರಾಜೀವಿ ಪಿಲಾರು, ಸಂಘದ ಮುಖ್ಯ ಕಾರ್ಯನಿರ್ವಹಣಾ ಅ„ಕಾರಿ ಯು. ವೇಣುಗೋಪಾಲ ಉಪಸ್ಥಿತರಿದ್ದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಬಾಳೆಪುಣಿ: ಆಧುನಿಕ ಕೃಷಿ ಪದ್ದತಿ, ಹೊಸ ಹೊಸ ತಂತ್ರಜ್ಞಾನ, ಅವಿಷ್ಕಾರಗಳನ್ನು ಬಳಸಿ ಒಂದು ಬೆಳೆಗೆ ಸೀಮಿತವಾಗದೆ ಕೃಷಿ, ತೋಟಗಾರಿಕೆ, ಮೀನುಗಾರಿಗೆ, ಹೈನುಗಾರಿಕೆಯನ್ನು ಸಮಗ್ರ ಕೃಷಿ ಪದ್ದತಿಯಲ್ಲಿ ಅಳವಡಿಸಿ ಕೃಷಿಯಲ್ಲಿ ಲಾಭವನ್ನು ಪಡೆಯಬಹುದು ಎಂದು ಬ್ರಹ್ಮಾವರದ ವಲಯ ಸಹ ಸಂಶೋಧನಾ ನಿರ್ದೇಶಕರಾದ ಡಾ.ಎಂ. ಹನುಮಂತಪ್ಪರವರು ಅಭಿಪ್ರಾಯಪಟ್ಟರು. ಅವರು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ಇದರ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಉಳ್ಳಾಲ ಇದರ ವತಿಯಿಂದ ಬಾಳೆಪುಣಿ ಗ್ರಾಮ ಪಂಚಾಯತ್‍ನ ಅಂಬೇಡ್ಕರ್ ಸಭಾಭವನದಲ್ಲಿ ಹಮ್ಮಿಕೊಂಡ ಕೃಷಿ ಗ್ರಾಮ ದತ್ತು ಯೋಜನೆಯಡಿಯಲ್ಲಿ ಸಮಗ್ರ ಕೃಷಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಬ್ರಹ್ಮಾವರದ ಕೃಷಿ ವಿಸ್ತರಣಾ ಸಹ ನಿರ್ದೇಶಕರಾದ ಡಾ.ಎಸ್.ಯು.ಪಾಟೀಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಉಳ್ಳಾಲ ಇದರ ಮುಖ್ಯಸ್ಥರಾದ ಡಾ.ಲಕ್ಷ್ಮಣ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಹೆಚ್.ಹನುಮಂತಪ್ಪ, ಬಾಳೆಪುಣಿ ಗ್ರಾಮ ಪಂಚಾಯತ್‍ನ ಅಭಿವೃದ್ದಿ ಅಧಿಕಾರಿ ರವಿಕುಮಾರ್, ಪ್ರಗತಿಪರ ಕೃಷಿಕರಾದ ರಮೇಶ್…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ರೈಲಿನಿಂದ ಬಿದ್ದು ಅಪರಿಚಿತನೋರ್ವ ಮೃತಪಟ್ಟಿರುವ ಘಟನೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಸುಮಾರು 30-35ರ ಹರೆಯದ ವ್ಯಕ್ತಿಯ ಮೃತದೇಹ ಛಿದ್ರಗೊಂಡ ಸ್ಥಿತಿಯಲ್ಲಿ ಬೆಳಿಗ್ಗೆ ಪತ್ತೆಯಾಗಿದೆ. ಬಲಗೈಯಲ್ಲಿ `ಓಂ’ ಮಚ್ಛೆಯನ್ನು ಧರಿಸಿದ್ದು, ವಾರೀಸುದಾರರಿದ್ದಲ್ಲಿ ರೈಲ್ವೇ ಪೊಲೀಸರನ್ನು ಸಂಪರ್ಕಿಸಲು ಕೋರಲಾಗಿದೆ. ಚಲಿಸುತ್ತಿರು ರೈಲಿನಿಂದ ಬಿದ್ದು ಮೃತಪಟ್ಟಿರುವುದಾಗಿ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಚಿತ್ರಗಳು: ನಿತೇಶ್.ಪಿ.ಬೈಂದೂರ್ ಕೊಣಾಜೆ: ಗುರುವಾರ ಮಂಗಳಾ ಆಡಿಟೋರಿಯಂನಲ್ಲಿ 10ನಾಟಕಗಳು ಪ್ರದರ್ಶನಗೊಂಡವು. ಸಾಮಾಜಿಕ ಸಮಸ್ಯೆ ಮತ್ತು ಜಾತಿ ವರ್ಗ ಸಂಘರ್ಷದ ವಸ್ತುವನ್ನು ಬಿಂಬಿಸುವ ನಾಟಕಗಳು ವೇದಿಕೆಯಲ್ಲಿ ಕಂಡುಬಂದವು. ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಎಂಡೋಸಲ್ಫಾನ್ ಸಮಸ್ಯೆಯ ಬಗ್ಗೆ, ಗುಲ್ಬರ್ಗ ವಿವಿ ತಂಡ ಸಾಕ್ರಟೀಸ್‍ನ ಜೀವನದ ಕೊನೆಯ ಕ್ಷಣಗಳನ್ನು ಸತ್ಯಾನ್ವೇಷಣೆ ಮಾಡಿ ಬದುಕಿನ ಕರುಣಾಜನಕ ಕಥೆಯನ್ನು, ಧಾರವಾಡ ಕೃಷಿ ವಿದ್ಯಾಲಯದವರು ಮಹಾರಾಷ್ಟ ್ರದ ದಲಿತರ ಕುಟುಂಬವೊಂದರ ಸಮಸ್ಯೆಯನ್ನು ಕೇಂದ್ರೀಕರಿಸಿದ, ಧಾರವಾಡದ ಕರ್ನಾಟಕ ವಿವಿ ನೆರೆಸಂತ್ರಸ್ತರ ಜೀವನ ಕಥೆ, ಅಮೃತ ವಿದ್ಯಾಪೀಠಂ ಕೊಯಮತ್ತೂರು ಗಾಸಿಪ್‍ನ ನಿಜವನ್ನು ಹುಡುಕುವ ಯತ್ನ, ಮಂಗಳೂರು ವಿಶ್ವವಿದ್ಯಾಲಯದವರು ಘಟೋದ್ಗಜನ ಪುತ್ರ `ಬರ್ಬರಿಕಾ’ ಎಂಬ ವಿಶಿಷ್ಠ ಕಥಾನಕವನ್ನುಳ್ಳ ಕಿರುನಾಟಕ ಪ್ರದರ್ಶಿಸಿದರು. ಕೇರಳ ವಿವಿ ತಂಡ ಇತಿಹಾಸದ ಪಾತ್ರಗಳೊಂದಿಗೆ ಸಂವಾದಿಸುವ ಏಕಾಂಕ ನಾಟಕವೂ ಗಮನ ಸೆಳೆಯಿತು. ನಾಟಕ ಪ್ರದರ್ಶನಕ್ಕೆ ಜನ ಸಾಗರವೇ ಹರಿದುಬಂದಿತ್ತು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ದೇಶದ ಎಲ್ಲ ಬೃಹತ್ ಸಂಸ್ಥೆಗಳು ಕಂಪ್ಯೂಟರ್ ಅಂತರ್ಜಾಲ ಮತ್ತು ಮೊಬಿಲಿಟಿಯನ್ನೇ ಅವಲಂಬಿಸಿದ್ದು ಆಂಡ್ರಾಯಿಡ್ ಕ್ಷೇತ್ರದಲ್ಲಿ ತಾಂತ್ರಿಕ ವಿಭಾಗದ ವಿದ್ಯಾರ್ಥಿಗಳು ನೂತನ ಅವಿಷ್ಕಾರ ಮಾಡಲು ವಿಫುಲ ಅವಕಾಶಗಳಿವೆ ಎಂದು ಮಂಗಳೂರು ನೋವಿಗೋಸೊಲ್ಯೂಷನ್ಸ್‍ನ ಮುಖ್ಯಾಧಿಕಾರಿ ಮತ್ತು ನಿರ್ದೇಶಕ ಪ್ರವೀಣ್ ಕಲ್ಬಾವಿ ಹೇಳಿದರು. ಕೊಣಾಜೆ ನಡುಪದವಿನ ಪಿ.ಎ. ಎಂಜಿನಿಯರಿಂಗ್ ಕಾಲೇಜಿನ ಡಿಪಾರ್ಟ್‍ಮೆಂಟ್ ಆಫ್ ಕಂಪ್ಯೂಟರ್ ಎಂಜಿನಿಯರಿಂಗ್‍ನ ವತಿಯಿಂದ ಆಯೋಜಿಸಲಾದ “ಇಂಟರ್ನ್‍ಶಿಫ್ ಪ್ರೋಗ್ರಾಮ್ ಆನ್ ಆಂಡ್ರಾಯಿಡ್ ಅಪ್ಲಿಕೇಶನ್ ಡೆವಲಪ್‍ಮೆಂಟ್” ಕಾರ್ಯಾಗಾರ ಉದ್ದೇಶಿಸಿ ಮಾತನಾಡಿ ಭಾರತ ದೇಶವು 50ಶೇ. ಯುವ ಶಕ್ತಿಯನ್ನು ಹೊಂದಿದ್ದು, ಅದರಲ್ಲೂ ಬಹುತೇಕರು ಸುಶಿಕ್ಷಿತರಾಗಿದ್ದಾರೆ. ಪ್ರಧಾನಿ ಮೋದಿಯವರೇ ಕಂಪ್ಯೂಟರ್, ಅಂತರ್ಜಾಲ ಮತ್ತು ಮೊಬಿಲಿಟಿ ಆವಿಷ್ಕಾರಗಳಿಗೆ ಆದ್ಯತೆ ನೀಡುತ್ತಿದ್ದು, ಯುವ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನೂತನ ಸಂಶೋಧನೆಗಳಿಗೆ ವಿಫುಲ ಅವಕಾಶಗಳಿವೆ ಎಂದು ನುಡಿದರು. ವಿದ್ಯಾರ್ಥಿಗಳು ತಾವು ಹೇಗೆ ಬುದ್ಧಿವಂತರಾಗಬೇಕೆಂಬು ಎಂಬುವುದನ್ನು ಧೃಢಪಡಿಸಿಕೊಳ್ಳಿ. ಆಂಡ್ರಾಯಿಡ್ ಅಪ್ಲಿಕೇಶನ್‍ನ ಬಗ್ಗೆ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿ ದೊರಕಬೇಕಾದ ಆವಶ್ಯಕತೆ ಇದ್ದು ಆ ನಿಟ್ಟಿನಲ್ಲಿ ಕಾಲೇಜು ಆಡಳಿತ…

Read More