Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮಂಗಳೂರು: ಆಗಸ್ಟ್ 18ರಂದು ಕರ್ತವ್ಯದಲ್ಲಿದ್ದ ವೇಳೆ ಆಕಸ್ಮಿಕವಾಗಿ ದುರಂತ ಸಾವಿಗೀಡಾದ ಪೊಲೀಸ್ ಸಿಬ್ಬಂದಿ ಗಣೇಶ್.ಎಂ.ಪಿ ರವರ ಮಕ್ಕಳಾದ ಅಖಿಲ್ ಮತ್ತು ಅನುರಚನಾ ಅವರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸಿಸಿಬಿ ಪೋಲೀಸರ ವತಿಯಿಂದ ತಲಾ 50,0000 ರೂಪಾಯಿ ಸಹಾಯಧನವನ್ನು ಸಿಸಿಬಿ ಅಧಿಕಾರಿ ವೆಲೆಂಟಿನ್ ಡಿ’ಸೋಜ ಹಸ್ತಾಂತರಿಸಿದರು. ಗಣರಾಜ್ಯೋತ್ಸವ ದಿನದ ಅಂಗವಾಗಿ ಮಂಗಳೂರಿನ ಸಿ.ಸಿಬಿ ಕಚೇರಿಯಲ್ಲಿ ಸಿಸಿಬಿ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಸಮ್ಮುಖದಲ್ಲಿ ಸಹಾಯಧನವನ್ನು ಹಸ್ತಾಂತರಿಸಲಾಯಿತು.

Read More

ಬೆಂಗಳೂರು: 67ನೇ ಗಣರಾಜ್ಯೋತ್ಸವ ಆಚರಣೆಯನ್ನು ರಾಜ್ಯಾದ್ಯಂತ ವಿದ್ಯುಕ್ತವಾಗಿ ಆಚರಿಸಲಾಗುತ್ತಿದ್ದು, ಬೆಂಗಳೂರಿನಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಇಂದು ರಾಜ್ಯಪಾಲ ವಜುಭಾಯಿ ವಾಲಾ ಅವರು ಧ್ವಜಾರೋಹಣ ನೆರವೇರಿಸಿ, ಸೈನಿಕರಿಂದ ಗೌರವ ರಕ್ಷೆ ಸ್ವೀಕರಿಸಿದರು. ಇದಕ್ಕೂ ಮೊದಲು ಪೊಲೀಸ್ ಬ್ಯಾಂಡ್ ವೃಂದದಿಂದ ರಾಷ್ಟ್ರಗೀತೆಯನ್ನು ನುಡಿಸಲಾಯಿತು. ರಾಷ್ಟ್ರಧ್ವಜಾರೋಹಣವಾಗುತ್ತಿದ್ದಂತೆಯೇ ಸೇನೆಯ ಹೆಲಿಕಾಪ್ಟರ್ ರಾಷ್ಟ್ರಧ್ವಜದ ಮೇಲೆ ಪುಷ್ಪವೃಷ್ಟಿಯನ್ನು ಸುರಿಸಿತು. ಬಳಿಕ ಹಿಂದಿಯಲ್ಲಿ ಭಾಷಣ ಪ್ರಾರಂಭಿಸಿದ ರಾಜ್ಯಪಾಲರು, ಭಾರತ 67 ವರ್ಷಗಳ ಹಿಂದೆ ಗಣರಾಜ್ಯವಾಯಿತು. ಅದೆಷ್ಟೋ ಜನರ ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿರುವ ಗಣರಾಜ್ಯೋತ್ಸವ ದಿನವಾದ ಇಂದು ಭಾರತ ಸ್ವಾತಂತ್ರ್ಯಕ್ಕಾಗಿ ಬಲಿದಾನ ನೀಡಿದವರಿಗೆ ಗೌರವವನ್ನು ಈ ಮೂಲಕ ಸಲ್ಲಿಸುತ್ತೇವೆ ಎಂದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತಲಪಾಡಿ: ಬಾರ್‍ನಲ್ಲಿ ಕುಡಿದು ಹೊರಬಂದು ನಿಂತಿದ್ದ ವ್ಯಕ್ತಿಗೆ ಅಪರಿಚಿತ ತಂಡವೊಂದು ರೀಪಿನಿಂದ ಹೊಡೆದು ಕೊಲೆಗೆ ಯತ್ನಿಸಿರುವ ಘಟನೆ ತಲಪಾಡಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. ತಲಪಾಡಿ ನಿವಾಸಿ ಫ್ರಾನ್ಸಿಸ್ ಡಿಸೋಜಾ ಎಂಬವರು ಬಾರ್ ನಿಂದ ಕುಡಿದು ಬಂದು ರಸ್ತೆಬದಿಯಲ್ಲಿ ನಿಂತಿದ್ದರು. ಈ ವೇಳೆ ಬಾರಿನ ಒಳಗಡೆಯಿಂದ ಬಂದ ಸುಮಾರು 6 ಜನರ ತಂಡ ಅವಾಚ್ಯ ಶಬ್ದಗಳಿಂದ ನಿಂದಿಸಿ ಓರ್ವ ರೀಪಿನಿಂದ ಸಿಕ್ಕ ಸಿಕ್ಕಲ್ಲಿಗೆ ಹೊಡೆಯಲು ಆರಂಭಿಸಿದ್ದಾನೆ. ಬಳಿಕ ಇತರರು ಸೇರಿಕೊಂಡು ಕೈ ಮತ್ತು ಕಾಲುಗಳಲ್ಲಿ ತುಳಿದು ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಫ್ರಾನ್ಸಿಸ್ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈಯಕ್ತಿಕ ದ್ವೇಷದಿಂದ ಘಟನೆ ನಡೆದಿದೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಚೆಂಬುಗುಡ್ಡೆ: ಮನೆಯೊಂದರಲ್ಲಿ ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ತೊಡಗಿಸಿಕೊಂಡಿದ್ದ ಮೂವರು ಬುಕ್ಕಿಗಳನ್ನು ಸಿಸಿಬಿ ಪೊಲೀಸರು ತೊಕ್ಕೊಟ್ಟು ಸಮೀಪದ ಚೆಂಬುಗುಡ್ಡೆಯಿಂದ ಬಂಧಿಸಿದ್ದು, ಅವರಿಂದ 3,56,900 ರೂ. ಬೆಲೆಬಾಳುವ ಸೊತ್ತು ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಚೆಂಬುಗುಡ್ಡೆಯ ಅಲ್ವಿನ್ ಕಿರಣ್ ಮೊಂತೇರೋ(32), ಉಳ್ಳಾಲ ಹೊಯಿಗೆಗದ್ದೆ ಮನೆಯ ಇನ್ನಾಸ್ ಡಿಸೋಜಾ(41) ಮತ್ತು ಕುತ್ತಾರು ನಿವಾಸಿ ಗಿತೇಶ್ (37) ಎಂಬವರನ್ನು ಬಂಧಿಸಲಾಗಿದೆ. ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯುತ್ತಿದ್ದ ಬಿಗ್ ಬ್ಯಾಶ್ 20-20 ಕ್ರಿಕೆಟ್ ಪಂದ್ಯಾಟದ ಸೋಲು ಗೆಲುವಿನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಎಂಬ ಅಕ್ರಮ ಜೂಜಾಟ ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಚೆಂಬುಗುಡ್ಡೆಯ ಮನೆಗೆ ದಾಳಿ ನಡೆಸಿ ಬಂಧಿಸಿದ್ದಾರೆ. ಬಂಧಿತರಿಂದ 13 ಮೊಬೈಲ್ ಫೋನ್, ಎಲ್ ಇಡಿ ಟಿ.ವಿ, ಬೆಟ್ಟಿಂಗ್ ವ್ಯವಹಾರಗಳ ಬಗ್ಗೆ ಬರೆದಿರುವ 3 ಡೈರಿಗಳು ಹಾಗೂ ನಗದು ಸೇರಿ ಒಟ್ಟು ರೂ.4 ಲಕ್ಷ ಬೆಲೆಬಾಳುವ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಉಳ್ಳಾಲ ಠಾಣೆಗೆ ಆರೋಪಿಗಳನ್ನು ಹಸ್ತಾಂತರಿಸಲಾಗಿದ್ದು, ಪ್ರಕರಣ ದಾಖಲಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Read More

ಹೈದರಾಬಾದ್: ಮಲಯಾಳಂನ ಖ್ಯಾತ ಕಲಾವಿದೆ ಹಾಗೂ ಪೋಷಕ ನಟಿ ಕಲ್ಪನಾ ರಂಜನಿ ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ಮೇಲ್ನೋಟಕ್ಕೆ ಹೃದಯಾಘಾತಕ್ಕೆ ಒಳಗಾಗಿ ನಟಿ ಕಲ್ಪನಾ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದ್ದು ಅವರಿಗೆ 51 ವರ್ಷ ವಯಸ್ಸಾಗಿತ್ತು.  ತೆಲುಗು ಚಿತ್ರವೊಂದರ ಚಿತ್ರೀಕರಣದ ನಿಮಿತ್ತ ಹೈದರಾಬಾದಿನ ಖಾಸಗಿ ಹೊಟೆಲ್ ನಲ್ಲಿ ನಟಿ ಕಲ್ಪನಾ ಅವರು ಉಳಿದುಕೊಂಡಿದ್ದರು. ಇಂದು ಬೆಳಗ್ಗೆ ಕೊಠಡಿಯ ಬಾಗಿಲು ತೆಗೆದಾಗ ಕಲ್ಪನಾ ಅವರು ಪ್ರಜ್ಞೆತಪ್ಪಿ ಕೆಳಗೆ ಬಿದ್ದಿದ್ದರು. ಇದರಿಂದ ಗಾಬರಿಯಾದ ಸಿಬ್ಬಂದಿ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ನಟಿ ಊರ್ವಶಿ ಅವರ ಸಹೋದರಿಯಾಗಿರುವ ಕಲ್ಪನಾ ಅವರ 1983ರಲ್ಲಿ ಬಾಲಕಲಾವಿದೆಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಕಲ್ಪನಾ ಅವರು, ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದರು. ಮಲಯಾಳಂ, ಕನ್ನಡ, ತೆಲುಗು ಮತ್ತು ತಮಿಳು ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಕಲ್ಪನಾ ಅವರು 2012ರಲ್ಲಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಪಾವೂರು: ಸ್ಕೌಟ್ ಮತ್ತು ಗೈಡ್ಸ್ ಶಾಲೆಯಲ್ಲಿದ್ದರೆ ಅದು ಸಣ್ಣ ಮಟ್ಟಿನ ಪೊಲೀಸ್ ಠಾಣೆಯಿದ್ದಂತೆ ಎಂದು ಪಾವೂರು ಸರ್ಕಾರಿ ಪ್ರೌಢ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಮ್ಮದ್ ಮೋನು ಅಭಿಪ್ರಾಯಪಟ್ಟರು. ಸ್ಥಳೀಯ ಸಂಸ್ಥೆ ವತಿಯಿಂದ ಪಾವೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಅಯೋಜಿಸಲಾಗಿರುವ ಸ್ಕೌಟ್-ಗೈಡ್ಸ್, ಕಬ್ ಬುಲ್ ಬುಲ್ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಪಾವೂರು ಗ್ರಾಮಕ್ಕೆ ಸರ್ಕಾರಿ ಪ್ರೌಢ ಶಾಲೆಯ ಬೇಡಿಕೆಯಿದ್ದ ಸಂದರ್ಭ ಹಲವು ಬಾರಿ ಗ್ರಾಮಸ್ಥರು ಮಾಡಿದ ಮನವಿ ಫಲ ನೀಡಿರಲಿಲ್ಲ. ಕೊನೆಯ ಪ್ರಯತ್ನ ಎಂಬಂತೆ ಗಾಡಿಗದ್ದೆ ಶಾಲೆಯ ಸ್ಕೌಟ್-ಗೈಡ್ಸ್ ಮಕ್ಕಳು ಅಂದಿನ ಶಾಸಕ ಯು.ಟಿ.ಫರೀದ್ ಅವರಿಗೆ ಮಾಡಿದ ಮನವಿಯ ಪರಿಣಾಮವಾಗಿ ಪ್ರೌಢ ಶಾಲೆ ಮಂಜೂರುಗೊಂಡಿತ್ತು ಎಂದು ಹೇಳಿದರು. ವ್ಯಕ್ತಿ ಕ್ರಿಯಾಶೀಲನಾಗಿದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯ, ಅಂತಹ ಕ್ರಿಯಾಶೀಲತೆ, ಶಿಸ್ತು, ಇತರರೊಂದಿಗೆ ಹೇಗೆ ಬೆರೆಯಬೇಕು ಎನ್ನುವ ತರಬೇತಿ ಸ್ಕೌಟ್-ಗೈಡ್ಸ್‍ನಲ್ಲಿ ಸಿಗುತ್ತದೆ ಎಂದು ಜನಜಾಗೃತಿ ಸಮಿತಿ ಮಾಜಿ ಅಧ್ಯಕ್ಷ ಶಂಕರನಾಂದ ಎನ್.ಇನವಳ್ಳಿ ಹೇಳಿದರು. ಸ್ಥಳೀಯ ಸಂಸ್ಥೆ ಅಧ್ಯಕ್ಷ ಎಂ.ಜಿ.ಕಜೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಸಹೋದರನೋರ್ವ ಪತ್ನಿ ಜತೆಗೆ ಸೇರಿಕೊಂಡು ಸಹೋದರಿಯನ್ನು ತೆಂಗಿನಕಾಯಿ ಸಿಪ್ಪೆ ಕೀಳುವ ಯಂತ್ರದಿಂದ ಹೊಡೆದು ಕೊಲೆಗೆ ಯತ್ನಿಸಿರುವ ಘಟನೆ ಭಾನುವಾರ ಮಾಡೂರಿನಲ್ಲಿ ನಡೆದಿದೆ. ಮಾಡೂರು ನಿವಾಸಿ ರಾಧಾ (45) ಕೊಲೆ ಯತ್ನಕ್ಕೊಳಗಾದವರು. ಇವರ ಕಿರಿಯ ಸಹೋದರ ಕೇಶವ ಮತ್ತು ಆತನ ಪತ್ನಿ ಅಕ್ಷತಾ ಎಂಬವರು ಸೇರಿಕೊಂಡು ಕೊಲೆಗೆ ಯತ್ನಿಸಿದ್ದಾರೆ. ಘಟನೆ ವಿವರ: ಮಾಡೂರು ನಿವಾಸಿ ರಾಧಾ ಮಾಡೂರಿನ ಮನೆಯಲ್ಲಿದ್ದ ಸಂದರ್ಭ ಭಾನುವಾರ ಬೆಳಿಗ್ಗೆ ಸಹೋದರ ಕೇಶವ ಮತ್ತು ಆತನ ಪತ್ನಿ ಬಂದಿದ್ದರು. ಮನೆಗೆ ಬಂದವರು ತನಗೆ ಸೇರಿದ ಸಾಮಗ್ರಿಗಳನ್ನು ಕೊಂಡೊಯ್ಯುವುದಾಗಿ ತಿಳಿಸಿದ್ದರು. ಅದಕ್ಕೆ ರಾಧಾ ಅವರು ಸಮ್ಮತಿಯನ್ನು ಸೂಚಿಸಿದ್ದರು. ಈ ವೇಳೆ ಕೇಶವ ಮನೆಯಲ್ಲಿದ್ದ ತೆಂಗಿನಕಾಯಿ ಸಿಪ್ಪೆ ಕೀಳುವ ಯಂತ್ರವನ್ನು ಕೈಗೆ ತೆಗೆದುಕೊಂಡು ಏಕಾಏಕಿ ರಾಧಾ ಅವರ ತಲೆಗೆ ಚುಚ್ಚಿ ಕೊಲೆಗೆ ಯತ್ನಿಸಿದ್ದನು. ಆದರೆ ರಾಧಾ ಅವರು ಕೈಯಲ್ಲಿ ತಡೆದಾಗ ಅದು ಕೈಗೆ ತಗಲಿದೆ. ಬಳಿಕ ಮನೆಯಿಂದ ಹೊರ ಓಡಿಬಂದವರು ಸ್ಥಳೀಯರ ನೆರವನ್ನು ಕೋರಿದ್ದಾರೆ. ಕೂಡಲೇ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಬೋಳಿಯಾರು: ವಿವಾಹಿತೆ ನೇಣು ಬಿಗಿದು ಆತ್ಮಹತ್ಯೆಗೈದಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಬೋಳಿಯಾರು ರಂತಡ್ಕ ಎಂಬಲ್ಲಿ ಭಾನುವಾರ ಮಧ್ಯಾಹ್ನ ವೇಳೆ ಸಂಭವಿಸಿದೆ. ಪತಿ ಕಿರುಕುಳಕ್ಕೆ ನೊಂದು ಆಕೆ ಆತ್ಮಹತ್ಯೆಗೈದಿರುವ ಕುರಿತು ಕೊಣಾಜೆ ಠಾಣೆಯಲ್ಲಿ ದೂರು ದಾಖಲಾಗಿದೆ. ಬೋಳಿಯಾರು ರಂತಡ್ಕ ನಿವಾಸಿ ಇಕ್ಬಾಲ್ ಎಂಬವರ ಪತ್ನಿ ಸಫಿಯಾ(25) ಆತ್ಮಹತ್ಯೆಗೆ ಶರಣಾದವರು. ಮುಡಿಪುವಿನಲ್ಲಿರುವ ಹೊಟೇಲ್ ಮುಚ್ಚಿ ಇಕ್ಬಾಲ್ ಅವರು ಮನೆಗೆ ಹಿಂತುರಿಗಿದಾಗ ಮನೆಯ ಬಾಗಿಲು ಮುಚ್ಚಿತ್ತು. ಸಂಶಯಗೊಂಡು ಬಾಗಿಲು ಒಡೆದು ಒಳನೋಡಿದಾಗ ಕೋಣೆಯೊಂದರಲ್ಲಿ ಸಫಿಯಾ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆಗೈದಿರುವುದು ಕಂಡುಬಂದಿದೆ. ಕೂಡಲೇ ಅವರನ್ನು ಪತಿ ದೇರಳಕಟ್ಟೆಯ ಆಸ್ಪತ್ರೆಗೆ ಸಾಗಿಸುವ ಯತ್ನ ಮಾಡಿದರೂ ಅದಾಗಲೇ ಪ್ರಾಣಪಕ್ಷಿ ಹಾರಿಹೋಗಿತ್ತು. ಕುತ್ತಾರು ಸುಭಾಷನಗರ ನಿವಾಸಿ ಸಫಿಯಾ ಮೂರೂವರೆ ವರ್ಷಗಳ ಹಿಂದೆ ರಂತಡ್ಕದ ಇಕ್ಬಾಲ್ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ 2ರ ಹರೆಯದ ಹೆಣ್ಣು ಮಗು ಇದೆ. ಸಫಿಯಾ ಆತ್ಮಹತ್ಯೆಗೆ ಪತಿ ಇಕ್ಬಾಲ್ ಕಿರುಕುಳವೇ ಕಾರಣ ಎಂದು ಆಕೆ ಸಂಬಂಧಿಕರು ಇಕ್ಬಾಲ್ ಮನೆಮುಂದೆ ಜಮಾಯಿಸಿದ್ದು,…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಇರಾ: ಜಿಲ್ಲೆಯಲ್ಲಿ ಫಾರ್ಮಾ ಪಾರ್ಕ್ (ಸಮೂಹ ಔಷಧ ಉತ್ಪಾಧನಾ ಕೇಂದ್ರಗಳ) ರಚನೆಗೆ ಇರಾ ಗ್ರಾಮದ ಕೆಐಎಡಿಬಿಯ ಸ್ಥಳವನ್ನು ನಿಯೋಜಿಸಲಾಗಿದ್ದು, ಈ ನಿಟ್ಟಿನಲ್ಲಿ ಔಷಧೀಯ ಉತ್ಪಾಧನೆಗಳ ತಯಾರಿಕಾ ಅಸೋಸಿಯೇಷನ್ನಿನ ನಿರ್ದೇಶಕರುಗಳ ಸಹಿತ ಇಲಾಖೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದೆ ಎಂದು ರಾಜ್ಯ ಕೈಗಾರಿಕಾ ಇಲಾಖೆಗಳ ಜಂಟಿ ನಿರ್ದೇಶಕ ಗೋಕುಲ್‍ದಾಸ್ ನಾಯಕ್ ಹೇಳಿದರು. ಅಲೋಪತಿ, ಆಯುರ್ವೇದ ಮತ್ತು ಹೋಮಿಯೋಪತಿ ಔಷಧ ಮತ್ತು ಔಷಧೀಯ ಉತ್ಪಾಧನೆಗಳ ತಯಾರಿಕಾ ಅಸೋಸಿಯೇಷನ್ನಿನ ನಿರ್ದೇಶಕರ ಹಾಗೂ ಕೆಐಎಡಿಬಿ ಅಧಿಕಾರಿಗಳ ನಿಯೋಗ ಬಂಟ್ವಾಳ ತಾಲೂಕಿನ ಇರಾ ಗ್ರಾಮದಲ್ಲಿರುವ ಕೆಐಎಡಿಬಿ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು. ಆರೋಗ್ಯ ಸಚಿವರಾದ ಯು.ಟಿ.ಖಾದರ್ ಅವರ ಚಿಂತನೆ ಮೇರೆಗೆ ಇರಾದಲ್ಲಿ ಔಷಧ ಉತ್ಪಾಧನೆ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. 100 ಎಕರೆ ವಿಶಾಲವಾದ ಸ್ಥಳದಲ್ಲಿ ವಿವಿಧ ಕೈಗಾರಿಕೆಗಳು ಸ್ಥಾಪನೆಯಾಗಲಿದೆ. ಔಷಧ ಉತ್ಪಾಧನೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಹೆಚ್ಚಿನ ಒಲವು ನೀಡುತ್ತಿದೆ. ಉತ್ಪಾಧನಾ ಘಟಕಗಳಿಗೆ ಬೇಕಾದ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕೊಣಾಜೆ: ಹೈದರಾಬಾದ್ ವಿವಿ ದಲಿತ ಹೈದರಾಬಾದ್ ವಿವಿ ದಲಿತ ವಿದ್ಯಾರ್ಥಿ ರೋಹಿತ್ ರೋಹಿತ್ ಮೇಮುಲರವರ ಸಾವಿಗೆ ಜಾತಿ ಮತ ಬೇಧ ಬಿಟ್ಟು ದೇಶದಾದ್ಯಂತ ಕ್ಯಾಂಪಸ್‍ಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸುವ ಮೂಲಕ ರೋಹಿತ್ ಸಾವಿಗೆ ಸಂತಾಪ ವ್ಯಕ್ತಪಡಿಸುತ್ತಿದ್ದು, ರೋಹಿತ್ ಸಾವು ನಿರರ್ಥಕವಾಗದೆ ಈ ದೇಶದ ಸಾಮಾಜಿಕ ನ್ಯಾಯದ ಸ್ಥಾಪನೆಗೆ ಪೂರಕವಾಗಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಂ.ಟಿ. ಉಮೇಶ್‍ಚಂದ್ರ ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್‍ನ ಆಡಳಿತ ಕಚೇರಿ ಎದುರು ವಿ.ವಿ. ಎಸ್‍ಸಿಎಸ್‍ಟಿ ಸ್ನಾತಕೋತ್ತರ ಹಾಗೀ ಸಂಶೋಧನಾ ವಿದ್ಯಾರ್ಥಿಗಳು, ಅಧ್ಯಾಪಕ ಮತ್ತು ಅಧ್ಯಾಪಕೇತರ ನೌಕರರು ಹಾಗೂ ಪ್ರಗತಿಪರ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಹೈದರಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ರೋಹಿತ್ ಮೇಮುಲರವರ ಅಸಹಜ ಸಾವಿನ ಕುರಿತು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಹಿಂದೆ ಹಿಂದೆ ಕೈರ್ಲಾಂಜಿಯಲ್ಲಿ, ಕಂಬಾಲಪಲ್ಲಿಯಲ್ಲಿ ದಲಿತರ ವಿರುದ್ಧ ಅನ್ಯಾಯ, ಅತ್ಯಾಚಾರವಾದಾಗ ಇಷ್ಟು ದೊಡ್ಡ ಮಟ್ಟಿನ…

Read More