UN NETWORKS ಕೈರಂಗಳ:ಅಲ್-ಅಮೀನ್ ಫ್ರೆಂಡ್ಸ್ ಕೈರಂಗಳ ಇದರ ವತಿಯಿಂದ ಕೆ.ಸಿ.ಸಿ ಮುಡಿಪು ಇದರ ಸಹಕಾರದೊಂದಿಗೆ ಆರೋಗ್ಯ ಕಾರ್ಡ್ ವಿತರಣೆ ಕಾರ್ಯಕ್ರಮ ಸಂಸ್ಥೆಯ ಕಛೇರಿಯಲ್ಲಿ ಜರುಗಿತು. ಕಾರ್ಯಕ್ರಮವನ್ನು ನರಿಂಗಾನ ಗ್ರಾ.ಪಂ ಸದಸ್ಯರಾದ ಮುರಳಿದರ್ ಶೆಟ್ಟಿ ಇವರು ಉಧ್ಘಾಟಿಸಿದರು. ಹಿರಿಯರಾದ ಟಿ.ಕೆ ಇಸ್ಮಾಯಿಲ್ ರವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು.ತಾ.ಪಂ ಸದಸ್ಯರಾದ ಹೈದರ್ ಕೈರಂಗಳ ಅವರು ಮಾತನಾಡಿ ಅಲ್-ಅಮೀನ್ ಸಂಸ್ಥೆಯ ಕಾರ್ಯ ಚಟುವಟಿಕೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಇದೇ ಸಂಧರ್ಭದಲ್ಲಿ S.J.M ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಮುಹಿಯ್ಯದ್ದೀನ್ ಸಅದಿ ತೋಟಾಲ್ ಇವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಸಂಸ್ಥೆಯ ಗೌರವಾಧ್ಯಕ್ಷರಾದ ಅಹ್ಮದ್ ಕುಂಙಿ,ಪಂ.ಸದಸ್ಯರಾದ ಹನೀಫ್,ಪ್ರಮುಖರಾದ ಅಬ್ಬು ಹಾಜಿ ಪಡಿಕ್ಕಲ್,ಅಕ್ಬರ್ ಪಿ.ಎ,ಮುನೈಝ್ ಕೈರಂಗಳ,ಶರೀಫ್ ಕೈರಂಗಳ,ಹಂಝ ಮತ್ತಿತರು ಉಪಸ್ಥಿತರಿದ್ದರು.ಪ್ರ.ಕಾರ್ಯದರ್ಶಿ ನಯೀಮುಲ್ ಹಕ್ ಸ್ವಾಗತಿಸಿ,ನಾಸೀರ್ ಕಾಯಾರ್ ವಂದಿಸಿದರು.
Author: UllalaVani
UN NETWORKS ಕೊಣಾಜೆ: ತಮ್ಮ ಅಪೂರ್ವವಾದ ಪ್ರತಿಭೆಯ ಮೂಲಕ ಯಕ್ಷಗಾನ ಲೋಕದಲ್ಲಿ ತನ್ನದೇ ಛಾಪು ಮೂಡಿಸಿ ಮೆರೆದವರು ಚಿಟ್ಟಾಣಿ ರಾಮಚಂದ್ರ ಹೆಗಡೆಯವರು. ಅವರು ರಂಗದಲ್ಲಿ ಯಾವುದೇ ಪಾತ್ರವನ್ನು ನಿರ್ವಹಿಸಿದರೂ ಪಾತ್ರದ ಅಂತರಾಳಕ್ಕೆ ಇಳಿದು ಕುಣಿತ, ಭಾವಾಭಿನಯದ ಸೊಗಸಿನೊಂದಿಗೆ ಪಾತ್ರಕ್ಕೆ ನೈಜತೆಯನ್ನು ಕಟ್ಟಿಕೊಡುತ್ತಿದ್ದರು. ಅವರ ಅಗಲಿಕೆ ಯಕ್ಷಗಾನ ಲೋಕಕ್ಕೆ ತುಂಬಲಾರದ ನಷ್ಟ ಎಂದು ಯಕ್ಷಗಾನ ಗುರು, ಅಧ್ಯಾಪಕ ಸದಾಶಿವ ಶೆಟ್ಟಿಗಾರ್ ಕಿನ್ನಿಗೋಳಿ ಅವರು ಅಭಿಪ್ರಾಯ ಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಶುಕ್ರವಾರ ನಡೆದ `ಚಿಟ್ಟಾಣಿ ನೆನಪು’ ಸಂತಾಪ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಯಕ್ಷಗಾನ ಕ್ಷೇತ್ರದಲ್ಲಿ ಅದೆಷ್ಟೋ ಮಹಾನ್ ಸಾಧಕರು ಯಕ್ಷಗಾನ ಕ್ಷೇತ್ರದ ಬೆಳವಣಿಗೆಗೆ ಒಂದಲ್ಲ ಒಂದು ರೀತಿಯಲ್ಲಿ ಕಾರಣಕರ್ತರಾಗಿದ್ದಾರೆ. ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರು ತನ್ನ ಪ್ರಾಮಾಣಿಕವಾದ ಕಲಾಸೇವೆಯೊಂದಿಗೆ ಯಕ್ಷರಂಗದ ಶ್ರೀಮಂತಿಗೆ ತನ್ನದೇ ಆದ ಕೊಡುಗೆ ನೀಡಿದವರಾಗಿದ್ದಾರೆ. ಈ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸೇವೆ ಹಾಗೂ ಪರಿಶ್ರಮಕ್ಕೆ ತಕ್ಕಂತೆ…
UN NETWORKS ಉಳ್ಳಾಲ: ಉಳ್ಳಾಲಬೈಲಿನ ಮಾತಾ ಕಾಂಪ್ಲೆಕ್ಸ್‍ನಲ್ಲಿ ನೂತನವಾಗಿ ಶುಭಾರಂಭಗೊಂಡ ` ತೂಭಾ ಫರ್ನಿಚರ್ಸ್ ‘ ಮಿತದರದ ಫರ್ನಿಚರ್ ಮಾರಾಟದ ಮಳಿಗೆಯ ಷೋರೂಂನ ಉದ್ಘಾಟನಾ ಸಮಾರಂಭ ಭಾನುವಾರ ನಡೆಯಿತು. ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಖತೀಬರಾದ ಮೊಹಮ್ಮದ್ ಶಮೀಮ್ ಸಖಾಫಿ ದುಆ ನೆರವೇರಿಸಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಳ್ಳಾಲ ಸೈಯ್ಯದ್ ಮದನಿ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಮಾತನಾಡಿ ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಉಳ್ಳಾಲದಲ್ಲಿ ವಸತಿ ಸಂಕೀರ್ಣಗಳು ಹೆಚ್ಚುತ್ತಿದ್ದು, ಅವರ ಮನೆಗಳಿಗೆ ಫರ್ನಿಚರ್‍ಗಾಗಿ ಮಂಗಳೂರಿಗೆ ಅಲೆದಾಡಬೇಕಾದ ಅನಿವಾರ್ಯತೆಯಿಲ್ಲ. ಉಳ್ಳಾಲ ಬೈಲಿನ ತೂಭಾ ಫರ್ನಿಚರ್ ಅಂಗಡಿಯಿಂದಲೇ ಮಿತದರದಲ್ಲಿ ಪಡೆಯುವಂತಹ ವ್ಯವಸ್ಥೆ ಆಗಿದೆ. ವ್ಯಾಪಾರಸ್ಥರು ವ್ಯಾವಹಾರಿಕವಾಗಿ ಮಾತ್ರ ಒಗ್ಗಿಕೊಳ್ಳದೆ ಸಾಮರಸ್ಯ ಹಾಗೂ ಶಾಂತಿಯ ಉಳ್ಳಾಲವನ್ನು ರೂಪಿಸುವಲ್ಲಿ ಸಹಕರಿಸಬೇಕಿದೆ ಎಂದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ಉಳ್ಳಾಲದಲ್ಲಿ ತೂಭಾ ಫರ್ನಿಚರ್ ಮಳಿಗೆ ಆರಂಭಗೊಳ್ಳುವ ಮೂಲಕ ಉಳ್ಳಾಲ ಭಾಗದ ಜನರಿಗೆ ವಿವಿಧ ವಿನ್ಯಾಸಗಳ ಫರ್ನಿಚರ್…
UN NETWORKS ಉಳ್ಳಾಲ: ರಾಜ್ಯ, ರಾಷ್ಟ್ರ ರಹಿತವಾಗಿ ಕನ್ನಡದ ಜನರ ಏಳಿಗೆಗಾಗಿ ಹೋರಾಡುತ್ತಾ ಬಂದಿರುವ ಕರ್ನಾಟಕ ರಕ್ಷಣಾ ವೇದಿಕೆ ಯುವಸಮುದಾಯಕ್ಕೆ ನಾಯಕತ್ವದ ಗುಣವನ್ನು ಕಲಿಸುತ್ತಾ ಬಂದಿದೆ ಎಂದುಕರವೇ ಚಿಕ್ಕಮಗಳೂರು ಹಾಗೂ ದ.ಕ ಉಸ್ತುವಾರಿ ಜಿಲ್ಲಾಧ್ಯಕ್ಷ ಜಗದೀಶ್ ಅರಸ್ ತೇಗೂರು ಹೇಳಿದ್ದಾರೆ. ಅವರು ಉಳ್ಳಾಲ ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಉಳ್ಳಾಲ ಘಟಕ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಳ್ಳಾಲ ಭಾಗದಲ್ಲಿ ಜಾತಿಗಳ ಮಧ್ಯೆ ಹೊಡೆದಾಳುವ ನೀತಿ ನಡೆಯುತ್ತಿದೆ. ಈ ನಡುವೆ ಕನ್ನಡವೇ ಜಾತಿ , ಧರ್ಮ ಅನ್ನುವುದನ್ನು ಪಾಲಿಸುತ್ತಾ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂಧಿಸುತ್ತಾ ಬಂದಿರುವ ಕರ್ನಾಟಕ ರಕ್ಷಣಾ ವೇದಿಕೆಯನ್ನು ಉಳ್ಳಾಲದಲ್ಲಿ ಬೆಳೆಸುವ ಕಾರ್ಯ ಯುವಸಮುದಾಯದಿಂದ ಆಗಬೇಕಿದೆ. ಈ ಮೂಲಕ ಶಾಂತಿಯುತ ಉಳ್ಳಾಲದ ಜತೆಗೆ , ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ವೇದಿಕೆಯನ್ನು ಕಲ್ಪಿಸಿದಂತಾಗುತ್ತದೆ ಎಂದರು. ಕರವೇ ದ,ಕ ಜಿಲ್ಲಾಧ್ಯಕ್ಷ ಅನಿಲ್ ದಾಸ್ ಮಾತನಾಡಿ, ಅನಿಲ್ ದಾಸ್ ಮಾತನಾಡಿ ಕೆಲವರ ಸ್ವಾರ್ಥಕ್ಕಾಗಿ ಇಡೀ ಉಳ್ಳಾಲದ ನಾಗರಿಕರನ್ನು ಭಯಪಡಿಸುವಂತಹ…
UN NETWORKS ತೊಕ್ಕೊಟ್ಟು: ಶ್ರೀಮಂತರು ಬಡವರನ್ನು ಗುರುತಿಸಿ ಸಹಾಯ ಮಾಡಲಿ ಎಂದು ಕರೆ ನೀಡುವ ಇಸ್ಲಾಂ ಧರ್ಮ ಭಿಕ್ಷಾಟನೆಗೆ ಎಂದಿಗೂ ಪ್ರೋತ್ಸಾಹ ನೀಡುವುದಿಲ್ಲ ಎಂದು ಮಲ್ ಜಅಹ್ ಸಂಸ್ಥೆಯ ಶಿಲ್ಪಿ ಅಸಯ್ಯದ್ ಜಲಾಲುದ್ದೀನ್ ಅಲ್-ಹಾದಿ ಉಜಿರೆ ತಂಙಳ್ ಹೇಳಿದ್ದಾರೆ. ಅವರು ಕುಂಪಲದ ಎಮ್.ಆರ್ ಪ್ಯಾಲೇಸ್ ನಲ್ಲಿ ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ವತಿಯಿಂದ ಶುಕ್ರವಾರ ನಡೆದ ಬಡ ಕುಟುಂಬದ ಹೆಣ್ಣಿನ ಮದುವೆಗೆ ಚಿನ್ನ ವಿತರಣೆ ಮತ್ತು ಪ್ರಾರ್ಥನಾ ಸಂಗಮದ ನೇತ್ರತ್ವ ವಹಿಸಿ ಮಾತನಾಡಿದರು. ಇಸ್ಲಾಮಿನ ನಿಯಮ ಪ್ರಕಾರ ಶ್ರೀಮಂತರು ತನ್ನ ಆಸ್ತಿಯ ಎರಡು ಶೇಕಡಾ ಅರ್ಹ ಬಡವನನ್ನು ಗುರುತಿಸಿ ನೀಡಬೇಕು. ಅದರೆ ಇಂದು ಬಡವ ಸಹಾಯ ಯಾಚಿಸಿಲು ಶ್ರೀಮಂತರನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದ್ದು ಇದು ಸರಿಯಲ್ಲ. ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್ ನ ಈ ಸೇವೆಯ ಮಹತ್ವ ತಿಳಿದು ಎಲ್ಲರೂ ಪ್ರೋತ್ಸಾಹ ನೀಡಬೇಕು ಎಂದರು. ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷ ಕೆ.ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಸ್ಸೆಸ್ಸೆಫ್ ತೊಕ್ಕೋಟ್ಟು ಸೆಕ್ಟರ್…
UN NETWORKS ಉಳ್ಳಾಲ: ಸಚಿವ ಖಾದರ್ ಅವರನ್ನು ಮುಕ್ಕಚೇರಿಯಿಂದ ಹಿಂದಕ್ಕೆ ಕಳುಹಿಸಿದರೆ ಸಾಲದು ,ವಿಧಾನಸಭೆಯಿಂದಲೇ ಅವರನ್ನು ಹೊರ ಕಳುಹಿಸುವ ಮೂಲಕ ಗಾಂಜ ಮುಕ್ತ ಸಮಾಜವನ್ನು ನಿರ್ಮಿಸಬೇಕಿದೆ ಎಂದು ಡಿವೈ ಎಫ್ ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ಹೇಳಿದ್ದಾರೆ. ಅವರು ಗಾಂಜಾ ವಿರುದ್ಧ ಧ್ವನಿ ಎತ್ತಿದ್ದ ಸಾಮಾಜಿಕ ಕಾರ್ಯಕರ್ತ ಜುಬೈರ್ ಹತ್ಯೆ ಖಂಡಿಸಿ ಡಿವೈಎಫ್‍ಐ ನೇತೃತ್ವದಲ್ಲಿ ಶುಕ್ರವಾರ ಸಂಜೆ ಮುಕ್ಕಚ್ಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ಯಲ್ಲಿ ಭಾಗವಹಿಸಿ ಮಾತನಾಡಿದರು. ಮಾದಕ ವ್ಯಸನಗಳಿಂದಾಗಿ ಶಾಂತಿಭಂಗ ಉಂಟಾಗುತ್ತಿದೆ. ಯುವಸಮುದಾಯ ಸಮಾಜಘಾತುಕರಾಗಿ ಬೆಳೆಯುತ್ತಿದ್ದಾರೆ ಅನ್ನುವ ಸಾಮಾಜಿಕ ಕಳಕಳಿಯನ್ನು ಮುಂದಿಟ್ಟು ಜುಬೈರ್ ದೂರು ನೀಡಿದ್ದರು. ಇದೇ ಪ್ರಕರಣದಲ್ಲಿ ಜೈಲುಪಾಲಾದ 18 ಪ್ರಕರಣಗಳ ಆರೋಪಿಯೇ ಜೈಲಿನಿಂದ ಬಿಡುಗಡೆಯಾಗಿ ಜುಬೈರ್ ಹತ್ಯೆ ನಡೆಸಿರುವುದು ಪೊಲೀಸ್ ವೈಫಲ್ಯತೆಯನ್ನು ತೋರಿಸುತ್ತದೆ. 18 ಪ್ರಕರಣಗಳ ಆರೋಪಿಗಳನ್ನು ಹತೋಟಿಯಲ್ಲಿಡಲು ಸಾಧ್ಯವಾಗದ ಉಳ್ಳಾಲ ಪೊಲೀಸರು ಕುರಿ ಕಾಯುವ ಕೆಲಸವನ್ನು ಮಾಡಬೇಕಿದೆ,. ಉಳ್ಳಾಲ ಪೊಲೀಸರು ಪತ್ತೆ ಹಚ್ಚದ ಹಲವು ಕೊಲೆ, ಕೊಲೆಯತ್ನ ಪ್ರಕರಣಗಳಿವೆ. ಕ್ಷಣಕ್ಷಣದಲ್ಲಿ ಇನ್ಸ್ ಪೆಕ್ಟರ್ ಬದಲಾವಣೆ ಮಾಡಿದರೆ ಸಾಲದು, 7-8…
UN NETWORKS ಉಳ್ಳಾಲ: ಮೃತ ಜುಬೈರ್ ಅವರು ಆರ್ಥಿಕವಾಗಿ ಹಿಂದುಳಿದ ಕುಟುಂಬದವರಾಗಿದ್ದಾರೆ. ದಿನಗೂಲಿ ನಿರ್ವಹಿಸಿ ಕುಟುಂಬ ಸಲಹುತ್ತಿದ್ದ ಜುಬೈರ್ ಅವರ ಸಾವಿನಿಂದ ಕುಟುಂಬದ ಆಧಾರ ಸ್ತಂಭ ಕಳಚಿದಂತಾಗಿದೆ. ಅಲ್ಲದೆ ಇದರಿಂದ ಜುಬೈರ್ ಅವರ ಶಾಲೆ ಮತ್ತು ಕಾಲೇಜಿಗೆ ತೆರಳುತ್ತಿರುವ ಮಕ್ಕಳ ವಿದ್ಯಾಭ್ಯಾಸದಲ್ಲಿ ಮೊಟಕುಗೊಳಿಸುವ ಸಾಧ್ಯತೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಮುನೀರ್ ಬಾವಾ ಹಾಜಿ ಅವರು ಜುಬೈರ್ ಅವರ ಆರು ಮಕ್ಕಳ ವಿದ್ಯಾಭ್ಯಾಸವನ್ನು ನೋಡಿಕೊಳ್ಳುವುದಾಗಿ ತಿಳಿಸಿ ಆರು ಮಂದಿ ಎಳೆಯ ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ಪಡೆದುಕೊಂಡಿದ್ದಾರೆ.
UN NETWORKS ಉಳ್ಳಾಲ: ಸಚಿವ ಖಾದರ್ ಅವರಿಗೆ ಘೇರಾವ್ ಹಾಕಿದ ಅರ್ಧ ಗಂಟೆಯಲ್ಲೇ ಹತ್ಯೆಗೀಡಾದ ಜುಬೈರ್ ಮನೆಗೆ ಭೇಟಿ ನೀಡಲು ಬಂದ ಸಂಸದ ನಳಿನ್ ಕುಮಾರ್ ಅವರನ್ನು ಮುಕ್ಕಚ್ಚೇರಿ ನಿವಾಸಿಗಳು ಸ್ವಾಗತಿಸಿ ಜುಬೈರ್ ವಾಸವಿದ್ದ ಬಾಡಿಗೆ ಮನೆಗೆ ಕರೆದೊಯ್ದಿದ್ದಾರೆ ಮನೆಗೆ ಭೇಟಿ ನೀಡಿದ ಸಂಸದ ನಳಿನ್ ಕಟೀಲ್ ಮನೆಮಂದಿಗೆ ಸಾಂತ್ವನ ಹೇಳಿದರಲ್ಲದೆ, ಘಟನೆಯನ್ನು ಖಂಡಿಸಿದರು. ಬಳಿಕ ಮಾಧ್ಯಮದ ಜತೆಗೆ ಮಾತನಾಡಿದ ಸಂಸದರು ಜುಬೈರ್ ಅವರನ್ನು ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ನಡೆಸಲಾಗಿದೆ. ಕೇರಳದ ಬಾಹ್ಯಶಕ್ತಿಯಿಂದಲೇ ಜುಬೈರ್ ಹತ್ಯೆ ನಡೆದಿದೆ. ಮೃತನ ಕುಟುಂಬಕ್ಕೆ ರಾಜ್ಯ ಸರಕಾರ ಕನಿಷ್ಟ ರೂ. 50 ಲಕ್ಷ ಪರಿಹಾರವನ್ನು ಒದಗಿಸಬೇಕಿದೆ. ಅಲ್ಲದೆ ಹಂತಕರ ಬಂಧನದಲ್ಲಿ ಪೊಲೀಸರನ್ನು ನಿಯಂತ್ರಿಸಲು ಸರಕಾರ ಯತ್ನಿಸಿದಲ್ಲಿ ಉಗ್ರ ಹೋರಾಟ ಎದುರಿಸಬೇಕಾದೀತು ಎಂದ ಅವರು ಉಳ್ಳಾಲ ಮತ್ತು ಜಿಲ್ಲೆಯಾದ್ಯಂತ ನಡೆಯುತ್ತಿರುವ ಅಹಿತಕರ ಘಟನೆಗಳಲ್ಲಿ ಮಾದಕ ವ್ಯಸನಿಗಳ ಫಾತ್ರವೇ ಹೆಚ್ಚಿದೆ. ಈ ಹಿಂದೆಯೂ ಮಾದಕ ವ್ಯಸನ ಜಾಲದ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ಸೂಚಿಸಲಾಗಿತ್ತು. ಆದರೆ…
UN NETWORKS ಉಳ್ಳಾಲ: ಮುಕ್ಕಚ್ಚೇರಿ ನಿವಾಸಿ ಜುಬೈರ್ ಹತ್ಯೆ ಹಿನ್ನೆಲೆಯಲ್ಲಿ , ಮೃತರ ಮನೆಗೆ ಭೇಟಿ ನೀಡಲು ಬಂದ ಸಚಿವ ಖಾದರ್ ಅವರನ್ನು ಉದ್ರಿಕ್ತ ಗುಂಪು ಘೇರಾವ್ ಹಾಕಿ ವಾಪಸ್ಸು ಕಳುಹಿಸಿದ ಘಟನೆ ಮುಕ್ಕಚ್ಚೇರಿ ಬಳಿ ಶುಕ್ರವಾರ ಸಂಜೆ ವೇಳೆ ನಡೆದಿದ್ದು, ಸಚಿವರನ್ನು ದೂಡಿಕೊಂಡೇ ಹಿಂದಕ್ಕೆ ಕಳುಹಿಸಿದ ಗುಂಪು ಕಲ್ಲು ತೂರಾಟ ನಡೆಸಿದರೂ ಯಾವುದೇ ಹಾನಿಯಾಗಿಲ್ಲ. ಅ.4 ರಂದು ಮುಕ್ಕಚ್ಚೇರಿ ನಿವಾಸಿ ಜುಬೈರ್ ಹತ್ಯೆ ಮಸೀದಿ ಎದರುಗಡೆ ನಡೆದಿತ್ತು. ಐವರ ತಂಡ ತಲವಾರಿನಿಂದ ಕಡಿದು ಹತ್ಯೆ ನಡೆಸಿತ್ತು. ಸಂಶಯಿತ ಆರೋಪಿಗಳು ಯುವಕಾಂಗ್ರೆಸ್ ಮುಖಂಡನ ಬೆಂಬಲಿಗರೆಂದು ಸ್ಥಳೀಯರ ಆರೋಪ ವ್ಯಕ್ತವಾಗಿತ್ತು. ಈ ನಡುವೆ ಜುಬೈರ್ ಬಿಜೆಪಿ ಕಾರ್ಯಕರ್ತರಾಗಿದ್ದರು ಎಂಬುದು ಬಿಜೆಪಿ ಮುಖಂಡರು ತಿಳಿಸಿದ್ದಾರೆ. ಅಲ್ಲದೆ ಜುಬೈರ್ ಹತ್ಯೆಗೆ ಸಚಿವ ಖಾದರ್ ಪರೋಕ್ಷ ಕಾರಣವೆಂದು ಆರೋಪಿಸಿದ ಮುಕ್ಕಚ್ಚೇರಿ ನಿವಾಸಿಗಳು ಜುಬೈರ್ ದಫನ ಸಂದರ್ಭವೂ ಸಚಿವರು ಬಾರದೇ ಇರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಶುಕ್ರವಾರ ಸಂಜೆ ಡಿವೈಎಫ್ ಐ ನೇತೃತ್ವದಲ್ಲಿ ಮುಕ್ಕಚ್ಚೇರಿ ಮಸೀದಿ ಎದುರುಗಡೆ ಜುಬೈರ್…
UN NETWORKS ಉಳ್ಳಾಲ : ಜಿಲ್ಲೆಯಲ್ಲಿ ಮಾದಕದ್ರವ್ಯ ಮಾರಾಟಗಾರರಿಗೆ ಮತ್ತು ರೌಡಿಗಳಿಗೆ ಸಹಕಾರ ನೀಡುವ ಮೂಲಕ ರಾಜ್ಯ ಸರಕಾರ ಪೊಲೀಸರಿಗೆ ಕರ್ತವ್ಯ ನಡೆಸಲು ಅಡ್ಡಿ ಪಡಿಸುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಅಲ್ಲಲ್ಲಿ ಚೂರಿ ಇರಿತ ಕೊಲೆಗಳಾಗುತ್ತಿವೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ ಆರೋಪಿಸಿದ್ದಾರೆ. ತೊಕ್ಕೊಟ್ಟು ಜಂಕ್ಷನ್‍ನಲ್ಲಿ ಕಾಂಗ್ರೆಸ್‍ನ ದುರಾಡಳಿತ, ಸಚಿವ ಖಾದರ್ ಅವರ ಅಸಮರ್ಥತನದ ವಿರುದ್ಧ ಬಿಜೆಪಿ ಕಾರ್ಯಕರ್ತ ಝುಬೇರ್ ಹತ್ಯೆ ವಿರೋಧಿಸಿ ಶುಕ್ರವಾರ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯ ಕೊಲೆಗಡುಕ ರಾಜ್ಯವಾಗಿ ಪರಿವರ್ತನೆಯಾಗುತ್ತಿದೆ. , ಕಲಬುರ್ಗಿ, ಗೌರೀ ಲಂಕೇಶ್ ಕೊಲೆಯಾದರೂ ಕೊಲೆಗಡುಕರು ಪತ್ತೆಯಾಗಿಲ್ಲ ಸಂಘ ಪರಿವಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಆಗುತ್ತಿದೆ . ಕೋಮು ಸೌಹಾರ್ದ ಇದ್ದ ಜಿಲ್ಲೆಯನ್ನು ಕಾಂಗ್ರೆಸ್ ಸಿದ್ಧರಾಮಯ್ಯ ಆಡಳಿತಕ್ಕೆ ಬಂದ ನಂತರ ಜಿಲ್ಲೆ ಕೋಮು ಸೌಹಾರ್ದತೆಯನ್ನು ಕದಡಿದೆ. ಒಂದು ವರ್ಗ, ಕೊಲೆಗಡುಕರನ್ನು, ಮಾದಕ ದ್ಯವ್ಯ ಆರೋಪಿಗಳನ್ನು ಓಲೈಸುವುದರಿಂದ ಸ್ಥಾನ ಭದ್ರವಾಗಿ ಉಳಿಯಲು ಸಾಧ್ಯ ಎನ್ನುವ ನಿಟ್ಟಿನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ…

