Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಸೋಮೇಶ್ವರ: ಪುರಾಣ ಪ್ರಸಿದ್ಧ ಸೋಮೇಶ್ವರದ ಶ್ರೀ ಸೋಮನಾಥ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಅಮವಾಸ್ಯೆಗೆ ನಡೆಯುವ ತೀರ್ಥ ಸ್ನಾನಕ್ಕೆ ಊರು-ಪರವೂರುಗಳಿಂದ ಸಾವಿರಾರು ಭಕ್ತಾಧಿಗಳು ಬಂದು ಬೆಳ್ಳಂಬೆಳಗ್ಗಿನಿಂದಲೇ ಪವಿತ್ರ ಸ್ನಾನಗೈದು ಕೃತಾರ್ಥರಾದರು. ವೀರರಾಣಿ ಅಬ್ಬಕ್ಕ ತನ್ನ ಅಭೀಷ್ಠ ನೆರವೇರಿದಕ್ಕಾಗಿ ಬೆಳ್ಳಿಯ ಜಲದ್ರೋಣಿಯನ್ನು ಸಮರ್ಪಿಸಿದ ಈ ಪುಣ್ಯ ಕ್ಷೇತ್ರದಲ್ಲಿ ಇಂದಿಗೂ ಸೋಮನಾಥ ಸ್ವಾಮಿ ಲಿಂಗದ ಮೇಲೆ ಪರಿಶುದ್ಧ ಜಲದ ಅಭಿಷೇಕವಾಗುತ್ತದೆ. ಇದೇ ರೀತಿ ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ತೀರ್ಥಸ್ನಾನವು ಭಕ್ತರನ್ನು ಪುಳಕಿತಗೊಳಿಸುತ್ತದೆ. ತೀರ್ಥಸ್ನಾನಕ್ಕೆ ತೆರಳುವ ಭಕ್ತರು ಎಲೆ ಅಡಿಕೆಯನ್ನು ಖರೀದಿಸಿ ಕಡಲ ತಡಿಯಲ್ಲಿ ತಲೆಗೆ ಆವಣಿಸಿ ಗಂಗೆಗೆ ಸಮರ್ಪಿಸಿ ಕಡಲ ಸ್ನಾನಗೈಯ್ಯುತ್ತಾರೆ. ರೋಮಾಂಚನಕಾರಿ ಅನುಭವ ನೀಡುವ ರುದ್ರಪಾದೆಗೆ ಸಮುದ್ರದ ಬೆಳ್ನೊರೆಗಳು ಅಪ್ಪಳಿಸುವ ಜಾಗದಲ್ಲಿ ಭಕ್ತಾಧಿಗಳು ಸಮುದ್ರ ಸ್ನಾನಗೈಯ್ಯುತ್ತಾರೆ. ಎರಡು ವರ್ಷದ ಮಗುವಿನಿಂದ ಹಿಡಿದು 80 ವರ್ಷದ ವೃದ್ಧರವರೆಗೆ ಇಲ್ಲಿ ಪವಿತ್ರ ಸ್ನಾನಗೈಯ್ಯುತ್ತಾರೆ. ಭಕ್ತಾಧಿಗಳ ರಕ್ಷಣೆಗಾಗಿ ಬೆಳ್ಳಂಬೆಳಗ್ಗಿನಿಂದಲೇ ಉಳ್ಳಾಲದ ಜೀವರಕ್ಷಕ ಈಜು ತಂಡ ಕಣ್ಣಿಗೆ ಎಣ್ಣೆ ಹಾಕಿದಂತೆ ಕಾಯುವ ದೃಶ್ಯ ಕಂಡುಬರುತ್ತದೆ.…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಚೆಂಬುಗುಡ್ಡೆ: ಚೆಂಬುಗುಡ್ಡೆ ಬಳಿ ಸಂತೋಷನಗರ ನಿವಾಸಿ ಲ್ಯಾನ್ಸಿ ಡಿಸೋಜ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಪೊಲೀಸರಿಗೆ ಲಭಿಸಿದ್ದು ತೊಕ್ಕೊಟ್ಟು ನಿವಾಸಿ ರಕ್ಷಿತ್ ಮತ್ತು ತಂಡದಿಂದ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಸ್ನೇಹಿತನ ಸಾವಿಗೆ ಪ್ರತೀಕಾರ ಮಂಗಳೂರಿನಿಂದ ವೆಲ್ಡಿಂಗ್ ಕೆಲಸ ಮುಗಿಸಿ ಸಂತೋಷನಗರದ ಮನೆಗೆ ತನ್ನ ಆಕ್ಟಿವಾ ಸ್ಕೂಟರಿನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಸ್ವಿಫ್ಟ್ ಕಾರಿನಲ್ಲಿ ಬಂದ ಮೂವರ ತಂಡ ಸ್ಕೂಟರಿಗೆ ಡಿಕ್ಕಿ ಹೊಡೆದು ಬಳಿಕ ತಲವಾರಿನಿಂದ ಯದ್ವಾತದ್ವಾ ಕಡಿದಿದ್ದಾರೆ. ಬಳಿಕ ಕಾರನ್ನು ಬಿಟ್ಟು ಮೂವರು ಆರೋಪಿಗಳು ಪರಾರಿಯಾಗಿದ್ದರು. 2014ರ ಆ.14ರಂದು ಸ್ವಾತಂತ್ರೋತ್ಸವದ ದಿನದ ಪ್ರಯುಕ್ತ ತೊಕ್ಕೊಟ್ಟು ಮಾಯಾ ಬಾರಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಲ್ಯಾನ್ಸಿ ಡಿ’ಸೋಜ ಮತ್ತು ಉದಯ ಎಂಬಾತ ಸೇರಿಕೊಂಡು ಹಿಂ.ಜಾ.ವೇ ಮುಖಂಡ ರಿಕ್ಷಾ ಚಾಲಕ ಸೋಮೇಶ್ವರ ಸಾರಸ್ವತ ಕಾಲನಿ ನಿವಾಸಿ ಯತೀಶ್ ಪೂಜಾರಿ ಹತ್ಯೆ ನಡೆಸಿದ್ದರು. ಇದೇ ರಕ್ಷಿತ್ ಹಾಗೂ ಕೊಲೆಯಾದ ಯತೀಶ್ ಅವರ ಆಪ್ತಸ್ನೇಹಿತರಾಗಿದ್ದವರು ಹಾಗೂ ಆತನ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ತೊಕ್ಕೊಟ್ಟು ಬಳಿಯ ಚೆಂಬುಗುಡ್ಡೆ ಬಳಿ ಕಾರಿನಲ್ಲಿ ಬಂದ ತಂಡ ಸ್ಕೂಟರ್‍ಗೆ ಕಾರನ್ನು ಡಿಕ್ಕಿ ಹೊಡೆದು ಸಂತೋಷ್‍ನಗರ ನಿವಾಸಿ ಲ್ಯಾನ್ಸಿ ಎಂಬಾತನಿಗೆ ಯದ್ವಾತದ್ವಾ ತಲವಾರಿನಿಂದ ಕಡಿದು ಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ಸಂಜೆ ನಡೆದಿದ್ದು, ಗಂಭೀರ ಗಾಯಗೊಂಡಿರುವ ಲ್ಯಾನ್ಸಿಯನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತೊಕ್ಕೊಟ್ಟಿನಿಂದ ಚೆಂಬುಗುಡ್ಡೆ ಕಡೆ ಲ್ಯಾನ್ಸಿ ತನ್ನ ಸ್ಕೂಟರ್‍ನಲ್ಲಿ ತೆರಳುತ್ತಿದ್ದಾಗ ಚೆಂಬುಗುಡ್ಡೆ ಕಡೆಯಿಂದ ಏಕಾಏಕಿ ಆಗಮಿಸಿದ ಸ್ವಿಫ್ಟ್ ಕಾರು ಲ್ಯಾನ್ಸಿ ಸ್ಕೋಟರ್‍ಗೆ ಡಿಕ್ಕಿ ಹೊಡೆದು ಕೆಳಗೆ ಬಿದಿದ್ದ ಲ್ಯಾನ್ಸಿಯ ಮೇಲೆ ತಲವಾರಿನಿಂದ ಯದ್ವಾತದ್ವಾ ಕಡಿದು ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದೆ. ತಲವಾರು ಪತ್ತೆ : ಘಟನಾ ಸ್ಥಳದಲ್ಲಿ ಹತ್ಯೆ ಯತ್ನಕ್ಕೆ ಬಳಸಿದ್ದ ಎರಡು ತಲವಾರು ರಕ್ತಸಿಕ್ತವಾಗಿ ದೊರಕಿದ್ದು, ಕಾರಿನೊಳಗೆ ಮೂರಕ್ಕೂ ಹೆಚ್ಚು ತಲವಾರು ಪತ್ತೆಯಾಗಿದೆ. ಯತೀಶ್ ಕೊಲೆ ಆರೋಪಿ : ಸೋಮೇಶ್ವರ ಸಾರಸ್ವತ ಕಾಲನಿ ನಿವಾಸಿ ಯತೀಶ್ 2014ರ ಆಗಸ್ಟ್ 15ರಂದು ತೊಕ್ಕೊಟ್ಟಿನ ಮಾಯಾ ಬಾರ್‍ನ ಎದುರು ಕೊಲೆಯಾಗಿದ್ದು ಈ ಕೊಲೆಗೆ ಸಂಬಂಧಿಸಿದಂತೆ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲ ಸುಂದರಿಭಾಗ್ ನಿವಾಸಿ ಮಹಮ್ಮದ್ ಅನ್ವರ್ (31) ಎಂಬವರು ಸೆ. 6 ಆದಿತ್ಯವಾರ ತಮ್ಮ ಮನೆಯಿಂದ ನಾಪತ್ತೆಯಾಗಿದ್ದಾರೆ. ಮಹಮ್ಮದ್ ಅನ್ವರ್‍ರವರಿಗೆ ವಿವಾಹ ನಿಶ್ಚಯವಾಗಿದ್ದು, ಇವರ ಸಹೋದರ ಮೊಹಮ್ಮದ್ ಫಾರೂಕ್ ಮದುವೆಯ ಆಮಂತ್ರಣ ಪತ್ರ ಹಂಚಲೆಂದು ಹೊರಗಡೆ ತೆರಳಿದ್ದು ಮಧ್ಯಾಹ್ನ 2.30ಕ್ಕೆ ಮನೆಗೆ ಬಂದಾಗ ಅನ್ವರ್ ನಾಪತ್ತೆಯಾಗಿದ್ದರು. ಈ ಬಗ್ಗೆ ಸಂಬಂಧಿಕರ ಮನೆಗಳಲ್ಲೂ ವಿಚಾರಿಸಿದಾಗ ಅಲ್ಲೂ ಪತ್ತೆಯಾಗದೆ ನಂತರ ಅನ್ವರ್ ತಂದೆ ಮೊಹಮ್ಮದ್ ಮಗನ ನಾಪತ್ತೆಯಾದ ಕುರಿತು ಉಳ್ಳಾಲ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಬೀರಿ : ರಾಷ್ಟ್ರೀಯ ಹೆದ್ದಾರಿ 66ರ ಕೋಟೆಕಾರು ಬೀರಿ ಬಳಿ ಲಾರಿ ಮತ್ತು ಬೈಕ್ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ್ದು, ಸಹ ಸವಾರ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ತಲಪಾಡಿ ಚೆಕ್‍ಪೋಸ್ಟ್ ಬಳಿ ನಿವಾಸಿ ಮಹಮ್ಮದ್ ಝಕಾರಿಯಾ (23 )ಮೃತಪಟ್ಟವನಾಗಿದ್ದು, ತಲಪಾಡಿ ಕೆ.ಸಿ.ನಗರ ನಿವಾಸಿ ಶಿಯಾಬ್(22) ಗಂಭೀರಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಘಟನೆಯ ವಿವರ : ಮಹಮ್ಮದ್ ಝಕಾರಿಯಾ ಕ್ಯಾಂಟರಿಂಗ್ ಕೆಲಸ ಮುಗಿಸಿ ಮಂಗಳವಾರ ತಡರಾತ್ರಿ ತನ್ನ ಸ್ನೇಹಿತ ಶಿಯಾಬ್‍ನೊಂದಿಗೆ ತಲಪಾಡಿ ಕಡೆ ವಾಪಾಸ್ಸಾಗುತ್ತಿದ್ದಾಗ ಬೀರಿ ಬಳಿಯ ಮಾರಾಟ ತೆರಿಗೆ ಕೇಂದ್ರದ ಬಳಿ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದು ಬೈಕ್ ಚಾಲನೆ ಮಾಡುತ್ತಿದ್ದ ಮಹಮ್ಮದ್ ಝಕಾರಿಯಾ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ದುಬಾೈಯಲ್ಲಿ ಸುಮಾರು ಒಂದು ವರ್ಷಗಳ ಕಾಲ ಉದ್ಯೋಗ ಮಾಡುತ್ತಿದ್ದ ಝಕಾರಿಯಾ ಊರಿಗೆ ಬಂದ ಬಳಿಕ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ . ಸೆ. 18ರಂದು ವಿದೇಶಕ್ಕೆ ತೆರಳಲು ಸಿದ್ಧತೆ ನಡೆಸಿದ್ದ ಎನ್ನಲಾಗಿದ್ದು, ತಂದೆ ತಾಯಿ 5…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ದೇರಳಕಟ್ಟೆ ಪಾನೀರು ದಯಾ ಮಾತೆ ಇಗರ್ಜಿಯಲ್ಲಿ ಕನ್ಯಾ ಮರಿಯಮ್ಮನವರ ಹುಟ್ಟುಹಬ್ಬ ಮತ್ತು ‘ಮೋಂತಿ ಹಬ್ಬ'( ತೆನೆಹಬ್ಬ) ಇಂದು ನಡೆಯಿತು. ಭಕ್ತರು ಬೆಳೆದ ತೆನೆಯನ್ನು ಚರ್ಚಿನಲ್ಲಿಟ್ಟು ಪೂಜೆ ನೆರವೇರಿಸಿದ ಬಳಿಕ ಕನ್ಯಾ ಮರಿಯಮ್ಮನವರ ಮೂರ್ತಿಗೆ ಪುಷ್ಪಾರ್ಚನೆ ನೆರವೇರಿಸಲಾಯಿತು. ಪೂಜೆ ಬಳಿಕ ತೆನೆ, ಹಾಲು ಮತ್ತು ಕಬ್ಬು ವಿತರಿಸಲಾಯಿತು. ಈ ಸಂದರ್ಭ ಪಾನೀರು ಚರ್ಚಿನ ಧರ್ಮಗುರು ಡೆನಿಸ್ ಸುವಾರಿ, ಅತಿಥಿ ಧರ್ಮಗುgರುಗಳಾಗಿ ಹೋಮಿಯೋಪತಿ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ನಿರ್ದೇಶಕ ಫಾ. ವಿನ್ಸೆಂಟ್ ಡಿಸೋಜಾ , ಪಾಲನಾ ಮಂಡಳಿ ಉಪಾಧ್ಯಕ್ಷ ಫ್ರಾಂಕಿ ಪ್ರಾನ್ಸಿಸ್ ಕುಟಿನ್ಹಾ, ಕಾರ್ಯದರ್ಶಿ ಫಿಲಿಪ್ ಡಿಸೋಜಾ ಮೊಂಟೆಪದವು, ಧರ್ಮಭಗಿನಿಯರು ಮೊದಲಾದವರು ಉಪಸ್ಥಿತರಿದ್ದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಎಕ್ಕೂರು: ಮುಂಬದಿಯ ಟಯರ್ ಸಿಡಿದು ಕರ್ನಾಟಕ ಸಾರಿಗೆ ಬಸ್ಸು ಡಿವೈಡರಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಗಾಯಗೊಂಡಿರುವ ಘಟನೆ ಎಕ್ಕೂರು-ಜೆಪ್ಪು ನಡುವೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬುಧವಾರ ಸಂಜೆ ವೇಳೆ ಸಂಭವಿಸಿದೆ. ಕಾಸರಗೋಡಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನ ಮುಂಬದಿಯ ಟಯರ್ ಸಿಡಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಡಿವೈಡರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಡಿವೈಡರ್ ಸಂಪೂರ್ಣ ಕೆಡವಿದ್ದು, ಗಾಯಾಳು ಮಂಗಳೂರು ನಿವಾಸಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಎಸ್‍ಆರ್‍ಟಿಸಿ ವಿರುದ್ಧ ಆಕ್ರೋಶ: ಕಾಸರಗೋಡು ಕಡೆಗೆ ತೆರಳುವ ಕೆಎಸ್ ಆರ್ ಟಿಸಿ ಸಿಬ್ಬಂದಿ ಸಮಯ ಪಾಲನೆಗಾಗಿ ಮಿತಿಮೀರಿದ ವೇಗದಲ್ಲಿ ಬಸ್ಸನ್ನು ಕೊಂಡೊಯ್ಯುತ್ತಿದ್ದಾರೆ. ಅಧಿಕಾರಿಗಳ ಆದೇಶದಂತೆ ಸಿಬ್ಬಂದಿ ಮಿತಿಮೀರಿದ ವೇಗದಲ್ಲಿ ಬಸ್ಸನ್ನು ಚಲಿಸಿದರೂ, ಬಸ್ಸುಗಳ ತಾಂತ್ರಿಕ ವ್ಯವಸ್ಥೆಯ ಗೋಜಿಗೆ ಹೋಗುತ್ತಿಲ್ಲ. ಇದರಿಂದ ಅಮಾಯಕ ಸಿಬ್ಬಂದಿ ಹಾಗೂ ಪ್ರಯಾಣಿಕರು ಜೀವ ತೆತ್ತುವ ಪರಿಸ್ಥಿತಿ ಬಂದೊದಗಿದೆ ಅನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಪದವಿ ಪಡೆದ ವಿದ್ಯಾರ್ಥಿಗಳು ದೇಶದ ಮೇಲ್ವಿಚಾರಕರು ಮತ್ತು ಆಧುನಿಕತೆಯಿಂದ ಕೂಡಿದ ಒಂದು ಪ್ರಾಚೀನ ಸಂಪ್ರದಾಯದ ಪೋಷಕರು ಎಂದು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಪ್ರೊ. ಎಮ್.ಸಿ ಮಿಶ್ರಾ ಹೇಳಿದ್ದಾರೆ. ಅವರು ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಕೆ.ಎಸ್.ಹೆಗ್ಡೆ ಆಡಿಟೋರಿಯಂನಲ್ಲಿ ಶನಿವಾರ ನಡೆದ ನಿಟ್ಟೆ ವಿವಿಯ ಐದನೆಯ ಘಟಿಕೋತ್ಸವದಲ್ಲಿ ಪದವಿಪ್ರದಾನ ಮಾಡಿ ಮಾತನಾಡಿದರು. ನಿಟ್ಟೆ ಶೈಕ್ಷಣಿಕ ಸಂಸ್ಥೆಯಲ್ಲಿ 20,000ಕ್ಕೂ ಅಧಿಕ ವಿದ್ಯಾರ್ಥಿಗಳು ವೈದ್ಯಕೀಯ, ಇಂಜಿನಿಯರಿಂಗ್, ವ್ಯವಹಾರ ಶಾಸ್ತ್ರ, ನರ್ಸಿಂಗ್ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ. ಇದು ಶ್ಲಾಘನೀಯ. ಸಂಸ್ಥೆಯ ಕುಲಪತಿ ಎನ್.ವಿ ಹೆಗ್ಡೆಯವರನ್ನು ಪ್ರಶಂಸಿಸಿದ ಮಿಶ್ರಾ ಹೆಗ್ಡೆ ತಂದೆಗೆ ತಕ್ಕ ಮಗನಾಗಿ ಸಂಸ್ಥೆಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದ್ದಾರೆ . ಈ ವೇಳೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಅವರು ಇದು ನಿಮ್ಮ ಜೀವನದ ಒಂದು ಹಂತದ ಮುಕ್ತಾಯ ಮತ್ತು ಇನ್ನೊಂದು ಹಂತದ ಆರಂಭ ಎಂದು ಹೇಳಿದರು. ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಕ್ಷೇತ್ರದಲ್ಲಿ ಸ್ಥಾನ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ತೊಕ್ಕೊಟ್ಟು ಶ್ರೀ ಜೈ ವೀರಮಾರುತಿ ವ್ಯಾಯಾಮ ಶಾಲೆ ವತಿಯಿಂದ ನಡೆದ 55 ನೇ ಮೊಸರು ಕುಡಿಕೆ ಉತ್ಸವ ಆಕರ್ಷಕ ಟ್ಯಾಬ್ಲೋಗಳ ಪ್ರದರ್ಶನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ವಿಜೃಂಭಣೆಯಿಂದ ಜರಗಿತು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕಿನ್ಯಾ: ಕೇಶವ ಶಿಶು ಮಂದಿರ ಕಿನ್ಯಾ ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತೊಟ್ಟಿಲೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಸೂರ್ಯ ಫ್ರೆಂಡ್ಸ್ ವಿದ್ಯಾನಗರ ಇದರ ಸಹಕಾರದೊಂದಿಗೆ ಮುದ್ದುಕೃಷ್ಣ ವೇಷಾಧಾರಿ ಪುಟಾಣಿಗಳಿಂದ ಶೋಭಾಯಾತ್ರೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಜಾಗೃತ ವಿವಿದ್ದೋದ್ದೇಶ ಸಹಕಾರಿ ಸಂಘ ಉಳ್ಳಾಲ ಇದರ ಅಧ್ಯಕ್ಷ ರಘುಚಂದ್ರ ಬಲ್ಲಾಳ ಹಾಗೂ ಅವರ ಪತ್ನಿ ಮಮತಾ ಆರ್ ಬಲ್ಲಾಳ, ಮಂಗಳೂರು ವಿ.ವಿ. ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಸಿ.ಎ. ರಾಜ್ ಪ್ರವೀಣ್ ಮತ್ತು ಅವರ ಪತ್ನಿ ಭಾರತಿ, ಶಿಶು ಮಂದಿರದ ಅಧ್ಯಕ್ಷ ಶಿವರಾಮ ಶೆಟ್ಟಿ, ವ್ಯವಸ್ಥಾಪಕ ನಾರಾಯಣ ಕಜೆ, ಸೂರ್ಯ ಫ್ರೆಂಡ್ಸ್ ಅಧ್ಯಕ್ಷ ದಾಮೋದರ ಉಪಸ್ಥಿತರಿದ್ದರು. ಕೇಶವ ಕಜೆ ಸ್ವಾಗತಿಸಿದರು. ರವಿ ಕಣಕ ಮೊಗೇರು ವಂದಿಸಿದರು.

Read More