ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ಬೆಂಜನಪದವಿನಲ್ಲಿ ಬುಧವಾರ ನಡೆದ ಎಸ್‍ಡಿಪಿಐ ಅಧ್ಯಕ್ಷ ಅಶ್ರಫ್ ಕಲಾಯಿ ಅವರ ಕೊಲೆ ಹಿನ್ನಲೆಯಲ್ಲಿ ಬಂಟ್ವಾಳ, ಪುತ್ತೂರು, ಸುಳ್ಯ,ಬೆಳ್ತಂಗಡಿ ತಾಲೂಕುಗಳಲ್ಲಿ ಹೇರಲಾಗಿದ್ದ ಸೆಕ್ಷನ್ 144 ನ್ನು ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ವಿಸ್ತರಣೆಗೊಳಿಸಲಾಗಿದೆ. ಜೂ. 27 ರ ಮಧ್ಯರಾತ್ರಿ 12 ಗಂಟೆಯ ವರೆಗೆ ಉಳ್ಳಾಲ ಹಾಗೂ ಮುಡಿಪು ಭಾಗದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವುದಾಗಿ ಮಂಗಳೂರು ಪೊಲೀಸ್ ಕಮೀಷನರ್ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ಜಾರಿಯಲ್ಲಿದ್ದ ನಿಷೇಧಾಜ್ಞೆಯನ್ನು ಜೂ. 14ರಿಂದ ಜೂ. 21ರ ತನಕ ವಿಸ್ತರಿಸಲಾಗಿತ್ತು. ಬುಧವಾರ ಬಂಟ್ವಾಳ ತಾಲೂಕು ಬೆಂಜನಪದವಿನಲ್ಲಿ ಅಶ್ರಫ್ ಅವರ ಕೊಲೆ ಕೃತ್ಯ ಸಂಭವಿಸಿದ ಹಿನ್ನೆಲೆಯಲ್ಲಿ ನಿಷೇಧಾಜ್ಞೆಯನ್ನು 7 ದಿನಗಳ ಕಾಲ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಈ ಸಂದರ್ಭದಲ್ಲಿ ಜನರು ಗುಂಪು ಕೂಡುವುದನ್ನು, ಆಯುಧಗಳನ್ನು ಒಯ್ಯುವುದು, ಘೋಷಣೆ ಕೂಗುವುದು, ಮೆರವಣಿಗೆ ನಡೆಸುವುದನ್ನು ನಿಷೇಧಿಸಲಾಗಿದೆ.
ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗೃತಕ್ರಮವಾಗಿ ಆದೇಶ ಹೊರಡಿಸಲಾಗಿದೆ. .


