ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ಇಫ್ತಾರ್ ಮೀಟ್ ಏರ್ಪಡಿಸುವ ಉದ್ದೇಶ ಸರಿ ಇರಬೇಕು. ಹೊರತು ಹೆಸರಿಗಾಗಿ ಇಫ್ತಾರ್ ಕೂಟ ಅಯೋಜಿಸಬಾರದು ಎಂದು ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಹಾಜಿ ಹೇಳಿದರು.
ಅವರು ಸಯ್ಯಿದ್ ಮದನಿ ಅರಬಿಕ್ ಎಜ್ಯುಕೇಶನಲ್ ಟ್ರಸ್ಟ್, ಸಯ್ಯಿದ್ ಮದನಿ ದಅïವಾ ಕಾಲೇಜು ಮತ್ತು ಸಯ್ಯಿದ್ ಮದನಿ ದಅïವಾ ಸ್ಟೂಡೇಂಟ್ ಎಸೋಶಿಯೇಶನ್ ಇದರ ವತಿಯಿಂದ ಉಳ್ಳಾಲ ದರ್ಗಾ ವಠಾರ ಮದನಿ ಹಾಲ್‍ನಲ್ಲಿ ನಡೆದ ಇಫ್ತಾರ್ ಮೀಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫಾ ಅಬ್ದುಲ್ಲಾ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.
ಈ ಸಂದರ್ಭ ದುವಾ ವಿದ್ಯಾರ್ಥಿಗಳ ಮಾಸಿಕ ಕೈಬರಹ ಇಖ್‍ರಲ್ ಬುಲೈಟಿನ್ ಉಳ್ಳಾಲ ದರ್ಗಾ ಅಧ್ಯಕ್ಷ ರಶೀದ್ ಹಾಜಿ ಉದ್ಘಾಟಿಸಿದರು.
ಸಯ್ಯಿದ್ ಮದನಿ ದುವಾ ಕಾಲೇಜ್ ಪ್ರಾಂಶುಪಾಲ ಇಬ್ರಾಹೀಂ ಅಹ್ಸನಿ ಮುಖ್ಯ ಪ್ರಭಾಷಣಗೈದರು.
ಸಯ್ಯಿದ್ ಮದನಿ ಅರಬಿಕ್ ಎಜುಕೇಶನ್ ಟ್ರಸ್ಟ್ ಜೋತೆ ಕಾರ್ಯದರ್ಶಿ ಅಸಿಫ್ ಅಬ್ದುಲ್ಲಾ, ಉಳ್ಳಾಲ ಕೇಂದ್ರ ಜುಮಾ ಮಸೀದಿ ಖತೀಬ್ ಶಮೀಮ್ ಸಖಾಫಿ, ಸಯ್ಯಿದ್ ಮದನಿ ಅರಬಿಕ್ ಎಜುಕೇಶನ್ ಟ್ರಸ್ಟ್ ಕೋಶಾಧಿಕಾರಿ ಯು.ಪಿ ಅಬ್ಬಾಸ್, ಸಯ್ಯಿದ್ ಮದನಿ ದರ್ಗಾ ಸಮಿತಿ ಟ್ರಸ್ಟಿ ಜಮಾಲ್ ಉಳ್ಳಾಲ, ಉಳ್ಳಾಲ ನಗರ ಸಭೆ ಸದಸ್ಯ ಯು.ಎ ಇಸ್ಮಾಯಿಲ್ ಈ ಸಂದರ್ಭ ಉಪಸ್ಥಿತರಿದರು.
ಸಯ್ಯಿದ್ ಮದನಿ ದಅïವಾ ಕಾಲೇಜ್ ಪ್ರಾಧ್ಯಾಪಕ ಅಬ್ದುರ್ರಹ್ಮಾನ್ ಕಾಮಿಲ್ ಸಖಾಫಿ ಕಿರಾತ್ ಪಟ್ಟಿಸಿದರು. ಸಯ್ಯಿದ್ ಮದನಿ ದಅïವಾ ಸ್ಟೂಡಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಮುಹಮ್ಮದ್ ಇರ್ಶಾದ್ ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ಮುಹಮ್ಮದ್ ಮುಸ್ತಫಾ ವಿಟ್ಲ ವಂದಿಸಿದರು.


