UN NETWORKS ಕೊಣಾಜೆ: ಸಮಾಜದಲ್ಲಿ ಹಿಂದುಳಿದ ಮಕ್ಕಳಿಗೂ ಶಿಕ್ಷಣ ದೊರಕು ನಿಟ್ಟಿನಲ್ಲಿ ಪ್ರೋತ್ಸಾಹಿಸಿದಾಗ ಕುಟುಂಬ ಸಬಲೀಕರಣವಾಗಲಿದೆ, ಈ ಹಿನ್ನೆಲೆಯಲ್ಲಿ ಸಂಘದ ಗ್ರಾಮೀಣ ಭಾಗದಲ್ಲೂ ಅರ್ಹರನ್ನು ಉಚಿತ ಪುಸ್ತಕ ವಿತರಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಮೂಡಾದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಅಭಿಪ್ರಾಯಪಟ್ಟರು. ಮಂಗಳೂರು ಉತ್ತರ ಕ್ಕೆ ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ವತಿಯಿಂದ ಕೊಣಾಜೆ ಅಡ್ಕರೆ ಪಡ್ಪು ಗ್ರೀನ್‍ವೀವ್ ಅನುದಾನಿತ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಮಹಿಳಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ದ.ಕ. ಮತ್ತು ಉಡುಪಿ ಜಿಲ್ಲೆ ಜಮೀಯತುಲ್ ಫಲಾಹ್ ಅಧ್ಯಕ್ಷ ಶಾಹುಲ್ ಹಮೀದ್, ಮಂಗಳೂರು ಉತ್ತರ ಕ್ಕೆ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷ ಜೆ.ಮುಹಮ್ಮದ್ ಇಸಾಕ್, ನಿರ್ದೇಶಕರಾದ ಯು.ಟಿ.ಅಹ್ಮದ್ ಶರೀಫ್, ಇಬ್ರಾಹಿಂ ಕೆ.ಎಮ್.ಎಚ್, ಅಶ್ರಫ್ ಪದಿಂಜಾರ್, ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಶೌಕತ್ ಆಲಿ, ಅಸೈಗೋಳಿ ಅಯ್ಯಪ್ಪ ಸ್ವಾಮಿ `ಭಜನಾ ಮಂದಿರದ ಅಧ್ಯಕ್ಷ…
Author: UllalaVani
UN NETWORKS ಉಳ್ಳಾಲ: ಉಳ್ಳಾಲ, ಎಸ್.ಎಸ್.ಎಫ್. ಆಝಾದ್ ನಗರ ಯುನಿಟ್ ವತಿಯಿಂದ ಮಾಸ್ತಿಕಟ್ಟೆ ಜಂಕ್ಷನ್‍ನಲ್ಲಿ ಸೌಹಾರ್ದ ಇಫ್ತಾರ್ ಕೂಟ ನಡೆಯಿತು. ಎಸ್.ಎಸ್.ಎಫ್.ಉಳ್ಳಾಲ ಡಿವಿಜನ್ ಅಧ್ಯಕ್ಷ ಮುನೀರ್ ಅಹ್ಮದ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವಿಜ್ಞಾನಿಗಳು,ಸಾಮಾಜಿಕ ನೇತಾರರು ಉಪವಾಸಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ,ಉಪವಾಸದಿಂದ ಮನುಷ್ಯನ ಶರೀರಕ್ಕೆ ಹಲವಾರು ಪ್ರಯೋಜನಗಳಿವೆ ಎಂದು ಅಭಿಪ್ರಾಯ ಪಟ್ಟರು. ಎಸ್.ಎಸ್.ಎಫ್. ಆಝಾದ್ ನಗರ ಯುನಿಟ್ ಅಧ್ಯಕ್ಷ ಹಾಫಿಲ್ ಮುಯೀನ್ ರಝ ಅಂಜದಿ ಅಧ್ಯಕ್ಷತೆವಹಿಸಿದರು, ಎಸ್.ವೈ.ಎಸ್ ಜಿಲ್ಲಾ ಕೋಶಾಧಿಕಾರಿ ಹನೀಫ್, ಎಸ್.ವೈ.ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಸಯ್ಯುದ್ ಜಲಾಲ್ ತಂಙಳ್, ಎಸ್.ಎಸ್.ಎಫ್. ಉಳ್ಳಾಲ ಡಿವಿಜನ್ ಪ್ರಧಾನ ಕಾರ್ಯದರ್ಶಿ ಹಮೀದ್ ತಲಪಾಡಿ, ಕೋಶಾಧಿಕಾರಿ ಶರೀಫ್ ಮುಡಿಪು, ಉಳ್ಳಾಲ ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟಳಿಕೆ,ಜೊತೆ ಕಾರ್ಯದರ್ಶಿ ಅಬೂಸಾಲಿ ಹರೇಕಳ, ಎಸ್.ಎಸ್.ಎಫ್ ಉಳ್ಳಾಲ ಡಿವಿಜನ್ ಕಾರ್ಯಕಾರಿ ಸದಸ್ಯ ಅಝೀಝ್ ಎಚ್.ಕಲ್ಲು, ನೌಫಲ್ ಫರೀದ್ ನಗರ, ತ್ವಾಹ ಅಹ್ಸನ್ ಉಸ್ತಾದ್ ಮಂಜನಾಡಿ, ಕುಬೈಬ್ ತಂಙಳ್ ಉಳ್ಳಾಲ, ಎಸ್.ಎಸ್.ಎಫ್ ಉಳ್ಳಾಲ ಸೆಂಟರ್ ಅಧ್ಯಕ್ಷ ಮುಸ್ತಫ ಉಳ್ಳಾಲ, ಎಸ್.ವೈ.ಎಸ್, ಮೇಲಂಗಡಿ…
UN NETWORKS ತಲಪಾಡಿ: ತಲಪಾಡಿ ಕೆ.ಸಿ.ನಗರದ ಫಲಾಹ್ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುವ ಮೂಲಕ ದೈಹಿಕ ಶಿಕ್ಷಣ ಶಿಕ್ಷಕ ಭರತ್ ಎಂ. ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಮಹಮ್ಮದ್ ರಫೀಕ್, ಹಿರಿಯ ಶಿಕ್ಷಕಿ ಐರಿನ್, ಸಾಧನಾ ರಾವ್, ಲತಾ ಪಿ, ವನಿತಾ, ಚಂದ್ರಕಲಾ, ಚಿತ್ರಕಲಾ ಶಿಕ್ಷಕ ನವೀನ್ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.
UN NETWORKS ಪಾವೂರು: ಸರಕಾರಿ ಶಾಲೆಗಳ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಶೈಕ್ಷಣಿಕ ಸವಲತ್ತನ್ನು ನೀಡುವ ಯಾದ್ ಫೌಂಡೇಶನ್ ಕಾರ್ಯ ಶ್ಲಾಘನೀಯ ಎಂದು ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಮೋನು ಅಭಿಪ್ರಾಯಪಟ್ಟರು. ಯಾದ್ ಫೌಂಡೇಶನ್ ಮಲಾರ್ ಇದರ ವತಿಯಿಂದ ಇನೋಳಿ ಪ್ರಾಥಮಿಕ ಶಾಲೆ, ಬದ್ರಿಯಾ ನಗರ ಶಾಲೆ, ಇನೋಳಿ ಪ್ರೌಢಶಾಲೆ , ಸರಕಾರಿ ಪ್ರಾಥಮಿಕ ಶಾಲೆ ಗಾಡಿಗದ್ದೆಯಲ್ಲಿ ಏರ್ಪಡಿಸಿದ್ದ ಉಚಿತ ಪುಸ್ತಕ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಶಿಕ್ಷಣಕ್ಕೆ ಸಂಘ ಸಂಸ್ಥೆಗಳ ಸಹಕಾರ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಆದರೆ ಹಲವಾರು ಶಾಲೆಗಳನ್ನು ಗುರುತಿಸಿ ಶಿಕ್ಷಣಕ್ಕೆ ಸಹಕಾರ ನೀಡುವ ಮೂಲಕ ಈ ಸಂಸ್ಥೆ ಮಾದರಿ ಕಾರ್ಯವನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಿಯಾಝ್ ಅಹ್ಮದ್ ಪಾವೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಾವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಫಿರೋಝ್ ಮಲಾರ್,ಉಪಾಧ್ಯಕ್ಷೆ ಲೀಲಾವತಿ, ಪಂಚಾಯತ್ ಸದಸ್ಯ ವಿವೇಕ್ ರೈ, ಎಮ್. ಪಿ. ಹಸನ್, ಮಾಜಿ ಸದಸ್ಯ ಮಹಮ್ಮದ್ ಬದ್ರಿಯಾ…
UN NETWORKS ಉಳ್ಳಾಲ: ವಿಶ್ವ ಪರಿಸರ ದಿನವನ್ನು ಜಾತಿ ಮತ ಭೇದವಿಲ್ಲದೆ ಎಲ್ಲರೂ ಆಚರಿಸಿದರೆ ಅದು ಅರ್ಥಪೂರ್ಣವಾಗುತ್ತದೆ. ಪ್ರತೀಯೋರ್ವರು ತಮ್ಮಿಂದಾಗುವ ಸ್ವಚ್ಚತೆಯ ಜನಜಾಗೃತಿ ಕಾಳಜಿಯನ್ನು ವಹಿಸಿಕೊಂಡಲ್ಲಿ ಸ್ಥಳೀಯವಾಗಿ ಯಶಸ್ವಿಯನ್ನು ಸಾಧಿಸಲು ಸಾಧ್ಯ ಎಂದು ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆ ಕೋಟೆಪುರ ಇಲ್ಲಿನ ಮುಖ್ಯ ಶಿಕ್ಷಕರಾದ ಎಂ.ಹೆಚ್ ಮಲಾರ್ ಅಭಿಪ್ರಾಯಪಟ್ಟರು. ಉಳ್ಳಾಲ ಕೋಟೆಪುರದ ಅನುದಾನಿತ ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ನಡೆದ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಕರಾವಳಿ ತೀರದ ನಾವುಗಳು ನದಿ ಹಾಗೂ ಸಾಗರಗಳಿಗೆ ಕಸ ಕಡ್ಡಿ ಪ್ಲಾಸ್ಟಿಕ್ ಮೊದಲಾದ ಮಾಲಿನ್ಯ ವಸ್ತುಗಳನ್ನು ಎಸೆಯದಂತೆ ಎಚ್ಚರಿಕೆ ವಹಿಸಿದರೆ ನದಿ ಹಾಗೂ ಸಾಗರದ ಮಾಲಿನ್ಯವನ್ನು ತಡೆಗಟ್ಟಬಹುದು. ವಿದ್ಯಾರ್ಥಿಗಳ ಜಾಥವು ಕೋಟೆಪುರದ ಪರಿಸರದಲ್ಲಿ ಪರಿಸರ ಜಾಗೃತಿಯನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು. ಈ ಸಂದರ್ಭ ಸ್ವಚ್ಚ ಪರಿಸರದ ಬಗ್ಗೆ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಮಾಡಲಾಯಿತು.ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಶಿಕ್ಷಕರು ಉಪಸ್ಥಿತರಿದ್ದರು.
UN NETWORKS ಮುಡಿಪು: ಸಂಬಾರತೋಟ ವಿಸ್ಡಮ್ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಸಂಸ್ಥೆಯ ಲಾಂಛನ ಬಿಡುಗಡೆ ಕಾರ್ಯಕ್ರಮಕ್ಕೆ ಸಂಬಾರತೋಟ ನೂರಾನಿಯ್ಯಾ ಜುಮಾ ಮಸೀದಿ ಖತೀಬರಾದ ಪಿ.ಕೆ.ಮುಹಮ್ಮದ್ ಮದನಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ವಿದ್ಯೆಗೆ ಇರುವಷ್ಟು ಪ್ರಾಧಾನ್ಯತೆ ಈ ಲೋಕದಲ್ಲಿ ಬೇರೆ ಯಾವುದಕ್ಕೂ ಇಲ್ಲ, ಈ ನಿಟ್ಟಿನಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿರುವ ಸಂಘದ ಕಾರ್ಯ ಶ್ಲಾಘನೀಯ ಎಂದರು. ಹೂ ಹಾಕುವ ಕಲ್ಲು ಸಮೂಹ ಸಂಪನ್ಮೂಲ ವ್ಯಕ್ತಿ ಆಶಾ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಸಂಬಾರತೋಟ ನೂರಾನಿಯ್ಯಾ ಜುಮಾ ಮಸೀದಿ ಅಧ್ಯಕ್ಷ ಇಬ್ರಾಹಿಂ ಹಾಜಿ, ಪ್ರಧಾನ ಕಾರ್ಯದರ್ಶಿ ಎಸ್,ಇ.ಮುಹಮ್ಮದ್,ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅಬೂಬಕರ್ ಕೊಡೆಕ್ಕಲ್, ಅಹ್ಮದ್ ಕುಂಞ ಕತ್ತರ್, ಸಂಬಾರತೋಟ ಶಾಲಾ ಮುಖ್ಯೋಪದ್ಯಾಯಿನಿ ಶಹನಾಝ್ ಪರ್ವಿನ್, ಸಂಬಾರತೋಟ ಖಿದ್ಮತುಲ್ ಇಸ್ಲಾಂ ಅಸೋಸಿಯೇಶನ್ ಅಧ್ಯಕ್ಷ ಎಚ್.ಎಮ್.ಶಾಹುಲ್ ಹಮೀದ್, ವಿಸ್ಡಮ್ ವೆಲ್ಫೇರ್…
UN NETWORKS ಮಂಗಳೂರು: ನಕಲಿ ಚಿನ್ನ ನೀಡಿ ಲಕ್ಷಾಂತರ ಹಣ ನೀಡುವಂತೆ ಹೇಳಿದ ಮೂವರ ತಂಡದಲ್ಲಿ ಒಬ್ಬನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ತೊಕ್ಕೊಟ್ಟುವಿನಲ್ಲಿ ನಿನ್ನೆ ನಡೆದಿದ್ದು, ಇನ್ನಿಬ್ಬರು ಸ್ಥಳದಿಂದ ಓಡಿ ತಲೆಮರೆಸಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಹೊರರಾಜ್ಯದಿಂದ ಹಿಂದಿ ಮಾತನಾಡುವ ಮೂರು ಜನರ ತಂಡ ತೊಕ್ಕೊಟ್ಟು ಎಸ್.ಮೈ ಶಾಪ್ ಫ್ಯಾನ್ಸಿ ಸೆಂಟರಿಗೆ ಪ್ರವೇಶಿಸಿತ್ತು. ಅಲ್ಲಿ ಅಂಗಡಿ ಮಾಲೀಕರಲ್ಲಿ ತಮ್ಮಲ್ಲಿ ರೂ. 40 ಲಕ್ಷ ಬೆಲೆಬಾಳುವ ಚಿನ್ನಾಭರಣವಿದ್ದು, ರಸ್ತೆ ಬದಿಯಲ್ಲಿ ಸಿಕ್ಕಿದೆ. ಅದನ್ನು ಎಲ್ಲಿಯೂ ಮಾರಾಟ ಮಾಡಲು ಆಗುತ್ತಿಲ್ಲ. ಅದಕ್ಕಾಗಿ ಕೇವಲ ರೂ. 4 ಲಕ್ಷ ನೀಡಿದರೆ ಸಾಕು, ಅಷ್ಟೂ ಚಿನ್ನವನ್ನು ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ಸ್ಯಾಂಪಲ್ಲಾಗಿ ಒಂದು ತುಂಡು ಚಿನ್ನವನ್ನು ಪರಿಶೀಲನೆಗೆ ನೀಡಿದ್ದರು. ಅದನ್ನು ಪರಿಶೀಲಿಸುವಾಗ ಅಸಲಿಯೇ ಆಗಿತ್ತು. ಅಲ್ಲದೆ ಬಾಕಿ ಚಿನ್ನವನ್ನು ನಾಳೆ ತರುವುದಾಗಿ ಹೇಳಿದ ತಂಡ ಕೊಟ್ಟ ಚಿನ್ನದ ತುಂಡನ್ನು ವಾಪಸ್ಸು ಪಡೆದು ಹೊರಟಿತ್ತು. ಇವರ ವರ್ತನೆಯಿಂದ ಸಂಶಯಗೊಂಡಿದ್ದ ಮಾಲೀಕರು ತಮ್ಮ ಸ್ನೇಹಿತರಲ್ಲಿ ವಿಷಯ ತಿಳಿಸಿದ್ದರು.…
UN NETWORKS ಉಳ್ಳಾಲ: ವ್ಯಕ್ತಿಯು ತನ್ನ ಸ್ವಂತ ಇಚ್ಚೆಯಿಂದ ನಿರ್ಧರಿಸಿದಲ್ಲಿ ತಂಬಾಕು ವರ್ಜನೆ ಸಾಧ್ಯ ಎಂದು ಕೆ.ಎಸ್.ಹೆಗ್ದೆ ಆಸ್ಪತ್ರೆಯ ಅಧೀಕ್ಷಕ ಮೇಜರ್ ಡಾ| ಶಿವಕುಮಾರ್ ಹೀರೆಮಠ್ ಅಭಿಪ್ರಾಯಪಟ್ಟರು.ಜಸ್ಟಿಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮನೋರೋಗ ಚಿಕಿತ್ಸಾ ವಿಭಾಗದ ವತಿಯಿಂದ “ವಿಶ್ವ ತಂಬಾಕು ರಹಿತ ದಿನ” ಆಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಂಬಾಕು ಸೇವನೆಯಿಂದ ಚಟದಿಂದ ಹೊರಬರಲು ಸಹಾಯದ ಅವಶ್ಯಕತೆಯಿದೆ. ಸಹಾಯದ ಅವಶ್ಯಕತೆಯಿದ್ದವರು ಕ್ಷೇಮದ ಮನೋರೋಗ ವಿಭಾಗದ ತಂಬಾಕು ವರ್ಜನ ಕೇಂದ್ರದ ಸಹಾಯವನ್ನು ಪಡೆಯಬಹುದು ಎಂದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಕೆ ಎಸ್ ಹೆಗ್ದೆ ಆಸ್ಪತ್ರೆಯ ಕಿವಿ ಮೂಗು ಗಂಟಲು ವಿಭಾಗದ ಡಾ| ವಾದೀಶ್ ಭಟ್ ರವರು ತಂಬಾಕು ಬಳಕೆಯಿಂದ ಬಾಯಿ ಮತ್ತು ಗಂಟಲಿನ ಭಾಗಗಳಿಗೆ ಆಗುವ ತೊಂದರೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಶ್ವಾಸಕೋಶ ವಿಭಾಗದ ಡಾ| ಗಿರಿಧರ್ ರವರು ತಂಬಾಕು ಸೇವನೆಯಿಂದ ಶ್ವಾಸಕೋಶಕ್ಕೆ ಆಗುವ ತೊಂದರೆಗಳ ಬಗ್ಗೆ ಮತ್ತು ನಿಶ್ಕ್ರಿಯ ಧೂಮಪಾನದ ಬಗ್ಗೆ ತಿಳುವಳಿಕೆ ನೀಡಿದರು. ಹ್ರದ್ರೋಗ ವೈದ್ಯ ಡಾ| ಸುಬ್ರಮಣ್ಯ ಅವರು ತಂಬಾಕು…
UN NETWORKS ಕೋಟೆಕಾರು: ಮನೆಗಳು ಮಾತ್ರವಲ್ಲ, ದೇವ ಸಂಕಲ್ಪಗಳು, ನಾಗಚೈತನ್ಯ ವಾಸಸ್ಥಾನ, ದೈವಗಳ ತಾಣ, ದೇವತಾ ಸಂಕಲ್ಪ ಕುಣಿದಾಡುವ ತಾಣವಾದ ಕಾಯರ್‍ಮಜಲಿನ ಸುಮಾರು 9.98 ಎಕರೆ ಪ್ರದೇಶದಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕದ ಸ್ಥಾಪನೆಗೆ ಮುಂದಾದವರ ಮಾನಸಿಕ ಭಾವನೆಗಳ ಬಗ್ಗೆ ಸಂಶಯವಿದೆ ಎಂದು ಮರಕಡ ಶ್ರೀ ಗುರು ಪರಾಶಕ್ತಿ ಕ್ಷೇತ್ರದ ಶ್ರೀ ಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮಿ ಖೇದ ವ್ಯಕ್ತಪಡಿಸಿದ್ದಾರೆ. ಕೋಟೆಕಾರು ಕಾಯರ್ ಮಜಲು ಎಂಬಲ್ಲಿ ಯೋಜಿತ ಘನ ತ್ಯಾಜ್ಯ ನಿರ್ವಹಣಾ ಘಟಕದ ಸ್ಥಾಪನೆಯ ದುಷ್ಪರಿಣಾಮದ ಕುರಿತು ಕೋಟೆಕಾರು ಗ್ರಾಮಸ್ಥರ ಸಮ್ಮುಖದಲ್ಲಿ , ಕಾಯರ್‍ಮಜಲು ದೇವರ ಅರಮನೆ ವಠಾರದಲ್ಲಿ ಭಾನುವಾರ ಜರಗಿದ ಬಹಿರಂಗ ಜಾಗೃತಿ ಸಭೆಯ ನೇತೃತ್ವ ವಹಿಸಿ ಮಾತನಾಡಿದರು. ಹಲವು ಮನೆಗಳು ಇರುವ ಪ್ರದೇಶದಲ್ಲೇ ಕಾನೂನು ಮೀರಿ ಘಟಕ ಸ್ಥಾಪನೆಗೆ ಮುಂದಾಗಿರುವುದು ದುರಂತ. ಪ್ರದೇಶದ ಪಾವಿತ್ರ್ಯತೆಯನ್ನು ತಿಳಿದು ಮಾಡಲು ಹೊರಟಿರುವುದರ ವಿರುದ್ಧ ಖೇದವಿದೆ. ಜಾಗದ ವೈಶಿಷ್ಟ್ಯತೆ ತಿಳಿದವರೇ ಜಾಗ ತೋರಿಸಿರುವುದು ಅಚ್ಚರಿಯ ಬೆಳವಣಿಗೆ. ಇದನ್ನು ಗ್ರಾಮದ ಜನತೆ ವಿರೋಧಿಸುವುದರ ಮೂಲಕ…
UN NETWORKS ಕೈರಂಗಳ: ಸಹಪಠ್ಯ ಚಟುವಟಿಕೆಗಳು ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ಸಹಕಾರಿ ಎಂದು ಶಾರದಾ ಗಣಪತಿ ವಿದ್ಯಾಕೇಂದ್ರದ ಸಂಚಾಲಕ ಟಿ.ಜಿ ರಾಜಾರಾಮ ಭಟ್ ಅಭಿಪ್ರಾಯಪಟ್ಟರು. ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ಸಹಪಠ್ಯ ಚಟುವಟಿಕೆ ತರಗತಿಗಳ ಉದ್ಘಾಟಿಸಿ ಮಾತನಾಡಿದ ಅವರು ಸಹಪಠ್ಯ ಚಟುವಟಿಕೆಗಳು ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ವಿಕಾಸಕ್ಕೆ ಎಡೆ ಮಾಡಿಕೊಡುತ್ತವೆ. ಈ ವ್ಯವಸ್ಥೆಯ ಸದುಪಯೋಗವನ್ನು ಎಲ್ಲಾ ಮಕ್ಕಳು ಪಡೆದುಕೊಳ್ಳಬೇಕು ಎಂದು ನುಡಿದರು. ತಾಲೂಕು ಪಂಚಾಯತ್ ಸದಸ್ಯ ಹೈದರ್ ಕೈರಂಗಳ, ಶಾಲಾ ಮಾರ್ಗದರ್ಶಕ ಪಿ. ಶಂಕರಭಟ್ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು. ಸಂಪನ್ಮೂಲ ವ್ಯಕ್ತಿಗಳಾದ ವಾಸುದೇವ ಕೊಣಾಜೆ ಲಲಿತ ಕಲೆಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ತರಬೇತುದಾರರಾದ ಉಪೇಂದ್ರ, ವೀಣಾಸರಸ್ವತಿ, ದಿನೇಶ್ ಉಪಸ್ಥಿತರಿದ್ದರು. ಪ್ರಾಂಶುಪಾಲೆ ದಿವ್ಯದೀಪ ಸ್ವಾಗತಿಸಿದರು. ಸಹಶಿಕ್ಷಕ ಶ್ರೀಹರಿ ಕೆ.ವಿ. ಪ್ರಸ್ತಾವನೆಗೈದರು. ಉಪಪ್ರಾಂಶುಪಾಲ ಎಂ. ಸೋಮಶೇಖರ ವಂದಿಸಿದರು. ಸಹಶಿಕ್ಷಕಿ ಯೋಗಿತಾ ಕಾರ್ಯಕ್ರಮ ನಿರೂಪಿಸಿದರು.

