UN NETWORKS
ಉಳ್ಳಾಲ: ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡುವುದು ದೇವರ ಕೆಲಸವಾಗಿದ್ದು, ಇಂತಹ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಡೈಮಂಡ್ ಸ್ಪೋಟ್ರ್ಸ್ ಮತ್ತು ಕಲ್ಚರಲ್ ಎಸೋಸಿಯೇಶನ್ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಮಾಜಿಕ ಸೇವೆಯನ್ನು ನಡೆಸಲಿ ಎಂದು ಸಯ್ಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಚಾಲನೆ ನೀಡಿದರು.
ಉಳ್ಳಾಲ ಮುಕ್ಕಚ್ಚೇರಿ ಡೈಮಂಡ್ ಸ್ಪೋಟ್ರ್ಸ್ ಮತ್ತು ಕಲ್ಚರಲ್ ಎಸೋಸಿಯೇಶನ್ ವತಿಯಿಂದ ಉಳ್ಳಾಲ ಒಂಭತ್ತುಕೆರೆ ದ,ಕ,ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಳೆದ 24 ವರ್ಷದಿಂದ ಉಳ್ಳಾಲ ಮುಕ್ಕಚ್ಚೇರಿ ಅಂಗನವಾಡಿ ಕಾರ್ಯಕರ್ತೆಯಾಗಿ ಮತ್ತು ಸರಕಾರದಿಂದ ಸಿಗುವ ಸವಲತ್ತುಗಳನ್ನು ಜನಸಾಮಾನ್ಯರಿಗೆ ಒದಗಿಸುವ ಕೆಲಸವನ್ನು ನಿರ್ವಹಿಸುತ್ತಿರುವ ಧರ್ಮಿಣಿಯವರನ್ನು ಸನ್ಮಾನಿಸಲಾಯಿತು.
ಸಾಮಾಜಿಕ ಕಾರ್ಯಕರ್ತ ಯು.ಬಿ. ಮಾರಪ್ಪ, ಉಳ್ಳಾಲ ನಗರ ಸಭೆ ಸದಸ್ಯ ಮುಹಮ್ಮದ್ ಮುಕ್ಕಚ್ಚೇರಿ, ಶಾಲಾ ಮುಖ್ಯೋಪದ್ಯಾಯಿನಿ ಪುಷ್ಪಾ, ಡೈಮಂಡ್ ಸ್ಪೋಟ್ರ್ಸ್ ಮತ್ತು ಕಲ್ಚರಲ್ ಎಸೋಸಿಯೇಶನ್ ಉಪಾಧ್ಯಕ್ಷ ಖಾಲೀದ್, ವ್ಯವಸ್ಥಾಪಕ ಇಂತಿಯಾಝ್ ಶೇಖ್,ಕೋಶಾಧಿಕಾರಿ ಇಕ್ಬಾಲ್, ಸದಸ್ಯರಾದ ಹನೀಫ್ ಗೋವಾ, ಇಮ್ತಿಯಾಝ್, ಸಿದ್ದೀಕ್, ಇಜಾಝ್, ಶಂಶುದ್ದೀನ್, ಸರ್ಫಾಝ್, ತಾಹೀರ್ ಉಪಸ್ಥಿತರಿದ್ದರು.
ಡೈಮಂಡ್ ಸ್ಪೋಟ್ರ್ಸ್ ಮತ್ತು ಕಲ್ಚರಲ್ ಎಸೋಸಿಯೇಶನ್ ಅಧ್ಯಕ್ಷ ಖಲೀಲ್ ಇಬ್ರಾಹಿಂ ಪ್ರಸ್ತಾವನೆಗೈದರು, ರಿಯಾಜ್ ಉಳ್ಳಾಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


