UN NETWORKS
ಉಳ್ಳಾಲ: ಸಿಡಿಲು ಬಡಿದು ಸೋಮೇಶ್ವರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮನೆಗೆ ಅಪಾರ ಹಾನಿಯುಂಟಾಗಿದ್ದು, ಇದೇ ವೇಳೆ ಸಮೀಪದ ಮನೆಗಳಿಗೂ ಹಾನಿಯಾಗಿರುವ ಘಟನೆ ಕುಂಪಲ ಕೃಷ್ಣನಗರದ ಎರಡನೇ ಕ್ರಾಸಿನಲ್ಲಿ ಭಾನುವಾರ ತಡರಾತ್ರಿ ವೇಳೆ ಸಂಭವಿಸಿದೆ.
ಸೋಮೇಶ್ವರ ಗ್ರಾ.ಪಂ ಉಪಾಧ್ಯಕ್ಷೆ ಸುಶೀಲಾ.ಯಸ್.ನಾಯಕ್ ಹಾಗೂ ಅವರ ಪತಿ ನಿವೃತ್ತ ತಹಶೀಲ್ದಾರ್ ಆಗಿರುವ ಎಸ್.ಎಸ್ ನಾಯಕ್ ಅವರು ಮನೆಯೊಳಗಿದ್ದ ಸಂದರ್ಭ ಘಟನೆ ಸಂಭವಿಸಿದೆ. ಭಾನುವಾರ ಸಂಜೆಯಿಂದ ಭಾರೀ ಗುಡುಗು ಸಹಿತ ಮಳೆಯಾಗಿದ್ದು, ಪರಿಣಾಮವಾಗಿ ತಡರಾತ್ರಿ ಸುಶೀಲಾ ಅವರ ಮನೆಯ ತಾರಸಿಗೆ ಬಡಿದು ಸಿಮೆಂಟು ಎದ್ದುಬಂದಿದ್ದು, ತಾರಸಿಯ ಮೇಲೆ ಕಿರಿದಾದ ಹೊಂಡ ಉಂಟಾಗಿದೆ.
ಮನೆಯೊಳಗಿದ್ದ ಇಲೆಕ್ಟ್ರಾನಿಕ್ಸ್ ಸಾಮಗ್ರಿಗಳೆಲ್ಲ ಹಾನಿಯಾಗಿದೆ. ಎರಡು ತಿಂಗಳ ಹಿಂದೆಯಷ್ಟೇ ಮನೆಯ ಗೃಹಪ್ರವೇಶವಾಗಿತ್ತು. ಸ್ಥಳಕ್ಕೆ ಸೋಮೇಶ್ವರ ಗ್ರಾ.ಪಂ ಅಧ್ಯಕ್ಷ ರಾಜೇಶ್ ಉಚ್ಚಿಲ್ ಭೇಟಿ ನೀಡಿದರು.


