Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಕೊಣಾಜೆ

ಕೊಣಾಜೆ: ಮಂಗಳೂರು ವಿವಿ ಕುಲಪತಿ ಪ್ರೊ. ಕೆ. ಭೈರಪ್ಪ ಅವರಿಗೆ ಬೀಳ್ಕೊಡುಗೆ

UllalaVaniBy UllalaVaniJune 4, 2018Updated:June 4, 2018No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಕೊಣಾಜೆ: ದೇಶದ ಅಭಿವೃದ್ಧಿಯಲ್ಲಿ ವಿಜ್ಞಾನ ಕ್ಷೇತ್ರದ ಸಂಶೋಧನೆ ಮಹತ್ವದ್ದಾಗಿದ್ದು ಭಾರತೀಯ ಪ್ರತಿಭಾವಂತ ವಿದ್ಯಾರ್ಥಿಗಳು ವಿದೇಶಕ್ಕೆ ತೆರಳಿ ತಮ್ಮಲ್ಲಿರುವ ಜ್ಞಾನವನ್ನು ಅಲ್ಲಿ ಹಂಚುವುದರಿಂದ ತಮ್ಮ ಸಂಶೋಧನೆ ನಡೆಸುವ ಸಂಸ್ಥೆ ಪೇಟೆಂಟ್ ಪಡೆಯುವ ಮೂಲಕ ಅದರ ಪೂರ್ಣ ಪ್ರಮಾಣದ ಲಾಭ ಪಡೆಯುತ್ತದೆ. ಹಾಗಾಗಿ ಭಾರತೀಯ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಮಾತೃಭೂಮಿಯಲ್ಲಿಯೇ ಸಂಶೋಧನೆಗೆ ಬಳಸುವ ಮೂಲಕ ಭಾರತಕ್ಕೆ ಪೂರ್ಣ ಪ್ರಮಾಣದ ಲಾಭವನ್ನು ದೊರಕುವಂತೆ ಮಾಡಬೇಕು. ಅಂತಹ ಕಾರ್ಯದಿಂದ ವಿದೇಶಿಯರ ಮುಂದೆ ನಾವು ಸದಾ ಕೈಚಾಚುವ ಅನಿವಾರ್ಯತೆಯನ್ನು ತಪ್ಪಿಸಬಹುದು ಎಂದು ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು.

ಅವರು ಶನಿವಾರ ಮಂಗಳೂರು ವಿವಿಯ ಮಂಗಳಾ ಆಡಿಟೋರಿಯಂನಲ್ಲಿ ವಿವಿ ಕುಲಪತಿ ಪ್ರೊ.ಕೆ. ಭೈರಪ್ಪ ಅವರಿಗೆ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಸಾಹಿತಿಗಳು ಹಾಗೂ ವಿಜ್ಞಾನಿಗಳು ಉತ್ತಮ ಆಡಳಿತಗಾರರಾಗಲು ಸಾಧ್ಯವಿಲ್ಲ ಎಂಬ ಮಾತು ಇದೆಯಾದರೂ ಅದನ್ನು ತಪ್ಪು ಎಂದು ತೋರಿಸಿಕೊಟ್ಟವರಲ್ಲಿ ಕುವೆಂಪು ಸಾಲಿಗೆ ಮಂಗಳೂರು ವಿವಿಯಲ್ಲಿ ಕಾರ್ಯ ನಿರ್ವಹಿಸಿದ ಪ್ರೊ.ಕೆ. ಭೈರಪ್ಪ ಅವರು ಉದಾಹರಣೆ. ಕುವೆಂಪು ಅವರು ಶ್ರೇಷ್ಠ ಸಾಹಿತಿಯಾಗಿ ಹೆಸರು ಪಡೆದಷ್ಟೆ ಮೈಸೂರು ವಿವಿಯಲ್ಲಿ ಕುಲಪತಿಗಳಾಗಿ ದಕ್ಷ ಆಡಳಿತಗಾರರಾಗಿ ಹೆಸರು ಪಡೆದಿದ್ದು, ವಿಜ್ಞಾನಿಯಾಗಿ ಹೆಸರು ಪಡೆದ ಪ್ರೊ. ಕೆ. ಭೈರಪ್ಪ ಅವರು ಮಂಗಳೂರು ವಿವಿಯ ಕುಲಪತಿಗಳಾಗಿ ಆಡಳಿತ ಹಾಗೂ ಶೈಕ್ಷಣಿಕ ಪ್ರಗತಿ ದಾಖಲಿಸಿರುವುದು ನಿಜಕ್ಕೂ ಅಭಿನಂದನೀಯ. ಅಷ್ಟಕ್ಕೂ ಅವರೊಳಗೆ ಇರುವ ಆಧ್ಯಾತ್ಮಿಕ ಚಿಂತನೆ ನಿಜಕ್ಕೂ ಅವರಿಗೆ ಉತ್ತಮ ಕೆಲಸ ಮಾಡಲು ಪ್ರೇರೇಪಿಸಿದೆ ಎಂದು ಹೇಳಿದರು.

ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ ಕ್ರೀಡೆ ಹಾಗೂ ಸಾಂಸ್ಕøತಿಕ ರಂಗದಲ್ಲಿ ಮಂಗಳೂರು ವಿವಿಯನ್ನು ದೇಶದ ಇತರ ಪ್ರಸಿದ್ಧ ವಿವಿಗಳ ಸಾಲಿಗೆ ಕೊಂಡೊಯ್ಯುವಲ್ಲಿ ಕುಲಪತಿ ಪ್ರೊ. ಕೆ. ಭೈರಪ್ಪನವರ ಪಾತ್ರ ಮಹತ್ದಾಗಿದ್ದು ಕ್ರೀಡೆ ಹಾಗೂ ಸಾಂಸ್ಕøತಿಕ ರಂಗದಲ್ಲಿ ಸಾಧನೆಗೈದ ವಿದ್ಯಾರ್ಥಿಗಳ ಪಾಲಿಗೆ ನಿಜಕ್ಕೂ ಅವರು ಅವಿಸ್ಮರಣೀಯ ಕುಲಪತಿ ಯಾಗಿದ್ದು ಇತರ ಎಲ್ಲ ಕುಲಪತಿಗಳಿಗಿಂತ ಭಿನ್ನ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಹೇಳಿದರು.

ಮಂಗಳೂರು ವಿವಿಯ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಒಲಿಂಲಿಕ್‍ನಲ್ಲಿ ಭಾಗವಹಿಸಲು ಸ್ಥಾನ ಪಡೆಯುವಂತಹ ಅರ್ಹತೆ ಗಿಟ್ಟಿಸಿಕೊಳ್ಳುವ ಅದ್ಭುತವಾದ ಪ್ರದರ್ಶನ ತೋರಿ ನಾಡುಮೆಚ್ಚುವಂತಹ ದಾಖಲಾರ್ಹ ಸಾಧನೆಗೈದರೂ ಅವರಿಗೆ ಮುಂದಿನ ಭವಿಷ್ಯಕ್ಕೆ ಕಾಯಕಲ್ಪ ನೀಡುವಂತಹ ಕ್ರೀಡಾ ನೀತಿ ಇರಲಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ಅವಕಾಶವಾಗಲು ವಿವಿಯಲ್ಲಿ ಗ್ರೇಸ್ ಮಾರ್ಕ್ ಸೇರಿದಂತೆ ನವೀನ, ಸ್ಪಷ್ಟ ಮತ್ತು ಸಮಗ್ರ ಕ್ರೀಡಾ ನೀತಿ ಜಾರಿಗೆ ತರುವ ಮೂಲಕ ಮಂಗಳೂರು ವಿವಿಯನ್ನು ಪಾಟಿಯಾಲ, ಕೇರಳದ ಪ್ರಸಿದ್ಧ ವಿವಿಗಳ ಸಾಲಿಗೆ ಸೇರಿಸಿದ ಕೀರ್ತಿ ಪ್ರೊ. ಭೈರಪ್ಪ ಅವರಿಗೆ ಸಲ್ಲುತ್ತದೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆ ಬುದ್ಧಿವಂತರ ಜಿಲ್ಲೆ ಎಂಬ ವಿಶೇಷಣವೇ ನಮ್ಮ ಪಾಲಿಗೆ ತೊಡಕಾಗುತ್ತಿದೆ. ಜಿಲೆಯ ಬಹಳಷ್ಟು ಖಾಸಗಿ ಕಾಲೇಜುಗಳು ಮಂಗಳೂರು ವಿವಿಯಡಿಯಲ್ಲಿ ಬರುತ್ತಿದ್ದು ಸ್ವಾಯತ್ತ, ಡೀಮ್ಡ್ ವಿವಿಗಳು ಮೆರೆಯುತ್ತಿರುವ ಈ ದಿನಗಳಲ್ಲಿ ಮುಂದಿನ ದಿನಗಳಲ್ಲಿ ವಿವಿಗೆ ನೂತನ ಕುಲಪತಿಗಳಾಗಿ ಬರುವವರು ಭೈರಪ್ಪನವರಂತೆಯೇ ಅಭೀವೃದ್ಧಿ ಹಾಗೂ ಅರ್ಥೈಸಿಕೊಂಡು ಮುಂದೆ ಹೋಗುವ ಗುಣ ಹೊಂದಿರಲಿ, ಅಂತಹ ವ್ಯಕ್ತಿಗಳನ್ನೇ ಮಂಗಳೂರು ವಿವಿಗೆ ಕುಲಪತಿಗಳನ್ನಾಗಿ ಆರಿಸಿ ಕಳುಹಿಸುವ ಬುದ್ಧಿ ನೂತನ ರಾಜ್ಯ ಸರಕಾರಕ್ಕೆ ಕೊಡಲಿ ಎಂದು ಆಶಿಸಿದರು.

ಉದ್ಘಾಟನಾ ಭಾಷಣಗೈದ ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ. ಎನ್. ಆರ್. ಶೆಟ್ಟಿ ಮಾತನಾಡಿ ವಿವಿಯಲ್ಲಿ ಮುಂದಿನ ಹದಿನೈದ ವರ್ಷಗಳ ದೃಷ್ಟಿಯಲ್ಲಿಟ್ಟುಕೊಂಡು ಪ್ರೊ. ಭೈರಪ್ಪ ಅವರ ದಕ್ಷ ನಾಯಕತ್ವ ಹಾಗೂ ದೂರದೃಷ್ಟಿಯ ಫಲದಿಂದ ಮಂಗಳೂರು ವಿವಿಯಲ್ಲಿ ಧ್ಯೇಯೋದ್ದೇಶ 2030 ದಾಖಲುಗೊಳಿಸುವ ಮೂಲಕ ಮಂಗಳೂರು ವಿವಿಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ವಿವಿಯಲ್ಲಿ ಶಿಕ್ಷಣದ ಬಗೆಗಿನ ಅವರ ಕಾರ್ಯನಿಷ್ಠೆ, ಸಮರ್ಪಣಾಭಾವ ಹಾಗೂ ವಿಶ್ವವಿದ್ಯಾಲಯದಲ್ಲಿ ಆಡಳಿತಾತ್ಮಕ, ಶೈಕ್ಷಣಿಕ ಹಾಗೂ ಆರ್ಥಿಕ ಪ್ರಗತಿಗೆ ಅನುಗುಣವಾಗಿ ತಂದ ಯೋಜನೆಗಳು ಯಶಸ್ವಿಯಾಗಿದೆ ಎಂದು ಹೇಳಿದರು.

ಬೆಂಗಳೂರಿನ ಸೆಂಟರ್ ಫಾರ್ ನ್ಯಾನೋ ಆ್ಯಂಡ್ ಸಾಫ್ಟ್ ಮ್ಯಾಟರ್ ಸೈನ್ಸ್‍ನ ಪ್ರೊ. ಕಟ್ಟೇರ ಸುರೇಶ್ ಅಭಿನಂದನಾ ಭಾಷಣಗೈದರು.
ಬೆಂಗಳೂರಿನ ಸೆಂಟರ್ ಫಾರ್ ನ್ಯಾನೋ ಆ್ಯಂಡ್ ಸಾಫ್ಟ್ ಮ್ಯಾಟರ್ ಸೈನ್ಸ್ ಇದರ ಪ್ರೊ. ಕಟ್ಟೇರ ಸುರೇಶ್, ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಮೋಹನ್, ಬೆಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಎನ್.ಆರ್ ಶೆಟ್ಟಿ ಅಭಿನಂದನಾ ಮಾತುಗಳನ್ನಾಡಿದರು.ಮಂಗಳೂರಿನ ಆದಿಚುಂಚನಗಿರಿ ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ ಉಪಸ್ಥಿತರಿದ್ದರು
ಮಂಗಳೂರು ವಿವಿಯ ಕುಲಪತಿ ಪ್ರೊ.ಬೈರಪ್ಪ ಹಾಗೂ ಅವರ ಧರ್ಮಪತ್ನಿ ಪ್ರೊ.ಕೆ.ಟಿ.ಸುನೀತ ಅವರಿಗೆ ಈ ಸಂದರ್ಭದಲ್ಲಿ ಮಂಗಳೂರು ವಿವಿ ವತಿಯಿಂದ ಸನ್ಮಾನಿಸಲಾಯಿತು.

ಮಂಗಳೂರು ವಿವಿಯ ಕುಲಸಚಿವ ಪ್ರೊಫೆಸರ್ ಬಿ.ಎಸ್ ನಾಗೇಂದ್ರ ಪ್ರಕಾಶ್ ಸ್ವಾಗತಿಸಿದರು. ಮಂಗಳೂರು ವಿವಿಯ ಪರೀಕ್ಷಾಂಗ ಕುಲಸಚಿವ ಎಎಂ ಖಾನ್ ವಂದಿಸಿದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಬೋಳಿಯಾರು ಮಾಗಂಧಡಿಯಲ್ಲಿ ವಾಸವಿದ್ದ ಮಹಿಳೆ ನಾಪತ್ತೆ..!!

March 16, 2026

ಎಸ್ಸಸ್ಸಫ್ ಬಾಳೆಪುಣಿ ಶಾಖಾ ವತಿಯಿಂದ ಮಾಸಿಕ ಬುರ್ಧಾ ಮಜ್ಲಿಸ್ ಹಾಗೂ ಬ್ರಹತ್ ಇಫ್ತಾರ್ ಕೂಟ

March 16, 2026

ರೋವಿನಾ ಶ್ಯಾರನ್ ಸೋನ್ಸ್ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಹೆಚ್‌ಡಿ ಪದವಿ

March 14, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ವಿಧಾನಸಭಾಧ್ಯಕ್ಷರ ಸಿಟ್ಟಿಗೆ 3 ಅಧಿಕಾರಿಗಳ ತಲೆದಂಡ; ಅಂತಿಮವಾಗಿ ಮನವೊಲಿಸಿದ ಸಿಎಂ ಸಿದ್ದರಾಮಯ್ಯ

By UllalaVaniMarch 16, 20260

ಬೆಂಗಳೂರು, ಮಾರ್ಚ್​​ 16: ವಿಧಾನ ಸಭೆ ಅಧಿವೇಶನದ ವೇಳೆ ಶಾಸಕರ ಪ್ರಶ್ನೆಗಳಿಗೆ ಸಚಿವರು ಸರಿಯಾಗಿ ಉತ್ತರ ನೀಡದ ಕಾರಣ ಗರಂ ಆಗಿ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಮಂಗಳೂರು-ಉಡುಪಿ ಕಡೆಗೆ ಚಲಿಸುತ್ತಿದ್ದ ಟ್ಯಾಂಕರ್ ಪಲ್ಟಿ..!!

March 16, 2026

ʻನೀನು ಹೊರಡೋ ಸಮಯ, ಎಲ್ಲರನ್ನೂ ಕ್ಷಮಿಸುʼ; ಹರೀಶ್ ರಾಣಾಗೆ ಕುಟುಂಬಸ್ಥರಿಂದ ಭಾವನಾತ್ಮಕ ವಿದಾಯ….!

March 16, 2026

ಬೋಳಿಯಾರು ಮಾಗಂಧಡಿಯಲ್ಲಿ ವಾಸವಿದ್ದ ಮಹಿಳೆ ನಾಪತ್ತೆ..!!

March 16, 2026
1 2 3 … 1,834 Next
Automatic YouTube Gallery

ಸದನದಲ್ಲಿ ಗಮನಸೆಳೆದ ಶಾಸಕರುಗಳ ಬ್ಯಾನರ್‌ಗಳ ವಿಚಾರ

ಫ್ಲೆಕ್ಸ್, ಬ್ಯಾನರ್‌ಗಳಿಂದಾಗುವ ಅವಘಡಗಳ ಬಗ್ಗೆ ಸದನದಲ್ಲಿ ಪ್ರಸ್ತಾಪ

ಜಾಹೀರಾತುಗಳ ಬಗ್ಗೆ ಸರಕಾರದ ನಿಲುವೇನು..?
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected ...
with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಸದನದಲ್ಲಿ ಗಮನಸೆಳೆದ ಶಾಸಕರುಗಳ ಬ್ಯಾನರ್‌ಗಳ ವಿಚಾರ
Now Playing
ಸದನದಲ್ಲಿ ಗಮನಸೆಳೆದ ಶಾಸಕರುಗಳ ಬ್ಯಾನರ್‌ಗಳ ವಿಚಾರ
ಫ್ಲೆಕ್ಸ್, ಬ್ಯಾನರ್‌ಗಳಿಂದಾಗುವ ಅವಘಡಗಳ ಬಗ್ಗೆ ಸದನದಲ್ಲಿ ಪ್ರಸ್ತಾಪ ಜಾಹೀರಾತುಗಳ ...
ಫ್ಲೆಕ್ಸ್, ಬ್ಯಾನರ್‌ಗಳಿಂದಾಗುವ ಅವಘಡಗಳ ಬಗ್ಗೆ ಸದನದಲ್ಲಿ ಪ್ರಸ್ತಾಪ

ಜಾಹೀರಾತುಗಳ ಬಗ್ಗೆ ಸರಕಾರದ ನಿಲುವೇನು..?
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected ...
with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕಾಂಗ್ರೆಸ್ ಸಚಿವರ ವಿರುದ್ಧ ಅಸಮಾಧಾನಗೊಂಡ ಸ್ಪೀಕರ್
Now Playing
ಕಾಂಗ್ರೆಸ್ ಸಚಿವರ ವಿರುದ್ಧ ಅಸಮಾಧಾನಗೊಂಡ ಸ್ಪೀಕರ್
ಸದನ ನಡೆಯುವುದು ಮಂತ್ರಿಗಳಿಗಾಗಿ ಅಲ್ಲ; ಉತ್ತರ ಕೊಡುವವರೆಗೂ ಸದನ ನಡೆಸಲ್ಲ ಎಂದು ...
ಸದನ ನಡೆಯುವುದು ಮಂತ್ರಿಗಳಿಗಾಗಿ ಅಲ್ಲ; ಉತ್ತರ ಕೊಡುವವರೆಗೂ ಸದನ ನಡೆಸಲ್ಲ ಎಂದು ಎದ್ದು ಹೋದ ಸ್ಪೀಕರ್ ಯು.ಟಿ.ಖಾದರ್

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ...
ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates #ullalavani #utkhader
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d