UN NETWORKS ಕೈರಂಗಳ: “ಕಾಸರಗೋಡು ಹಿರಿಯ ಪ್ರಾಥಮಿಕ ಶಾಲೆ’ ಕನ್ನಡ ಸಿನಿಮಾ ಚಿತ್ರೀಕರಣಗೊಂಡ ಕೈರಂಗಳ ಶಾಲೆಯ ಗ್ರಹಣ ಸ್ವಲ್ಪ ಮಟ್ಟಿಗೆ ಬಿಡುವ ಲಕ್ಷಣ ಕಾಣಿಸುತ್ತಿದೆ. ಚಿತ್ರ ಅಭೂತಪೂರ್ವ ಯಶಸ್ಸು ದಾಖಲಿಸಿದ ಖುಷಿಯಲ್ಲಿ ನಿರ್ಮಾಪಕ ರಿಷಬ್ ಶೆಟ್ಟಿ ಹಾಗೂ ತಂಡ ಕಳೆದ ಅಕ್ಟೋಬರ್‍ನಲ್ಲಿ ಕೈರಂಗಳ ಶಾಲೆಯಲ್ಲಿ ನಡೆದ ನಾಡಹಬ್ಬದಲ್ಲಿ ಪಾಲ್ಗೊಂಡು, ಮುಚ್ಚುವ ಭೀತಿಯಲ್ಲಿದ್ದ ಶಾಲೆಯ ಅಭಿವೃದ್ಧಿಗೆ ಸಹಕರಿಸುವುದಾಗಿ ಭರವಸೆ ನೀಡಿದ್ದರು. ಕೆಲವರು ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದ್ದರಾದರೂ ಇನ್ನು ಕೆಲವು ಮಂದಿ ಪಾಪ, ರಿಷಬ್ ಶೆಟ್ಟಿಗೆ ಇದು ಇದು ಖಾಸಗಿ ಶಾಲೆ ಎಂಬ ಅರಿವು ಇಲ್ಲ, ಸರಕಾರಿ ಶಾಲೆ ಎಂದು ಭರವಸೆ ಕೊಟ್ಟಿರಬಹುದು, ಮುಂದಕ್ಕೆ ಕಷ್ಟ ಇದೆ. ಆಡಳಿತ ಮಂಡಳಿ ಸಹಕರಿದರೆ ಪುಣ್ಯ ಎಂಬ ಮಾತು ಕೇಳಿ ಬಂದಿತ್ತು. ಅದೇನೆ ಇರಲಿ, ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲು ಬಂದಿದ್ದ ಮುನ್ನೂರಕ್ಕೂ ಅಧಿಕ ಪೋಷಕರು ಮನಸ್ಸಿಲ್ಲದೆಯೇ ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಕಳುಹಿಸುತ್ತಿದ್ದರೂ ತಾವು ಕಲಿತ ಶಾಲೆ ಮುಂದಿನ ದಿನಗಳಲ್ಲಾದರೂ ಗತವೈಭವ ಮೆರೆಯಬಹುದು ಎಂಬ ಸಣ್ಣ…
Author: UllalaVani
UN NETWORKS ತಲಪಾಡಿ : ತಾಜುಲ್ ಫುಖಹಾಹ್ ಪಿ.ಎಂ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ರವರನ್ನು ತಲಪಾಡಿ ಬಿಲಾಲ್ ಜುಮಾ ಮಸೀದಿಯ ಖಾಝಿಯಾಗಿ ಸ್ವೀಕಾರಿಸುವ ಸಮಾರಂಭ ತಲಪಾಡಿ ಬಿಲಾಲ್ ಮಸೀದಿ ವಠಾರದಲ್ಲಿ ನಡೆಯಿತು.ಬಿಲಾಲ್ ಜುಮಾ ಮಸೀಯ ಖತೀಬ್ ಡಾ.ಎಮ್ಮೆಸ್ಸೆಂ ಅಬ್ದುರ್ರಶೀದ್ ಸಖಾಫಿ ಝೈನಿ ಕಾರ್ಯಕ್ರಮ ಉದ್ಘಾಟಿಸಿದರು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷ ತಾಜುಶ್ಯರೀಅ ಉಸ್ತಾದುಲ್ ಅಸಾತೀದ್ ಎಂ.ಅಲಿ ಕುಂಞ ಉಸ್ತಾದ್ ಶಿರಿಯ ದುಅ ನೆರವೇರಿಸಿದರು.ಜಾಮಿಅ ಸ ಅದಿಯ್ಯ ಅರಬಿಯ್ಯಯ ಪ್ರಾಂಶುಪಾಲ ಕೆ.ಪಿ ಹುಸೈನ್ ಸ ಅದಿ ಕೆ.ಸಿ ರೋಡು ಮುಖ್ಯ ಪ್ರಭಾಷಣಗೈದರು.ದಾರುಸ್ಸಲಾಂ ಮದ್ರಸದ ಮುಹಲ್ಲೀಂಗಳಾದ ಮುಹಮ್ಮದ್ ಮಸೂದ್ ಬಾಹಸನಿ, ಅಶ್ರಫ್ ಮದನಿ, ಎಮ್ಮೆಸ್ಸೆಂ ಅಬ್ದುರ್ರಹ್ಮಾನ್ ಶಿಬಿಲಿ ಹಿಮಾಮಿ ಅಲ್-ಅಮಾನಿ, ಬಿಲಾಲ್ ಜುಮಾ ಮಸೀದಿ ಮಾಜಿ ಅಧ್ಯಕ್ಷ ಎಂ.ಸೀದಿಯಬ್ಬ ಹಾಜಿ, ಉಪಾಧ್ಯಕ್ಷ ಯಾಕೂಬ್.ಪಿ, ಕೋಶಾಧಿಕಾರಿ ಬಿ.ಎಸ್ ಮೊಹಿದ್ದೀನ್ ಕುಂಞ, ಕೆ.ಸಿ ರೋಡು ಅಲ್-ಮುಬಾರಕ್ ಮಸೀದಿ ಅಧ್ಯಕ್ಷ ಅಬ್ಬಾಸ್ ಕೊಳಂಗರೆ, ಉಚ್ಚಿಲ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ಹಾಜಿ ಪೆರಿಬೈಲ್, ಕೆ.ಸಿ ನಗರ ಅಲ್…
UN NETWORKS ಉಳ್ಳಾಲ: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಪ್ ಇಂಡಿಯಾ ಉಳ್ಳಾಲ ವಲಯ. ಜಮೀಯ್ಯತ್ತುಲ್ ಫಲಾಹ್ ಮಂಗಳೂರು ತಾಲೂಕು ಘಟಕ ಇದರ ಜಂಟಿ ಆಶ್ರಯದಲ್ಲಿ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇವರ ಸಹ ಭಾಗಿತ್ವದೊಂದಿಗೆ ಕೋಟೆಪುರ ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ ಬೃಹತ್ ರಕ್ತದಾನ ಶಿಬಿರವನ್ನು ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ಜನಾಬ್ ಅಕ್ರಮ್ ಹಸನ್ ರವರು ಉದ್ಘಾಟಿಸಿದರು. ಸರ್ವಕಾಲದಲ್ಲಿ ಜಾತಿ-ಮತ ಭೇದವಿಲ್ಲದೆ ವಿವಿಧ ಗ್ರೂಪ್‍ಗಳಿದ್ದು ಒಂದೇ ಬಣ್ಣದಿಂದ ಪರಿಚಯಿಸಿ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಅವಶ್ಯಕತೆಗೆ ತಕ್ಕಂತೆ ತನ್ನ ಮೂಲ ಸ್ವರೂಪದೊಂದಿಗೆ ಉಪಯೋಗವಾಗುವ ರಕ್ತವು ಒಂದು ಜೀವವನ್ನು ಉಳಿಸಬಲ್ಲದು. ಕಷ್ಟ ಕಾಲದಲ್ಲಿ ಒಂದು ಜೀವವನ್ನು ಉಳಿಸಿದರೆ ಅದು ಇಡೀ ಮನುಕುಲವನ್ನು ಉಳಿಸಿದಂತೆ ಎಂಬ ಕುರಾನಿನ ಧ್ಯೇಯ್ಯ ವಾಕ್ಯದಂತೆ ಸಂಘಟನೆಗಳು ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದೆ ಎಂದು ಸಭಾ ಕಾರ್ಯಕ್ರಮದ ಅಧ್ಯಕ್ಷರಾದ ಜನಾಬ್ ಹಾಜಿ ಇಬ್ರಾಹಿಂ ಕೋಡಿಜಾಲ್‍ರವರು ಅಭಿಪ್ರಾಯ ವ್ಯಕ್ತಪದಿಸಿದರು. ಉದ್ಘಾಟನಾ ಸಂದರ್ಭದಲ್ಲಿ ಜಮೀಯ್ಯತ್ತುಲ್ ಫಲಾಹ್‍ದ ಪ್ರಧಾನ ಕಾರ್ಯದರ್ಶಿ ಎಂ.ಹೆಚ್.…
UN NETWORKS ಉಳ್ಳಾಲ: ಮಂಗಳೂರು ವಿಧಾನ ಸಭಾ ಕ್ಷೇತ್ರದ ಮೂರು ಗ್ರಾಮಗಳನ್ನು ಹೊರತು ಪಡಿಸಿ ಮಂಗಳೂರು ತಾಲೂಕು ಮತ್ತು ಬಂಟ್ವಾಳ ತಾಲೂಕಿನ ಗ್ರಾಮಗಳನ್ನು ಒಳಗೊಂಡ ನೂತನ ತಾಲೂಕು ಉಳ್ಳಾಲಕ್ಕೆ ರಾಜ್ಯ ಸರಕಾರ ಹಸಿರು ನಿಶಾನೆ ನೀಡಿದೆ. ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಗಳೂರು ತಾಲೂಕು ವ್ಯಾಪ್ತಿಯ ಉಳ್ಳಾಲ ನಗರಸಭೆ, ಕೋಟೆಕಾರು ಪಟ್ಟಣ ಪಂಚಾಯತ್, ತಲಪಾಡಿ, ಸೋಮೇಶ್ವರ, ಕಿನ್ಯ, ಬೆಳ್ಮ, ಮುನ್ನೂರು, ಅಂಬ್ಲಮೊಗರು, ಹರೇಕಳ, ಪಾವೂರು, ಮಂಜನಾಡಿ, ಕೊಣಾಜೆ, ಬೋಳಿಯಾರು ಗ್ರಾಮಗಳು ಮತ್ತು ಬಂಟ್ವಾಳ ತಾಲೂಕು ವ್ಯಾಪ್ತಿಯ ನರಿಂಗಾನ, ಬಾಳೆಪುಣಿ- ಕೈರಂಗಳ, ಕುರ್ನಾಡು, ಸಜಿಪ ಪಡು, ಸಜಿಪ ನಡು, ಇರಾ, ಪಜೀರು ಗ್ರಾಮಗಳು ಸೇರ್ಪಡೆಯಾಗಲಿದ್ದು, ನೇತ್ರಾವತಿ ನದಿಯ ಇನ್ನೊಂದು ಬದಿಯಲ್ಲಿರುವ ಬಂಟ್ವಾಳ ತಾಲೂಕು ವ್ಯಾಪ್ತಿಯ ಮೇರೆಮಜಲು -ಕೊಡ್ಮಾಣ್, ಪುದು, ತುಂಬೆ ಗ್ರಾಮಗಳು ಉಳ್ಳಾಲ ತಾಲೂಕಿನಿಂದ ಹೊರಗುಳಿಯಲಿದೆ. ನೂತನ ತಾಲೂಕು ರಚನೆಯಿಂದ ಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ವೇಗ ದೊರೆಯಲಿದ್ದು, ತಾಲೂಕು ಕೇಂದ್ರದಿಂದ ವಂಚಿತವಾಗಿದ್ದ ಮೂಲಭೂತ ಸೌಕರ್ಯವಾಗಿದ್ದ ಅಗ್ನಿಶಾಮಕ ಠಾಣೆ, ಕ್ರೀಡಾಂಗಣ ನಿರ್ಮಾಣಕ್ಕೆ ಸಹಕಾರಿಯಾಗಲಿದ್ದು, ಯಾವುದೇ…
UN NETWORKS ಸೋಮೇಶ್ವರ : ಸೋಮೇಶ್ವರ ಗ್ರಾಮದ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಮುಂಬರುವ ಲೋಕಸಭಾ ಚುನಾವಣೆಯ ಪೂರ್ವ ತಯಾರಿಯಾಗಿ ನಾಗರಿಕರಿಗೆ ಇ.ವಿ.ಎಂ. ಮತ್ತು ವಿ.ವಿ. ಪ್ಯಾಟ್ ಯಂತ್ರದ ಬಗ್ಗೆ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಚುಣಾವಣಾ ಆಯೋಗ ಪರಿಚಯಿಸಿದ ವಿವಿ ಪ್ಯಾಟ್ ಯಂತ್ರದ ಮೂಲಕ ಮತದಾರ ತಾನು ಹಾಕಿದ ಮತ ಅದೇ ಅಭ್ಯರ್ಥಿಗೆ ಚಲಾವಣೆ ಆಗಿದೆಯೇ ಎಂಬುದನ್ನು ಪರಿಶೀಲಿಸಬಹುದು. ಈ ಯಂತ್ರದಲ್ಲಿ ಎಲ್ಲ ಅಭ್ಯರ್ಥಿಗಳ ಹೆಸರು ಮತ್ತು ಫೋಟೋ ಅಳವಡಿಸಲಾಗಿರುತ್ತದೆ. ಮತದಾರರು ತಾವು ಚಲಾಯಿಸಿದ ಮತ ಸರಿಯಾದ ವ್ಯಕ್ತಿಗೆ ಅಥವಾ ನಿರ್ದಿಷ್ಟ ಚಿಹ್ನೆಗೆ ಚಲಾವಣೆ ಆಗಿದೆಯೇ ಎಂಬುದನ್ನು ವಿ.ವಿ. ಪ್ಯಾಟ್ ಯಂತ್ರ 7 ಸೆಕೆಂಡುಗಳ ಕಾಲ ತೋರಿಸುತ್ತದೆ. ಇದರಲ್ಲಿ ಬಳಸುವ ಕಾಗದ ಉತ್ಕೃಷ್ಟ ಗುಣಮಟ್ಟದ್ದು. ಐದು ವರ್ಷ ಕಾಲ ಇದರ ಮಾಹಿತಿ ಅಳಿಸಿ ಹೋಗುವುದಿಲ್ಲ. ಹಾಳಾಗುವುದಿಲ್ಲ ಎಂದು ಚುನಾವಣಾ ಆಯೋಗದಿಂದ ಬಂದ ಅಧಿಕಾರಿಗಳು ಸೋಮೇಶ್ವರ ಗ್ರಾಮದ ನಾಗರಿಕರಿಗೆ ವಿವರಿಸಿದರು.ಪ್ರತಿಯೊಬ್ಬರೂ ಈ ಪ್ರಾತ್ಯಕ್ಷಿಕೆಯಲ್ಲಿ ಮಾದರಿ ಮತದಾನ ಚಲಾಯಿಸಿ…
UN NETWORKS ಮಂಗಳೂರು : ಮುಂಬರುವ ಲೋಕಸಭಾ ಚುನಾವಣೆಗೆ ಜಿಲ್ಲೆಯಲ್ಲಿ ನಾನು ಅಭ್ಯರ್ಥಿಯಲ್ಲ ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.ನಗರದ ಸರ್ಕ್ಯೂಟ್ ಹೌಸ್‌ನಲ್ಲಿಂದು ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಅವರು ಸಚಿವರು ಈ ರೀತಿ ಪ್ರತಿಕ್ರಿಯಿಸಿದರು. ಲೋಕ ಸಭೆಯ ಚುನಾವಣೆಗೆ ಸಂಬಂಂಧಿಸಿದಂತೆ ಯಾರು ಅಭ್ಯರ್ಥಿ ಎಂದು ಅಂತಿಮವಾಗಿ ಪಕ್ಷದ ಹೈಕಮಾಂಡ್ ತೀರ್ಮಾನಿಸಲಿದೆ. ಅಭ್ಯರ್ಥಿಯನ್ನು ಆರಿಸುವ ಬಗ್ಗೆ ಮಾಹಿತಿ ಸಂಗ್ರಹ ನಡೆಯುತ್ತಿದೆ. ಪಕ್ಷ ಯಾರ ಹೆಸರನ್ನೂ ಇನ್ನೂ ಅಂತಿಮಗೊಳಿಸಿಲ್ಲ. ಹೈಕಮಾಂಡ್‌ರ ತೀರ್ಮಾನಕ್ಕೆ ಬದ್ಧರಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಸಚಿವ ಖಾದರ್ ತಿಳಿಸಿದರು.ಮಂಗಳೂರು ಸಂಸದರು ಮತ್ತು ಪಕ್ಷದ ಮುಖಂಡರಾಗಿದ್ದ ಆಸ್ಕರ್ ಫೆರ್ನಾಂಡಿಸ್, ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿಯವರು ಜಿಲ್ಲೆಯಲ್ಲಿ ಯಾವುದೇ ಜಾತಿ, ಮತ ಧರ್ಮ ನೋಡದೆ ಕಾರ್ಯನಿರ್ವಹಿಸಿದ ನಾಯಕರಾಗಿ ನಮಗೆ ಮಾದರಿಯಾಗಿದ್ದಾರೆ. ಮಾಜಿ ಸಚಿವರಾದ ರಮಾನಾಥ ರೈ, ವಿನಯ ಕುಮಾರ್ ಸೊರಕೆ ಇದೇ ಹಾದಿಯಲ್ಲಿ ಸಾಗಿ ಬಂದವರು. ಬಡವರ ಕೆಲಸವನ್ನು ತಾರತಮ್ಯ ಮಾಡದೆ ಮಾಡುತ್ತಾ ಬಂದವರು ಎಂದರು. *ಸೋಮೇಶ್ವರ-ಉಚ್ಚಿಲ ಕಡಲ್ಕೊರೆತ ತಡೆಗೋಡೆ ಕಾಮಗಾರಿ ಮಾ.1ರಿಂದ…
UN NETWORKS ತೊಕ್ಕೊಟ್ಟು: ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿಯನ್ನು ಕೇಂದ್ರ ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಚಿವರ ಕಾರ್ಯದರ್ಶಿ ವೈಭವ್ ದಾಂಘೆ ಗುರುವಾರ ಪರಿಶೀಲಿಸಿದರು. ಮಂಗಳೂರಿಗೆ ಆಗಮಿಸಿದ್ದ ವೈಭವ್ ದಾಂಘೆ ಯವರು ಸಂಸದ ನಳಿನ್ ಕಟೀಲು ಜೊತೆ ತೊಕ್ಕೊಟ್ಟಿಗೆ ತೆರಳಿ ಮೇಲ್ಸೇತುವೆ ಕಾಮಗಾರಿಯನ್ನು ವೀಕ್ಷಿಸಿದರು.ಈ ಸಂದರ್ಭ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಮಂಡಲ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಚಂದ್ರಹಾಸ್ ಉಳ್ಳಾಲ್, ಚಂದ್ರಶೇಖರ್, ರಾಮಚಂದ್ರ ಬೈಕಂಪಾಡಿ, ಸತೀಶ್ ಕುಂಪಲ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳ ಹಾಗೂ ನವಯುಗ ಕಂಪೆನಿಯ ಅಧಿಕಾರಿಗಳು ಉಪಸ್ಥಿತರಿದ್ದರು.
UN NETWORKS ದೇರಳಕಟ್ಟೆ : ರೌಂಡ್ ಟೇಬಲ್ ಇಂಡಿಯಾದ ಘಟಕವಾದ ಮಂಗಳೂರು ಕೋಸ್ಟಲ್ ರೌಂಡ್ ಟೇಬಲ್ 190, ರಾಜ್ಯ ಸರಕಾರದ ಸಚಿವ ಯು.ಟಿ. ಖಾದರ್ ಅವರ ಶಾಸಕ ನಿಧಿ, ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯ ಹಾಗೂ ಕ್ರೆಡಾಯ್ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ದೇರಳಕಟ್ಟೆಯ ನೇತಾಜಿ ಸುಭಾಸ್ಚಂದ್ರ ಭೋಸ್ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿನೂತನ ಶೈಲಿಯಲ್ಲಿ ಶಿಕ್ಷಣ ನೀಡುವ ದೃಷ್ಟಿಯಲ್ಲಿ ಆರಂಭಿಸಲಾದ ಅತ್ಯಾಧುನಿಕ ಸೌಲಭ್ಯಗಳುಳ್ಳ ತರಗತಿ ಕೊಠಡಿ ಎಕ್ಸ್‍ಪೀರಿಯನ್ಸ್ ಎಜ್ಯುಕೇಶನ್ “ಆಡಿಯೋ ವಿಶ್ಯುಲ್ ರೂಂ’ ನ್ನು ಸಚಿವ ಯು.ಟಿ. ಖಾದರ್ ಗುರುವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನೂತನ ಕಲಿಕಾ ವಿಧಾನ ಗ್ರಾಮೀಣ ಭಾಗದಲ್ಲಿ ಇದೇ ಮೊದಲ ಬಾರಿಗೆ ಮಂಗಳೂರು ಕ್ಷೇತ್ರದ ಮಟ್ಟಿಗೆ ದೇರಳಕಟ್ಟೆಯ ಸರಕಾರಿ ಶಾಲೆಯಲ್ಲಿ ಆರಂಭಗೊಂಡಿದ್ದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಹಳಷ್ಟು ಪ್ರಯೋಜನವಾಗಲಿದೆ. ರೌಂಡ್ ಟೇಬಲ್ ಸಂಸ್ಥೆಯು ಮಣ್ಣಗುಡ್ಡೆಯ ಶಾಲೆಯೊಂದರಲ್ಲಿ ಇಂತಹ ವ್ಯವಸ್ಥೇ ಕಲ್ಪಿಸಿದ್ದು ನಮ್ಮ ಕ್ಷೇತ್ರದಲ್ಲೂ ಇಂತಹ ಒಂದು ವ್ಯವಸ್ಥೆ ಆಗಬೇಕು ಎಂಬ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ರೌಂಡ್ ಟೇಬಲ್, ನಿಟ್ಟೆ…
UN NETWORKS ಉಳ್ಳಾಲ : ಮಸೀದಿಗಳು ಸಮಸ್ಯೆ ಸೃಷ್ಟಿಸುವ ಕೇಂದ್ರವಲ್ಲ. ಶಾಂತಿ, ಸೌಹಾರ್ದತೆ ಸೃಷ್ಟಿಸುವ ಕೇಂದ್ರಗಳಾಗಿವೆ ಎಂದು ಸಮಸ್ತ ಕೇರಳ ಜಮೀಯತ್ತುಲ್ ಉಲಮಾ ಮುಶಾವರ ಸದಸ್ಯರಾದ ಶೈಖುನಾ ಅಲ್-ಹಾಜ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ಹೇಳಿದರು. ಕೋಟೆಪುರ ಜುಮ್ಮಾ ಮಸೀದಿ (403) ಮತ್ತು ಹಯಾತುಲ್ ಇಸ್ಲಾಂ ಮದ್ರಸ ಕಮಿಟಿ ಇದರ ಅಧೀನದಲ್ಲಿ ಪುನರ್ ನಿರ್ಮಾಣಗೊಂಡ ಮಸೀದಿ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಯಾವುದೇ ಒಂದು ಪ್ರದೇಶದ ಜನರು ಮಸೀದಿಯ ಖತೀಬ್, ಆಡಳಿತ ಸಮಿತಿಯೊಂದಿಗೆ ಮುನ್ನಡೆದಾಗ ಯಾವುದೇ ರೀತಿಯ ಸಮಸ್ಯೆ ಸೃಷ್ಟಿಯಾಗದು ಎಂದರು.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಮಾತನಾಡಿ ಒಂದು ಪ್ರದೇಶ ಅಭಿವೃದ್ಧಿ ಹೊಂದಬೇಕಾದರೆ ಆ ಪ್ರದೇಶದಲ್ಲಿರುವ ಧಾರ್ಮಿಕ ಕೇಂದ್ರಗಳು ಅಭಿವೃದ್ಧಿಯಾಗಬೇಕು. ಕೋಟೆಪುರ ಜುಮ್ಮಾ ಮಸೀದಿ ಅಭಿವೃದ್ಧಿಗೊಂಡಿರುವುದರಿಂದ ಸುತ್ತಮುತ್ತಲಿನ ಪ್ರದೇಶವ ಅಭಿವೃದ್ಧಿಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿರುವ ಪ್ರತಿಯೊಂದು ಮನೆಯಲ್ಲೂ ಸರ್ಕಾರಿ ಮಟ್ಟದ ಅಧಿಕಾರಿಗಳು ಸೃಷ್ಟಿಯಾಗಲಿದ್ದಾರೆ ಎಂದು ಅಭಿಪ್ರಾಯಪಟ್ಟರು. ಉಳ್ಳಾಲ ಸಹಾಯಕ ಖಾಝಿ ಅಲ್-ಹಾಜ್ ಅಬ್ದುಲ್ ರವೂಫ್ ಮುಸ್ಲಿಯಾರ್ ದುವಾ ನೆರವೇರಿಸಿದರು.ಸಯ್ಯಿದ್ ಮದನಿ…
UN NETWORKS ಬೋಳಿಯಾರ್ : ಜನರಿಗೆ ಒಳ್ಳೆಯ ಕೆಲಸ ಮಾಡಿದ ವ್ಯಕ್ತಿಯನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಈಗ ವೃದ್ಧರಿಂದ ಮೊದಲ್ಗೊಂಡು ಬಾಲರವರೆಗೆ ಮೋದಿ ಎಂಬ ಹೆಸರು ಎಲ್ಲರ ನಾಲಗೆಯ ತುದಿಯಲ್ಲಿದ್ದು ಅವರೆಲ್ಲರಿಗೂ ಮೋದಿ ಅವರೇ ಮತ್ತೆ ಪ್ರಧಾನಿ ಆಗಬೇಕು ಎಂಬ ಬಯಕೆ ಇದೆ. ಜನಪ್ರಿಯ ಕಾರ್ಯಕ್ರಮಗಳು ಹಾಗೂ ಭಾರತದ ನೈಜ ಸಾಮರ್ಥ್ಯವನ್ನು ವಿಶ್ವಮಟ್ಟದಲ್ಲಿ ತೋರಿಸಿದ ಪರಿ ಮೋದಿ ಅವರು ಪ್ರಧಾನಿ ಆಗಿ ಮತ್ತೆ ಆಯ್ಕೆಯಾಗುವುದರಲ್ಲಿ ಸ್ವಲ್ಪವೂ ಸಂಶಯ ಬೇಡ ಎಂದು ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು ಹೇಳಿದರು. ಬಿಜೆಪಿಯ “ಮೇರಾ ಬೂತ್ ಸಬ್ಸೇ ಮಜ್ಬೂತ್” ಕಾರ್ಯಕ್ರಮದಡಿಯಲ್ಲಿ ಬೋಳಿಯಾರಿನ ಅಮರದೀಪ್ ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಿಜೆಪಿ ಮಂಗಳೂರು ಕ್ಷೇತ್ರ ಚುನಾವಣಾ ಸಂಚಾಲಕ ಬೂಡಿಯಾರ್ ರಾಧಾಕೃಷ್ಣ ಮಂಗಳೂರು ಕ್ಷೇತ್ರದಲ್ಲಿರುವ ಬಿಜೆಪಿಯ ಮೂರು ಮಹಾಶಕ್ತಿ ಕೇಂದ್ರದಲ್ಲಿಈಗಾಗಲೇ ಚುನಾವಣೆ ಕಚೇರಿ ತೆರೆಯಲಾಗಿದೆ. ಚುನಾವಣೆ ಘೋಷಣೆ ಆಗಿ ಚುನಾವಣೆ ನಡೆಯುವ ಸಮೀಪದ ದಿನಗಳಲ್ಲಿ ಪಕ್ಷದ ಕಾರ್ಯಕ್ರಮ ನಡೆಸುವುದು ಕಷ್ಟ ಸಾಧ್ಯವಾಗಿದೆ.…

